ವಿಶ್ವಾದ್ಯಂತ ಪ್ರೇಕ್ಷಕರನ್ನು ತಲುಪಲು ತಂತ್ರವನ್ನು ಆರಿಸಿ.

ನಿಮ್ಮ ಚಾನಲ್ ವಿಸ್ತರಿಸಿದಂತೆ ಮತ್ತು ನೀವು ಪ್ರಪಂಚದಾದ್ಯಂತ ವೀಕ್ಷಕರನ್ನು ತಲುಪಿದಂತೆ ವಿವಿಧ ಭಾಷೆಗಳು ಅಥವಾ ದೇಶಗಳು/ಪ್ರದೇಶಗಳಿಗೆ ವಿಭಿನ್ನ ಚಾನಲ್‌ಗಳನ್ನು ರಚಿಸುವುದನ್ನು ಪರಿಗಣಿಸಿ. ವಿಶ್ವಾದ್ಯಂತ ಪ್ರೇಕ್ಷಕರನ್ನು ತಲುಪಲು ಮೂರು ತಂತ್ರಗಳನ್ನು ಕೆಳಗೆ ನೀಡಲಾಗಿದೆ. ಇನ್ನಷ್ಟು ಜಾಗತಿಕ ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ಸಹಾಯವಾಗಲು, ನೀವು ಸ್ವಯಂಚಾಲಿತ ಶೀರ್ಷಿಕೆಗಳನ್ನು ಬಳಸಬಹುದು, ಹಸ್ತಚಾಲಿತವಾಗಿ ಅನುವಾದಗಳನ್ನು ಸೇರಿಸಬಹುದು ಅಥವಾ ಥರ್ಡ್ ಪಾರ್ಟಿ ಪರಿಕರಗಳು ಮತ್ತು ಸೇವೆಗಳನ್ನು ಬಳಸಬಹುದು.

ಬಹುಭಾಷೆ ಕಂಟೆಂಟ್‍ನೊಂದಿಗೆ ಒಂದೇ ಚಾನಲ್ ಅನ್ನು ನಿರ್ವಹಿಸಿ

ನಿಮ್ಮ ಎಲ್ಲಾ ಕಂಟೆಂಟ್ ಅನ್ನು ಒಂದೇ ಚಾನಲ್‍ನಲ್ಲಿರಿಸಿ ವಿವಿಧ ಭೌಗೋಳಿಕ ಪ್ರದೇಶಗಳಿಗಾಗಿ, ವಿವಿಧ ಭಾಷೆಗಳಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ.

ಬ್ರ್ಯಾಂಡಿಂಗ್

ನಿಮ್ಮ ಬ್ರ್ಯಾಂಡ್ ಅನೇಕ ದೇಶಗಳು ಮತ್ತು ಪ್ರದೇಶಗಳಲ್ಲಿ ಸ್ಥಿರವಾಗಿರುತ್ತದೆ. ನಿಮ್ಮ ಪ್ರೇಕ್ಷಕರು ಭಾಷೆಯ ಹೊರತಾಗಿ ಅದೇ ಪದಗಳನ್ನು ಬಳಸಿಕೊಂಡು ನಿಮ್ಮ ಬ್ರ್ಯಾಂಡ್‌ಗಾಗಿ ಹುಡುಕಿದರೆ ನಿಮ್ಮ ಚಾನಲ್ ಅನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ.

ತೊಡಗಿಸಿಕೊಳ್ಳುವಿಕೆ

ಒಂದೇ ಚಾನಲ್ ಅನ್ನು ಬಳಸುವುದರಿಂದ ನಿಮ್ಮ ವೀಕ್ಷಕರ ಸಂಖ್ಯೆ ಮತ್ತು ಸಬ್ಸ್‌ಕ್ರೈಬರ್‌ಗಳನ್ನು ಕ್ರೋಢೀಕರಿಸುತ್ತದೆ. YouTube ನಲ್ಲಿ ಹುಡುಕುತ್ತಿರುವಾಗ ವೀಕ್ಷಕರು ನಿಮ್ಮ ಚಾನಲ್ ಅನ್ನು ಹುಡುಕಲು ಇದು ಸುಲಭಗೊಳಿಸುತ್ತದೆ.

ನಿಮ್ಮ ಚಾನಲ್ ವಿವಿಧ ಭಾಷೆಗಳಲ್ಲಿ ಪೋಸ್ಟ್‌ಗಳು, ಕಾಮೆಂಟ್‌ಗಳು ಮತ್ತು ಫೀಡ್ ಅಪ್‍ಡೇಟ್‍ಗಳನ್ನು ಪಡೆಯುತ್ತದೆ. ಇದು ನಿಮ್ಮ ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಬಹುದು.

ನಿಮ್ಮ ಪ್ರೇಕ್ಷಕರಿಗೆ ಸಹಾಯ ಮಾಡಲು:

ಮ್ಯಾನೇಜ್‌ಮೆಂಟ್

ನಿಮ್ಮ ಕಂಟೆಂಟ್ ಅನ್ನು ಒಂದೇ ಸ್ಥಳದಲ್ಲಿ ನಿರ್ವಹಿಸುವುದರಿಂದ, ನಿಮ್ಮ ತಂಡವು ಒಂದೇ ಚಾನಲ್ ಅನ್ನು ನಿರ್ವಹಿಸುವುದರ ಮೇಲೆ ಗಮನ ಕೇಂದ್ರೀಕರಿಸಬಹುದು, ಇದು ವಿಶ್ವಾದ್ಯಂತ ಸ್ಥಿರವಾದ ಬ್ರ್ಯಾಂಡಿಂಗ್ ಮತ್ತು ಟೋನ್ ಅನ್ನು ನಿರ್ವಹಿಸಲು ಸುಲಭವಾಗುತ್ತದೆ.

ವಿವಿಧ ಭಾಷೆಗಳಿಗೆ ಪ್ರತ್ಯೇಕ ಚಾನಲ್‌ಗಳನ್ನು ರಚಿಸಿ

ವಿವಿಧ ಭಾಷೆಗಳು ಮತ್ತು ಭೌಗೋಳಿಕ ಪ್ರದೇಶಗಳಿಗಾಗಿ ಪ್ರತ್ಯೇಕ ಚಾನಲ್‌ಗಳನ್ನು ರಚಿಸಿ. ವಿಭಿನ್ನ ವರ್ಣಮಾಲೆಗಳು ಅಥವಾ ಹುಡುಕಾಟ ಪದಗಳನ್ನು ಹೊಂದಿರುವ ಭಾಷೆಗಳಿಗೆ ಈ ತಂತ್ರವು ಉಪಯುಕ್ತವಾಗಿದೆ.

ಬ್ರ್ಯಾಂಡಿಂಗ್

ನೀವು ಪ್ರತಿ ಚಾನಲ್ ಅನ್ನು ಅದರ ನಿರ್ದಿಷ್ಟ ಪ್ರೇಕ್ಷಕರಿಗೆ ಸುಲಭವಾಗಿ ಕಸ್ಟಮೈಜ್ ಮಾಡಬಹುದು ಮತ್ತು ಸ್ಥಳೀಯ ಈವೆಂಟ್‌ಗಳು ಮತ್ತು ಪ್ರಚಾರಗಳನ್ನು ಸೇರಿಸಬಹುದು. ನಿಮ್ಮ ಬ್ರ್ಯಾಂಡ್ ವಿಭಿನ್ನ ದೇಶಗಳು/ಪ್ರದೇಶಗಳಲ್ಲಿ ಸ್ವಲ್ಪ ಭಿನ್ನವಾಗಿದ್ದರೆ, ಈ ತಂತ್ರವು ನಿಮ್ಮ ಚಾನಲ್ ವಿಧಾನದಲ್ಲಿ ನೀವು ಆ ವ್ಯತ್ಯಾಸಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡುತ್ತದೆ.

ತೊಡಗಿಸಿಕೊಳ್ಳುವಿಕೆ

ನಿಮ್ಮ ವಿವಿಧ ಪ್ರೇಕ್ಷಕರೊಂದಿಗೆ ಹೆಚ್ಚು ಫೋಕಸ್ ರೀತಿಯಲ್ಲಿ ಸಂವಹನ ನಡೆಸಲು ಪ್ರತ್ಯೇಕ ಚಾನಲ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ. ಪ್ರತಿ ಚಾನಲ್‌ನಲ್ಲಿರುವ ಎಲ್ಲಾ ಐಟಂಗಳನ್ನು ನಿರ್ದಿಷ್ಟ ಪ್ರೇಕ್ಷಕರಿಗೆ ಗುರಿಪಡಿಸಲಾಗುತ್ತದೆ, ಇದು ವೀಕ್ಷಣೆಯ ಅನುಭವವನ್ನು ಸಮರ್ಥವಾಗಿ ಸುಧಾರಿಸಬಹುದು. ವೈವಿಧ್ಯಮಯ ಭಾಷೆಯ ಕಂಟೆಂಟ್‍ನ ಕಾರಣ, ವೀಕ್ಷಕರು ಗೊಂದಲಕ್ಕೊಳಗಾಗುವ ಅಥವಾ ನಿರ್ಲಿಪ್ತರಾಗುವ ಸಾಧ್ಯತೆ ಕಡಿಮೆ.

ಹುಟುಕಾಟವನ್ನು ಸುಧಾರಿಸಲು:

  • ಪ್ರತಿ ಚಾನಲ್‌ನ ಭಾಷೆ ಅಥವಾ ಭೌಗೋಳಿಕ ಪ್ರದೇಶವನ್ನು ನಿರ್ದಿಷ್ಟಪಡಿಸಿ ಇದರಿಂದ ವೀಕ್ಷಕರು ತಮ್ಮ ಸ್ಥಳೀಯ ಚಾನಲ್ ಅನ್ನು YouTube ಹುಡುಕಾಟಗಳಲ್ಲಿ ಕಾಣಬಹುದು.
  • ಅನ್ವೇಷಣೆಯನ್ನು ಸುಧಾರಿಸಲು ನಿಮ್ಮ ವಿವಿಧ ಭಾಷಾ ಚಾನಲ್‌ಗಳನ್ನು ಪರಸ್ಪರ ಪ್ರಚಾರ ಮಾಡಿ.
  • ನಿಮ್ಮ ಚಾನಲ್ ಪುಟದ “ಫೀಚರ್ ಮಾಡಿದ ಚಾನಲ್‌ಗಳು” ವಿಭಾಗಕ್ಕೆ ಆಸಕ್ತಿಯ ಚಾನಲ್‌ಗಳನ್ನು ಸೇರಿಸಿ.

ಮ್ಯಾನೇಜ್‌ಮೆಂಟ್

ಪ್ರತಿಯೊಂದು ಚಾನಲ್‌ಗೆ ನಿರಂತರ ನಿರ್ವಹಣೆ ಮತ್ತು ಗಮನದ ಅಗತ್ಯವಿರುತ್ತದೆ. ನಿಯಮಿತ ಅಪ್‌ಲೋಡ್ ಮತ್ತು ತೊಡಗಿಸಿಕೊಳ್ಳುವಿಕೆ ನಿಯೋಜನೆಯೊಂದಿಗೆ ಪ್ರತಿ ಚಾನಲ್ ಅನ್ನು ನಿರ್ವಹಿಸಲು ನಿಮ್ಮ ಬ್ರ್ಯಾಂಡ್ ಸಂಪನ್ಮೂಲಗಳನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ.

ಒಂದು ಜಾಗತಿಕ ಚಾನಲ್ ಮತ್ತು ಸ್ಥಳೀಯ ಬೆಂಬಲಿತ ಚಾನಲ್‍ಗಳನ್ನು ರಚಿಸಿ

ಜಾಗತಿಕ ಅಭಿಯಾನಗಳನ್ನು ಫೀಚರ್ ಮಾಡಲು ನಿಮ್ಮ ಬ್ರ್ಯಾಂಡ್‍ನ ಮುಖ್ಯ ಚಾನಲ್ ಆಗಿ ಕಾರ್ಯನಿರ್ವಹಿಸಲು ಒಂದೇ ಚಾನಲ್ ಅನ್ನು ಬಳಸಿ. ವಿವಿಧ ಭಾಷೆಗಳು ಮತ್ತು ದೇಶಗಳು/ಪ್ರದೇಶಗಳಿಗಾಗಿ ಬೆಂಬಲಿತ ಸ್ಥಳೀಯ ಚಾನಲ್‍ಗಳನ್ನು ರಚಿಸಿ.

ಬ್ರ್ಯಾಂಡಿಂಗ್

ಜಾಗತಿಕ ಕಂಟೆಂಟ್‍ಗೆ ನಿಮ್ಮ ಮುಖ್ಯ ಚಾನಲ್ ಬಳಸಿ ಮತ್ತು ಈವೆಂಟ್‍ಗಳು ಮತ್ತು ಪ್ರಮೋಷನ್‍ಗಳಿಗೆ ಸ್ಥಳೀಯ ಚಾನಲ್‍ಗಳನ್ನು ಬಳಸಿ. ನಿಮ್ಮ ಚಾನಲ್‍ಗಳಲ್ಲಿ ಒಂದು ಸ್ಥಿರತೆಯನ್ನು ಕಾಯ್ದುಕೊಳ್ಳಲು ನಿಮ್ಮ ವೀಡಿಯೊಗಳಿಗಾಗಿ ಮೆಟಾಡೇಟಾ ಮತ್ತು ಥಂಬ್‌ನೇಲ್‍ಗಳು ರೀತಿಯ ಸ್ಥಿರವಾದ ಟೆಂಪ್ಲೇಟ್‌ಗಳನ್ನು ರಚಿಸಿ.

ತೊಡಗಿಸಿಕೊಳ್ಳುವಿಕೆ

ವೀಕ್ಷಕರು ಮತ್ತು ಸಬ್ಸ್‌ಕ್ರೈಬರ್‌ಗಳು ವಿವಿಧ ಚಾನಲ್‌ಗಳಲ್ಲಿ ವಿಭಜನೆಗೊಂಡಿರುವಾಗಲೂ, ವೀಕ್ಷಕರು ಸ್ಥಿರವಾದ ಆದರೆ ಸ್ಥಳೀಕರಣ ಅನುಭವವನ್ನು ಪಡೆಯುತ್ತಾರೆ. ವೀಡಿಯೊ ಮೆಟಾಡೇಟಾ, ಚಾನಲ್ ವಿವರಣೆಗಳು ಮತ್ತು ಫೀಚರ್ ಮಾಡಲಾದ ಚಾನಲ್ ಪ್ರೊಗ್ರಾಮಿಂಗ್ ಬಳಿಸಿಕೊಂಡು ನಿಮ್ಮ ಸ್ಥಳೀಯ ಚಾನಲ್‍ಗಳಿಗೆ ವೀಕ್ಷಕರನ್ನು ಕರೆದೊಯ್ಯಲು ನಿಮ್ಮ ಮುಖ್ಯ ಜಾಗತಿಕ ಚಾನಲ್ ಅನ್ನು ಬಳಸಿ.

ಸ್ಥಳೀಯ ಚಾನಲ್‍ಗಳಿಗೆ ಹೆಚ್ಚು ಅಪ್‍ಲೋಡ್‍ಗಳನ್ನು ಮಾಡುವುದರಿಂದ, YouTube ಹುಡುಕಾಟದಲ್ಲಿ ಅವರ ಅನ್ವೇಷಿಸುವಿಕೆಗೆ ಸಹಾಯ ಮಾಡಬಹುದು.

ಮ್ಯಾನೇಜ್‌ಮೆಂಟ್

ಈ ಚಾನಲ್ ಸಂಸ್ಥೆಯ ರಚನೆಯು ಜಾಗತಿಕ ಮತ್ತು ಸ್ಥಳೀಯ ತಂಡಗಳ ನಡುವಿನ ಸಹಯೋಗದ ಅಗತ್ಯವಿದೆ, ಆದರೂ ಇದು ನಿಮ್ಮ ಬ್ರ್ಯಾಂಡ್ ಸಂದೇಶವನ್ನು ನಿರ್ದಿಷ್ಟ ಪ್ರದೇಶಗಳಿಗೆ ತಕ್ಕಂತೆ ಕಸ್ಟಮೈಜ್ ಮಾಡಲು ನಿಮಗೆ ಅನುಮತಿಸುತ್ತದೆ. ಈ ತಂತ್ರವನ್ನು ನಿರ್ವಹಿಸಲು ಹೆಚ್ಚಿನ ಸಮಯ ಮತ್ತು ಶ್ರಮ ಬೇಕಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15695893232566144911
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false