Content ID ಕ್ಲೈಮ್‍ಗಳಿಂದ ಚಾನಲ್‌ಗಳಿಗೆ ವಿನಾಯಿತಿ ನೀಡಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ನೀವು Content ID ಹೊಂದಾಣಿಕೆಯನ್ನು ಆನ್ ಮಾಡಿದಾಗ, ನಿಮ್ಮ ಉಲ್ಲೇಖಿತ ಫೈಲ್‌ಗಳಿಗೆ ಹೊಂದಾಣಿಕೆಯಾಗುವ (ಭಾಗಗಳ) ಇತರೆ ಬಳಕೆದಾರರು ಅಪ್‍ಲೋಡ್ ಮಾಡಿದ ಕಂಟೆಂಟ್ ವಿರುದ್ಧ YouTube ಸ್ವಯಂಚಾಲಿತವಾಗಿ ಕ್ಲೈಮ್‍ಗಳನ್ನು ರಚಿಸುತ್ತದೆ.

ಕೆಲವು ಸಂದರ್ಭಗಳಲ್ಲಿ, ಕೆಲವು YouTube ಚಾನಲ್‌ಗಳು ಅಪ್‌ಲೋಡ್ ಮಾಡುವ ವೀಡಿಯೊಗಳನ್ನು ಕ್ಲೈಮ್ ಮಾಡುವುದರಿಂದ Content ID ಅನ್ನು ತಡೆಯಲು ನೀವು ಬಯಸಬಹುದು. ಉದಾಹರಣೆಗೆ, ಚಲನಚಿತ್ರ ಸ್ಟುಡಿಯೋ ತನ್ನ ಚಲನಚಿತ್ರಗಳನ್ನು ವಿಮರ್ಶಿಸುವ ಮತ್ತು ಪ್ರಚಾರ ಮಾಡುವ ಚಾನಲ್‌ನಿಂದ ವೀಡಿಯೊಗಳನ್ನು ಕ್ಲೈಮ್ ಮಾಡಲು ಬಯಸದಿರಬಹುದು. ನಿಮ್ಮ ಅನುಮತಿಸುವ ಪಟ್ಟಿಗೆ ಚಾನಲ್‌ಗಳನ್ನು ಸೇರಿಸುವ ಮೂಲಕ ನೀವು Content ID ಕ್ಲೈಮ್‌ಗಳಿಂದ ಚಾನಲ್‌ಗಳಿಗೆ ವಿನಾಯಿತಿ ನೀಡಬಹುದು.

ಗಮನಿಸಿ
  • Content ID ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಲಾದ ಚಾನಲ್‌ಗಳಿಂದ ವೀಡಿಯೊಗಳನ್ನು ಕ್ಲೈಮ್ ಮಾಡದ ಕಾರಣ, ಈ ಚಾನಲ್‌ಗಳನ್ನು ನಿಮ್ಮ ಅನುಮತಿ ಪಟ್ಟಿಗೆ ಸೇರಿಸಲು ನಿಮಗೆ ಸಾಧ್ಯವಾಗುವುದಿಲ್ಲ.
  • ನಿಮ್ಮ ಅನುಮತಿ ಪಟ್ಟಿಗೆ ವೈಯಕ್ತಿಕ ಸ್ವತ್ತುಗಳನ್ನು ಸೇರಿಸಲಾಗುವುದಿಲ್ಲ, ಚಾನಲ್‌ಗಳನ್ನು ಮಾತ್ರ ಸೇರಿಸಬಹುದು.

ನಿಮ್ಮ ಅನುಮತಿ ಪಟ್ಟಿಗೆ ಚಾನಲ್‍ಗಳನ್ನು ಸೇರಿಸಿ

Content ID ಕ್ಲೈಮ್‌ಗಳಿಂದ ವಿನಾಯಿತಿ ನೀಡಲು ನೀವು ಒಂದು ಅಥವಾ ಹೆಚ್ಚಿನ ಚಾನಲ್‌ಗಳನ್ನು ನಿಮ್ಮ ಅನುಮತಿ ಪಟ್ಟಿಗೆ ಸೇರಿಸಬಹುದು. ನಿಮ್ಮ ಅನುಮತಿ ಪಟ್ಟಿಗೆ ಚಾನಲ್‍ಗಳನ್ನು ಸೇರಿಸಲು:

  1. Studio ಕಂಟೆಂಟ್ ನಿರ್ವಾಹಕ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಅನುಮತಿ ಪಟ್ಟಿ ಅನ್ನು ಆಯ್ಕೆಮಾಡಿ.
  3. ಮೇಲ್ಭಾಗದ ಬಲ ಮೂಲೆಯಲ್ಲಿ, ಚಾನಲ್‍ಗಳನ್ನು ಸೇರಿಸಿ ಅನ್ನು ಕ್ಲಿಕ್ ಮಾಡಿ
  4. ಚಾನಲ್ ಐಡಿ ಅಥವಾ URL ನಮೂದಿಸಿ. ಚಾನಲ್ ಐಡಿ, 24 ಕ್ಯಾರೆಕ್ಟರ್‌ಗಳ ಆಲ್ಫನ್ಯೂಮರಿಕ್ ಸ್ಟ್ರಿಂಗ್ ಆಗಿದೆ ಮತ್ತು ಚಾನಲ್‌ನ URL ನಲ್ಲಿ 'UC' ಯೊಂದಿಗೆ ಪ್ರಾರಂಭವಾಗುತ್ತದೆ.
    • ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಚಾನಲ್‌ಗಳನ್ನು ಸೇರಿಸಲು, ಅಲ್ಪವಿರಾಮದಿಂದ ಬೇರ್ಪಡಿಸಿದ ಚಾನಲ್ ಐಡಿಗಳ ಪಟ್ಟಿಯನ್ನು ಪಠ್ಯ ಪೆಟ್ಟಿಗೆಯಲ್ಲಿ ಅಂಟಿಸಿ.
  5. ಸೇರಿಸಿ ಕ್ಲಿಕ್ ಮಾಡಿ.

ನಿಮ್ಮ ಅನುಮತಿ ಪಟ್ಟಿಗೆ ನೀವು ಚಾನಲ್‌ಗಳನ್ನು ಸೇರಿಸಿದ ನಂತರ, Content ID ಮುಂದಿನ ದಿನಗಳಲ್ಲಿ ಆ ಚಾನಲ್‌ಗಳಿಗೆ ಅಪ್‌ಲೋಡ್ ಮಾಡಲಾದ ಯಾವುದೇ ವೀಡಿಯೊಗಳನ್ನು ಕ್ಲೈಮ್ ಮಾಡುವುದಿಲ್ಲ. ಆದರೆ, ನಿಮ್ಮ ಅನುಮತಿಪಟ್ಟಿಗೆ ಸೇರಿಸುವ ಮೊದಲು ಮಾಡಿದ ಯಾವುದೇ ಪ್ರಸ್ತುತ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಬಿಡುಗಡೆ ಮಾಡಲಾಗುವುದಿಲ್ಲ. ಕ್ಲೈಮ್‍ಗಳನ್ನು ಬಿಡುಗಡೆಗೊಳಿಸುವುದು ಹೇಗೆ ಎಂದು ತಿಳಿಯಿರಿ.

ಒಂದಕ್ಕಿಂತ ಹೆಚ್ಚು ಪಾಲುದಾರರು ಸ್ವತ್ತನ್ನು ಹೊಂದಿದ್ದರೆ, ಈ ಸ್ವತ್ತಿನ ವಿರುದ್ಧ ಕ್ಲೈಮ್‌ಗಳನ್ನು ತಡೆಯಲು ಪ್ರತಿ ಪಾಲುದಾರರು ತಮ್ಮ ಅನುಮತಿಪಟ್ಟಿಗೆ ಚಾನಲ್ ಅನ್ನು ಸೇರಿಸಬೇಕು.

ನಿಮ್ಮ ಅನುಮತಿಪಟ್ಟಿಯಿಂದ ಚಾನಲ್‌ಗಳನ್ನು ತೆಗೆದುಹಾಕಿ

ನಿಮ್ಮ ಅನುಮತಿ ಪಟ್ಟಿಯಿಂದ ಚಾನಲ್‌ಗಳನ್ನು ತೆಗೆದುಹಾಕುವುದು ಎಂದರೆ, Content ID ಇನ್ನು ಮುಂದೆ ಚಾನಲ್‌ಗಳನ್ನು ಕ್ಲೈಮ್ಗಳಿಂದ ವಿನಾಯಿತಿ ನೀಡುವುದಿಲ್ಲ ಎಂದರ್ಥ. ಈ ಚಾನಲ್‌ಗಳು ನಿಮ್ಮ ಉಲ್ಲೇಖ ಫೈಲ್‌ಗಳಿಗೆ ಹೊಂದಿಕೆಯಾಗುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದರೆ ಮತ್ತು ಇನ್ನು ಮುಂದೆ ಚಾನಲ್‌ಗಳು ನಿಮ್ಮ ಅನುಮತಿಪಟ್ಟಿಯಲ್ಲಿ ಇಲ್ಲದಿದ್ದರೆ, Content ID ಕ್ಲೈಮ್‌ಗಳನ್ನು ರಚಿಸುತ್ತದೆ. ನಿಮ್ಮ ಅನುಮತಿಪಟ್ಟಿಯಿಂದ ಚಾನಲ್‍ಗಳನ್ನು ತೆಗೆದುಹಾಕಲು:

  1. Studio ಕಂಟೆಂಟ್ ನಿರ್ವಾಹಕ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಅನುಮತಿ ಪಟ್ಟಿ ಅನ್ನು ಆಯ್ಕೆಮಾಡಿ.
  3. ಫಿಲ್ಟರ್ ಪಟ್ಟಿ ಕ್ಲಿಕ್ ಮಾಡಿ ನಂತರ Channel ID ಅಥವಾ ಚಾನಲ್ ಹೆಸರು.
  4. ಅಲ್ಪವಿರಾಮದಿಂದ ಬೇರ್ಪಡಿಸಿದ ಚಾನಲ್ ಐಡಿಗಳ ಪಟ್ಟಿ ಅಥವಾ ಚಾನಲ್ ಹೆಸರುಗಳನ್ನು ಅಂಟಿಸಿ ನಂತರ ಅನ್ವಯಿಸಿ.
  5. ನಿಮ್ಮ ಅನುಮತಿ ಪಟ್ಟಿಯಿಂದ ತೆಗೆದುಹಾಕಲು ಬಯಸಿರುವ ಚಾನಲ್‍ಗಳ ಪಕ್ಕದಲ್ಲಿರುವ ಚೆಕ್‍ಬಾಕ್ಸ್‌ಗಳನ್ನು ಕ್ಲಿಕ್ ಮಾಡಿ.
    • ಎಲ್ಲಾ ಚಾನಲ್‍ಗಳನ್ನು ಆಯ್ಕೆಮಾಡಲು, ಹುಡುಕಾಟ ಫಲಿತಾಂಶಗಳ ಪಟ್ಟಿಯ ಮೇಲ್ಭಾಗದಲ್ಲಿರುವ ಚೆಕ್‍ಬಾಕ್ಸ್ ಅನ್ನು ಕ್ಲಿಕ್ ಮಾಡಿ ನಂತರ ಎಲ್ಲವನ್ನೂ ಆಯ್ಕೆಮಾಡಿ.
  6. ಮೇಲಿನ ಬ್ಯಾನರ್‌ನಲ್ಲಿ, ತೆಗೆದುಹಾಕಿ ಎಂಬುದನ್ನು ಕ್ಲಿಕ್ ಮಾಡಿ.
ಗಮನಿಸಿ: ನಿಮ್ಮ ಅನುಮತಿ ಪಟ್ಟಿಯಿಂದ ಚಾನಲ್ ಅನ್ನು ತೆಗೆದುಹಾಕುವುದರಿಂದ YouTube ನಿಂದ ಚಾನಲ್ ಅಳಿಸುವುದಿಲ್ಲ.

ನಿಮ್ಮ ಅನುಮತಿ ಪಟ್ಟಿಯಲ್ಲಿರುವ ಚಾನಲ್‍ಗಳ ಕುರಿತಾದ ಮಾಹಿತಿಯನ್ನು ಎಕ್ಸ್‌ಪೋರ್ಟ್ ಮಾಡಿ

ನಿಮ್ಮ ಅನುಮತಿ ಪಟ್ಟಿಯಲ್ಲಿ ಚಾನಲ್‍ಗಳ ಕುರಿತಾದ, ಚಾನಲ್ ಐಡಿ, ಚಾನಲ್ ಹೆಸರು ಮತ್ತು ಚಾನಲ್ ವಿನಾಯಿತಿ ಪಡೆದ ದಿನಾಂಕದಂತಹ ಮಾಹಿತಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ಎಕ್ಸ್‌ಪೋರ್ಟ್ ಮಾಡಲು:

  1. Studio ಕಂಟೆಂಟ್ ನಿರ್ವಾಹಕ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಅನುಮತಿ ಪಟ್ಟಿ ಅನ್ನು ಆಯ್ಕೆಮಾಡಿ.
  3. ನೀವು ಮಾಹಿತಿ ಎಕ್ಸ್‌ಪೋರ್ಟ್ ಮಾಡಲು ಬಯಸಿರುವ ಚಾನಲ್‍ಗಳ ಪಕ್ಕದಲ್ಲಿರುವ ಚೆಕ್‍ಬಾಕ್ಸ್‌ಗಳನ್ನು ಕ್ಲಿಕ್ ಮಾಡಿ.
  4. ಮೇಲಿನ ಬ್ಯಾನರ್‌ನಲ್ಲಿ, ಎಕ್ಸ್‌ಪೋರ್ಟ್ ಮಾಡಿ  ಮತ್ತು ಅಲ್ಪವಿರಾಮದಿಂದ ಬೇರ್ಪಡಿಸಿದ ಮೌಲ್ಯಗಳು (.csv) ಅಥವಾ Google Sheets (ಹೊಸ ಟ್ಯಾಬ್) ಅನ್ನು ಕ್ಲಿಕ್ ಮಾಡಿ. ಫೈಲ್ ಪ್ರಕ್ರಿಯೆಗೊಳ್ಳಲು ಪ್ರಾರಂಭವಾಗುತ್ತದೆ.
  5. ಫೈಲ್ ಪ್ರಕ್ರಿಯೆ ಪೂರ್ಣಗೊಂಡಾಗ:
    • .csv ಫೈಲ್‍ಗಾಗಿ: ಮೇಲಿನ ಬ್ಯಾನರ್‌ನಿಂದ ಡೌನ್‍ಲೋಡ್ ಮಾಡಿ ಅನ್ನು ಕ್ಲಿಕ್ ಮಾಡಿ.
    • Google Sheets ಫೈಲ್‌ಗಾಗಿ: ಮೇಲ್ಭಾಗದ ಬ್ಯಾನರ್‌ನಲ್ಲಿ SHEETS ಅನ್ನು ಹೊಸ ವಿಂಡೋದಲ್ಲಿ ತೆರೆಯಿರಿ ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6482991889487383157
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false