ಪೋಸ್ಟ್ ಮಾಡಿ ಮತ್ತು ಕಾಮೆಂಟ್‌ಗಳ ಜೊತೆಗೆ ಸಂವಹನ ನಡೆಸಿ

YouTube ಕಾಮೆಂಟ್‌ಗಳು: ಪ್ರತ್ಯುತ್ತರಿಸುವಿಕೆ, ಫಿಲ್ಟರ್‌ ಮಾಡುವಿಕೆ ಮತ್ತು ಮಾಡರೇಟ್ ಮಾಡುವಿಕೆ

ವೀಡಿಯೊದ ಮಾಲೀಕರು ಕಾಮೆಂಟ್‌ಗಳನ್ನು ಆನ್ ಮಾಡಿದ್ದರೆ, ನೀವು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬಹುದು ಮತ್ತು ವೀಡಿಯೊದಲ್ಲಿ ಇತರ ಜನರ ಕಾಮೆಂಟ್‌ಗಳನ್ನು ಲೈಕ್ ಮಾಡಬಹುದು, ಇಷ್ಟವಿಲ್ಲ ಎಂದು ಸೂಚಿಸಬಹುದು ಅಥವಾ ಪ್ರತ್ಯುತ್ತರಿಸಬಹುದು. ನಿಮ್ಮ ಯಾವುದೇ ಸ್ವಂತ ಕಾಮೆಂಟ್‌ಗಳನ್ನು ನೀವು ಎಡಿಟ್ ಮಾಡಬಹುದು ಅಥವಾ ಅಳಿಸಬಹುದು. ಕಾಮೆಂಟ್‌ಗಳಿಗೆ ಪ್ರತ್ಯುತ್ತರಗಳನ್ನು ಮೂಲ ಕಾಮೆಂಟ್‌ನ ಕೆಳಗಿನ ಥ್ರೆಡ್‌ಗೆ ಸೇರಿಸಲಾಗುತ್ತದೆ ಇದರಿಂದ ನೀವು ಸಂಭಾಷಣೆಯನ್ನು ಅನುಸರಿಸಬಹುದು.

ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ಕಾಮೆಂಟ್‌ಗಳೊಂದಿಗೆ ಸಂವಹನ ನಡೆಸಿ

ನೀವು ಈಗ ನಿಮ್ಮ ಸ್ಮಾರ್ಟ್ ಟಿವಿ ಅಥವಾ ಗೇಮ್ ಕನ್ಸೋಲ್‌ನಲ್ಲಿ ಕಂಟೆಂಟ್ ಅನ್ನು ವೀಕ್ಷಿಸುತ್ತಿರುವಾಗ ಕಾಮೆಂಟ್‌ಗಳನ್ನು ವೀಕ್ಷಿಸಬಹುದು ಮತ್ತು ಸಂವಹನ ನಡೆಸಬಹುದು. ವೀಡಿಯೊದ ಕಾಮೆಂಟ್‌ಗಳನ್ನು ವೀಕ್ಷಿಸಲು, ವೀಡಿಯೊದ ವೀಕ್ಷಣಾ ಪುಟಕ್ಕೆ ಹೋಗಿ ಮತ್ತು ವೀಡಿಯೊದ ಶೀರ್ಷಿಕೆಯನ್ನು ಆಯ್ಕೆಮಾಡಿ. ಕುರಿತು ಎಂಬ ವಿಭಾಗವು ವೀಡಿಯೊದ ಕಾಮೆಂಟ್‌ಗಳ ಫ್ಯಾನೆಲ್‌ ಜೊತೆಗೆ ಗೋಚರಿಸುತ್ತದೆ. ವೀಡಿಯೊಗಾಗಿ ಕಾಮೆಂಟ್‌ಗಳ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಲು ಕಾಮೆಂಟ್‌ಗಳ ಟೈಲ್ ಅನ್ನು ಆಯ್ಕೆಮಾಡಿ, ಅವುಗಳೆಂದರೆ:

  • ರಚನೆಕಾರರು ಪಿನ್ ಮಾಡಿರುವ ಕಾಮೆಂಟ್‌ಗಳು
  • ಲೈಕ್ ಮಾಡಿದವರ ಸಂಖ್ಯೆ
  • ಪ್ರತ್ಯುತ್ತರ ನೀಡಿದವರ ಸಂಖ್ಯೆ

ಕಾಮೆಂಟ್ ಅನ್ನು ಸಂಪೂರ್ಣವಾಗಿ ಓದಲು, ಪ್ರತ್ಯುತ್ತರಗಳನ್ನು ವೀಕ್ಷಿಸಲು, ಕಾಮೆಂಟ್ ಅನ್ನು ಲೈಕ್ ಮಾಡಲು ಅಥವಾ ಲೈಕ್ ಮಾಡದೇ ಇರಲು ಕಾಮೆಂಟ್ ಅನ್ನು ಆಯ್ಕೆಮಾಡಿ.

ಕಾಮೆಂಟ್‌ಗೆ ಪ್ರತ್ಯುತ್ತರಿಸಲು ಅಥವಾ ಪೋಸ್ಟ್ ಮಾಡಲು, ನಿಮ್ಮ ಸ್ಮಾರ್ಟ್ ಟಿವಿ ಅಥವಾ ಗೇಮ್ ಕನ್ಸೋಲ್ ಅನ್ನು ನಿಮ್ಮ ಫೋನ್‌ ಜೊತೆಗೆ ಸಿಂಕ್ ಮಾಡಿ ಮತ್ತು ನಿಮ್ಮ ಫೋನ್ ಬಳಸಿ ಕಾಮೆಂಟ್ ಮಾಡಿ.

ಕಾಮೆಂಟ್ ಅಥವಾ ಪ್ರತ್ಯುತ್ತರವನ್ನು ಸೇರಿಸಲು:

  1. ನಿಮ್ಮ ಫೋನ್‌ನಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ನೀವು ಎರಡೂ ಸಾಧನಗಳಲ್ಲಿ ಒಂದೇ Google ಖಾತೆಗೆ ಸೈನ್ ಇನ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
  3. ನಿಮ್ಮ YouTube ಆ್ಯಪ್‌ನಲ್ಲಿ ಪಾಪ್-ಅಪ್ ತೆರೆಯುತ್ತದೆ, ನಿಮ್ಮ ಟಿವಿಯಲ್ಲಿ YouTube ಗೆ ಕನೆಕ್ಟ್ ಮಾಡಲು ನಿಮ್ಮನ್ನು ಕೇಳುತ್ತದೆ.
  4. ಕನೆಕ್ಟ್ ಮಾಡಿ ಅನ್ನು ಟ್ಯಾಪ್‌ ಮಾಡಿ.
  5. ನಿಮ್ಮ ಟಿವಿಯಲ್ಲಿ ನೀವು ವೀಕ್ಷಿಸುತ್ತಿರುವ ವೀಡಿಯೊದ ಕಾಮೆಂಟ್‌ಗಳು YouTube ಆ್ಯಪ್‌ನಲ್ಲಿ ಲೋಡ್ ಆಗುತ್ತವೆ, ಇದು ನಿಮಗೆ ಅಡಚಣೆ ರಹಿತವಾಗಿ ಪೋಸ್ಟ್ ಮಾಡಲು ಮತ್ತು ಅವರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.
ಗಮನಿಸಿ: ನೀವು ಸೈನ್ ಔಟ್ ಆಗಿರುವಾಗ, ಕಾಮೆಂಟ್‌ಗಳನ್ನು ವೀಕ್ಷಿಸಬಹುದು, ಆದರೆ ಅವುಗಳಿಗೆ ಪ್ರತ್ಯುತ್ತರಿಸಲು ಅಥವಾ ನಿಮ್ಮ ಸ್ವಂತ ಕಾಮೆಂಟ್ ಅನ್ನು ಪೋಸ್ಟ್ ಮಾಡಲು ಸಾಧ್ಯವಿಲ್ಲ.

ವೀಡಿಯೊ ಕುರಿತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ

ಸಾರ್ವಜನಿಕ ವೀಡಿಯೊಗಳು

ನೀವು YouTube ಮತ್ತು YouTube Music ನಲ್ಲಿನ ಹಾಡುಗಳು, ವೀಡಿಯೊಗಳು, ಪಾಡ್‌ಕಾಸ್ಟ್‌ಗಳು ಮತ್ತು ಅಪ್‌ಲೋಡ್ ಮಾಡಿದ ಸಂಗೀತದ ಕುರಿತು ಕಾಮೆಂಟ್ ಮಾಡಬಹುದು. YouTube ನಲ್ಲಿ ಸಾರ್ವಜನಿಕ ವೀಡಿಯೊಗಳಲ್ಲಿನ ಎಲ್ಲಾ ಕಾಮೆಂಟ್‌ಗಳು ಸಾರ್ವಜನಿಕವಾಗಿವೆ ಮತ್ತು ನೀವು ಪೋಸ್ಟ್ ಮಾಡುವ ಕಾಮೆಂಟ್‌ಗೆ ಯಾರು ಬೇಕಾದರೂ ಪ್ರತ್ಯುತ್ತರಿಸಬಹುದು. ನೀವು Google Apps ಖಾತೆ ಬಳಕೆದಾರರಾಗಿದ್ದರೆ, YouTube ನಲ್ಲಿ ನೀವು ಪೋಸ್ಟ್ ಮಾಡುವ ಯಾವುದೇ ಕಾಮೆಂಟ್ ನಿಮ್ಮ ಡೊಮೇನ್‌ನ ಹೊರಗಿನ ಬಳಕೆದಾರರಿಗೆ ಸಾರ್ವಜನಿಕವಾಗಿ ಗೋಚರಿಸುತ್ತದೆ.

ಕಾಮೆಂಟ್ ಸೇರಿಸಲು

  1. ವೀಡಿಯೊದ ಅಡಿಯಲ್ಲಿ ಕಾಮೆಂಟ್ ವಿಭಾಗವನ್ನು ಹುಡುಕಿ.
  2. ಕಾಮೆಂಟ್ ಸೇರಿಸಿ... ಬಾಕ್ಸ್ ಅನ್ನು ಟೈಪ್ ಮಾಡಿ.
  3. ನಿಮ್ಮ ಕಾಮೆಂಟ್ ಅನ್ನು ನಮೂದಿಸಿ.
  4. ಕಾಮೆಂಟ್ ಅನ್ನು ಕ್ಲಿಕ್ ಮಾಡಿ.

ಖಾಸಗಿ ವೀಡಿಯೊಗಳು

ಖಾಸಗಿ ವೀಡಿಯೊಗಳಲ್ಲಿ ಕಾಮೆಂಟ್‌ಗಳು ಲಭ್ಯವಿರುವುದಿಲ್ಲ. ಸಾರ್ವಜನಿಕವಾಗಿ ಲಭ್ಯವಿಲ್ಲದಿರುವ ವೀಡಿಯೊದಲ್ಲಿ ನೀವು ಕಾಮೆಂಟ್‌ಗಳನ್ನು ಅನುಮತಿಸಲು ಬಯಸುವಿರಿ ಎಂದಾದರೆ, ಅದರ ಬದಲಿಗೆ ಪಟ್ಟಿ ಮಾಡದಿರುವ ವೀಡಿಯೊವನ್ನು ಪೋಸ್ಟ್ ಮಾಡಿ.

ಪಟ್ಟಿ ಮಾಡದಿರುವ ವೀಡಿಯೊಗಳು

ಪಟ್ಟಿ ಮಾಡದ ವೀಡಿಯೊಗಳಲ್ಲಿ ನೀವು ಕಾಮೆಂಟ್ ಮಾಡಬಹುದು ಮತ್ತು ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಬಹುದು. ಪಟ್ಟಿ ಮಾಡದ ವೀಡಿಯೊಗಳ ಮೇಲಿನ ಕಾಮೆಂಟ್‌ಗಳನ್ನು ವೀಡಿಯೊಗೆ ಲಿಂಕ್ ಹೊಂದಿರುವ ಯಾರು ಬೇಕಾದರೂ ನೋಡಬಹುದು. ಪಟ್ಟಿ ಮಾಡದಿರುವ ವೀಡಿಯೊಗಳು ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳು ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ.

ನೀವು YouTube ಚಾನಲ್ ಅನ್ನು ಹೊಂದಿಲ್ಲದಿದ್ದರೆ, ಕಾಮೆಂಟ್ ಅನ್ನು ಪೋಸ್ಟ್ ಮಾಡುವ ಮೂಲಕ ನೀವು ಸ್ವಯಂಚಾಲಿತವಾಗಿ ಚಾನಲ್ ಅನ್ನು ರಚಿಸುತ್ತೀರಿ. ನಿಮ್ಮ ಕಾಮೆಂಟ್ ಅನ್ನು ಪೋಸ್ಟ್ ಮಾಡಿದ ನಂತರ ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗುವ ಮೂಲಕ ನಿಮ್ಮ ಚಾನಲ್ ಅನ್ನು ನಿರ್ವಹಿಸಬಹುದು ಮತ್ತು ಆ್ಯಕ್ಸೆಸ್ ಮಾಡಬಹುದು.
ಕಾಮೆಂಟ್‌ಗಳಿಗೆ ಪ್ರತ್ಯುತ್ತರ ನೀಡಿ

YouTube ಮತ್ತು YouTube Music ನಿಂದ ಹಾಡುಗಳು, ವೀಡಿಯೊಗಳು, ಪಾಡ್‌ಕಾಸ್ಟ್‌ಗಳು ಮತ್ತು ಅಪ್‌ಲೋಡ್ ಮಾಡಿದ ಸಂಗೀತದಲ್ಲಿನ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಿ.

  1. ಕಾಮೆಂಟ್‌ನ ಕೆಳಗಿರುವ ಪ್ರತ್ಯುತ್ತರಿಸಿ ಅನ್ನು ಕ್ಲಿಕ್ ಮಾಡಿ.
  2. ನಿಮ್ಮ ಕಾಮೆಂಟ್ ಅನ್ನು ಟೈಪ್ ಮಾಡಿ.
  3. ಪ್ರತ್ಯುತ್ತರಿಸಿ ಅನ್ನು ಕ್ಲಿಕ್ ಮಾಡಿ.
ಕಾಮೆಂಟ್‌ಗಳಿಗೆ ಫಾರ್ಮ್ಯಾಟಿಂಗ್ ಅನ್ನು ಸೇರಿಸಿ
ಇತ್ತೀಚಿನ ಸುದ್ದಿಗಳು, ಅಪ್‌ಡೇಟ್‌ಗಳು ಮತ್ತು ಸಲಹೆಗಳಿಗಾಗಿ ನಮ್ಮ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ!

ನಿಮ್ಮ ಕಾಮೆಂಟ್‌ಗೆ ಶೈಲಿಯನ್ನು ಸೇರಿಸಿ

ನಿಮ್ಮ ಕಾಮೆಂಟ್ ಅನ್ನು ಸಾಮಾನ್ಯ ವಿಶೇಷ ಟ್ಯಾಗ್‌ಗಳೊಂದಿಗೆ ಫಾರ್ಮ್ಯಾಟ್ ಮಾಡಲು ನೀವು ರಿಚ್ ಪಠ್ಯವನ್ನು ಬಳಸಬಹುದು, ಉದಾಹರಣೆಗೆ:

  • *ಬೋಲ್ಡ್ ಪಠ್ಯ*ಬೋಲ್ಡ್
  • _ಇಟಾಲಿಸೈಜ್ಡ್ ಪಠ್ಯ_ಇಟಾಲಿಕ್ಸ್
  • -ಸ್ಟ್ರೈಕ್‌ಥ್ರೋ ಪಠ್ಯ-ಸ್ಟ್ರೈಕ್‌ಥ್ರೋ

ನಿಮ್ಮ ಕಾಮೆಂಟ್‌ಗೆ ಲಿಂಕ್‌ಗಳನ್ನು ಸೇರಿಸಿ

ನಿಮ್ಮ ಕಾಮೆಂಟ್‌ಗೆ ನೀವು URL ಅನ್ನು ಸೇರಿಸಿದರೆ, ಅದು ಹೈಪರ್‌ಲಿಂಕ್‌ ರೂಪದಲ್ಲಿ ಕಾಣಿಸುತ್ತದೆ.

ನಿಮ್ಮ ಮೆಚ್ಚಿನ ಕಾಮೆಂಟ್‌ಗಳಿಗೆ ಹೃದಯದ ಚಿಹ್ನೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ

ವೀಕ್ಷಣಾ ಪುಟದಲ್ಲಿನ ಕಾಮೆಂಟ್‌ಗಳ ಜೊತೆಗೆ ನಿಮ್ಮ ಸಮುದಾಯ ಟ್ಯಾಬ್ ಕಾಮೆಂಟ್‌ಗಳಲ್ಲಿ ವೀಕ್ಷಕರ ಕಾಮೆಂಟ್‌ಗಳಿಗೆ ಮೆಚ್ಚುಗೆಯನ್ನು ತೋರಿಸಲು ನೀವು ಹೃದಯ ಚಿಹ್ನೆಯನ್ನು ಬಳಸಬಹುದು.

  1. YouTube ಗೆ ಸೈನ್ ಇನ್ ಮಾಡಿ.
  2. ಸಮುದಾಯ ಟ್ಯಾಬ್ ಪೋಸ್ಟ್‌ಗೆ ಹೋಗಿ.
  3. ಥಂಬ್ಸ್ ಅಪ್ ಮತ್ತು ಥಂಬ್ಸ್ ಡೌನ್ ಪಕ್ಕದಲ್ಲಿ ಹೃದಯ ಚಿಹ್ನೆಯನ್ನು ಹುಡುಕಿ.

ವೀಕ್ಷಕರು ಕೆಳಗಿನ ಎಡಭಾಗದಲ್ಲಿ ಸಣ್ಣ ಕೆಂಪು ಹೃದಯ ಚಿಹ್ನೆಯೊಂದಿಗೆ ನಿಮ್ಮ ಅವತಾರ್ ಅನ್ನು ನೋಡುತ್ತಾರೆ ಮತ್ತು ಚಾನಲ್ ಮಾಲೀಕರು "ನಿಮ್ಮ ಕಾಮೆಂಟ್ ಅನ್ನು ಲೈಕ್ ಮಾಡಿದ್ದಾರೆ" ಎಂಬ ನೋಟಿಫಿಕೇಶನ್ ಅನ್ನು (ಅವರ ಕಂಪ್ಯೂಟರ್ ಮತ್ತು ಮೊಬೈಲ್‌ನಲ್ಲಿ ವೀಕ್ಷಕರ ಆಯ್ಕೆಯ ಸೆಟ್ಟಿಂಗ್‌ಗಳನ್ನು ಅವಲಂಬಿಸಿ) ಪಡೆಯುತ್ತಾರೆ.

ಸಲಹೆ: ನಿಮ್ಮ ಮೊಬೈಲ್ ಸಾಧನದಲ್ಲಿ Creator Studio ಆ್ಯಪ್‌ನಲ್ಲಿ ನೀವು ಕಾಮೆಂಟ್‌ಗಳನ್ನು ಸಹ ನಿರ್ವಹಿಸಬಹುದು. YouTube Studio ಆ್ಯಪ್ ಸಹಾಯ ಕೇಂದ್ರದಲ್ಲಿ ಪ್ರಾರಂಭಿಸಿ.
ಕಾಮೆಂಟ್‌ಗಳನ್ನು ಮೇಲೆ ಕಾಣುವ ಹಾಗೆ ಪಿನ್ ಮಾಡಿ

ಕಾಮೆಂಟ್‌‌ಗಳನ್ನು ಪಿನ್ ಮಾಡಲು, ನೀವು ನಿಮ್ಮ ಚಾನಲ್‌‌ನಲ್ಲಿ ಸುಧಾರಿತ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಅನುಮತಿಸಬೇಕಾಗುತ್ತದೆ. ಸುಧಾರಿತ ಫೀಚರ್‌ಗಳನ್ನು ಆನ್ ಮಾಡಿದ ನಂತರ ನಿಮ್ಮ ಚಾನಲ್‌ನಾದ್ಯಂತ ಕಾಣಿಸಿಕೊಳ್ಳಲು ಅವು 24 ಗಂಟೆಗಳವರೆಗೂ ತೆಗೆದುಕೊಳ್ಳಬಹುದು.

ಕಾಮೆಂಟ್ ವಿಭಾಗದ ಮೇಲ್ಭಾಗದಲ್ಲಿ ಪಿನ್ ಮಾಡುವ ಮೂಲಕ ನಿಮ್ಮ ಅಭಿಮಾನಿಗಳಿಗೆ ಕಾಮೆಂಟ್ ಅನ್ನು ಹೈಲೈಟ್ ಮಾಡಿ. ಮೊಬೈಲ್‌ನಲ್ಲಿ, ಪಿನ್ ಮಾಡಿದ ಕಾಮೆಂಟ್ ಅನ್ನು ವೀಕ್ಷಿಸಲು ವೀಕ್ಷಕರು ಕಾಮೆಂಟ್ ವಿಭಾಗವನ್ನು ವಿಸ್ತರಿಸಬೇಕಾಗುತ್ತದೆ. ನಿಮ್ಮ ಸ್ವಂತ ಕಾಮೆಂಟ್ ಅಥವಾ ಅಭಿಮಾನಿಯೊಬ್ಬರ ಕಾಮೆಂಟ್ ಅನ್ನು ಪಿನ್ ಮಾಡಲು ನೀವು ಆಯ್ಕೆ ಮಾಡಬಹುದು.

  1. YouTube ಗೆ ಸೈನ್ ಇನ್ ಮಾಡಿ.
  2. ವೀಡಿಯೊದ ಕೆಳಗಿನ ಕಾಮೆಂಟ್‌ಗಳಲ್ಲಿ, ನೀವು ಪಿನ್ ಮಾಡಲು ಬಯಸುವ ಕಾಮೆಂಟ್ ಅನ್ನು ಆಯ್ಕೆಮಾಡಿ.
  3. ಇನ್ನಷ್ಟು '' ನಂತರ ಪಿನ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. ನೀವು ಈಗಾಗಲೇ ಕಾಮೆಂಟ್ ಅನ್ನು ಪಿನ್ ಮಾಡಿದ್ದರೆ, ಇದು ಅದನ್ನು ಬದಲಾಯಿಸುತ್ತದೆ.
    ಗಮನಿಸಿ: ನೀವು ಯಾವಾಗ ಬೇಕಾದರೂ ಒಂದು ಕಾಮೆಂಟ್ ಅನ್ನು ಅನ್‌ಪಿನ್ ಮಾಡಬಹುದು ಮತ್ತು ಕಾಮೆಂಟ್ ತನ್ನ ಮೂಲ ಸ್ಥಾನಕ್ಕೆ ಮರಳುತ್ತದೆ.
  4. ದೃಢೀಕರಿಸಲು ಪಿನ್‌‌ ಅನ್ನು ಕ್ಲಿಕ್ ಮಾಡಿ.

ಕಂಪ್ಯೂಟರ್‌ನಲ್ಲಿ, ವೀಕ್ಷಕರು ಪಿನ್ ಮಾಡಿದ ಕಾಮೆಂಟ್ ಅನ್ನು ವೀಕ್ಷಣಾ ಪುಟದ ಮೇಲ್ಭಾಗದಲ್ಲಿ "ಇವರಿಂದ ಪಿನ್ ಮಾಡಲಾಗಿದೆ" ಐಕಾನ್ ಮತ್ತು ನಿಮ್ಮ ಚಾನಲ್ ಹೆಸರಿನೊಂದಿಗೆ ನೋಡುತ್ತಾರೆ. ಮೊಬೈಲ್‌ನಲ್ಲಿ, ಅದನ್ನು ನೋಡಲು ಅವರು ಕಾಮೆಂಟ್ ವಿಭಾಗವನ್ನು ವಿಸ್ತರಿಸಲು ಟ್ಯಾಪ್ ಮಾಡಬೇಕಾಗುತ್ತದೆ.

ಸಲಹೆ: ನಿಮ್ಮ ಮೊಬೈಲ್ ಸಾಧನದಲ್ಲಿ Creator Studio ಆ್ಯಪ್‌ನಲ್ಲಿ ನೀವು ಕಾಮೆಂಟ್‌ಗಳನ್ನು ಸಹ ನಿರ್ವಹಿಸಬಹುದು. YouTube Studio ಆ್ಯಪ್ ಸಹಾಯ ಕೇಂದ್ರದಲ್ಲಿ ಪ್ರಾರಂಭಿಸಿ.
ಕಾಮೆಂಟ್‌ಗಳನ್ನು ಲೈಕ್ ಅಥವಾ ಡಿಸ್‌ಲೈಕ್ ಮಾಡಿ

ಕಾಮೆಂಟ್‌ಗೆ ಹೋಗಿ, ನಂತರ ಲೈಕ್ ಅಥವಾ ಡಿಸ್‌ಲೈಕ್ ಐಕಾನ್ ಅನ್ನು ಬಳಸಿ.

ಸಲಹೆ: ಸೂಕ್ತವಲ್ಲ ಎಂದು ನೀವು ಭಾವಿಸುವ ಕಾಮೆಂಟ್ ಅನ್ನು ನೀವು ನೋಡಿದರೆ, ನೀವು ಅದನ್ನು ಸ್ಪ್ಯಾಮ್ ಅಥವಾ ನಿಂದನೆ ಎಂದು ವರದಿ ಮಾಡಬಹುದು. ನೀವು ರಚನೆಕಾರರಾಗಿದ್ದರೆ, ನಿಮ್ಮ ವೀಡಿಯೊಗಳಲ್ಲಿನ ಕಾಮೆಂಟ್‌ಗಳನ್ನು ನಿರ್ವಹಿಸಲು ಕಾಮೆಂಟ್ ಮಾಡರೇಶನ್ ಟೂಲ್‌ಗಳನ್ನು ಸಹ ನೀವು ಬಳಸಬಹುದು.

ನಿಮ್ಮ ಕಾಮೆಂಟ್ ಅನ್ನು ಎಡಿಟ್ ಮಾಡಿ ಅಥವಾ ತೆಗೆದುಹಾಕಿ
  1. ನಿಮ್ಮ ಕಾಮೆಂಟ್‌ನ ಮೇಲಿನ ಬಲಕ್ಕೆ ಪಾಯಿಂಟ್ ಮಾಡಿ.
  2. ಇನ್ನಷ್ಟು '' ಕ್ಲಿಕ್ ಮಾಡಿ.
  3. ಎಡಿಟ್ ಮಾಡಿ  ಅಥವಾ ಅಳಿಸಿ  ಅನ್ನು ಆಯ್ಕೆಮಾಡಿ.

ಕಾಮೆಂಟ್ ಪೂರ್ವವೀಕ್ಷಣೆಗಳ FAQ

ಈ ಕಾಮೆಂಟ್ ಪೂರ್ವವೀಕ್ಷಣೆ ವಿಭಾಗದಲ್ಲಿ ಯಾವ ಕಾಮೆಂಟ್‌ಗಳನ್ನು ತೋರಿಸಲಾಗುತ್ತದೆ?

ಅನೇಕ ಕಾರಣಗಳಿಗಾಗಿ ಕಾಮೆಂಟ್ ಪೂರ್ವವೀಕ್ಷಣೆ ವಿಭಾಗದಲ್ಲಿ ಕಾಮೆಂಟ್ ಅನ್ನು ತೋರಿಸಬಹುದು. ಉದಾಹರಣೆಗೆ, ಕಾಮೆಂಟ್ ಹೀಗಿತ್ತು:

  • ಇತ್ತೀಚೆಗೆ ಪೋಸ್ಟ್ ಮಾಡಲಾಗಿದೆ
  • ವೀಡಿಯೊ ರಚನೆಕಾರರಿಂದ ಪಿನ್ ಮಾಡಲಾಗಿದೆ ಅಥವಾ “ಹೃದಯ” ದ ಚಹ್ನೆಯನ್ನು ನೀಡಲಾಗಿದೆ

ಎಲ್ಲಾ ಕಾಮೆಂಟ್‌ಗಳನ್ನು ವೀಕ್ಷಿಸುವುದು ಹೇಗೆ?

ಎಲ್ಲಾ ಕಾಮೆಂಟ್‌ಗಳನ್ನು ವೀಕ್ಷಿಸಲು, ಕಾಮೆಂಟ್ ಪೂರ್ವವೀಕ್ಷಣೆ ವಿಭಾಗದಲ್ಲಿ ಎಲ್ಲಿಯಾದರೂ ಟ್ಯಾಪ್ ಮಾಡಿ.

ವೀಕ್ಷಿಸಿ ಮುಂದಿನ ವೀಡಿಯೊ ಪಟ್ಟಿಗೆ ಹಿಂತಿರುಗಲು, ಮೇಲಿನ ಬಲ ಮೂಲೆಯಲ್ಲಿರುವ X ಅನ್ನು ಟ್ಯಾಪ್ ಮಾಡಿ.

ನನ್ನ ಪಿನ್ ಮಾಡಿದ ಕಾಮೆಂಟ್‌ಗಳು ಕಾಮೆಂಟ್ ಪೂರ್ವವೀಕ್ಷಣೆ ವಿಭಾಗದಲ್ಲಿ ಕಾಣಿಸುತ್ತವೆಯೇ?

ಕಾಮೆಂಟ್ ಪೂರ್ವವೀಕ್ಷಣೆ ವಿಭಾಗಗಳಲ್ಲಿ ಸೀಮಿತ ಸ್ಥಳಾವಕಾಶವಿರುವುದರಿಂದ, ಕಾಮೆಂಟ್ ಅನ್ನು ಪಿನ್ ಮಾಡುವುದರಿಂದ ಅದು ಕಾಮೆಂಟ್ ಪೂರ್ವವೀಕ್ಷಣೆ ವಿಭಾಗದಲ್ಲಿ ಕಾಣಿಸುತ್ತದೆ ಎಂದು ಖಾತರಿ ನೀಡಲು ಆಗುವುದಿಲ್ಲ. ಆದಾಗ್ಯೂ, ಯಾರಾದರೂ ಎಲ್ಲವನ್ನೂ ವೀಕ್ಷಿಸಿ ಅನ್ನು ಟ್ಯಾಪ್ ಮಾಡಿದಾಗ ಪಿನ್ ಮಾಡಿದ ಕಾಮೆಂಟ್‌ಗಳು ಮೊದಲ ಕಾಮೆಂಟ್‌ನಂತೆ ಕಾಣಿಸುವುದು ಮುಂದುವರೆಯುತ್ತದೆ.

ನನ್ನ ಪ್ರಸ್ತುತ ಕಾಮೆಂಟ್ ಮಾಡರೇಶನ್ ಸೆಟ್ಟಿಂಗ್‌ಗಳು ಕಾಮೆಂಟ್ ಪೂರ್ವವೀಕ್ಷಣೆ ವಿಭಾಗಕ್ಕೆ ಅನ್ವಯಿಸುತ್ತವೆಯೇ?

ಹೌದು. ಎಲ್ಲಾ ಕಾಮೆಂಟ್ ಮಾಡರೇಶನ್ ಸೆಟ್ಟಿಂಗ್‌ಗಳು ನಿರ್ಬಂಧಿಸಿರುವ ಪದಗಳು ಮತ್ತು ಗುಪ್ತ ಬಳಕೆದಾರರನ್ನು ಒಳಗೊಂಡಂತೆ ಕಾಮೆಂಟ್ ಪೂರ್ವವೀಕ್ಷಣೆ ವಿಭಾಗಕ್ಕೆ ಅನ್ವಯಿಸುತ್ತವೆ. ಇನ್ನಷ್ಟು ತಿಳಿಯಿರಿ: ನಿಮ್ಮ ಕಾಮೆಂಟ್‌ಗಳನ್ನು ನಿರ್ವಹಿಸಿ ಮತ್ತು ಮಾಡರೇಟ್ ಮಾಡುವುದು ಹೇಗೆ.

ಕಾಮೆಂಟ್ ರಿಮೈಂಡರ್‌ಗಳು, ಎಚ್ಚರಿಕೆಗಳು ಮತ್ತು ಸಮಯ ಮೀರಿದೆ

ಕಾಮೆಂಟ್ ರಿಮೈಂಡರ್‌ಗಳು

ನೀವು ಕಾಮೆಂಟ್ ಅನ್ನು ಪೋಸ್ಟ್ ಮಾಡುವ ಮೊದಲು, YouTube ನಲ್ಲಿ ಗೌರವಾನ್ವಿತ ಸಂವಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ನೀವು ರಿಮೈಂಡರ್ ಅನ್ನು ಪಡೆಯಬಹುದು. ನಿಮ್ಮ ಕಾಮೆಂಟ್ ಅನ್ನು ಇತರರಿಗೆ ಆಕ್ಷೇಪಾರ್ಹವೆಂದು ಪರಿಗಣಿಸಬಹುದು ಎಂದು ನಮ್ಮ ಸಿಸ್ಟಂ ಕಂಡುಕೊಂಡಾಗ ಈ ರಿಮೈಂಡರ್ ಅನ್ನು ತೋರಿಸುತ್ತದೆ. ನಿಮ್ಮ ಕಾಮೆಂಟ್ ಅನ್ನು ಗೌರವಯುತವಾಗಿ ಮಾಡಿ ಅಥವಾ ನೀವು ಅದನ್ನು ಪೋಸ್ಟ್ ಮಾಡುವ ಮೊದಲು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಪರಿಶೀಲಿಸಿ.

ಗಮನಿಸಿ: ಈ ರಿಮೈಂಡರ್ ಇದೀಗ ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಕಾಮೆಂಟ್‌ಗಳಿಗೆ ಮಾತ್ರ ಲಭ್ಯವಿದೆ.

ಕಾಮೆಂಟ್ ರಿಮೂವಲ್ ಎಚ್ಚರಿಕೆಗಳು

ನೀವು ಕಾಮೆಂಟ್ ಅನ್ನು ಪೋಸ್ಟ್ ಮಾಡಿದ ನಂತರ, ನಿಮ್ಮ ಕಾಮೆಂಟ್ ಅನ್ನು ತೆಗೆದುಹಾಕಲಾಗಿದೆ ಎಂಬ ನೋಟಿಫಿಕೇಶನ್ ಅನ್ನು ಸ್ವೀಕರಿಸಬಹುದು. ನಿಮ್ಮ ಕಾಮೆಂಟ್‌ಗಳು ಪದೇ ಪದೇ YouTube ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿವೆ ಎಂಬುದು YouTube ನ ಸಿಸ್ಟಂನ ಗಮನಕ್ಕೆ ಬಂದರೆ ನಿಮ್ಮ ಕಾಮೆಂಟ್ ಅನ್ನು ತೆಗೆದುಹಾಕಬಹುದು. ರಿಮೂವಲ್ ಕುರಿತು ನಿಮಗೆ ಒಪ್ಪಿಗೆ ಇಲ್ಲದಿದ್ದರೆ, ನೀವು ಇಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು.

ಕಾಮೆಂಟ್ ಅವಧಿ ಮೀರಿದೆ

ನೀವು ಕಾಮೆಂಟ್ ಅನ್ನು ಪೋಸ್ಟ್ ಮಾಡಿದ ನಂತರ, ನಿಮ್ಮ ಖಾತೆಗೆ ಕಾಮೆಂಟ್ ಮಾಡುವುದನ್ನು ವಿರಾಮಗೊಳಿಸಲಾಗಿದೆ ಎಂದು ಹೇಳುವ ನೋಟಿಫಿಕೇಶನ್ ಅನ್ನು ನೀವು ಪಡೆಯಬಹುದು. ನಮ್ಮ ಒಂದು ಅಥವಾ ಹೆಚ್ಚಿನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಬಹುದಾದ ಕಾಮೆಂಟ್‌ಗಳನ್ನು ನೀವು ಪದೇ ಪದೇ ಪೋಸ್ಟ್ ಮಾಡಿದ್ದೀರಿ ಎಂಬುದನ್ನು YouTube ನ ಸಿಸ್ಟಂ ಪತ್ತೆ ಮಾಡಿದಾಗ ಕಾಮೆಂಟ್‌ ಮಾಡುವುದನ್ನು ಅಮಾನತುಗೊಳಿಸಬಹುದು. ಕಾಮೆಂಟ್ ಮಾಡುವ ನಿಮ್ಮ ಸಾಮರ್ಥ್ಯವನ್ನು 24 ಗಂಟೆಗಳವರೆಗೆ ವಿರಾಮಗೊಳಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9769221463867997539
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false