ಅಮಾನ್ಯ ಟ್ರಾಫಿಕ್‌ನಿಂದಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ

ನಿಮ್ಮ ಖಾತೆ ಮತ್ತು ನಮ್ಮ ಜಾಹೀರಾತುದಾರರನ್ನು ರಕ್ಷಿಸಲು ನಾವು ತೆಗೆದುಕೊಂಡ ಕ್ರಮಗಳ ಬಗ್ಗೆ ನೀವು ಪ್ರಶ್ನೆಗಳನ್ನು ಹೊಂದಿರಬಹುದು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅಮಾನ್ಯ ಟ್ರಾಫಿಕ್‌ನಿಂದಾಗಿ ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವುದರ ಕುರಿತು ನಮ್ಮ ಕೆಲವು 'ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ' ಉತ್ತರಗಳನ್ನು ಕೆಳಗೆ ನೀಡಲಾಗಿದೆ.

ನನ್ನ ಖಾತೆಯನ್ನೇಕೆ ನಿಷ್ಕ್ರಿಯಗೊಳಿಸಲಾಗಿದೆ?

ನಮ್ಮ ಪತ್ತೆಹಚ್ಚುವಿಕೆ ಸಿಸ್ಟಂ ಅನ್ನು ರಕ್ಷಿಸುವ ಅವಶ್ಯಕತೆಯಿರುವ ಕಾರಣ, ಖಾತೆಯ ಚಟುವಟಿಕೆಯಲ್ಲಿ ಭಾಗವಹಿಸಿರಬಹುದಾದ ಯಾವುದೇ ಪುಟಗಳು, ಬಳಕೆದಾರರು ಅಥವಾ ಥರ್ಡ್ ಪಾರ್ಟಿ ಸೇವೆಗಳನ್ನು ಒಳಗೊಂಡಂತೆ ಪ್ರಕಾಶಕರಿಗೆ ಅವರ ಖಾತೆಯ ಚಟುವಟಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ.

Google ಅಮಾನ್ಯ ಟ್ರಾಫಿಕ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ, ಜಾಹೀರಾತುದಾರರ ವೆಚ್ಚಗಳು ಅಥವಾ ಪ್ರಕಾಶಕರ ಗಳಿಕೆಗಳನ್ನು ಕೃತಕವಾಗಿ ಹೆಚ್ಚಿಸುವಂತಹ ಬಳಕೆಯ ಪ್ಯಾಟರ್ನ್‌ಗೆ ಕ್ಲಿಕ್‌ಗಳು ಮತ್ತು ಇಂಪ್ರೆಶನ್‌ಗಳು ಹೊಂದಿಕೊಳ್ಳುತ್ತವೆಯೇ ಎಂಬುದನ್ನು ನಿರ್ಧರಿಸಲು ಅವುಗಳೆಲ್ಲವನ್ನೂ ವಿಶ್ಲೇಷಿಸುತ್ತದೆ. AdSense ಖಾತೆಯು ನಮ್ಮ Google Ads ಜಾಹೀರಾತುದಾರರಿಗೆ ಅಪಾಯವನ್ನುಂಟುಮಾಡಬಹುದು ಎಂದು ನಾವು ನಿರ್ಧರಿಸಿದರೆ, ನಮ್ಮ ಜಾಹೀರಾತುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಆ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.

ಅಮಾನ್ಯ ಟ್ರಾಫಿಕ್‌ನಿಂದಾಗಿ AdSense ಖಾತೆಗಳನ್ನು ನಿಷ್ಕ್ರಿಯಗೊಳಿಸುವುದರ ಕುರಿತು ಸಾಮಾನ್ಯ ಕಾರಣಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಕೊನೆಯದಾಗಿ, ನಮ್ಮ ನಿಯಮಗಳು ಮತ್ತು ನಿಬಂಧನೆಗಳಲ್ಲಿ ತಿಳಿಸಿದಂತೆ, ಅಮಾನ್ಯ ಟ್ರಾಫಿಕ್‌ನ ನಿದರ್ಶನಗಳನ್ನು ನಿರ್ಧರಿಸುವಾಗ Google ತನ್ನ ಸ್ವಂತ ವಿವೇಚನೆಯನ್ನು ಬಳಸುತ್ತದೆ.

ನನ್ನ ಖಾತೆಯನ್ನು ಅಮಾನ್ಯ ಟ್ರಾಫಿಕ್‌ನಿಂದಾಗಿ ನಿಷ್ಕ್ರಿಯಗೊಳಿಸಿದ ನಂತರವೂ ಅದನ್ನು ಮರುಸ್ಥಾಪಿಸಬಹುದೇ?

ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಾವು ನಿಮಗೆ ನೆರವಾಗಲು ಸಿದ್ಧರಿದ್ದೇವೆ. ಈ ನಿರ್ಧಾರ ತಪ್ಪು ಎಂದು ನೀವು ಭಾವಿಸುವುದಾದರೆ ಮತ್ತು ನಿಮ್ಮ ಅಥವಾ ನೀವು ಜವಾಬ್ದಾರರಾಗಿರುವವರ ಕ್ರಿಯೆಗಳು ಅಥವಾ ನಿರ್ಲಕ್ಷ್ಯದಿಂದಾಗಿ ಅಮಾನ್ಯ ಟ್ರಾಫಿಕ್ ಉಂಟಾಗಿಲ್ಲ ಎಂದು ನೀವು ನಂಬಿದ್ದರೆ, ನೀವು ನಮ್ಮ ಅಮಾನ್ಯ ಚಟುವಟಿಕೆಯ ಮೇಲ್ಮನವಿ ಫಾರ್ಮ್ ಮೂಲಕ ಮೇಲ್ಮನವಿ ಸಲ್ಲಿಸಬಹುದು.

ನಿಮ್ಮ ಮೇಲ್ಮನವಿಯನ್ನು ನಾವು ಸ್ವೀಕರಿಸಿದಾಗ, ನಿಮಗೆ ತ್ವರಿತವಾಗಿ ತಿಳಿಸಲು ನಮ್ಮ ಕೈಲಾದಷ್ಟು ನಾವು ಪ್ರಯತ್ನಿಸುತ್ತೇವೆ ಮತ್ತು ಅಗತ್ಯವಿರುವ ಸೂಕ್ತ ಕ್ರಮವನ್ನು ಮುಂದುವರಿಸುತ್ತೇವೆ. ನಿಮ್ಮ ಖಾತೆಯನ್ನು ಮರುಸ್ಥಾಪಿಸಲಾಗುವುದರ ಕುರಿತು ಯಾವುದೇ ಗ್ಯಾರಂಟಿ ಇಲ್ಲ ಎಂಬುದನ್ನು ಗಮನಿಸಿ.

ನಿಮ್ಮ ಮೇಲ್ಮನವಿಯ ಕುರಿತು ನಾವು ಒಂದು ನಿರ್ಧಾರಕ್ಕೆ ಬಂದ ಬಳಿಕ, ನಂತರದ ಮೆಲ್ಮನವಿಗಳನ್ನು ಪರಿಗಣಿಸದೇ ಇರಬಹುದು.

ಅಮಾನ್ಯ ಟ್ರಾಫಿಕ್ ಮೇಲ್ಮನವಿಯನ್ನು ಯಶಸ್ವಿಯಾಗಿ ಬರೆಯುವುದರ ಕುರಿತಾದ ಕೆಲವು ಸಲಹೆಗಳು ಯಾವುವು?

ನಿಮ್ಮ ಮೇಲ್ಮನವಿಯನ್ನು ಬರೆಯುವಾಗ ನಿಮಗೆ ಉಪಯುಕ್ತವಾಗಬಹುದಾದ ಕೆಲವು ಸಲಹೆಗಳು ಇಲ್ಲಿವೆ:

  • ಅಮಾನ್ಯ ಟ್ರಾಫಿಕ್‌ನಿಂದಾಗಿ AdSense ಖಾತೆಗಳನ್ನು ನಿಷ್ಕ್ರಿಯಗೊಳಿಸುವುದರ ಕುರಿತು ಸಾಮಾನ್ಯ ಕಾರಣಗಳನ್ನು ನೋಡಿ. ಈ ಕಾರಣಗಳಲ್ಲಿ ಯಾವುದಾದರೂ ಕಾರಣವು ನಿಮಗೆ ಅಥವಾ ನಿಮ್ಮ ಕಂಟೆಂಟ್‌ಗೆ ಅನ್ವಯವಾಗುತ್ತದೆಯೇ? ನಿಮ್ಮ ಸ್ನೇಹಿತರು ನಿಮ್ಮ ಜಾಹೀರಾತುಗಳನ್ನು ಹಲವಾರು ಬಾರಿ ಕ್ಲಿಕ್ ಮಾಡಿದ್ದಾರೆಯೇ? ಅಮಾನ್ಯ ಟ್ರಾಫಿಕ್ ಉಂಟಾಗುವುದಕ್ಕೆ ಕಾರಣವಾದ ಟ್ರಾಫಿಕ್ ಅನ್ನು ನೀವು ಖರೀದಿಸಿದ್ದೀರಾ? ಅಮಾನ್ಯ ಟ್ರಾಫಿಕ್ ಪುನಃ ಉಂಟಾಗದಂತೆ ತಡೆಯಲು, ಕಂಟೆಂಟ್ ಮತ್ತು/ಅಥವಾ ವರ್ತನೆಯ ಬದಲಾವಣೆಗಳನ್ನು ನೀವು ಮಾಡಬಹುದೇ?
  • ನಿಮ್ಮ ಡೆಸ್ಕ್‌ಟಾಪ್ ಸೈಟ್, ಮೊಬೈಲ್ ಸೈಟ್ ಮತ್ತು/ಅಥವಾ ಮೊಬೈಲ್ ಆ್ಯಪ್‌ನಲ್ಲಿ ಜಾಹೀರಾತು ಕಾರ್ಯಗತಗೊಳಿಸುವಿಕೆಗಳನ್ನು ಪರಿಶೀಲಿಸಿ. ನಿಮ್ಮ ವಿಶಿಷ್ಟ ಬಳಕೆದಾರರ ಪ್ರಯಾಣ ಯಾವುದು ಎಂಬುದರ ಕುರಿತು ಯೋಚಿಸಿ ಮತ್ತು ಬಳಕೆದಾರರು ನಿಮ್ಮ ಜಾಹೀರಾತುಗಳನ್ನು ಆಕಸ್ಮಿಕವಾಗಿ ಕ್ಲಿಕ್ ಮಾಡಲು ಜಾಹೀರಾತು ಕಾರ್ಯಗತಗೊಳಿಸುವಿಕೆಗಳು ಕಾರಣವಾಗಿವೆಯೇ ಎಂದು ಪರಿಶೀಲಿಸಿ.
  • ಮೇಲ್ಮನವಿ ಫಾರ್ಮ್‌ನಲ್ಲಿ, ನಿಮ್ಮ ನಿಷ್ಕ್ರಿಯಗೊಳಿಸಿದ Google AdSense ಖಾತೆಯೊಂದಿಗೆ ಸಂಯೋಜಿತವಾಗಿರುವ ಇಮೇಲ್ ವಿಳಾಸವನ್ನು ಒದಗಿಸಿ. ಇದು ನಿಮ್ಮ ಖಾತೆಯನ್ನು ಪತ್ತೆಹಚ್ಚಲು ಮತ್ತು ನಿಮ್ಮ ಮೇಲ್ಮನವಿಯನ್ನು ಪ್ರಕ್ರಿಯೆಗೊಳಿಸಲು ಉಂಟಾಗುವ ವಿಳಂಬವನ್ನು ಕಡಿಮೆ ಮಾಡಲು ನಮಗೆ ಸಹಾಯ ಮಾಡುತ್ತದೆ.
  • ಭವಿಷ್ಯಕ್ಕಾಗಿ ನೀವು ಯಾವ ಬದಲಾವಣೆಗಳನ್ನು ಮಾಡುತ್ತೀರಿ ಎಂದು ನಮಗೆ ತಿಳಿಸಿ. ಇದು ಮತ್ತೆ ಸಂಭವಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಯಾವ ಸಿಸ್ಟಂಗಳು ಅಥವಾ ನಡವಳಿಕೆಗಳನ್ನು ಇರಿಸಿದ್ದೀರಿ? ಉದಾಹರಣೆಗೆ, ನೀವು ಹೇಗೆ ನಿಮ್ಮ ಜಾಹೀರಾತು ಕಾರ್ಯಗತಗೊಳಿಸುವಿಕೆಗಳನ್ನು ಹೊಂದಿಸಿದ್ದೀರಿ, ನಿಮ್ಮ ಟ್ರಾಫಿಕ್ ಮೂಲಗಳನ್ನು ಮೌಲ್ಯಮಾಪನ ಮಾಡಿದ್ದೀರಿ, ಇತ್ಯಾದಿಗಳನ್ನು ನಮಗೆ ತಿಳಿಸಿ.

ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ನನ್ನ ಮೇಲ್ಮನವಿಯನ್ನು ನಿರಾಕರಿಸಲಾಗಿದೆ. ನಾನು ಪ್ರೋಗ್ರಾಂಗೆ ಪುನಃ ಸೇರಿಕೊಳ್ಳಬಹುದೇ ಅಥವಾ ಹೊಸ ಖಾತೆಯನ್ನು ತೆರೆಯಬಹುದೇ?

ನಿಮ್ಮ ಖಾತೆಯ ವಿರುದ್ಧ ತೆಗೆದುಕೊಂಡ ಕ್ರಮಗಳ ಕುರಿತಾದ ನಿಮ್ಮ ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಜಾಹೀರಾತುದಾರರು, ಪ್ರಕಾಶಕರು ಮತ್ತು ಬಳಕೆದಾರರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು, ನಮ್ಮ ತಜ್ಞರ ತಂಡವು ಎಚ್ಚರಿಕೆಯಿಂದ ನಡೆಸಿದ ತನಿಖೆಯ ಫಲಿತಾಂಶವೇ ನಮ್ಮ ಕ್ರಮಗಳು. ನಮ್ಮ ನಿರ್ಧಾರದಿಂದ ನೀವು ನಿರಾಶೆಗೊಂಡಿರಬಹುದು ಆದರೂ, ನಿಮ್ಮ ಖಾತೆಯನ್ನು ಮರುಸ್ಥಾಪಿಸಲು ನಮಗೆ ಸಾಧ್ಯವಾಗುತ್ತಿಲ್ಲ.

ಅಮಾನ್ಯ ಟ್ರಾಫಿಕ್‌ನಿಂದಾಗಿ ನಿಷ್ಕ್ರಿಯಗೊಳಿಸಿದ ಪ್ರಕಾಶಕರನ್ನು AdSense ನಲ್ಲಿನ ಯಾವುದೇ ಹೆಚ್ಚಿನ ಭಾಗವಹಿಸುವಿಕೆಗೆ ಅನುಮತಿಸಲಾಗುವುದಿಲ್ಲ. ಈ ಕಾರಣಕ್ಕಾಗಿ, ಈ ಪ್ರಕಾಶಕರು ಹೊಸ ಖಾತೆಗಳನ್ನು ತೆರೆಯದಿರಬಹುದು.

ಯಾವುದೇ ಮೂಲದ ಅಮಾನ್ಯ ಟ್ರಾಫಿಕ್ ಸೇರಿದಂತೆ, ಯಾವುದೇ ಕಾರಣಕ್ಕಾಗಿ ಖಾತೆಯನ್ನು ನಿಷ್ಕ್ರಿಯಗೊಳಿಸುವ ಹಕ್ಕನ್ನು Google ಕಾಯ್ದಿರಿಸಿಕೊಂಡಿದೆ.

ನನ್ನ ಖಾತೆಯು ಬೇರೊಂದು ನಿಷ್ಕ್ರಿಯಗೊಂಡ ಖಾತೆಯ ಜೊತೆಗೆ ಸಂಬಂಧ ಹೊಂದಿರುವುದರಿಂದ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಸಂಬಂಧದ ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀವು ನನಗೆ ನೀಡುವಿರಾ?

ಅಮಾನ್ಯ ಟ್ರಾಫಿಕ್‌ನಂತೆ, ಪ್ರಕಾಶಕರ ಖಾತೆಗಳ ನಡುವೆ ನಮಗೆ ಕಂಡುಬರುವ ಸಂಬಂಧಗಳ ಕುರಿತು ಯಾವುದೇ ಮಾಹಿತಿಯನ್ನು ಪ್ರಕಾಶಕರಿಗೆ ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ. ನಮ್ಮ ಸ್ವಾಮ್ಯದ ಪತ್ತೆಹಚ್ಚುವ ಸಿಸ್ಟಂ ಅನ್ನು ರಕ್ಷಿಸಲು, ನಮ್ಮ ಎಲ್ಲಾ ಪ್ರಕಾಶಕರಿಗಾಗಿ ನಾವು ಈ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಿ.

AdSense ಖಾತೆಯು ನಮ್ಮ Google Ads ಜಾಹೀರಾತುದಾರರಿಗೆ ಅಪಾಯವನ್ನುಂಟುಮಾಡಬಹುದು ಎಂದು ನಾವು ನಿರ್ಧರಿಸಿದರೆ, ನಮ್ಮ ಜಾಹೀರಾತುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಆ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.

ನನ್ನ AdSense ಗಳಿಕೆಗಳಿಗಾಗಿ ನನಗೆ ಈಗಲೂ ಪೇಮೆಂಟ್ ಮಾಡಲಾಗುತ್ತದೆಯೇ?

ಅಮಾನ್ಯ ಟ್ರಾಫಿಕ್‌ಗಾಗಿ ಮತ್ತು/ಅಥವಾ ನಮ್ಮ ಪ್ರಕಾಶಕರ ನೀತಿಗಳ ಉಲ್ಲಂಘನೆಗಳಿಗಾಗಿ ಪ್ರಕಾಶಕರನ್ನು ನಿಷ್ಕ್ರಿಯಗೊಳಿಸಲಾಗಿದೆ, ಅಮಾನ್ಯವೆಂದು ಗುರುತಿಸದ ತಮ್ಮ ಆದಾಯದ ಭಾಗದಲ್ಲಿನ ಅಂತಿಮ ಪಾವತಿಗಾಗಿ ಅವರು ಅರ್ಹರಾಗಿರಬಹುದು. ಖಾತೆಯನ್ನು ನಿಷ್ಕ್ರಿಯಗೊಳಿಸಿದ ನಂತರ, ಈ ಅಂತಿಮ ಪಾವತಿಯ ಲೆಕ್ಕಾಚಾರವನ್ನು ಸಕ್ರಿಯಗೊಳಿಸಲು 30 ದಿನಗಳ ಪೇಮೆಂಟ್ ಹೋಲ್ಡ್ ಅನ್ನು ಇರಿಸಲಾಗುತ್ತದೆ (ಎಲ್ಲಿ ಅನ್ವಯವಾಗುತ್ತದೆಯೋ ಅಲ್ಲಿ). ಈ 30 ದಿನಗಳ ಅವಧಿಯ ನಂತರ, ನಿಮ್ಮ ಬಾಕಿ ಉಳಿದ ಅರ್ಹ ಬ್ಯಾಲೆನ್ಸ್ (ಯಾವುದಾದರೂ ಇದ್ದರೆ) ಅನ್ನು ವೀಕ್ಷಿಸಲು, AdSense ಗೆ ಸೈನ್ ಇನ್ ಮಾಡಿ ಮತ್ತು ಪಾವತಿಗೆ ವ್ಯವಸ್ಥೆ ಮಾಡಿ. ಅಮಾನ್ಯ ಟ್ರಾಫಿಕ್ ಮತ್ತು/ಅಥವಾ ಪ್ರಕಾಶಕರ ನೀತಿ ಉಲ್ಲಂಘನೆಗಳಿಗಾಗಿ ನಿಮ್ಮ ಅಂತಿಮ ಬ್ಯಾಲೆನ್ಸ್‌ನಿಂದ ಮಾಡಿದ ಕಡಿತವನ್ನು ಪ್ರಭಾವಿತ ಜಾಹೀರಾತುದಾರರಿಗೆ ಮರುಪಾವತಿಸಲಾಗುತ್ತದೆ (ಸೂಕ್ತವಾಗಿದ್ದರೆ ಮತ್ತು ಸಾಧ್ಯವಾದರೆ).

ನಾನು ಈಗಷ್ಟೆ ನನ್ನ ಪಿನ್ ಅನ್ನು ಪಡೆದುಕೊಂಡಿದ್ದೇನೆ. ನಾನು ಅದನ್ನು ಏನು ಮಾಡಬೇಕು?

ಅಮಾನ್ಯ ಚಟುವಟಿಕೆಗಾಗಿ ನಿಷ್ಕ್ರಿಯಗೊಳಿಸಲಾದ ಪ್ರಕಾಶಕರು ಯಾವುದೇ ಹೆಚ್ಚಿನ ಪೇಮೆಂಟ್ ಅನ್ನು ಸ್ವೀಕರಿಸುವುದಿಲ್ಲವಾದ್ದರಿಂದ, ನೀವು ಈ ಪಿನ್ ಅನ್ನು ನಿರ್ಲಕ್ಷಿಸಬಹುದು.

ಬೇರೊಬ್ಬ AdSense ಪ್ರಕಾಶಕರು ತಮ್ಮ ಜಾಹೀರಾತುಗಳನ್ನು ನನ್ನ ಸೈಟ್‌ನಲ್ಲಿ ಇರಿಸಲು ನಾನು ಬಯಸುತ್ತೇನೆ. ಇದು ಅವರ ಖಾತೆಗೆ ಸಮಸ್ಯೆಯನ್ನುಂಟುಮಾಡುತ್ತದೆಯೇ? ನನ್ನ ಸೈಟ್ ಅನ್ನು ಸಹ ನಿಷ್ಕ್ರಿಯಗೊಳಿಸಲಾಗಿದೆಯೇ?

AdSense ಪ್ರಕಾಶಕರು ತಮ್ಮ ಜಾಹೀರಾತುಗಳನ್ನು AdSense ಪ್ರೋಗ್ರಾಂ ನೀತಿಗಳು ಮತ್ತು ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಯಾವುದೇ ಸೈಟ್‌ನಲ್ಲಿ ಇರಿಸಲು ಅನುಮತಿಸಲಾಗಿದೆ. ಪ್ರಕಾಶಕರ ಖಾತೆಯ ಸ್ಥಿತಿಯು, ನಮ್ಮ ನೀತಿಗಳಿಗೆ ಅನುಗುಣವಾಗಿರುವ ನಿರ್ದಿಷ್ಟ ಸೈಟ್‌ನಿಂದ ಪ್ರತ್ಯೇಕವಾಗಿರಬಹುದು. ಆದರೂ, ನಮ್ಮ Google Ads ಜಾಹೀರಾತುದಾರರಿಗೆ ಬೇರೊಂದು ಪ್ರಕಾಶಕರ ಖಾತೆಯು ಅಪಾಯವನ್ನುಂಟುಮಾಡಬಹುದು ಎಂದು ನಾವು ನಿರ್ಧರಿಸಿದರೆ, ನಮ್ಮ ಜಾಹೀರಾತುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಅದನ್ನು ನಿಷ್ಕ್ರಿಯಗೊಳಿಸಬಹುದು.

ನನಗೆ ಸಂಬಂಧಿಸಿದ ಯಾರಾದರೂ AdSense ಖಾತೆಯೊಂದನ್ನು ರಚಿಸಿದರೆ, ಅವರ ಖಾತೆಯನ್ನು ಸಹ ನಿಷ್ಕ್ರಿಯಗೊಳಿಸಲಾಗುತ್ತದೆಯೇ?

ಆ ಸಂಬಂಧಿತ ಪ್ರಕಾಶಕರ ಖಾತೆಯು ನಮ್ಮ Google Ads ಜಾಹೀರಾತುದಾರರಿಗೆ ಅಪಾಯವನ್ನುಂಟುಮಾಡಬಹುದು ಎಂದು ನಾವು ನಿರ್ಧರಿಸಿದರೆ, ನಮ್ಮ ಜಾಹೀರಾತುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಅದನ್ನು ನಿಷ್ಕ್ರಿಯಗೊಳಿಸಬಹುದು.

ಸ್ವೀಕರಿಸಿದ ಪೇಮೆಂಟ್‌ಗಳಿಗಾಗಿ ನಾನು ಈಗಲೂ ತೆರಿಗೆ ಫಾರ್ಮ್‌ಗಳನ್ನು ಸ್ವೀಕರಿಸುತ್ತೇನೆಯೇ?

ನೀವು ಈ ಹಿಂದೆ ನಮ್ಮಿಂದ ಪೇಮೆಂಟ್ ಅನ್ನು ಸ್ವೀಕರಿಸಿದ್ದರೆ ಅಥವಾ ನಿಮ್ಮ ಖಾತೆಯಲ್ಲಿ ಪಾವತಿಸಬೇಕಾದ ಬ್ಯಾಲೆನ್ಸ್‌ಯಿದ್ದರೆ, ಅಗತ್ಯವಿದ್ದರೆ ನಮ್ಮಿಂದ ತೆರಿಗೆ ಫಾರ್ಮ್ ಅನ್ನು ನೀವು ಸ್ವೀಕರಿಸುತ್ತೀರಿ. ನಿಮ್ಮ AdSense ಗಳಿಕೆಗಳಿಗೆ ಸಂಬಂಧಿಸಿದ ತೆರಿಗೆ ಪೇಮೆಂಟ್ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಖಾತೆಯನ್ನು ಮರುಸ್ಥಾಪಿಸಲಾಗಿದೆ. ನನ್ನ ಸೈಟ್‌ಗಳು, ಆ್ಯಪ್‌ಗಳು ಅಥವಾ ವೀಡಿಯೊಗಳಲ್ಲಿ ಜಾಹೀರಾತುಗಳನ್ನು ಏಕೆ ತೋರಿಸುತ್ತಿಲ್ಲ?

ನಿಮ್ಮ AdSense ಖಾತೆಯನ್ನು ಮರುಸ್ಥಾಪಿಸಿದ ನಂತರ, ಬದಲಾವಣೆ ಮತ್ತು ಆ್ಯಡ್ ಸರ್ವಿಂಗ್ ಪುನರಾರಂಭದ ಬಗ್ಗೆ ನಮ್ಮ ಎಲ್ಲಾ ಸರ್ವರ್‌ಗಳಿಗೆ ತಿಳಿಸಲು 48 ಗಂಟೆಗಳವರೆಗೆ ಸಮಯವನ್ನು ತೆಗೆದುಕೊಳ್ಳಬಹುದು. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಮತ್ತು ನಿಮ್ಮ ತಾಳ್ಮೆಯನ್ನು ಪ್ರಶಂಸಿಸುತ್ತೇವೆ.

ನೀವು YouTube ಪ್ರಕಾಶಕರಾಗಿದ್ದರೆ, ನಿಮ್ಮ YouTube ಚಾನಲ್ ಅನ್ನು ನಿಮ್ಮ AdSense ಖಾತೆಯ ಜೊತೆಗೆ ನೀವು ಮರು-ಸಂಯೋಜಿಸಬೇಕಾಗಬಹುದು. ಸೂಚನೆಗಳಿಗಾಗಿ, ಇದನ್ನು ಓದಿ: ಪಾವತಿಗಳಿಗಾಗಿ AdSense ಖಾತೆಯನ್ನು ಸೆಟಪ್ ಮಾಡಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17315020357821017411
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false