ನಕಲಿ ತೊಡಗಿಸಿಕೊಳ್ಳುವಿಕೆ ಕುರಿತಾದ ನೀತಿ

ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.

ಸ್ವಯಂಚಾಲಿತ ಸಿಸ್ಟಂಗಳನ್ನು ಬಳಸುವ ಮೂಲಕ ಅಥವಾ ಮುಗ್ಧ ವೀಕ್ಷಕರಿಗೆ ವೀಡಿಯೊಗಳನ್ನು ಒದಗಿಸುವ ಮೂಲಕ ವೀಕ್ಷಣೆಗಳು, ಲೈಕ್‌ಗಳು, ಕಾಮೆಂಟ್‌ಗಳ ಸಂಖ್ಯೆಯನ್ನು ಅಥವಾ ಇತರ ಮೆಟ್ರಿಕ್‌‌ಗಳನ್ನು ಕೃತಕವಾಗಿ ಹೆಚ್ಚಿಸುವ ಯಾವುದನ್ನೂ ಸಹ YouTube ಅನುಮತಿಸುವುದಿಲ್ಲ. ಜೊತೆಗೆ, ತೊಡಗಿಸಿಕೊಂಡಿದ್ದಕ್ಕಾಗಿ (ವೀಕ್ಷಣೆಗಳು, ಲೈಕ್‌ಗಳು, ಕಾಮೆಂಟ್‌ಗಳು ಇತ್ಯಾದಿ) ವೀಕ್ಷಕರಿಗೆ ಪ್ರತಿಫಲ ಒದಗಿಸುವ ಒಂದೇ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಕಂಟೆಂಟ್‌ಗೆ ಸಹ ಅನುಮತಿಯಿಲ್ಲ.

ಈ ನೀತಿಯನ್ನು ಅನುಸರಿಸದ ಕಂಟೆಂಟ್ ಹಾಗೂ ಚಾನಲ್‌ಗಳನ್ನು ಕೊನೆಗೊಳಿಸಬಹುದಾಗಿದೆ ಮತ್ತು YouTube ನಿಂದ ತೆಗೆದುಹಾಕಬಹುದಾಗಿದೆ.

ಮುಖ್ಯ ಸೂಚನೆ:  ನಿಮ್ಮ ಚಾನಲ್‌ನ ಕುರಿತು ಪ್ರಚಾರ ಮಾಡುವುದಕ್ಕಾಗಿ ನೀವು ಯಾರನ್ನಾದರೂ ನೇಮಿಸಿದರೆ, ಅವರ ನಿರ್ಧಾರಗಳು ನಿಮ್ಮ ಚಾನಲ್‌ನ ಮೇಲೆ ಪ್ರಭಾವ ಬೀರಬಹುದು. ನಮ್ಮ ನೀತಿಗಳನ್ನು ಉಲ್ಲಂಘಿಸುವ ಯಾವುದೇ ವಿಧಾನ, ಅದು ನೀವೇ ಕೈಗೊಂಡ ಕ್ರಮವಾಗಿರಲಿ ಅಥವಾ ನೀವು ನೇಮಿಸಿರುವವರು ಕೈಗೊಂಡ ಕ್ರಮವಾಗಿರಲಿ, ಕಂಟೆಂಟ್ ತೆಗೆದುಹಾಕುವಿಕೆ ಅಥವಾ ಚಾನಲ್ ತೆಗೆದುಹಾಕುವಿಕೆಗೆ ಕಾರಣವಾಗಬಹುದು.

ಮಾನವ ಬಳಕೆದಾರರ ಪ್ರಾಥಮಿಕ ಉದ್ದೇಶವು, ಕಂಟೆಂಟ್‌ನೊಂದಿಗೆ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವುದೇ ಆಗಿದ್ದಾಗ, ಆ ತೊಡಗಿಸಿಕೊಳ್ಳುವಿಕೆಯನ್ನು ನಾವು ನ್ಯಾಯಯುತ ಎಂದು ಪರಿಗಣಿಸುತ್ತೇವೆ. ತೊಡಗಿಸಿಕೊಳ್ಳುವಿಕೆಯು ಒತ್ತಾಯ ಅಥವಾ ಮೋಸದ ಫಲಿತಾಂಶವಾಗಿರುವಂತಹ ಅಥವಾ ಆರ್ಥಿಕ ಲಾಭವೇ ತೊಡಗಿಸಿಕೊಳ್ಳುವಿಕೆಯ ಏಕೈಕ ಉದ್ದೇಶವಾಗಿರುವಂತಹ ಸಂದರ್ಭಗಳಲ್ಲಿ, ಅದನ್ನು ನಾವು ನಾಯಯುತವಲ್ಲ ಎಂದು ಪರಿಗಣಿಸುತ್ತೇವೆ.  

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಕೆಲವು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗೆ ಸೂಚಿಸಿದ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ವೀಕ್ಷಣೆಗಳು, ಲೈಕ್‌ಗಳು ಮತ್ತು ಸಬ್‌ಸ್ಕ್ರೈಬರ್‌ಗಳಂತಹ ಮೆಟ್ರಿಕ್‌ಗಳನ್ನು ಕೃತಕವಾಗಿ ಹೆಚ್ಚಿಸುವ ಥರ್ಡ್-ಪಾರ್ಟಿ ಸೇವೆಗಳಿಗೆ ಲಿಂಕ್ ಮಾಡುತ್ತದೆ ಅಥವಾ ಅವುಗಳ ಕುರಿತು ಪ್ರಚಾರ ಮಾಡುತ್ತದೆ
  • ಥರ್ಡ್-ಪಾರ್ಟಿ ವೀಕ್ಷಣೆ ಎಣಿಕೆ ಅಥವಾ ಸಬ್‌ಸ್ಕ್ರೈಬರ್ ಗೇಮಿಂಗ್ ವೆಬ್‌ಸೈಟ್‌ಗಳು ಅಥವಾ ಸೇವೆಗಳಿಗೆ ಲಿಂಕ್ ಮಾಡುವ ಅಥವಾ ಅವುಗಳ ಕುರಿತು ಪ್ರಚಾರ ಮಾಡುವ ಕಂಟೆಂಟ್
  • ಮತ್ತೊಬ್ಬ ರಚನೆಕಾರರು ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿದರೆ ಮಾತ್ರ ನೀವು ಅವರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡುವ ಭರವಸೆ ನೀಡುವುದು (“sub4sub”)
    • ಗಮನಿಸಿ: ವೀಕ್ಷಕರು ಸಬ್‌ಸ್ಕ್ರೈಬ್ ಮಾಡಲು, ಲೈಕ್ ಬಟನ್ ಅನ್ನು ಒತ್ತಲು, ಹಂಚಿಕೊಳ್ಳಲು, ಅಥವಾ ಕಾಮೆಂಟ್ ಮಾಡಲು ಪ್ರೋತ್ಸಾಹಿಸಲು ನಿಮಗೆ ಅನುಮತಿಯಿದೆ
  • ಸೇವೆಯನ್ನು ಪ್ರಚಾರ ಮಾಡುವ ಉದ್ದೇಶದಿಂದ ಥರ್ಡ್-ಪಾರ್ಟಿಯಿಂದ ತಮ್ಮ ವೀಕ್ಷಣೆಗಳನ್ನು ರಚನೆಕಾರರು ಖರೀದಿಸುವುದನ್ನು ತೋರಿಸುವ ಕಂಟೆಂಟ್

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ.

ತೊಡಗಿಸಿಕೊಳ್ಳುವಿಕೆಯನ್ನು ಹೇಗೆ ಮಾಪನ ಮಾಡಲಾಗುತ್ತದೆ

ಈ ಕೆಳಗಿನ ಸ್ಥಳಗಳಲ್ಲಿ ಪ್ರದರ್ಶಿಸಲಾಗುವ ಸಬ್‌ಸ್ಕ್ರೈಬರ್ ಸಂಖ್ಯೆಗಳನ್ನು ನೈಜ ಸಮಯದಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ:

  • ನಿಮ್ಮ ಚಾನಲ್ ಹೋಮ್ ಪೇಜ್
  • ಅಕೌಂಟ್ ಸ್ವಿಚರ್
  • ವೀಡಿಯೊ ವೀಕ್ಷಣೆ ಪುಟ
  • YouTube Data API ಅನ್ನು ಬಳಸುವ ಥರ್ಡ್-ಪಾರ್ಟಿ ಸೈಟ್‌ಗಳು ಮತ್ತು ಆ್ಯಪ್‌ಗಳು

YouTube Analytics ನಲ್ಲಿನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯು ನಿಮ್ಮ YouTube ಚಾನಲ್‌ನಲ್ಲಿನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಗಿಂತ ಭಿನ್ನವಾಗಿರಬಹುದು. YouTube Analytics ನಲ್ಲಿರುವ ಸಂಖ್ಯೆಯು ಸುಮಾರು 48 ಗಂಟೆಗಳಷ್ಟು ಹಿಂದೆ ಇರುತ್ತದೆ. ಸಂಖ್ಯೆಗಳು ನಿಖರವಾಗಿವೆ ಎಂದು ಖಚಿತಪಡಿಸಿಕೊಳ್ಳಲು, ಹೆಚ್ಚುವರಿ ದೃಢೀಕರಣ ಮತ್ತು ಸ್ಪ್ಯಾಮ್ ಪರಿಶೀಲನೆಗಳನ್ನು ನಡೆಸಲು ಈ ವಿಳಂಬವು ನಮಗೆ ಅವಕಾಶ ನೀಡುತ್ತದೆ.

ಕೃತಕವೆಂದು ಕಂಡುಬರುವ ಪುಟದ ಟ್ರಾಫಿಕ್ ಅನ್ನು YouTube ನಲ್ಲಿ ಎಣಿಕೆ ಮಾಡಲಾಗುವುದಿಲ್ಲ ಮತ್ತು ಇದು ನಿಮ್ಮ ಖಾತೆಯ ಮೇಲೆ ಸ್ಟ್ರೈಕ್‌ಗಳಿಗೆ ಕಾರಣವಾಗಬಹುದು. ಅಮಾನತುಗೊಳಿಸಲಾದ ಖಾತೆಗಳು ಮತ್ತು ಸ್ಪ್ಯಾಮ್ ಎಂದು ಗುರುತಿಸಲಾದ ಸಬ್‌ಸ್ಕ್ರೈಬರ್‌ಗಳನ್ನು ನಿಮ್ಮ ಒಟ್ಟು ಸಬ್‌ಸ್ಕ್ರೈಬರ್‌ಗಳು ಹಾಗೂ ವೀಕ್ಷಣೆಗಳ ಸಂಖ್ಯೆಯಲ್ಲಿ ಸೇರಿಸಲಾಗುವುದಿಲ್ಲ. ಇವರು ಸಕ್ರಿಯ ವೀಕ್ಷಕರಲ್ಲ, ಆದ್ದರಿಂದ ಅವರ ತೆಗೆದುಹಾಕುವಿಕೆಯು ನಿಮ್ಮ ವೀಕ್ಷಣೆಗಳು ಅಥವಾ ವೀಕ್ಷಣೆ ಸಮಯದ ಮೇಲೆ ಪ್ರಭಾವ ಬೀರಲಾರದು.

ವೀಕ್ಷಣೆ ಸಂಖ್ಯೆ ಗೇಮಿಂಗ್‌ನಿಂದ ಒಂದು ವೀಡಿಯೊವನ್ನು ತೆಗೆದುಹಾಕಲಾಗಿದ್ದರೆ, ಇನ್ನಷ್ಟು ತಿಳಿಯುವುದಕ್ಕಾಗಿ ಸಹಾಯ ಕೇಂದ್ರದಲ್ಲಿ ಈ ಪುಟವನ್ನು ನೋಡಿ.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ರಚನೆಕಾರರು ತಾವಾಗಿ ಥರ್ಡ್-ಪಾರ್ಟಿಯಿಂದ ಕೃತಕ ಪುಟ ಟ್ರಾಫಿಕ್ ಅನ್ನು ಯಶಸ್ವಿಯಾಗಿ ಖರೀದಿಸುತ್ತಿರುವುದನ್ನು ತೋರಿಸುವ ವೀಡಿಯೊ ಟೆಸ್ಟಿಮೋನಿಯಲ್
  • ರಚನೆಕಾರರು, ಪ್ರಚಾರಾತ್ಮಕ ಅಥವಾ ಬೆಂಬಲದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ಕೃತಕ ಪುಟ ಟ್ರಾಫಿಕ್ ಒದಗಿಸುವವರಿಗೆ ಲಿಂಕ್ ಮಾಡುವುದನ್ನು ತೋರಿಸುವ ವೀಡಿಯೊ. ಉದಾಹರಣೆಗೆ: “ಈ ವೀಡಿಯೊದಿಂದ ನಾನು ಒಂದೇ ದಿನದಲ್ಲಿ 1 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಪಡೆದುಕೊಂಡೆ ಮತ್ತು ನೀವು ಸಹ ಇದನ್ನು ಮಾಡಬಹುದು!”
  • ಮೋಸಗೊಳಿಸುವ ವಿಧಾನಗಳ ಮೂಲಕ ವೀಕ್ಷಕರನ್ನು ಬೇರೊಂದು ವೀಡಿಯೊವನ್ನು ವೀಕ್ಷಿಸುವ ಹಾಗೆ ಒತ್ತಾಯಿಸಲು ಅಥವಾ ಮೋಸಗೊಳಿಸಲು ಪ್ರಯತ್ನಿಸುವ (ಉದಾಹರಣೆಗೆ: ತಪ್ಪು ದಾರಿಗೆಳೆಯುವ ಹಾಗೆ ಲೇಬಲ್ ಮಾಡಲಾದ ಮಾಹಿತಿ ಕಾರ್ಡ್) ವೀಡಿಯೊ
  • ಕೃತಕ ಚಾನಲ್ ತೊಡಗಿಸಿಕೊಳ್ಳುವಿಕೆ ಟ್ರಾಫಿಕ್‌ಗೆ ಸಮರ್ಪಿತವಾದ ಅಥವಾ ಈ ಏಕೈಕ ಉದ್ದೇಶಕ್ಕಾಗಿಯೇ ಅಸ್ತಿತ್ವದಲ್ಲಿರುವ ವ್ಯವಹಾರಗಳನ್ನು ಪ್ರಚಾರ ಮಾಡುವ ಚಾನಲ್‌ಗಳು

ನೆನಪಿಡಿ, ಇವುಗಳು ಕೇವಲ ಕೆಲವು ಉದಾಹರಣೆಗಳಾಗಿವೆ, ಮತ್ತು ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನೀವು ಭಾವಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8522551542809373597
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false