ಚಾನಲ್‍ಗಳಲ್ಲಿ ಪರಿಶೀಲನೆ ಬ್ಯಾಡ್ಜ್‌ಗಳು

ನೀವು YouTube ಚಾನಲ್ ಹೆಸರಿನ ಪಕ್ಕದಲ್ಲಿ ಅಥವಾ ಪರಿಶೀಲನೆ ಚೆಕ್ ಮಾರ್ಕ್ ಅನ್ನು ನೋಡಿದರೆ, ಆ ಚಾನಲ್ ಅನ್ನು YouTube ಪರಿಶೀಲಿಸಿದೆ ಎಂದರ್ಥ.

ಚಾನಲ್ ಪರಿಶೀಲನೆಗೆ ಅರ್ಜಿ ಸಲ್ಲಿಸಿ

ನೀವು 100,000 ಸಬ್ಸ್‌ಕ್ರೈಬರ್‌ಗಳನ್ನು ಹೊಂದಿದಾಗ ಚಾನಲ್ ಪರಿಶೀಲನೆಗಾಗಿ ವಿನಂತಿಯನ್ನು ಸಲ್ಲಿಸಬಹುದು. ನಿಮ್ಮ ಚಾನಲ್ ಇನ್ನೂ ಅರ್ಹಗೊಂಡಿಲ್ಲವೆಂದು ತೋರುತ್ತಿದೆ.

ನೀವು ಅರ್ಹ ಚಾನಲ್‍ನ ಇಮೇಲ್ ವಿಳಾಸದೊಂದಿಗೆ ಸೈನ್ ಇನ್ ಆಗಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೇಲಿನ ಬಲಭಾಗದಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ ಮತ್ತು ಆ ಖಾತೆಯನ್ನು ಆಯ್ಕೆಮಾಡಿ.

ವಿನಂತಿ ಪರಿಶೀಲನೆಗೆ ನಿಮ್ಮ ಚಾನಲ್ ಅರ್ಹವಾಗಿದೆಯೆ ಎಂದು ನೋಡಲು, ಮೇಲಿನ ಬಲಭಾಗದಲ್ಲಿರುವ ಸೈನ್ ಇನ್ ಕ್ಲಿಕ್ ಮಾಡಿ. 

ಇನ್ನೊಬ್ಬ ರಚನೆಕಾರ ಅಥವಾ ಬ್ರ್ಯಾಂಡ್ ಅನ್ನು ಸೋಗು ಹಾಕಲು ಪ್ರಯತ್ನಿಸುತ್ತಿರುವ ಚಾನಲ್‌ಗಳನ್ನು ನಾವು ಪರಿಶೀಲಿಸುವುದಿಲ್ಲ. ಚಾನಲ್ ಉದ್ದೇಶಪೂರ್ವಕವಾಗಿ ಬೇರೊಬ್ಬರಂತೆ ಸೋಗು ಹಾಕುತ್ತಿರುವುದನ್ನು ನಾವು ಕಂಡುಕೊಂಡರೆ, ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಪರಿಶೀಲಿತ ಚಾನಲ್‍ಗಳ ಕುರಿತು

ಚಾನಲ್ ಪರಿಶೀಲನೆಗೊಂಡಿದೆ ಎಂದರೆ, ಅದು ರಚನೆಕಾರರು, ಕಲಾವಿದರು, ಕಂಪನಿ ಅಥವಾ ಸಾರ್ವಜನಿಕ ವ್ಯಕ್ತಿಗಳ ಅಧಿಕೃತ ಚಾನಲ್ ಆಗಿರುತ್ತದೆ. ಪರಿಶೀಲಿಸಿದ ಚಾನಲ್‌ಗಳು YouTube ನಲ್ಲಿ ಅಧಿಕೃತ ಚಾನಲ್‌ಗಳನ್ನು ಒಂದೇ ರೀತಿಯ ಹೆಸರಿನ ಇತರ ಚಾನಲ್‌ಗಳಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ.

ನೆನಪಿನಲ್ಲಿಡಿ...

  • ಪರಿಶೀಲನೆಗೊಂಡ ಚಾನಲ್‍ಗಳು YouTube ನಲ್ಲಿ ಹೆಚ್ಚುವರಿ ಫೀಚರ್‌ಗಳನ್ನು ಪಡೆಯುವುದಿಲ್ಲ. ಅವುಗಳು YouTube ನಿಂದ ಪ್ರಶಸ್ತಿಗಳು, ಮೈಲಿಗಲ್ಲುಗಳು ಅಥವಾ ಅನುಮೋದನೆಗಳನ್ನು ಪ್ರತಿನಿಧಿಸುವುದಿಲ್ಲ. ಪ್ರಶಸ್ತಿಗಳ ಕುರಿತಾದ ಇನ್ನಷ್ಟು ಮಾಹಿತಿಗೆ, YouTube ನ ರಚನೆಕಾರರ ಪ್ರಶಸ್ತಿಗಳು ಕಾರ್ಯಕ್ರಮಕ್ಕೆ ಭೇಟಿ ನೀಡಿ.
  • ನೀಮ್ಮ ಚಾನಲ್ ಪರಿಶೀಲನೆಗೊಂಡಿದ್ದರೆ, ನೀವು ನಿಮ್ಮ ಚಾನಲ್ ಹೆಸರನ್ನು ಬದಲಾಯಿಸುವವರೆಗೆ ಅದು ಹಾಗೆಯೇ ಇರುತ್ತದೆ. ನೀವು ನಿಮ್ಮ ಚಾನಲ್ ಹೆಸರನ್ನು ಬದಲಾಯಿಸಿದರೆ, ನಿಮ್ಮ ಮರುಹೆಸರಿಸಿದ ಚಾನಲ್ ಪರಿಶೀಲನೆಗೊಳ್ಳುವುದಿಲ್ಲ, ಮತ್ತು ನೀವು ಅದಕ್ಕಾಗಿ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ.
  • ನಿಮ್ಮ ಚಾನಲ್‍ನ ಹ್ಯಾಂಡಲ್ ಬದಲಾಯಿಸುವುದರಿಂದ ನಿಮ್ಮ ದೃಢೀಕರಣ ಬ್ಯಾಡ್ಜ್ ಅನ್ನು ತೆಗೆದುಹಾಕಲಾಗುವುದಿಲ್ಲ.
  • ನಮ್ಮ ಸಮುದಾಯ ಮಾರ್ಗಸೂಚಿಗಳು ಅಥವಾ YouTube ಸೇವಾ ನಿಯಮಗಳನ್ನು ಉಲ್ಲಂಘಿಸುವ ಚಾನಲ್‍ಗಳ ಪರಿಶೀಲನೆಯನ್ನು ಹಿಂಪಡೆಯುವ ಅಥವಾ ಕೊನೆಗೊಳಿಸುವ ಹಕ್ಕನ್ನು YouTube ಕಾಯ್ದಿರಿಸಿಕೊಂಡಿದೆ.
  • ಪರಿಶೀಲನೆಯು ಕಾಲಾನಂತರದಲ್ಲಿ ವಿಕಸನಗೊಂಡಿರುವುದರಿಂದ, ನೀವು YouTube ನಲ್ಲಿ ಪರಿಶೀಲನೆಯೊಂದಿಗೆ ವಿವಿಧ ಚಾನಲ್‌ಗಳನ್ನು ನೋಡಬಹುದು.

ಪರಿಶೀಲಿಸಿದ ಚಾನಲ್ ಅರ್ಹತೆ

ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲು ನಿಮ್ಮ ಚಾನಲ್ 100,000 ಸಬ್ಸ್‌ಕ್ರೈಬರ್‌ಗಳನ್ನು ಹೊಂದಿರಬೇಕು.

ನೀವು ಅರ್ಜಿ ಸಲ್ಲಿಸಿದ ನಂತರ, ನಾವು ನಿಮ್ಮ ಚಾನಲ್ ಅನ್ನು ಪರಿಶೀಲಿಸುತ್ತೇವೆ. ನಾವು ಈ ಮುಂದಿನ ಸಂಗತಿಗಳನ್ನು ಪರಿಶೀಲಿಸುತ್ತೇವೆ:

  • ಅಧಿಕೃತವಾಗಿರಬೇಕು: ನಿಮ್ಮ ಚಾನಲ್ ನಿಜವಾದ ರಚನೆಕಾರರು, ಬ್ರ್ಯಾಂಡ್ ಅಥವಾ ಘಟಕವನ್ನು ನಿಖರವಾಗಿ ಪ್ರತಿನಿಧಿಸಬೇಕು. ನಿಮ್ಮ ಗುರುತನ್ನು ದೃಢೀಕರಿಸಲು ಸಹಾಯ ಮಾಡಲು ನಿಮ್ಮ ಚಾನಲ್‌ನ ವಯಸ್ಸಿನಂತಹ ಅನೇಕ ಅಂಶಗಳನ್ನು ನಾವು ಪರಿಶೀಲಿಸುತ್ತೇವೆ. ಇದಕ್ಕಾಗಿ, ನಾವು ಹೆಚ್ಚಿನ ಮಾಹಿತಿ ಅಥವಾ ದಾಖಲಾತಿಗಳನ್ನು ಕೇಳಬಹುದು.
  • ಪರಿಪೂರ್ಣವಾಗಿರಬೇಕು: ನಿಮ್ಮ ಚಾನಲ್ ಸಾರ್ವಜನಿಕವಾಗಿರಬೇಕು ಮತ್ತು ಚಾನಲ್ ಬ್ಯಾನರ್, ವಿವರಣೆ ಮತ್ತು ಪ್ರೊಫೈಲ್ ಫೋಟೋವನ್ನು ಹೊಂದಿರಬೇಕು. ಇದರ ಜೊತೆಗೆ, ಚಾನಲ್‍ನಲ್ಲಿ ಕಂಟೆಂಟ್ ಇರಬೇಕು ಮತ್ತು YouTube ನಲ್ಲಿ ಸಕ್ರಿಯವಾಗಿರಬೇಕು.

ಕೆಲವೊಮ್ಮೆ, YouTube ನ ಹೊರಗಡೆ ಜನಪ್ರಿಯರಾಗಿರುವ, 100,000 ಕ್ಕಿಂತ ಕಡಿಮೆ ಸಬ್ಸ್‌ಕ್ರೈಬರ್‌ಗಳನ್ನು ಹೊಂದಿರುವ ಚಾನೆಲ್‌ಗಳನ್ನು ಸಹ YouTube ಪೂರ್ವಭಾವಿಯಾಗಿ ಪರಿಶೀಲಿಸಬಹುದು.

ಪರಿಶೀಲನೆ ಇಲ್ಲದೆ ನಿಮ್ಮ ಚಾನಲ್ ಅನ್ನು ಪ್ರತ್ಯೇಕಿಸಿ

ನಿಮ್ಮ ಚಾನಲ್ ಪರಿಶೀಲನೆಗೊಳ್ಳದಿದ್ದರೆ, ಅದನ್ನು ಒಂದೇ ರೀತಿಯ ಚಾನಲ್‌ಗಳಿಂದ ಪ್ರತ್ಯೇಕಿಸಲು ಕೆಲವು ಪರ್ಯಾಯ ಮಾರ್ಗಗಳಿವೆ:

ಯಾರಾದರೂ ನಿಮ್ಮನ್ನು ಅಥವಾ ನಿಮ್ಮ ಚಾನಲ್ ಅನ್ನು ಸೋಗು ಹಾಕುತ್ತಿದ್ದರೆ, ಅದನ್ನು ನಮಗೆ ವರದಿ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15098313845444488767
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false