ಕೃತಿಸ್ವಾಮ್ಯ ಪ್ರತಿವಾದಿ ನೋಟಿಫಿಕೇಶನ್ ಸಲ್ಲಿಸುವಿಕೆ

ನಿಮ್ಮ ಕಂಟೆಂಟ್ ಅನ್ನು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ಕಾರಣಕ್ಕೆ ತೆಗೆದುಹಾಕಿದ್ದರೆ ಮತ್ತು ಅದು ತಪ್ಪಿನಿಂದಾಗಿ ಅಥವಾ ತಪ್ಪಾಗಿ ಗುರುತಿಸಿರುವುದರಿಂದಾಗಿ ಆಗಿದೆ ಎಂದು ನೀವು ಭಾವಿಸಿದ್ದರೆ, ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು. ಇದು ಕೃತಿಸ್ವಾಮ್ಯ ಹೊಂದಿರುವ ವೀಡಿಯೊವನ್ನು ತೆಗೆದುಹಾಕುವ ವಿನಂತಿಯ ಕಾರಣದಿಂದ ತೆಗೆದುಹಾಕಲಾದ ಕಂಟೆಂಟ್ ಅನ್ನು YouTube ನಲ್ಲಿ ಮರುಸ್ಥಾಪಿಸಲು ಮಾಡಲಾಗುವ ಕಾನೂನು ವಿನಂತಿ ಆಗಿದೆ.

ನೆನಪಿನಲ್ಲಿಡಿ:

  • ನಿಮ್ಮ ಕಂಟೆಂಟ್ ಅನ್ನು ತಪ್ಪಾಗಿ ಅಥವಾ ತಪ್ಪು ಗುರುತಿಸುವಿಕೆಯಿಂದಾಗಿ ತೆಗೆದುಹಾಕಲಾಗಿದ್ದರೆ ಮಾತ್ರ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಿ. ಇದು ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದ ಸಂದರ್ಭಗಳಂತಹ ಕೃತಿಸ್ವಾಮ್ಯಕ್ಕೆ ಇರುವ ವಿನಾಯಿತಿಗಳನ್ನು ಒಳಗೊಂಡಿರುತ್ತದೆ.
  • ಮೇಲೆ ತಿಳಿಸಿದ ಮಾನದಂಡಕ್ಕೆ ನಿಮ್ಮ ಕಂಟೆಂಟ್ ಸರಿಹೊಂದದಿದ್ದರೆ, ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅವಧಿ ಮುಕ್ತಾಯವಾಗಲು 90 ದಿನಗಳವರೆಗೆ ಕಾಯಬಹುದು. ಹಿಂತೆಗೆದುಕೊಳ್ಳುವಿಕೆಯನ್ನು ವಿನಂತಿಸಲು ನೇರವಾಗಿ ಕ್ಲೇಮುದಾರರನ್ನು ಸಂಪರ್ಕಿಸಲು ಸಹ ನೀವು ಪ್ರಯತ್ನಿಸಬಹುದು.
ತಪ್ಪಾದ ಮಾಹಿತಿಯನ್ನು ಸಲ್ಲಿಸಬೇಡಿ. ನಮ್ಮ ಪ್ರಕ್ರಿಯೆಗಳ ದುರುಪಯೋಗವು, ಉದಾಹರಣೆಗೆ ವಂಚನೀಯ ಡಾಕ್ಯುಮೆಂಟೇಷನ್‌ನ ಸಲ್ಲಿಕೆಯು, ನಿಮ್ಮ ಖಾತೆಯ ಕೊನೆಗೊಳಿಸುವಿಕೆ ಅಥವಾ ಇತರ ಕಾನೂನು ಪರಿಣಾಮಗಳನ್ನು ಉಂಟುಮಾಡಬಹುದು.

ಕಂಟೆಂಟ್ ಅನ್ನು ಮೌಲ್ಯಮಾಪನ ಮಾಡಿ

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯಿಂದಾಗಿ ತೆಗೆದುಹಾಕಲಾದ ಕಂಟೆಂಟ್ ಅನ್ನು ಪರಿಶೀಲಿಸಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ಫಿಲ್ಟರ್ ಬಾರ್ ನಂತರ ಕೃತಿಸ್ವಾಮ್ಯ ಎಂಬುದನ್ನು ಕ್ಲಿಕ್ ಮಾಡಿ.
  4. ಸಂಬಂಧಿಸಿದ ವೀಡಿಯೊವನ್ನು ಹುಡುಕಿ.
  5. ನಿರ್ಬಂಧಗಳು ಎಂಬ ಕಾಲಮ್‌ನಲ್ಲಿ ಕೃತಿಸ್ವಾಮ್ಯ ಎಂಬುದರ ಮೇಲೆ ಹೋವರ್ ಮಾಡಿ.
  6. ವಿವರಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.
  7. ವೀಡಿಯೊ ಕೃತಿಸ್ವಾಮ್ಯ ವಿವರಗಳ ಪುಟವನ್ನು ಪರಿಶೀಲಿಸಿ, ಇದು ತೆಗೆದುಹಾಕುವಿಕೆ ವಿನಂತಿಯಲ್ಲಿ ಗುರುತಿಸಲಾದ ಕಂಟೆಂಟ್ ಕುರಿತು ಹೆಚ್ಚಿನ ಮಾಹಿತಿಯನ್ನು ತೋರಿಸುತ್ತದೆ.
    • ಇತರ ವೀಡಿಯೊಗಳನ್ನು ತೆಗೆದುಹಾಕಲಾಗಿದ್ದು, ಅವು ಅದೇ ಕೃತಿಸ್ವಾಮ್ಯ ಸ್ಟ್ರೈಕ್‌ಗೆ ಸೇರಿದ್ದರೆ, ನೀವು ಇತರ ವೀಡಿಯೊಗಳಿಗೆ ಸಂಬಂಧಿಸಿದ ವೀಡಿಯೊ ಕೃತಿಸ್ವಾಮ್ಯ ವಿವರಗಳ ಪುಟವನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. ಅನೇಕ ವೀಡಿಯೊಗಳನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ನೀವು ಭಾವಿಸಿದ್ದರೆ, ಎಲ್ಲಾ ವೀಡಿಯೊಗಳಿಗಾಗಿ ನೀವು ಒಂದು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.
  8. ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸುವ ಮೊದಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ: 
  • ಮಾಲೀಕತ್ವ: ಕಂಟೆಂಟ್ ನಿಮ್ಮದೇ ಆದ ಮೂಲ ಕಂಟೆಂಟ್ ಆಗಿದೆಯೇ ಮತ್ತು ನೀವು ಅದರ ಎಲ್ಲಾ ಹಕ್ಕುಗಳನ್ನು ಹೊಂದಿದ್ದೀರಾ?
  • ಪುರಾವೆ: ನೀವು ಬೇರೆ ಯಾರದ್ದೋ ಕೃತಿಸ್ವಾಮ್ಯಕ್ಕೊಳಪಟ್ಟಿರುವ ಕೃತಿಯನ್ನು ಬಳಸಿದ್ದರೆ, ನೀವು ಆ ಕಂಟೆಂಟ್ ಅನ್ನು ಬಳಸಲು ಪರವಾನಗಿ ಅಥವಾ ಅನುಮತಿಯ ಪುರಾವೆಯನ್ನು ಹೊಂದಿದ್ದೀರಾ?
  • ಕೃತಿಸ್ವಾಮ್ಯ ವಿನಾಯಿತಿ: ನಿಮ್ಮ ಬಳಕೆಯು ನ್ಯಾಯಯುತ ಬಳಕೆ ಅಥವಾ ಅಂತಹುದೇ ಕೃತಿಸ್ವಾಮ್ಯ ವಿನಾಯಿತಿಯ ಮೂಲಕ ರಕ್ಷಣೆ ಹೊಂದಿದೆಯೇ?
  • ಸಾರ್ವಜನಿಕ ಡೊಮೇನ್: ಕಂಟೆಂಟ್ ಸಾರ್ವಜನಿಕ ಡೊಮೇನ್‌ನಲ್ಲಿ ಇದೆಯೇ?

ಮೇಲಿನ ಯಾವುದೂ ನಿಮ್ಮ ಕಂಟೆಂಟ್‌ಗೆ ಅನ್ವಯಿಸದಿದ್ದರೆ, ನೀವು ಕೃತಿಸ್ವಾಮ್ಯ ಸ್ಟ್ರೈಕ್‌ ಅವಧಿ ಮುಕ್ತಾಯವಾಗಲು 90 ದಿನಗಳವರೆಗೆ ಕಾಯಬಹುದು. ಹಿಂತೆಗೆದುಕೊಳ್ಳುವಿಕೆಯನ್ನು ವಿನಂತಿಸಲು ನೇರವಾಗಿ ಕ್ಲೇಮುದಾರರನ್ನು ಸಂಪರ್ಕಿಸಲು ಸಹ ನೀವು ಪ್ರಯತ್ನಿಸಬಹುದು.

ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಿ

ಪ್ರತಿವಾದಿ ನೋಟಿಫಿಕೇಶನ್‌ಗಳನ್ನು ತಕರಾರಿನಲ್ಲಿರುವ ಕಂಟೆಂಟ್‌ನ ಮೂಲ ಅಪ್‌ಲೋಡರ್ ಸಲ್ಲಿಸಬೇಕು. ಪ್ರತಿವಾದಿ ನೋಟಿಫಿಕೇಶನ್‌ನಲ್ಲಿರುವ ಮಾಹಿತಿಯನ್ನು ಕ್ಲೇಮುದಾರರೊಂದಿಗೆ ಹಂಚಿಕೊಳ್ಳಲು ಮೂಲ ಅಪ್‌ಲೋಡರ್ ಸಮ್ಮತಿಸಬೇಕು. ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು ಒಂದು ಸಮಸ್ಯೆಯಾಗಿದ್ದರೆ, ಅಪ್‌ಲೋಡರ್ ಪರವಾಗಿ ಅಧಿಕೃತ ಪ್ರತಿನಿಧಿ (ಉದಾಹರಣೆಗೆ ವಕೀಲರು) ಇಮೇಲ್, ಫ್ಯಾಕ್ಸ್ ಅಥವಾ ಅಂಚೆ ಪತ್ರದ ಮೂಲಕ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.

YouTube Studio ದಲ್ಲಿ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಲು:

  1. ತೆಗೆದುಹಾಕಲಾದ ವೀಡಿಯೊವನ್ನು YouTube Studio ದಲ್ಲಿ ಹುಡುಕಲು ಮೇಲಿನ ಹಂತಗಳನ್ನು ಅನುಸರಿಸಿ.
  2. ಈ ವೀಡಿಯೊದಲ್ಲಿ ಗುರುತಿಸಿದ ಕಂಟೆಂಟ್ ಅಡಿಯಲ್ಲಿ, ಆ್ಯಕ್ಷನ್‌ಗಳನ್ನು ಆಯ್ಕೆಮಾಡಿನಂತರ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ಪ್ರತಿವಾದಿ ನೋಟಿಫಿಕೇಶನ್ ಅವಶ್ಯಕತೆಗಳನ್ನು ಓದಿ ಹಾಗೂ ದೃಢೀಕರಿಸಲು ಬಾಕ್ಸ್‌ಗಳನ್ನು ಟಿಕ್ ಮಾಡಿ ನಂತರ ಮುಂದುವರಿಯಿರಿ.
  4. ನಿಮ್ಮ ಸಂಪರ್ಕ ಮಾಹಿತಿಯನ್ನು ನಮೂದಿಸಿ ನಂತರ ಮುಂದುವರಿಯಿರಿ.
    • ನಿಮ್ಮ ಸಂಪೂರ್ಣ ಭೌತಿಕ ವಿಳಾಸ ಮತ್ತು ಕಾನೂನುಬದ್ಧವಾದ ಪೂರ್ಣ ಹೆಸರನ್ನು (ಸಾಮಾನ್ಯವಾಗಿ ಮೊದಲ ಮತ್ತು ಕೊನೆಯ ಹೆಸರು) ಸೇರಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಂಪನಿ ಅಥವಾ ಚಾನಲ್ ಹೆಸರನ್ನು ನಮೂದಿಸಬೇಡಿ.
  5. ನಿಮ್ಮ ತಾರ್ಕಿಕ ವಿವರಣೆಯನ್ನು ನಮೂದಿಸಿ. ನಿಮ್ಮ ಕಂಟೆಂಟ್ ಅನ್ನು ತೆಗೆದುಹಾಕಿರುವುದು ಒಂದು ತಪ್ಪು ಅಥವಾ ತಪ್ಪಾಗಿ ಗುರುತಿಸಿರುವುದು ಎಂಬುದಾಗಿ ಅರ್ಹತೆ ಪಡೆಯುತ್ತದೆ ಎಂದು ನೀವು ಏಕೆ ಭಾವಿಸುವಿರಿ ಎಂಬುದನ್ನು ಸ್ಪಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ವಿವರಿಸಿ.
  6. ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ಸಮ್ಮತಿ ಸೂಚಿಸಲು ಬಾಕ್ಸ್‌ಗಳನ್ನು ಟಿಕ್ ಮಾಡಿ.
  7. ನಿಮ್ಮ ಸಹಿಯನ್ನಾಗಿ ನಿಮ್ಮ ಕಾನೂನುಬದ್ಧವಾದ ಪೂರ್ಣ ಹೆಸರನ್ನು ನಮೂದಿಸಿ ನಂತರ ಮುಂದುವರಿಯಿರಿ.
  8. (ಐಚ್ಛಿಕ) ಅದೇ ತೆಗೆದುಹಾಕುವ ವಿನಂತಿಯಿಂದ ಇತರ ವೀಡಿಯೊಗಳನ್ನು ತೆಗೆದುಹಾಕಲಾಗಿದ್ದರೆ ಮತ್ತು ಅವುಗಳನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂಬ ನಂಬಿಕೆ ಸಹ ನಿಮಗಿದ್ದರೆ, ನೀವು ಈ ವೀಡಿಯೊಗಳನ್ನು ಆಯ್ಕೆಮಾಡಿ, ಅವೆಲ್ಲವನ್ನೂ ಪ್ರತಿವಾದಿ ನೋಟಿಫಿಕೇಶನ್‌ನಲ್ಲಿ ಸೇರಿಸಬಹುದು.
  9. ಸಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ.
ಇಮೇಲ್, ಫ್ಯಾಕ್ಸ್ ಅಥವಾ ಅಂಚೆ ಪತ್ರದ ಮೂಲಕ ಸಹ ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.
 

ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಿದ ನಂತರ ಏನಾಗುತ್ತದೆ

ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಿದ ನಂತರ, ಕಂಟೆಂಟ್ ಅನ್ನು ತಪ್ಪಾಗಿ ಗುರುತಿಸಲಾಗಿದೆ ಅಥವಾ ತಪ್ಪಿನಿಂದಾಗಿ ತೆಗೆದುಹಾಕಲಾಗಿದೆ ಎಂದು ನೀವು ಏಕೆ ಭಾವಿಸುತ್ತೀರಿ ಎಂಬುದರ ಸ್ಪಷ್ಟ ವಿವರಣೆಯನ್ನು ಒಳಗೊಂಡಂತೆ ಅದು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ, ಅದನ್ನು ಕ್ಲೇಮುದಾರರಿಗೆ ಕಳುಹಿಸಲಾಗುತ್ತದೆ. ಎಲ್ಲಾ ಅವಶ್ಯಕತೆಗಳನ್ನು ಪೂರೈಸದ ಪ್ರತಿವಾದಿ ನೋಟಿಫಿಕೇಶನ್‌ಗಳನ್ನು ತಿರಸ್ಕರಿಸಲಾಗಬಹುದು.

ಪ್ರತಿವಾದಿ ನೋಟಿಫಿಕೇಶನ್‌ಗೆ ಪ್ರತಿಕ್ರಿಯಿಸಲು ಕ್ಲೇಮುದಾರರು ಕೃತಿಸ್ವಾಮ್ಯ ಕಾನೂನಿನ ಅನುಸಾರ 10 US ವ್ಯವಹಾರದ ದಿನಗಳನ್ನು ಹೊಂದಿರುತ್ತಾರೆ. YouTube ನಲ್ಲಿ ನಿಮ್ಮ ಕಂಟೆಂಟ್ ಮರುಸ್ಥಾಪನೆಯಾಗದಂತೆ ತಡೆಯಲು ತೆಗೆದುಕೊಂಡಿರುವ ಕಾನೂನು ಕ್ರಮದ ಪುರಾವೆಯೊಂದಿಗೆ ಅವರು ಪ್ರತಿಕ್ರಿಯಿಸಬೇಕು.

10 ದಿನಗಳ ಅವಧಿಯ ಒಳಗಾಗಿ ಕ್ಲೇಮುದಾರರು ಇದನ್ನು ಮಾಡದಿದ್ದರೆ, YouTube ಗೆ ನಿಮ್ಮ ಕಂಟೆಂಟ್ ಅನ್ನು ಮರುಸ್ಥಾಪಿಸಲಾಗುವುದು (ನೀವು ಅಳಿಸಿರದೇ ಇದ್ದರೆ) ಮತ್ತು ನಿಮ್ಮ ಚಾನಲ್‌ನಿಂದ ಸಂಬಂಧಿಸಿದ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ತೆರವುಗೊಳಿಸಲಾಗುವುದು.

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ ಗಳು)

ನಾನು ಸಲ್ಲಿಸಿರುವ ಪ್ರತಿವಾದಿ ನೋಟಿಫಿಕೇಶನ್‌ನ ಸ್ಥಿತಿಯನ್ನು ನಾನು ಹೇಗೆ ಪರಿಶೀಲಿಸಬಹುದು?

ನೀವು ಸಲ್ಲಿಸಿರುವ ಪ್ರತಿವಾದಿ ನೋಟಿಫಿಕೇಶನ್‌ನ ಸ್ಥಿತಿಯನ್ನು ಪರಿಶೀಲಿಸಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ಫಿಲ್ಟರ್ ಬಾರ್ ನಂತರ ಕೃತಿಸ್ವಾಮ್ಯ ಎಂಬುದನ್ನು ಕ್ಲಿಕ್ ಮಾಡಿ.
  4. ಪ್ರಶ್ನಿಸಲಾದ ವೀಡಿಯೊ ಹುಡುಕಿ.
  5. ನಿರ್ಬಂಧಗಳು ಎಂಬ ಕಾಲಮ್‌ನಲ್ಲಿ ಕೃತಿಸ್ವಾಮ್ಯ ಎಂಬುದರ ಮೇಲೆ ಹೋವರ್ ಮಾಡಿ.
  6. ವಿವರಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.
  7. ಪ್ರತಿವಾದಿ ನೋಟಿಫಿಕೇಶನ್‌ನ ಸ್ಥಿತಿಯನ್ನು ತಿಳಿಯಲು ಈ ವೀಡಿಯೊದಲ್ಲಿ ಗುರುತಿಸಲಾದ ಕಂಟೆಂಟ್ ವಿಭಾಗದ ಅಡಿಯಲ್ಲಿ ನೋಡಿ.
ನಾನು ಸಲ್ಲಿಸಿರುವ ಪ್ರತಿವಾದಿ ನೋಟಿಫಿಕೇಶನ್ ಅನ್ನು ನಾನು ರದ್ದುಗೊಳಿಸಬಹುದೇ?
ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ರದ್ದುಮಾಡಲು ಬಯಸಿದರೆ, ಕ್ಲೇಮುದಾರರು ಪ್ರತಿವಾದಿ ನೋಟಿಫಿಕೇಶನ್‌ಗೆ ಎಲ್ಲಿಯವರೆಗೂ ಪ್ರತಿಕ್ರಿಯಿಸಿರುವುದಿಲ್ಲವೋ ಅಲ್ಲಿಯವರೆಗೂ ನೀವು ರದ್ದುಮಾಡಬಹುದು.
ಇದನ್ನು ರದ್ದುಗೊಳಿಸಲು, YouTube ನ ದೃಢೀಕರಣ ಇಮೇಲ್‌ಗೆ ನೇರವಾಗಿ ಪ್ರತ್ಯುತ್ತರಿಸಿ (ಪ್ರತಿವಾದಿ ನೋಟಿಫಿಕೇಶನ್ ಅನ್ನು ಸ್ವೀಕರಿಸಲಾಗಿದೆ ಎಎಂದು ದೃಢೀಕರಿಸಿದ ಇಮೇಲ್). ನಿಮ್ಮ ಪ್ರತ್ಯುತ್ತರದಲ್ಲಿ, ನಿಮ್ಮ ಪ್ರತಿವಾದಿ ನೋಟಿಫಿಕೇಶನ್ ಅನ್ನು ನೀವು ಹಿಂತೆಗೆದುಕೊಳ್ಳಲು ಬಯಸುತ್ತೀರಿ ಎಂಬುದನ್ನು ತಿಳಿಸಿ. ಈ ಮಾಹಿತಿಯೊಂದಿಗೆ ನೀವು copyright@youtube.com ಗೆ ಸಹ ಇಮೇಲ್ ಮಾಡಬಹುದು.
ವೀಡಿಯೊ ಅಲ್ಲದ ಕಂಟೆಂಟ್‌ಗೆ ನಾನು ಪ್ರತಿವಾದಿ ನೋಟಿಫಿಕೇಶನ್ ಅನ್ನು ಹೇಗೆ ಸಲ್ಲಿಸುವುದು?

ಕಾಮೆಂಟ್‌ಗಳು ಅಥವಾ ಚಾನಲ್ ಬ್ಯಾನರ್ ಚಿತ್ರಗಳಂತಹ ವೀಡಿಯೊ ಅಲ್ಲದ ಕಂಟೆಂಟ್‌ಗೆ ಪ್ರತಿವಾದಿ ನೋಟಿಫಿಕೇಶನ್ ಅನ್ನು ಇಮೇಲ್, ಫ್ಯಾಕ್ಸ್, ಅಥವಾ ಅಂಚೆ ಪತ್ರದ ಮೂಲಕ ಸಲ್ಲಿಸಬೇಕು.

ಟಿಪ್ಪಣಿ: ಚಾನಲ್ ಪ್ರೊಫೈಲ್ ಚಿತ್ರಗಳನ್ನು Google ನಲ್ಲಿ ಹೋಸ್ಟ್ ಮಾಡಿರುವುದರಿಂದಾಗಿ, ಚಾನಲ್ ಪ್ರೊಫೈಲ್ ಚಿತ್ರಗಳಿಗೆ ಸಂಬಂಧಿಸಿದ ಪ್ರತಿವಾದಿ ನೋಟಿಫಿಕೇಶನ್‌ಗಳನ್ನು Google ನ ವೆಬ್‌ಫಾರ್ಮ್ ಮೂಲಕ ಸಲ್ಲಿಸಬೇಕು.

ಕೃತಿಸ್ವಾಮ್ಯ ಉಲ್ಲಂಘನೆಗಳಿಗಾಗಿ ನನ್ನ ಖಾತೆಯನ್ನು ಕೊನೆಗೊಳಿಸಿದ್ದರೆ ನಾನು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದೇ?
ಕೃತಿಸ್ವಾಮ್ಯ ಉಲ್ಲಂಘನೆಗಳಿಗಾಗಿ ನಿಮ್ಮ ಖಾತೆಯನ್ನು ಕೊನೆಗೊಳಿಸಿದ್ದರೆ, ನಿಮಗೆ YouTube Studio ದಲ್ಲಿ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಈಗಲೂ ನೀವು ಇಮೇಲ್, ಫ್ಯಾಕ್ಸ್ ಅಥವಾ ಅಂಚೆ ಪತ್ರದ ಮೂಲಕ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4586088033389280586
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false