ಪೋಷಕ ಸಂಪನ್ಮೂಲಗಳು

ಪೋಷಕರು ಮತ್ತು ಪಾಲಕರು ಕೆಲವು ಬಾರಿ ಆನ್‌ಲೈನ್‌ನಲ್ಲಿ ತಮ್ಮ ಮಕ್ಕಳ ನಡವಳಿಕೆಯ ಕುರಿತು ಪ್ರಶ್ನೆಗಳನ್ನು ಹೊಂದಿರುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. YouTube ನಲ್ಲಿ ನಿಮ್ಮ ಕುಟುಂಬದ ಅನುಭವವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಲು ಕೆಲವು ಟೂಲ್‍ಗಳು ಮತ್ತು ಸಂಪನ್ಮೂಲಗಳನ್ನು ನಾವು ಒಂದು ಕಡೆ ಸೇರಿಸಿದ್ದೇವೆ.

ನನ್ನ ಮಗು ಯಾವ ವಯಸ್ಸಿನಲ್ಲಿ YouTube ಬಳಕೆ ಮಾಡಬೇಕು?

YouTube ಗೆ ಸೈನ್ ಇನ್ ಆಗಲು, ನೀವು ನಿರ್ದಿಷ್ಟ ವಯಸ್ಸಿನ ಅಗತ್ಯತೆಯನ್ನು ಪೂರೈಸುವ Google ಖಾತೆಯನ್ನು ಹೊಂದಿರುವ ಅಗತ್ಯವಿದೆ.  ವೀಡಿಯೊವನ್ನು ಫ್ಲ್ಯಾಗ್ ಮಾಡಿದಲ್ಲಿ ಮತ್ತು ಖಾತೆ  ರಚನೆ ಪ್ರಕ್ರಿಯೆಯ ಸಂದರ್ಭದಲ್ಲಿ ಅಪ್ ಲೋಡ್ ಮಾಡಿದವರು ತಮ್ಮ ವಯಸ್ಸನ್ನು ತಪ್ಪಾಗಿ ನೀಡಿದ್ದಾರೆ ಎಂದು ನಮಗೆ ಕಂಡುಬಂದರೆ, ಅವರ ಖಾತೆಯನ್ನು ನಾವು ಅಂತ್ಯಗೊಳಿಸುತ್ತೇವೆ.

ಸಲಹೆ ಮತ್ತು ಸೂಚನೆಗಳು

YouTube ನಲ್ಲಿ ಯಾವ ರೀತಿಯ ಕಂಟೆಂಟ್ ಮತ್ತು ನಡವಳಿಕೆಯನ್ನು ಅನುಮತಿಸಲಾಗಿದೆ ಎಂಬುದನ್ನು ವಿವರಿಸುವ, ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಪರಿಶೀಲಿಸುವಂತೆ ನಮ್ಮ ಎಲ್ಲ ಸದಸ್ಯರನ್ನು ನಾವು ಕೇಳುತ್ತೇವೆ.

Googleಮತ್ತುಸಾಮಾನ್ಯ ಜ್ಞಾನದ ಮಾಧ್ಯಮದಿಂದ ಕುಟುಂಬಗಳಿಗೆ ಆನ್‌ಲೈನ್ ಸುರಕ್ಷತೆಯ ಸಲಹೆಗಳು:

  • ನಿಮ್ಮ ಪ್ಲೇಪಟ್ಟಿಗಳನ್ನು ಮಾಡುವಂತೆ ನಿಮ್ಮ ಹದಿಹರೆಯದವರು ತಮ್ಮ ಮೆಚ್ಚಿನ ವೀಡಿಯೊಗಳನ್ನು ಪಟ್ಟಿ ಮಾಡುತ್ತಾರೆಯೇ. ಹಾಗಿದ್ದರೆ ಒಟ್ಟಿಗೆ ವೀಕ್ಷಿಸಲು ಕುಳಿತುಕೊಳ್ಳಿ. ನಿಮ್ಮ ಹದಿಹರೆದವರು ಏನನ್ನು ವೀಕ್ಷಿಸುತ್ತಾರೆ ಎಂಬುದನ್ನು ನೀವು ವೀಕ್ಷಿಸಬಹುದು, ಮತ್ತು ಅವರು ನಿಮ್ಮ ಕುರಿತು ಏನನ್ನಾದರೂ ತಿಳಿದುಕೊಳ್ಳಬಹುದು.
  • ನಿಮ್ಮ ಮೆಚ್ಚಿನ ಶೋಗಳಿಂದ ಕ್ಲಿಪ್‌ಗಳ ಪ್ಲೇಪಟ್ಟಿಯನ್ನು ಸಂಗ್ರಹಿಸುತ್ತ ನಿಮ್ಮ ಟಿವಿ ವೀಕ್ಷಿಸುವ ಬಾಲ್ಯದತ್ತ ನಿಮ್ಮ ಹದಿಹರೆಯದವರನ್ನು ಕರೆದುಕೊಂಡು ಹೋಗಿ.
  • YouTube ವೀಕ್ಷಿಸುವುದನ್ನು ಒಂದು ಆಟದಂತೆ ಮಾಡಿ : ಒಂದು ನಿರ್ದಿಷ್ಟ ಸ್ಥಳದಲ್ಲಿ ಯಾವ ರೀತಿಯ ವೀಡಿಯೊಗಳು ಜನಪ್ರಿಯವಾಗಿವೆ ಎಂಬುದನ್ನು ಊಹಿಸಿ ಮತ್ತು ಆ ಸ್ಥಳದಲ್ಲಿ ಮಾತ್ರ ವೀಡಿಯೊಗಳನ್ನು ವೀಕ್ಷಿಸಲು ಉನ್ನತ ಮಟ್ಟದ ಹುಡುಕಾಟವನ್ನು ಬಳಸಿ. ಸಾಂಸ್ಕೃತಿಕ ಆಚರಣೆಗಳು, ಸದಭಿರುಚಿಗಳು, ಸಾಮ್ಯತೆಗಳು, ಮತ್ತು ಭಿನ್ನತೆಗಳ ಕುರಿತು ನಿಮ್ಮ ಹದಿಹರೆಯದವರೊಂದಿಗೆ ಸಂಭಾಷಣೆ ನಡೆಸಲು ಇದು ಉತ್ತಮ ವಿಧಾನವಾಗಿದೆ.
  • ನಿಮ್ಮ ಹದಿಹರೆಯದವರು YouTube ನಲ್ಲಿ ಯಾರನ್ನು ಸಂಪರ್ಕಿಸುತ್ತಾರೆ ಎಂಬುದರ ಬಗ್ಗೆ ಜಾಗರೂಕತೆಯಿಂದಿರಿ.

ಟೂಲ್‍ಗಳು

  • ಅನುಚಿತವಾದ ಕಂಟೆಂಟ್: ನೀವು ಅನುಚಿತವಾದ ಅಥವಾ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದೆ ಎಂದು ಅನಿಸುವ ವೀಡಿಯೊವನ್ನು ನೋಡಿದರೆ, ವೀಡಿಯೊವನ್ನು ಫ್ಲ್ಯಾಗ್ ಮಾಡಿ. ಸಂಭಾವ್ಯವಾಗಿ ಅನುಚಿತವಾದ ಕಂಟೆಂಟ್ ಅನ್ನು ನಮ್ಮ ಗಮನಕ್ಕೆ ತರಲು ಇದು ವೇಗವಾದ ವಿಧಾನವಾಗಿದೆ. YouTube ನೀತಿ ತಜ್ಞರು ದಿನದ 24 ಗಂಟೆಗಳು, ವಾರದ 7 ದಿನಗಳ ಕಾಲ ಫ್ಲ್ಯಾಗ್ ಮಾಡಿದ ವೀಡಿಯೊಗಳನ್ನು ಪರಿಶೀಲಿಸುತ್ತಾರೆ.
  • ಗೌಪ್ಯತೆ: ನಿಮ್ಮ ಮಗುವಿನ ಗೌಪ್ಯತೆಯನ್ನು ಉಲ್ಲಂಘಿಸಲಾಗಿದೆ ಎಂದು ನೀವು ಭಾವಿಸಿದರೆ (ಉದಾ. ಸಮ್ಮತಿಯಿಲ್ಲದೆ ಚಿತ್ರ ಅಥವಾ ವೈಯಕ್ತಿಕ ಮಾಹಿತಿಯ ಬಳಕೆ), ದಯವಿಟ್ಟು ನಮ್ಮ ಗೌಪ್ಯತೆಯ ಮಾರ್ಗಸೂಚಿಗಳಿಗೆ ಭೇಟಿ ನೀಡಿ, ಇಲ್ಲಿ ನೀವು ನಮ್ಮ ಗೌಪ್ಯತೆ ನೀತಿ ಮತ್ತುಗೌಪ್ಯತಾ ದೂರು ಅನ್ನು ಹೇಗೆ ದಾಖಲಿಸಬಹುದು ಎಂಬುದರ ಬಗ್ಗೆ ಇನಷ್ಟು ತಿಳಿಯಬಹುದು. 
  • ಕಿರುಕುಳ ಮತ್ತು ಸೈಬರ್ ನಿಂದಿಸುವಿಕೆ:
    • ನಿಮ್ಮ ಹದಿಹರೆಯದವರು YouTube ನಲ್ಲಿ ಯಾರಿಂದಾದರೂ ಕಿರುಕುಳ ಅನುಭವಿಸುತ್ತಿದ್ದರೆ, ಬಳಕೆದಾರರನ್ನು ನಿರ್ಬಂಧಿಸಲು ಅವರಿಗೆ ಸೂಚಿಸಿ. ಅನಗತ್ಯ ಬಳಕೆದಾರರಿಂದ ಹೆಚ್ಚಿನ ಸಂವಹನವನ್ನು ತಡೆಯುವಲ್ಲಿ ಇದು ಸಹಾಯ ಮಾಡುತ್ತದೆ.
    • ಕಿರುಕುಳ ಮುಂದುವರಿದಲ್ಲಿ, ಕಿರುಕುಳ ತಡೆಗಟ್ಟುವಿಕೆ ಮಾಹಿತಿಗಾಗಿ ನಮ್ಮ ಸುರಕ್ಷತಾ ಕೇಂದ್ರದಲ್ಲಿನ ಕಿರುಕುಳ ಕುರಿತಾದ ಲೇಖನವನ್ನು ಪರಿಶೀಲಿಸಿ.
    • ನೀವು ಅಥವಾ ನಿಮ್ಮ ಹದಿಹರೆಯದವರು ವೀಡಿಯೊಗಳು, ಚಾನಲ್‌ಗಳು/ಪ್ರೊಫೈಲ್‌ಗಳು ಅಥವಾ ಕಾಮೆಂಟ್‌ಗಳಲ್ಲಿ ಕಿರುಕುಳವನ್ನು ವರದಿ ಮಾಡಲು ಬಯಸಿದರೆ, ನೀವು ಇಲ್ಲಿ ನೀಡಲಾಗಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ಚಾನಲ್ ಅನ್ನು ವರದಿ ಮಾಡಬಹುದು.
  • ನಿರ್ಬಂಧಿತ ಮೋಡ್: ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸುವುದರಿಂದ ನೀವು YouTube ನಲ್ಲಿ ಸಂಭಾವ್ಯ ಆಕ್ಷೇಪಾರ್ಹ ಕಂಟೆಂಟ್ ಅನ್ನು ನೋಡಲು ಬಯಸುವುದಿಲ್ಲ ಎಂದು ನಿರ್ದಿಷ್ಟಪಡಿಸುವುದನ್ನು ಅನುಮತಿಸುತ್ತದೆ. ನಿರ್ಬಂಧಿತ ಮೋಡ್ ಬಗ್ಗೆ ಇನ್ನಷ್ಟು ತಿಳಿಯಿರಿ.
  • ಚಾನಲ್‌ನ ಕಮೆಂಟ್‌ಗಳನ್ನು ಮಾಡರೇಟ್ ಮಾಡುವುದು: ನಿಮ್ಮ ಮಗು ತಮ್ಮ ಚಾನಲ್‍ನಲ್ಲಿ ಪೋಸ್ಟ್ ಮಾಡಲಾದ ಕಾಮೆಂಟ್‍ಗಳನ್ನು ತೆಗೆದುಹಾಕುವ ಅಥವಾ ನಿಮ್ಮ ಚಾನಲ್‍ನಲ್ಲಿ ಕಾಣಿಸಿಕೊಳ್ಳುವ ಮೊದಲು ಕಾಮೆಂಟ್‍ಗಳನ್ನು ಮಾಡರೇಟ್ ಮಾಡಲು ಅನುಮತಿಸುವಂತಹ ಟೂಲ್‍ಗಳು ಲಭ್ಯವಿವೆ. ಇನ್ನಷ್ಟು ತಿಳಿಯಲು, ಚಾನಲ್ ಕಾಮೆಂಟ್‍ಗಳನ್ನು ಮಾಡರೇಟ್ ಮಾಡುವುದು ಕುರಿತಾದ ನಮ್ಮ ಲೇಖನವನ್ನು ಓದಿ.
  • ನಿಮ್ಮ ಹದಿಹರೆಯದವರ ಚಾನಲ್‍ಗೆ ಭೇಟಿ ನೀಡಿ: ನಿಮ್ಮ ಹದಿಹರೆಯದವರು ತಮ್ಮ ಚಾನಲ್‍ನಲ್ಲಿ ಏನನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ. ಅವರ ಮೆಚ್ಚಿನವುಗಳನ್ನು ಮತ್ತು ಯಾವ YouTube ಚಾನೆಲ್‌ಗಳಿಗೆ ಅವರು ಸಬ್‌ಸ್ಕ್ರೈಬ್ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಿ. ಮೆಚ್ಚಿನ ಚಾನಲ್‌ಗಳು ಮತ್ತು ಸಬ್‌ಸ್ಕ್ರಿಪ್ಷನ್‌ಗಳು ಅವರು ಸೈಟ್‍ನಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದರ ಕುರಿತು ನಿಮಗೆ ಸುಳಿವು ನೀಡಬಹುದು.
  • ಗೌಪ್ಯತೆ ಮತ್ತು ಸುರಕ್ಷತಾ ಸೆಟ್ಟಿಂಗ್‌ಗಳು: ಸೈಟ್‌ನಲ್ಲಿ ಬಳಕೆದಾರರು ತಮ್ಮ ಅನುಭವವನ್ನು ನಿರ್ವಹಿಸಲು ಸಹಾಯ ಮಾಡುವ ಟೂಲ್‍ಗಳು ಮತ್ತು ಸೆಟ್ಟಿಂಗ್‌ಗಳ ಶ್ರೇಣಿಯನ್ನು YouTube ಹೊಂದಿದೆ. ನಿಮ್ಮ ಹದಿಹರೆಯದವರಿಗೆ ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಇನ್ನಷ್ಟು ತಿಳಿಯಲು ದಯವಿಟ್ಟು ನಮ್ಮಖಾಸಗಿ ಮತ್ತು ಸುರಕ್ಷತಾ ಸೆಟ್ಟಿಂಗ್‌ಗಳು ಪುಟಕ್ಕೆ ಭೇಟಿ ನೀಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16898386670596182580
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false