YouTube ನ ಹದಿಹರೆಯ ಬಳಕೆದಾರರ ಪೋಷಕರಿಗೆ ಸಲಹೆಗಳು ಮತ್ತು ಟೂಲ್‍ಗಳು

ಪೋಷಕರು ಮತ್ತು ಪಾಲಕರು ತಮ್ಮ ಹದಿಹರೆಯದವರ ವರ್ತನೆ ಮತ್ತು ಆನ್‍ಲೈನ್ ಯೋಗಕ್ಷೇಮದ ಕುರಿತು ಕೆಲವೊಮ್ಮೆ ಪ್ರಶ್ನೆಗಳನ್ನು ಹೊಂದಿರುತ್ತಾರೆಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ನಾವು ಅವರ YouTube ಅನುಭವವನ್ನು ನಿರ್ವಹಿಸುವ ನಿಟ್ಟಿನಲ್ಲಿ ನಿಮಗೆ ಸಹಾಯವಾಗುವ ಕೆಲವು ಟೂಲ್‍ಗಳು ಮತ್ತು ಸಂಪನ್ಮೂಲಗಳನ್ನು ಒಂಡು ಕಡೆ ಸೇರಿಸಿದ್ದೇವೆ.

ನನ್ನ ಹದಿಹರೆಯ ಮಗು ಯಾವ ವಯಸ್ಸಿನಲ್ಲಿ YouTube ಬಳಕೆ ಮಾಡಬೇಕು?

YouTube ಗೆ ಸೈನ್ ಇನ್ ಮಾಡಲು, ನಿಮ್ಮ ಹದಿಹರೆಯದವರು ನಿಮ್ಮ ದೇಶ ಅಥವಾ ಪ್ರದೇಶದಕ್ಕೆ ನಿಗದಿಪಡಿಸಿರುವ ನಿರ್ದಿಷ್ಟ ವಯಸ್ಸಿನ ಅಗತ್ಯತೆಯನ್ನು ಪೂರೈಸುವ Google ಖಾತೆಯನ್ನು ಹೊಂದಿರಬೇಕು. 

ನಿಮ್ಮ ಮಗು ಅಗತ್ಯ ವಯೋಮಿತಿ ಒಳಗೆ ಇದ್ದರೆ, ನಮ್ಮ YouTube For Families ಸಹಾಯ ಕೇಂದ್ರದಲ್ಲಿ ಅವರಿಗೆ ಯಾವೆಲ್ಲಾ ಅನುಭವಗಳು ಲಭ್ಯವಿವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಆನ್‍ಲೈನ್ ಕಂಟೆಂಟ್ ರಚನೆಗಾಗಿ ಸಲಹೆ ಮತ್ತು ಸೂಚನೆಗಳು

ನಿಮ್ಮ ಹದಿಹರೆಯದವರು YouTube ಕಂಟೆಂಟ್ ರಚನೆಯಲ್ಲಿ ಆಸಕ್ತಿ ಹೊಂದಿದ್ದರೆ, ನಾವು ಈ ಕೆಳಗಿನವುಗಳನ್ನು ಶಿಫಾರಸು ಮಾಡುತ್ತೇವೆ:

  • YouTube ನಲ್ಲಿ ಯಾವ ರೀತಿಯ ಕಂಟೆಂಟ್ ಮತ್ತು ನಡವಳಿಕೆಯನ್ನು ಅನುಮತಿಸಲಾಗಿದೆ ಎಂಬುದನ್ನು ವಿವರಿಸುವ, ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಪರಿಶೀಲಿಸಿ.
  • ಹದಿಹರೆಯದವರು ಜವಾಬ್ದಾರಿಯುತವಾಗಿ ಕಂಟೆಂಟ್ ಅನ್ನು ರಚಿಸುವ ಕುರಿತು ಇನ್ನಷ್ಟು ತಿಳಿದುಕೊಳ್ಳುವುದಕ್ಕಾಗಿ Family Guide ಹಾಗೂ ಪೋಷಕರಿಗಾಗಿ ಸಲಹೆಗಳು ಅನ್ನು ಓದುವುದು. Common Sense Media ದ ಅಂಗಸಂಸ್ಥೆಯಾದ Common Sense Networks ಸಹಭಾಗಿತ್ವದಲ್ಲಿ ಕುಟುಂಬ ಗೈಡ್ ಅನ್ನು ರಚಿಸಲಾಗಿದೆ.
  • ಈ ಮಾರ್ಗದರ್ಶಿ ಅನ್ನು ನಿಮ್ಮ ಹದಿಹರೆಯ ಮಗುವಿನ ಜೊತೆ ಹಂಚಿಕೊಳ್ಳುವುದು. 

ಗೌಪ್ಯತೆ ಮತ್ತು ಸುರಕ್ಷತೆ ಟೂಲ್‍ಗಳು

ಯೋಗಕ್ಷೇಮವನ್ನು ಬೆಂಬಲಿಸುವುದು

  • ವಿರಾಮವನ್ನು ಪಡೆಯುವುದರ ಕುರಿತು ರಿಮೈಂಡರ್‌ಗಳು: ಈ ಫೀಚರ್ ಹದಿಹರೆಯದವರಿಗೆ ಸ್ವಯಂಚಾಲಿತವಾಗಿ ಆನ್ ಆಗುತ್ತದೆ ಮತ್ತು YouTube Shorts ನಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ ವಿರಾಮ ಪಡೆಯಲು ಅವರಿಗೆ ರಿಮೈಂಡ್ ಮಾಡುತ್ತದೆ. 
  • ಬೆಡ್‍ಟೈಮ್ ರಿಮೈಂಡರ್‌ಗಳು:  ಈ ಫೀಚರ್ ಹದಿಹರೆಯದವರಿಗೆ ಸ್ವಯಂಚಾಲಿತವಾಗಿ ಆನ್ ಆಗುತ್ತದೆ ಮತ್ತು ಅವರು YouTube ವೀಕ್ಷಣೆ ನಿಲ್ಲಿಸುವ ಮತ್ತು ನಿದ್ರೆಗೆ ಜಾರುವ ಸಮಯ ಬಂದಾಗ ಕಾಣಿಸಿಕೊಳ್ಳುತ್ತದೆ. 
  • ಆಟೋ ಪ್ಲೇ ಆಫ್ ಆಗಿರುತ್ತದೆ: ಈ ಫೀಚರ್ ಹದಿಹರೆಯದವರಿಗೆ ಸ್ವಯಂಚಾಲಿತವಾಗಿ ಆಫ್ ಮಾಡಲಾಗಿದೆ. ಆಫ್ ಆಗಿರುವಾಗ, ನಿಮ್ಮ ಹದಿಹರೆಯದವರಿಗೆ ವೀಡಿಯೊಗಳು ನಿರಂತರವಾಗಿ ಪ್ಲೇ ಆಗುವುದಿಲ್ಲ ಮತ್ತು ಅವರು ವೀಕ್ಷಿಸಲು ಬಯಸುವ ಮುಂದಿನ ವೀಡಿಯೊವನ್ನು ಅವರೇ ಆಯ್ಕೆಮಾಡಬೇಕಿರುತ್ತದೆ. 
  • ಜವಾಬ್ದಾರಿಯುತ ವೀಡಿಯೊ ಶಿಫಾರಸುಗಳು: ಹದಿಹರೆಯದವರಿಗೆ ಹೆಚ್ಚು ಜವಾಬ್ದಾರಿಯುತ ಶಿಫಾರಸುಗಳನ್ನು ಒದಗಿಸುವ ವೀಡಿಯೊ ಶಿಫಾರಸು ವ್ಯವಸ್ಥೆಯನ್ನು YouTube ಹೊಂದಿದೆ. ಈ ವ್ಯವಸ್ಥೆಯು ಅವರ ಸ್ವ-ಜಾಗೃತಿ ಅಥವಾ ಅವರ ನಡುವಳಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾದ ಕಂಟೆಂಟ್‍ಗೆ ತೆರೆದುಕೊಳ್ಳುವಿಕೆಯನ್ನು ಸ್ವಯಂಚಾಲಿತವಾಗಿ ಕಡಿಮೆಗೊಳಿಸುತ್ತದೆ. ಹದಿಹರೆಯದವರ ಅನನ್ಯ ಅಗತ್ಯಗಳನ್ನು ಪೂರೈಸಲು ನಾವು ಕಂಟೆಂಟ್ ಶಿಫಾರಸುಗಳನ್ನು ಹೇಗೆ ನಿರ್ಮಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17637625348304315645
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false