ಹದಿಹರೆಯದವರು YouTube ನಲ್ಲಿ ಸುರಕ್ಷಿತವಾಗಿರಿ

ಹದಿಹರೆಯದವರು YouTube ಸಮುದಾಯದ ಅತಿ ಮುಖ್ಯ ಭಾಗವಾಗಿದ್ದಾರೆ. ನೀವು ಹದಿಹರೆಯದವರಾಗಿದ್ದರೆ, YouTube ನಲ್ಲಿ ಸುರಕ್ಷಿತವಾಗಿರಲು ಕೆಳಗಿನ ಪರಿಕರಗಳು ಮತ್ತು ಸಲಹೆಗಳನ್ನು ಬಳಸಿ.

ಗಮನಿಸಿ: Google ಖಾತೆಯನ್ನು ರಚಿಸಲು, ನಿಮ್ಮ ದೇಶ/ಪ್ರದೇಶದಲ್ಲಿ ಕನಿಷ್ಠ ವಯಸ್ಸಿನ ಅಗತ್ಯತೆಗಳನ್ನು ಪೂರೈಸಬೇಕು.

ನೀವು ಶಿಕ್ಷಕರು ಅಥವಾ ಪೋಷಕರಾಗಿದ್ದರೆ, ನಮ್ಮ ಪೋಷಕರ ಸಂಪನ್ಮೂಲಗಳು ಮತ್ತು ಶಿಕ್ಷಕರ ಸಂಪನ್ಮೂಲಗಳು ಎಂಬಲ್ಲಿಗೆ ಹೋಗಿ. ಇಂಟರ್ನೆಟ್ ಸುರಕ್ಷತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಆನ್‌ಲೈನ್ ಸುರಕ್ಷತೆಯ ಕುರಿತು Google ಸಲಹೆಗಳನ್ನು ಓದಿ.

ಹದಿಹರೆಯದವರಿಗಾಗಿ ಸುರಕ್ಷತೆಯ ಸಲಹೆಗಳು

  • ಯಾವ ಪ್ರಕಾರದ ಕಂಟೆಂಟ್ ಅನ್ನು ಚಿತ್ರೀಕರಿಸಬೇಕೆಂದು ತಿಳಿಯಿರಿ. ನಿಮ್ಮ ಸ್ನೇಹಿತರ, ಸಹಪಾಠಿಗಳ, ಅಥವಾ ಇತರ ಹದಿಹರೆಯದವರ ವೀಡಿಯೊಗಳನ್ನು ಚಿತ್ರೀಕರಿಸುತ್ತಿರುವಾಗ ಅವುಗಳು ಲೈಂಗಿಕವಾಗಿ ಪ್ರಚೋದಕ, ಹಿಂಸಾತ್ಮಕ, ಅಥವಾ ಅಪಾಯಕಾರಿಯಾಗಿರಬಾರದು ಎಂಬುದು ನೆನಪಿನಲ್ಲಿರಲಿ.

  • "ಹಿರಿಯರ ನಿಯಮ" ನೆನಪಿಸಿಕೊಳ್ಳಿ. ನಿಮ್ಮ ವೀಡಿಯೊವನ್ನು ನಿಮ್ಮ ಅಜ್ಜ-ಅಜ್ಜಿಯರು, ಪೋಷಕರು ಅಥವಾ ಭವಿಷ್ಯದ ಉದ್ಯೋಗದಾತರು ವೀಕ್ಷಿಸಬೇಕೆಂದು ಬಯಸುವಿರಾ? ಬೇಡ ಎಂದಾದರೆ, ಅದನ್ನು ಪೋಸ್ಟ್ ಮಾಡುವುದು ಒಳ್ಳೆಯದಲ್ಲ. ನೀವು ಪೋಸ್ಟ್ ಮಾಡಿದ ನಂತರ, ಅದನ್ನು ಯಾರು ನೋಡುತ್ತಾರೆಂದು ನಿಮಗೆ ಎಂದಿಗೂ ಗೊತ್ತಿರುವುದಿಲ್ಲ. ವೀಡಿಯೊವನ್ನು ನಕಲಿಸಿದರೆ ಅಥವಾ ಮರುಪೋಸ್ಟ್ ಮಾಡಿದರೆ, ಪ್ರತಿಯೊಂದು ನಕಲು ಪ್ರತಿಯನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗುವುದಿಲ್ಲ.

  • ಅಪಾಯಕಾರಿ ಅಥವಾ ಅಹಿತಕರ ಸನ್ನಿವೇಶಗಳನ್ನು ತಡೆಯಿರಿ. ಬೇರೆ ಯಾರೋ ಕೇಳಿದ್ದಾರೆ ಎಂದಾಕ್ಷಣ ಏನನ್ನೂ ಪೋಸ್ಟ್ ಮಾಡಬೇಡಿ. ಆನ್‌ಲೈನ್ ಸ್ನೇಹಿತರನ್ನು ಭೇಟಿ ಮಾಡುವ ಮುನ್ನ, ಓರ್ವ ನಂಬಿಕಸ್ಥ ವಯಸ್ಕರ ಜೊತೆಗೆ ಮಾತನಾಡಿ.

  • ನಮ್ಮ ಗೌಪ್ಯತೆ ಫೀಚರ್‌ಗಳನ್ನು ಬಳಸಿ. ನೀವು ಪೋಸ್ಟ್ ಮಾಡಿರುವ ವೀಡಿಯೊಗಳನ್ನು ಯಾರ ನೋಡಬಹುದು ಎಂಬುದನ್ನು ಸೀಮಿತಗೊಳಿಸುವುದಕ್ಕೆ ನಿಮಗೆ ಸಹಾಯ ಮಾಡಲೆಂದು YouTube ಕೆಲವು ಫೀಚರ್‌ಗಳನ್ನು ಹೊಂದಿದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದಕ್ಕೆ ಸಹಾಯ ಮಾಡಲು, ನೀವು ವೈಯಕ್ತಿಕ ವೀಡಿಯೊಗಳನ್ನು "ಖಾಸಗಿ" ಅಥವಾ "ಪಟ್ಟಿ ಮಾಡದಿರುವುದು" ಎಂಬುದಾಗಿ ಸೆಟ್ ಮಾಡಬಹುದು. YouTube ನಲ್ಲಿ ನಿಮ್ಮ ಅನುಭವವನ್ನು ನಿರ್ವಹಿಸಲು, ಗೌಪ್ಯತೆ ಮತ್ತು ಸುರಕ್ಷತೆ ಕೇಂದ್ರಕ್ಕೆ ಭೇಟಿ ನೀಡಿ.

  • YouTube ನಲ್ಲಿ ನಿಮಗೆ ಸುರಕ್ಷಿತವಾಗಿರಲು ಸಹಾಯ ಮಾಡಬಹುದಾದ ಸಲಹೆಗಳನ್ನು ಓದಲು ಮತ್ತು ವೀಡಿಯೊಗಳನ್ನು ವೀಕ್ಷಿಸಲು, ರಚನೆಕಾರರ ಸುರಕ್ಷತಾ ಕೇಂದ್ರವನ್ನು ಪರಿಶೀಲಿಸಿ.
ನಿಮಗೆ ಕಿರುಕುಳ, ಬೆದರಿಕೆಗಳು, ಸೋಗು ಹಾಕುವಿಕೆ ಅಥವಾ ನಿಂದನೀಯ ವರ್ತನೆಗಳು ಅನುಭವಕ್ಕೆ ಬಂದರೆ, ಚಾನಲ್ ಕುರಿತು ವರದಿ ಮಾಡಿ. ನಿಮಗೆ ಅನುಚಿತ ಕಂಟೆಂಟ್ ಕಂಡುಬಂದರೆ, ವರದಿ ಮಾಡಿ.

ಸಂಬಂಧಿಸಿದ ಸಂಪನ್ಮೂಲಗಳು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9563816497042414950
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false