ವಯಸ್ಸಿನ ನಿರ್ಬಂಧವಿರುವ ಕಂಟೆಂಟ್

ಕೆಲವೊಮ್ಮೆ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದಿಲ್ಲ, ಆದರೆ ಅದು YouTube ನ ಸೇವಾ ನಿಯಮಗಳಿಗೆ ಹೊಂದಿಕೆಯಾಗದಿರಬಹುದು ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವೆನಿಸದಿರಬಹುದು. ಈ ಸಂದರ್ಭಗಳಲ್ಲಿ, ನಾವು ವೀಡಿಯೊಗೆ ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು. ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಸ್ಟಮ್ ಥಂಬ್‌ನೇಲ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ.

ವಯಸ್ಸಿನ ನಿರ್ಬಂಧದ ಕುರಿತು ಇನ್ನಷ್ಟು ತಿಳಿಯಿರಿ

ವಯಸ್ಸಿನ ನಿರ್ಬಂಧವನ್ನು ವಿಧಿಸಲು ನಾವು ಪರಿಗಣಿಸುವ ಕಂಟೆಂಟ್ ಪ್ರಕಾರಗಳ ಕುರಿತ ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿದೆ. ನಿಮ್ಮ ಕಂಟೆಂಟ್ ಈ ಥೀಮ್‌ಗಳಲ್ಲಿ ಒಂದನ್ನು ಅಥವಾ ಒಂದಕ್ಕಿಂತ ಹೆಚ್ಚಿನದನ್ನು ಒಳಗೊಂಡಿದ್ದರೆ, ನಾವು ಅದಕ್ಕೆ ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು. ವಯಸ್ಸಿನ ನಿರ್ಬಂಧವನ್ನು ವಿಧಿಸಲಾಗಬಹುದಾದ ಕಂಟೆಂಟ್‌ನ ಉದಾಹರಣೆಗಳನ್ನು ನಾವು ಕೆಳಗೆ ನೀಡಿದ್ದೇವೆ. ಈ ಥೀಮ್‌ಗಳನ್ನು ನಿದರ್ಶಿಸುವ ಉದಾಹರಣೆಗಳಿಗಾಗಿ, ನೀತಿ ವಿಭಾಗಗಳನ್ನು ಕ್ಲಿಕ್ ಮಾಡಿ. ನೆನಪಿಡಿ, ಇದು ಸಂಪೂರ್ಣ ಪಟ್ಟಿಯಲ್ಲ.

ಮಕ್ಕಳ ಸುರಕ್ಷತೆ

  • ಅಪ್ರಾಪ್ತ ವಯಸ್ಕರು ಸುಲಭವಾಗಿ ಅನುಕರಿಸಬಹುದಾದ, ಸ್ಫೋಟಕ ವಸ್ತುಗಳನ್ನು ನಿರ್ವಹಿಸುವುದು ಅಥವಾ ದೈಹಿಕ ಗಾಯವನ್ನು ಉಂಟುಮಾಡುವ ಸವಾಲುಗಳಂತಹ ಅಪಾಯಕಾರಿ ಚಟುವಟಿಕೆಗಳಲ್ಲಿ ವಯಸ್ಕರು ಭಾಗವಹಿಸುವುದನ್ನು ಒಳಗೊಂಡಿರುವ ವೀಡಿಯೊ
  • ವಯಸ್ಕ ಪ್ರೇಕ್ಷಕರಿಗೆ ಸಂಬಂಧಿಸಿರುವ, ಆದರೆ ಅದು ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್ ಎಂದು ಸುಲಭವಾಗಿ ಗೊಂದಲವನ್ನು ಉಂಟುಮಾಡಬಹುದಾದ ಕಂಟೆಂಟ್
ಗಮನಿಸಿ: ನಿಮ್ಮ "ಮಕ್ಕಳಿಗಾಗಿ ರಚಿಸಲಾಗಿದೆ" ಸೆಟ್ಟಿಂಗ್‌ಗಳು ನಿಮ್ಮ ವೀಡಿಯೊಗಳ ಮೇಲಿನ ವಯಸ್ಸಿನ ನಿರ್ಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ.

ನಿಯಂತ್ರಿತ ಪದಾರ್ಥಗಳು ಮತ್ತು ಡ್ರಗ್‌ಗಳು ಸೇರಿದಂತೆ ಹಾನಿಕಾರಕ ಅಥವಾ ಅಪಾಯಕಾರಿ ಚಟುವಟಿಕೆಗಳು

  • ವೀಕ್ಷಕರು ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗದಷ್ಟು ನೈಜವಾಗಿರುವ, ಹಾನಿಕಾರಕವಾದ ನಕಲಿ ಪ್ರಾಂಕ್‌ಗಳ ಕುರಿತಾದ ವೀಡಿಯೊ
  • ಕ್ಯಾನಬಿಸ್ ಡಿಸ್ಪೆನ್ಸರಿಯ ಕುರಿತು ಪ್ರಚಾರ ಮಾಡುವ ವೀಡಿಯೊ

ನಗ್ನತೆ ಮತ್ತು ಲೈಂಗಿಕವಾಗಿ ಪ್ರಚೋದಕವಾಗಿರುವ ಕಂಟೆಂಟ್

  • ಲೈಂಗಿಕ ಚಟುವಟಿಕೆಗೆ ಆಸ್ಪದ ಕೊಡುವ ವೀಡಿಯೊ, ಉದಾಹರಣೆಗೆ ಪ್ರಚೋದನಕಾರಿ ನೃತ್ಯ ಅಥವಾ ಮುದ್ದಿಸುವಿಕೆ
  • ವೀಕ್ಷಕರನ್ನು ಲೈಂಗಿಕವಾಗಿ ಪ್ರಚೋದಿಸಲು ಉದ್ದೇಶಿಸಲಾದ ಭಂಗಿಯಲ್ಲಿರುವ ವ್ಯಕ್ತಿಯನ್ನೊಳಗೊಂಡ ವೀಡಿಯೊ
  • ಸಾರ್ವಜನಿಕ ಸಂದರ್ಭಗಳಲ್ಲಿ ಸೂಕ್ತವಲ್ಲ ಎಂದು ಪರಿಗಣಿಸಲಾಗುವ, ಒಳಉಡುಪುಗಳಂತಹ ಉಡುಪು ಧರಿಸಿರುವ ವ್ಯಕ್ತಿಯನ್ನೊಳಗೊಂಡ ವೀಡಿಯೊ

ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್

  • ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದವರ ದೈಹಿಕ ಗಾಯಗಳನ್ನು ತೋರಿಸುವ, ಸಾಂದರ್ಭಿಕ ಮಾಹಿತಿಯಿರುವ ವೀಡಿಯೊ
  • ಹಿಂಸಾತ್ಮಕ ಅಥವಾ ಘೋರ ಚಿತ್ರಣದ ಮೇಲೆ ಗಮನ ಕೇಂದ್ರೀಕರಿಸಿದ ವೀಡಿಯೊ, ಉದಾಹರಣೆಗೆ ಚಲನಚಿತ್ರ ಅಥವಾ ವೀಡಿಯೊ ಗೇಮ್‌ನ ಅತ್ಯಂತ ಚಿತ್ರಾತ್ಮಕವಾಗಿ ತೋರಿಸುವ ಹಿಂಸಾತ್ಮಕ ಭಾಗವೊಂದೇ ಪ್ರಮುಖ ವಿಷಯವಾಗಿರುವುದು

ಅಸಭ್ಯ ಭಾಷೆ

  • ಶೀರ್ಷಿಕೆ, ಥಂಬ್‌ನೇಲ್ ಅಥವಾ ಸಂಯೋಜಿತ ಮೆಟಾಡೇಟಾದಲ್ಲಿ ಭಾರೀ ಬೈಗುಳವನ್ನು ಹೊಂದಿರುವ ವೀಡಿಯೊ
  • ಬೈಗುಳಗಳ ಬಳಕೆಯ ಮೇಲೆ ಗಮನ ಕೇಂದ್ರೀಕರಿಸಿದ ವೀಡಿಯೊ, ಉದಾಹರಣೆಗೆ ಸಾಂದರ್ಭಿಕ ಮಾಹಿತಿ ಇರದ ಕಂಪೈಲೇಶನ್ ಅಥವಾ ಕ್ಲಿಪ್‌ಗಳು

ಕಂಟೆಂಟ್‌ಗೆ ವಯಸ್ಸಿನ ನಿರ್ಬಂಧವನ್ನು ವಿಧಿಸಿದರೆ ಏನಾಗುತ್ತದೆ?

18 ವರ್ಷದೊಳಗಿನ ಅಥವಾ ಸೈನ್ ಔಟ್ ಆಗಿರುವ ಬಳಕೆದಾರರು ವಯಸ್ಸಿನ ನಿರ್ಬಂಧವನ್ನು ವಿಧಿಸಲಾಗಿರುವ ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ, ವಯಸ್ಸಿನ ನಿರ್ಬಂಧವನ್ನು ವಿಧಿಸಲಾಗಿರುವ ವೀಡಿಯೊಗಳನ್ನು ಹೆಚ್ಚಿನ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಎಂಬೆಡೆಡ್ ಪ್ಲೇಯರ್‌ನಂತಹ ಮತ್ತೊಂದು ವೆಬ್‌ಸೈಟ್‌ನಲ್ಲಿ ವಯಸ್ಸಿನ ನಿರ್ಬಂಧವಿರುವ ವೀಡಿಯೊವನ್ನು ಕ್ಲಿಕ್ ಮಾಡುವ ವೀಕ್ಷಕರನ್ನು YouTube ಅಥವಾ YouTube Music ಗೆ ರೀಡೈರೆಕ್ಟ್ ಮಾಡಲಾಗುತ್ತದೆ. ಅಲ್ಲಿಗೆ ಬಂದ ಬಳಿಕ, ಅವರು ಸೈನ್ ಇನ್ ಮಾಡಿದಾಗ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಮಾತ್ರ ಕಂಟೆಂಟ್ ಅನ್ನು ವೀಕ್ಷಿಸಬಹುದು. ಈ ಪ್ರಕ್ರಿಯೆಯು ಕಂಟೆಂಟ್ ಅನ್ನು ಎಲ್ಲಿಯೇ ಪತ್ತೆಹಚ್ಚಲಾಗಿದ್ದರೂ ಸಹ, YouTube ನಿಂದ ವೀಡಿಯೊವನ್ನು ಹೋಸ್ಟ್ ಮಾಡಲಾಗಿದ್ದರೆ ಅದನ್ನು ಸೂಕ್ತ ಪ್ರೇಕ್ಷಕರು ಮಾತ್ರ ವೀಕ್ಷಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ನಮ್ಮಿಂದ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ನೀವು ವಯಸ್ಸಿನ ನಿರ್ಬಂಧದ ಕುರಿತು ಮೇಲ್ಮನವಿಯನ್ನು ಸಲ್ಲಿಸಬಹುದು.

ಮಾನಿಟೈಸೇಶನ್ ಮತ್ತು ವಯಸ್ಸಿನ ನಿರ್ಬಂಧಗಳು

ನಿಮ್ಮ ಚಾನಲ್, ಜಾಹೀರಾತುಗಳಿಗೆ ಅರ್ಹವಾಗಿದ್ದರೆ, ನಮ್ಮ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪರಿಶೀಲಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ವಯಸ್ಸಿನ ನಿರ್ಬಂಧವನ್ನು ವಿಧಿಸಲಾಗಿರುವ ವೀಡಿಯೊಗಳು ಮಾನಿಟೈಸ್ ಮಾಡಲು ಜಾಹೀರಾತುಗಳನ್ನು ಬಳಸಬಹುದು. ಕೆಲವು ಜಾಹೀರಾತುದಾರರು ಕುಟುಂಬ-ಸ್ನೇಹಿ ಕಂಟೆಂಟ್‌ನಲ್ಲಿ ಅಥವಾ ಮೇಲೆ ತಿಳಿಸಲಾದ ಥೀಮ್‌ಗಳಿಲ್ಲದ ಕಂಟೆಂಟ್‌ನಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಲು ಬಯಸುತ್ತಾರೆ. ಇಂತಹ ಸಂದರ್ಭಗಳಲ್ಲಿ, ಜಾಹೀರಾತುಗಳ ಮೂಲಕ ಹಣಗಳಿಸುವ ನಿಮ್ಮ ವೀಡಿಯೊ ಮಾನಿಟೈಸೇಶನ್ ಸ್ಥಿತಿಯು ಸೀಮಿತವಾಗಿರಬಹುದು ಅಥವಾ ಇಲ್ಲದಿರಬಹುದು.

ಕೆಲವೊಮ್ಮೆ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದಿಲ್ಲ, ಆದರೆ ಅದು YouTube ನ ಸೇವಾ ನಿಯಮಗಳಿಗೆ ಹೊಂದಿಕೆಯಾಗದಿರಬಹುದು ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವೆನಿಸದಿರಬಹುದು.

ನಿಮ್ಮ ಕಂಟೆಂಟ್‌ಗೆ ವಯಸ್ಸಿನ ನಿರ್ಬಂಧವನ್ನು ವಿಧಿಸಲಾಗಿದೆಯೇ ಎಂದು ಪರಿಶೀಲಿಸಿ

YouTube Studio ಗೆ ಹೋಗಿ 'ವಯಸ್ಸಿನ ನಿರ್ಬಂಧ' ಫಿಲ್ಟರ್ ಅನ್ನು ಬಳಸುವ ಮೂಲಕ ಅಥವಾ ನಿಮ್ಮ ವೀಡಿಯೊಗಳು ಪುಟದಲ್ಲಿರುವ ನಿರ್ಬಂಧಗಳು ಕಾಲಮ್‌ನಲ್ಲಿ "ವಯಸ್ಸಿನ ನಿರ್ಬಂಧ" ಎಂಬುದನ್ನು ಹುಡುಕುವ ಮೂಲಕ, ನಿಮ್ಮ ಕಂಟೆಂಟ್‌ಗೆ ವಯಸ್ಸಿನ ನಿರ್ಬಂಧವನ್ನು ವಿಧಿಸಲಾಗಿದೆಯೇ ಎಂಬುದನ್ನು ನೀವು ಪರಿಶೀಲಿಸಬಹುದು. ನಮ್ಮ ಸಿಸ್ಟಂಗಳನ್ನು ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ ಮತ್ತು ನಿಮ್ಮ ರೇಟಿಂಗ್‌ನಲ್ಲಿ ಯಾವುದೇ ವ್ಯತ್ಯಾಸಗಳನ್ನು ನಾವು ಕಂಡುಕೊಂಡರೆ, ಅದು ಬದಲಾಗುವ ಸಾಧ್ಯತೆ ಇರುತ್ತದೆ.

18 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಸೈನ್ ಇನ್ ಆಗಿರುವ ವೀಕ್ಷಕರು ವಿವರಣೆಯ ಕೆಳಗೆ ನೋಡಿ, ವೀಡಿಯೊಗೆ ವಯಸ್ಸಿನ ನಿರ್ಬಂಧವನ್ನು ವಿಧಿಸಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳನ್ನು ವೀಕ್ಷಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9498034766673378230
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false