ಸೋಗು ಹಾಕುವಿಕೆ ಕುರಿತಾದ ನೀತಿ

ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.

ಒಬ್ಬ ವ್ಯಕ್ತಿ ಅಥವಾ ಚಾನಲ್‌ನ ಸೋಗು ಹಾಕುವ ಉದ್ದೇಶವಿರುವ ಕಂಟೆಂಟ್‌ಗೆ YouTube ನಲ್ಲಿ ಅನುಮತಿಯಿಲ್ಲ. YouTube, ಟ್ರೇಡ್‌ಮಾರ್ಕ್ ಹೊಂದಿರುವವರ ಹಕ್ಕುಗಳನ್ನು ಸಹ ಜಾರಿಗೊಳಿಸುತ್ತದೆ. ಒಂದು ಚಾನಲ್, ಅಥವಾ ಚಾನಲ್‌ನಲ್ಲಿರುವ ಕಂಟೆಂಟ್, ಜಾಹೀರುಗೊಳಿಸಲಾದ ಸರಕುಗಳು ಅಥವಾ ಸೇವೆಗಳ ಮೂಲದ ಕುರಿತು ಗೊಂದಲ ಉಂಟುಮಾಡಿದಾಗ, ಅದನ್ನು ಅನುಮತಿಸದಿರಬಹುದು.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದನ್ನು ವರದಿ ಮಾಡಿ.

  • ನಿಮ್ಮ ಅಥವಾ ಇನ್ನೊಬ್ಬ ರಚನೆಕಾರರ ಚಾನಲ್ ಸೋಗು ಹಾಕುತ್ತಿದೆ ಎಂದು ನೀವು ಭಾವಿಸಿದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಈ ನೀತಿಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತವೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗೆ ಸೂಚಿಸಿದ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ. 

  • ಚಾನಲ್‌ನ ಸೋಗುಹಾಕುವಿಕೆ:  ಬೇರೊಬ್ಬರ ಚಾನಲ್‌ನಂತೆ ಕಾಣುವ ಹಾಗೆ ಮತ್ತೊಂದು ಚಾನಲ್‌ನ ಪ್ರೊಫೈಲ್, ಹಿನ್ನೆಲೆ ಅಥವಾ ಸಮಗ್ರ ನೋಟವನ್ನು ನಕಲಿಸುವ ಚಾನಲ್. ಚಾನಲ್, 100% ಸಮಾನವಾಗಿರಬೇಕೆಂದೇನಿಲ್ಲ, ಆದರೆ ಮತ್ತೊಂದು ಚಾನಲ್ ಅನ್ನು ನಕಲಿಸುವ ಉದ್ದೇಶವು ಸ್ಪಷ್ಟವಾಗಿರಬೇಕು.
  • ವ್ಯಕ್ತಿಯ ಸೋಗುಹಾಕುವಿಕೆ: ಬೇರೆ ಯಾರೋ ಅದನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂಬ ಹಾಗೆ ಕಾಣುವ ಉದ್ದೇಶವಿರುವ ಕಂಟೆಂಟ್.

ನೀವು ಫ್ಯಾನ್ ಚಾನಲ್ ಅನ್ನು ನಿರ್ವಹಿಸುತ್ತಿದ್ದರೆ, ನಿಮ್ಮ ಚಾನಲ್ ಹೆಸರು ಅಥವಾ ಹ್ಯಾಂಡಲ್‌ನಲ್ಲಿ ಆ ವಿಷಯವನ್ನು ನೀವು ಸ್ಪಷ್ಟವಾಗಿ ತಿಳಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಚಾನಲ್ ಸಂಭ್ರಮಿಸುತ್ತಿರುವ ಯಾವುದೇ ಮೂಲ ರಚನೆಕಾರರು, ಕಲಾವಿದರು ಅಥವಾ ಘಟಕವನ್ನು ನಿಮ್ಮ ಚಾನಲ್ ಪ್ರತಿನಿಧಿಸುತ್ತಿಲ್ಲ ಎಂಬುದನ್ನು ನಿಮ್ಮ ವೀಕ್ಷಕರಿಗೆ ಸ್ಪಷ್ಟಪಡಿಸಿರಬೇಕು.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ಒಂದೇ ರೀತಿಯ ಗುರುತಿಸುವಿಕೆ (ಚಾನಲ್ ಹೆಸರು ಅಥವಾ ಹ್ಯಾಂಡಲ್) ಮತ್ತು ಇನ್ನೊಂದು ಚಾನಲ್‌ ಅನ್ನು ಹೋಲುವಂತಹ ಇಮೇಜ್ ಹೊಂದಿರುವ ಚಾನಲ್‌ಗಳು, ಹೆಸರಿನೊಳಗೆ ಸ್ಪೇಸ್ ಸೇರಿಸಿರುವುದು ಅಥವಾ O ಅಕ್ಷರದ ಬದಲಿಗೆ ಸೊನ್ನೆಯನ್ನು ಮಾತ್ರ ಸೇರಿಸಿರುವುದು, ಇಂತಹ ವ್ಯತ್ಯಾಸಗಳು ಮಾತ್ರ ಇರುವುದು.
  • ಬೇರೊಬ್ಬರ ನಿಜವಾದ ಹೆಸರು, ಬಳಕೆದಾರರು ಹೆಸರು, ಚಿತ್ರ, ಬ್ರ್ಯಾಂಡ್, ಲೋಗೋ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು, ನೀವೇ ಆ ವ್ಯಕ್ತಿ ಎಂದು ಜನರನ್ನು ವಂಚಿಸುವುದು. 
  • ಅದೇ ಗುರುತಿಸುವಿಕೆ (ಚಾನೆಲ್ ಹೆಸರು ಅಥವಾ ಹ್ಯಾಂಡಲ್) ಮತ್ತು ವ್ಯಕ್ತಿಯ ಚಿತ್ರವನ್ನು ಬಳಸಿಕೊಂಡು ಚಾನಲ್ ಅನ್ನು ಸೆಟ್ ಮಾಡುವುದು ಮತ್ತು ನಂತರ ಆ ವ್ಯಕ್ತಿಯು ಚಾನಲ್‌ಗೆ ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವ ಹಾಗೆ ನಟಿಸುವುದು.
  • ಒಬ್ಬ ವ್ಯಕ್ತಿಯ ಹೆಸರು ಮತ್ತು ಚಿತ್ರವನ್ನು ಬಳಸಿಕೊಂಡು ಒಂದು ಚಾನಲ್ ಅನ್ನು ಸೆಟ್-ಅಪ್ ಮಾಡುವುದು, ಮತ್ತು ನಂತರ ಆ ವ್ಯಕ್ತಿಯೇ ಪೋಸ್ಟ್ ಮಾಡುತ್ತಿರುವ ಹಾಗೆ ಬೇರೆ ಚಾನಲ್‌ಗಳಲ್ಲಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವುದು.
  • ಚಾನೆಲ್ ವಿವರಣೆಯಲ್ಲಿ 'ಅಭಿಮಾನಿ ಖಾತೆ' ಎಂದು ಹೇಳಿಕೊಳ್ಳುವ ಚಾನಲ್‌ಗಳು, ಆದರೆ ಚಾನಲ್ ಹೆಸರು ಅಥವಾ ಹ್ಯಾಂಡಲ್‌ನಲ್ಲಿ ಈ ಕುರಿತಾಗಿ ಅಷ್ಟು ಸ್ಪಷ್ಟವಾಗಿ ಹೇಳುತ್ತಿಲ್ಲ ಅಥವಾ ಇನ್ನೊಬ್ಬರ ಚಾನಲ್‌ನ ಹಾಗೆ ತೋರಿಸಿಕೊಳ್ಳುವುದು ಮತ್ತು ಅವರ ಕಂಟೆಂಟ್ ಅನ್ನು ಮರುಅಪ್‌ಲೋಡ್ ಮಾಡುವುದು.
  • ಅಸ್ತಿತ್ವದಲ್ಲಿರುವ ಸುದ್ದಿ ಚಾನಲ್‌ನ ಹಾಗೆ ಸೋಗು ಹಾಕುವ ಚಾನಲ್‍ಗಳು.

ನೆನಪಿಡಿ, ಇವುಗಳು ಕೇವಲ ಕೆಲವು ಉದಾಹರಣೆಗಳಾಗಿವೆ, ಮತ್ತು ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14093370413193671041
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false