Content ID ಕ್ಲೇಮ್ ವಿರುದ್ಧ ವಿವಾದ ಸಲ್ಲಿಸಿ

ನಿಮ್ಮ ವೀಡಿಯೊ Content ID ಕ್ಲೇಮ್ ಅನ್ನು ಪಡೆದಿದ್ದರೆ, ಈ ಕೆಳಗಿನ ರೀತಿಯ ಮಾನ್ಯ ಕಾರಣವಿದ್ದರೆ ನೀವು ಕ್ಲೇಮ್ ವಿರುದ್ಧ ವಿವಾದ ಸಲ್ಲಿಸಬಹುದು:

  • ನಿಮ್ಮ ವೀಡಿಯೊದಲ್ಲಿರುವ ಕಂಟೆಂಟ್‌ಗಾಗಿ ನೀವು ಎಲ್ಲಾ ಅಗತ್ಯ ಹಕ್ಕುಗಳನ್ನು ಹೊಂದಿರುವುದು.
  • ನ್ಯಾಯಯುತ ಬಳಕೆಯಂತಹ ಕೃತಿಸ್ವಾಮ್ಯ ವಿನಾಯಿತಿ ಎಂದು ಪರಿಗಣಿಸಲಾಗುವ ರೀತಿಯಲ್ಲಿ ಕಂಟೆಂಟ್‌ನ ಬಳಕೆ.
  • ನಿಮ್ಮ ವೀಡಿಯೊವನ್ನು ತಪ್ಪಾಗಿ ಗುರುತಿಸಲಾಗಿದೆ ಅಥವಾ ಒಂದು ತಪ್ಪು ನಡೆದಿದೆ ಎಂಬ ನಂಬಿಕೆ.
ಕೃತಿಸ್ವಾಮ್ಯ ಸ್ಟ್ರೈಕ್‌ಗಳು Content ID ಕ್ಲೇಮ್‌ಗಳಿಗಿಂತ ಭಿನ್ನವಾಗಿವೆ. ನಿಮ್ಮ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ದೊರೆತಿದ್ದರೆ, ಇನ್ನಷ್ಟು ತಿಳಿಯಲು ಕೃತಿಸ್ವಾಮ್ಯ ಸ್ಟ್ರೈಕ್ ಲೇಖನವನ್ನು ನೋಡಿ.

ನೀವು ಒಂದು Content ID ಕ್ಲೇಮ್ ವಿರುದ್ಧ ವಿವಾದ ಸಲ್ಲಿಸಿದರೆ, ನಿಮ್ಮ ವೀಡಿಯೊವನ್ನು ಕ್ಲೇಮ್ ಮಾಡಿದ ವ್ಯಕ್ತಿಗೆ (ಕ್ಲೇಮುದಾರ) ಸೂಚನೆ ನೀಡಲಾಗುತ್ತದೆ. ಕ್ಲೇಮುದಾರರಿಗೆ ಪ್ರತಿಕ್ರಿಯೆ ನೀಡಲು 30 ದಿನಗಳು ಇರುತ್ತವೆ.

ನೀವು ವಿವಾದ ಸಲ್ಲಿಸುವ ಮೊದಲು

ನೀವು ಒಂದು Content ID ಕ್ಲೇಮ್ ವಿರುದ್ಧ ವಿವಾದ ಸಲ್ಲಿಸುವ ಮೊದಲು ಸಾರ್ವಜನಿಕ ಡೊಮೇನ್ ಮತ್ತು ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರಗಳಂತಹ ಕೃತಿಸ್ವಾಮ್ಯ ವಿನಾಯಿತಿಗಳ ಕುರಿತು ತಿಳಿದುಕೊಳ್ಳಲು ಬಯಸಬಹುದು. ಆದರೆ ನೆನಪಿಡಿ, ಈ ಕೆಳಕಂಡ ಅಂಶಗಳು ಒಂದು ಕ್ಲೇಮ್‌ ವಿರುದ್ಧ ವಿವಾದ ಸಲ್ಲಿಸಲು ನ್ಯಾಯಯುತವಾದ ಕಾರಣಗಳಲ್ಲ:

ನೀವು ವಿವಾದವನ್ನು ಸಲ್ಲಿಸದಿದ್ದರೆ Content ID ಕ್ಲೇಮ್ ಅನ್ನು ಬಗೆಹರಿಸಲು ಇನ್ನೂ ಕೆಲ ವಿಧಾನಗಳಿವೆ, ಉದಾಹರಣೆಗೆ ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ವೀಡಿಯೊದಿಂದ ತೆಗೆದುಹಾಕುವುದು.

ಅಂತಿಮವಾಗಿ, ನೀವು ಕ್ಲೇಮ್‌ ವಿರುದ್ಧ ವಿವಾದ ಸಲ್ಲಿಸಬೇಕೇ ಎಂದು YouTube ನಿರ್ಧರಿಸಲು ಸಾಧ್ಯವಿಲ್ಲ. ಏನು ಮಾಡಬೇಕು ಎಂದು ನಿಮಗೆ ಸ್ಪಷ್ಟವಿಲ್ಲದಿದ್ದರೆ ವಿವಾದ ಸಲ್ಲಿಸುವ ಮೊದಲು ನೀವು ಕಾನೂನಾತ್ಮಕ ಸಲಹೆಯನ್ನು ಪಡೆಯಬಹುದು.

ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ಬಳಸಲು ಎಲ್ಲಾ ಅವಶ್ಯಕ ಹಕ್ಕುಗಳು ನಿಮಗೆ ಇವೆ ಎಂಬ ವಿಶ್ವಾಸ ನಿಮಗಿದ್ದರೆ ಮಾತ್ರ ನೀವು ಕ್ಲೇಮ್ ವಿರುದ್ಧ ವಿವಾದ ಸಲ್ಲಿಸಬೇಕು ಎಂಬುದನ್ನು ನೆನಪಿಡಿ. ವಿವಾದ ಸಲ್ಲಿಕೆ ಪ್ರಕ್ರಿಯೆಯ ಪುನರಾವರ್ತಿತ ಅಥವಾ ದುರುದ್ದೇಶಪ್ರೇರಿತ ದುರುಪಯೋಗವು ನಿಮ್ಮ ವೀಡಿಯೊ ಅಥವಾ ಚಾನಲ್‌ ವಿರುದ್ಧ ದಂಡನೆಗೆ ಕಾರಣವಾಗಬಹುದು.

ವಿವಾದವನ್ನು ಸಲ್ಲಿಸಿ

Content ID ಕ್ಲೇಮ್ ವಿರುದ್ಧ ವಿವಾದ ನಡೆಸಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ವೀಡಿಯೊಗಳು ಟ್ಯಾಬ್‌ನಲ್ಲಿ, ನೀವು ವಿವಾದ ನಡೆಸಲು ಬಯಸುವ ಕ್ಲೇಮ್‌ನೊಂದಿಗೆ ವೀಡಿಯೊವನ್ನು ಹುಡುಕಿ.
    • ವೀಡಿಯೊವನ್ನು ಇನ್ನಷ್ಟು ಸುಲಭವಾಗಿ ಹುಡುಕಲು, ನೀವು ಫಿಲ್ಟರ್ ಬಾರ್ ನಂತರ ಕೃತಿಸ್ವಾಮ್ಯಮೇಲೆ ಕ್ಲಿಕ್ ಮಾಡಿ.
  4. ನಿರ್ಬಂಧಗಳು ಎಂಬ ಕಾಲಮ್‌ನಲ್ಲಿ ಕೃತಿಸ್ವಾಮ್ಯ ಎಂಬುದರ ಮೇಲೆ ಹೋವರ್ ಮಾಡಿ.
  5. ವಿವರಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.
  6. ಈ ವೀಡಿಯೊದ ವಿಭಾಗದಲ್ಲಿ ಗುರುತಿಸಲಾದ ಕಂಟೆಂಟ್ ಅಡಿಯಲ್ಲಿ, ಸೂಕ್ತವಾದ ಕ್ಲೇಮ್ ಅನ್ನು ಹುಡುಕಿ ಮತ್ತು ಆ್ಯಕ್ಷನ್‌ಗಳನ್ನು ಆಯ್ಕೆಮಾಡಿ ನಂತರವಿವಾದ ಎಂಬುದನ್ನು ಕ್ಲಿಕ್ ಮಾಡಿ.
ಗಮನಿಸಿ: ನಿಮ್ಮ ವೀಡಿಯೊವನ್ನು ನಿರ್ಬಂಧಿಸುವ Content ID ಕ್ಲೇಮ್‌ಗಳಿಗಾಗಿ, ನಿಮಗೆ ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆ ಇರಬಹುದು. ಈ ಆಯ್ಕೆಯು ಆರಂಭಿಕ ವಿವಾದದ ಹೆಜ್ಜೆಯನ್ನು ಸ್ಕಿಪ್ ಮಾಡಿ, ವಿವಾದ ಸಲ್ಲಿಕೆ ಪ್ರಕ್ರಿಯೆಯನ್ನು ಒಂದು ಮೇಲ್ಮನವಿಯಿಂದ ಪ್ರಾರಂಭಿಸುತ್ತದೆ. ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆಯ ಬಗ್ಗೆ ಇನ್ನಷ್ಟು ತಿಳಿಯಿರಿ.

ನೀವು ವಿವಾದ ಸಲ್ಲಿಸಿದ ನಂತರ

ನೀವು ವಿವಾದವನ್ನು ಸಲ್ಲಿಸಿದ ನಂತರ ನಿಮ್ಮ ವೀಡಿಯೊವನ್ನು ಕ್ಲೇಮ್ ಮಾಡಿದ ವ್ಯಕ್ತಿಗೆ (ಕ್ಲೇಮುದಾರ) ಪ್ರತಿಕ್ರಿಯೆ ನೀಡಲು 30 ದಿನಗಳು ಇರುತ್ತವೆ.

ಕ್ಲೇಮುದಾರರು ಏನನ್ನು ಮಾಡಬಹುದು
  • ಕ್ಲೇಮ್‌ ಅನ್ನು ಬಿಡುಗಡೆ ಮಾಡುವುದು: ಕ್ಲೇಮುದಾರರು ನಿಮ್ಮ ವಿವಾದವನ್ನು ಒಪ್ಪಿಕೊಂಡರೆ, ಅವರು ತಮ್ಮ ಕ್ಲೇಮ್‌ ಅನ್ನು ಬಿಡುಗಡೆ ಮಾಡಬಹುದು. ಈ ಹಿಂದೆ ನೀವು ವೀಡಿಯೊವನ್ನು ಮಾನಿಟೈಸ್ ಮಾಡುತ್ತಿದ್ದರೆ, ನಿಮ್ಮ ವೀಡಿಯೊ ಮೇಲಿನ ಎಲ್ಲಾ ಕ್ಲೇಮ್‌ಗಳು ಬಿಡುಗಡೆಯಾದ ನಂತರ ನಿಮ್ಮ ಮಾನಿಟೈಸೇಶನ್ ಸೆಟ್ಟಿಂಗ್‌ಗಳು ಸ್ವಯಂಚಾಲಿತವಾಗಿ ಮರುಸ್ಥಾಪನೆಗೊಳ್ಳುತ್ತವೆ. Content ID ವಿವಾದಗಳ ಸಂದರ್ಭಗಳಲ್ಲಿ ಮಾನಿಟೈಸೇಶನ್ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.
  • ಕ್ಲೇಮ್‌ ಅನ್ನು ಮರುಸ್ಥಾಪಿಸುವುದು: ಕ್ಲೇಮುದಾರರು ತಮ್ಮ ಕ್ಲೇಮ್‌ ಇನ್ನೂ ಮಾನ್ಯವಾಗಿದೆ ಎಂದು ನಂಬಿದರೆ, ಅವರು ಅದನ್ನು ಮರುಸ್ಥಾಪಿಸಬಹುದು. ಇದರರ್ಥ ನಿಮ್ಮ ವಿವಾದವು ತಿರಸ್ಕೃತವಾಗಿದ್ದು ವೀಡಿಯೊದ ಮೇಲಿನ ಕ್ಲೇಮ್ ಹಾಗೇ ಉಳಿಯುತ್ತದೆ ಎಂದಾಗಿದೆ. ನೀವು ಈ ನಿರ್ಧಾರದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅರ್ಹರಾಗಿರಬಹುದು.
  • ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸುವುದು: ಕ್ಲೇಮುದಾರರು ತಮ್ಮ ಕ್ಲೇಮ್‌ ಇನ್ನೂ ಮಾನ್ಯವಾಗಿದೆ ಎಂದು ನಂಬಿದರೆ, ಅವರು ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲು ವಿನಂತಿಯನ್ನು ಸಲ್ಲಿಸಬಹುದು. ಈ ತೆಗೆದುಹಾಕುವಿಕೆ ವಿನಂತಿಯು ಮಾನ್ಯವಾಗಿದ್ದರೆ, ನಿಮ್ಮ ವೀಡಿಯೊವನ್ನು YouTube ನಿಂದ ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ದೊರೆಯುತ್ತದೆ. ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಬಗೆಹರಿಸುವ ಆಯ್ಕೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
  • ಕ್ಲೇಮ್‌ನ ಅವಧಿ ಮುಗಿಯಲು ಬಿಡುವುದು: ಕ್ಲೇಮುದಾರರು 30 ದಿನಗಳೊಳಗೆ ಪ್ರತಿಕ್ರಿಯಿಸದಿದ್ದರೆ, ನಿಮ್ಮ ವೀಡಿಯೊದ ಮೇಲಿರುವ ಕ್ಲೇಮ್‌ನ ಅವಧಿ ಮುಗಿಯುತ್ತದೆ ಮತ್ತು ಅದು ನಿಮ್ಮ ವೀಡಿಯೊದಿಂದ ಬಿಡುಗಡೆಗೊಳ್ಳುತ್ತದೆ.

 

ಈ ವೀಡಿಯೊದ "Content ID ಗಾಗಿ ವಿವಾದ ಸಲ್ಲಿಕೆ ಪ್ರಕ್ರಿಯೆ" ಚಾಪ್ಟರ್‌ನಲ್ಲಿ ವಿವಾದ ಸಲ್ಲಿಕೆ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿಯಿರಿ:

Content ID ಕ್ಲೇಮ್‌ಗಳು ಮತ್ತು ವಿವಾದ ಸಲ್ಲಿಕೆ ಪ್ರಕ್ರಿಯೆ: Studio ದಲ್ಲಿ ಕ್ಲೇಮ್‌ಗಳನ್ನು ನಿರ್ವಹಿಸಿ ಮತ್ತು ಕ್ರಮ ತೆಗೆದುಕೊಳ್ಳಿ

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ ಗಳು)

ನನ್ನ ವಿವಾದ ತಿರಸ್ಕೃತವಾದರೆ ಏನಾಗುತ್ತದೆ?
ನಿಮ್ಮ ವಿವಾದವು ತಿರಸ್ಕೃತವಾದರೆ, ನಿಮ್ಮ ವೀಡಿಯೊದ ಮೇಲೆ ಕ್ಲೇಮ್‌ ಉಳಿದುಕೊಳ್ಳುತ್ತದೆ. ಕ್ಲೇಮ್‌ ಅಮಾನ್ಯವಾಗಿದೆ ಎಂದು ನಿಮಗೆ ಇನ್ನೂ ವಿಶ್ವಾಸವಿದ್ದರೆ, ನೀವು ನಿರ್ಧಾರದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅರ್ಹರಾಗಿರಬಹುದು. Content ID ಕ್ಲೇಮ್‌ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಇನ್ನಷ್ಟು ತಿಳಿಯಿರಿ.
ವಿವಾದ ಸಲ್ಲಿಕೆ ಪ್ರಕ್ರಿಯೆಯ ಯಾವುದೇ ಸಮಯದಲ್ಲಿ ಕ್ಲೇಮುದಾರರು ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲು ವಿನಂತಿಯನ್ನು ಸಲ್ಲಿಸಬಹುದು ಎಂಬುದನ್ನು ನೆನಪಿನಲ್ಲಿಡಿ. ಇದು ಸಂಭವಿಸಿ, ತೆಗೆದುಹಾಕುವಿಕೆ ವಿನಂತಿಯು ಮಾನ್ಯವಾಗಿದ್ದರೆ, ನಿಮ್ಮ ವೀಡಿಯೊವನ್ನು YouTube ನಿಂದ ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ದೊರೆಯುತ್ತದೆ.
ಆರಂಭಿಕ ವಿವಾದ ಮತ್ತು ಮೇಲ್ಮನವಿ ಎರಡನ್ನೂ ಕ್ಲೇಮುದಾರರು ಏಕೆ ಪರಿಶೀಲಿಸುತ್ತಾರೆ?

ಮಾಲೀಕತ್ವದ ಕುರಿತು ನಿರ್ಧಾರ ತೆಗೆದುಕೊಳ್ಳಲು YouTube ಗೆ ಸಾಧ್ಯವಿಲ್ಲದಿರುವುದರಿಂದ ಆರಂಭಿಕ ವಿವಾದ ಮತ್ತು ಮೇಲ್ಮನವಿ ಎರಡನ್ನೂ ಕ್ಲೇಮುದಾರರು ಪರಿಶೀಲಿಸುತ್ತಾರೆ. ಯಾವ ಕಂಟೆಂಟ್ ಸರಿಯಾದ ಪರವಾನಗಿ ಪಡೆದಿದೆ ಎಂದು YouTube ಗೆ ತಿಳಿದಿರುವುದಿಲ್ಲ ಹಾಗೂ ಕೃತಿಸ್ವಾಮ್ಯಕ್ಕೆ ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ವಿನಾಯಿತಿಗಳಿಗೆ ಯಾವುದು ಅರ್ಹತೆಯನ್ನು ಹೊಂದಿರುತ್ತದೆ ಎಂದು ಅದಕ್ಕೆ ನಿರ್ಧರಿಸಲು ಸಾಧ್ಯವಿಲ್ಲ.

ಮೇಲ್ಮನವಿ ಹಂತವು ಕ್ಲೇಮುದಾರರು ಇನ್ನಷ್ಟು ಕೂಲಂಕಷವಾದ ಪರಿಶೀಲನೆ ಮಾಡುವುದನ್ನು ಖಚಿತಪಡಿಸುತ್ತದೆ ಏಕೆಂದರೆ, ಅವರು ತಮ್ಮ ಕ್ಲೇಮ್‌ ಅನ್ನು ಮರುಸ್ಥಾಪಿಸುವ ಆಯ್ಕೆಯನ್ನು ಮಾಡಿದರೆ ವೀಡಿಯೊದ ತೆಗೆದುಹಾಕುವಿಕೆಯನ್ನು ಉಳಿಸಿಕೊಳ್ಳಲು ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲು ವಿನಂತಿಯನ್ನು  (ಕಾನೂನು ಪ್ರಕ್ರಿಯೆ) ಸಲ್ಲಿಸಬೇಕಾಗುತ್ತದೆ. ಇದರ ನಂತರ, ನೀವು ಒಂದು ಪ್ರತಿವಾದಿ ನೋಟಿಫಿಕೇಶನ್‌ ಅನ್ನು ಸಲ್ಲಿಸಲು ನಿರ್ಧರಿಸಿದರೆ, ನಿಮ್ಮ ವೀಡಿಯೊದ ತೆಗೆದುಹಾಕುವಿಕೆಯನ್ನು ಉಳಿಸಿಕೊಳ್ಳಲು ಕ್ಲೇಮುದಾರರು ಮೊಕದ್ದಮೆಯನ್ನು ದಾಖಲಿಸಬೇಕಾಗುತ್ತದೆ.

ವಿವಾದ ಮತ್ತು ಮೇಲ್ಮನವಿ ಮಾಡಲು ಎಸ್ಕಲೇಟ್ ಆಯ್ಕೆಗಳ ನಡುವಿನ ವ್ಯತ್ಯಾಸವೇನು?

ಕ್ಲೇಮುದಾರರು ವಿವಾದಕ್ಕೆ ಪ್ರತಿಕ್ರಿಯಿಸಲು ಆರಂಭಿಕ ವಿವಾದದ ಆಯ್ಕೆಯು30 ದಿನಗಳವರೆಗೆತೆಗೆದುಕೊಳ್ಳಬಹುದು. ಅವರು ನಿಮ್ಮ ವಿವಾದವನ್ನು ತಿರಸ್ಕರಿಸಿದರೆ, ನೀವು ಆ ನಿರ್ಧಾರಕ್ಕಾಗಿ ಮೇಲ್ಮನವಿಯನ್ನು ಸಲ್ಲಿಸಬಹುದು. ತದನಂತರ ಮನವಿಗೆ ಪ್ರತಿಕ್ರಿಯಿಸಲು ಕ್ಲೇಮುದಾರರಿಗೆ 7 ದಿನಗಳ ಕಾಲಾವಕಾಶವಿದೆ.

ಮೇಲ್ಮನವಿಗಾಗಿ ಎಸ್ಕಲೇಟ್ ಮಾಡುವ ಆಯ್ಕೆಯು ನಿಮ್ಮ ವೀಡಿಯೊವನ್ನು ನಿರ್ಬಂಧಿಸುವ Content ID ಕ್ಲೈಮ್‌ಗಳಿಗೆ ಮಾತ್ರ ಲಭ್ಯವಿದೆ. ಈ ಆಯ್ಕೆಯು ವಿವಾದದ ಆರಂಭಿಕ ಹಂತವನ್ನು ಸ್ಕಿಪ್ ಮಾಡುತ್ತದೆ, ಇದು ಕ್ಲೇಮುದಾರರಿಗೆ ಪ್ರತಿಕ್ರಿಯಿಸಲು 30 ದಿನಗಳನ್ನು ನೀಡುತ್ತದೆ ಮತ್ತು ಪ್ರಕ್ರಿಯೆಯನ್ನು ಮೇಲ್ಮನವಿಯೊಂದಿಗೆ ಪ್ರಾರಂಭಿಸುತ್ತದೆ. ನಂತರ, ಪ್ರಕ್ರಿಯೆಯನ್ನು ಶೀಘ್ರವಾಗಿ ಬಗೆಹರಿಸುವುದಕ್ಕಾಗಿ, ಕ್ಲೇಮುದಾರರಿಗೆ ಪ್ರತಿಕ್ರಿಯಿಸಲು 7 ದಿನಗಳು ದೊರೆಯುತ್ತವೆ.

ಕ್ಲೇಮುದಾರರು ನಿಮ್ಮ ಮನವಿಯನ್ನು ತಿರಸ್ಕರಿಸಿದರೆ, ಅವರು ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲು ವಿನಂತಿಯನ್ನು ಸಲ್ಲಿಸಬಹುದು. ತೆಗೆದುಹಾಕುವಿಕೆ ವಿನಂತಿಯು ಮಾನ್ಯವಾಗಿದ್ದರೆ, ನಿಮ್ಮ ವೀಡಿಯೊವನ್ನು YouTube ನಿಂದ ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಚಾನಲ್ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆಯುತ್ತದೆ. ತೆಗೆದುಹಾಕುವಿಕೆ ವಿನಂತಿಯು ಅಮಾನ್ಯವಾಗಿದೆ ಎಂದು ನಿಮಗೆ ವಿಶ್ವಾಸವಿದ್ದರೆ, ನೀವು ಈಗಲೂ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

ಒಂದು ವೀಡಿಯೊ ಅದರ ವಿರುದ್ಧ ಒಂದಕ್ಕಿಂತ ಹೆಚ್ಚಿನ Content ID ಕ್ಲೇಮ್‌ಗಳನ್ನು ಹೊಂದಬಹುದೇ?
ಹೌದು, ಒಂದು ವೀಡಿಯೊ ಅದರ ಮೇಲೆ ಒಂದಕ್ಕಿಂತ ಹೆಚ್ಚಿನ Content ID ಕ್ಲೇಮ್‌ಗಳನ್ನು ಹೊಂದಿರಲು ಸಾಧ್ಯವಿದೆ. ಒಂದು ವೀಡಿಯೊ ಅದರ ಮೇಲೆ ಒಂದಕ್ಕಿಂತ ಹೆಚ್ಚು ತೆಗೆದುಹಾಕುವಿಕೆ ವಿನಂತಿಗಳನ್ನು ಹೊಂದಿರುವುದು ಕೂಡ ಸಾಧ್ಯವಿದೆ, ಆದರೆ ಒಂದು ಸಮಯದಲ್ಲಿ ಅದು ಕೇವಲ ಒಂದು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಹೊಂದಿರಲು ಸಾಧ್ಯ ಎಂಬುದನ್ನು ಗಮನಿಸಿ.
ನಾನು Content ID ಕ್ಲೇಮ್ ವಿರುದ್ಧ ವಿವಾದ ಸಲ್ಲಿಸದಿದ್ದರೆ, ಅದನ್ನು ಹೇಗೆ ಬಗೆಹರಿಸಬಹುದು?
ನೀವು ವಿವಾದ ಸಲ್ಲಿಸದಿರುವ ಆಯ್ಕೆಯನ್ನು ಮಾಡಿದರೆ, Content ID ಕ್ಲೇಮ್ ಅನ್ನು ಬಗೆಹರಿಸಲು ಇತರ ವಿಧಾನಗಳಿವೆ, ಉದಾಹರಣೆಗೆ ನಿಮ್ಮ ವೀಡಿಯೊದಿಂದ ಕ್ಲೇಮ್‌ ಮಾಡಲಾದ ಕಂಟೆಂಟ್ ಅನ್ನು ತೆಗೆದುಹಾಕುವುದು.
ಒಮ್ಮೆ ಸಲ್ಲಿಸಿದ ನಂತರ ನಾನು ವಿವಾದವನ್ನು ರದ್ದುಮಾಡಬಹುದೇ?
ಇಲ್ಲ, ವಿವಾದವನ್ನು ಒಮ್ಮೆ ಸಲ್ಲಿಸಲಾದ ನಂತರ, ಅದನ್ನು ರದ್ದುಮಾಡಲು ಸಾಧ್ಯವಿಲ್ಲ.

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7446118355368258788
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false