YouTube ರಚನೆಕಾರರಿಗೆ ಮಲ್ಟಿ-ಚಾನಲ್‌ ನೆಟ್‌ವರ್ಕ್‌ (MCN) ಅವಲೋಕನ

ಮಲ್ಟಿ-ಚಾನಲ್‌ ನೆಟ್‌ವರ್ಕ್‌ಗಳು (“MCNಗಳು” ಅಥವಾ “ನೆಟ್‌ವರ್ಕ್‌ಗಳು”) ಮೂರನೇ ವ್ಯಕ್ತಿ ಸೇವಾ ಪೂರೈಕೆದಾರರಾಗಿದ್ದು, ಪ್ರೇಕ್ಷಕರ ಅಭಿವೃದ್ಧಿ, ಕಂಟೆಂಟ್‌ ಪ್ರೋಗ್ರಾಮಿಂಗ್, ರಚನೆಕಾರರ ಸಹಯೋಗಗಳು, ಡಿಜಿಟಲ್ ಹಕ್ಕುಗಳ ನಿರ್ವಹಣೆ, ಮಾನಿಟೈಸೇಶನ್‌, ಮತ್ತು / ಅಥವಾ ಮಾರಾಟವನ್ನು ಒಳಗೊಂಡಿರುವ ಸೇವೆಗಳನ್ನು ಒದಗಿಸಲು ಅನೇಕ YouTube ಚಾನಲ್‌ಗಳೊಂದಿಗೆ ಸಂಯೋಜಿಸುತ್ತವೆ. 

MCN ನ ಭಾಗವಾಗಿರುವ ಎಲ್ಲಾ ಚಾನಲ್‌ಗಳು ತಮ್ಮ ಚಾನಲ್ ಅನ್ನು ಪರಿಶೀಲಿಸಬೇಕು ಹಾಗೂ YouTube ಮಾನಿಟೈಸೇಶನ್‌ ನೀತಿಗಳನ್ನು ಅನುಸರಿಸಬೇಕು.

ಅಫಿಲಿಯೇಟ್‌ ಮತ್ತು ಪಡೆದುಕೊಂಡಿರುವ ಮತ್ತು ನಿರ್ವಹಿಸುವ ಚಾನಲ್‌ಗಳು

MCNಗಳು ಅವುಗಳ YouTube ನೆಟ್‌ವರ್ಕ್‌ ಅಡಿಯಲ್ಲಿ ಎರಡು ಭಿನ್ನ ಪ್ರಕಾರಗಳ ಚಾನಲ್‌ಗಳನ್ನು ಹೊಂದಬಹುದು:

  • ಅಫಿಲಿಯೇಟ್‌ ಚಾನಲ್‌ಗಳನ್ನು ಅವುಗಳ MCN ಬೃಹತ್‌ ಪ್ರಮಾಣದಲ್ಲಿ ನಿರ್ವಹಿಸುತ್ತದೆ ಮತ್ತು ಅಫಿಲಿಯೇಟ್‌ ಕಂಟೆಂಟ್‌ ಮಾಲೀಕರಲ್ಲಿ ಉಳಿಯುತ್ತವೆ.
  • ಪಡೆದುಕೊಂಡಿರುವ ಮತ್ತು ನಿರ್ವಹಿಸುವ (O&O) ಚಾನಲ್‌ಗಳನ್ನು ಪಾಲುದಾರರು ಮಾಲೀಕತ್ವ ವಹಿಸಿಕೊಂಡು ನಿರ್ವಹಿಸುತ್ತಾರೆ. ಇದರರ್ಥ ಪಾಲುದಾರರು ಚಾನಲ್‌ನ YouTube ಕಂಟೆಂಟ್‌ ಮೇಲೆ ವಿಶೇಷ ಹಕ್ಕುಗಳನ್ನು ಪಡೆದಿದ್ದಾರೆ ಹಾಗೂ ಪ್ರತಿದಿನದ ಆಧಾರದ ಮೇಲೆ ಚಾನೆಲ್‌ನ ಕಾರ್ಯಾಚರಣೆಯನ್ನು (ಉದಾ. ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು) ಸಕ್ರಿಯವಾಗಿ ನಿರ್ವಹಿಸುತ್ತಾರೆ. O&O ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದ ಕಂಟೆಂಟ್‌ಗೆ ಪಾಲುದಾರರು ಪೂರ್ಣ ಶಾಶ್ವತವಲ್ಲದ, ವಿಶ್ವದಾದ್ಯಂತ ಪ್ರತ್ಯೇಕತೆ ಹೊಂದಿರುವ ಮಟ್ಟಿಗೆ, ಪ್ಲಾಟ್‌ಫಾರಂನಲ್ಲಿ ಕಂಟೆಂಟ್‌ನ ಲಭ್ಯತೆಯನ್ನು ನಿರ್ವಹಿಸಲು ಸೂಕ್ತ ಫೀಚರ್‌ಗಳನ್ನು ಬಳಸುವುದು ಪಾಲುದಾರರ ಜವಾಬ್ದಾರಿಯಾಗಿದೆ.

ಈ ಎರಡು ರೀತಿಯ ಚಾನೆಲ್‌ಗಳ ನಡುವೆ ಭಿನ್ನತೆ ರೂಪಿಸುವುದು YouTube ಗೆ ತಮ್ಮ ಕಾರ್ಯನೀತಿಗಳು ಮತ್ತು ಚಾನಲ್‌ ಫೀಚರ್‌ಗಳನ್ನು ಸ್ಪಷ್ಟತೆ ಮತ್ತು ನ್ಯಾಯೋಚಿತವಾಗಿ ಅನ್ವಯಿಸಲು ಅನುವು ಮಾಡಿಕೊಡುತ್ತದೆ.

MCN ಗಳು ಮತ್ತು ಇತರ ಮೂರನೇ ವ್ಯಕ್ತಿ ಸೇವಾ ಪೂರೈಕೆದಾರರನ್ನು YouTube ಅಥವಾ Google ಅನುಮೋದಿಸುವುದಿಲ್ಲ, ಆದರೆ ನೀವು YouTube ಪ್ರಮಾಣೀಕೃತ ಸೇವಾ ಪೂರೈಕೆದಾರರ ಪಟ್ಟಿಯನ್ನು ರಚನೆಕಾರರ ಸೇವಾ ಸೂಚಿಕೆಯಲ್ಲಿ ವೀಕ್ಷಿಸಬಹುದು.

MCN ಪಾಲುದಾರರಾಗಲು ಆಸಕ್ತಿ ಇದೆಯೇ? ಎಂಟರ್‌ಪ್ರೈಸ್‌ ಇನ್‌ಟೇಕ್‌ ಫಾರ್ಮ್‌ ಭರ್ತಿ ಮಾಡಿ, ನಾವು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತೇವೆ!

MCN ಗಳೊಂದಿಗೆ ಕೆಲಸ ಮಾಡುವ ಪ್ರಮುಖ ಅಂಶಗಳು

MCN ಸೇರುವುದು ಯಾವುದೇ YouTube ರಚನೆಕಾರರಿಗೆ ಪ್ರಮುಖ ಆಯ್ಕೆಯಾಗಿದೆ. ನಿಮ್ಮ ಪಾವತಿಗೆ ಪ್ರತಿಯಾಗಿ MCN ಯಾವ ಸೇವೆಗಳನ್ನು ಮತ್ತು/ಅಥವಾ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಪಾವತಿಗಳನ್ನು ಯಾವಾಗ ನೀಡಲಾಗುತ್ತದೆ ಮತ್ತು ನಿಮ್ಮ MCN ನಿಮಗೆ ಸಮಯಕ್ಕೆ ಸರಿಯಾಗಿ ಪಾವತಿಸಲು ವಿಫಲವಾದರೆ ಅಥವಾ ನಿಮಗೆ ನೀಡಬೇಕಾದ ಹಣವನ್ನು ಪಾವತಿಸಲು ವಿಫಲವಾದರೆ ನೀವು ಯಾವ ರೀತಿಯ ರಕ್ಷಣೆಗಳನ್ನು ಹೊಂದಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎನ್ನುವ ಕುರಿತು ನೀವು ಖಚಿತಪಡಿಸಿಕೊಳ್ಳಬೇಕು. ಕೆಲವು ರಚನೆಕಾರರು MCN ನೊಂದಿಗೆ ಪಾಲುದಾರರಾಗಲು ಆಯ್ಕೆ ಮಾಡಬಹುದಾದರೂ, YouTube ನಲ್ಲಿ ಯಶಸ್ವಿಯಾಗಲು ನೀವು MCN ಗೆ ಸೇರುವ ಅಗತ್ಯವಿಲ್ಲ.

ಎಲ್ಲಾ ರಚನೆಕಾರರಿಗೆ YouTube ಸಂಪನ್ಮೂಲಗಳು

YouTube ರಚನೆಕಾರರಾಗಿ ಸಹಾಯ ಪಡೆಯುವುದು ಹೇಗೆ ಎಂದು ನಿಮಗೆ ತಿಳಿದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಹಾಗೂ ನೀವು MCN ನಲ್ಲಿದ್ದರೂ ಇಲ್ಲದಿದ್ದರೂ ನಿಮಗೆ ಲಭ್ಯವಿರುವ YouTube ನ ಬೆಂಬಲದ ಆಯ್ಕೆಗಳನ್ನು ಬಳಸಿ.

ರಚನೆಕಾರರಿಗಾಗಿ YouTube ಉತ್ತಮ ವೀಡಿಯೊಗಳನ್ನು ರಚಿಸಲು ನಿಮಗೆ ಸಹಾಯ ಮಾಡುವ ಎಲ್ಲಾ ಪ್ರೋಗ್ರಾಂಗಳು, ಟೂಲ್‌ಗಳು ಮತ್ತು ಮುಂಬರುವ ಈವೆಂಟ್‌ಗಳ ಕುರಿತು ತಿಳಿದುಕೊಳ್ಳಲು ಉತ್ತಮ ಸ್ಥಳವಾಗಿದೆ. ರಚನೆಕಾರರಿಗಾಗಿ YouTube ಪ್ರಯೋಜನಗಳ ಪ್ರೋಗ್ರಾಂನ ಮೂಲಕ ನಿಮ್ಮ ಚಾನಲ್ ಅನ್ನು ಅಭಿವೃದ್ಧಿಪಡಿಸಲು ಸಹ ನೀವು ಸಹಾಯ ಪಡೆಯಬಹುದು.

MCN ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದು

MCN ಒಪ್ಪಂದಗಳು ಕಾನೂನುಬದ್ಧವಾಗಿವೆ, ಆದ್ದರಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ನೀವು ನಿಮ್ಮ ಸ್ವಂತ ಲೀಗಲ್ ಕೌನ್ಸಿಲ್ ಅನ್ನು ಸಹ ಸಂಪರ್ಕಿಸಬಹುದು.

ನೀವು MCNಗೆ ಸೇರುವ ಮೊದಲು, ನಿಮ್ಮ ಒಪ್ಪಂದವನ್ನು ಓದಿ ಹಾಗೂ ಕನಿಷ್ಠ ಈ ಕೆಳಗಿನ ಅಂಶಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ:

  • ನೆಟ್‌ವರ್ಕ್‌ ವಿಧಿಸುವ ಶುಲ್ಕಗಳು
  • ನಿಮ್ಮ ಚಾನಲ್‌ಗೆ ನೀಡಲಾಗುವ ನಿರ್ದಿಷ್ಟ ಸೇವೆಗಳು ಮತ್ತು ಬೆಂಬಲದ ಮಟ್ಟ
  • ನೆಟ್‌ವರ್ಕ್‌ಗೆ ನಿಮ್ಮ ಹೊಣೆಗಾರಿಕೆಗಳು
  • ನಿಮ್ಮ ಒಪ್ಪಂದದ ಅವಧಿ
  • ನಿಮ್ಮ ಒಪ್ಪಂದವನ್ನು ಕೊನೆಗೊಳಿಸುವುದು ಹೇಗೆ
ಆದಾಯ ಮತ್ತು ಪಾವತಿಯನ್ನು ಪಡೆಯುವುದು

ನೀವು MCNಗೆ ಸೇರಿದಾಗ, ನಿಮ್ಮ ಎಲ್ಲಾ ಆದಾಯವು ನಿಮ್ಮ MCNನ YouTube ಗಾಗಿ AdSense ಖಾತೆಯ ಮೂಲಕ ಬರುತ್ತದೆ, ಹಾಗೂ ನಿಮ್ಮ MCN ನಿಮ್ಮ YouTube Analytics ಆದಾಯ ಡೇಟಾಕ್ಕೆ ಆ್ಯಕ್ಸೆಸ್ ಹೊಂದಿರುತ್ತದೆ.

MCNಗೆ ಸೇರುವುದರಿಂದ YouTube ನೊಂದಿಗೆ ನಿಮ್ಮ ಆದಾಯ ಹಂಚಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇದನ್ನು ನಿಮ್ಮ ಸೇವಾ ನಿಯಮಗಳಲ್ಲಿ ವಿವರಿಸಲಾಗಿದೆ. MCNಗಳು ಸಾಮಾನ್ಯವಾಗಿ ಪಾವತಿಗೂ ಮೊದಲು ರಚನೆಕಾರರ ಭಾಗದಿಂದ ಶೇಕಡಾವಾರು ಆದಾಯವನ್ನು ತೆಗೆದುಕೊಳ್ಳುತ್ತವೆ.

ಕೆಲವು MCNಗಳು ಹೆಚ್ಚುವರಿ ಆದಾಯ ಗಳಿಕೆಯ ಅವಕಾಶಗಳನ್ನೂ ಒದಗಿಸುತ್ತವೆ. ಎಂದರೆ, ಬ್ರ್ಯಾಂಡ್ ಪ್ರಾಯೋಜಕತ್ವಗಳು ಅಥವಾ ನಿಮ್ಮ ಚಾನೆಲ್‌ನ ಒಟ್ಟಾರೆ ಗಳಿಕೆಯ ಹೆಚ್ಚಳಕ್ಕೂ ಕಾರಣವಾಗಬಹುದಾದ ಪ್ರತ್ಯೇಕ ಮಾರಾಟ ತಂಡಗಳನ್ನು ನೀಡುತ್ತವೆ. ಒಂದು ನೆಟ್‌ವರ್ಕ್‌ ನಿಮಗೆ ಈ ಸೇವೆಗಳನ್ನು ನೀಡಿದರೆ, ಅವುಗಳನ್ನು ನಿಮ್ಮ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಬಯಸಬಹುದು.

ಜಾಹೀರಾತುಗಳ ನಿರ್ಬಂಧ ಮತ್ತು ನಿಯಂತ್ರಣ

ಜಾಹೀರಾತುಗಳ ನಿಯಂತ್ರಣವನ್ನು ಮಿತವಾಗಿ ಬಳಸಬೇಕಾಗಿದ್ದರೂ, ಅಫಿಲಿಯೇಟ್‌ ರಚನೆಕಾರರು ತಮ್ಮ ಚಾನೆಲ್‌ಗೆ ಲಿಂಕ್ ಆಗಿರುವ YouTube ಗಾಗಿ AdSense ಖಾತೆಯಲ್ಲಿ ಇದನ್ನು ಮಾಡಬಹುದು. ಜಾಹೀರಾತುಗಳನ್ನು ಅನುಮತಿಸುವ ಮತ್ತು ನಿರ್ಬಂಧಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಸ್ಟ್ರೈಕ್‌ಗಳು & ತೆಗೆದುಹಾಕುವಿಕೆ

ನಿಮ್ಮ ಚಾನಲ್‌ನಲ್ಲಿ ಕೃತಿಸ್ವಾಮ್ಯ ಕ್ಲೇಮ್‌, ಸ್ಟ್ರೈಕ್‌ ಅಥವಾ ತೆಗೆದುಹಾಕುವಿಕೆಯ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಪರಿಹರಿಸಲು MCN ನಿಮಗೆ ಸಹಾಯ ಮಾಡಲು ಸಾಧ್ಯವಾಗಬಹುದಾದರೂ, MCN ಅವುಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. YouTubeನ ಸಮುದಾಯ ಮಾರ್ಗಸೂಚಿಗಳು ಅಥವಾ ಕೃತಿಸ್ವಾಮ್ಯಕ್ಕೆ ಸಂಬಂಧಿಸಿ ನೀತಿಗಳನ್ನು ಉಲ್ಲಂಘಿಸಿರುವ ಚಾನೆಲ್‌ಗಳು, ಅಂದರೆ ಅವರದಲ್ಲದ ಕಂಟೆಂಟ್‌ ಅನ್ನು ಅಪ್‌ಲೋಡ್‌ ಮಾಡುವುದು, ಅವರು MCNನ ಭಾಗವಾಗಿರಲಿ ಅಥವಾ ಇಲ್ಲದಿರಲಿ ಸ್ಟ್ರೈಕ್‌ಗಳು ಅಥವಾ ಇತರ ದಂಡಗಳಿಗೆ ಒಳಗಾಗುತ್ತಾರೆ.

ನಿಮ್ಮ ಚಾನಲ್‌ ಅನ್ನು ಸ್ಟ್ರೈಕ್‌ಗಳು ಮತ್ತು ತೆಗೆದುಹಾಕುವಿಕೆಗಳಿಂದ ಮುಕ್ತವಾಗಿಡುವುದು ಹೇಗೆ ಎಂಬುದರ ಬಗ್ಗೆ ನೀವು ನೀತಿ ಹಾಗೂ ಸುರಕ್ಷತೆ ಕೇಂದ್ರ ಮತ್ತು YouTube ಕೃತಿಸ್ವಾಮ್ಯ ಕೇಂದ್ರದಲ್ಲಿ ಕಲಿಯಬಹುದು.

MCN ಗೆ ನಿಮ್ಮ ಚಾನಲ್‌ನ ಆ್ಯಕ್ಸೆಸ್‌ ತೆಗೆದುಹಾಕಿ

ನೀವು ಅಫಿಲಿಯೇಟ್‌ ರಚನೆಕಾರರಾಗಿದ್ದರೆ ಮತ್ತು ನಿಮ್ಮ MCN ಜೊತೆಗಿನ ನಿಮ್ಮ ಒಪ್ಪಂದವು ಹಾಗೆ ಮಾಡಲು ನಿಮಗೆ ಅನುಮತಿಸುತ್ತದೆ ಎಂದು ನೀವು ನಂಬಿದ್ದರೆ, ನಿಮ್ಮ ಚಾನಲ್‌ನಿಂದ ನೀವು MCNಗೆ ಆ್ಯಕ್ಸೆಸ್‌ ತೆಗೆದುಹಾಕಲು ವಿನಂತಿ ಮಾಡಬಹುದು.

MCN ಗಳ ಉತ್ತಮ ಅಭ್ಯಾಸಗಳು

ಎಲ್ಲಾ MCNಗಳು YouTubeನ ಉತ್ತಮ ಅಭ್ಯಾಸಗಳನ್ನು ಅನುಸರಿಸುವ ಮೂಲಕ ತಮ್ಮ ರಚನೆಕಾರರಿಗೆ ಮೌಲ್ಯ ಒದಗಿಸುವ ಜವಾಬ್ದಾರಿಯನ್ನು ಹೊಂದಿವೆ, ಅವುಗಳೆಂದರೆ:

  • MCNಗೆ ಸೇರಲು ಚಾನೆಲ್‌ಗಳನ್ನು ಸೇರಿಸಿಕೊಳ್ಳಲು ಸ್ಪ್ಯಾಮಿ, ದಾರಿತಪ್ಪಿಸುವ ಭಾಷೆಯನ್ನು ಬಳಸದಿರುವುದು,
  • ಒದಗಿಸುವ ಸೇವೆಗಳು ಮತ್ತು ಬೆಂಬಲದ ಮಟ್ಟವನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ವಿವರಿಸುವುದು.
  • ಒದಗಿಸುವ ಸೇವೆಗಳು ಮತ್ತು ಒಪ್ಪಂದ ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವಹಿಸುವುದು.
  • ಅವರ ಒಪ್ಪಂದಗಳಿಗೆ ಅನುಗುಣವಾಗಿ ಚಾನೆಲ್‌ಗಳನ್ನು ಆನ್‌ಬೋರ್ಡಿಂಗ್‌ ಮತ್ತು ಬಿಡುಗಡೆ ಮಾಡುವುದು.

ಈ ಉತ್ತಮ ಅಭ್ಯಾಸಗಳಿಗೆ ಬದ್ಧವಾಗಿ MCN ನಡೆದಕೊಳ್ಳದಿದ್ದರೆ, ಅವರು ಖಾತೆ ಫೀಚರ್‌ಗಳು ಮತ್ತು ಮಾನಿಟೈಸೇಶನ್‌ ಕಳೆದುಕೊಳ್ಳಬಹುದು. YouTubeನ ನೀತಿಗಳನ್ನು MCN ಅನುಸರಿಸುತ್ತಿಲ್ಲ ಎಂದು ನೀವು ನಂಬಿದ್ದರೆ, ರಚನೆಕಾರರ ಬೆಂಬಲ ತಂಡವನ್ನು ಸಂಪರ್ಕಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12368346211812043292
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false