ನಿಮ್ಮ YouTube ಚಾನಲ್‌ನ ಸಾಮಾನ್ಯ ಮಾಹಿತಿಯನ್ನು ನಿರ್ವಹಿಸಿ

ಚಾನಲ್ ಹೆಸರು ಮತ್ತು ವಿವರಣೆ, ಅನುವಾದಗಳು ಮತ್ತು ಲಿಂಕ್‌ಗಳಂತಹ ನಿಮ್ಮ YouTube ಚಾನಲ್ ಕುರಿತಾದ ಬೇಸಿಕ್ ಮಾಹಿತಿಯನ್ನು ನೀವು ನಿರ್ವಹಿಸಬಹುದು.

ಹೆಸರು

ನಿಮ್ಮ YouTube ಚಾನಲ್‌ನ ಹೆಸರನ್ನು ನೀವು ಬದಲಾಯಿಸಬಹುದು, ಅದು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಹೆಸರನ್ನು ಬದಲಾಯಿಸಿದ ಬಳಿಕ, ಹೊಸ ಹೆಸರು ಅಪ್‌ಡೇಟ್ ಆಗಲು ಮತ್ತು YouTube ನಾದ್ಯಂತ ಕಾಣಿಸಿಕೊಳ್ಳಲು ಕೆಲವು ದಿನಗಳು ಬೇಕಾಗಬಹುದು. ನಿಮ್ಮ YouTube ಚಾನಲ್ ಹೆಸರು ಮತ್ತು ಚಿತ್ರವನ್ನು ನೀವು ಬದಲಾಯಿಸಿದರೆ, ಅದು YouTube ನಲ್ಲಿ ಮಾತ್ರ ಗೋಚರಿಸುತ್ತದೆ. ನಿಮ್ಮ Google ಖಾತೆಯ ಹೆಸರು ಮತ್ತು ಚಿತ್ರವನ್ನು ನೀವು ಇಲ್ಲಿ ಬದಲಾಯಿಸಬಹುದು (ನಿಮ್ಮ YouTube ಚಾನಲ್ ಹೆಸರಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ).

ಗಮನಿಸಿ: ನೀವು 14 ದಿನಗಳ ಅವಧಿಯಲ್ಲಿ ಎರಡು ಬಾರಿ ನಿಮ್ಮ ಚಾನಲ್‌ನ ಹೆಸರನ್ನು ಬದಲಾಯಿಸಬಹುದು. ನಿಮ್ಮ ಹೆಸರನ್ನು ಬದಲಾಯಿಸಿದರೆ, ನಿಮ್ಮ ದೃಢೀಕರಣ ಬ್ಯಾಡ್ಜ್ ಅನ್ನು ತೆಗೆದುಹಾಕಲಾಗುತ್ತದೆ. ಇನ್ನಷ್ಟು ತಿಳಿಯಿರಿ.

YouTube Android ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರ ಅನ್ನು ಟ್ಯಾಪ್ ಮಾಡಿ.
  2. ಮೇಲೆ, ಚಾನಲ್ ವೀಕ್ಷಿಸಿ ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ ಹೆಸರಿನ ಪಕ್ಕದಲ್ಲಿ, ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ ಮತ್ತು ಅಪ್‌ಡೇಟ್ ಮಾಡಿದ ನಿಮ್ಮ ಚಾನಲ್ ಹೆಸರನ್ನು ನಮೂದಿಸಿ, ನಂತರ ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

Android ಗಾಗಿ YouTube Studio ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರ ಅನ್ನು ಟ್ಯಾಪ್ ಮಾಡಿ.
  2. ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ ಹೆಸರು ಅಥವಾ ವಿವರಣೆಯ ಪಕ್ಕದಲ್ಲಿ, ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ ಮತ್ತು ಅಪ್‌ಡೇಟ್ ಮಾಡಿದ ನಿಮ್ಮ ಚಾನಲ್ ಹೆಸರನ್ನು ನಮೂದಿಸಿ, ನಂತರ ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಹ್ಯಾಂಡಲ್

ಹ್ಯಾಂಡಲ್ ಎಂಬುದು YouTube ನಲ್ಲಿ ನಿಮ್ಮ ವಿಭಿನ್ನ ಉಪಸ್ಥಿತಿಯನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದನ್ನು ಸುಲಭವಾಗಿಸುವ ಅನನ್ಯ ಗುರುತಿಸುವಿಕೆಯಾಗಿದೆ.

ಗಮನಿಸಿ: ನೀವು 14-ದಿನದ ಅವಧಿಯಲ್ಲಿ ನಿಮ್ಮ ಹ್ಯಾಂಡಲ್ ಅನ್ನು ಎರಡು ಬಾರಿ ಬದಲಾಯಿಸಬಹುದು.

YouTube Android ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರ ಅನ್ನು ಟ್ಯಾಪ್ ಮಾಡಿ.
  2. ಮೇಲೆ, ಚಾನಲ್ ವೀಕ್ಷಿಸಿ ಎಂಬುದನ್ನು ಟ್ಯಾಪ್ ಮಾಡಿ.
  3. ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ಹ್ಯಾಂಡಲ್ ವಿಭಾಗದ ಅಡಿಯಲ್ಲಿ, ನಿಮ್ಮ ಹ್ಯಾಂಡಲ್ ಅನ್ನು ಹುಡುಕಿ.
  5. ನಿಮ್ಮ ಹ್ಯಾಂಡಲ್ ಅನ್ನು ಬದಲಾಯಿಸಲು, ಬಲಭಾಗದಲ್ಲಿ, ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  6. ಅಸ್ತಿತ್ವದಲ್ಲಿರುವ ಹ್ಯಾಂಡಲ್ ಅನ್ನು ಬದಲಾಯಿಸಲು ಟೈಪ್ ಮಾಡಿ.
    • ಹ್ಯಾಂಡಲ್ ಲಭ್ಯವಿಲ್ಲದಿದ್ದರೆ, ಇದೇ ರೀತಿಯ ಹ್ಯಾಂಡಲ್ ಅನ್ನು ಸೂಚಿಸಲಾಗುತ್ತದೆ.
  7. ನಿಮ್ಮ ಹ್ಯಾಂಡಲ್ ಅನ್ನು ಖಚಿತಪಡಿಸಲು, ಉಳಿಸಿ ಕ್ಲಿಕ್ ಮಾಡಿ.

Android ಗಾಗಿ YouTube Studio ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರ ಅನ್ನು ಟ್ಯಾಪ್ ಮಾಡಿ.
  2. ಎಡಿಟ್ ಮಾಡಿ ಅನ್ನು ಟ್ಯಾಪ್ ಮಾಡಿ.
  3. ನಿಮ್ಮ ಹ್ಯಾಂಡಲ್‌ನ ಪಕ್ಕದಲ್ಲಿ, ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಚಾನಲ್ URL

YouTube Android ಆ್ಯಪ್
ನಿಮ್ಮ ಚಾನಲ್ URL, YouTube ಚಾನಲ್‌ಗಳು ಬಳಸುವ ಪ್ರಮಾಣಿತ URL ಆಗಿದೆ. URL ನ ಅಂತ್ಯದಲ್ಲಿರುವ ಸಂಖ್ಯೆಗಳು ಮತ್ತು ಅಕ್ಷರಗಳನ್ನು ಒಳಗೊಂಡ ನಿಮ್ಮ ಅನನ್ಯ ಚಾನಲ್ ಐಡಿ ಅನ್ನು ಇದು ಬಳಸುತ್ತದೆ. YouTube ಮತ್ತು YouTube Studio ಆ್ಯಪ್‌ನಲ್ಲಿ ನಿಮ್ಮ ಚಾನಲ್ URL ಅನ್ನು ನೀವು ವೀಕ್ಷಿಸಬಹುದು ಮತ್ತು ಕಾಪಿ ಮಾಡಬಹುದು.

ವಿವರಣೆ

ನಿಮ್ಮ YouTube ವಿವರಣೆಯನ್ನು ನೀವು ಬದಲಾಯಿಸಬಹುದು, ಅದು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ವಿವರಣೆಯನ್ನು ಚಾನಲ್ ಹೆಡರ್‌ನಲ್ಲಿ ಆ್ಯಕ್ಸೆಸ್ ಮಾಡಬಹುದಾಗಿದೆ.

YouTube Android ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರ ಅನ್ನು ಟ್ಯಾಪ್ ಮಾಡಿ.
  2. ಮೇಲೆ, ಚಾನಲ್ ವೀಕ್ಷಿಸಿ ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ ಚಾನಲ್ ವಿವರಣೆಯ ಅಡಿಯಲ್ಲಿ, ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ನಿಮ್ಮ ಹೆಸರಿನ ಪಕ್ಕದಲ್ಲಿ, ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ ಮತ್ತು ಅಪ್‌ಡೇಟ್ ಮಾಡಿದ ನಿಮ್ಮ ವಿವರಣೆಯನ್ನು ನಮೂದಿಸಿ, ನಂತರ ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

Android ಗಾಗಿ YouTube Studio ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರ ಅನ್ನು ಟ್ಯಾಪ್ ಮಾಡಿ.
  2. ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ ಹೆಸರು ಅಥವಾ ವಿವರಣೆಯ ಮುಂದೆ, ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ ಮತ್ತು ಅಪ್‌ಡೇಟ್ ಮಾಡಿದ ನಿಮ್ಮ ವಿವರಣೆಯನ್ನು ನಮೂದಿಸಿ, ನಂತರ ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ಸರ್ವನಾಮಗಳನ್ನು ಸೇರಿಸಿ ಅಥವಾ ಬದಲಾಯಿಸಿ

ನಿಮ್ಮ ಚಾನಲ್‌ಗೆ ನಿಮ್ಮ ಸರ್ವನಾಮಗಳನ್ನು ನೀವು ಸೇರಿಸಬಹುದು, ಇದರಿಂದ ಅವುಗಳು ನಿಮ್ಮ ಚಾನಲ್‌ನ ಪುಟದಲ್ಲಿ ಗೋಚರಿಸುತ್ತವೆ. ನಿಮ್ಮ ಸರ್ವನಾಮಗಳನ್ನು ಎಲ್ಲರಿಗೂ ಪ್ರದರ್ಶಿಸಬೇಕೆ ಅಥವಾ ಅವುಗಳನ್ನು ನಿಮ್ಮ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ತೋರಿಸಬೇಕೆ ಎಂಬುದನ್ನು ನೀವು ಆಯ್ಕೆಮಾಡಬಹುದು.
ಸರ್ವನಾಮಗಳು, ವೈಯಕ್ತಿಕ ಗುರುತು ಮತ್ತು ಅಭಿವ್ಯಕ್ತಿಯ ನಿರ್ಣಾಯಕ ಭಾಗವಾಗಿವೆ. ಕೆಲವು ಅಧಿಕಾರ ಕ್ಷೇತ್ರಗಳು ಲಿಂಗ ಅಭಿವ್ಯಕ್ತಿಗೆ ಸಂಬಂಧಿಸಿದ ಕಾನೂನುಗಳನ್ನು ಹೊಂದಿವೆ. YouTube ನಲ್ಲಿ ಈ ಸಕ್ರಿಯಗೊಳಿಸಿದ ಸಾರ್ವಜನಿಕ ಫೀಚರ್ ಅನ್ನು ಬಳಸುವಾಗ ನಿಮ್ಮ ಸ್ಥಳೀಯ ಕಾನೂನುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಸರ್ವನಾಮಗಳು ನಿಮ್ಮ ಚಾನಲ್ ಪುಟದಲ್ಲಿ ಲಭ್ಯವಿಲ್ಲದಿದ್ದರೆ, ಈ ಫೀಚರ್ ಅನ್ನು ಇನ್ನಷ್ಟು ದೇಶಗಳು/ಪ್ರದೇಶಗಳು ಮತ್ತು ಭಾಷೆಗಳಲ್ಲಿ ವಿಸ್ತರಿಸಲು ನಾವು ಕೆಲಸ ಮಾಡುತ್ತಿದ್ದೇವೆ.
ಗಮನಿಸಿ: ಸರ್ವನಾಮಗಳ ಫೀಚರ್, ಕಾರ್ಯಸ್ಥಳ ಅಥವಾ ಮೇಲ್ವಿಚಾರಣೆಯ ಖಾತೆಗಳಿಗಾಗಿ ಲಭ್ಯವಿಲ್ಲ.

YouTube Android ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರ  ನಂತರ ನಿಮ್ಮ ಚಾನಲ್  ಎಂಬುದನ್ನು ಟ್ಯಾಪ್ ಮಾಡಿ.
  2. ನಿಮ್ಮ ಚಾನಲ್ ವಿವರಣೆಯ ಅಡಿಯಲ್ಲಿ, ಎಡಿಟ್ ಮಾಡಿ ಎಡಿಟ್ ಸೆಟ್ಟಿಂಗ್, ಪೆನ್ಸಿಲ್ ಐಕಾನ್ ಎಂಬುದನ್ನು ಟ್ಯಾಪ್ ಮಾಡಿ.
  3. ಸರ್ವನಾಮಗಳ ಮುಂದೆ ಇರುವ, ಎಡಿಟ್ ಮಾಡಿ ಎಡಿಟ್ ಸೆಟ್ಟಿಂಗ್, ಪೆನ್ಸಿಲ್ ಐಕಾನ್ ನಂತರ ಸರ್ವನಾಮವನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
  4. ನಿಮ್ಮ ಸರ್ವನಾಮಗಳನ್ನು ನಮೂದಿಸಲು ಪ್ರಾರಂಭಿಸಿ ಮತ್ತು ನಿಮಗೆ ಸೂಕ್ತವಾದವುಗಳನ್ನು ಆಯ್ಕೆಮಾಡಿ. ನೀವು ಗರಿಷ್ಠ ನಾಲ್ಕು ಸರ್ವನಾಮಗಳನ್ನು ಸೇರಿಸಬಹುದು.
    1. ನಿಮ್ಮ ಸರ್ವನಾಮಗಳಲ್ಲಿ ಒಂದರ ಪಕ್ಕದಲ್ಲಿರುವ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಆಯ್ಕೆಗಳನ್ನು ನೀವು ಎಡಿಟ್ ಮಾಡಬಹುದು, ಅದನ್ನು ತೆಗೆದುಹಾಕಬಹುದು.
  5. ನಿಮ್ಮ ಸರ್ವನಾಮಗಳನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಿ: 
    1. YouTube ನಲ್ಲಿರುವ ಎಲ್ಲರೂ, ಅಥವಾ
    2. ನನ್ನ ಸಬ್‌ಸ್ಕ್ರೈಬರ್‌ಗಳು ಮಾತ್ರ
  6. ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಚಾನಲ್ ಪ್ರೊಫೈಲ್ ಲಿಂಕ್‌ಗಳು

ನಿಮ್ಮ ಚಾನಲ್‌ನ ಹೋಮ್ ಟ್ಯಾಬ್‌ನಲ್ಲಿ ನೀವು 14 ಲಿಂಕ್‌ಗಳನ್ನು ಪ್ರದರ್ಶಿಸಬಹುದು, ಅವುಗಳು ನಮ್ಮ ಬಾಹ್ಯ ಲಿಂಕ್‌ಗಳ ನೀತಿಯನ್ನು ಅನುಸರಿಸುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಮೊದಲ ಲಿಂಕ್ ಅನ್ನು ಸಬ್‌ಸ್ಕ್ರಿಪ್ಶನ್ ಬಟನ್ ಮೇಲೆ ಇರುವ ಪ್ರೊಫೈಲ್ ವಿಭಾಗದಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ ಮತ್ತು ನಿಮ್ಮ ಉಳಿದ ಲಿಂಕ್‌ಗಳನ್ನು ನಿಮ್ಮ ಪ್ರೇಕ್ಷಕರು ಹೆಚ್ಚಿನ ಲಿಂಕ್‌ಗಳನ್ನು ನೋಡಲು ಕ್ಲಿಕ್ ಮಾಡಿದಾಗ ತೋರಿಸಲಾಗುತ್ತದೆ. ನಿಮ್ಮ ಪ್ರೇಕ್ಷಕರೊಂದಿಗೆ ಲಿಂಕ್‌ಗಳನ್ನು ಹಂಚಿಕೊಳ್ಳುವ ಕುರಿತು ಇನ್ನಷ್ಟು ತಿಳಿಯಿರಿ.

  1. YouTube Studio ಆ್ಯಪ್ ಅನ್ನು ತೆರೆಯಿರಿ.
  2. ಮೇಲಿನ ಬಲಭಾಗದಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ ಎಂಬುದನ್ನು ಕ್ಲಿಕ್ ಮಾಡಿ.
  3. ನಿಮ್ಮ ಚಾನಲ್ ವಿವರಣೆಯ ಮುಂದೆ ಇರುವ, ಎಡಿಟ್ ಮಾಡಿ ಎಡಿಟ್ ಸೆಟ್ಟಿಂಗ್, ಪೆನ್ಸಿಲ್ ಐಕಾನ್ ಎಂಬುದನ್ನು ಟ್ಯಾಪ್ ಮಾಡಿ.
  4. "ಲಿಂಕ್‌ಗಳು" ಅಡಿಯಲ್ಲಿ, ಎಡಿಟ್ ಮಾಡಿ ಎಡಿಟ್ ಸೆಟ್ಟಿಂಗ್, ಪೆನ್ಸಿಲ್ ಐಕಾನ್ ಎಂಬುದನ್ನು ಟ್ಯಾಪ್ ಮಾಡಿ.
  5.  ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸೈಟ್‌ನ ಶೀರ್ಷಿಕೆ ಮತ್ತು URL ಅನ್ನು ನಮೂದಿಸಿ.
  6. ಮುಗಿದಿದೆ ನಂತರ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಗೌಪ್ಯತೆ

YouTube Android ಆ್ಯಪ್
ನಿಮ್ಮ ಎಲ್ಲಾ ಸಬ್‌ಸ್ಕ್ರಿಪ್ಶನ್‌ಗಳನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನೀವು ಆಯ್ಕೆ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1589639466101091525
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false