ನಾನು ಯಾವ ಪ್ರಕಾರದ ಕಂಟೆಂಟ್ ಅನ್ನು ಮಾನಿಟೈಸ್ ಮಾಡಬಹುದು?

ನಿಮ್ಮ ವೀಡಿಯೊಗಳು ಅಥವಾ Shorts ಮಾನಿಟೈಸೇಶನ್‌ಗೆ ಅರ್ಹವಾಗುವುದಕ್ಕಾಗಿ, ಕಂಟೆಂಟ್ ಒರಿಜಿನಲ್ ಆಗಿರಬೇಕು ಮತ್ತು ಅದನ್ನು ಪುನರಾವರ್ತಿತವಾಗಿ ಬಳಸಿರಬಾರದು ಎಂಬ ಅವಶ್ಯಕತೆಯು ನಮ್ಮ YouTube ಚಾನಲ್ ಮಾನಿಟೈಸೇಶನ್ ನೀತಿಗಳ ಅಗತ್ಯತೆಗಳ ಪೈಕಿ ಒಂದಾಗಿದೆ. ಹಾಗೆಯೇ ನಿಮ್ಮ ಕಂಟೆಂಟ್‌ನಲ್ಲಿ ಎಲ್ಲ ವಿಷುವಲ್ ಮತ್ತು ಆಡಿಯೋ ಎಲಿಮೆಂಟ್‌ಗಳನ್ನು ವಾಣಿಜ್ಯಿಕವಾಗಿ ಬಳಸುವುದಕ್ಕಾಗಿ ನೀವು ಎಲ್ಲಾ ಅಗತ್ಯ ಹಕ್ಕುಗಳನ್ನು ಹೊಂದಿರುವಿರಿ ಎಂಬುದನ್ನು ಸಹ ಖಾತ್ರಿಪಡಿಸಿಕೊಳ್ಳಿ.

ನೀವು ರಚಿಸಿದ ಕಂಟೆಂಟ್‌ಗಾಗಿ ಮಾರ್ಗಸೂಚಿಗಳು:

  • YouTube ಸಮುದಾಯ ಮಾರ್ಗಸೂಚಿಗಳು ಅನ್ನು ಫಾಲೋ ಮಾಡಿ
  • ವೀಡಿಯೊದ ಎಲ್ಲಾ ಎಲಿಮೆಂಟ್‌ಗಳನ್ನು ಸ್ವತಃ ರಚಿಸಿ. ಉದಾಹರಣೆಗಳು ಇವುಗಳನ್ನು ಒಳಗೊಂಡಿದೆ:
    • ದೈನಿಕ ವ್ಲಾಗ್‌ಗಳು
    • ಹೋಮ್ ವೀಡಿಯೊಗಳು
    • ನೀವೇ ಮಾಡಿ ನೋಡುವ ವೀಡಿಯೊಗಳು
    • ಟುಟೋರಿಯಲ್‌ಗಳು
    • ಮೂಲ ಸಂಗೀತ ವೀಡಿಯೊಗಳು
    • ಮೂಲ ಶಾರ್ಟ್ ಫಿಲ್ಮ್‌ಗಳು
    • ರೀಮಿಕ್ಸ್ ಮಾಡಲಾದ ಕಂಟೆಂಟ್ ಹೊಂದಿರುವ ಅಥವಾ ಹೊಂದಿಲ್ಲದಿರುವ Shorts
  • ನೀವು ರಚಿಸಿರುವ ಎಲ್ಲಾ ವಿಷುವಲ್‌ಗಳನ್ನು ವಾಣಿಜ್ಯಿಕವಾಗಿ ಬಳಸಲು ನೀವು ಎಲ್ಲಾ ಅಗತ್ಯ ಹಕ್ಕುಗಳನ್ನು ಹೊಂದಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಜಾಹೀರಾತುದಾರರು ಆ್ಯಡ್‌ಗಳನ್ನು ಜಾಹೀರಾತುದಾರ ಸ್ನೇಹಿ ಕಂಟೆಂಟ್ ನಲ್ಲಿ ಇರಿಸುವ ಹೆಚ್ಚಿನ ಸಾಧ್ಯತೆ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ನೀವು ರಚಿಸದೇ ಇರುವ ಕಂಟೆಂಟ್‌ಗಾಗಿ ಮಾರ್ಗಸೂಚಿಗಳು:

ಮಾನಿಟೈಸೇಶನ್ ಅನ್ನು ಕಳೆದುಕೊಳ್ಳದೆಯೇ ವೀಡಿಯೊಗಳಲ್ಲಿ Creator Musicನಿಂದ ಟ್ರ್ಯಾಕ್‌ಗಳನ್ನು ನೀವು ಸೇರಿಸಿಕೊಳ್ಳಬಹುದು. ಕೆಲವು ಹಾಡುಗಳಿಗೆ ಮುಂಚಿತವಾಗಿಯೇ ಪರವಾನಗಿ ನೀಡಬಹುದು, ಈ ಮೂಲಕ ರಚನೆಕಾರರಿಗೆ ಸಂಪೂರ್ಣ ಮಾನಿಟೈಸೇಶನ್ ಅನ್ನು ಇರಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಇತರ ಹಾಡುಗಳು, ಟ್ರ್ಯಾಕ್‌ನ ಹಕ್ಕುದಾರರೊಂದಿಗೆ ಆದಾಯವನ್ನು ಹಂಚಿಕೊಳ್ಳಲು ಅರ್ಹವಾಗಿರಬಹುದು.
ನ್ಯಾಯಯುತ ಬಳಕೆ - YouTube ನಲ್ಲಿ ಕೃತಿಸ್ವಾಮ್ಯ

ಈ ಸಂದರ್ಭದಲ್ಲಿ ನನ್ನ ವೀಡಿಯೊವನ್ನು ನಾನು ಮಾನಿಟೈಸ್ ಮಾಡಬಹುದೇ?

ನಿಮ್ಮ ಕಂಟೆಂಟ್ ಪ್ರಕಾರವು ಹಣ ಗಳಿಸಬಹುದಾದದ್ದೇ ಮತ್ತು ಅದನ್ನು ಬಳಸಲು ನೀವು ವಾಣಿಜ್ಯಿಕ ಬಳಕೆಯ ಹಕ್ಕುಗಳನ್ನು ಸಾಬೀತುಮಾಡಬೇಕಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ಕೆಳಗೆ ಕ್ಲಿಕ್ ಮಾಡಿ.

ನಾನು ಎಲ್ಲಾ ಆಡಿಯೋ ಮತ್ತು ವಿಷುವಲ್ ಕಂಟೆಂಟ್ ಅನ್ನು ರಚಿಸಿದ್ದೇನೆ


ವೀಡಿಯೊಗೆ ನೀವು ಹಕ್ಕುಗಳನ್ನು ಹೊಂದಿರುವ ತನಕ ನೀವು ರಚಿಸಿರುವ ಕಂಟೆಂಟ್ ಅನ್ನು ಮಾನಿಟೈಸ್ ಮಾಡಬಹುದು.

ನೀವು ಸಂಗೀತ ಲೇಬಲ್ ಮೂಲಕ ಸಹಿ ಮಾಡಿದ್ದರೆ, ಆ ಒಪ್ಪಂದದ ನಿಯಮಗಳು ಅಥವಾ ಮಿತಿಗಳನ್ನು ಆಧರಿಸಿ ನಿಮ್ಮ ವೀಡಿಯೊವನ್ನು ನೀವು ಸಂಭಾವ್ಯವಾಗಿ ಮಾನಿಟೈಸ್ ಮಾಡಬಹುದು. ನೀವು ಅಟಾರ್ನಿ ಅವರೊಂದಿಗೆ ಸಮಾಲೋಚಿಸಬೇಕಾಗಬಹುದು.

ನನ್ನ ಸ್ವಂತ ಕಂಟೆಂಟ್ ಅನ್ನು ರಚಿಸಲು ನಾನು ಆಡಿಯೊ ಅಥವಾ ವಿಷುವಲ್ ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಬಳಸುತ್ತೇನೆ

ಮಾನಿಟೈಸ್ ಮಾಡಬಹುದಾದ ಕಂಟೆಂಟ್ ಅನ್ನು ರಚಿಸುವುದಕ್ಕಾಗಿ ಆಡಿಯೊ ಮತ್ತು ವಿಷುವಲ್ ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಬಳಸಬಹುದು. ಪರವಾನಗಿಯ ವ್ಯಾಪ್ತಿ, ಮಿತಿಗಳು ಮತ್ತು ವಾಣಿಜ್ಯಿಕ ಅನುಮತಿಗಳ ಮೇಲೆ ಮಾನಿಟೈಸೇಶನ್ ಅವಲಂಬಿತವಾಗಿರುತ್ತದೆ. ನೀವು ಮಾದರಿಗಳು ಅಥವಾ ಲೂಪ್‌ಗಳನ್ನು ಬಳಸಿದ್ದರೆ, ಪರವಾನಗಿಯು ಅವುಗಳ ವಾಣಿಜ್ಯಿಕ ಬಳಕೆಗೆ ನಿರ್ದಿಷ್ಟವಾಗಿ ಅನುಮತಿಸುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. Shorts ನಲ್ಲಿ ಕಂಟೆಂಟ್ ಅನ್ನು ರೀಮಿಕ್ಸ್ ಮಾಡುವುದಕ್ಕಾಗಿ, ಈ ಮಾರ್ಗಸೂಚಿಗಳನ್ನು ಫಾಲೋ ಮಾಡಿ.

ನಾನು ರಾಯಲ್ಟಿ-ಫ್ರೀ ಅಥವಾ ಕ್ರಿಯೇಟಿವ್ ಕಾಮನ್ಸ್ ಕಂಟೆಂಟ್ ಅನ್ನು ಬಳಸುತ್ತೇನೆ


ಪರವಾನಗಿ ಒಪ್ಪಂದವು ವಾಣಿಜ್ಯಿಕವಾಗಿ ರಾಯಲ್ಟಿ-ಫ್ರೀ ಅಥವಾ ಕ್ರಿಯೇಟಿವ್ ಕಾಮನ್ಸ್ ಕಂಟೆಂಟ್ ಬಳಕೆಗೆ ಹಕ್ಕುಗಳನ್ನು ನೀಡಿದರೆ ಅದನ್ನು ನೀವು ಮಾನಿಟೈಸ್ ಮಾಡಬಹುದು. ಕೆಲವೊಮ್ಮೆ ಹಕ್ಕುಗಳ ಮಾಲೀಕರಿಗೆ ನೀವು ಕಂಟೆಂಟ್ ರಚನೆಕಾರರ ಕ್ರೆಡಿಟ್ ಅನ್ನು ನೀಡುವುದು ಅಥವಾ ವಾಣಿಜ್ಯಿಕ ಬಳಕೆಗಾಗಿ ನಿಮ್ಮ ವೀಡಿಯೊದಲ್ಲಿ ಅದನ್ನು ಬಳಸುವುದಕ್ಕಾಗಿ ಖರೀದಿಯ ಪುರಾವೆಯನ್ನು ನೀಡುವುದು ಅಗತ್ಯವಾಗಿರುತ್ತದೆ.

ನಿಮ್ಮ ಹಕ್ಕುಗಳನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಪರವಾನಗಿಯನ್ನು ಹೇಗೆ ಓದುವುದು ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಬೇರೊಬ್ಬರು ರಚಿಸಿದ ಆಡಿಯೊ ಅಥವಾ ವಿಷುವಲ್‌ಗಳನ್ನು ಬಳಸಲು ನನಗೆ ಅನುಮತಿಯಿದೆ

ನೀವು ಅಂತಹ ಕಂಟೆಂಟ್ ಅನ್ನು ಮಾನಿಟೈಸ್ ಮಾಡಬಹುದು, ಆದರೆ ಹಕ್ಕುಗಳನ್ನು ಹೊಂದಿರುವವರು ನಿಮಗೆ ವಾಣಿಜ್ಯಿಕ ಬಳಕೆಯ ಹಕ್ಕುಗಳನ್ನು ನೀಡಿರುವ ಸ್ಪಷ್ಟವಾದ ಲಿಖಿತ ಅನುಮತಿ ನಿಮ್ಮ ಬಳಿ ಇರಬೇಕಾಗುತ್ತದೆ.
ನಾನು ವೀಡಿಯೊ ಗೇಮ್ ಆಡುತ್ತಿದ್ದೇನೆ ಅಥವಾ ಅದರ ಹಂತ ಹಂತದ ಸೂಚನೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ

ನೀವು ವೀಡಿಯೊ ಗೇಮ್ ಕಂಟೆಂಟ್ ಅನ್ನು ಮಾನಿಟೈಸ್ ಮಾಡಲು ಬಯಸಿದರೆ, ವೀಡಿಯೊ ಗೇಮ್ ಪ್ರಕಾಶಕರ ಪರವಾನಗಿಯಿಂದ ನಿಮಗೆ ನೀಡಲಾಗಿರುವ ವಾಣಿಜ್ಯಿಕ ಬಳಕೆಯ ಹಕ್ಕುಗಳನ್ನು ನೀವು ಹೊಂದಿರಬೇಕಾಗುತ್ತದೆ. ವಾಣಿಜ್ಯಿಕ ಬಳಕೆಗಾಗಿ ಎಲ್ಲಾ ವೀಡಿಯೊ ಗೇಮ್ ಕಂಟೆಂಟ್ ಬಳಸಲು ಕೆಲವು ವೀಡಿಯೊ ಗೇಮ್ ಪ್ರಕಾಶಕರು ನಿಮಗೆ ಅವಕಾಶ ನೀಡಬಹುದು. ಈ ಮಾಹಿತಿಯನ್ನು ಅವರ ಪರವಾನಗಿ ನೀಡುವಿಕೆ ಒಪ್ಪಂದಗಳಲ್ಲಿ ದೃಢೀಕರಿಸಬಹುದು.

ಇತರ ಪರವಾನಗಿ ನೀಡುವಿಕೆ ಒಪ್ಪಂದಗಳಲ್ಲಿ, ಆಟವಾಡುವಿಕೆಯನ್ನು ತೋರಿಸುವ ವೀಡಿಯೊಗಳಿಗಾಗಿ ವಾಣಿಜ್ಯಿಕ ಹಕ್ಕುಗಳನ್ನು ಪ್ರಕಾಶಕರು ವಿಸ್ತರಿತ ಸಮಯಾವಧಿಗಾಗಿ ನೀಡದೇ ಇರಬಹುದು. ಪರವಾನಗಿ ನೀಡುವಿಕೆ ನಿಯಮಗಳಿಗಾಗಿ, ಕಾಮೆಂಟರಿಯಲ್ಲಿ ಈ ಕೆಳಗಿನವು ಇಲ್ಲದಿರುವ ಸನ್ನಿವೇಶಗಳಲ್ಲಿ, ವೀಡಿಯೊ ಗೇಮ್ ಬಳಕೆ ಕನಿಷ್ಠವಾಗಿರಬೇಕು:

  • ಸೂಚನೆಯ/ಶೈಕ್ಷಣಿಕ ಮೌಲ್ಯದ್ದಾಗಿರಬೇಕು
  • ತೋರಿಸಿರುವ ಕ್ರಿಯೆಗೆ ಪೂರ್ತಿಯಾಗಿ ಸಂಬಂಧಪಟ್ಟಿರಬೇಕು
ವೀಡಿಯೊ ಗೇಮ್ ಮತ್ತು ಸಾಫ್ಟ್‌ವೇರ್ ಕಂಟೆಂಟ್ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ಗೇಮಿಂಗ್ ಮತ್ತು ಮಾನಿಟೈಸೇಶನ್ ಗಾಗಿನ ನಮ್ಮ ಆ್ಯಡ್-ಸ್ನೇಹಿ ಮಾರ್ಗಸೂಚಿಗಳನ್ನು ನೋಡಿ.
ಸಾಫ್ಟ್‌ವೇರ್ ಬಳಕೆಯನ್ನು ತೋರಿಸುವ ಟುಟೋರಿಯಲ್ ಅನ್ನು ನಾನು ಮಾಡುತ್ತಿದ್ದೇನೆ

ನೀವು ಉತ್ಪಾದನೆ ಮಾಡುವ ಸಾಫ್ಟ್‌ವೇರ್ ಬಳಕೆದಾರ ಇಂಟರ್‌ಫೇಸ್ ಕಂಟೆಂಟ್ ಅನ್ನು ಮಾನಿಟೈಸ್ ಮಾಡಬಹುದು, ಆದರೆ ಅದು ಸಾಫ್ಟ್‌ವೇರ್‌ನ ಪರವಾನಗಿಯ ಮೂಲಕ ನೀಡಲಾಗಿರುವ ವಾಣಿಜ್ಯಿಕ ಬಳಕೆಯ ಹಕ್ಕುಗಳ ಮೇಲೆ ಸಹ ಅವಲಂಬಿತವಾಗಿರುತ್ತದೆ.

ಕೆಲವೊಮ್ಮೆ, ನಿಮಗೆ ಪ್ರಕಾಶಕರೊಂದಿಗೆ ಒಪ್ಪಂದ ಅಥವಾ ನೀವು ಪರವಾನಗಿ ನೀಡುವಿಕೆಯ ಶುಲ್ಕವನ್ನು ಪಾವತಿಸಿರುವ ಪುರಾವೆ ಬೇಕಾಗಬಹುದು. ಕಾಮೆಂಟರಿಯಲ್ಲಿ ಈ ಕೆಳಗಿನವು ಇಲ್ಲದಿರುವ ಸನ್ನಿವೇಶಗಳಲ್ಲಿ ಸಾಫ್ಟ್‌ವೇರ್ ಬಳಕೆದಾರ ಇಂಟರ್‌ಫೇಸ್‌ಗಳ ಬಳಕೆಯು ಕನಿಷ್ಠವಾಗಿರಬೇಕು:

  • ಸೂಚನೆಯ/ಶೈಕ್ಷಣಿಕ ಮೌಲ್ಯದ್ದಾಗಿರಬೇಕು
  • ತೋರಿಸಿರುವ ಕ್ರಿಯೆಗೆ ಪೂರ್ತಿಯಾಗಿ ಸಂಬಂಧಪಟ್ಟಿರಬೇಕು

ವೀಡಿಯೊ ಗೇಮ್ ಮತ್ತು ಸಾಫ್ಟ್‌ವೇರ್ ಕಂಟೆಂಟ್ ಕುರಿತು ಇನ್ನಷ್ಟು ತಿಳಿಯಿರಿ.

ಸಾರ್ವಜನಿಕ ಡೊಮೇನ್‌ನಲ್ಲಿರುವ ಕಂಟೆಂಟ್ ಅನ್ನು ನಾನು ಬಳಸುತ್ತೇನೆ
 

ಕಂಟೆಂಟ್ ಸಾರ್ವಜನಿಕ ಡೊಮೇನ್‌ನಲ್ಲಿರುವುದಕ್ಕಾಗಿ, ಕೆಲಸದ ಕೃತಿಸ್ವಾಮ್ಯವು ಒಂದೋ ಅವಧಿ ಮೀರಿದೆ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಅಥವಾ ಅದು ಇನ್ನು ಮುಂದೆ ಅನ್ವಯಿಸುವುದಿಲ್ಲ. ನಿಮ್ಮ ವೀಡಿಯೊದಲ್ಲಿನ ಕಂಟೆಂಟ್ ಸಾರ್ವಜನಿಕ ಡೊಮೇನ್‌ನಲ್ಲಿನ ಭಾಗವಾಗಿದೆ ಎಂಬುದಾಗಿ ನೀವು ಸಾಬೀತುಪಡಿಸಿದರೆ, ನೀವು ಮಾನಿಟೈಸ್ ಮಾಡಬಹುದು.

ಗಮನಿಸಿ: ಇದು ಪರವಾನಗಿಯ ವ್ಯಾಪ್ತಿ, ಮಿತಿಗಳು ಮತ್ತು ವಾಣಿಜ್ಯಿಕ ಅನುಮತಿಗಳ ಮೇಲೆ ಅವಲಂಬಿತವಾಗಿರುತ್ತದೆ.

ಸಾರ್ವಜನಿಕ ಡೊಮೇನ್ ಆಗಿ ಅರ್ಹತೆ ಪಡೆಯುವುದಕ್ಕಾಗಿನ ಮಾನದಂಡವು ಹಲವು ಅಂಶಗಳನ್ನು ಆಧರಿಸಿ ಬದಲಾಗಬಹುದು.
ಸಾರ್ವಜನಿಕ ಡೊಮೇನ್ ಕುರಿತು ಇನ್ನಷ್ಟು ತಿಳಿಯಿರಿ.
ಅದು ಕವರ್ ಸಾಂಗ್‌ನ ನನ್ನ ಮೂಲ ರೆಕಾರ್ಡಿಂಗ್ ಅನ್ನು ಒಳಗೊಂಡಿದೆ

ಕೆಲವು ಕವರ್ ಸಾಂಗ್‌ಗಳು ಮಾನಿಟೈಸೇಶನ್‌ಗೆ ಅರ್ಹವಾಗಿರಬಹುದು. ಅರ್ಹತೆ ಪಡೆಯುವುದಕ್ಕಾಗಿ, ಸಂಗೀತ ಪ್ರಕಾಶಕರು Content ID ಸಿಸ್ಟಂ ಮೂಲಕ ಹಾಡನ್ನು ಹಕ್ಕು ಸ್ಥಾಪನೆ ಮಾಡಬೇಕಾಗುತ್ತದೆ ಮತ್ತು ಅದನ್ನು ಮಾನಿಟೈಸ್ ಮಾಡಲು ಆಯ್ದುಕೊಳ್ಳಬೇಕಾಗುತ್ತದೆ.

ಹಾಡನ್ನು ಹಕ್ಕು ಸ್ಥಾಪನೆ ಮಾಡದೇ ಇದ್ದರೆ, ನಿಮ್ಮ ವೀಡಿಯೊ ಮಾನಿಟೈಸ್ ಮಾಡಲು ನಿಮಗೆ ಸಾಧ್ಯವಿಲ್ಲ. ಹಾಡಿನ ಹಕ್ಕುಗಳ ಮಾಲೀಕರಿಂದ ಸ್ಪಷ್ಟವಾದ ಲಿಖಿತ ಅನುಮತಿಯನ್ನು ಮುಂಚಿತವಾಗಿಯೇ ನೀಡಬೇಕಾಗುತ್ತದೆ.

ಕಲಾವಿದರಿಂದ ವಾದ್ಯಸಂಗೀತದ, ಕ್ಯಾರಿಯೋಕಿ ರೆಕಾರ್ಡಿಂಗ್ ಅಥವಾ ಲೈವ್ ಸಂಗೀತ ಕಚೇರಿಯ ಪ್ರದರ್ಶನದಂತಹ ಯಾವುದೇ ವಾಣಿಜ್ಯಿಕ ಸೌಂಡ್ ರೆಕಾರ್ಡಿಂಗ್‌ನ ಬಳಕೆಯು ಮಾನಿಟೈಸೇಶನ್‌ಗೆ ಅರ್ಹವಾಗಿರುವುದಿಲ್ಲ.

ಅರ್ಹ ಕವರ್ ವೀಡಿಯೊಗಳನ್ನು ಮಾನಿಟೈಸ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

ಸಾರ್ವಜನಿಕ ಸಂಗೀತ ಕಚೇರಿಗಳು, ಈವೆಂಟ್‌ಗಳು, ಶೋಗಳು ಇತ್ಯಾದಿಗಳ ನನ್ನ ವೈಯಕ್ತಿಕ ರೆಕಾರ್ಡಿಂಗ್ ಅನ್ನು ನಾನು ಬಳಸುತ್ತೇನೆ

ನೀವು ಸ್ವತಃ ಏನನ್ನಾದರೂ ರೆಕಾರ್ಡ್ ಮಾಡಿರಬಹುದಾದರೂ, ಸಾಮಾನ್ಯವಾಗಿ ಅಂತರ್ಗತ ಕಂಟೆಂಟ್‌ನ ಮೂಲ ರಚನೆಕಾರರು ಅಥವಾ ಲೇಖಕರು ಈ ಕಂಟೆಂಟ್ ಅನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳಲು ಅಗತ್ಯವಾದ ಹಕ್ಕುಗಳನ್ನು ಹೊಂದಿರುತ್ತಾರೆ.

ಸಂಗೀತ ಕಚೇರಿ ಅಥವಾ ಶೋನಲ್ಲಿನ ಪ್ರದರ್ಶನದ ನಿಮ್ಮ ರೆಕಾರ್ಡಿಂಗ್ ಅನ್ನು ನೀವು ಮಾನಿಟೈಸ್ ಮಾಡಲು ಬಯಸಿದರೆ, ನಿಮಗೆ ಮೂಲ ಹಕ್ಕುಗಳ ಮಾಲೀಕರ ಸ್ಪಷ್ಟವಾದ ಲಿಖಿತ ಅನುಮತಿ ಬೇಕಾಗುತ್ತದೆ.

ನಾನು TV, DVD, ಅಥವಾ CD ಯಿಂದ ರೆಕಾರ್ಡಿಂಗ್ ಮಾಡಿದ್ದೇನೆ

ನೀವು ಸ್ವತಃ ಏನನ್ನಾದರೂ ರೆಕಾರ್ಡ್ ಮಾಡಿರಬಹುದಾದರೂ, ರೆಕಾರ್ಡ್ ಮಾಡಲಾಗುತ್ತಿರುವ ಕಂಟೆಂಟ್‌ನ ರಚನೆಕಾರರು ಅಥವಾ ಲೇಖಕರು ಈ ಕಂಟೆಂಟ್ ಅನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳಲು ಅಗತ್ಯವಾದ ಹಕ್ಕುಗಳನ್ನು ಹೊಂದಿರುತ್ತಾರೆ.

ಟಿವಿ ಕಾರ್ಯಕ್ರಮ, DVD ಅಥವಾ CD ಯ ನಿಮ್ಮ ರೆಕಾರ್ಡಿಂಗ್ ಅನ್ನು ಮಾನಿಟೈಸ್ ಮಾಡಲು, ನಿಮಗೆ ರೆಕಾರ್ಡ್ ಮಾಡಲಾದ ಆಡಿಯೊ ಅಥವಾ ವಿಷುವಲ್ ಎಲಿಮೆಂಟ್‌ಗಳ ಹಕ್ಕುಗಳ ಮಾಲೀಕರ ಲಿಖಿತ ಅನುಮತಿ ಬೇಕಾಗುತ್ತದೆ.

ನಾನು ಖರೀದಿಸಿದ ಕಂಟೆಂಟ್ ಅನ್ನು ನಾನು ಅಪ್‌ಲೋಡ್ ಮಾಡುತ್ತೇನೆ

ನೀವು ಸ್ವತಃ ಏನನ್ನಾದರೂ ಖರೀದಿ ಮಾಡಿರಬಹುದಾದರೂ, ಈ ಕಂಟೆಂಟ್ ಅನ್ನು ವಾಣಿಜ್ಯಕವಾಗಿ ಪ್ರಕಟಪಡಿಸಲು ಅಗತ್ಯವಾಗಿರುವ ಹಲವು ಹಕ್ಕುಗಳನ್ನು ಸಾಮಾನ್ಯವಾಗಿ ಅದರ ನಿಜವಾದ ರಚನೆಕಾರರು ಅಥವಾ ಲೇಖಕರು ಹೊಂದಿರುತ್ತಾರೆ.

ಮೂರನೇ ವ್ಯಕ್ತಿಯ ಕಂಟೆಂಟ್‌ನ ಹಕ್ಕುಗಳ ಮಾಲೀಕರು ನಿಮಗೆ ವಾಣಿಜ್ಯಿಕ ಬಳಕೆಯ ಹಕ್ಕುಗಳನ್ನು ನೀಡದ ಹೊರತು ನೀವು ಅದನ್ನು ಖರೀದಿಸಿದರೆ ಅದನ್ನು ಮಾನಿಟೈಸ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ಆನ್‌ಲೈನ್‌ನಲ್ಲಿ ನನಗೆ ಕಂಡುಬಂದ ಕಂಟೆಂಟ್ ಅನ್ನು ನಾನು ಅಪ್‌ಲೋಡ್ ಮಾಡುತ್ತೇನೆ

ನಿಮಗೆ ಆನ್‌ಲೈನ್‌ನಲ್ಲಿ ಶುಲ್ಕವಿಲ್ಲದೇ ಕಂಟೆಂಟ್ ಕಂಡುಬಂದರೂ, ಸಾಮಾನ್ಯವಾಗಿ ಕಂಟೆಂಟ್ ಅನ್ನು ವಾಣಿಜ್ಯಿಕವಾಗಿ ಪ್ರಕಟಪಡಿಸಲು ಅಗತ್ಯವಾಗಿರುವ ಹಲವು ಹಕ್ಕುಗಳನ್ನು ಅದರ ನಿಜವಾದ ರಚನೆಕಾರರು ಹೊಂದಿರುತ್ತಾರೆ.

ಅಂತಹ ವಿಷಯವನ್ನು ಮಾನಿಟೈಸ್ ಮಾಡಲು ನೀವು ಬಯಸಿದರೆ, ಅದಕ್ಕಾಗಿನ ಎಲ್ಲಾ ಅಗತ್ಯ ವಾಣಿಜ್ಯಿಕ ಬಳಕೆಯ ಹಕ್ಕುಗಳನ್ನು ನೀವು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.

ಅದು YouTube ಆಡಿಯೋ ಲೈಬ್ರರಿಯಿಂದ ಸಂಗೀತವನ್ನು ಒಳಗೊಂಡಿದೆ

ನೀವು YouTube ಆಡಿಯೋ ಲೈಬ್ರರಿಯಿಂದ ಸಂಗೀತವನ್ನು ಮಾನಿಟೈಸ್ ಮಾಡಬಹುದು.

ನಾನು ನ್ಯಾಯಯುತ ಬಳಕೆಯ ಅಡಿಯಲ್ಲಿ ಥರ್ಡ್ ಪಾರ್ಟಿ ಕಂಟೆಂಟ್ ಅನ್ನು ಬಳಸಿದ್ದೇನೆ

ವಾಣಿಜ್ಯಿಕ ಬಳಕೆಗಳನ್ನು "ನ್ಯಾಯಯುತ ಬಳಕೆ" ಎಂದು ಪರಿಗಣಿಸುವ ಸಾಧ್ಯತೆ ಕಡಿಮೆಯಾಗಿರುತ್ತದೆ, ಆದರೆ ವೀಡಿಯೊವನ್ನು ಮಾನಿಟೈಸ್ ಮಾಡಲು ಮತ್ತು ನ್ಯಾಯಯುತ ಬಳಕೆಯ ರಕ್ಷಣೆಯ ಲಾಭ ಪಡೆಯಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ, YouTube ನಲ್ಲಿ ನ್ಯಾಯಯುತ ಬಳಕೆ ಲೇಖನವನ್ನು ಪರಿಶೀಲಿಸಿ.

ಇನ್ನೂ ಸಹಾಯ ಬೇಕೇ?

ನೀವು ಯಾವ ಪ್ರಕಾರದ ಕಂಟೆಂಟ್ ಅನ್ನು ಮಾನಿಟೈಸ್ ಮಾಡಬಹುದು ಅಥವಾ ಮಾನಿಟೈಸ್ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕುರಿತು ನಿಮಗೆ ಇನ್ನೂ ಖಾತ್ರಿ ಇಲ್ಲದಿದ್ದರೆ, ನಮ್ಮ ಜಾಹೀರಾತುದಾರ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು ಅನ್ನು ಪರಿಶೀಲಿಸಿ. YouTube ನಲ್ಲಿ ಕೃತಿಸ್ವಾಮ್ಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಈ ಪುಟದಲ್ಲಿನ ವಿಷಯವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದೆ ಮತ್ತು ಅದು ಕಾನೂನುಬದ್ಧ ಸಲಹೆಯಲ್ಲ. ನೀವು ವಕೀಲರು ಅಥವಾ ಕಾನೂನು ಪ್ರತಿನಿಧಿಯಿಂದ ಮಾತ್ರ ಕಾನೂನು ಸಲಹೆಯನ್ನು ಕೋರಬೇಕು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17807358785223774177
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false