ಆ್ಯಡ್ ನೀತಿಯ ಅವಲೋಕನ

ಈ ಲೇಖನದಲ್ಲಿ, ಎಲ್ಲಾ ಜಾಹೀರಾತುದಾರರು ಅನುಸರಿಸಬೇಕಾದ ಕಾರ್ಯನೀತಿಗಳು ಮತ್ತು ನಾವು ಆ್ಯಡ್‌ಗಳನ್ನು ಹೇಗೆ ಪರಿಶೀಲಿಸುತ್ತೇವೆ ಎಂಬುದರ ಕುರಿತು ನೀವು ಕಲಿತುಕೊಳ್ಳಬಹುದು.

ನಮ್ಮ ನೀತಿಗಳು

YouTube ನಲ್ಲಿ ಆ್ಯಡ್‌ಗಳನ್ನು ಸೇರಿಸಬೇಕಾದರೆ, ನೀವು ಈ ನಿಯಮಗಳನ್ನು ಅನುಸರಿಸಬೇಕು:

ಕಾರ್ಯನೀತಿ ಮಾರ್ಗದರ್ಶನಗಳು

ನಮ್ಮ ಕಾರ್ಯನೀತಿ ಮಾರ್ಗದರ್ಶನಗಳ ಕುರಿತು ಕೆಳಗೆ ನೀವು ಇನ್ನಷ್ಟು ವಿವರವಾದ ಮಾಹಿತಿಯನ್ನು ಕಾಣುತ್ತೀರಿ:

ನಿಷೇಧಿತ ಕಂಟೆಂಟ್

ನೀವು Google Network ನಲ್ಲಿ ಜಾಹೀರಾತು ನೀಡಲು ಸಾಧ್ಯವಾಗದ ಕಂಟೆಂಟ್

ನಿಷೇಧಿಸಲಾದ ಅಭ್ಯಾಸಗಳು

ನಮ್ಮ ಜೊತೆಗೆ ಜಾಹೀರಾತು ಸೇವೆಯನ್ನು ನೀಡುವಾಗ ನೀವು ಯಾವೆಲ್ಲಾ ಚಟುವಟಿಕೆಗಳನ್ನು ನಡೆಸಬಾರದು

ನಿರ್ಬಂಧಿತ ಕಂಟೆಂಟ್

ಕೆಲವೊಂದು ಮಿತಿಗಳಿಗೆ ಒಳಪಟ್ಟು ನೀವು ಜಾಹೀರಾತು ನೀಡಬಹುದಾದ ಕಂಟೆಂಟ್

ಸಂಪಾದಕೀಯ ಮತ್ತು ತಾಂತ್ರಿಕ

ನಿಮ್ಮ ಜಾಹೀರಾತುಗಳು, ವೆಬ್‌ಸೈಟ್‌ಗಳು ಹಾಗೂ ಆ್ಯಪ್‌ಗಳಿಗಾಗಿ ಗುಣಮಟ್ಟದ ಪ್ರಮಾಣಕಗಳು

ಇತರ ಪ್ರಮುಖ ನೀತಿಗಳು

ಆ್ಯಡ್‌ಗಳು YouTube ನಲ್ಲಿ ಕಾಣಿಸಿಕೊಂಡಾಗ ವಿಶೇಷವಾಗಿ ಗೋಚರಿಸುತ್ತವೆ. ಕೆಳಗಿನ ಲಿಂಕ್‌ಗಳು ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತಿರುವ ಯಾವುದೇ ಆ್ಯಡ್‌ಗೆ ಅನ್ವಯಿಸುವ ಇತರ ನೀತಿಗಳನ್ನು ಒಳಗೊಂಡಿವೆ:

ನೀತಿಗಳು ಎಲ್ಲಿ ಅನ್ವಯವಾಗುತ್ತವೆ

ನಮ್ಮ ನೀತಿಗಳು ನಿಮ್ಮ ಕಂಟೆಂಟ್‌ನ ಎಲ್ಲಾ ಭಾಗಗಳಿಗೂ ಅನ್ವಯವಾಗುತ್ತದೆ, ಇವುಗಳೂ ಸೇರಿದಂತೆ:

  • ಆ್ಯಡ್‌ನಲ್ಲಿರುವ ಪಠ್ಯ
  • ಆ್ಯಡ್‌ನಲ್ಲಿ ಸೃಜನಾತ್ಮಕ ಎಲಿಮೆಂಟ್‌ಗಳು
  • ನಿಮ್ಮ ಸೈಟ್‌ನ ಕಂಟೆಂಟ್ ಅಥವಾ ನಿಮ್ಮ ಚಾನಲ್ ಅಥವಾ ವೀಡಿಯೊದ ಕಂಟೆಂಟ್

ನಿಮ್ಮ ಆ್ಯಡ್ ಅನ್ನು ರಚಿಸಿದ ಬಳಿಕ, ಅದನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ. ನಮ್ಮ ಆ್ಯಡ್ ಪರಿಶೀಲನೆ ಪ್ರಕ್ರಿಯೆಯ ಕುರಿತು ಕೆಳಗೆ ಇನ್ನಷ್ಟು ತಿಳಿಯಿರಿ.

ನಾವು ಆ್ಯಡ್‌ಗಳನ್ನು ಹೇಗೆ ಪರಿಶೀಲಿಸುತ್ತೇವೆ

ನೀವು ಆ್ಯಡ್ ಅಥವಾ ವಿಸ್ತರಣೆಯನ್ನು ರಚಿಸಿದ ಇಲ್ಲವೇ ಎಡಿಟ್ ಮಾಡಿದ ಬಳಿಕ, ಪರಿಶೀಲನೆ ಪ್ರಕ್ರಿಯೆಯು ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ.

ಆ್ಯಡ್ ಪರಿಶೀಲನೆ ವಿವರಗಳು

ನಾವು ಯಾವೆಲ್ಲಾ ಅಂಶಗಳನ್ನು ಪರಿಶೀಲಿಸುತ್ತೇವೆ

  • ಹೆಡ್‌ಲೈನ್‌
  • ವಿವರಣೆ
  • ಕೀವರ್ಡ್‌ಗಳು
  • ಗಮ್ಯಸ್ಥಾನ
  • ಚಿತ್ರಗಳು
  • ವೀಡಿಯೊ.

ವಿಮರ್ಶಕರು ಯಾವ ಅಂಶಗಳನ್ನು ಪರಿಗಣಿಸುತ್ತಾರೆ

ವೀಡಿಯೊ ವಿಶಿಷ್ಟ ಫಾರ್ಮ್ಯಾಟ್ ಆಗಿರುವುದರಿಂದ, ನಿಮ್ಮ ಆ್ಯಡ್ ಅನ್ನು ಮೌಲ್ಯಮಾಪನ ಮಾಡುವಾಗ ನಾವು ನಿರ್ದಿಷ್ಟ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದೇನೆಂದರೆ, ಅವುಗಳೆಂದರೆ:

  • ವೀಡಿಯೊದ ಫೋಕಲ್ ಪಾಯಿಂಟ್
  • ಕ್ಯಾಮರಾ ಆ್ಯಂಗಲ್ ಮತ್ತು ಫ್ಲೀಟಿಂಗ್ ದೃಶ್ಯಗಳು
  • ನಮ್ಮ ಬಳಕೆದಾರರಿಗೆ ತೋರಿಸುವ ಚಿತ್ರಗಳ ಸ್ಪಷ್ಟತೆ

ನೀವು ಏನು ಮಾಡಬಹುದು

ಸಂದರ್ಭವು ತುಂಬಾ ಪ್ರಮುಖವಾಗಿದೆ ಮತ್ತು ಅದನ್ನು ಸೇರಿಸುವುದು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಸಿಸ್ಟಂಗಳಿಗೆ ಎಲ್ಲಾ ಸಮಯದಲ್ಲೂ ಸರಿಯಾದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗದೇ ಇರಬಹುದು. ನಮ್ಮ ಸಿಸ್ಟಂಗಳು ನಿಮ್ಮ ಆ್ಯಡ್‌ಗಳನ್ನು “ನಿರಾಕರಿಸಲಾಗಿದೆ” ಎಂದು ಗುರುತು ಹಾಕಿದರೆ, ನೀವು ಇಲ್ಲಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ಈ ಸ್ಥಿತಿಯನ್ನು ಬಗೆಹರಿಸುವ ಹಂತಗಳನ್ನು ತೆಗೆದುಕೊಳ್ಳಬಹುದು. ನಮ್ಮ ಮಾನವ ವಿಮರ್ಶಕರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ನಿಮ್ಮ ಕಂಟೆಂಟ್ ಮತ್ತು ಸಂದರ್ಭವನ್ನು ಮೌಲ್ಯಮಾಪನ ಮಾಡುತ್ತಾರೆ.

ನಮ್ಮ ಆ್ಯಡ್ ಅನುಮೋದನೆ ಪ್ರಕ್ರಿಯೆ ಕುರಿತು ಇನ್ನಷ್ಟು ತಿಳಿಯಿರಿ.

ನಮ್ಮ ನೀತಿಗಳ ಕುರಿತು

ನಮ್ಮ ಬಳಕೆದಾರರು, ಜಾಹೀರಾತುದಾರರು ಮತ್ತು ಪಾಲುದಾರರಿಗೆ ಪ್ರಯೋಜನವಾಗುವಂತಹ ನ್ಯಾಯಯುತ ಮತ್ತು ಸ್ಥಿರವಾದ ನೀತಿಗಳ ಜೊತೆಗೆ ಆ್ಯಡ್ ಸೇವೆಯನ್ನು ಒದಗಿಸಲು YouTube ಬದ್ಧವಾಗಿದೆ. ಈ ಗುರಿಯನ್ನು ಸಾಧಿಸಲು, ನಾವು ನಮ್ಮ ಸೈಟ್‌ನಲ್ಲಿ ಸ್ವೀಕರಿಸಿದ ಜಾಹೀರಾತುಗಳ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತೇವೆ. ಇವುಗಳು ನಮ್ಮ ತಾಂತ್ರಿಕ, ಸಮುದಾಯ, ಮತ್ತು ಜಾಹೀರಾತು ಮಾರ್ಗದರ್ಶಿಸೂಚಿಗಳನ್ನು ಮತ್ತು ನೀತಿಗಳ ಮೂಲಕ ಸಾಕಾರಗೊಳಿಸುತ್ತವೆ.

ಆ್ಯಡ್ ನೀತಿಗಳ ವಿವರಗಳು
ಪೂರ್ವ ಸೂಚನೆಯನ್ನು ನೀಡದೆಯೇ ನಮ್ಮ ಜಾಹೀರಾತು ನೀತಿಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಇತ್ತೀಚಿನ ಅಪ್‌ಡೇಟ್‌ಗಳನ್ನು ಓದಲು ಆಗಾಗ ಪರಿಶೀಲಿಸುತ್ತಿರುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಪಾಲುದಾರರ ಮಾರಾಟ ಪ್ರೋಗ್ರಾಂನಲ್ಲಿ ಭಾಗವಹಿಸುವ ಪಾಲುದಾರರು ನಮ್ಮ ಆ್ಯಡ್ ನೀತಿಗಳು ಮತ್ತು ಬಿಲ್ಲಿಂಗ್ ನಿಯಮಗಳಿಗೆ ಬದ್ಧರಾಗಿರಬೇಕು. ಕೆಲವೊಮ್ಮೆ, ಜಾಹೀರಾತುಗಳು ತಾಂತ್ರಿಕ ಅಥವಾ ನೀತಿಯ ಇತಿಮಿತಿಗಳ ಕಾರಣದಿಂದಾಗಿ ಮಾರಾಟ ಮಾಡಿದವರು YouTube ನಿಂದ ನೀಡಲ್ಪಟ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿರಬಹುದು.
ನಿಮ್ಮ ಆ್ಯಡ್‌ನಲ್ಲಿರುವ ಪಠ್ಯ ಅಥವಾ ಇತರ ಸೃಜನಶೀಲ ಅಂಶಗಳನ್ನು ಆಧರಿಸಿ ಈ ನೀತಿಗಳನ್ನು ಅನ್ವಯಿಸಬಹುದು. ನಿಮ್ಮ ಸೈಟ್‌ನ ಕಂಟೆಂಟ್, ನಿಮ್ಮ ಚಾನಲ್ ಅಥವಾ ವೀಡಿಯೊದ ಕಂಟೆಂಟ್‌ನ ಆಧಾರದ ಮೇಲೆ ಸಹ ನೀತಿಗಳನ್ನು ಅನ್ವಯಿಸಬಹುದು. ನಮ್ಮ ನೀತಿಗಳನ್ನು ಕಾರ್ಯಗತಗೊಳಿಸುವುದು ಯಾವಾಗಲೂ ಸ್ವಂತ ವಿವೇಚನೆಯ ಅಂಶವನ್ನು ಒಳಗೊಂಡಿರುತ್ತದೆ ಮತ್ತು ಯಾವುದೇ ಆ್ಯಡ್ ಅನ್ನು ತಿರಸ್ಕರಿಸುವ ಅಥವಾ ಅನುಮೋದಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಈ ನೀತಿಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನಾವು ಯಾವುದೇ ಪ್ರಚಾರದ ಅಭಿಯಾನವನ್ನು ಅಮಾನತುಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ನಾವು ಗೊಂದಲಕಾರಿ ಅಥವಾ ಸೂಕ್ತವಲ್ಲ ಎಂದು ಭಾವಿಸುವ ಯಾವುದೇ ಆ್ಯಡ್ ಅನ್ನು ಸೈಟ್‌ನಿಂದ ತೆಗೆದುಹಾಕುವ ಹಕ್ಕನ್ನು ಸಹ ಕಾಯ್ದಿರಿಸಿದ್ದೇವೆ. ನಿಮ್ಮ ಆ್ಯಡ್‌ಗಳು ಈ ಮಾರ್ಗಸೂಚಿಗಳನ್ನು ಅನುಸರಿಸುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ. ನೀತಿ ಉಲ್ಲಂಘನೆಗಳ ಪರಿಣಾಮವಾಗಿ ಸಂಬಂಧಿತ ಆ್ಯಡ್‌ಗಳು ಅಥವಾ ವೀಡಿಯೊಗಳನ್ನು ನಿಷ್ಕ್ರಿಯಗೊಳಿಸಿದ, ಅಮಾನತುಗೊಳಿಸಿದ ಅಥವಾ ವಯಸ್ಸಿನ ನಿರ್ಬಂಧಿತವಾಗಿರುವ ಪ್ರಚಾರಗಳಿಗೆ ಮರುಪಾವತಿಯನ್ನು ನೀಡಲಾಗುವುದಿಲ್ಲ.
YouTube ಆ್ಯಡ್ ಮತ್ತು ಕಂಟೆಂಟ್ ನೀತಿಗಳು ನಮ್ಮ ಬಳಕೆಯ ನಿಯಮಗಳಿಗೆ ಪೂರಕವಾಗಿವೆ. ಈ ನೀತಿಗಳು ಹೋಮ್ ಪೇಜ್ ಮತ್ತು ಡಿಸ್‌ಪ್ಲೇ ಆ್ಯಡ್‌ಗಳು, ಗ್ರಾಹಕರ ತೊಡಗಿಸಿಕೊಳ್ಳುವಿಕೆ ಪ್ರೋಗ್ರಾಂಗಳು ಮತ್ತು ಮೊಬೈಲ್ ಆ್ಯಡ್‌ಗಳು ಸೇರಿದಂತೆ, ಡಬಲ್‌ಕ್ಲಿಕ್ ಉತ್ಪನ್ನಗಳು ಮತ್ತು ಸೇವೆಗಳನ್ನು ಸಹ ಒಳಗೊಂಡಿರುತ್ತವೆ.
ನಿಮ್ಮ YouTube ಅಥವಾ ಅದರ ಆ್ಯಡ್ ಪ್ರೋಗ್ರಾಂನ ಬಳಕೆಯು ನಿಮ್ಮ ವೆಬ್‌ಸೈಟ್, ವೀಡಿಯೊಗಳು ಅಥವಾ ಆ್ಯಡ್‌ಗಳು ಎಲ್ಲಾ ಸಂಬಂಧಿತ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತವೆ ಎಂಬುದನ್ನು ನೀವು ಪ್ರತಿನಿಧಿಸುತ್ತೀರಿ ಮತ್ತು ಖಾತರಿಪಡಿಸುತ್ತೀರಿ. ಈ ಕಾನೂನುಗಳು ಮತ್ತು ನಿಯಮಗಳು ಯಾವುದೇ ಸಂಬಂಧಿತ ಸ್ವಯಂ ನಿಯಂತ್ರಣ ಅಥವಾ ಉದ್ಯಮ ಮಾರ್ಗಸೂಚಿಗಳನ್ನು ಒಳಗೊಂಡಿರುತ್ತವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11403006574731227787
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false