ನಿಮ್ಮ YouTube ಖಾತೆಯನ್ನು ಪರಿಶೀಲಿಸುವುದು

ನಿಮ್ಮ ಚಾನಲ್ ಅನ್ನು ದೃಢೀಕರಿಸಲು, ಫೋನ್ ಸಂಖ್ಯೆಯನ್ನು ನಮೂದಿಸಿ ಎಂದು ನಿಮ್ಮನ್ನು ಕೇಳಲಾಗುತ್ತದೆ. ನಾವು ಪರಿಶೀಲನೆ ಕೋಡ್ ಅನ್ನು ಪಠ್ಯ ಅಥವಾ ಧ್ವನಿ ಕರೆಯ ಮೂಲಕ ಆ ಫೋನ್ ಸಂಖ್ಯೆಗೆ ಕಳುಹಿಸುತ್ತೇವೆ.

ನಿಮ್ಮ ಖಾತೆಯನ್ನು ನೀವು ದೃಢೀಕರಿಸಿದ ನಂತರ, ನೀವು ಇವುಗಳನ್ನು ಮಾಡಬಹುದು:

ನೀವು ಸಾಕಷ್ಟು ಚಾನಲ್ ಇತಿಹಾಸವನ್ನು ಈಗಾಗಲೇ ರಚಿಸಿದ್ದರೆ, ನಿಮ್ಮ YouTube ಖಾತೆಯನ್ನು ದೃಢೀಕರಿಸುವುದರಿಂದ ಸುಧಾರಿತ ಫೀಚರ್‌ಗಳು ಸಹ ಅನ್‌ಲಾಕ್ ಆಗುತ್ತವೆ.

ನೀವು ಸೈನ್ ಅಪ್ ಮಾಡುವಾಗ ನಿಮ್ಮ ಖಾತೆಯನ್ನು ದೃಢೀಕರಿಸಿ ಎಂದು ಸಹ ನಿಮ್ಮನ್ನು ಕೇಳಲಾಗಬಹುದು.

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ನನ್ನ ಫೋನ್ ಸಂಖ್ಯೆಯನ್ನು YouTube ಏಕೆ ಕೇಳುತ್ತದೆ?

ಸ್ಪ್ಯಾಮ್ ಮತ್ತು ನಿಂದನೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಗುರುತನ್ನು ದೃಢೀಕರಿಸಲು ಫೋನ್ ಸಂಖ್ಯೆಗಳನ್ನು ಬಳಸುವುದು, ನಮ್ಮ ಸಮುದಾಯವನ್ನು ರಕ್ಷಿಸಲು ಮತ್ತು ನಿಂದನೆಯನ್ನು ತಡೆಯಲು ಬಳಸುವ ಒಂದು ಮಾರ್ಗವಾಗಿದೆ.

ನಿಮಗೆ ಪರಿಶೀಲನೆ ಕೋಡ್ ಕಳುಹಿಸುವುದಕ್ಕಾಗಿ ನಾವು ಫೋನ್ ಸಂಖ್ಯೆಯನ್ನು ಬಳಸುತ್ತೇವೆ. ಫೋನ್ ಸಂಖ್ಯೆಯು ಪ್ರತಿ ವರ್ಷಕ್ಕೆ 2 ಚಾನಲ್‌ಗಳಿಗೆ ಮೀರದ ಹಾಗೆ ಲಿಂಕ್ ಆಗಿರುವುದನ್ನು ಸಹ ನಾವು ಖಚಿತಪಡಿಸುತ್ತೇವೆ.

ಗಮನಿಸಿ: ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಮಾರಾಟ ಮಾಡುವುದಿಲ್ಲ.

ಪರಿಶೀಲನೆ ಕೋಡ್ ಅನ್ನು ನಾನು ಸ್ವೀಕರಿಸಿಲ್ಲ

ನೀವು ತಕ್ಷಣ ಕೋಡ್ ಪಡೆಯಬೇಕು. ಸ್ವೀಕರಿಸದಿದ್ದರೆ, ನೀವು ಹೊಸ ಕೋಡ್ ಅನ್ನು ವಿನಂತಿಸಬಹುದು. ಈ ಸಾಮಾನ್ಯ ಸಮಸ್ಯೆಗಳಲ್ಲಿನ ಯಾವುದಾದರೂ ಒಂದು ಸಮಸ್ಯೆಯನ್ನು ನೀವು ಎದುರಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ:

  • ಕೆಲವು ದೇಶಗಳು/ಪ್ರದೇಶಗಳು ಮತ್ತು ಕ್ಯಾರಿಯರ್‌ಗಳು Google ನಿಂದ ಪಠ್ಯ ಸಂದೇಶಗಳನ್ನು ಬೆಂಬಲಿಸುವುದಿಲ್ಲ: ಬಹುತೇಕ ಮೊಬೈಲ್ ಕ್ಯಾರಿಯರ್‌ಗಳು Google ನಿಂದ ಪಠ್ಯ ಸಂದೇಶಗಳನ್ನು ಬೆಂಬಲಿಸುತ್ತವೆ. ನಿಮ್ಮ ಕ್ಯಾರಿಯರ್ Google ನಿಂದ ಪಠ್ಯ ಸಂದೇಶಗಳನ್ನು ಸ್ವೀಕರಿಸುವುದನ್ನು ಬೆಂಬಲಿಸದಿದ್ದರೆ, ನೀವು ಧ್ವನಿ ಕರೆ ಆಯ್ಕೆಯನ್ನು ಪ್ರಯತ್ನಿಸಬಹುದು ಅಥವಾ ಬೇರೊಂದು ಫೋನ್ ಸಂಖ್ಯೆಯನ್ನು ಬಳಸಬಹುದು.
  • ಒಂದೇ ಫೋನ್ ಸಂಖ್ಯೆಯನ್ನು ಹೊಂದಿರುವ ಹಲವಾರು ಖಾತೆಗಳಿವೆ: "ಈ ಫೋನ್ ಸಂಖ್ಯೆಯು ಈಗಾಗಲೇ ಗರಿಷ್ಠ ಸಂಖ್ಯೆಯ ಖಾತೆಗಳನ್ನು ರಚಿಸಿವೆ" ಎಂಬ ದೋಷ ಸಂದೇಶವನ್ನು ನೀವು ಪಡೆದರೆ, ನೀವು ಬೇರೊಂದು ಸಂಖ್ಯೆಯನ್ನು ಬಳಸಬೇಕಾಗುತ್ತದೆ. ದುರುಪಯೋಗವನ್ನು ತಡೆಯುವುದಕ್ಕಾಗಿ ಸಹಾಯ ಮಾಡಲು, ಫೋನ್ ಸಂಖ್ಯೆಯನ್ನು ಪ್ರತಿ ವರ್ಷಕ್ಕೆ 2 ಖಾತೆಗಳೊಂದಿಗೆ ಮಾತ್ರ ಸಂಯೋಜಿಸಬಹುದು.
  • ಪಠ್ಯ ಸಂದೇಶ ಡೆಲಿವರಿಯು ವಿಳಂಬವಾಗಬಹುದು: ದಟ್ಟ ಜನಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಅಥವಾ ನಿಮ್ಮ ಕ್ಯಾರಿಯರ್‌ನ ಮೂಲಭೂತ ಸೌಕರ್ಯಗಳನ್ನು ಚೆನ್ನಾಗಿ ನಿರ್ವಹಣೆ ಮಾಡದಿದ್ದಲ್ಲಿ ವಿಳಂಬಗಳು ಸಂಭವಿಸಬಹುದು. ನೀವು ಕೆಲವು ನಿಮಿಷಗಳಿಗಿಂತ ಹೆಚ್ಚು ಸಮಯ ಕಾದಿದ್ದರೆ ಮತ್ತು ಇನ್ನೂ ನಮ್ಮ ಪಠ್ಯ ಸಂದೇಶವನ್ನು ಸ್ವೀಕರಿಸಿರದಿದ್ದರೆ, ಧ್ವನಿ ಕರೆ ಆಯ್ಕೆಯನ್ನು ಬಳಸಿ ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14384082922778944370
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false