ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳ ಕುರಿತು ತಿಳಿದುಕೊಳ್ಳಿ

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು "ತೆಗೆದುಹಾಕುವಿಕೆ ಸೂಚನೆ" ಅಥವಾ ಸರಳವಾಗಿ "ತೆಗೆದುಹಾಕುವಿಕೆ" ಎಂದು ಕರೆಯಲಾಗುತ್ತದೆ ಮತ್ತು ಕೃತಿಸ್ವಾಮ್ಯವನ್ನು ಅತಿಕ್ರಮಿಸಿದ ಆರೋಪದ ಕಾರಣ YouTube ನಿಂದ ಕಂಟೆಂಟ್ ಅನ್ನು ತೆಗೆದುಹಾಕಲು ಕಾನೂನು ವಿನಂತಿಯಾಗಿದೆ.

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳು Content ID ಕ್ಲೇಮ್‌ಗಳಿಗಿಂತ ಭಿನ್ನವಾಗಿವೆ ಎಂಬುದನ್ನು ನೆನಪಿಡಿ.

ಈ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ

ತಮ್ಮ ಕೃತಿಸ್ವಾಮ್ಯ-ಸುರಕ್ಷಿತ ಕಂಟೆಂಟ್ ಅನ್ನು ತಮ್ಮ ಅನುಮತಿಯಿಲ್ಲದೆ YouTube ನಲ್ಲಿ ಪೋಸ್ಟ್ ಮಾಡಿರುವುದು ಕೃತಿಸ್ವಾಮ್ಯದ ಮಾಲೀಕರ ಗಮನಕ್ಕೆ ಬಂದರೆ, ಅವರು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಬಹುದು.

ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿದ ಬಳಿಕ

ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿದ ಬಳಿಕ, ಅನ್ವಯಿಸುವ ಕೃತಿಸ್ವಾಮ್ಯ ಕಾನೂನಿಗೆ ಅಗತ್ಯವಿರುವ ಮಾಹಿತಿಯನ್ನು ಅದು ಹೊಂದಿದೆ ಮತ್ತು ದುರ್ಬಳಕೆಯ ಯಾವುದೇ ಚಿಹ್ನೆಗಳು ಕಾಣಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು YouTube ಅದನ್ನು ಪರಿಶೀಲಿಸುತ್ತದೆ. ತೆಗೆದುಹಾಕುವಿಕೆ ವಿನಂತಿಯು ಪರಿಶೀಲನೆಯಲ್ಲಿ ತೇರ್ಗಡೆಯಾದರೆ, ಅನ್ವಯಿಸುವ ಕೃತಿಸ್ವಾಮ್ಯ ಕಾನೂನನ್ನು ಅನುಸರಿಸುವುದಕ್ಕಾಗಿ, ಉಲ್ಲಂಘನೆಯ ಆರೋಪ ಹೊತ್ತಿರುವ ಕಂಟೆಂಟ್ ಅನ್ನು YouTube ತೆಗೆದುಹಾಕುತ್ತದೆ.

ತೆಗೆದುಹಾಕುವಿಕೆ ವಿನಂತಿಯಲ್ಲಿ ಮಾಹಿತಿಯು ತಪ್ಪಿಹೋಗಿದ್ದರೆ ಅಥವಾ ಹೆಚ್ಚು ವಿವರದ ಅಗತ್ಯವಿದ್ದರೆ, ಹೆಚ್ಚಿನ ಮಾಹಿತಿಗಾಗಿ YouTube, ಕ್ಲೇಮುದಾರರನ್ನು (ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿದ ವ್ಯಕ್ತಿ) ಸಂಪರ್ಕಿಸುತ್ತದೆ. ಉದಾಹರಣೆಗೆ, ಕ್ಲೇಮುದಾರರಿಗೆ ಈ ಕೆಳಗಿನವುಗಳನ್ನು ಮಾಡಲು ಹೇಳಬಹುದು:

  • ಕೃತಿಸ್ವಾಮ್ಯಕ್ಕೊಳಪಟ್ಟ ಕೃತಿಯ ಹೆಚ್ಚು ನಿರ್ದಿಷ್ಟ ಶೀರ್ಷಿಕೆಯನ್ನು ಒದಗಿಸುವುದು
  • ಅನ್ವಯಿಸಿದರೆ, ಕೃತಿಸ್ವಾಮ್ಯ ಮಾಲೀಕರ ಪರವಾಗಿ ಕ್ರಮ ಕೈಗೊಳ್ಳಲು ದೃಢೀಕರಣದ ಪುರಾವೆಯನ್ನು ಸಲ್ಲಿಸುವುದು
  • ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ಕೃತಿಸ್ವಾಮ್ಯ ವಿನಾಯಿತಿಗಳನ್ನು ಪರಿಗಣಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸುವುದು.

ಅಗತ್ಯವಾದ ಮಾಹಿತಿಯನ್ನು ನಾವು ಸ್ವೀಕರಿಸುವವರೆಗೆ, ಪ್ರಶ್ನೆಯಲ್ಲಿರುವ ಕಂಟೆಂಟ್, YouTube ನಲ್ಲಿ ಹಾಗೆಯೇ ಉಳಿಯಬಹುದು.

ಕಂಟೆಂಟ್ ಅನ್ನು ತೆಗೆದುಹಾಕಿದರೆ

ತೆಗೆದುಹಾಕುವಿಕೆ ವಿನಂತಿಯನ್ನು ಪ್ರಕ್ರಿಯೆಗೊಳಿಸಿದರೆ, ಕಂಟೆಂಟ್ ಅನ್ನು YouTube ನಿಂದ ತೆಗೆದುಹಾಕಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಿದವರ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಅನ್ವಯಿಸಲಾಗುತ್ತದೆ. ಅಪ್‌ಲೋಡ್ ಮಾಡಿದವರು, ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಬಗೆಹರಿಸಲು 3 ಆಯ್ಕೆಗಳನ್ನು ಹೊಂದಿರುತ್ತಾರೆ.

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ ಗಳು)

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳನ್ನು YouTube ಹೇಗೆ ಪರಿಶೀಲಿಸುತ್ತದೆ?

ಸ್ವಯಂಚಾಲಿತ ಸಿಸ್ಟಂಗಳು ಮತ್ತು ಮಾನವ ರಿವ್ಯೂವರ್‌ಗಳ ಸಂಯೋಜನೆಯನ್ನು ಬಳಸಿ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳನ್ನು ಪರಿಶೀಲಿಸಲಾಗುತ್ತದೆ.

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಮಷಿನ್ ಲರ್ನಿಂಗ್ ಅನ್ನು ಬಳಸುತ್ತವೆ. ಈ ಹಿಂದೆ ಮಾನವ ರಿವ್ಯೂವರ್‌ಗಳು ಕೈಗೊಂಡ ನಿರ್ಧಾರಗಳಿಂದ ಪಡೆದ ಡೇಟಾದ ಆಧಾರದ ಮೇಲೆ ಸಿಸ್ಟಂಗಳಿಗೆ ನಿರಂತರವಾಗಿ ತರಬೇತಿ ನೀಡಲಾಗುತ್ತದೆ, ಮತ್ತು ವಿನಂತಿಯಲ್ಲಿ, ಕಾನೂನಿನ ಪ್ರಕಾರ ಅವಶ್ಯಕವಾಗಿರುವ ಎಲ್ಲಾ ಅಂಶಗಳಿವೆ ಮತ್ತು ಅದು ದುರ್ಬಳಕೆ ಮಾಡುತ್ತಿಲ್ಲ ಎಂಬ ಕುರಿತು ಅಧಿಕ ಮಟ್ಟದ ವಿಶ್ವಾಸವಿದ್ದಾಗ ಮಾತ್ರ ಸಿಸ್ಟಂಗಳು ತೆಗೆದುಹಾಕುವಿಕೆ ವಿನಂತಿಗಳನ್ನು ಪ್ರಕ್ರಿಯೆಗೊಳಿಸುತ್ತವೆ. ದುರ್ಬಳಕೆ ಮಾಡುವ ವಿನಂತಿಗಳೆಂದರೆ, ಕೃತಿಸ್ವಾಮ್ಯ ಮಾಲೀಕತ್ವದ ಸಂಭಾವ್ಯ ತಪ್ಪು ಪ್ರತಿಪಾದನೆಯ ಮೂಲಕ YouTube ನಿಂದ ಕಂಟೆಂಟ್ ಅನ್ನು ತೆಗೆದುಹಾಕಲು ಯಾರೋ ಒಬ್ಬರು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರಿತವಾಗಿ ಪ್ರಯತ್ನಿಸುವುದು.

ತೆಗೆದುಹಾಕುವಿಕೆ ವಿನಂತಿಯು ಮಾನ್ಯವಾಗಿದೆಯೇ (ಕಾನೂನಿನ ಪ್ರಕಾರ ಅವಶ್ಯಕವಾಗಿರುವ ಎಲ್ಲಾ ಅಂಶಗಳನ್ನು ಹೊಂದಿದೆ ಮತ್ತು ದುರ್ಬಳಕೆ ಮಾಡುತ್ತಿಲ್ಲ) ಎಂಬುದು ನಮ್ಮ ಸ್ವಯಂಚಾಲಿತ ಸಿಸ್ಟಂಗಳಿಗೆ ಖಚಿತವಾಗಿ ತಿಳಿಯದಿದ್ದರೆ, ತರಬೇತಿ ಪಡೆದ ಮಾನವ ರಿವ್ಯೂವರ್ ವಿನಂತಿಯನ್ನು ಮೌಲ್ಯಮಾಪನ ಮಾಡುತ್ತಾರೆ. ವಿನಂತಿಯ ಮೌಲ್ಯಮಾಪನಕ್ಕಾಗಿ ಅವರಿಗೆ ಹೆಚ್ಚು ಮಾಹಿತಿ ಬೇಕಿದ್ದರೆ, ಮಾನವ ರಿವ್ಯೂವರ್ ಅವರು ಕ್ಲೇಮುದಾರರಿಗೆ ಇಮೇಲ್ ಮಾಡುತ್ತಾರೆ ಮತ್ತು ಹೆಚ್ಚಿನ ಮಾಹಿತಿಯನ್ನು ಕೇಳುತ್ತಾರೆ. ಉದಾಹರಣೆಗೆ, ಕ್ಲೇಮುದಾರರಿಗೆ ಈ ಕೆಳಗಿನವುಗಳನ್ನು ಮಾಡಲು ಹೇಳಬಹುದು:

  • ಕೃತಿಸ್ವಾಮ್ಯಕ್ಕೊಳಪಟ್ಟ ತಮ್ಮ ಕೃತಿಯ ಹೆಚ್ಚು ನಿರ್ದಿಷ್ಟ ಶೀರ್ಷಿಕೆಯನ್ನು ಒದಗಿಸುವುದು
  • ತಾವು ಪ್ರತಿನಿಧಿಸುತ್ತಿರುವ ಕೃತಿಸ್ವಾಮ್ಯ ಮಾಲೀಕರ ಪರವಾಗಿ ಕ್ರಮ ಕೈಗೊಳ್ಳಲು ತಮಗೆ ಅಧಿಕಾರವಿದೆ ಎಂಬುದರ ಪುರಾವೆಯನ್ನು ಸಲ್ಲಿಸುವುದು
  • ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ಕೃತಿಸ್ವಾಮ್ಯ ವಿನಾಯಿತಿಗಳ ಮೂಲಕ ವೀಡಿಯೊ ರಕ್ಷಣೆ ಹೊಂದಿರಬಹುದೇ ಎಂಬುದನ್ನು ಅವರು ಪರಿಗಣಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸುವುದು

ಕ್ಲೇಮುದಾರರು ಇಮೇಲ್‌ಗೆ ಪ್ರತಿಕ್ರಿಯಿಸದಿದ್ದರೆ ಅಥವಾ ಅಗತ್ಯವಿರುವ ಮಾಹಿತಿಯನ್ನು ಒದಗಿಸದಿದ್ದರೆ, ಪ್ರಶ್ನೆಯಲ್ಲಿರುವ ಕಂಟೆಂಟ್, YouTube ನಲ್ಲಿ ಹಾಗೆಯೇ ಉಳಿಯುತ್ತದೆ.

ಕಂಟೆಂಟ್ ಅನ್ನು ಪರಿಶೀಲಿಸುವುದಕ್ಕಾಗಿ ಸ್ವಯಂಚಾಲಿತ ಸಿಸ್ಟಂಗಳನ್ನು ಏಕೆ ಬಳಸಲಾಗುತ್ತದೆ?

ನಾವು ಸ್ವೀಕರಿಸುವ ಅಧಿಕ ಪ್ರಮಾಣದ ತೆಗೆದುಹಾಕುವಿಕೆ ವಿನಂತಿಗಳಿಗೆ ತ್ವರಿತವಾಗಿ ಮತ್ತು ಹೆಚ್ಚು ದಕ್ಷತೆಯಿಂದ ಪ್ರತಿಕ್ರಿಯೆಗಳನ್ನು ಒದಗಿಸಲು ಮತ್ತು ಅಧಿಕ ಮಟ್ಟದ ನಿಖರತೆಯನ್ನು ಕಾಯ್ದುಕೊಳ್ಳಲು ಸ್ವಯಂಚಾಲಿತ ಸಿಸ್ಟಂಗಳನ್ನು ಬಳಸಲಾಗುತ್ತದೆ.

ಉದಾಹರಣೆಗೆ, 2022 ರಲ್ಲಿ YouTube, 16 ಮಿಲಿಯನ್‌ಗೂ ಹೆಚ್ಚು ವೀಡಿಯೊಗಳಿಗಾಗಿ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳನ್ನು ಸ್ವೀಕರಿಸಿತು. ಈ ಅಧಿಕ ಪ್ರಮಾಣದ ಹೊರತಾಗಿಯೂ, ಮಾನ್ಯವಾಗಿರುವ ಸಾಧ್ಯತೆ ಹೆಚ್ಚಾಗಿರುವ ತೆಗೆದುಹಾಕುವಿಕೆ ವಿನಂತಿಗಳನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಸ್ವಯಂಚಾಲಿತ ಸಿಸ್ಟಂಗಳನ್ನು ಬಳಸುವುದರಿಂದ ನಿಖರತೆಯಲ್ಲಿ ರಾಜಿ ಮಾಡಿಕೊಳ್ಳದೆ, ತ್ವರಿತ ಪ್ರತಿಕ್ರಿಯೆ ಸಮಯಗಳನ್ನು ಒದಗಿಸಲು ನಮಗೆ ಸಾಧ್ಯವಾಗುತ್ತದೆ. ವಾಸ್ತವವಾಗಿ, ಮಾನವ ರಿವ್ಯೂವರ್‌ಗಳು ಪ್ರಕ್ರಿಯೆಗೊಳಿಸಿದ ತೆಗೆದುಹಾಕುವಿಕೆಗಳಿಗೆ ಹೋಲಿಸಿದಾಗ, ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಪ್ರಕ್ರಿಯೆಗೊಳಿಸಿರುವ ತೆಗೆದುಹಾಕುವಿಕೆಗಳ ಕುರಿತು ಕಡಿಮೆ ಸಂಖ್ಯೆಯ ಮೇಲ್ಮನವಿಗಳನ್ನು ಸಲ್ಲಿಸುವುದನ್ನು ನಾವು ಕಾಣುತ್ತೇವೆ.

YouTube ನ ಸಿಸ್ಟಂಗಳು ಕಂಟೆಂಟ್ ಅನ್ನು ಹೇಗೆ ಪರಿಶೀಲಿಸುತ್ತವೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.  

ನಾನು ವೀಡಿಯೊಗಳಿಗಾಗಿ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಹೇಗೆ ಸಲ್ಲಿಸಬೇಕು?
ವೀಡಿಯೊಗಳಿಗಾಗಿ ತೆಗೆದುಹಾಕುವಿಕೆ ವಿನಂತಿಗಳನ್ನು ಸಲ್ಲಿಸಲು, ಇಲ್ಲಿ ನೀಡಲಾಗಿರುವ ಹಂತಗಳನ್ನು ಅನುಸರಿಸಿ.
ವೀಡಿಯೊ-ಅಲ್ಲದ ಕಂಟೆಂಟ್‌ಗಾಗಿ, ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ನಾನು ಹೇಗೆ ಸಲ್ಲಿಸಬಹುದು?
ಚಾನಲ್ ಐಕಾನ್ ಚಿತ್ರಗಳಂತಹ ವೀಡಿಯೊ-ಅಲ್ಲದ ಕಂಟೆಂಟ್‌ಗಾಗಿ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಲು, ಇಲ್ಲಿ ನೀಡಲಾಗಿರುವ ಹಂತಗಳನ್ನು ಅನುಸರಿಸಿ. ವೀಡಿಯೊ-ಅಲ್ಲದ ತೆಗೆದುಹಾಕುವಿಕೆ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು ನಮ್ಮ ವೆಬ್‌ಫಾರ್ಮ್‌ಗೆ ಸಾಧ್ಯವಾಗುವುದಿಲ್ಲ. 
ಸಂಪೂರ್ಣ ಚಾನಲ್ ಅಥವಾ ಪ್ಲೇಪಟ್ಟಿಯ ತೆಗೆದುಹಾಕುವಿಕೆಯನ್ನು ನಾನು ವಿನಂತಿಸಬಹುದೇ?
ಇಲ್ಲ, ಅದು ಸಾಧ್ಯವಿಲ್ಲ. ಉಲ್ಲಂಘನೆಯ ಆರೋಪ ಹೊತ್ತ ಯಾವುದೇ ವೀಡಿಯೊಗಳನ್ನು ವೀಡಿಯೊ URL ನ ಮೂಲಕ ನೀವು ಗುರುತಿಸಬೇಕಾಗುತ್ತದೆ. 

ವೀಡಿಯೊ URL ಅನ್ನು ಪಡೆಯುವುದು ಹೇಗೆ ಎಂಬುದನ್ನು ಇಲ್ಲಿ ಕೊಡಲಾಗಿದೆ:

  1. YouTube ನಲ್ಲಿ ವಿವಾದದಲ್ಲಿರುವ ವೀಡಿಯೊವನ್ನು ಹುಡುಕಿ.
  2. ಮೇಲೆ ಇರುವ ವಿಳಾಸ ಪಟ್ಟಿಯಲ್ಲಿ, ಈ ರೀತಿಯ ವೀಡಿಯೊ URL ಇರಬೇಕು: www.youtube.com/watch?v=xxxxxxxxxxx

ಕೃತಿಸ್ವಾಮ್ಯ ವಿನಂತಿಯನ್ನು ಸಲ್ಲಿಸಲು, ಇಲ್ಲಿ ನೀಡಲಾಗಿರುವ ಹಂತಗಳನ್ನು ಅನುಸರಿಸಿ. 

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಪ್ರತಿ ಬಾರಿ ಹೊಸದಾಗಿ ಸಲ್ಲಿಸಿದಾಗ ನಾನು ಏಕೆ ನನ್ನ ಎಲ್ಲಾ ಮಾಹಿತಿಯನ್ನು ನಿಮಗೆ ನೀಡಬೇಕು?

ಅನ್ವಯಿಸುವ ಕೃತಿಸ್ವಾಮ್ಯ ಕಾನೂನಿನ ಅನುಸಾರ, ಕೃತಿಸ್ವಾಮ್ಯ ಉಲ್ಲಂಘನೆಯ ಪ್ರತಿ ಆರೋಪಕ್ಕಾಗಿ ಒಂದು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಕಳುಹಿಸುವುದನ್ನು ನಾವು ಅವಶ್ಯಕಗೊಳಿಸಿದ್ದೇವೆ.

ಮತ್ತೊಂದು ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಲು ಅತ್ಯಂತ ಸುಲಭವಾದ ವಿಧಾನವೆಂದರೆ, YouTube ಗೆ ಸೈನ್ ಇನ್ ಮಾಡುವುದು ಮತ್ತು ನಮ್ಮ ವೆಬ್‌ಫಾರ್ಮ್ ಅನ್ನು ಬಳಸುವುದು.

ಆಗಾಗ ಕೃತಿಸ್ವಾಮ್ಯ ನಿರ್ವಹಣೆಯ ಅವಶ್ಯಕತೆಗಳಿರುವ ಕೃತಿಸ್ವಾಮ್ಯ ಮಾಲೀಕರಿಗಾಗಿ ನಾವು ಹೆಚ್ಚುವರಿ ಕೃತಿಸ್ವಾಮ್ಯ ನಿರ್ವಹಣೆಯ ಟೂಲ್‌‌ಗಳನ್ನು ಒದಗಿಸುತ್ತೇವೆ ಎಂಬುದನ್ನು ನೆನಪಿಡಿ.
ನನ್ನ ಕೃತಿಸ್ವಾಮ್ಯವನ್ನು ಉಲ್ಲಂಘಿಸುವ ವೀಡಿಯೊವೊಂದರ ಕುರಿತು ನಾನು YouTube ಗೆ ತಿಳಿಸಿದೆ ಮತ್ತು ಅದನ್ನು ತೆಗೆದುಹಾಕಲಾಗಿದೆ. ಅದನ್ನು ಸೈಟ್‌ನಲ್ಲಿ ಮರುಸ್ಥಾಪಿಸಬಹುದೆಂದು ಹೇಳುವ ಇಮೇಲ್ ಅನ್ನು ನಾನೇಕೆ ಪಡೆದಿದ್ದೇನೆ?
ನಿಮ್ಮ ತೆಗೆದುಹಾಕುವಿಕೆ ವಿನಂತಿಗೆ ಪ್ರತಿಯಾಗಿ, ಅಪ್‌ಲೋಡ್ ಮಾಡಿದವರಿಂದ ಪ್ರತಿವಾದಿ ನೋಟಿಫಿಕೇಶನ್‌ ಅನ್ನು ನಾವು ಸ್ವೀಕರಿಸಿರುವ ಸಾಧ್ಯತೆಯಿದೆ. ಆರೋಪಿಸಲಾದ ಉಲ್ಲಂಘನೆಯ ಚಟುವಟಿಕೆಯನ್ನು ತಡೆಯಲು ನೀವು ರಚನೆಕಾರರ ವಿರುದ್ಧ ನ್ಯಾಯಾಲಯದ ಕ್ರಮವನ್ನು ಸಲ್ಲಿಸಿದ್ದೀರಿ ಎಂದು ನೀವು ಸಾಬೀತುಪಡಿಸದ ಹೊರತು ವೀಡಿಯೊವನ್ನು ಮರುಸ್ಥಾಪಿಸಲಾಗುತ್ತದೆ. 10 ದಿನಗಳ ಒಳಗಾಗಿ ನಿಮ್ಮಿಂದ ನಾವು ಆ ಸೂಚನೆಯನ್ನು ಪಡೆಯದಿದ್ದರೆ, ನಾವು ಕಂಟೆಂಟ್ ಅನ್ನು YouTube ನಲ್ಲಿ ಮರುಸ್ಥಾಪಿಸಬಹುದು. ಪ್ರತಿವಾದಿ ನೋಟಿಫಿಕೇಶನ್‌ಗೆ ಪ್ರತಿಕ್ರಿಯಿಸುವ ಕುರಿತು ಇನ್ನಷ್ಟು ತಿಳಿಯಿರಿ.
ಕೃತಿಸ್ವಾಮ್ಯಕ್ಕೆ ಒಳಪಟ್ಟ ನನ್ನ ಕೃತಿಗಳ ಅನಧಿಕೃತ ಬಳಕೆಯನ್ನು ಅನುಮತಿಸುವ ಪಾಸ್‌ವರ್ಡ್‌ಗಳು ಅಥವಾ ಕೀ ಜನರೇಟರ್‌ಗಳನ್ನು ನೀಡುವ ವೀಡಿಯೊಗಳನ್ನು ನಾನು ಹೇಗೆ ವರದಿ ಮಾಡಬಹುದು?
ಪಾಸ್‌ವರ್ಡ್‌ಗಳು, ಕೀ ಜನರೇಟರ್‌ಗಳು ಅಥವಾ ಕ್ರ್ಯಾಕ್‌ಗಳ ಮೂಲಕ ನಿಮ್ಮ ಸಾಫ್ಟ್‌ವೇರ್‌ನ ನಿರ್ಬಂಧಗಳನ್ನು ಹೇಗೆ ಬೈಪಾಸ್ ಮಾಡಬಹುದೆಂದು ಒಂದು ವೀಡಿಯೊ ವಿವರಿಸಿದರೆ, ನಮಗೆ ತಿಳಿಸುವುದಕ್ಕಾಗಿ, ಇತರ ಕಾನೂನು ಸಮಸ್ಯೆಗಳು ಎಂಬ ಫಾರ್ಮ್ ಅನ್ನು ಬಳಸಿ.
ಬೇರೊಂದು ಪ್ಲ್ಯಾಟ್‌ಫಾರ್ಮ್‌ನಿಂದ ನನ್ನ ವೀಡಿಯೊದ ಪ್ರತಿಯನ್ನು ನಾನು ಹೇಗೆ ತೆಗೆದುಹಾಕಲಿ?

ನಿಮ್ಮ ಅನುಮತಿಯಿಲ್ಲದೆ ನಿಮ್ಮ YouTube ವೀಡಿಯೊವನ್ನು ಬೇರೊಂದು ಪ್ಲ್ಯಾಟ್‌ಫಾರ್ಮ್‌ನಲ್ಲಿ ಹಾಕಿರುವುದನ್ನು ನೀವು ನೋಡಿದರೆ, ವೀಡಿಯೊವನ್ನು ತೆಗೆದುಹಾಕಲು ವಿನಂತಿಸುವುದಕ್ಕಾಗಿ ನೀವು ಅವರ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. YouTube ನಿಮಗಾಗಿ ತೆಗೆದುಹಾಕುವಿಕೆಯನ್ನು ವಿನಂತಿಸಲು ಸಾಧ್ಯವಿಲ್ಲ.

ರಚನೆಕಾರರು ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಅನುಮತಿಸುವ ಬಹುತೇಕ ಸೈಟ್‌ಗಳು Digital Millennium Copyright Act ನ (DMCA) Safe Harbor ಅನ್ನು ಅವಲಂಬಿಸಿರುತ್ತವೆ. ಅವರು ಕೃತಿಸ್ವಾಮ್ಯ ಮಾಲೀಕರಿಂದ ಸಂಪೂರ್ಣವಾದ ಮತ್ತು ಮಾನ್ಯವಾದ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಪಡೆದಾಗ, ಅವರು ಕಂಟೆಂಟ್ ಅನ್ನು ತೆಗೆದುಹಾಕಬೇಕು. ಕೆಲವು ವಿನಾಯಿತಿಗಳು ಇವೆ, ಆದರೆ ನಿಮ್ಮ ಕೃತಿಯ ಪ್ರತಿಯು ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ಕೃತಿಸ್ವಾಮ್ಯ ವಿನಾಯಿತಿಗೆ ಅರ್ಹತೆ ಪಡೆಯುವುದಿಲ್ಲ ಎಂದು ನಿಮಗೆ ಖಚಿತವಾಗಿ ತಿಳಿದಿದ್ದರೆ, ನೀವು ಅದನ್ನು ತೆಗೆದುಹಾಕಲು ವಿನಂತಿಸಬಹುದು.

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯಲ್ಲಿ ನೀವು ಏನನ್ನು ಸೇರಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು DMCA ತೆಗೆದುಹಾಕುವಿಕೆ ಸೂಚನೆಯ ಅವಶ್ಯಕತೆಗಳನ್ನು ಪರಿಶೀಲಿಸಿ.

ಬಹುತೇಕ ಸೈಟ್‌ಗಳಿಗೆ, ನಿರ್ದಿಷ್ಟ ವೀಡಿಯೊ URL ಗೆ ಲಿಂಕ್ ಮಾಡುವ ಅಗತ್ಯವಿರುತ್ತದೆ. ನಿಮಗೆ URL ಕಂಡುಬರದಿದ್ದರೆ, ಅದನ್ನು ಪಡೆಯಲು ನೀವು ವೀಡಿಯೊವನ್ನು ಬಲ-ಕ್ಲಿಕ್ ಮಾಡುವುದನ್ನು ಅಥವಾ ವೀಡಿಯೊದ ಸಮಯಸ್ಟ್ಯಾಂಪ್ ಕ್ಲಿಕ್ ಮಾಡುವುದನ್ನು ಪ್ರಯತ್ನಿಸಬಹುದು.

DMCA ಅನ್ನು ಅವಲಂಬಿಸಿರುವ ಸೈಟ್‌ಗಳು US ಕೃತಿಸ್ವಾಮ್ಯ ಕಚೇರಿ ಮತ್ತು ಅದರ ವೆಬ್‌ಸೈಟ್‌ಗಳಲ್ಲಿ ಪಟ್ಟಿಮಾಡಲಾದ ನಿಯೋಜಿತ DMCA ಏಜೆಂಟ್‌ಗಾಗಿ ಸಂಪರ್ಕ ಮಾಹಿತಿಯನ್ನು ಹೊಂದಿರಬೇಕು. ನಿಮ್ಮ ಅನುಮತಿಯಿಲ್ಲದೆ ಈ ಸೈಟ್‌ಗಳಲ್ಲಿ ಯಾವುದಾದರೂ ಒಂದರಲ್ಲಿ ನಿಮ್ಮ ವೀಡಿಯೊವನ್ನು ಹಾಕಿರುವುದನ್ನು ನೀವು ನೋಡಿದರೆ, ಕೆಳಗೆ ಇರುವ ಸೂಕ್ತವಾದ ಇಮೇಲ್ ವಿಳಾಸಕ್ಕೆ ನಿಮ್ಮ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ನೀವು ಕಳುಹಿಸಬಹುದು. ನೀವು ಹುಡುಕುತ್ತಿರುವ ಸೈಟ್ ಅನ್ನು ಈ ಕೆಳಗೆ ಪಟ್ಟಿ ಮಾಡಿಲ್ಲದಿದ್ದರೆ, ನೀವು ಯು.ಎಸ್ ಕೃತಿಸ್ವಾಮ್ಯ ಕಚೇರಿಯ DMCA ಏಜೆಂಟ್ ಡೇಟಾಬೇಸ್ ಅನ್ನು ಸಹ ಪರಿಶೀಲಿಸಬಹುದು.

Dailymotion: notifications@dailymotion.com

Instagram: ip@instagram.com

Facebook: ip@fb.com

TikTok: copyright@tiktok.com

Twitter: copyright@twitter.com

Vimeo: dmca@vimeo.com 

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
776608753037653163
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false