ವೈದ್ಯಕೀಯ ತಪ್ಪು ಮಾಹಿತಿ ಕುರಿತಾದ ನೀತಿ

ನಿರ್ದಿಷ್ಟ ಆರೋಗ್ಯ ಸಮಸ್ಯೆಗಳು ಮತ್ತು ವಸ್ತುಗಳ ಕುರಿತು ಸ್ಥಳೀಯ ಆರೋಗ್ಯ ಪ್ರಾಧಿಕಾರಗಳು (LHA ಗಳು) ಅಥವಾ ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳಿಗೆ ವಿರುದ್ಧವಾದ ವೈದ್ಯಕೀಯ ತಪ್ಪು ಮಾಹಿತಿಯನ್ನು ಹರಡುವ ಮೂಲಕ ತೀವ್ರವಾದ ಹಾನಿ ಉಂಟುಮಾಡುವ ಕಂಟೆಂಟ್ ಅನ್ನು YouTube ಅನುಮತಿಸುವುದಿಲ್ಲ. ಈ ನೀತಿಯು ಈ ಮುಂದಿನ ವರ್ಗಗಳನ್ನು ಒಳಗೊಂಡಿದೆ:

  • ತಡೆಗಟ್ಟುವಿಕೆ ಕುರಿತ ತಪ್ಪು ಮಾಹಿತಿ 
  • ಚಿಕಿತ್ಸೆಯ ಕುರಿತ ತಪ್ಪು ಮಾಹಿತಿ 
  • ನಿರಾಕರಣೆ ಕುರಿತ ತಪ್ಪು ಮಾಹಿತಿ

ಗಮನಿಸಿ: YouTube ನ ವೈದ್ಯಕೀಯ ತಪ್ಪು ಮಾಹಿತಿ ನೀತಿಗಳು ಆರೋಗ್ಯ ಪ್ರಾಧಿಕಾರಗಳು ಅಥವಾ WHO ಮಾರ್ಗದರ್ಶನದ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ. ಹೊಸ LHA ಗಳು/WHO ಮಾರ್ಗಸೂಚಿಗಳು ಮತ್ತು ನೀತಿ ಅಪ್‍ಡೇಟ್‍ಗಳ ನಡುವೆ ವಿಳಂಬವಿದ್ದಿರಬಹುದು ಮತ್ತು ನಮ್ಮ ನೀತಿಗಳು ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳು ಮತ್ತು ವಸ್ತುಗಳಿಗೆ ಸಂಬಂಧಿಸಿದ ಎಲ್ಲಾ LHA/WHO ಮಾರ್ಗದರ್ಶನವನ್ನು ಒಳಗೊಳ್ಳದಿರಬಹುದು.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಒಳಗೊಂಡಿರುವ ಕಂಟೆಂಟ್ ಅನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ:

ತಡೆಗಟ್ಟುವಿಕೆ ತಪ್ಪು ಮಾಹಿತಿ: ನಾವು ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳ ತಡೆಗಟ್ಟುವಿಕೆ ಅಥವಾ ಪ್ರಸರಣ ಅಥವಾ ಪ್ರಸ್ತುತ ಅನುಮೋದಿಸಲಾದ ಮತ್ತು ನಿರ್ವಹಿಸಲಾದ ವ್ಯಾಕ್ಸಿನ್‍ಗಳ ಸುರಕ್ಷತೆ, ಪರಿಣಾಮಕಾರಿ ಅಥವಾ ಪದಾರ್ಥಗಳ ಕುರಿತು ಆರೋಗ್ಯ ಇಲಾಖೆ ಮಾರ್ಗದರ್ಶನಕ್ಕೆ ವಿರುದ್ಧವಾದ ಮಾಹಿತಿಯನ್ನು ಪ್ರಚಾರ ಮಾಡುವ ಕಂಟೆಂಟ್ ಅನ್ನು ಅನುಮತಿಸುವುದಿಲ್ಲ.

ಚಿಕಿತ್ಸೆಯ ಕುರಿತ ತಪ್ಪು ಮಾಹಿತಿ: ನಾವು ಸ್ಥಳೀಯ ಆರೋಗ್ಯ ಪ್ರಾಧಿಕಾರಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಸುರಕ್ಷಿತ ಅಥವಾ ಪರಿಣಾಮಕಾರಿಯಾಗಿದೆ ಎಂದು ಅಥವಾ ಅದು ತೀವ್ರ ಹಾನಿಯನ್ನುಂಟುಮಾಡುತ್ತದೆ ಎಂದು ಅನುಮೋದಿಸದ ನಿರ್ದಿಷ್ಟ ಹಾನಿಕಾರಕ ಪದಾರ್ಥಗಳು ಅಥವಾ ಅಭ್ಯಾಸಗಳ ಪ್ರಚಾರ ಸೇರಿದಂತೆ ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆಗಳ ಕುರಿತು ಆರೋಗ್ಯ ಪ್ರಾಧಿಕಾರದ ಮಾರ್ಗದರ್ಶನಕ್ಕೆ ವಿರುದ್ಧವಾದ ಮಾಹಿತಿಯನ್ನು ಉತ್ತೇಜಿಸುವ ಕಂಟೆಂಟ್ ಅನ್ನು ಅನುಮತಿಸುವುದಿಲ್ಲ.

ನಿರಾಕರಣೆ ಕುರಿತ ತಪ್ಪು ಮಾಹಿತಿ: ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳ ಅಸ್ತಿತ್ವವನ್ನು ನಿರಾಕರಿಸುವ ಕಂಟೆಂಟ್ ಅನ್ನು ನಾವು ಅನುಮತಿಸುವುದಿಲ್ಲ.

ಈ ನೀತಿಗಳು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಯಾವುದೇ ಇತರ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತವೆ. ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿನ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ವಿಧಾನಗಳು ಇದರಲ್ಲಿ ಒಳಗೊಂಡಿವೆ.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ. ಇದು ಸಂಪೂರ್ಣ ಪಟ್ಟಿಯಲ್ಲ.

ತಡೆಗಟ್ಟುವಿಕೆ ಕುರಿತ ತಪ್ಪು ಮಾಹಿತಿ

ತಡೆಗಟ್ಟುವ ವಿಧಾನಗಳಾಗಿ ಹಾನಿಕಾರಕ ವಸ್ತುಗಳು ಮತ್ತು ಅಭ್ಯಾಸಗಳು
  • ಗಂಭೀರ ದೈಹಿಕ ಹಾನಿ ಅಥವಾ ಸಾವಿನ ಅಪಾಯವನ್ನು ಪ್ರಸ್ತುತಪಡಿಸುವ ಈ ಕೆಳಗಿನ ನಿರ್ದಿಷ್ಟ ಪದಾರ್ಥಗಳು ಮತ್ತು ಚಿಕಿತ್ಸೆಗಳ ಕುರಿತಾದ ಪ್ರಚಾರ:
    • ಮಿರಾಕಲ್ ಮಿನರಲ್ ಸೊಲ್ಯೂಶನ್ (MMS)
    • ಕಪ್ಪು ಮುಲಾಮು
    • ಟರ್ಪೆಂಟೈನ್
    • B17/amygdalin/peach ಅಥವಾ ಏಪ್ರಿಕಾಟ್ ಸೀಡ್‍ಗಳು
    • ಉನ್ನತ-ದರ್ಜೆಯ ಹೈಡ್ರೋಜನ್ ಪೆರಾಕ್ಸೈಡ್
    • ಆಟಿಸಮ್ ಚಿಕಿತ್ಸೆಗಾಗಿ ಚೆಲೇಶನ್ ಥೆರಪಿ
    • ಕೊಲೊಯ್ಡಲ್ ಸಿಲ್ವರ್
    • ಗ್ಯಾಸೋಲಿನ್, ಡೀಸೆಲ್ ಮತ್ತು ಸೀಮೆಎಣ್ಣೆ
  • COVID-19 ತಡೆಗಟ್ಟುವಿಕೆಗಾಗಿ ಐವರ್‌ಮೆಕ್ಟಿನ್ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಬಳಕೆಯನ್ನು ಪ್ರಚಾರ ಮಾಡುವ ಕಂಟೆಂಟ್.
ಖಾತರಿಪಡಿಸಿದ ತಡೆಗಟ್ಟುವಿಕೆ ತಪ್ಪು ಮಾಹಿತಿ
  • COVID-19 ಗಾಗಿ ಗ್ಯಾರಂಟಿಯ ತಡೆಗಟ್ಟುವಿಕೆ ವಿಧಾನವಿದೆ ಎಂಬ ಪ್ರತಿಪಾದನೆಗಳು. 
  • COVID-19 ಗಾಗಿ ಯಾವುದೇ ಔಷಧಿ ಅಥವಾ ವ್ಯಾಕ್ಸಿನೇಷನ್, ಗ್ಯಾರಂಟಿಯ ತಡೆಗಟ್ಟುವಿಕೆ ವಿಧಾನವಾಗಿದೆ ಎಂಬ ಪ್ರತಿಪಾದನೆಗಳು.
ಲಸಿಕೆಯ ತಪ್ಪು ಮಾಹಿತಿ
  • ಪ್ರಸ್ತುತ ನಿರ್ವಹಿಸಲ್ಪಡುತ್ತಿರುವ ಮತ್ತು ಅನುಮೋದಿತ ವ್ಯಾಕ್ಸಿನ್‍ಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಪದಾರ್ಥಗಳ ಕುರಿತು ಆರೋಗ್ಯ ಇಲಾಖೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನಕ್ಕೆ ವಿರುದ್ಧವಾದ ಪ್ರತಿಪಾದನೆಗಳು 
    • ವ್ಯಾಕ್ಸಿನ್ ಸುರಕ್ಷತೆ: ಆರೋಗ್ಯ ಪ್ರಾಧಿಕಾರಗಳ ಮೂಲಕ ಗುರುತಿಸಿದ ಅಪರೂಪದ ಅಡ್ಡ ಪರಿಣಾಮಗಳನ್ನು ಹೊರತುಪಡಿಸಿ, ಲಸಿಕೆಗಳು ಕ್ಯಾನ್ಸರ್ ಅಥವಾ ಪಾರ್ಶ್ವವಾಯುಗಳಂತಹ ದೀರ್ಘಕಾಲದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಆರೋಪಿಸುತ್ತಿರುವ ಕಂಟೆಂಟ್.
      • ಉದಾಹರಣೆಗಳು:
        • MMR ವ್ಯಾಕ್ಸಿನ್, ಆಟಿಸಂ ಅನ್ನು ಉಂಟುಮಾಡುತ್ತದೆ ಎಂಬ ಪ್ರತಿಪಾದನೆಗಳು.
        • ಯಾವುದೇ ವ್ಯಾಕ್ಸಿನ್‌ನಿಂದ COVID-19 ಉಂಟಾಗುತ್ತದೆ ಎಂಬ ಪ್ರತಿಪಾದನೆಗಳು.
        • ವ್ಯಾಕ್ಸಿನ್‌ಗಳು ಜನಸಂಖ್ಯೆ ಕಡಿಮೆ ಮಾಡುವ ಅಜೆಂಡಾದ ಭಾಗವಾಗಿದೆ ಎಂಬ ಪ್ರತಿಪಾದನೆಗಳು.
        • ಫ್ಲೂ ವ್ಯಾಕ್ಸಿನ್‌ನಿಂದ ಬಂಜೆತನದಂತಹ ದೀರ್ಘಕಾಲದ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ ಅಥವಾ COVID-19 ಕಡಿಮೆಗೆ ಕಾರಣವಾಗುತ್ತದೆ ಎಂಬ ಪ್ರತಿಪಾದನೆಗಳು.
        • HPV ವ್ಯಾಕ್ಸಿನ್, ಪಾರ್ಶ್ವವಾಯು ಮುಂತಾದ ದೀರ್ಘಕಾಲದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬ ಪ್ರತಿಪಾದನೆಗಳು.
        • ಅನುಮೋದಿತ COVID-19 ವ್ಯಾಕ್ಸಿನ್‌ನಿಂದ ಸಾವು, ಬಂಜೆತನ, ಗರ್ಭಪಾತ, ಆಟಿಸಮ್ ಅಥವಾ ಇತರ ಸೋಂಕು ರೋಗಗಳು ಉಂಟಾಗುತ್ತವೆ ಎಂಬ ಪ್ರತಿಪಾದನೆಗಳು.
        • ಎಲ್ಲಾ ಜನರಿಗೆ ವ್ಯಾಕ್ಸಿನ್ ನೀಡುವುದಕ್ಕಿಂತ ಸ್ವಾಭಾವಿಕ ಸೋಂಕಿನ ಮೂಲಕ ಸಮೂಹ ಸೋಂಕು ನಿರೋಧಕ ಶಕ್ತಿಯನ್ನು ಸಾಧಿಸಬಹುದು ಎಂಬ ಪ್ರತಿಪಾದನೆಗಳು.
        • ಅನುಮೋದಿಸಿರದ ಅಥವಾ ಮನೆಯಲ್ಲಿ ತಯಾರಿಸಿದ COVID-19 ವ್ಯಾಕ್ಸಿನ್‌ಗಳ ಬಳಕೆಯನ್ನು ಪ್ರಚಾರ ಮಾಡುವ ಕಂಟೆಂಟ್.
    • ವ್ಯಾಕ್ಸಿನ್ ಪರಿಣಾಮಕಾರಿತ್ವ: ವ್ಯಾಕ್ಸಿನ್‌ಗಳು ರೋಗ ಪ್ರಸರಣ ಅಥವಾ ರೋಗದ ಸೋಂಕನ್ನು ಕಡಿಮೆ ಮಾಡುವುದಿಲ್ಲ ಎಂದು ಪ್ರತಿಪಾದಿಸುವ ಕಂಟೆಂಟ್.
      • ಉದಾಹರಣೆಗಳು:
        • ವ್ಯಾಕ್ಸಿನ್‌ಗಳು ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಪ್ರತಿಪಾದಿಸು ಕಂಟೆಂಟ್.
        • ವ್ಯಾಕ್ಸಿನ್‍ಗಳು ಆಸ್ಪತ್ರೆ ದಾಖಲಾತಿ ಅಥವಾ ಸಾವು ಸೇರಿದಂತೆ, ಅನಾರೋಗ್ಯದ ತೀವ್ರತೆಯನ್ನು ಕಡಿಮೆ ಮಾಡುವುದಿಲ್ಲ ಎಂಬ ಪ್ರತಿಪಾದನೆಗಳು.
        • COVID-19 ಗಾಗಿ ಯಾವುದೇ ವ್ಯಾಕ್ಸಿನೇಷನ್, ಗ್ಯಾರಂಟಿಯ ತಡೆಗಟ್ಟುವಿಕೆ ವಿಧಾನವಾಗಿದೆ ಎಂಬ ಪ್ರತಿಪಾದನೆಗಳು.
    • ವ್ಯಾಕ್ಸಿನ್‌ಗಳಲ್ಲಿನ ಪದಾರ್ಥಗಳು: ವ್ಯಾಕ್ಸಿನ್‌ಗಳು ಒಳಗೊಂಡಿರುವ ಪದಾರ್ಥಗಳನ್ನು ತಪ್ಪಾಗಿ ಪ್ರತಿನಿಧಿಸುವಂತಹ ಕಂಟೆಂಟ್.
      • ಉದಾಹರಣೆಗಳು:
        • ವ್ಯಾಕ್ಸಿನ್‌ಗಳು, ವ್ಯಾಕ್ಸಿನ್ ಪದಾರ್ಥದ ಪಟ್ಟಿಯಲ್ಲಿಲ್ಲದ ಪದಾರ್ಥಗಳನ್ನು ಒಳಗೊಂಡಿರುತ್ತವೆ ಎಂದು ಹೇಳುವ ಕಂಟೆಂಟ್, ಉದಾಹರಣೆಗೆ ಭ್ರೂಣಗಳ ಜೈವಿಕ ಅಂಶಗಳು (ಉದಾ. ಭ್ರೂಣದ ಅಂಗಾಂಶ, ಭ್ರೂಣದ ಜೀವಕೋಶ ಪದರ) ಅಥವಾ ಪ್ರಾಣಿಗಳ ಉಪಉತ್ಪನ್ನಗಳು.
        • ವ್ಯಾಕ್ಸಿನ್‌ಗಳನ್ನು ಸ್ವೀಕರಿಸಿದವರನ್ನು ಪತ್ತೆಹಚ್ಚಲು ಅಥವಾ ಗುರುತಿಸಲು ಉದ್ದೇಶಿಸಿರುವ ವಸ್ತುಗಳು ಅಥವಾ ಸಾಧನಗಳನ್ನು ಒಳಗೊಂಡಿವೆ ಎಂದು ಪ್ರತಿಪಾದಿಸುವ ಕಂಟೆಂಟ್.
        • ಲಸಿಕೆಗಳು ವ್ಯಕ್ತಿಯ ಆನುವಂಶಿಕ ರಚನೆಯನ್ನು ಬದಲಾಯಿಸುತ್ತವೆ ಎಂದು ಪ್ರತಿಪಾದಿಸುವ ಕಂಟೆಂಟ್.
        • ವ್ಯಾಕ್ಸಿನ್‌ಗಳು, ಅದನ್ನು ಸ್ವೀಕರಿಸಿದವರನ್ನು ಆಯಸ್ಕಾಂತೀಯಗೊಳಿಸುತ್ತವೆ ಎಂಬ ಪ್ರತಿಪಾದನೆಗಳು.

ಹೆಚ್ಚುವರಿ ಸಂಪನ್ಮೂಲಗಳು

ವ್ಯಾಕ್ಸಿನ್‌ಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಒಳಗೊಂಡಂತೆ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೋಡಬಹುದು.

ಆರೋಗ್ಯ ಇಲಾಖೆ ವ್ಯಾಕ್ಸಿನ್ ಮಾಹಿತಿ:

ಹೆಚ್ಚುವರಿ ವ್ಯಾಕ್ಸಿನ್ ಮಾಹಿತಿ:

ರೋಗ ಪ್ರಸಾರ ಮಾಹಿತಿ

  • ಸ್ಥಳೀಯ ಆರೋಗ್ಯ ಪ್ರಾಧಿಕಾರಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನಕ್ಕೆ ವಿರುದ್ಧವಾದ ರೋಗ ಪ್ರಸರಣ ಮಾಹಿತಿಯನ್ನು ಉತ್ತೇಜಿಸುವ ಕಂಟೆಂಟ್.
    • ವೈರಲ್ ಸೋಂಕಿನಿಂದ COVID-19 ಉಂಟಾಗುವುದಿಲ್ಲ ಎಂದು ಪ್ರತಿಪಾದಿಸುವ ಕಂಟೆಂಟ್.
    • 5G ನೆಟ್‌ವರ್ಕ್‌ಗಳ ವಿಕಿರಣದಿಂದ COVID-19 ಉಂಟಾಗುತ್ತದೆ ಎಂಬ ಪ್ರತಿಪಾದನೆಗಳು.
    • COVID-19 ಸಾಂಕ್ರಾಮಿಕವಲ್ಲ ಎಂದು ಪ್ರತಿಪಾದಿಸುವ ಕಂಟೆಂಟ್.
    • ಕೆಲವೊಂದು ಹವಾಮಾನಗಳು ಅಥವಾ ಭೌಗೋಳಿಕ ಪ್ರದೇಶಗಳಲ್ಲಿ COVID-19 ಹರಡಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಪಾದಿಸುವ ಕಂಟೆಂಟ್.
    • ಯಾವುದೇ ಗುಂಪು ಅಥವಾ ವ್ಯಕ್ತಿಯು ವೈರಸ್‌ಗೆ ನಿರೋಧಕತೆಯನ್ನು ಹೊಂದಿದ್ದಾರೆ ಅಥವಾ ವೈರಸ್ ಅನ್ನು ಹರಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸುವ ಕಂಟೆಂಟ್.

ಚಿಕಿತ್ಸೆಯ ಕುರಿತ ತಪ್ಪು ಮಾಹಿತಿ 

ಚಿಕಿತ್ಸಾ ವಿಧಾನಗಳಾಗಿ ಹಾನಿಕಾರಕ ವಸ್ತುಗಳು ಮತ್ತು ಅಭ್ಯಾಸಗಳು

  • ಗಂಭೀರ ದೈಹಿಕ ಹಾನಿ ಅಥವಾ ಸಾವಿನ ಅಪಾಯವನ್ನು ಪ್ರಸ್ತುತಪಡಿಸುವ ಈ ಕೆಳಗಿನ ನಿರ್ದಿಷ್ಟ ಪದಾರ್ಥಗಳು ಮತ್ತು ಚಿಕಿತ್ಸೆಗಳ ಕುರಿತಾದ ಪ್ರಚಾರ.
    • ಮಿರಾಕಲ್ ಮಿನರಲ್ ಸೊಲ್ಯೂಶನ್ (MMS)
    • ಕಪ್ಪು ಮುಲಾಮು
    • ಟರ್ಪೆಂಟೈನ್
    • B17/amygdalin/peach ಅಥವಾ ಏಪ್ರಿಕಾಟ್ ಸೀಡ್‍ಗಳು
    • ಉನ್ನತ-ದರ್ಜೆಯ ಹೈಡ್ರೋಜನ್ ಪೆರಾಕ್ಸೈಡ್
    • ಆಟಿಸಮ್ ಚಿಕಿತ್ಸೆಗಾಗಿ ಚೆಲೇಶನ್ ಥೆರಪಿ
    • ಕೊಲೊಯ್ಡಲ್ ಸಿಲ್ವರ್
    • ಗ್ಯಾಸೋಲಿನ್, ಡೀಸೆಲ್ ಮತ್ತು ಸೀಮೆಎಣ್ಣೆ
  • ಸ್ಥಳೀಯ ಆರೋಗ್ಯ ಪ್ರಾಧಿಕಾರಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಸುರಕ್ಷಿತ ಅಥವಾ ಪರಿಣಾಮಕಾರಿ ಎಂದು ಅನುಮೋದಿಸದಿರುವಾಗ ಅಥವಾ ಕ್ಯಾನ್ಸರ್ ಚಿಕಿತ್ಸೆಗೆ ಹಾನಿಕಾರಕ ಅಥವಾ ನಿಷ್ಪರಿಣಾಮಕಾರಿ ಎಂದು ದೃಢೀಕರಿಸಲ್ಪಟ್ಟಾಗ ಕ್ಯಾನ್ಸರ್ ಚಿಕಿತ್ಸೆಗಾಗಿ ನಿರ್ದಿಷ್ಟ ವಿಧಾನಗಳ ಬಳಕೆಯನ್ನು ಶಿಫಾರಸು ಮಾಡುವ ಕಂಟೆಂಟ್.
    • ಉದಾಹರಣೆಗಳು:
      • ಕ್ಲಿನಿಕಲ್ ಪ್ರಯೋಗಗಳ ಹೊರತಾಗಿ ಕ್ಯಾನ್ಸರ್ ಚಿಕಿತ್ಸೆಗಾಗಿ ಈ ಕೆಳಗಿನ ವಿಧಾನಗಳ ಬಳಕೆಯನ್ನು ಪ್ರೋತ್ಸಾಹಿಸುವ ಕಂಟೆಂಟ್:
        • ಸೀಸಿಯಮ್ ಕ್ಲೋರೈಡ್ (ಸೀಸಿಯಮ್ ಲವಣಗಳು)
        • ಹಾಕ್ಸೆ ಥೆರಪಿ
        • ಕಾಫಿ ಎನಿಮಾ
        • ಗೆರ್ಸನ್ ಥೆರಪಿ
      • ಕ್ಲಿನಿಕಲ್ ಪ್ರಯೋಗಗಳ ಹೊರತಾಗಿ ಕ್ಯಾನ್ಸರ್ ಚಿಕಿತ್ಸೆಗೆ ಈ ಕೆಳಗಿನ ವಿಧಾನಗಳು ಸುರಕ್ಷಿತ ಅಥವಾ ಪರಿಣಾಮಕಾರಿ ಎಂದು ಪ್ರತಿಪಾದಿಸುವ ಕಂಟೆಂಟ್:
        • ಆಂಟಿನಿಯೋಪ್ಲಾಸ್ಟನ್ ಥೆರಪಿ
        • ಕ್ವೆರ್ಸೆಟಿನ್ (ಇಂಟ್ರಾವೆನಸ್ ಇಂಜೆಕ್ಷನ್)
        • ಮೆಥಡೋನ್
        • ಓವರ್-ದಿ-ಕೌಂಟರ್ ಚೆಲೇಶನ್ ಥೆರಪಿ
  • COVID-19 ನ ಚಿಕಿತ್ಸೆಗಾಗಿ ಐವರ್‌ಮೆಕ್ಟಿನ್ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಬಳಕೆಯನ್ನು ಪ್ರೋತ್ಸಾಹಿಸುವ ಕಂಟೆಂಟ್.
ಖಾತರಿಪಡಿಸಿದ ಚಿಕಿತ್ಸೆಯ ತಪ್ಪು ಮಾಹಿತಿ
  • ಅನುಮೋದಿತ ಚಿಕಿತ್ಸೆಯ ಹೊರತಾಗಿ ಕ್ಯಾನ್ಸರ್‌ಗೆ ಖಚಿತವಾದ ಚಿಕಿತ್ಸೆ ಇದೆ ಎಂದು ಪ್ರತಿಪಾದಿಸುವ ಕಂಟೆಂಟ್.
  • COVID-19 ಗಾಗಿ ಭರವಸೆಯ ಚಿಕಿತ್ಸೆಯಿದೆ ಎಂದು ಪ್ರತಿಪಾದಿಸುವ ಕಂಟೆಂಟ್.
ಹಾನಿಕಾರಕ ಪರ್ಯಾಯ ವಿಧಾನಗಳು ಮತ್ತು ವೃತ್ತಿಪರ ಚಿಕಿತ್ಸೆಯನ್ನು ಪ್ರೋತ್ಸಾಹಿಸದೇ ಇರುವುದು
  • ಕ್ಯಾನ್ಸರ್‌ಗೆ ಅನುಮೋದಿತ ಚಿಕಿತ್ಸೆಗಳು ಎಂದಿಗೂ ಪರಿಣಾಮಕಾರಿಯಾಗಿರುವುದಿಲ್ಲ ಎಂದು ಪ್ರತಿಪಾದಿಸುವ ಕಂಟೆಂಟ್.
    • ಉದಾಹರಣೆಗಳು:
      • ಕೀಮೋಥೆರಪಿ ಅಥವಾ ವಿಕಿರಣದಂತಹ ಕ್ಯಾನ್ಸರ್‌ಗೆ ಅನುಮೋದಿತ ಚಿಕಿತ್ಸೆಗಳು ಎಂದಿಗೂ ಪರಿಣಾಮಕಾರಿಯಾಗಿರುವುದಿಲ್ಲ ಎಂದು ಪ್ರತಿಪಾದಿಸುವ ಕಂಟೆಂಟ್.
      • ಕ್ಯಾನ್ಸರ್‌ಗೆ ಅನುಮೋದಿತ ಚಿಕಿತ್ಸೆಗಳನ್ನು ಪಡೆಯಲು ಜನರನ್ನು ನಿರುತ್ಸಾಹಗೊಳಿಸುವಂತಹ ಕಂಟೆಂಟ್.
  • ಕ್ಯಾನ್ಸರ್‌ಗೆ ಅನುಮೋದಿತ ಚಿಕಿತ್ಸೆಗಳಿಗಿಂತ ಪರ್ಯಾಯ ಚಿಕಿತ್ಸೆಗಳು ಸುರಕ್ಷಿತ ಅಥವಾ ಹೆಚ್ಚು ಪರಿಣಾಮಕಾರಿ ಎಂದು ಪ್ರತಿಪಾದಿಸುವುದು.
    • ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೀಮೋಥೆರಪಿಗಿಂತ ಜ್ಯೂಸಿಂಗ್ ಉತ್ತಮ ಫಲಿತಾಂಶಗಳನ್ನು ಹೊಂದಿದೆ ಎಂದು ಪ್ರತಿಪಾದಿಸುವ ಕಂಟೆಂಟ್.
  • ಕ್ಯಾನ್ಸರ್‌ಗೆ ಅನುಮೋದಿತ ಚಿಕಿತ್ಸೆಗಳ ಬದಲಿಗೆ ಪರ್ಯಾಯ ಚಿಕಿತ್ಸೆಯನ್ನು ಶಿಫಾರಸು ಮಾಡುವ ಕಂಟೆಂಟ್.
    • ಕ್ಯಾನ್ಸರ್‌ಗೆ ಅನುಮೋದಿತ ಚಿಕಿತ್ಸೆಯನ್ನು ಪಡೆಯುವ ಬದಲು ಆಹಾರ ಮತ್ತು ವ್ಯಾಯಾಮವನ್ನು ಪ್ರೋತ್ಸಾಹಿಸುವ ಕಂಟೆಂಟ್.
  • ಜನರು COVID-19 ನಿಂದ ಕಾಯಿಲೆಗೀಡಾಗಿರುವಾಗ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದರಿಂದ ಅಥವಾ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸದಂತೆ ನಿರುತ್ಸಾಹಗೊಳಿಸುವುದು.
  • COVID-19 ಗಾಗಿ ವೈದ್ಯರೊಂದಿಗೆ ಸಮಾಲೋಚಿಸುವುದು ಅಥವಾ ಆಸ್ಪತ್ರೆಗೆ ಹೋಗುವಂತಹ ವೈದ್ಯಕೀಯ ಚಿಕಿತ್ಸೆಯ ಬದಲಿಗೆ ಮನೆ ಮದ್ದು, ಪ್ರಾರ್ಥನೆ ಅಥವಾ ವಿಧಿವಿಧಾನಗಳ ಬಳಕೆಯನ್ನು ಪ್ರೋತ್ಸಾಹಿಸುವ ಕಂಟೆಂಟ್.
  • ರಾಸಾಯನಿಕ ಮತ್ತು ಶಸ್ತ್ರಚಿಕಿತ್ಸೆಯ ಗರ್ಭಪಾತದ ಸುರಕ್ಷತೆಯ ಕುರಿತು ಸ್ಥಳೀಯ ಆರೋಗ್ಯ ಪ್ರಾಧಿಕಾರಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನಕ್ಕೆ ವಿರುದ್ಧವಾದ ಕಂಟೆಂಟ್:
    • ಗರ್ಭಪಾತವು ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ಪ್ರತಿಪಾದನೆಗಳು.
    • ಗರ್ಭಪಾತವು ಸಾಮಾನ್ಯವಾಗಿ ಬಂಜೆತನ ಅಥವಾ ಭವಿಷ್ಯದ ಗರ್ಭಪಾತದ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ ಅಥವಾ ಕಾರಣವಾಗುತ್ತದೆ ಎಂಬ ಪ್ರತಿಪಾದನೆಗಳು.
  • ಆರೋಗ್ಯ ಪ್ರಾಧಿಕಾರಗಳು ಸುರಕ್ಷಿತವೆಂದು ಪರಿಗಣಿಸಿರುವ ರಾಸಾಯನಿಕ ಅಥವಾ ಶಸ್ತ್ರಚಿಕಿತ್ಸಾತ್ಮಕ ವಿಧಾನಗಳ ಬದಲಿಗೆ ಪರ್ಯಾಯ ಗರ್ಭಪಾತ ವಿಧಾನಗಳ ಪ್ರಚಾರ.
  • ಶಿಶುಗಳಿಗಾಗಿ ಸ್ತನ್ಯಪಾನ ಅಥವಾ ವಾಣಿಜ್ಯ ಫಾರ್ಮುಲಾದ ಬದಲಿಗೆ ಪರ್ಯಾಯ ಫಾರ್ಮುಲಾಗಳ ಪ್ರಚಾರ.

ನಿರಾಕರಣೆ ಕುರಿತ ತಪ್ಪು ಮಾಹಿತಿ  

  • COVID-19 ಅಸ್ತಿತ್ವವನ್ನು ಅಥವಾ COVID-19 ನಿಂದ ಜನರು ಸಾವನ್ನಪ್ಪಿದ್ದಾರೆ ಎಂಬುದನ್ನು ನಿರಾಕರಿಸುವ ಕಂಟೆಂಟ್.
    • ಉದಾಹರಣೆಗಳು:
      • COVID-19 ಅಸ್ತಿತ್ವದಲ್ಲಿದೆ ಎಂಬುದನ್ನು ನಿರಾಕರಿಸುವುದು
      • COVID-19 ನಿಂದ ಜನರು ಸತ್ತಿಲ್ಲ ಅಥವಾ ಅಸ್ವಸ್ಥರಾಗಿಲ್ಲ ಎಂಬ ಪ್ರತಿಪಾದನೆಗಳು
      • ಸ್ಥಳೀಯ ಆರೋಗ್ಯ ಪ್ರಾಧಿಕಾರಗಳು ಅಥವಾ WHO ದೃಢೀಕರಿಸಿರುವ ಪ್ರಕರಣಗಳು ಅಥವಾ ಮರಣಗಳು ಸಂಭವಿಸಿದ ದೇಶದಲ್ಲಿ, ಪ್ರಕರಣಗಳು ಅಥವಾ ಮರಣಗಳು ಉಂಟಾಗಿಲ್ಲ ಎಂಬ ಪ್ರತಿಪಾದನೆಗಳು

ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್

ವೀಡಿಯೊ, ಆಡಿಯೋ, ಶೀರ್ಷಿಕೆ ಅಥವಾ ವಿವರಣೆಯಲ್ಲಿ ಆ ಕಂಟೆಂಟ್ ಹೆಚ್ಚುವರಿ ಸಾಂದರ್ಭಿಕ ಮಾಹಿತಿಯನ್ನು ಒಳಗೊಂಡಿದ್ದರೆ, ಈ ಪುಟದಲ್ಲಿ ಸೂಚಿಸಲಾದ ತಪ್ಪು ಮಾಹಿತಿ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ನಾವು ಅನುಮತಿಸಬಹುದು. ಇದು ತಪ್ಪು ಮಾಹಿತಿಯನ್ನು ಪ್ರಚಾರ ಮಾಡಲು ರಹದಾರಿಯಲ್ಲ. ಹೆಚ್ಚುವರಿ ಸಾಂದರ್ಭಿಕ ಮಾಹಿತಿಯಲ್ಲಿ ಸ್ಥಳೀಯ ಆರೋಗ್ಯ ಪ್ರಾಧಿಕಾರಗಳು ಅಥವಾ ವೈದ್ಯಕೀಯ ತಜ್ಞರ ದೃಷ್ಟಿಕೋನಗಳನ್ನು ಕೌಂಟರ್‌ವೈಲ್ ಮಾಡುವುದು ಸಹ ಸೇರಿದೆ. ನಮ್ಮ ನೀತಿಗಳನ್ನು ಉಲ್ಲಂಘಿಸುವ ತಪ್ಪು ಮಾಹಿತಿಯನ್ನು ಖಂಡಿಸುವುದು, ವಿವಾದಿಸುವುದು ಅಥವಾ ವ್ಯಂಗ್ಯ ಮಾಡುವುದು ಕಂಟೆಂಟ್‌ನ ಉದ್ದೇಶವಾಗಿದ್ದರೂ ಸಹ ನಾವು ವಿನಾಯಿತಿಗಳನ್ನು ನೀಡಬಹುದು. ಕಂಟೆಂಟ್, ನಮ್ಮ ನೀತಿಗಳನ್ನು ಉಲ್ಲಂಘಿಸುವ ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ಗುರಿಯನ್ನು ಹೊಂದಿಲ್ಲದಿದ್ದರೆ, ನಿರ್ದಿಷ್ಟ ವೈದ್ಯಕೀಯ ಅಧ್ಯಯನದ ಫಲಿತಾಂಶಗಳನ್ನು ಚರ್ಚಿಸುವ ಅಥವಾ ಪ್ರತಿಭಟನೆ ಅಥವಾ ಸಾರ್ವಜನಿಕ ವಿಚಾರಣೆಯಂತಹ ಮುಕ್ತ ಸಾರ್ವಜನಿಕ ವೇದಿಕೆಯನ್ನು ತೋರಿಸುವ ಕಂಟೆಂಟ್‌ಗೆ ನಾವು ವಿನಾಯಿತಿಗಳನ್ನು ಸಹ ನೀಡಬಹುದು.

ಉದಾಹರಣೆಗೆ, ವ್ಯಾಕ್ಸಿನೇಷನ್‌ಗಳೊಂದಿಗಿನ ವೈಯಕ್ತಿಕ ಅನುಭವಗಳನ್ನು ಒಳಗೊಂಡಂತೆ ಜನರು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು YouTube ನಂಬುತ್ತದೆ. ಇದರರ್ಥ ಕ್ರಿಯೇಟರ್‌ಗಳು ತಮ್ಮ ಅಥವಾ ಅವರ ಕುಟುಂಬದ ಅನುಭವಗಳನ್ನು ನೇರವಾಗಿ ವಿವರಿಸುವ ಕಂಟೆಂಟ್‌ಗೆ ನಾವು ವಿನಾಯಿತಿಗಳನ್ನು ನೀಡಬಹುದು. ಅದೇ ಸಮಯದಲ್ಲಿ, ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವುದರ ನಡುವೆ ವ್ಯತ್ಯಾಸವಿದೆ ಎಂಬುದನ್ನು ನಾವು ಗುರುತಿಸುತ್ತೇವೆ. ಈ ಬ್ಯಾಲೆನ್ಸ್ ಅನ್ನು ಪರಿಹರಿಸಲು, ಅವುಗಳು ಇತರ ನೀತಿ ಉಲ್ಲಂಘನೆಗಳನ್ನು ಒಳಗೊಂಡಿದ್ದರೆ ಅಥವಾ ವೈದ್ಯಕೀಯ ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ಪ್ಯಾಟರ್ನ್ ಅನ್ನು ಪ್ರದರ್ಶಿಸಿದರೆ, ನಾವು ಈಗಲೂ ಕಂಟೆಂಟ್ ಅಥವಾ ಚಾನಲ್‌ಗಳನ್ನು ತೆಗೆದುಹಾಕುತ್ತೇವೆ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡವನ್ನು ವಿಧಿಸದೇ, ನೀವು ನಮ್ಮಿಂದ ಎಚ್ಚರಿಕೆಯೊಂದನ್ನು ಮಾತ್ರ ಸ್ವೀಕರಿಸುವ ಸಾಧ್ಯತೆ ಇರುತ್ತದೆ. ಇದು ಮೊದಲ ಬಾರಿ ಅಲ್ಲದಿದ್ದರೆ, ನಿಮ್ಮ ಚಾನಲ್‌ನ ವಿರುದ್ಧ ಸ್ಟ್ರೈಕ್ ಅನ್ನು ಜಾರಿಗೊಳಿಸಬಹುದು. 90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇಲ್ಲಿ ನೀವು ಇನ್ನಷ್ಟು ತಿಳಿಯಬಹುದು.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನೀತಿಯನ್ನು ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಚಾನಲ್ ಅಥವಾ ಖಾತೆಯ ಕೊನೆಗೊಳಿಸುವಿಕೆಗಳ ಕುರಿತು ಇಲ್ಲಿ ನೀವು ಇನ್ನಷ್ಟು ತಿಳಿಯಬಹುದು. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5839361264404771459
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false