YouTube ಆರೋಗ್ಯ ಫೀಚರ್‌ಗಳಲ್ಲಿ ಮೂಲವಾಗಿರಲು ಅರ್ಜಿ ಸಲ್ಲಿಸಿ

ಗಮನಿಸಿ: ಈ ಲೇಖನದಲ್ಲಿ ವಿವರಿಸಿರುವ ಮಾನದಂಡಗಳು ಮತ್ತು ಪ್ರಕ್ರಿಯೆಯು US, UK, DE, BR, ID, JP, FR, KR, CA ಮತ್ತು MX ಮೂಲದ ಅಧಿಕೃತ ಆರೋಗ್ಯ ಸೇವೆ ಪೂರೈಕೆದಾರರಿಗೆ ಮಾತ್ರ ಅನ್ವಯಿಸುತ್ತವೆ.

ಮೇಲಿನ ಪಟ್ಟಿಯಲ್ಲಿಲ್ಲದ ದೇಶಗಳಿಗೆ ಸಂಬಂಧಿಸಿದಂತೆ, ಮೊದಲೇ ಅಸ್ತಿತ್ವದಲ್ಲಿರುವ, ಪ್ರಮಾಣಿತ ಪರಿಶೀಲನೆ ಕಾರ್ಯವಿಧಾನಗಳನ್ನು ಹೊಂದಿರುವ ಸಂಸ್ಥೆಗಳು, ಉದಾಹರಣೆಗೆ, ಮಾನ್ಯತೆ ಪಡೆದ ಆಸ್ಪತ್ರೆಗಳು, ಶೈಕ್ಷಣಿಕ ವೈದ್ಯಕೀಯ ಸಂಸ್ಥೆಗಳು, ಸಾರ್ವಜನಿಕ ಆರೋಗ್ಯ ಇಲಾಖೆಗಳು ಅಥವಾ ಸರಕಾರಿ ಸಂಸ್ಥೆಗಳು ನಮ್ಮ ಆರೋಗ್ಯ ಫೀಚರ್‌ಗಳಿಗೆ ಸಂಬಂಧಿಸಿದ ಅರ್ಹತೆಗೆ ಪರಿಗಣಿಸಲ್ಪಡಬೇಕು ಎಂದು ಬಯಸಿದರೆ ನಿಮ್ಮ ಪ್ರೊಫೈಲ್ ಚಿತ್ರ ಎಂಬಲ್ಲಿನ ಮೆನುವಿನಲ್ಲಿ ಲಭ್ಯವಿರುವ ಫೀಡ್‌ಬ್ಯಾಕ್ ಟೂಲ್ ಮೂಲಕ ವಿನಂತಿಯನ್ನು ಸಲ್ಲಿಸಬಹುದು.

ಫೀಡ್‌ಬ್ಯಾಕ್‌ನಲ್ಲಿ, "#healthinfo" ಜೊತೆಗೆ ನಿಮ್ಮ ಚಾನಲ್ ವಿವರಗಳು, ಚಾನಲ್ URL, ದೇಶ ಮತ್ತು ವೆಬ್‌ಸೈಟ್ ಕುರಿತಾದ ಮಾಹಿತಿಯನ್ನು ಸೇರಿಸಿ. ಈ ಫೀಡ್‌ಬ್ಯಾಕ್ ಅನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಅರ್ಹ ಚಾನಲ್‌ಗಳು ನಮ್ಮ ಫೀಚರ್‌ಗಳಲ್ಲಿ ಕಾಣಿಸಿಕೊಳ್ಳಲು ಕೆಲವು ತಿಂಗಳುಗಳ ಸಮಯ ಬೇಕಾಗಬಹುದು.

YouTube ನಲ್ಲಿ, ವೀಕ್ಷಕರನ್ನು ಅಧಿಕೃತ ಮೂಲಗಳ ಆರೋಗ್ಯದ ಕಂಟೆಂಟ್ ಜೊತೆಗೆ ಸಂಪರ್ಕಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಆರೋಗ್ಯ ಫೀಚರ್‌ಗಳು ಬೆಳೆದಂತೆಲ್ಲಾ, ನಮ್ಮ ಕೆಲವೊಂದು ಆರೋಗ್ಯ ಫೀಚರ್‌ಗಳಲ್ಲಿ ಬಳಸಲಾಗುವ ಆರೋಗ್ಯ ಮೂಲಗಳ ಪ್ರಕಾರಗಳನ್ನು ವಿಸ್ತರಿಸುವುದನ್ನು ನಾವು ಪರಿಗಣಿಸುತ್ತಿದ್ದೇವೆ. ಅಧಿಕೃತ ಮೂಲಗಳಿಗಾಗಿ ಅರ್ಹತೆಯನ್ನು ವಿಸ್ತರಿಸುವುದಕ್ಕಾಗಿ, ಆರೋಗ್ಯ-ಕೇಂದ್ರೀಕೃತ YouTube ಚಾನಲ್‍ಗಳಿಗಾಗಿ ನಾವು ಒಂದು ಅರ್ಜಿ ಪ್ರಕ್ರಿಯೆಯನ್ನು ಪರಿಚಯಿಸುತ್ತಿದ್ದೇವೆ.

ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು, ರಚನೆಕಾರರು ಆನ್‌ಲೈನ್‌ನಲ್ಲಿ ಆರೋಗ್ಯ ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬುದಕ್ಕಾಗಿ ಸಿದ್ಧಾಂತಗಳನ್ನು ವ್ಯಾಖ್ಯಾನಿಸಲು ನಾವು ಥರ್ಡ್ ಪಾರ್ಟಿ ಆರೋಗ್ಯ ಪ್ರಾಧಿಕಾರಗಳೊಂದಿಗೆ ಕೆಲಸ ಮಾಡಿದೆವು. ಈ ಆರೋಗ್ಯ ಪ್ರಾಧಿಕಾರಗಳಲ್ಲಿ ಇವು ಒಳಗೊಂಡಿವೆ:

  • ಕೌನ್ಸಿಲ್ ಆಫ್ ಮೆಡಿಕಲ್ ಸ್ಪೆಷಾಲ್ಟಿ ಸೊಸೈಟೀಸ್ (CMSS)
  • ದಿ ನ್ಯಾಶನಲ್ ಅಕಾಡೆಮಿ ಆಫ್ ಮೆಡಿಸಿನ್ಸ್ (NAM)
  • ವಿಶ್ವ ಆರೋಗ್ಯ ಸಂಸ್ಥೆ (WHO)

ಯುಎಸ್, ಜರ್ಮನಿ, ಮೆಕ್ಸಿಕೋ, ಬ್ರೆಜಿಲ್, ಇಂಡೋನೇಷ್ಯಾ, ಜಪಾನ್, ಫ್ರಾನ್ಸ್, ದಕ್ಷಿಣ ಕೊರಿಯಾ ಮತ್ತು ಯುಕೆಯಲ್ಲಿ ಆರೋಗ್ಯ-ಕೇಂದ್ರಿತ YouTube ಚಾನಲ್‌ಗಳನ್ನು ಹೊಂದಿರುವ ವ್ಯಕ್ತಿಗಳು, ಕಂಪನಿಗಳು ಮತ್ತು ಲಾಭರಹಿತ ಸಂಸ್ಥೆಗಳು ಈ ಫೀಚರ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಈ ಕೆಳಗೆ ವಿವರಿಸಲಾದ ಅರ್ಹತೆಯ ಮಾನದಂಡಗಳ ಪ್ರಕಾರ ಅರ್ಜಿದಾರರನ್ನು ಪರಿಶೀಲಿಸಲಾಗುವುದು. ಸದ್ಯಕ್ಕೆ, ಈ ಕೆಳಗಿನವುಗಳು, ಪರಿಗಣಿಸಲು ಅರ್ಹವಾಗಿಲ್ಲ:

  • ನಿರ್ದಿಷ್ಟ ಪ್ರಕಾರಗಳ ಲಾಭ-ಸಹಿತ ಆರೋಗ್ಯ ಕಾಳಜಿ ಬ್ರ್ಯಾಂಡ್‌ಗಳು
  • ಫಾರ್ಮಸ್ಯುಟಿಕಲ್ ಕಂಪನಿಗಳು, ಆರೋಗ್ಯ ವಿಮಾದಾರರು ಅಥವಾ ವೈದ್ಯಕೀಯ ಸಾಧನ ತಯಾರಕ ಕಂಪನಿಗಳು ನಡೆಸುವ ಚಾನಲ್‌ಗಳು
ಗಮನಿಸಿ: ಮೊದಲೇ ಅಸ್ತಿತ್ವದಲ್ಲಿರುವ, ಪ್ರಮಾಣಿತ ಪರಿಶೀಲನೆ ಕಾರ್ಯವಿಧಾನಗಳನ್ನು ಹೊಂದಿರುವ ಯುಎಸ್‌ಎ, ಯುಕೆ, ಜರ್ಮನಿ, ಜಪಾನ್, ಭಾರತ, ಇಂಡೋನೇಷಿಯಾ, ಕೆನಡಾ, ದಕ್ಷಿಣ ಕೊರಿಯಾ, ಫ್ರಾನ್ಸ್, ಬ್ರೆಜಿಲ್ ಮತ್ತು ಮೆಕ್ಸಿಕೋದಲ್ಲಿನ ಚಾನಲ್‌ಗಳು ಉದಾಹರಣೆಗೆ, ಮಾನ್ಯತೆ ಪಡೆದ ಆಸ್ಪತ್ರೆಗಳು, ಶೈಕ್ಷಣಿಕ ವೈದ್ಯಕೀಯ ಸಂಸ್ಥೆಗಳು, ಸಾರ್ವಜನಿಕ ಆರೋಗ್ಯ ಇಲಾಖೆಗಳು ಮತ್ತು ಸರಕಾರಿ ಸಂಸ್ಥೆಗಳು ಅರ್ಜಿ ಸಲ್ಲಿಸಬೇಕಾಗಿಲ್ಲ, ಏಕೆಂದರೆ, ಅವುಗಳು NAM ಒಟ್ಟುಸೇರಿಸಿದ ತಜ್ಞರು ರಚಿಸಿದ ಮತ್ತು WHO ದೃಢೀಕರಿಸಿದ ಸಿದ್ಧಾಂತಗಳ ಆಧಾರದಲ್ಲಿ ಅಥವಾ ಆರೋಗ್ಯದ ಕಂಟೆಂಟ್ ಅನ್ನು ರಚಿಸುವುದಕ್ಕೆ ಸಂಬಂಧಿಸಿದಂತೆ NHS ರೂಪಿಸಿರುವ ಮಾನದಂಡಗಳನ್ನು ಅನುಸರಿಸುವ ಕಾರಣದಿಂದ ಅರ್ಹವಾಗಿವೆ.

ನಮ್ಮ ಮಾನದಂಡಗಳನ್ನು ಪೂರೈಸುವ ಅರ್ಜಿದಾರರು ಇವುಗಳಿಗೆ ಅರ್ಹರಾಗಿರುತ್ತಾರೆ:

ಯುಕೆಗಾಗಿ

ಯುಕೆಯಲ್ಲಿ, ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು, ಆರೋಗ್ಯ-ಕೇಂದ್ರೀಕೃತ YouTube ಚಾನಲ್‌ಗಳನ್ನು ಹೊಂದಿರುವ ವ್ಯಕ್ತಿಗಳು, ಕಂಪನಿಗಳು ಮತ್ತು ಲಾಭರಹಿತ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಆರೋಗ್ಯ ಮಾಹಿತಿಯನ್ನು ಹೇಗೆ ಹಂಚಿಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದ ಆರೋಗ್ಯ ಮಾಹಿತಿ ಹಂಚಿಕೊಳ್ಳುವಿಕೆಯ ಸಿದ್ಧಾಂತಗಳನ್ನು ವ್ಯಾಖ್ಯಾನಿಸಲು ನಾವು ಥರ್ಡ್ ಪಾರ್ಟಿ ಆರೋಗ್ಯ ಇಲಾಖೆ, ಅಕಾಡೆಮಿ ಆಫ್ ಮೆಡಿಕಲ್ ರಾಯಲ್ ಕಾಲೇಜುಗಳ (AoMRC) ಜೊತೆ ಕೆಲಸ ಮಾಡಿದೆವು.

AoMRC ಒಟ್ಟುಸೇರಿಸಿದ ತಜ್ಞರು ಆರೋಗ್ಯ ಮಾಹಿತಿ ಹಂಚಿಕೊಳ್ಳುವಿಕೆಯ ಮುಖ್ಯ ಅಂಶಗಳ ರೂಪುರೇಷೆ ನೀಡುವ ಈ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಿದ್ಧಾಂತಗಳು, ಯುಕೆಯಲ್ಲಿ ಆನ್‌ಲೈನ್‌ನಲ್ಲಿ ಆರೋಗ್ಯ ಮಾಹಿತಿಯ ವಿಶ್ವಾಸಾರ್ಹ ಮೂಲಗಳನ್ನು ಗುರುತಿಸಲು ನಮಗೆ ಅವಕಾಶ ಮಾಡಿಕೊಡುತ್ತವೆ.

ಇರಬೇಕಾದ ಕನಿಷ್ಠ ಅರ್ಹತೆಗಳು

  • ಆರೋಗ್ಯ ಮಾಹಿತಿ ಹಂಚಿಕೊಳ್ಳುವಿಕೆಯ ಸಿದ್ಧಾಂತಗಳ ಅನುಸರಣೆಯನ್ನು ಪ್ರಮಾಣೀಕರಿಸಬೇಕು. CMSS, NAM, ಹಾಗೂ WHO ಒಟ್ಟುಸೇರಿಸಿದ ತಜ್ಞರು ಮಾಹಿತಿ ಹಂಚಿಕೊಳ್ಳುವಿಕೆಯ ಮುಖ್ಯ ಅಂಶಗಳ ರೂಪುರೇಷೆ ನೀಡುವ ಈ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆರೋಗ್ಯ ಮಾಹಿತಿಯ ವಿಶ್ವಾಸಾರ್ಹ ಮೂಲವೆನಿಸಿಕೊಳ್ಳುವುದರ ಅರ್ಥವೇನು ಎಂಬುದನ್ನು ವ್ಯಾಖ್ಯಾನಿಸಲು ಈ ಅಂಶಗಳು ಸಹಾಯ ಮಾಡುತ್ತವೆ. ಬದಲಿಗೆ ಯುಕೆಯಲ್ಲಿನ ಅರ್ಜಿದಾರರು AoMRC ಸಿದ್ಧಾಂತಗಳ ಅನುಸರಣೆಯನ್ನು ಪ್ರಮಾಣೀಕರಿಸಬೇಕು.
  • ನೀವು ಅಧಿಕೃತ ಮೂಲವಾಗಲು ಅರ್ಜಿ ಸಲ್ಲಿಸುತ್ತಿರುವ ದೇಶ/ಪ್ರದೇಶದಲ್ಲಿ ಈ ಆರೋಗ್ಯ ವೃತ್ತಿಗಳಲ್ಲೊಂದರಲ್ಲಿ ಪರವಾನಗಿ ಪಡೆದಿರಬೇಕು. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆರೋಗ್ಯ ಫೀಚರ್‌ಗಳಿಗಾಗಿ ಅರ್ಹರಾಗಬೇಕಾದರೆ, ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪರವಾಗಿ ಪಡೆದ ನರ್ಸ್ ಆಗಿರಬೇಕು. ನೀವು ಒಂದು ಸಂಸ್ಥೆಯ ಪರವಾಗಿ ಅರ್ಜಿ ಸಲ್ಲಿಸುತ್ತಿದ್ದರೆ, ಈ ವೃತ್ತಿಗಳಲ್ಲೊಂದರಲ್ಲಿ ನೀವು ಪರವಾನಗಿ ಪಡೆದ ವೃತ್ತಿಪರರಾಗಿರಬೇಕು. ನಿಮ್ಮ ಸಂಸ್ಥೆಯು YouTube ನಲ್ಲಿ ಪೋಸ್ಟ್ ಮಾಡುವ ಕಂಟೆಂಟ್‌ನ ಕುರಿತು ಮೇಲ್ವಿಚಾರಣೆ ಮತ್ತು ಪರಿಶೀಲನೆಯನ್ನು ಸಹ ನೀವು ಮಾಡಬಲ್ಲವರಾಗಿರಬೇಕು.
    • ಪರವಾನಗಿ ಪಡೆದ ವೈದ್ಯರು (ಸಂಬಂಧಿತ ದೇಶದಲ್ಲಿ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಲು ಅರ್ಹರಾಗಿರಬೇಕು)
    • ಪರವಾನಗಿ ಪಡೆದ ನರ್ಸ್ / ನೋಂದಾಯಿತ ನರ್ಸ್
    • ಪರವಾನಗಿ ಪಡೆದ ಮನೋವಿಜ್ಞಾನಿ ಅಥವಾ ತತ್ಸಮಾನ
    • ಪರವಾನಗಿ ಪಡೆದ ವಿವಾಹ ಮತ್ತು ಕುಟುಂಬ ಚಿಕಿತ್ಸಕರು ಅಥವಾ ತತ್ಸಮಾನ
    • ಪರವಾನಗಿ ಪಡೆದ ಕ್ಲಿನಿಕಲ್ ಸಾಮಾಜಿಕ ಕಾರ್ಯಕರ್ತರು ಅಥವಾ ತತ್ಸಮಾನ

ಕೆಲವು ವೃತ್ತಿಗಳು ಕೆಲವು ದೇಶಗಳಲ್ಲಿ ಅರ್ಹತೆ ಹೊಂದಿಲ್ಲದಿರಬಹುದು ಅಥವಾ ಅನ್ವಯವಾಗದಿರಬಹುದು. ಹೆಚ್ಚಿನ ವಿವರಗಳಿಗಾಗಿ ನಿಮ್ಮ ದೇಶದ ಅರ್ಜಿ ಫಾರ್ಮ್ ನೋಡಿ.

ಗಮನಿಸಿ: ನೀವು ಅರ್ಜಿ ಸಲ್ಲಿಸಿದಾಗ, ಥರ್ಡ್ ಪಾರ್ಟಿ ಪಾಲುದಾರರಾಗಿರುವ LegitScript, ಪರವಾನಗಿ ದೃಢೀಕರಣವನ್ನು ಸಮನ್ವಯಗೊಳಿಸುತ್ತಾರೆ. LegitScript, ಪ್ರತಿ ದೇಶ/ಪ್ರದೇಶದಲ್ಲಿ ಪರವಾನಗಿ ನೀಡುವಿಕೆಯನ್ನು ದೃಢೀಕರಿಸುವುದಕ್ಕಾಗಿ ಇತರ ಪರವಾನಗಿ ನೀಡುವಿಕೆ ಸಂಸ್ಥೆಗಳು ಮತ್ತು ಸಂಬಂಧಿತ ಸಂಸ್ಥೆಗಳೊಂದಿಗೆ ಕೆಲಸ ಮಾಡಬಹುದು. ಉದಾಹರಣೆಗೆ, ಯು.ಎಸ್‌ನಲ್ಲಿ LegitScript, ದಿ ಫೆಡರೇಶನ್ ಆಫ್ ಸ್ಟೇಟ್ ಮೆಡಿಕಲ್ ಬೋರ್ಡ್ಸ್ (FSMB), PsychHub ಹಾಗೂ ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಕೆಲಸ ಮಾಡಬಹುದು.

ಜೊತೆಗೆ, ನೀವು ಅಥವಾ ನಿಮ್ಮ ಸಂಸ್ಥೆಯ YouTube ಚಾನಲ್ ಇವುಗಳನ್ನು ಪಾಲಿಸಬೇಕು:

  • ಚಾನಲ್ ಮಾನಿಟೈಸ್ ಮಾಡುತ್ತಿದೆಯೇ ಎಂಬುದನ್ನು ಪರಿಗಣಿಸದೆ, YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಅನುಸರಿಸಬೇಕು.
  • ಕಳೆದ 12 ತಿಂಗಳುಗಳಲ್ಲಿ 1,500 ಗಂಟೆಗಳಿಗಿಂತ ಹೆಚ್ಚಿನ ಮಾನ್ಯವಾದ ಸಾರ್ವಜನಿಕ ವೀಕ್ಷಣಾ ಅವಧಿಯನ್ನು ಅಥವಾ ಕಳೆದ 90 ದಿನಗಳಲ್ಲಿ 1.5 ಮಿಲಿಯನ್ ಮಾನ್ಯವಾದ ಸಾರ್ವಜನಿಕ Shorts ವೀಕ್ಷಣೆಗಳನ್ನು ಹೊಂದಿರಬೇಕು. ಸಾರ್ವಜನಿಕ ವೀಕ್ಷಣಾ ಅವಧಿ ಮತ್ತು ಸಾರ್ವಜನಿಕ Shorts ವೀಕ್ಷಣೆಗಳ ಕುರಿತು ಈ ಲೇಖನದಲ್ಲಿ ನೀವು ಇನ್ನಷ್ಟು ತಿಳಿದುಕೊಳ್ಳಬಹುದು.
  • ಪ್ರಾಥಮಿಕವಾಗಿ, ಆರೋಗ್ಯ ಮಾಹಿತಿಯನ್ನು ವರದಿ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಬೇಕು.
  • ಯಾವುದೇ ಸಕ್ರಿಯ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿರಬಾರದು.

US, UK, IN, ID, CA, DE, FR, BR, JP, KR ಮತ್ತು MX ಮೂಲವಲ್ಲದ, ಮೊದಲೇ ಅಸ್ತಿತ್ವದಲ್ಲಿರುವ, ಪ್ರಮಾಣಿತ ಪರಿಶೀಲನೆ ಕಾರ್ಯವಿಧಾನಗಳನ್ನು ಹೊಂದಿರುವ ಸಂಸ್ಥೆಗಳು.

ನೀವು ಮೇಲೆ ತಿಳಿಸಲಾದ ಯಾವುದೇ ದೇಶಗಳ ಮೂಲದವರಲ್ಲದಿದ್ದರೆ, ನಮ್ಮ ಅಧಿಕೃತ ಆರೋಗ್ಯ ಫೀಚರ್‌ಗಳಲ್ಲಿ ಆರೋಗ್ಯದ ಮಾಹಿತಿ ಮೂಲವಾಗಿ ಸೇರ್ಪಡೆಗೊಳ್ಳಲು ನೀವು ಈಗಲೂ ಆಸಕ್ತಿಯನ್ನು ವ್ಯಕ್ತಪಡಿಸಬಹುದು.
ಪ್ರಸ್ತುತ, ಮೊದಲೇ ಅಸ್ತಿತ್ವದಲ್ಲಿರುವ, ಪ್ರಮಾಣಿತ ಪರಿಶೀಲನೆ ಕಾರ್ಯವಿಧಾನಗಳನ್ನು ಹೊಂದಿರುವ ಸಂಸ್ಥೆಗಳು, ಉದಾಹರಣೆಗೆ, ಮಾನ್ಯತೆ ಪಡೆದ ಆಸ್ಪತ್ರೆಗಳು, ಶೈಕ್ಷಣಿಕ ವೈದ್ಯಕೀಯ ಸಂಸ್ಥೆಗಳು, ಸಾರ್ವಜನಿಕ ಆರೋಗ್ಯ ಇಲಾಖೆಗಳು ಅಥವಾ ಸರಕಾರಿ ಸಂಸ್ಥೆಗಳು ಮಾತ್ರ ಆರೋಗ್ಯದ ಮಾಹಿತಿ ಮೂಲವಾಗಿ ಪರಿಗಣಿಸಲ್ಪಡಲು ಅರ್ಜಿ ಸಲ್ಲಿಸಬಹುದು.
ಆಸಕ್ತಿಯನ್ನು ವ್ಯಕ್ತಪಡಿಸಲು:
  • YouTube ನಲ್ಲಿನ ನಿಮ್ಮ ಪ್ರೊಫೈಲ್ ಚಿತ್ರ ಎಂಬಲ್ಲಿನ ಮೆನುವನ್ನು ಬಳಸಿಕೊಂಡು, ಫೀಡ್‌ಬ್ಯಾಕ್ ಕಳುಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  • "#healthinfo" ಜೊತೆಗೆ ನಿಮ್ಮ ಚಾನಲ್ ವಿವರಗಳು, ಚಾನಲ್ URL, ದೇಶ ಮತ್ತು ವೆಬ್‌ಸೈಟ್ ಕುರಿತಾದ ಮಾಹಿತಿಯನ್ನು ಸೇರಿಸಿ.

ಮಾನ್ಯತೆ ಪಡೆದ ಆರೋಗ್ಯ ಸಂಸ್ಥೆಗಳು, ಶೈಕ್ಷಣಿಕ ವೈದ್ಯಕೀಯ ನಿಯತಕಾಲಿಕಗಳು ಅಥವಾ ಸರ್ಕಾರಿ ಘಟಕಗಳ ಜೊತೆ ಚಾನಲ್ ಸಂಯೋಜಿತವಾಗಿದೆಯೇ ಎಂಬುದನ್ನು ನಿರ್ಧರಿಸಲು ಈ ಫೀಡ್‌ಬ್ಯಾಕ್ ಅನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ.

ಅರ್ಹ ಚಾನಲ್‌ಗಳು ನಮ್ಮ ಫೀಚರ್‌ಗಳಲ್ಲಿ ಕಾಣಿಸಿಕೊಳ್ಳಲು ಕೆಲವು ತಿಂಗಳುಗಳ ಸಮಯ ಬೇಕಾಗಬಹುದು.

ಅರ್ಜಿ ಸಲ್ಲಿಸುವುದು ಹೇಗೆ

ನೀವು, ಅಥವಾ ನಿಮ್ಮ ಸಂಸ್ಥೆಯ ಪ್ರತಿನಿಧಿಯು ಈ ಮೇಲಿನ ಮಾನದಂಡಗಳನ್ನು ಪೂರೈಸುತ್ತೀರಾದರೆ, ಇಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಚಾನಲ್ ಅನ್ನು ಪರಿಶೀಲಿಸಿದ ಬಳಿಕ (ಸಾಮಾನ್ಯವಾಗಿ 1-2 ತಿಂಗಳುಗಳಲ್ಲಿ) ನಮ್ಮ ನಿರ್ಧಾರದೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತೇವೆ. ಸ್ವೀಕೃತ ಅರ್ಜಿದಾರರು 2-3 ತಿಂಗಳುಗಳಲ್ಲಿ ಆಯ್ದ ಫೀಚರ್‌ಗಳಲ್ಲಿ ಕಾಣಿಸಿಕೊಳ್ಳಲು ಅರ್ಹರಾಗಬಹುದು.

ಸ್ವೀಕೃತ ಅರ್ಜಿದಾರರನ್ನು ನಿಯಮಿತವಾಗಿ ಮರುವಿಶ್ಲೇಷಿಸಲಾಗುತ್ತದೆ. ನೀವು ಅಥವಾ ಚಾನಲ್, ಅರ್ಹತೆಯ ಮಾನದಂಡಗಳನ್ನು ಇದೀಗ ಪೂರೈಸುತ್ತಿಲ್ಲ ಎಂದಾದರೆ, ನೀವು ಇನ್ನು ಮುಂದೆ YouTube Health ನ ಕೆಲವೊಂದು ಫೀಚರ್‌ಗಳಿಗೆ ಅರ್ಹರಾಗಿಲ್ಲದೇ ಇರಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17596138356816302928
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false