Creator Music ಅನ್ನು ಬಳಸಿಕೊಂಡು ಆದಾಯವನ್ನು ಹಂಚಿಕೊಳ್ಳಿ

ಪ್ರಸ್ತುತ ಈವೆಂಟ್‌ಗಳ ಕಾರಣದಿಂದಾಗಿ, ಮಾನಿಟೈಸೇಶನ್‌ಗೆ ಅರ್ಹವಾಗಿರುವ ಅಥವಾ ಆದಾಯ ಹಂಚಿಕೆಗೆ ಲಭ್ಯವಿರುವ ಕೆಲವು ಕಂಟೆಂಟ್ ಅನ್ನು ರಷ್ಯಾ ಮತ್ತು ಬೆಲಾರಸ್‌ನಲ್ಲಿ ನಿರ್ಬಂಧಿಸಬಹುದು.
ಗಮನಿಸಿ: Creator Music, ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. YouTube ಪಾಲುದಾರ ಕಾರ್ಯಕ್ರಮದಲ್ಲಿನ (YPP) US ಕ್ರಿಯೇಟರ್‌ಗಳಿಗೆ ನಾವು ಕ್ರಮೇಣ ಅದನ್ನು ಬಿಡುಗಡೆ ಮಾಡುತ್ತಿದ್ದೇವೆ, ನಂತರ US ನ ಹೊರಗಿನ YPP ಕ್ರಿಯೇಟರ್‌ಗಳಿಗೆ ವಿಸ್ತರಿಸಲು ಯೋಜಿಸುತ್ತಿದ್ದೇವೆ.
ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು ವೆಬ್ ಬ್ರೌಸರ್‌ನ ಮೂಲಕ ಲಭ್ಯವಿವೆ.
 

ನಿಮ್ಮ ವೀಡಿಯೊದಲ್ಲಿ ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್ ಅನ್ನು ನೀವು ಬಳಸಿದರೆ, ಟ್ರ್ಯಾಕ್‌ನ ಹಕ್ಕುಗಳನ್ನು ಹೊಂದಿರುವವರೊಂದಿಗೆ ನೀವು ವೀಡಿಯೊದ ಆದಾಯವನ್ನು ಹಂಚಿಕೊಳ್ಳಬಹುದು ಎಂದರ್ಥ.

ಆದಾಯವನ್ನು ಹಂಚಿಕೊಳ್ಳಲು ಪ್ರಾರಂಭಿಸಿ

ವೀಡಿಯೊದಲ್ಲಿ ಸಂಗೀತ ಆದಾಯ ಹಂಚಿಕೆಯನ್ನು ಸಕ್ರಿಯಗೊಳಿಸಲು:

  1. ಆದಾಯವನ್ನು ಹಂಚಿಕೊಳ್ಳಬಹುದಾದ ಟ್ರ್ಯಾಕ್‌ಗಳನ್ನು ಹುಡುಕಿ.
  2. ಆದಾಯ ಹಂಚಿಕೆ ಬಳಕೆಯ ಅವಶ್ಯಕತೆಗಳನ್ನು ಪೂರೈಸುವ ವೀಡಿಯೊವನ್ನು ರಚಿಸಿ.
  3. YouTube ಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿ.
  4. ಅಪ್‌ಲೋಡ್ ಪ್ರಕ್ರಿಯೆಯ ಪರಿಶೀಲನೆಗಳು ಹಂತದಲ್ಲಿ, ನಾವು ನಿಮ್ಮ ವೀಡಿಯೊದಲ್ಲಿ ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್ ಅನ್ನು ಹುಡುಕುತ್ತೇವೆ. ಆದಾಯ ಹಂಚಿಕೆಗೆ ಅರ್ಹವಾದ ಟ್ರ್ಯಾಕ್ ಕಂಡುಬಂದರೆ, ಆದಾಯ ಹಂಚಿಕೆಗಾಗಿ ನಿಮ್ಮ ವೀಡಿಯೊವನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗುತ್ತದೆ (ಆದಾಯವನ್ನು ಹಂಚಿಕೊಳ್ಳಲು ಸಾಧ್ಯವಾಗದ ಕಂಟೆಂಟ್‌ಗೆ ಯಾವುದೇ Content ID ಕ್ಲೈಮ್‌ಗಳು ಇಲ್ಲದವರೆಗೆ).
ನಿಮ್ಮ ವೀಡಿಯೊವನ್ನು YouTube ನಲ್ಲಿ ಪ್ರಕಟಿಸಿದ ತಕ್ಷಣವೇ ಆದಾಯ ಹಂಚಿಕೆ ಪ್ರಾರಂಭವಾಗುತ್ತದೆ.

ಆದಾಯ ಹಂಚಿಕೆಗಾಗಿ ಬಳಕೆಯ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಿ

Creator Music ದಿಂದ ಆದಾಯ ಹಂಚಿಕೆಯ ಟ್ರ್ಯಾಕ್‌ಗಳನ್ನು ಬಳಸುವ ವೀಡಿಯೊಗಳು, ಆದಾಯವನ್ನು ಹಂಚಿಕೊಳ್ಳುವುದಕ್ಕೆ ಅರ್ಹತೆ ಪಡೆಯಲು ಈ ಬಳಕೆಯ ಅವಶ್ಯಕತೆಗಳನ್ನು ಪೂರೈಸಬೇಕು:

  • ಟ್ರ್ಯಾಕ್ ಮತ್ತು ವೀಡಿಯೊದ ಅವಧಿ: ವೀಡಿಯೊ, ಸೂಕ್ತವಾದ ಉದ್ದದ ವೀಡಿಯೊದಲ್ಲಿ ಸೂಕ್ತವಾದ ಟ್ರ್ಯಾಕ್ ಅನ್ನು ಬಳಸುತ್ತದೆ:
    • ಟ್ರ್ಯಾಕ್‌ಗಾಗಿ ಪರವಾನಗಿ ಪಡೆಯಬಹುದಾಗಿದ್ದರೆ, ಆದರೆ ನೀವು ಪರವಾನಗಿ ಖರೀದಿಸಲು ಬಯಸುವುದಿಲ್ಲ ಎಂದಾದರೆ, 3 ನಿಮಿಷಗಳಿಗಿಂತ ಹೆಚ್ಚು ದೀರ್ಘವಿರುವ ವೀಡಿಯೊದಲ್ಲಿ 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯವರೆಗೆ ಟ್ರ್ಯಾಕ್ ಅನ್ನು ಬಳಸುವ ಮೂಲಕ ನೀವು ಆದಾಯವನ್ನು ಹಂಚಿಕೊಳ್ಳಬಹುದು.
    • ಟ್ರ್ಯಾಕ್‌ಗಾಗಿ ಪರವಾನಗಿ ಪಡೆಯಲು ಸಾಧ್ಯವಿಲ್ಲದಿದ್ದರೆ, ಆದರೆ ಅದು ಆದಾಯ ಹಂಚಿಕೆಗೆ ಅರ್ಹವಾಗಿದೆ ಎಂದಾದರೆ, ಯಾವುದೇ ಅವಧಿಯ ವೀಡಿಯೊದಲ್ಲಿ ನಿಮಗೆ ಬೇಕಾದಷ್ಟು ಟ್ರ್ಯಾಕ್‌ನ ಪ್ರಮಾಣವನ್ನು ಬಳಸಿಕೊಳ್ಳುವ ಮೂಲಕ ನೀವು ಆದಾಯವನ್ನು ಹಂಚಿಕೊಳ್ಳಬಹುದು.
  • ಮಾನಿಟೈಸೇಶನ್ ಸಮಸ್ಯೆಗಳಿರಬಾರದು: ವೀಡಿಯೊದಲ್ಲಿ ಮಾನಿಟೈಸೇಶನ್ ಸಮಸ್ಯೆಗಳಿರಬಾರದು, ಉದಾಹರಣೆಗೆ:
  • ಲೈವ್ ಸ್ಟ್ರೀಮ್‌ಗಳು ಅಥವಾ Shorts ಆಗಿರಬಾರದು: ವೀಡಿಯೊ, ಒಂದು ಲೈವ್ ಸ್ಟ್ರೀಮ್ ಅಥವಾ Short ಆಗಿರಬಾರದು. Shorts ಆದಾಯ ಹಂಚಿಕೆಯ ಕುರಿತು ತಿಳಿದುಕೊಳ್ಳಿ.
ಬಳಕೆಯ ಅವಶ್ಯಕತೆಗಳನ್ನು ಅನುಸರಿಸದಿದ್ದರೆ, ನಿಮ್ಮ ವೀಡಿಯೊ Content ID ಕ್ಲೈಮ್ ಅಥವಾ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸ್ವೀಕರಿಸಬಹುದು, ಇದರಿಂದ ಮಾನಿಟೈಸೇಶನ್ ನಿಷ್ಕ್ರಿಯವಾಗಬಹುದು ಅಥವಾ ನಿಮ್ಮ ವೀಡಿಯೊ ನಿರ್ಬಂಧಿತವಾಗಬಹುದು.

ಬಳಕೆಯ ಅವಶ್ಯಕತೆಗಳು ಹಕ್ಕುಗಳನ್ನು ಹೊಂದಿರುವವರ ವಿವೇಚನೆಯನ್ನು ಆಧರಿಸಿ ಬದಲಿಸಬಹುದು ಎಂಬುದನ್ನು ನೆನಪಿಡಿ. ಉದಾಹರಣೆಗೆ, ಆದಾಯ ಹಂಚಿಕೆ ಮಾಡಿಕೊಳ್ಳುವ ಟ್ರ್ಯಾಕ್ ಅನ್ನು ಬಳಸುವ ವೀಡಿಯೊವನ್ನು ನೀವು ಅಪ್‌ಲೋಡ್ ಮಾಡಿದ ನಂತರ, ಹಕ್ಕುಗಳನ್ನು ಹೊಂದಿರುವವರು ಆನಂತರ ಆ ಟ್ರ್ಯಾಕ್‌ಗಾಗಿ ಮಾನಿಟೈಸೇಶನ್ ಅನ್ನು ನಿಷ್ಕ್ರಿಯಗೊಳಿಸಬಹುದು, ಇದರಿಂದ ನಿಮ್ಮ ವೀಡಿಯೊಗಾಗಿ ಮಾನಿಟೈಸೇಶನ್ ನಿಷ್ಕ್ರಿಯವಾಗುತ್ತದೆ. ಬಳಕೆಯ ನಿಯಮಗಳಲ್ಲಿನ ಬದಲಾವಣೆಗಳು ನಿರ್ದಿಷ್ಟ ಪ್ರಾಂತ್ಯಗಳಲ್ಲಿ ಅಥವಾ ಎಲ್ಲಾ ಪ್ರಾಂತ್ಯಗಳಲ್ಲಿ ಅನ್ವಯಿಸಬಹುದು. 

ಆದಾಯ ಹಂಚಿಕೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ

Creator Music ಮೂಲಕ, ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್‌ಗಳನ್ನು ದಿರ್ಘಾವಧಿಯ ವೀಡಿಯೊದಲ್ಲಿ ಬಳಸಿದರೆ, ಈ ಕೆಳಗಿನ ಉದಾಹರಣೆಗಳಲ್ಲಿ ತೋರಿಸಿರುವಂತೆ ಸಂಗೀತ ಹಕ್ಕುಗಳನ್ನು ಕ್ಲಿಯರ್ ಮಾಡುವ ವೆಚ್ಚಗಳನ್ನು ಭರಿಸುವುದಕ್ಕಾಗಿ ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯನ್ನು ಸರಿಹೊಂದಿಸಲಾಗುತ್ತದೆ. ಇದು ಇವುಗಳನ್ನು ಅವಲಂಬಿಸಿರುತ್ತದೆ:

  • ಬಳಸಲಾಗಿರುವ ಟ್ರ್ಯಾಕ್‌ಗಳು: ರಚನೆಕಾರರು ತಮ್ಮ ವೀಡಿಯೊದಲ್ಲಿ ಎಷ್ಟು ಅರ್ಹ ಆದಾಯ ಹಂಚಿಕೆ ಟ್ರ್ಯಾಕ್‌ಗಳನ್ನು ಬಳಸುತ್ತಾರೆ (ಕೆಳಗಿನ ಉದಾಹರಣೆಗಳನ್ನು ನೋಡಿ).
  • ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು: ಕಾರ್ಯನಿರ್ವಹಣೆಯ ಹಕ್ಕುಗಳು ಸೇರಿದಂತೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳನ್ನು ಭರಿಸುವುದಕ್ಕಾಗಿ ಕಡಿತ. ಈ ಕಡಿತವು ಗರಿಷ್ಠ 5% ವರೆಗೆ ಇರಬಹುದು ಮತ್ತು ಆದಾಯ ಹಂಚಿಕೆಗೆ ಅರ್ಹವಾಗಿರುವ Creator Music ಟ್ರ್ಯಾಕ್‌ಗಳಾದ್ಯಂತ ಈ ಹೆಚ್ಚುವರಿ ಸಂಗೀತ ಹಕ್ಕುಗಳ ಸಂಯೋಜಿತ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.
ಆದಾಯ ಹಂಚಿಕೆ ಲೆಕ್ಕಾಚಾರಗಳ ಉದಾಹರಣೆಗಳು

ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್‌ನ ಬಳಕೆ

ಉದಾಹರಣೆ: ರಚನೆಕಾರರು ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 1 ಆದಾಯ ಹಂಚಿಕೆ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯಲ್ಲಿ ಅರ್ಧ ಭಾಗವನ್ನು (27.5%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2.5% ಆಗಬಹುದು.

ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 25% (27.5% - 2.5%) ಗಳಿಸುತ್ತಾರೆ.

 
ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್‌ನ ಬಳಕೆ
ಉದಾಹರಣೆ ಆದಾಯ ಹಂಚಿಕೆ: 55% ÷ 2 27.5%
ಉದಾಹರಣೆ ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು - 2.5%
ಉದಾಹರಣೆ ಒಟ್ಟು ಆದಾಯ 25%

ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್‌ನ ಬಳಕೆ

ಉದಾಹರಣೆ: ಕ್ರಿಯೇಟರ್ ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯ 1/3 ಭಾಗವನ್ನು (18.33%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2% ಆಗಬಹುದು.

ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 16.33% ಭಾಗವನ್ನು (18.33% - 2%) ಗಳಿಸುತ್ತಾರೆ.

 
ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್‌ನ ಬಳಕೆ
ಉದಾಹರಣೆ ಆದಾಯ ಹಂಚಿಕೆ: 55% ÷ 3 18.33%
ಉದಾಹರಣೆ ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು - 2.5%
ಉದಾಹರಣೆ ಒಟ್ಟು ಆದಾಯ 15.83%

ಆದಾಯ ಹಂಚಿಕೆಯ ಸ್ಥಿತಿಯನ್ನು ಪರಿಶೀಲಿಸಿ

ವೀಡಿಯೊವನ್ನು ಪ್ರಕಟಿಸಿದ ನಂತರ, YouTube Studio ದಲ್ಲಿ ಅದರ ಆದಾಯ ಹಂಚಿಕೆ ಸ್ಥಿತಿಯ ಕುರಿತು ನೀವು ಮಾಹಿತಿಯನ್ನು ಪಡೆಯಬಹುದು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ವೀಡಿಯೊಗಳು ಟ್ಯಾಬ್‌ನಲ್ಲಿ, ನೀವು ಆದಾಯ ಹಂಚಿಕೆ ಟ್ರ್ಯಾಕ್ ಅನ್ನು ಸೇರಿಸಿದ ವೀಡಿಯೊವನ್ನು ಹುಡುಕಿ.
  4. ವೀಡಿಯೊ ಆದಾಯವನ್ನು ಹಂಚಿಕೊಳ್ಳುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಮಾನಿಟೈಸೇಶನ್ ಕಾಲಮ್‌ನಲ್ಲಿ ಹಂಚಿಕೊಳ್ಳುವಿಕೆ ಎಂಬದನ್ನು ನೋಡಿ.
  5. ವಿವರಗಳಿಗಾಗಿ, ವೀಡಿಯೊ ಥಂಬ್‌ನೇಲ್ ಅನ್ನು ಕ್ಲಿಕ್ ಮಾಡಿ.
  6. ಎಡಭಾಗದ ಮೆನುವಿನಿಂದ, ಕೃತಿಸ್ವಾಮ್ಯ ಎಂಬುದನ್ನು ಆಯ್ಕೆಮಾಡಿ
  7. ವೀಡಿಯೊದ ಮೇಲಿನ ಪರಿಣಾಮ ಕಾಲಮ್‌ನಲ್ಲಿ, ಆದಾಯ ಹಂಚಿಕೊಳ್ಳುವಿಕೆ ಎಂಬುದರ ಮೇಲೆ ಹೋವರ್ ಮಾಡಿ.

ಹಕ್ಕುಗಳನ್ನು ಹೊಂದಿರುವವರ ವಿವೇಚನೆಯಿಂದ ಬಳಕೆಯ ವಿವರಗಳು ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ.

 

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9895883172052234647
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false