ಪ್ರತಿವಾದಿ ನೋಟಿಫಿಕೇಶನ್‌ಗೆ ಪ್ರತಿಕ್ರಿಯಿಸಿ

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ಕಾರಣದಿಂದ ಕಂಟೆಂಟ್ ಅನ್ನು ತೆಗೆದುಹಾಕಿದಾಗ, ಆ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿದವರು ಅಥವಾ ಅಧಿಕೃತ ಪ್ರತಿನಿಧಿಯು ಕೃತಿಸ್ವಾಮ್ಯ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು. ಆಪಾದಿತ ತಪ್ಪು ಅಥವಾ ತಪ್ಪಾಗಿ ಗುರುತಿಸುವಿಕೆಯಿಂದಾಗಿ ತೆಗೆದುಹಾಕಲಾದ ಕಂಟೆಂಟ್ ಅನ್ನು ಮರುಸ್ಥಾಪಿಸಲು ಇದು ಕಾನೂನು ವಿನಂತಿಯಾಗಿದೆ.

ಈ ಮುಂದಿನ ಸಂದರ್ಭಗಳಿದ್ದರೆ, ಪ್ರತಿವಾದಿ ನೋಟಿಫಿಕೇಶನ್‌ಗಳನ್ನು ಪ್ರತಿಕ್ರಿಯೆಗಾಗಿ ಕ್ಲೇಮುದಾರರಿಗೆ (ತೆಗೆದುಹಾಕುವಿಕೆಯ ಮೂಲ ವಿನಂತಿಯನ್ನು ಸಲ್ಲಿಸಿದವರು) ಫಾರ್ವರ್ಡ್ ಮಾಡಲಾಗುತ್ತದೆ:

  • ಎಲ್ಲಾ ಕಾನೂನು ಅವಶ್ಯಕತೆಗಳನ್ನು ಪೂರೈಸಿದ್ದರೆ
  • ಅಪ್‌ಲೋಡ್ ಮಾಡಿದವರು ಕಂಟೆಂಟ್ ಅನ್ನು ಬಳಸುವ ಕುರಿತಾದ ತಮ್ಮ ಹಕ್ಕನ್ನು ಸ್ಪಷ್ಟವಾಗಿ ವಿವರಿಸಿದ್ದರೆ
ಕ್ಲೇಮುದಾರರು, ತಕರಾರಿನಲ್ಲಿರುವ ಕಂಟೆಂಟ್ ಅನ್ನು YouTube ನಲ್ಲಿ ಮರುಸ್ಥಾಪಿಸದಂತೆ ಇರಿಸಿಕೊಳ್ಳಲು ತೆಗೆದುಕೊಳ್ಳಲಾದ ಕಾನೂನು ಕ್ರಮದ ಪುರಾವೆಗಳ ಜೊತೆಗೆ ಪ್ರತ್ಯುತ್ತರಿಸಲು 10 US ವ್ಯವಹಾರದ ದಿನಗಳನ್ನು ಹೊಂದಿರುತ್ತಾರೆ.

ಕಾನೂನು ಕ್ರಮದ ಪುರಾವೆಗಳನ್ನು ಪಡೆಯಿರಿ

ಪ್ರತಿವಾದಿ ನೋಟಿಫಿಕೇಶನ್‌ಗೆ ಪ್ರತಿಕ್ರಿಯಿಸಲು, ಕ್ಲೇಮುದಾರರು ಈ ಕೆಳಗಿನ ಕಾನೂನು ಕ್ರಮಗಳಲ್ಲಿ ಒಂದನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಪುರಾವೆಗಳನ್ನು ಸೇರಿಸಬೇಕು:

  • ಆಪಾದಿತ ಉಲ್ಲಂಘನೆಯ ಚಟುವಟಿಕೆಯನ್ನು ತಡೆಯಲು ಅಪ್‌ಲೋಡ್ ಮಾಡಿದವರ ವಿರುದ್ಧ ನ್ಯಾಯಾಲಯದ ಆದೇಶವನ್ನು ಕೋರುವ ಕ್ರಮ (ಕೇವಲ ಹಾನಿಗಳಿಗೆ ಸಂಬಂಧಿಸಿದ ಕ್ಲೇಮ್ ಅಲ್ಲ).
  • ಅನ್ವಯವಾಗುವಲ್ಲಿ, ಅಪ್‌ಲೋಡ್ ಮಾಡಿದವರ ವಿರುದ್ಧ (ಅಂತಹ ಅಪ್‌ಲೋಡ್ ಮಾಡಿದವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಗೊಂಡಿದ್ದರೆ), US ಕೃತಿಸ್ವಾಮ್ಯ ಕಚೇರಿಯ ಕೃತಿಸ್ವಾಮ್ಯ ಕ್ಲೇಮ್ಸ್ ಬೋರ್ಡ್‌ನಲ್ಲಿ (CCB) ಕೃತಿಸ್ವಾಮ್ಯ ಉಲ್ಲಂಘನೆಯ ಕ್ಲೇಮ್.

ಕ್ಲೇಮುದಾರರ ಕ್ರಮ ಅಥವಾ ಕ್ಲೇಮ್, ಅಪ್‌ಲೋಡ್ ಮಾಡಿದವರು ಮತ್ತು ತಕರಾರಿನಲ್ಲಿರುವ ನಿರ್ದಿಷ್ಟ ಕಂಟೆಂಟ್ ಅನ್ನು ಹೆಸರಿಸಬೇಕು, ಉದಾಹರಣೆಗೆ YouTube ವೀಡಿಯೊ URL ಗಳು. ಸ್ವೀಕಾರಾರ್ಹ ಪುರಾವೆಗಳು ಈ ಕೆಳಗಿನವುಗಳಲ್ಲಿ ಒಂದರ ಪ್ರತಿಯನ್ನು ಒಳಗೊಂಡಿರಬಹುದು:

  • ಮೊಕದ್ದಮೆ
  • ನ್ಯಾಯಾಲಯದ ಆದೇಶ
  • CCB ಕ್ಲೇಮ್
  • CCB ಯಿಂದ ಉಲ್ಲಂಘನೆಯ ಪತ್ತೆ

ಕೃತಿಸ್ವಾಮ್ಯ ಪ್ರಕರಣಗಳನ್ನು ಪರಿಶೀಲಿಸುವ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಸಲ್ಲಿಸಬೇಕು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಲ್ಲಿಸಿದ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ, ನಾವು US ಫೆಡರಲ್ ನ್ಯಾಯಾಲಯಗಳಲ್ಲಿನ ಸಲ್ಲಿಕೆಗಳನ್ನು ಮಾತ್ರ ಸ್ವೀಕರಿಸಬಹುದು.

ತಪ್ಪಾದ ಮಾಹಿತಿಯನ್ನು ಸಲ್ಲಿಸಬೇಡಿ. ವಂಚನೆಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವಂತಹ ನಮ್ಮ ಪ್ರಕ್ರಿಯೆಗಳ ದುರುಪಯೋಗವು ನಿಮ್ಮ ಖಾತೆಯ ಅಮಾನತು ಅಥವಾ ಇತರ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು.

ಇಮೇಲ್ ಮೂಲಕ ಪ್ರತಿಕ್ರಿಯಿಸಿ

ಪ್ರತಿವಾದಿ ನೋಟಿಫಿಕೇಶನ್‌ಗೆ ಪ್ರತಿಕ್ರಿಯಿಸಲು:

  1. ಮೇಲೆ ವಿವರಿಸಿದಂತೆ ಕಾನೂನು ಕ್ರಮದ ಪುರಾವೆಯ ಪ್ರತಿಯನ್ನು ಪಡೆಯಿರಿ.
    • Google Drive ಲಿಂಕ್‌ಗಳಂತಹ, ಕ್ಲೌಡ್‌ನಲ್ಲಿ ಸಂಗ್ರಹಿಸಿದ ಫೈಲ್‌ಗಳ ಲಿಂಕ್‌ಗಳನ್ನು ಸ್ವೀಕರಿಸಲಾಗುವುದಿಲ್ಲ.
  2. YouTube ನಿಂದ ಫಾರ್ವರ್ಡ್ ಮಾಡಲಾದ ಪ್ರತಿವಾದಿ ನೋಟಿಫಿಕೇಶನ್ ಇಮೇಲ್‌ಗೆ ಹೋಗಿ.
    • ತೆಗೆದುಹಾಕುವಿಕೆಯ ಮೂಲ ವಿನಂತಿಯನ್ನು ಸಲ್ಲಿಸಲು ಬಳಸಿದ ಇಮೇಲ್ ವಿಳಾಸಕ್ಕೆ ಪ್ರತಿವಾದಿ ನೋಟಿಫಿಕೇಶನ್‌ಗಳನ್ನು ಕಳುಹಿಸಲಾಗುತ್ತದೆ. 
  3. ಪುರಾವೆಯ ಪ್ರತಿಯ ಜೊತೆಗೆ ಇಮೇಲ್‌ಗೆ ನೇರವಾಗಿ ಪ್ರತ್ಯುತ್ತರಿಸಿ.
    • YouTube ಗೆ ನಿಮ್ಮ ಪ್ರತ್ಯುತ್ತರವನ್ನು ಹೊಸ ಇಮೇಲ್ ಆಗಿ ಕಳುಹಿಸಬೇಡಿ.

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ ಗಳು)

ಪ್ರತಿವಾದಿ ನೋಟಿಫಿಕೇಶನ್‌ಗೆ ನಾನು ಎಷ್ಟು ಸಮಯದೊಳಗೆ ಪ್ರತಿಕ್ರಿಯಿಸಬೇಕು?
ಕ್ಲೇಮುದಾರರು, ಅಗತ್ಯವಿರುವ ಕಾನೂನು ಕ್ರಮದ ಪುರಾವೆಗಳ ಜೊತೆಗೆ ಪ್ರತಿವಾದಿ ನೋಟಿಫಿಕೇಶನ್ ಇಮೇಲ್‌ಗೆ ಪ್ರತ್ಯುತ್ತರಿಸಲು 10 US ವ್ಯವಹಾರದ ದಿನಗಳನ್ನು ಹೊಂದಿರುತ್ತಾರೆ.
ನಾನು ಕಾನೂನು ಕ್ರಮದ ಪುರಾವೆಗಳನ್ನು ಸಲ್ಲಿಸಿದ ನಂತರ ಏನಾಗುತ್ತದೆ?
ಕಾನೂನು ಕ್ರಮ ಬಾಕಿ ಇರುವಾಗ ತಕರಾರಿನಲ್ಲಿರುವ ಕಂಟೆಂಟ್ ಅನ್ನು YouTube ಗೆ ಮರುಸ್ಥಾಪಿಸಲಾಗುವುದಿಲ್ಲ. ಅಲ್ಲದೆ, ಕಾನೂನು ಕ್ರಮ ಬಾಕಿ ಇರುವಾಗ ಕೃತಿಸ್ವಾಮ್ಯ ಉಲ್ಲಂಘನೆಯ ಕ್ಲೇಮ್ ಮತ್ತು ಪ್ರತಿವಾದಿ ನೋಟಿಫಿಕೇಶನ್ ಅನ್ನು ಬಗೆಹರಿಸಲಾಗಿಲ್ಲ ಎಂದು ಪರಿಗಣಿಸಲಾಗುತ್ತದೆ.
ಪ್ರತಿವಾದಿ ನೋಟಿಫಿಕೇಶನ್‌ಗೆ ನಾನು ಪ್ರತಿಕ್ರಿಯಿಸದಿದ್ದರೆ, ಏನಾಗುತ್ತದೆ?
ಕ್ಲೇಮುದಾರರು ಪ್ರತಿವಾದಿ ನೋಟಿಫಿಕೇಶನ್‌ಗೆ ಪ್ರತಿಕ್ರಿಯಿಸದಿದ್ದರೆ ಅಥವಾ ಪುರಾವೆಗಳು ಸಾಕಾಗದಿದ್ದರೆ ಅಥವಾ ಇಲ್ಲದಿದ್ದರೆ, ತಕರಾರಿನಲ್ಲಿರುವ ಕಂಟೆಂಟ್ ಅನ್ನು YouTube ಗೆ ಮರುಸ್ಥಾಪಿಸಲಾಗಬಹುದು.

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9766382515088522311
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false