ನಿಮ್ಮ ಸ್ಟೋರ್‌ನ ಉತ್ಪನ್ನಗಳನ್ನು YouTube ನಲ್ಲಿ ನಿರ್ವಹಿಸಿ

ಅರ್ಹ ರಚನೆಕಾರರು ತಮ್ಮ ಉತ್ಪನ್ನಗಳನ್ನು ಮತ್ತು ಅಧಿಕೃತ ಬ್ರ್ಯಾಂಡ್ ಹೊಂದಿರುವ ಮಾರಾಟ ಸರಕುಗಳನ್ನು YouTube ನಲ್ಲಿ ಪ್ರದರ್ಶಿಸಲು YouTube Shopping ಅವಕಾಶ ನೀಡುತ್ತದೆ. ಈ ಸ್ಥಳಗಳಲ್ಲಿರುವ ವೀಕ್ಷಕರು, YouTube ನ ಈ ಕೆಳಗೆ ತಿಳಿಸಿದ ಭಾಗಗಳಲ್ಲಿ ನಿಮ್ಮ ಉತ್ಪನ್ನಗಳನ್ನು ಬ್ರೌಸ್ ಮಾಡಬಹುದು ಮತ್ತು ಖರೀದಿಸಬಹುದು:

  • ನಿಮ್ಮ ಚಾನಲ್‌ನ ಸ್ಟೋರ್
  • ವೀಡಿಯೊ ವಿವರಣೆಯಲ್ಲಿರುವ ಉತ್ಪನ್ನಗಳು
  • ನಿಮ್ಮ ವೀಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳ ಕೆಳಗೆ ಅಥವಾ ಪಕ್ಕದಲ್ಲಿರುವ ಪ್ರಾಡಕ್ಟ್ ಶೆಲ್ಫ್
  • ನಿಮ್ಮ ವೀಡಿಯೊಗಳು, Shorts ಮತ್ತು ಲೈವ್ ಸ್ಟ್ರೀಮ್‌ಗಳಲ್ಲಿರುವ Shopping ಬಟನ್
  • ಸಂಗ್ರಹಣೆಗಳು

YouTube Studio ದಲ್ಲಿ ಅಥವಾ YouTube Studio ಮೊಬೈಲ್ ಆ್ಯಪ್‌ನ ಮೂಲಕ ಈ ಭಾಗಗಳಾದ್ಯಂತ ಪ್ರದರ್ಶಿಸಲು ನಿಮ್ಮ ಉತ್ಪನ್ನಗಳನ್ನು ನೀವು ವ್ಯವಸ್ಥಿತಗೊಳಿಸಬಹುದು. ಚಾನಲ್ ಮಟ್ಟದ ಮತ್ತು ಪ್ರತ್ಯೇಕ ವೀಡಿಯೊ ವ್ಯವಸ್ಥೆಗಳೊಂದಿಗೆ, ನಿಮ್ಮ ಉತ್ಪನ್ನಗಳ ಕ್ರಮವನ್ನು ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವ ಹಾಗೆ ನೀವು ಕಸ್ಟಮೈಸ್ ಮಾಡಬಹುದು.

ನಿಮ್ಮ ಚಾನಲ್ ಸ್ಟೋರ್‌ಗೆ ಲಿಂಕ್ ಮಾಡುವ ಮೂಲಕ ಅಥವಾ ನಿಮ್ಮ ವೀಕ್ಷಕರಿಗೆ ಬೇಕಾದ ಸಂಗ್ರಹಣೆಗಳನ್ನು ರಚಿಸುವ ಮತ್ತು ಹಂಚಿಕೊಳ್ಳುವ ಮೂಲಕವೂ ನಿಮ್ಮ ಉತ್ಪನ್ನಗಳನ್ನು ನೀವು ಶೋಕೇಸ್ ಮಾಡಬಹುದು.

YouTube Shopping: ನಿಮ್ಮ ಸ್ಟೋರ್‌ನಿಂದ ಉತ್ಪನ್ನಗಳನ್ನು ಟ್ಯಾಗ್ ಮಾಡಿ ಮತ್ತು ಮಾರಾಟ ಮಾಡಿ

ನಿಮ್ಮ ಚಾನಲ್‌ಗಾಗಿ ಉತ್ಪನ್ನಗಳನ್ನು ಆಯ್ಕೆಮಾಡಿ

ನೀವು ಸ್ಟೋರ್ ಅನ್ನು ಕನೆಕ್ಟ್ ಮಾಡಿದಾಗ, ಮತ್ತು ಪ್ರದರ್ಶಿಸಲು ಅರ್ಹವಾದ ಕನಿಷ್ಠ ಒಂದು ಐಟಂ ಅನ್ನು ಹೊಂದಿದ್ದಾಗ, ನಿಮ್ಮ ಅರ್ಹ ಉತ್ಪನ್ನಗಳನ್ನು ಸ್ವಯಂಚಾಲಿತವಾಗಿ ಇಲ್ಲಿ ಶೋಕೇಸ್ ಮಾಡಲಾಗುತ್ತದೆ: 

  • ನಿಮ್ಮ ವೀಡಿಯೊ ವಿವರಣೆಗಳು
  • ನಿಮ್ಮ ಚಾನಲ್ ಹೋಮ್ ಪೇಜ್‌ನಲ್ಲಿ Store ಟ್ಯಾಬ್

ನಿಮ್ಮ ಉತ್ಪನ್ನಗಳ ಡಿಸ್‌ಪ್ಲೇ ಕ್ರಮವನ್ನು ಬೆಲೆ, ಜನಪ್ರಿಯತೆ ಮತ್ತು ಲಭ್ಯತೆಯಂತಹ ವಿವಿಧ ಅಂಶಗಳ ಆಧಾರದ ಮೇಲೆ, ತೊಡಗಿಸಿಕೊಳ್ಳುವಿಕೆಗಾಗಿ ಆಪ್ಟಿಮೈಸ್ ಮಾಡಲಾಗುತ್ತದೆ ಹಾಗೂ ಆಟೋಮೇಟ್ ಮಾಡಲಾಗುತ್ತದೆ. ನಿಮ್ಮ ಸಂಪೂರ್ಣ ಚಾನಲ್ ಮತ್ತು ಸ್ಟೋರ್‌ಗಾಗಿ ನಿರ್ದಿಷ್ಟ ಕ್ರಮದಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಲು ನೀವು ಆಯ್ಕೆ ಮಾಡಬಹುದು.

ಚಾನಲ್ ಮಟ್ಟದಲ್ಲಿರುವ ವ್ಯವಸ್ಥೆಗಳು ಲೈವ್ ಸ್ಟ್ರೀಮ್‌ಗಳಿಗೆ ಅನ್ವಯವಾಗುವುದಿಲ್ಲ.

ನಿಮ್ಮ ಸಂಪೂರ್ಣ ಚಾನಲ್‌ ಮತ್ತು ಸ್ಟೋರ್‌ಗಾಗಿ ಪ್ರದರ್ಶಿಸುವ ಕ್ರಮವನ್ನು YouTube Studio ದಲ್ಲಿ ಕಸ್ಟಮೈಸ್ ಮಾಡಿ:

  1. Earn ಅನ್ನು ಕ್ಲಿಕ್ ಮಾಡಿ.
  2. ಶಾಪಿಂಗ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ. 
    • ನೀವು ಮೊದಲ ಬಾರಿಗೆ ಡೀಫಾಲ್ಟ್ ಆಯ್ಕೆಯನ್ನು ಬದಲಾಯಿಸುತ್ತಿದ್ದರೆ, ಸ್ವಂತ ಆಯ್ಕೆಯನ್ನು ರಚಿಸಿ ಅನ್ನು ಕ್ಲಿಕ್ ಮಾಡಿ.
    • ನೀವು ಹಿಂದಿನ ಆಯ್ಕೆಯನ್ನು ಬದಲಾಯಿಸುತ್ತಿದ್ದರೆ, ಕಸ್ಟಮೈಸ್ ಮಾಡಿ ಅನ್ನು ಕ್ಲಿಕ್ ಮಾಡಿ.
  3. ಗರಿಷ್ಠ 30 ಐಟಂಗಳನ್ನು ಡ್ರ್ಯಾಗ್ ಮಾಡಿ ಮತ್ತು ಅವುಗಳನ್ನು ಕ್ರಮವಾಗಿ ಜೋಡಿಸಿ.
  4. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

YouTube StudioEarn ವಿಭಾಗದಲ್ಲಿರುವ ನಿಮ್ಮ ಚಾನಲ್‌ ಮತ್ತು ಸ್ಟೋರ್‌ಗೆ ಇರುವ ಸ್ವಯಂಚಾಲಿತ ವ್ಯವಸ್ಥೆಗೆ ನೀವು ಹಿಂತಿರುಗಬಹುದು: ಶಾಪಿಂಗ್ ಟ್ಯಾಬ್‌ನಂತರ ಸ್ವಯಂ ಆಯ್ಕೆಗೆ ಹಿಂತಿರುಗಿ ನಂತರ ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

ನಿರ್ದಿಷ್ಟ ಕಂಟೆಂಟ್‌ಗಾಗಿ ಉತ್ಪನ್ನಗಳನ್ನು ಆಯ್ಕೆ ಮಾಡಿ

ನಿಮ್ಮ ಪ್ರೇಕ್ಷಕರಿಗಾಗಿ ಹೆಚ್ಚು ಕಸ್ಟಮೈಸ್ ಮಾಡಿದ ಶಾಪಿಂಗ್ ಅನುಭವವನ್ನು ಒದಗಿಸಲು ನೀವು ಪ್ರತ್ಯೇಕ ವೀಡಿಯೊಗಳು ಅಥವಾ Shorts ಗಾಗಿ ಗರಿಷ್ಠ 30 ಐಟಂಗಳನ್ನು ಟ್ಯಾಗ್ ಮಾಡಬಹುದು ಮತ್ತು ಮರುಜೋಡಿಸಬಹುದು. ಲೈವ್ ಸ್ಟ್ರೀಮ್‌ಗಾಗಿ ಗರಿಷ್ಠ 30 ಐಟಂಗಳನ್ನು ಟ್ಯಾಗ್ ಮಾಡಲು ಮತ್ತು ಮರುಜೋಡಿಸಲು ಸಹ ನೀವು ಆಯ್ಕೆ ಮಾಡಬಹುದು.

ನಿಮ್ಮ ಚಾನಲ್ ಸ್ಟೋರ್‌ಗೆ ಲಿಂಕ್ ಮಾಡಿ

ವೀಡಿಯೊ ಕುರಿತ ಕಾಮೆಂಟ್‌ಗಳು, ವಿವರಣೆ ಮತ್ತು ಸಮುದಾಯ ಪೋಸ್ಟ್‌ಗಳಲ್ಲಿ ಸ್ಟೋರ್‌ ಟ್ಯಾಬ್‌ನ URL ಅನ್ನು ನಕಲಿಸಿ ಮತ್ತು ಅಂಟಿಸುವ ಮೂಲಕ ಅದನ್ನು ನೀವು ಲಿಂಕ್ ಮಾಡಬಹುದು. ವೀಡಿಯೊದ ವಿವರಣೆಗಳಲ್ಲಿ ಮತ್ತು ಇತರ ಮಾಧ್ಯಮ ಚಾನಲ್‌ಗಳಲ್ಲಿ ನಿಮ್ಮ ಚಾನಲ್ ಸ್ಟೋರ್‌ಗೆ ಸಂಬಂಧಿಸಿದ ಲಿಂಕ್ ಅನ್ನು ಕೂಡ ನೀವು ಸೇರಿಸಬಹುದು. ವೀಕ್ಷಕರು ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ವೀಡಿಯೊ ವೀಕ್ಷಣೆಯ ಅನುಭವಕ್ಕೆ ಅಡಚಣೆಯಾಗದೇ ಅವರು ನಿಮ್ಮ ಸ್ಟೋರ್‌ನಲ್ಲಿರುವ ಐಟಂಗಳ ಪೂರ್ವವೀಕ್ಷಣೆ ಮಾಡುತ್ತಾರೆ. ವೀಕ್ಷಕರು ಖರೀದಿಸಲು ಸಿದ್ಧರಾದ ಬಳಿಕ, ಅವರು ನಿಮ್ಮ ಸ್ಟೋರ್‌ಗೆ ಭೇಟಿ ನೀಡಿ ತಮಗೆ ಬೇಕಾದ ಐಟಂಗಳ ಖರೀದಿಯನ್ನು ಪೂರ್ಣಗೊಳಿಸಲು ಮತ್ತೊಮ್ಮೆ ಕ್ಲಿಕ್ ಮಾಡಬಹುದು.

ನಿಮ್ಮ ಉತ್ಪನ್ನಗಳ ಕುರಿತಂತೆ ಇರುವ ಸಮಸ್ಯೆಗಳನ್ನು ನಿರ್ವಹಿಸಿ

ಬೆಂಬಲಿತ ರಿಟೇಲರ್ ಅಥವಾ ಪ್ಲಾಟ್‌ಫಾರ್ಮ್‌ ಮೂಲಕ ನಿಮ್ಮ ಐಟಂಗಳನ್ನು ನೀವು ರಚಿಸಿದಾಗ ಅಥವಾ ಮಾರ್ಪಡಿಸಿದಾಗ, ನಮ್ಮ ನೀತಿಗಳ ಅನುಸರಣೆಗಾಗಿ ಐಟಂಗಳನ್ನು ಪರಿಶೀಲಿಸಲಾಗುತ್ತದೆ. ಈ ಪರಿಶೀಲನೆಯು ಸಾಮಾನ್ಯವಾಗಿ ಕೆಲವು ವ್ಯವಹಾರ ದಿನಗಳನ್ನು ತೆಗೆದುಕೊಳ್ಳುತ್ತದೆ.

YouTube Studio ದಲ್ಲಿ ನಿಮ್ಮ ಐಟಂಗಳ ಪರಿಶೀಲನೆ ಸ್ಥಿತಿಯನ್ನು ಹುಡುಕಿ:

  1. ಎಡಭಾಗದ ಮೆನುವಿನಲ್ಲಿ, Earn ಅನ್ನು ಕ್ಲಿಕ್ ಮಾಡಿ.
  2. ಶಾಪಿಂಗ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  3. "ಸ್ಥಿತಿ ಕಾರ್ಡ್" ನಲ್ಲಿ ಆಯೋಜಿಸಿ ಅನ್ನು ಕ್ಲಿಕ್ ಮಾಡಿ.
ಗಮನಿಸಿ: ನಮ್ಮ Google Merchant Center ನೀತಿಗಳು ಮತ್ತು YouTube ನೀತಿಗಳ ಅನುಸರಣೆ ಮಾಡುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಉತ್ಪನ್ನಗಳು ಸ್ವಯಂಚಾಲಿತವಾಗಿ ಪರಿಶೀಲನೆ ಪ್ರಕ್ರಿಯೆಗೆ ಒಳಗಾಗುತ್ತವೆ. ಎರಡೂ ನೀತಿಗಳನ್ನು ಅನುಸರಿಸಲಾಗಿದೆ ಎಂದು ಅನುಮೋದಿಸದ ಹೊರತು YouTube Studio ದಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದಿಲ್ಲ. ಐಟಂಗೆ ಯಾವುದೇ ಬದಲಾವಣೆಗಳನ್ನು ಮಾಡಿದರೆ (ಶೀರ್ಷಿಕೆ, ವಿವರಣೆ ಅಥವಾ ಚಿತ್ರ ಸೇರಿದಂತೆ ಆದರೆ ಸೀಮಿತವಾಗಿಲ್ಲ), ಐಟಂ ಹೊಸದಾಗಿ ನೀತಿ ಅನುಸರಣೆ ಪರಿಶೀಲನೆಗೆ ಒಳಗಾಗುತ್ತದೆ. ಈ ಪರಿಶೀಲನೆಯು ಸಾಮಾನ್ಯವಾಗಿ ಕೆಲವು ವ್ಯವಹಾರ ದಿನಗಳನ್ನು ತೆಗೆದುಕೊಳ್ಳುತ್ತದೆ.

"ಐಟಂಗಳನ್ನು ಆಯೋಜಿಸಿ" ಪ್ಯಾನೆಲ್‌ನಲ್ಲಿ ಕಾಣಿಸದ ನಿರ್ದಿಷ್ಟ ಐಟಂಗಳ ಕುರಿತ ಪ್ರಶ್ನೆಗಳನ್ನು ಹೊಂದಿದ್ದರೆ, ನಿಮ್ಮ ವ್ಯಾಪಾರದ ವಸ್ತುಗಳ ರಿಟೇಲರ್ ಅಥವಾ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿಸಿ.

ಈ ಕೆಳಗಿನ ಸಂದರ್ಭಗಳಲ್ಲಿ, ನಿಮ್ಮ ಕಂಟೆಂಟ್‌ನಲ್ಲಿ ಶಾಪಿಂಗ್ ಫೀಚರ್‌ಗಳನ್ನು ತೋರಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ:

ನಿಮ್ಮ ಚಾನಲ್ ಅಥವಾ ನಿರ್ದಿಷ್ಟ ಕಂಟೆಂಟ್‌ನಿಂದ Shopping ಫೀಚರ್‌ಗಳನ್ನು ತೆಗೆದುಹಾಕಿ

ನೀವು ಯಾವಾಗ ಬೇಕಾದರೂ ನಿಮ್ಮ ಚಾನಲ್‌ನಿಂದ Shopping ಫೀಚರ್‌ಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕಬಹುದು ಅಥವಾ ನಿಮ್ಮ ಸ್ಟೋರ್ ಅನ್ನು ಸಂಪೂರ್ಣವಾಗಿ ಡಿಸ್ಕನೆಕ್ಟ್ ಮಾಡಬಹುದು.

ಪ್ರತ್ಯೇಕ ವೀಡಿಯೊ ಅಥವಾ Short ನಿಂದ Shopping ಫೀಚರ್‌ಗಳನ್ನು ನೀವು ತೆಗೆದುಹಾಕಲು ಬಯಸಿದರೆ, ವೀಡಿಯೊ ಅಥವಾ Short ನಿಂದ ಎಲ್ಲಾ ಉತ್ಪನ್ನಗಳನ್ನು ಅನ್‌ಟ್ಯಾಗ್ ಮಾಡಿ.

ನಿಮ್ಮ ಚಾನಲ್‌ನಿಂದ Shopping ಫೀಚರ್‌ಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕಿ

YouTube Studio ದಲ್ಲಿ ನಿಮ್ಮ ಸಂಪೂರ್ಣ ಚಾನಲ್‌ನಿಂದ ಶಾಪಿಂಗ್ ಫೀಚರ್ ಅನ್ನು ತೆಗೆದುಹಾಕಲು ಕಂಪ್ಯೂಟರ್ ಅನ್ನು ಬಳಸಿ:

  1. ಎಡಭಾಗದ ಮೆನುವಿನಲ್ಲಿ, Earn ಅನ್ನು ಕ್ಲಿಕ್ ಮಾಡಿ.
  2. ಶಾಪಿಂಗ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  3. "ಶಾಪಿಂಗ್" ಸ್ವಿಚ್ ಅನ್ನು ಆಫ್ ಮಾಡುವ ಮೂಲಕ ಪ್ರಾಡಕ್ಟ್ ಶೆಲ್ಫ್ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಿ.

ನಿಮ್ಮ ಸಂಪೂರ್ಣ ಚಾನಲ್‌ನಿಂದ ಶಾಪಿಂಗ್ ಫೀಚರ್‌ಗಳನ್ನು ತೆಗೆದುಹಾಕಲು Android ಅಥವಾ iPhone ಗಾಗಿ YouTube Studio ಮೊಬೈಲ್ ಆ್ಯಪ್ ಅನ್ನು ಬಳಸಿ:

  1. ಕೆಳಭಾಗದ ಮೆನುವಿನಲ್ಲಿ, Earn ಅನ್ನು ಟ್ಯಾಪ್ ಮಾಡಿ.
  2. ಶಾಪಿಂಗ್ ಟ್ಯಾಬ್‌ ಅನ್ನು ಟ್ಯಾಪ್ ಮಾಡಿ.
  3. “ಚಾನಲ್‌ನಲ್ಲಿನ ಉತ್ಪನ್ನಗಳು” ವಿಭಾಗದ ಮುಂದೆ ಇರುವ ಇನ್ನಷ್ಟು '' ಅನ್ನು ಟ್ಯಾಪ್ ಮಾಡಿ.
  4. ಆಫ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13595393060362798825
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false