YouTube ನಲ್ಲಿ ನಿಮ್ಮ ಸ್ಟೋರ್ ಅನ್ನು ಕನೆಕ್ಟ್ ಮಾಡಿ, ನಿರ್ವಹಿಸಿ ಮತ್ತು ಡಿಸ್‌ಕನೆಕ್ಟ್ ಮಾಡಿ

ನೀವು ಅರ್ಹರಾಗಿದ್ದರೆ ಮತ್ತು ಬೆಂಬಲಿತ ಪ್ಲಾಟ್‌ಫಾರ್ಮ್ ಅಥವಾ ರಿಟೇಲರ್ ಅನ್ನು ಬಳಸಿದರೆ, ಡೆಸ್ಕ್‌ಟಾಪ್ ಅಥವಾ ಮೊಬೈಲ್ ಮೂಲಕ ನಿಮ್ಮ ಚಾನಲ್‌ಗಾಗಿ ಶಾಪಿಂಗ್ ಫೀಚರ್‌ಗಳನ್ನು ನೀವು ಆನ್ ಮಾಡಬಹುದು. ನಿಮ್ಮ ಚಾನಲ್‌ಗೆ ಶಾಪಿಂಗ್ ಫೀಚರ್‌ಗಳನ್ನು ಆನ್ ಮಾಡಲು, ನೀವು YouTube ಮೂಲಕ ಒಂದು ಅಥವಾ ಹೆಚ್ಚಿನ ಬೆಂಬಲಿತ ಪ್ಲ್ಯಾಟ್‌ಫಾರ್ಮ್‌ಗಳು ಅಥವಾ ರಿಟೇಲರ್‌ಗಳನ್ನು ಸಂಪರ್ಕಿಸಬೇಕು.

YouTube Shopping: ನಿಮ್ಮ ಸ್ಟೋರ್‌ನಿಂದ ಉತ್ಪನ್ನಗಳನ್ನು ಟ್ಯಾಗ್ ಮಾಡಿ ಮತ್ತು ಮಾರಾಟ ಮಾಡಿ

ನೀವು ಅರ್ಹರಾಗಿದ್ದು, ಆದರೆ ಬೆಂಬಲಿತ ಪ್ಲ್ಯಾಟ್‌ಫಾರ್ಮ್ ಅಥವಾ ರಿಟೇಲರ್‌ ಮೂಲಕ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡದಿದ್ದರೆ, ನಿಮ್ಮ ಸ್ಟೋರ್ ಅನ್ನು ಸೆಟ್ ಮಾಡಲು ಅವರ ಸೈಟ್‌ಗೆ ಭೇಟಿ ನೀಡಿ. ನಂತರ YouTube ನ ಜೊತೆಗೆ ನಿಮ್ಮ ಸ್ಟೋರ್ ಅನ್ನು ಕನೆಕ್ಟ್ ಮಾಡಿ. ಕೆಳಗಿನ ರಿಟೇಲರ್‌ಗಳು ಅಥವಾ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಯಾವುದಾದರೂ ಒಂದರ ಜೊತೆಗೆ ನೀವು ಕೆಲಸ ಮಾಡಲು ಬಯಸಿದರೆ, ನಿಮ್ಮ ಸ್ಟೋರ್ ಅನ್ನು ಸೆಟಪ್ ಮಾಡಲು ಅವರ ಸೈಟ್‌ಗೆ ಹೋಗಿ.

ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನೀವು ಬೆಂಬಲಿತ ರಿಟೇಲರ್ ಅಥವಾ ಪ್ಲ್ಯಾಟ್‌ಫಾರ್ಮ್ ಅನ್ನು ಬಳಸಿದರೆ, ನಿಮ್ಮ ಸ್ಟೋರ್ ಅನ್ನು ನೀವು ಸಂಪರ್ಕಿಸಬಹುದು. ಒಮ್ಮೆ ನಿಮ್ಮ ಸ್ಟೋರ್ ಕನೆಕ್ಟ್ ಆದ ನಂತರ, ನಿಮ್ಮ ಚಾನಲ್‌ಗಾಗಿ ಶಾಪಿಂಗ್ ಫೀಚರ್‌ಗಳನ್ನು ನೀವು ಆನ್ ಮಾಡಬಹುದು.

YouTube ನಲ್ಲಿರುವ ನಿಮ್ಮ ಸ್ಟೋರ್‌ನಿಂದ ಉತ್ಪನ್ನಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಸಹ ನೀವು ತಿಳಿಯಬಹುದು.

ಬೆಂಬಲಿತ ಶಾಪಿಂಗ್ ಪ್ಲ್ಯಾಟ್‌ಫಾರ್ಮ್‌ಗಳು

  • Cafe24 (ದಕ್ಷಿಣ ಕೊರಿಯಾದಲ್ಲಿ ಮಾತ್ರ ಲಭ್ಯವಿದೆ)
  • FourthWall
  • Marpple Shop (ದಕ್ಷಿಣ ಕೊರಿಯಾದಲ್ಲಿ ಮಾತ್ರ ಲಭ್ಯವಿದೆ)
  • Shopify
  • Spreadshop
  • Spring (ಹಿಂದೆ Teespring ಎಂದು ಕರೆಯುತ್ತಿದ್ದರು)
  • Suzuri (ಜಪಾನ್‌ನಲ್ಲಿ ಮಾತ್ರ ಲಭ್ಯವಿದೆ)

ಬೆಂಬಲಿತ ಶಾಪಿಂಗ್ ರಿಟೇಲರ್‌ಗಳು

ಹೆಚ್ಚಿನ ರಿಟೇಲರ್‌ಗಳ ಜೊತೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಆಸಕ್ತರು ಇನ್ನಷ್ಟು ತಿಳಿದುಕೊಳ್ಳಲು ತಮ್ಮ YouTube ಪ್ರತಿನಿಧಿಯನ್ನು ಸಂಪರ್ಕಿಸಬಹುದು.

YouTube ಜೊತೆಗೆ ನಿಮ್ಮ ಸ್ಟೋರ್‌ಗಳನ್ನು ಕನೆಕ್ಟ್ ಮಾಡಿ

YouTube ನಲ್ಲಿ ನಿಮ್ಮ ಸ್ವಂತ ಉತ್ಪನ್ನಗಳನ್ನು ಮಾರಾಟ ಮಾಡಲು ನೀವು ನಿಮ್ಮ ಅಧಿಕೃತ ಸ್ಟೋರ್ ಅನ್ನು YouTube ಜೊತೆಗೆ ಕನೆಕ್ಟ್ ಮಾಡಬಹುದು. ನೀವು ಒಂದಕ್ಕಿಂತ ಹೆಚ್ಚು ಸ್ಟೋರ್ ಅನ್ನು ಲಿಂಕ್ ಮಾಡಬಹುದು ಮತ್ತು ಪ್ರತಿ ಸ್ಟೋರ್‌ನಿಂದ ಒಂದೇ ವೀಡಿಯೊ, Short ಅಥವಾ ಲೈವ್ ಸ್ಟ್ರೀಮ್‌ನಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಬಹುದು.

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಬಳಸಿ.
  2. ಎಡ ಮೆನುವಿನಲ್ಲಿ, Earn ಅನ್ನು ಆಯ್ಕೆಮಾಡಿ.
  3. ಶಾಪಿಂಗ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಚಾನಲ್ ಅರ್ಹವಾಗಿದ್ದರೆ ಮಾತ್ರ ಈ ಟ್ಯಾಬ್ ಕಾಣಿಸಿಕೊಳ್ಳುತ್ತದೆ.
  4. ನೀವು ಈಗಾಗಲೇ Shopping ರಿಟೇಲರ್ ಅಥವಾ ಪ್ಲ್ಯಾಟ್‌ಫಾರ್ಮ್‌ನೊಂದಿಗೆ YouTube ಅನ್ನು ಕನೆಕ್ಟ್ ಮಾಡಿಲ್ಲ ಎಂದಾದರೆ ಪ್ರಾರಂಭಿಸಿ ಅನ್ನು ಕ್ಲಿಕ್ ಮಾಡಿ. ಇಲ್ಲದಿದ್ದರೆ, ಉತ್ಪನ್ನದ ಕಾರ್ಡ್‌ನಲ್ಲಿ, ಹೊಸ ಸ್ಟೋರ್ ಅನ್ನು ಕನೆಕ್ಟ್ ಮಾಡಿ   ಅನ್ನು ಕ್ಲಿಕ್ ಮಾಡಿ.
  5. ನಿಮ್ಮ ಅಧಿಕೃತ ವ್ಯಾಪಾರದ ಸರಕಿನ ಸ್ಟೋರ್ ಅನ್ನು ನಿಮ್ಮ YouTube ಚಾನಲ್‌ಗೆ ಲಿಂಕ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

ಶಾಪಿಂಗ್ ಟ್ಯಾಬ್‌ನ “ಉತ್ಪನ್ನಗಳು” ವಿಭಾಗದಲ್ಲಿ ನಿಮ್ಮ ಸ್ಟೋರ್‌ಗಳ ಸಂಪೂರ್ಣ ಪಟ್ಟಿಯನ್ನು ನೀವು ಕಾಣಬಹುದು. ನಿಮಗೆ ಅಗತ್ಯವಿರುವಷ್ಟು ಸ್ಟೋರ್‌ಗಳನ್ನು ಲಿಂಕ್ ಮಾಡಿ.

ಯಾವುದೇ ಸಮಯದಲ್ಲಿ ನೀವು ಇನ್ನೊಂದು ಸ್ಟೋರ್ ಅನ್ನು ಕನೆಕ್ಟ್ ಮಾಡಬಹುದು ಅಥವಾ ನಿಮ್ಮ ಸ್ಟೋರ್ ಅನ್ನು ಡಿಸ್‌ಕನೆಕ್ಟ್ ಮಾಡಬಹುದು. YouTube ನಲ್ಲಿರುವ ನಿಮ್ಮ ಸ್ಟೋರ್‌ನಿಂದ ಉತ್ಪನ್ನಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಸಹ ನೀವು ತಿಳಿಯಬಹುದು.

Shopify

ನಿಮ್ಮ ಅಡ್ಮಿನ್ ಅನುಮತಿಗಳನ್ನು ಪರಿಶೀಲಿಸಿ

ನಿಮ್ಮ Shopify ಸ್ಟೋರ್ ಅನ್ನು YouTube ಜೊತೆಗೆ ಕನೆಕ್ಟ್ ಮಾಡುವ ಮೊದಲು, ನೀವು YouTube ಮತ್ತು Shopify ಎರಡಕ್ಕೂ ಒಂದೇ ಇಮೇಲ್ ವಿಳಾಸವನ್ನು ಬಳಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಮೇಲ್ ವಿಳಾಸವು ಎರಡೂ ಖಾತೆಗಳಲ್ಲಿ ಅಡ್ಮಿನ್ ಆ್ಯಕ್ಸೆಸ್ ಅನ್ನು ಹೊಂದಿರಬೇಕು.

ನಿಮ್ಮ ಇಮೇಲ್ ವಿಳಾಸವು YouTube ನಲ್ಲಿ ಮಾಲೀಕರು/ನಿರ್ವಾಹಕರಿಗೆ ನೀಡುವ ಆ್ಯಕ್ಸೆಸ್ ಅನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಿ

  1. ಕಂಪ್ಯೂಟರ್ ಅನ್ನು ಬಳಸಿ YouTube Studio ಗೆ ಸೈನ್ ಇನ್ ಮಾಡಿ ಅಥವಾ YouTube Studio ಮೊಬೈಲ್ ಆ್ಯಪ್ ತೆರೆಯಿರಿ .
  2. ನಿಮ್ಮ ಸೆಟ್ಟಿಂಗ್‌ಗಳು ಗೆ ಹೋಗಿ.
  3. ಅನುಮತಿಗಳು ಎಂಬುದರ ಅಡಿಯಲ್ಲಿ, ಯಾವ ಇಮೇಲ್ ವಿಳಾಸವು ನಿಮ್ಮ ಚಾನಲ್‌ಗೆ ನಿರ್ವಾಹಕ ಅಥವಾ ಮಾಲೀಕರ ಆ್ಯಕ್ಸೆಸ್ ಅನ್ನು ಹೊಂದಿದೆ ಎಂಬುದನ್ನು ನೀವು ಪರಿಶೀಲಿಸಬಹುದು ಅಥವಾ ನಿಮ್ಮ ಅನುಮತಿಗಳನ್ನು ಎಡಿಟ್ ಮಾಡಬಹುದು.

ನಿಮ್ಮ ಇಮೇಲ್ ವಿಳಾಸವು ನಿಮ್ಮ Shopify ಸ್ಟೋರ್‌ನಲ್ಲಿ ಸಿಬ್ಬಂದಿ ಆ್ಯಕ್ಸೆಸ್ ಅನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಿ

ನೀವು ಸರಿಯಾದ ಹಂತದ ಆ್ಯಕ್ಸೆಸ್ ಹೊಂದಿಲ್ಲದಿದ್ದರೆ, ನಿಮ್ಮ Shopify ಅನುಮತಿಗಳನ್ನು ಅಪ್‌ಡೇಟ್ ಮಾಡಿ.

YouTube ಜೊತೆಗೆ ನಿಮ್ಮ Shopify ಸ್ಟೋರ್ ಅನ್ನು ಕನೆಕ್ಟ್ ಮಾಡಿ

YouTube ಜೊತೆಗೆ ನಿಮ್ಮ Shopify ಸ್ಟೋರ್ ಅನ್ನು ಸಂಪರ್ಕಿಸಲು, YouTube Studio ಅಥವಾ YouTube Studio ಮೊಬೈಲ್ ಆ್ಯಪ್‌ನಲ್ಲಿನ ಚಿಲ್ಲರೆ ವ್ಯಾಪಾರಿಗಳ ಪಟ್ಟಿಯಿಂದ Shopify ಅನ್ನು ಆಯ್ಕೆಮಾಡಿ ನಂತರ Shopify ಗೆ ಹೋಗಿ:

  1. Shopify ಒಳಗೆ, Google ಮತ್ತು YouTube ಆ್ಯಪ್ ಅನ್ನು ನಿಮ್ಮ ಸ್ಟೋರ್‌ಗೆ ಸೇರಿಸಿ ಮತ್ತು ಸೆಟಪ್ ಪೂರ್ಣಗೊಳಿಸಲು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ಹೆಚ್ಚಿನ ಮಾಹಿತಿಗಾಗಿ, ಈ ಸೆಟಪ್ ಮಾರ್ಗದರ್ಶಿಯನ್ನು ಪರಿಶೀಲಿಸಿ.
    1. ಒಮ್ಮೆ ನೀವು Google ಮತ್ತು YouTube ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ, ನಿಮ್ಮ Google ಖಾತೆಯನ್ನು Google ಮತ್ತು YouTube ಆ್ಯಪ್ ಗೆ ಕನೆಕ್ಟ್ ಮಾಡಿ:
      1. Shopify ನಿರ್ವಾಹಕರ ಪುಟ ಕ್ಕೆ ಹೋಗಿ.
      2. ಸೆಟ್ಟಿಂಗ್‌ಗಳು ನಂತರ ಆ್ಯಪ್‌ಗಳು ಮತ್ತು ಮಾರಾಟಗಳ ಚಾನಲ್‌ಗಳು ಅನ್ನು ತೆರೆಯಿರಿ.
      3. ಚಾನಲ್‌ಗಳ ಪಟ್ಟಿಯಿಂದ, Google ಅನ್ನು ಆಯ್ಕೆಮಾಡಿ.
      4. ಮೇಲ್ಭಾಗದಲ್ಲಿ, ಸೆಟ್ಟಿಂಗ್‌ಗಳು ನಂತರ Google ಖಾತೆ ಅನ್ನು ಆಯ್ಕೆಮಾಡಿ. ಪಟ್ಟಿ ಮಾಡಲಾದ ಇಮೇಲ್ ನಿಮ್ಮ YouTube ಚಾನಲ್‌ಗೆ ಅಡ್ಮಿನ್ ಆ್ಯಕ್ಸೆಸ್ ಅನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  2. Google ಮತ್ತು YouTube ಆ್ಯಪ್‌ನಿಂದ, ಅವಲೋಕನ ನಂತರ YouTube Shopping ನಂತರ ಪ್ರಾರಂಭಿಸಿ ಅನ್ನು ಆಯ್ಕೆಮಾಡಿ.
  3. ನೀವು Shopify ಗೆ ಕನೆಕ್ಟ್ ಮಾಡಲು ಬಯಸುವ YouTube ಚಾನಲ್ ಅನ್ನು ಆಯ್ಕೆಮಾಡಿ.
    1. ಹಲವು YouTube ಚಾನಲ್‌ಗಳನ್ನು ನಿರ್ವಹಿಸಲು ನಿಮ್ಮ ಇಮೇಲ್ ವಿಳಾಸವನ್ನು ಬಳಸಿದರೆ, ಅವುಗಳು ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. Shopify ಜೊತೆಗೆ ಕನೆಕ್ಟ್ ಮಾಡಲು ನೀವು ಸರಿಯಾದ ಚಾನಲ್ ಅನ್ನು ಆಯ್ಕೆ ಮಾಡುತ್ತಿದ್ದೀರಾ ಎಂದು ಎರಡು ಬಾರಿ ಪರಿಶೀಲಿಸಿ.
  4. ಕಾರ್ಯಕ್ರಮದ ನಿಯಮಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಯಮಗಳನ್ನು ಒಪ್ಪಿಕೊಳ್ಳಿ.
  5. ಸೆಟಪ್ ಅನ್ನು ಪೂರ್ಣಗೊಳಿಸಿ ಅನ್ನು ಆಯ್ಕೆಮಾಡಿ.

ನಿಮ್ಮ ಸ್ಟೋರ್ ಅನ್ನು ಸಂಪರ್ಕಿಸಿದ ನಂತರ, ನಮ್ಮ ನೀತಿಗಳು ಮತ್ತು Google Merchant Center ನೀತಿಗಳ ಅನುಸರಣೆಗಾಗಿ ನಿಮ್ಮ ಉತ್ಪನ್ನಗಳನ್ನು ನಾವು ಪರಿಶೀಲಿಸುತ್ತೇವೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಕೆಲವು ವ್ಯವಹಾರದ ದಿನಗಳನ್ನು ತೆಗೆದುಕೊಳ್ಳುತ್ತದೆ.

ನೀವು ಸಲ್ಲಿಸಿದ ಐಟಂಗಳು ನಮ್ಮ ನೀತಿಗಳನ್ನು ಅನುಸರಿಸುತ್ತಿಲ್ಲ ಎಂದು ನಮಗೆ ಕಂಡುಬಂದರೆ, ನಾವು ಪ್ರತ್ಯೇಕ ಐಟಂಗಳಿಗೆ ಅನುಮೋದನೆಯನ್ನು ನಿರಾಕರಿಸುತ್ತೇವೆ. ಅನುಮೋದಿಸದ ಐಟಂಗಳ ಕುರಿತು ಮೇಲ್ಮನವಿ ಸಲ್ಲಿಸಲು, ನಿಮ್ಮ ವ್ಯಾಪಾರದ ಸರಕುಗಳ ರಿಟೇಲರ್ ಅಥವಾ ನಿಮ್ಮ ಆನ್‌ಲೈನ್ ಸ್ಟೋರ್ ಅಡ್ಮಿನ್ ಅನ್ನು ಸಂಪರ್ಕಿಸಿ, ಅವರು ಅನುಮೋದಿಸದ ಐಟಂಗಳನ್ನು ಪರಿಶೀಲನೆಗಾಗಿ ಸಲ್ಲಿಸಲು Google Merchant Center ಬಳಸಬಹುದು.

ನಿಮ್ಮ ಉತ್ಪನ್ನಗಳನ್ನು ನಿಮ್ಮ ಸ್ಟೋರ್ ಶೆಲ್ಫ್‌ನಲ್ಲಿ ತೋರಿಸಿ

ನಿಮ್ಮ ಸ್ಟೋರ್‌ ಶೆಲ್ಫ್, ಮೊಬೈಲ್ ಬಳಸುವ ವೀಕ್ಷಕರಿಗೆ ನಿಮ್ಮ ಚಾನಲ್ ಸ್ಟೋರ್ ಅನ್ನು ಅನ್ವೇಷಿಸಲು ಮತ್ತು ನಿಮ್ಮ ಚಾನಲ್ ಹೋಮ್ ಪೇಜ್‌ನಿಂದ ನಿಮ್ಮ ಉತ್ಪನ್ನಗಳನ್ನು ಬ್ರೌಸ್ ಮಾಡಲು ಅವಕಾಶ ನೀಡುತ್ತದೆ. ನಿಮ್ಮ ಶೆಲ್ಫ್‌ನಲ್ಲಿರುವ ಉತ್ಪನ್ನಗಳು ಪ್ರಾಡಕ್ಟ್ ಚಿತ್ರ, ಹೆಸರು, ದರದಂತಹ ವಿವರಗಳನ್ನು ಒಳಗೊಂಡಿರುತ್ತವೆ ಮತ್ತು ನಿಮ್ಮ ಸ್ಟೋರ್‌ಗೆ ಭೇಟಿ ನೀಡಲು ವೀಕ್ಷಕರು ಕ್ಲಿಕ್ ಮಾಡಬಹುದಾದ, ಎಲ್ಲವನ್ನೂ ವೀಕ್ಷಿಸಿ ಬಟನ್ ಅನ್ನು ಒಳಗೊಂಡಿರುತ್ತವೆ. ನೀವು ಡೆಸ್ಕ್‌ಟಾಪ್‌ನಲ್ಲಿ ನಿಮ್ಮ ಚಾನಲ್ ಹೋಮ್ ಪೇಜ್ ಅನ್ನು ಕಸ್ಟಮೈಸ್ ಮಾಡಿದಾಗ ನೀವು ಶೆಲ್ಫ್ ಅನ್ನು ಮೂವ್ ಮಾಡಬಹುದು ಅಥವಾ ಅದನ್ನು ನಿಮ್ಮ ಹೋಮ್ ಪೇಜ್‌ನಿಂದ ತೆಗೆದುಹಾಕಬಹುದು.

ಡೀಫಾಲ್ಟ್ ಆಗಿ, ನಿಮ್ಮ ಸ್ಟೋರ್ ಶೆಲ್ಫ್ ನಿಮ್ಮ ಚಾನಲ್ ಹೋಮ್ ಪೇಜ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಮೂವ್ ಮಾಡಲು:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಮೆನುವಿನಿಂದ, ಕಸ್ಟಮೈಸೇಶನ್  ನಂತರ ಹೋಮ್ ಟ್ಯಾಬ್ ನಂತರ ಸ್ಟೋರ್‌ನಿಂದ ಉತ್ಪನ್ನಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಡ್ರ್ಯಾಗ್ ಅಂಡ್ ಡ್ರಾಪ್ ಮಾಡಿ ಎಂಬುದನ್ನು ಬಳಸಿಕೊಂಡು ಶೆಲ್ಫ್‌ನ ಸ್ಥಾನವನ್ನು ಹೊಂದಾಣಿಕೆ ಮಾಡಿ.

ನಿಮ್ಮ ಸ್ಟೋರ್ ಶೆಲ್ಫ್ ಅನ್ನು ನಿಮ್ಮ ಚಾನಲ್‌ನಲ್ಲಿ ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗುತ್ತದೆ. ಅದನ್ನು ಆಫ್ ಮಾಡಲು:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಮೆನುವಿನಿಂದ, ಕಸ್ಟಮೈಸೇಶನ್  ನಂತರ ಹೋಮ್ ಟ್ಯಾಬ್ ನಂತರ ಸ್ಟೋರ್‌ನಿಂದ ಉತ್ಪನ್ನಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಸ್ವಿಚ್ ಅನ್ನು ಟಾಗಲ್ ಆಫ್ ಮಾಡಿ.

YouTube ನಿಂದ ನಿಮ್ಮ ಸ್ಟೋರ್ ಅನ್ನು ಡಿಸ್‌ಕನೆಕ್ಟ್ ಮಾಡಿ

ನಿಮ್ಮ ಚಾನಲ್‌ನಿಂದ ಸ್ಟೋರ್ ಅನ್ನು ಡಿಸ್‌ಕನೆಕ್ಟ್ ಮಾಡಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, Earn ಅನ್ನು ಕ್ಲಿಕ್ ಮಾಡಿ.
  3. ಶಾಪಿಂಗ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ಕನೆಕ್ಟ್ ಆಗಿರುವ ಸ್ಟೋರ್ ಪಕ್ಕದಲ್ಲಿರುವ ಇನ್ನಷ್ಟು ಅನ್ನು ಕ್ಲಿಕ್ ಮಾಡಿ ಮತ್ತು ಸ್ಟೋರ್ ಅನ್ನು ತೆಗೆದುಹಾಕಿ ಅನ್ನು ಆಯ್ಕೆಮಾಡಿ.

ಸ್ಟೋರ್ ನೀತಿಗಳು

ನಿಮ್ಮ ಸ್ಟೋರ್‌ನಲ್ಲಿ ನೀವು ಫೀಚರ್ ಮಾಡಿದ ಉತ್ಪನ್ನಗಳು ಈ ನೀತಿಗಳನ್ನು ಒಳಗೊಂಡಂತೆ YouTube ಸೇವಾ ನಿಯಮಗಳನ್ನು ಅನುಸರಿಸಬೇಕು:

ನೀವು ಈ ನಿಯಮಗಳು ಮತ್ತು ನೀತಿಗಳನ್ನು ಉಲ್ಲಂಘಿಸಿದರೆ, ಈ ನೀತಿಗಳಿಗೆ ಅನುಸಾರವಾಗಿ ಯಾವುದೇ ಅಥವಾ ಈ ಕೆಳಗೆ ಸೂಚಿಸಿದವುಗಳಲ್ಲಿ ಯಾವುದಾದರೂ ಕ್ರಮ ಕೈಗೊಳ್ಳಬಹುದು:

  • ಶಾಪಿಂಗ್ ಫೀಚರ್‌ಗಳನ್ನು ಅಮಾನತು ಮಾಡುವುದು ಅಥವಾ ಕೊನೆಗೊಳಿಸುವುದು
  • ಖಾತೆ ಕೊನೆಗೊಳಿಸುವಿಕೆ

ನೀವು (ಅಥವಾ ನಿಮ್ಮ ಚಾನಲ್ ಅಥವಾ ವೀಡಿಯೊ ಪುಟದ ಯಾವುದೇ ಕಂಟೆಂಟ್ ಅಥವಾ ವ್ಯಾಪಾರ ಸರಕಿನಲ್ಲಿ ಫೀಚರ್ ಮಾಡಲಾದ ಯಾವುದೇ ಸಂಸ್ಥೆ, ವ್ಯಕ್ತಿ ಅಥವಾ ಕಲಾವಿದರು) ಒದಗಿಸುವ ಯಾವುದೇ ಕಂಟೆಂಟ್, ವ್ಯಾಪಾರ ಸರಕು ಅಥವಾ ಸೇವೆಗಳು, ಅಂತಹ ಕಂಟೆಂಟ್, ವ್ಯಾಪಾರ ಸರಕು ಮತ್ತು ಸೇವೆಗಳಿಗೆ ಅನ್ವಯಿಸಬಹುದಾದ ಯಾವುದೇ ಒಪ್ಪಂದಗಳ ನಿಯಮಗಳಿಗೆ Google ನ ವಿಶೇಷ, ಲಿಖಿತ ಪೂರ್ವಾನುಮೋದನೆ ಇಲ್ಲದ ಹೊರತು, ಅಂತಹ ಒಪ್ಪಂದಗಳಿಗೆ Google ಅನ್ನು ಒಳಪಡಿಸುತ್ತಿಲ್ಲ ಅಥವಾ ಒಳಪಡಿಸುವುದಿಲ್ಲ ಎಂಬುದನ್ನು ಕೂಡಾ ನೀವು ಅಂಗೀಕರಿಸುವಿರಿ ಮತ್ತು ಒಪ್ಪುವಿರಿ.

ಮೇಲಿನ ಯಾವುದನ್ನೂ ನೀವು ಒಪ್ಪದಿದ್ದರೆ, ನಿಮ್ಮ ಚಾನಲ್‌ಗಾಗಿ ಶಾಪಿಂಗ್ ಫೀಚರ್‌ಗಳನ್ನು ಆನ್ ಮಾಡಬೇಡಿ. ನೀವು ಯಾವುದೇ ಸಮಯದಲ್ಲಿ ಶಾಪಿಂಗ್ ಫೀಚರ್‌ಗಳನ್ನು ಸಹ ಆಫ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7022629191082238263
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false