ನಿಮ್ಮ ಕಂಟೆಂಟ್‌ನ ವ್ಯಾಪ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳಿ

YouTube Analytics ನಲ್ಲಿ ಇರುವ ಕಂಟೆಂಟ್ ಟ್ಯಾಬ್, ನಿಮ್ಮ ಪ್ರೇಕ್ಷಕರು ನಿಮ್ಮ ಕಂಟೆಂಟ್ ಅನ್ನು ಹೇಗೆ ಕಂಡುಕೊಳ್ಳುತ್ತಾರೆ, ನಿಮ್ಮ ಪ್ರೇಕ್ಷಕರು ಏನನ್ನು ವೀಕ್ಷಿಸುತ್ತಿದ್ದಾರೆ ಮತ್ತು ನಿಮ್ಮ ಕಂಟೆಂಟ್‍ನ ಜೊತೆಗೆ ಅವರು ಹೇಗೆ ಸಂವಹಿಸುತ್ತಾರೆ ಎಂಬುದರ ಸ್ಥೂಲನೋಟವನ್ನು ಒದಗಿಸುತ್ತದೆ. ವ್ಯಾಪ್ತಿ ಮತ್ತು ತೊಡಗಿಸಿಕೊಳ್ಳುವಿಕೆಯ ವರದಿಗಳಿಗಾಗಿ ನೀವು ಈ ಕೆಳಗಿನ ಟ್ಯಾಬ್‌ಗಳನ್ನು ಸಹ ವೀಕ್ಷಿಸಬಹುದು: ಎಲ್ಲಾ, ವೀಡಿಯೊಗಳು, Shorts, ಲೈವ್ ಮತ್ತು ಪೋಸ್ಟ್‌ಗಳು. ಎಂಗೇಜ್‌ಮೆಂಟ್ ಮೆಟ್ರಿಕ್‌ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ಗಮನಿಸಿ: ಕಂಟೆಂಟ್ ಟ್ಯಾಬ್, ಚಾನಲ್ ಮಟ್ಟದಲ್ಲಿ ಮಾತ್ರ ಲಭ್ಯವಿದೆ.

ನಿಮ್ಮ ಕಂಟೆಂಟ್‌ನ ವ್ಯಾಪ್ತಿ ಮತ್ತು ತೊಡಗಿಸಿಕೊಳ್ಳುವಿಕೆಯ ಕುರಿತು ಇನ್ನಷ್ಟು ತಿಳಿಯಲು YouTube Creators ಚಾನಲ್‌ನಿಂದ ಈ ಕೆಳಗಿನ ವೀಡಿಯೊವನ್ನು ನೋಡಿ.

Analytics ನಲ್ಲಿ ಕಂಟೆಂಟ್ ಟ್ಯಾಬ್ (ವೀಡಿಯೊಗಳು, Shorts, ಲೈವ್ ಅಥವಾ ಪೋಸ್ಟ್‌ಗಳ ಮೂಲಕ ವಿಂಗಡಿಸಿ)

 

ರಚನೆಕಾರರಿಗಾಗಿ ಕಂಟೆಂಟ್ ಟ್ಯಾಬ್ ಸಲಹೆಗಳನ್ನು ಪಡೆಯಿರಿ.

ನಿಮ್ಮ ವ್ಯಾಪ್ತಿ ಮತ್ತು ತೊಡಗಿಸಿಕೊಳ್ಳುವಿಕೆ ವರದಿಗಳನ್ನು ವೀಕ್ಷಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, Analytics ಆಯ್ಕೆ ಮಾಡಿ.
  3. ಮೇಲಿನ ಮೆನುವಿನಿಂದ ಕಂಟೆಂಟ್ ಅನ್ನು ಆಯ್ಕೆ ಮಾಡಿ.

ಗಮನಿಸಿ: ನಿರ್ದಿಷ್ಟ ಡೇಟಾವನ್ನು ಪಡೆಯಲು, ಕಾರ್ಯಕ್ಷಮತೆಯನ್ನು ಹೋಲಿಸಲು ಮತ್ತು ಡೇಟಾವನ್ನು ರಫ್ತು ಮಾಡಲು ವಿಸ್ತೃತ ವಿಶ್ಲೇಷಣೆಯ ವರದಿಯನ್ನು ವೀಕ್ಷಿಸಲು ಇನ್ನಷ್ಟು ಅಥವಾ ಸುಧಾರಿತ ಮೋಡ್ ಅನ್ನು ನೀವು ವೀಕ್ಷಿಸಬಹುದು.

ಎಲ್ಲಾ

ವೀಕ್ಷಣೆಗಳು

Shorts, ವೀಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳಿಗಾಗಿ ನಿಮ್ಮ ಕಂಟೆಂಟ್‌ನಲ್ಲಿ ನ್ಯಾಯಯುತ ವೀಕ್ಷಣೆಗಳ ಸಂಖ್ಯೆಯನ್ನು ಈ ವರದಿಯು ತೋರಿಸುತ್ತದೆ.

ಇಂಪ್ರೆಷನ್‌ಗಳು ಮತ್ತು ಅವುಗಳು ಹೇಗೆ ವೀಕ್ಷಣೆ ಸಮಯಕ್ಕೆ ಕಾರಣವಾದವು

ಈ ವರದಿಯು, ನಿಮ್ಮ ಥಂಬ್‌ನೇಲ್ ಅನ್ನು YouTube ನಲ್ಲಿ ವೀಕ್ಷಕರಿಗೆ ಎಷ್ಟು ಬಾರಿ ತೋರಿಸಲಾಯಿತು (ಇಂಪ್ರೆಷನ್‌ಗಳು), ಆ ಥಂಬ್‌ನೇಲ್‌ಗಳು ಎಷ್ಟು ಬಾರಿ ವೀಕ್ಷಣೆಗೆ ದಾರಿಮಾಡಿಕೊಟ್ಟವು (ಕ್ಲಿಕ್‌‌-ಥ್ರೂ-ರೇಟ್) ಮತ್ತು ಆ ವೀಕ್ಷಣೆಗಳು ಹೇಗೆ ಅಂತಿಮವಾಗಿ ವೀಕ್ಷಣೆ ಸಮಯಕ್ಕೆ ಕಾರಣವಾದವು ಎಂಬುದನ್ನು ತೋರಿಸುತ್ತದೆ. ಇಂಪ್ರೆಷನ್‌ಗಳು ಹಾಗೂ CTR ಡೇಟಾವನ್ನು ಬಳಸುವುದಕ್ಕಾಗಿ ಇನ್ನಷ್ಟು ಸಲಹೆಗಳನ್ನು ತಿಳಿದುಕೊಳ್ಳಿ.

ಪ್ರಕಟಿಸಿದ ಕಂಟೆಂಟ್

ಈ ವರದಿಯು, ನೀವು YouTube ನಲ್ಲಿ ಪ್ರಕಟಿಸಿರುವ ವೀಡಿಯೊಗಳು, Shorts, ಲೈವ್ ಸ್ಟ್ರೀಮ್‌ಗಳು ಮತ್ತು ಪೋಸ್ಟ್‌ಗಳ ಸಂಖ್ಯೆಯನ್ನು ತೋರಿಸುತ್ತದೆ.

ಫಾರ್ಮ್ಯಾಟ್‌ಗಳಾದ್ಯಂತ ವೀಕ್ಷಕರು

ಈ ವರದಿಯು, ನಿಮ್ಮ ಕಂಟೆಂಟ್ ಅನ್ನು ಫಾರ್ಮ್ಯಾಟ್ ಮೂಲಕ (ವೀಡಿಯೊಗಳು, Shorts ಮತ್ತು ಲೈವ್) ವೀಕ್ಷಿಸುತ್ತಿರುವ ವೀಕ್ಷಕರ ಬ್ರೇಕ್‌ಡೌನ್ ಮತ್ತು ಓವರ್‌ಲ್ಯಾಪ್ ಅನ್ನು ತೋರಿಸುತ್ತದೆ

ವೀಕ್ಷಕರು ನಿಮ್ಮ ಕಂಟೆಂಟ್ ಅನ್ನು ಹೇಗೆ ಕಂಡುಕೊಂಡರು

ಬ್ರೌಸ್ ಫೀಚರ್‌ಗಳು, Shorts ಫೀಡ್, ಸಲಹೆಯಾಗಿ ನೀಡಲಾದ ವೀಡಿಯೋಗಳು, YouTube ಹುಡುಕಾಟ, ಚಾನಲ್ ಪುಟಗಳು ಮತ್ತು ಇತರೆಗಳಲ್ಲಿ ವೀಕ್ಷಕರು ನಿಮ್ಮ ಕಂಟೆಂಟ್ ಅನ್ನು ಹೇಗೆ ಕಂಡುಕೊಂಡರು ಎಂಬುದನ್ನು ಈ ವರದಿಯು ತೋರಿಸುತ್ತದೆ.

ಸಬ್‌ಸ್ಕ್ರೈಬರ್‌ಗಳು

ಈ ವರದಿಯು, ನೀವು ಪ್ರತಿಯೊಂದು ಕಂಟೆಂಟ್ ಪ್ರಕಾರದ ಮೂಲಕ ಪಡೆದುಕೊಂಡ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ತೋರಿಸುತ್ತದೆ: ವೀಡಿಯೊಗಳು, Shorts, ಲೈವ್ ಸ್ಟ್ರೀಮ್‌ಗಳು, ಪೋಸ್ಟ್‌ಗಳು ಮತ್ತು ಇತರೆಗಳು. “ಇತರೆಗಳು” YouTube ಹುಡುಕಾಟ ಹಾಗೂ ನಿಮ್ಮ ಚಾನಲ್ ಪುಟದಿಂದ ಸಬ್‌ಸ್ಕ್ರಿಪ್ಶನ್‌ಗಳನ್ನು ಒಳಗೊಂಡಿರುತ್ತದೆ. ವೀಕ್ಷಕರನ್ನು ಸಬ್‌ಸ್ಕ್ರೈಬರ್‌ಗಳಾಗಿ ಪರಿವರ್ತಿಸುವಲ್ಲಿ ಯಾವ ಕಂಟೆಂಟ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಮಾಹಿತಿಯು ಸಹಾಯ ಮಾಡುತ್ತದೆ.

ವೀಡಿಯೊಗಳು

ಕೀ ಮೆಟ್ರಿಕ್ಸ್ ಕಾರ್ಡ್

ನಿಮ್ಮ ವೀಕ್ಷಣೆಗಳು, ಸರಾಸರಿ ವೀಕ್ಷಣೆ ಅವಧಿ, ಇಂಪ್ರೆಷನ್‌ಗಳು ಹಾಗೂ ಇಂಪ್ರೆಷನ್‌ಗಳ ಕ್ಲಿಕ್‌‌-ಥ್ರೂ-ರೇಟ್‌ನ ವಿಷುವಲ್ ಸಮಗ್ರ ನೋಟವನ್ನು ಇದು ನಿಮಗೆ ಒದಗಿಸುತ್ತದೆ.

ಪ್ರೇಕ್ಷಕರ ರಿಟೆನ್ಶನ್‌ಗಾಗಿ ಪ್ರಮುಖ ಕ್ಷಣಗಳು

ನಿಮ್ಮ ವೀಡಿಯೊದ ವಿವಿಧ ಕ್ಷಣಗಳು ಎಷ್ಟರಮಟ್ಟಿಗೆ ವೀಕ್ಷಕರ ಗಮನವನ್ನು ಸೆರೆಹಿಡಿದವು ಎಂಬುದನ್ನು ಈ ವರದಿಯು ತೋರಿಸುತ್ತದೆ. ಇದೇ ಅವಧಿಯನ್ನು ಹೊಂದಿರುವ ನಿಮ್ಮ ಕೊನೆಯ 10 ವೀಡಿಯೊಗಳನ್ನು ಹೋಲಿಸಲು ನೀವು ಸಾಮಾನ್ಯ ಉಳಿಸಿಕೊಳ್ಳುವಿಕೆಯನ್ನು ಸಹ ಬಳಸಬಹುದು.

ವೀಕ್ಷಕರು ನಿಮ್ಮ ವೀಡಿಯೊಗಳನ್ನು ಹೇಗೆ ಕಂಡುಕೊಳ್ಳುತ್ತಾರೆ

YouTube ಹುಡುಕಾಟ, ಬ್ರೌಸ್ ಫೀಚರ್‌ಗಳು, ಸಲಹೆಯಾಗಿ ನೀಡಲಾದ ವೀಡಿಯೊಗಳು, ಬಾಹ್ಯ ಚಾನಲ್ ಪುಟಗಳು ಮತ್ತು ಇತರೆಗಳಲ್ಲಿ ನಿಮ್ಮ ವೀಕ್ಷಕರು ನಿಮ್ಮ ವೀಡಿಯೊಗಳನ್ನು ಹೇಗೆ ಕಂಡುಕೊಂಡರು ಎಂಬುದನ್ನು ಈ ವರದಿಯು ತೋರಿಸುತ್ತದೆ.

ಟಾಪ್ ವೀಡಿಯೊಗಳು

ಈ ವರದಿಯು ನಿಮ್ಮ ಅತ್ಯಂತ ಜನಪ್ರಿಯ ವೀಡಿಯೊಗಳನ್ನು ಹೈಲೈಟ್ ಮಾಡುತ್ತದೆ.

Shorts

ಕೀ ಮೆಟ್ರಿಕ್ಸ್ ಕಾರ್ಡ್

ಇದು ನಿಮ್ಮ ವೀಕ್ಷಣೆಗಳು, ಲೈಕ್‌ಗಳು ಮತ್ತು ಸಬ್‌ಸ್ಕ್ರೈಬರ್‌ಗಳ ವಿಷುವಲ್ ಸಮಗ್ರ ನೋಟವನ್ನು ಒದಗಿಸುತ್ತದೆ.

ವೀಕ್ಷಕರು ನಿಮ್ಮ Shorts ಅನ್ನು ಹೇಗೆ ಕಂಡುಕೊಳ್ಳುತ್ತಾರೆ

Shorts ಫೀಡ್, YouTube ಹುಡುಕಾಟ, ಚಾನಲ್ ಪುಟಗಳು, ಬ್ರೌಸ್ ಫೀಚರ್‌ಗಳು ಮತ್ತು ಇತರೆಗಳಲ್ಲಿ ನಿಮ್ಮ Shorts ಅನ್ನು ನಿಮ್ಮ ವೀಕ್ಷಕರು ಹೇಗೆ ಕಂಡುಕೊಂಡರು ಎಂಬುದನ್ನು ಈ ವರದಿಯು ತೋರಿಸುತ್ತದೆ.

ಫೀಡ್‌ನಲ್ಲಿ ತೋರಿಸಲಾಗಿದೆ

ನಿಮ್ಮ Shorts ಅನ್ನು Shorts ಫೀಡ್‌ನಲ್ಲಿ ಎಷ್ಟು ಬಾರಿ ತೋರಿಸಲಾಗಿದೆ ಎಂಬುದನ್ನು ತಿಳಿಸುವ ಸಂಖ್ಯೆ.

ವೀಕ್ಷಿಸಿರುವುದು (ವರ್ಸಸ್ ಸ್ವೈಪ್ ಮಾಡಿ ತೊರೆದಿರುವುದು)

ನಿಮ್ಮ Shorts ಅನ್ನು ವೀಕ್ಷಿಸಿದವರ ಸಂಖ್ಯೆಗೆ ಪ್ರತಿಯಾಗಿ ಅದನ್ನು ಸ್ವೈಪ್ ಮಾಡಿ ತೊರೆದವರ ಶೇಕಡಾವಾರು ಸಂಖ್ಯೆ.

ಟಾಪ್ Shorts

ಈ ವರದಿಯು ನಿಮ್ಮ ಅತ್ಯಂತ ಜನಪ್ರಿಯ Shorts ಅನ್ನು ಹೈಲೈಟ್ ಮಾಡುತ್ತದೆ.

ಟಾಪ್ ರೀಮಿಕ್ಸ್ ಮಾಡಿರುವುದು

ಈ ವರದಿಯು ನಿಮ್ಮ ರೀಮಿಕ್ಸ್ ವೀಕ್ಷಣೆಗಳು, ಒಟ್ಟು ರೀಮಿಕ್ಸ್‌ಗಳು ಮತ್ತು ರೀಮಿಕ್ಸ್ ಮಾಡಲಾದ ಟಾಪ್ ಕಂಟೆಂಟ್‌ನ ವಿಷುವಲ್ ಸಮಗ್ರ ನೋಟವನ್ನು ಒದಗಿಸುತ್ತದೆ.

ಲೈವ್

ಕೀ ಮೆಟ್ರಿಕ್ಸ್ ಕಾರ್ಡ್

ನಿಮ್ಮ ವೀಕ್ಷಣೆಗಳು, ಸರಾಸರಿ ವೀಕ್ಷಣೆ ಅವಧಿ, ಇಂಪ್ರೆಷನ್‌ಗಳು ಹಾಗೂ ಇಂಪ್ರೆಷನ್‌ಗಳ ಕ್ಲಿಕ್‌‌-ಥ್ರೂ-ರೇಟ್‌ನ ವಿಷುವಲ್ ಸಮಗ್ರ ನೋಟವನ್ನು ಇದು ನಿಮಗೆ ಒದಗಿಸುತ್ತದೆ.

ವೀಕ್ಷಕರು ನಿಮ್ಮ ಲೈವ್ ಸ್ಟ್ರೀಮ್‌ಗಳನ್ನು ಹೇಗೆ ಕಂಡುಕೊಳ್ಳುತ್ತಾರೆ

ಬ್ರೌಸ್ ಫೀಚರ್‌ಗಳು, YouTube ಹುಡುಕಾಟ, ಸಲಹೆಯಾಗಿ ನೀಡಲಾದ ವೀಡಿಯೋಗಳು, ನೇರ ಅಥವಾ ಅಪರಿಚಿತ, ಚಾನಲ್ ಪುಟಗಳು ಮತ್ತು ಇತರೆಗಳಲ್ಲಿ ನಿಮ್ಮ ಲೈವ್ ಸ್ಟ್ರೀಮ್‌ಗಳನ್ನು ನಿಮ್ಮ ವೀಕ್ಷಕರು ಹೇಗೆ ಕಂಡುಕೊಂಡರು ಎಂಬುದನ್ನು ಈ ವರದಿಯು ತೋರಿಸುತ್ತದೆ.

ಟಾಪ್ ಲೈವ್ ಸ್ಟ್ರೀಮ್‌ಗಳು

ಈ ವರದಿಯು ನಿಮ್ಮ ಅತ್ಯಂತ ಜನಪ್ರಿಯ ಲೈವ್ ಸ್ಟ್ರೀಮ್‌ಗಳನ್ನು ಹೈಲೈಟ್ ಮಾಡುತ್ತದೆ. ವೀಕ್ಷಣೆಗಳು ಮತ್ತು ಇಂಪ್ರೆಷನ್‌ಗಳಂತಹ ಹೆಚ್ಚಿನ ಮೆಟ್ರಿಕ್‌ಗಳನ್ನು ವೀಕ್ಷಿಸಲು ನೀವು ವಿಸ್ತೃತ ವಿಶ್ಲೇಷಣೆ ವರದಿಯನ್ನು ಬಳಸಬಹುದು.

ಪೋಸ್ಟ್‌ಗಳು

ಇಂಪ್ರೆಷನ್‌ಗಳು

ನಿಮ್ಮ ಪೋಸ್ಟ್ ಅನ್ನು ವೀಕ್ಷಕರಿಗೆ ಎಷ್ಟು ಬಾರಿ ತೋರಿಸಲಾಗಿದೆ ಎಂಬುದನ್ನು ಈ ವರದಿಯು ತೋರಿಸುತ್ತದೆ.

ಲೈಕ್‌ಗಳು

ವೀಕ್ಷಕರು ನಿಮ್ಮ ಸಮುದಾಯ ಪೋಸ್ಟ್‌ಗಳನ್ನು ಎಷ್ಟು ಬಾರಿ ಇಷ್ಟಪಟ್ಟರು ಎಂಬುದನ್ನು ಈ ವರದಿಯು ತೋರಿಸುತ್ತದೆ.

ಸಬ್‌ಸ್ಕ್ರೈಬರ್‌ಗಳು

ನೀವು ಸಮುದಾಯ ಪೋಸ್ಟ್‌ಗಳಿಂದ ಪಡೆದುಕೊಂಡ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ಈ ವರದಿಯು ತೋರಿಸುತ್ತದೆ.

ಟಾಪ್ ಪೋಸ್ಟ್‌ಗಳು

ಈ ವರದಿಯು ಲೈಕ್‌ಗಳು ಅಥವಾ ವೋಟ್‌ಗಳನ್ನು ಆಧರಿಸಿ, ನಿಮ್ಮ ಅತ್ಯಂತ ಜನಪ್ರಿಯ ಪೋಸ್ಟ್‌ಗಳನ್ನು ತೋರಿಸುತ್ತದೆ.

ಪ್ಲೇಪಟ್ಟಿಗಳು

ಟಾಪ್ ಪ್ಲೇಪಟ್ಟಿ‌ಗಳ ಕಾರ್ಡ್

ಈ ವರದಿಯು ನಿಮ್ಮ ಅತ್ಯಂತ ಜನಪ್ರಿಯ ಪ್ಲೇಪಟ್ಟಿಗಳನ್ನು ಹೈಲೈಟ್ ಮಾಡುತ್ತದೆ ಮತ್ತು ಅವುಗಳನ್ನು ಹೋಲಿಸಲು ನಿಮಗೆ ಸಹಾಯ ಮಾಡುತ್ತದೆ. ಇಲ್ಲಿಂದ, ನೀವು ಪ್ರತಿ ಪ್ಲೇಪಟ್ಟಿಯ Analytics ಅನ್ನು ಆ್ಯಕ್ಸೆಸ್ ಮಾಡಬಹುದು. ನಿಮ್ಮ ಪ್ಲೇಪಟ್ಟಿ Analytics ಅನ್ನು ಆ್ಯಕ್ಸೆಸ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಟ್ರಾಫಿಕ್ ಮೂಲಗಳ ಪ್ರಕಾರಗಳನ್ನು ಅರ್ಥಮಾಡಿಕೊಳ್ಳಿ.

ನಿಮ್ಮ ವೀಡಿಯೊಗೆ ಟ್ರಾಫಿಕ್, YouTube ನಿಂದ ಅಥವಾ ಬಾಹ್ಯ ಮೂಲಗಳಿಂದ ಬರಬಹುದು. ಇವೆರಡನ್ನೂ ಸಹ ವೀಕ್ಷಕರು ನಿಮ್ಮ ಕಂಟೆಂಟ್ (ಅಥವಾ ವೀಡಿಯೊಗಳು, Shorts, ಲೈವ್) ಅನ್ನು ಹೇಗೆ ಕಂಡುಕೊಳ್ಳುತ್ತಾರೆ ಎಂಬಲ್ಲಿ ವೀಕ್ಷಿಸಬಹುದು.

YouTube ನ ಒಳಗಿನಿಂದ ಟ್ರಾಫಿಕ್
ಫೀಚರ್‌ಗಳನ್ನು ಬ್ರೌಸ್ ಮಾಡಿ ಹೋಮ್‌‌ನಿಂದ ಬಂದ ಟ್ರಾಫಿಕ್, ಸಬ್‌ಸ್ಕ್ರಿಪ್ಶನ್‌ಗಳು, ನಂತರ ವೀಕ್ಷಿಸಿ, ಟ್ರೆಂಡಿಂಗ್/ಎಕ್ಸ್‌ಪ್ಲೋರ್ ಮತ್ತು ಇತರ ಬ್ರೌಸಿಂಗ್ ಫೀಚರ್‌ಗಳು.
ಚಾನಲ್ ಪುಟಗಳು ನಿಮ್ಮ YouTube ಚಾನಲ್ ಅಥವಾ ಇತರ YouTube ಚಾನಲ್‌ಗಳಿಂದ ಟ್ರಾಫಿಕ್.
ಕ್ಯಾಂಪೇನ್ ಕಾರ್ಡ್‌ಗಳು ಕಂಟೆಂಟ್ ಮಾಲೀಕರ ಅಭಿಯಾನ ಕಾರ್ಡ್‌ಗಳು ಇಂದ ಬಂದ ಟ್ರಾಫಿಕ್.
ಮುಕ್ತಾಯ ಪರದೆಗಳು ರಚನೆಕಾರರ ಮುಕ್ತಾಯ ಪರದೆಗಳಿಂದ ಬಂದ ಟ್ರಾಫಿಕ್.
Shorts Shorts ವರ್ಟಿಕಲ್ ವ್ಯೂವಿಂಗ್ ಅನುಭವದಿಂದ ಬಂದ ಟ್ರಾಫಿಕ್‌ನ ಮಾಹಿತಿ.
ನೋಟಿಫಿಕೇಶನ್‌ಗಳು ನೋಟಿಫಿಕೇಶನ್‌ಗಳು ಮತ್ತು ನಿಮ್ಮ ಸಬ್‌ಸ್ಕ್ರೈಬರ್‌‌ಗಳಿಗೆ ಕಳುಹಿಸಲಾದ ಇಮೇಲ್‌ಗಳಿಂದ ಬಂದ ಟ್ರಾಫಿಕ್
  ಬೆಲ್ ಸಬ್‌ಸ್ಕ್ರೈಬರ್‌‌ಗಳಿಗೆ ಕಳುಹಿಸಲಾದ ನೋಟಿಫಿಕೇಶನ್‌ಗಳು ನಿಮ್ಮ ಚಾನಲ್‌ಗಾಗಿ "ಎಲ್ಲಾ ನೋಟಿಫಿಕೇಶನ್‌ಗಳು" ಅನ್ನು ಆನ್ ಮಾಡಿದ ಮತ್ತು ತಮ್ಮ ಸಾಧನದಲ್ಲಿ YouTube ನೋಟಿಫಿಕೇಶನ್‌ಗಳನ್ನು ಆನ್ ಮಾಡಿದ ನಿಮ್ಮ ಸಬ್‌ಸ್ಕ್ರೈಬರ್‌‌ಗಳಿಗೆ ಕಳುಹಿಸಲಾದ ನೋಟಿಫಿಕೇಶನ್‌ಗಳಿಂದ ಬಂದ ಟ್ರಾಫಿಕ್.
  ಇತರ ಆ್ಯಪ್ ನೋಟಿಫಿಕೇಶನ್‌ಗಳು ವೈಯಕ್ತೀಕರಿಸಿದ ನೋಟಿಫಿಕೇಶನ್‌ಗಳು, ಇಮೇಲ್ ನೋಟಿಫಿಕೇಶನ್‌ಗಳು, ಇನ್‌ಬಾಕ್ಸ್ ಮತ್ತು ಡೈಜೆಸ್ಟ್‌ಗಳಿಂದ ಟ್ರಾಫಿಕ್.
ಇತರ YouTube ಫೀಚರ್‌ಗಳು YouTube ಒಳಗಿನಿಂದ ಬಂದ ಟ್ರಾಫಿಕ್ ಬೇರೆ ಯಾವುದೇ ವರ್ಗಕ್ಕೆ ಸೇರುವುದಿಲ್ಲ.
ಪ್ಲೇಪಟ್ಟಿಗಳು

ನಿಮ್ಮ ವೀಡಿಯೊಗಳಲ್ಲಿ, ಒಂದನ್ನು ಒಳಗೊಂಡಿರುವ ಯಾವುದೇ ಪ್ಲೇಪಟ್ಟಿಯಿಂದ ಬಂದ ಟ್ರಾಫಿಕ್. ಈ ಪ್ಲೇಪಟ್ಟಿಗಳು ನಿಮ್ಮ ಸ್ವಂತ ಪ್ಲೇಪಟ್ಟಿ ಅಥವಾ ಇನ್ನೊಬ್ಬ ರಚನೆಕಾರರ ಪ್ಲೇಪಟ್ಟಿಯಾಗಿರಬಹುದು. ಈ ಟ್ರಾಫಿಕ್, ಬಳಕೆದಾರರು "ಲೈಕ್ ಮಾಡಿದ ವೀಡಿಯೊಗಳು" ಮತ್ತು "ಮೆಚ್ಚಿನ ವೀಡಿಯೊಗಳು" ಪ್ಲೇಪಟ್ಟಿಗಳನ್ನು ಸಹ ಒಳಗೊಂಡಿದೆ.

ರೀಮಿಕ್ಸ್‌ಡ್ ವೀಡಿಯೊ ನಿಮ್ಮ ಕಂಟೆಂಟ್‌ನ ವಿಷುವಲ್ ರೀಮಿಕ್ಸ್‌ಗಳು ಇಂದ ಬಂದ ಟ್ರಾಫಿಕ್.
ಸೌಂಡ್ ಪೇಜ್‌ಗಳು Shorts ವರ್ಟಿಕಲ್ ವ್ಯೂ ಅನುಭವದಲ್ಲಿ ಕಂಡುಬರುವ ಹಂಚಿಕೊಳ್ಳಲಾದ ಆಡಿಯೊ ಫಲಿತಾಂಶಗಳ ಪುಟದಿಂದ ಬಂದ ಟ್ರಾಫಿಕ್.
ಸಲಹೆಯಾಗಿ ನೀಡಲಾದ ವೀಡಿಯೊಗಳು ಇತರ ವೀಡಿಯೊಗಳ ಮುಂದಿನ ಅಥವಾ ನಂತರ ಗೋಚರಿಸುವ ಸಲಹೆಗಳಿಂದ ಹಾಗೂ ವೀಡಿಯೊ ವಿವರಣೆಗಳಲ್ಲಿನ ಲಿಂಕ್‌ನಿಂದ ಬಂದ ಟ್ರಾಫಿಕ್. ರೀಚ್ ಟ್ಯಾಬ್‌ನಲ್ಲಿರುವ "ಟ್ರಾಫಿಕ್ ಮೂಲ: ಸಲಹೆಯಾಗಿ ನೀಡಲಾದ ವೀಡಿಯೋಗಳು" ಕಾರ್ಡ್‌ನಲ್ಲಿ, ನೀವು ನಿರ್ದಿಷ್ಟ ವೀಡಿಯೊಗಳನ್ನು ನೋಡಬಹುದು.
ವೀಡಿಯೊ ಕಾರ್ಡ್‌ಗಳು ಮತ್ತೊಂದು ವೀಡಿಯೊದಲ್ಲಿರುವ ಕಾರ್ಡ್‌ನಿಂದ ಟ್ರಾಫಿಕ್ ಬರುತ್ತಿದೆ.
YouTube ಜಾಹೀರಾತು

ನಿಮ್ಮ ವೀಡಿಯೊವನ್ನು YouTube ನಲ್ಲಿ ಜಾಹೀರಾತಾಗಿ ಬಳಸಿದರೆ, ನೀವು “YouTube ಜಾಹೀರಾತು” ಎಂಬುದನ್ನು ಟ್ರಾಫಿಕ್ ಮೂಲವಾಗಿ ನೋಡುವಿರಿ.

10 ಸೆಕೆಂಡ್‌ಗಳಿಗಿಂತ ದೀರ್ಘವಾದ, ಸ್ಕಿಪ್ ಮಾಡಬಹುದಾದ ಆ್ಯಡ್‌ಗಳನ್ನು 30 ಸೆಕೆಂಡ್‌ಗಳ ಕಾಲ ಅಥವಾ ಅವುಗಳು ಮುಗಿಯುವವರೆಗೆ ವೀಕ್ಷಿಸಲಾದರೆ, ಆ ವೀಕ್ಷಣೆಗಳನ್ನು ಲೆಕ್ಕ ಮಾಡಲಾಗುತ್ತದೆ. ಸ್ಕಿಪ್ ಮಾಡಲಾಗದ ಆ್ಯಡ್‌ಗಳನ್ನು YouTube Analytics ನಲ್ಲಿ ಎಂದೂ ವೀಕ್ಷಣೆಗಳೆಂದು ಲೆಕ್ಕ ಮಾಡಲಾಗುವುದಿಲ್ಲ.

YouTube ಹುಡುಕಾಟ YouTube ಹುಡುಕಾಟ ಫಲಿತಾಂಶಗಳಿಂದ ಬಂದ ಟ್ರಾಫಿಕ್. ರೀಚ್ ಟ್ಯಾಬ್‌ನ "ಟ್ರಾಫಿಕ್ ಮೂಲ: YouTube ಹುಡುಕಾಟ" ಕಾರ್ಡ್‌ನಲ್ಲಿ ನೀವು ನಿರ್ದಿಷ್ಟ ಹುಡುಕಾಟ ಪದಗಳನ್ನು ನೋಡಬಹುದು.
ಉತ್ಪನ್ನದ ಪುಟಗಳು YouTube ಉತ್ಪನ್ನ ಪುಟಗಳಿಂದ ಬಂದ ಟ್ರಾಫಿಕ್.
ಬಾಹ್ಯ ಮೂಲಗಳಿಂದ ಬಂದ ಟ್ರಾಫಿಕ್
ಬಾಹ್ಯ ಮೂಲಗಳು ನಿಮ್ಮ YouTube ವೀಡಿಯೊವನ್ನು ಎಂಬೆಡ್ ಮಾಡಿದ ಅಥವಾ ಲಿಂಕ್ ಮಾಡಿರುವ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಿಂದ ಬಂದ ಟ್ರಾಫಿಕ್. ರೀಚ್ ಟ್ಯಾಬ್‌ನ "ಟ್ರಾಫಿಕ್ ಮೂಲ: ಬಾಹ್ಯ" ಕಾರ್ಡ್‌ನಲ್ಲಿ, ನೀವು ನಿರ್ದಿಷ್ಟ ಬಾಹ್ಯ ಸೈಟ್‌ಗಳು ಮತ್ತು ಮೂಲಗಳನ್ನು ನೋಡಬಹುದು.
ನೇರ ಅಥವಾ ಅಜ್ಞಾತ ಮೂಲಗಳು ನೇರ URL ಪ್ರವೇಶ, ಬುಕ್‌ಮಾರ್ಕ್‌ಗಳು, ಸೈನ್ ಔಟ್ ಮಾಡಿದ ವೀಕ್ಷಕರು ಮತ್ತು ಗುರುತಿಸಲಾಗದ ಆ್ಯಪ್‌ಗಳಿಂದ ಬಂದ ಟ್ರಾಫಿಕ್.

ತಿಳಿದಿರಬೇಕಾದ ಮೆಟ್ರಿಕ್‌ಗಳು

ಇಂಪ್ರೆಷನ್‌ಗಳು

ದಾಖಲಾದ ಇಂಪ್ರೆಷನ್‌ಗಳ ಮೂಲಕ, YouTube ನಲ್ಲಿ ನಿಮ್ಮ ಥಂಬ್‌ನೇಲ್‌ಗಳನ್ನು ಎಷ್ಟು ಬಾರಿ ವೀಕ್ಷಕರಿಗೆ ತೋರಿಸಲಾಗಿದೆ.

ಇಂಪ್ರೆಷನ್‌ಗಳ ಕ್ಲಿಕ್-ಥ್ರೂ-ರೇಟ್

ಒಂದು ಥಂಬ್‌ನೇಲ್ ಅನ್ನು ವೀಕ್ಷಿಸಿದ ಬಳಿಕ ವೀಕ್ಷಕರು ಎಷ್ಟು ಬಾರಿ ವೀಡಿಯೊವನ್ನು ವೀಕ್ಷಿಸಿದ್ದಾರೆ.

ಫೀಡ್‌ನಲ್ಲಿ ತೋರಿಸಲಾಗಿದೆ ನಿಮ್ಮ Short ಅನ್ನು Shorts ಫೀಡ್‌ನಲ್ಲಿ ಎಷ್ಟು ಬಾರಿ ತೋರಿಸಲಾಗಿದೆ ಎಂಬುದನ್ನು ತಿಳಿಸುವ ಸಂಖ್ಯೆ.
ವೀಕ್ಷಿಸಿರುವುದು (ವರ್ಸಸ್ ಸ್ವೈಪ್ ಮಾಡಿ ತೊರೆದಿರುವುದು) ವೀಕ್ಷಕರು ನಿಮ್ಮ Shorts ಅನ್ನು ವೀಕ್ಷಿಸಿದ ಸಂಖ್ಯೆಗೆ ಪ್ರತಿಯಾಗಿ ಅದನ್ನು ಸ್ವೈಪ್ ಮಾಡಿ ತೊರೆದವರ ಶೇಕಡಾವಾರು ಸಂಖ್ಯೆ.

ಅನನ್ಯ ವೀಕ್ಷಕರು

ಆಯ್ಕೆ ಮಾಡಿದ ದಿನಾಂಕ ವ್ಯಾಪ್ತಿಯಲ್ಲಿ ನಿಮ್ಮ ಕಂಟೆಂಟ್ ಅನ್ನು ವೀಕ್ಷಿಸಿದ ಅಂದಾಜು ವೀಕ್ಷಕರ ಸಂಖ್ಯೆ.

ಸರಾಸರಿ ವೀಕ್ಷಣೆಯ ಅವಧಿ

ಆಯ್ಕೆ ಮಾಡಿದ ವೀಡಿಯೊ ಮತ್ತು ದಿನಾಂಕದ ವ್ಯಾಪ್ತಿಯಲ್ಲಿ, ಪ್ರತಿ ವೀಕ್ಷಣೆಯ ಸಂದರ್ಭ ವೀಕ್ಷಿಸಲಾದ ಸರಾಸರಿ ಅಂದಾಜು ನಿಮಿಷಗಳನ್ನು ತೋರಿಸುತ್ತದೆ.

ವೀಕ್ಷಿಸಲಾದ ಸರಾಸರಿ ಶೇಕಡಾವಾರು

ಪ್ರತಿ ವೀಕ್ಷಣೆಯ ಸಂದರ್ಭ, ನಿಮ್ಮ ಪ್ರೇಕ್ಷಕರು ವೀಕ್ಷಿಸುವ ವೀಡಿಯೊದ ಸರಾಸರಿ ಶೇಕಡಾವಾರು.

ವೀಕ್ಷಣೆ ಸಮಯ (ಗಂಟೆಗಳು)

ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸಿರುವ ಸಮಯದ ಪ್ರಮಾಣ.

ಪೋಸ್ಟ್ ಗಳಿಸಿದ ಲೈಕ್‌ಗಳ ಸಂಖ್ಯೆ ನಿಮ್ಮ ಪೋಸ್ಟ್ ಗಳಿಸಿದ ಲೈಕ್‌ಗಳ ಸಂಖ್ಯೆ.
ಪೋಸ್ಟ್ ಗಳಿಸಿದ ಲೈಕ್‌ಗಳ ದರ ನಿಮ್ಮ ಪೋಸ್ಟ್‌ಗೆ ಲೈಕ್ ನೀಡಿದ ವೀಕ್ಷಕರ ಶೇಕಡಾವಾರು ಸಂಖ್ಯೆ.
ಪ್ಲೇಪಟ್ಟಿಯಿಂದ ವೀಕ್ಷಣೆಗಳು ಪ್ಲೇಪಟ್ಟಿಯನ್ನೇ ವೀಕ್ಷಿಸುವ ವೀಕ್ಷಕರಿಂದ ವೀಡಿಯೊ ವೀಕ್ಷಣೆಗಳು. ಇದು ಸಾರ್ವಜನಿಕ ಪ್ಲೇಪಟ್ಟಿ ಪುಟದಲ್ಲಿ ಬಾಹ್ಯವಾಗಿ ಲಭ್ಯವಿರುವ ಅದೇ ಮೆಟ್ರಿಕ್ ಆಗಿದೆ.
ಒಟ್ಟು ವೀಕ್ಷಣೆಗಳು ಅವುಗಳು ಪ್ಲೇಪಟ್ಟಿಯಿಂದ ಅಥವಾ ಬೇರೆಡೆಯಿಂದ ಬಂದಿದೆಯೇ ಎಂಬುದನ್ನು ಲೆಕ್ಕಿಸದೇ, ಪ್ಲೇಪಟ್ಟಿಯಲ್ಲಿರುವ ಎಲ್ಲಾ ವೀಡಿಯೊಗಳ ಒಟ್ಟು ವೀಕ್ಷಣೆಗಳು. ಪ್ಲೇಪಟ್ಟಿಯಲ್ಲಿ ನೀವು ಹೊಂದಿರುವ ವೀಡಿಯೊಗಳಿಗೆ ಮಾತ್ರ ಇದನ್ನು ಕಂಪ್ಯೂಟ್ ಮಾಡಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15104321098501767445
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false