Content ID ಕ್ಲೇಮ್‌ ವಿರುದ್ಧ ಮೇಲ್ಮನವಿ ಸಲ್ಲಿಸಿ

ನೀವು Content ID ಕ್ಲೇಮ್ ವಿರುದ್ಧ ವಿವಾದ ಸಲ್ಲಿಸಿದ್ದರೆ, ಆದರೆ ಕ್ಲೇಮ್ ಅನ್ನು ಮರುಸ್ಥಾಪಿಸಲಾಗಿದ್ದರೆ, ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ನೀವು ಅರ್ಹರಾಗಿರಬಹುದು. Content ID ಕ್ಲೇಮ್ ನಿಮ್ಮ ವೀಡಿಯೊವನ್ನು ನಿರ್ಬಂಧಿಸಿದ್ದರೆ, ವಿವಾದ ಸಲ್ಲಿಕೆಯ ಆರಂಭಿಕ ಹಂತವನ್ನು ಸ್ಕಿಪ್ ಮಾಡಿ ಮೇಲ್ಮನವಿಯೊಂದಿಗೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮಗೆ ಸಾಧ್ಯವಾಗಬಹುದು.

ನೀವು Content ID ಕ್ಲೇಮ್‌ ವಿರುದ್ಧ ಮೇಲ್ಮನವಿ ಸಲ್ಲಿಸಿದಾಗ, ನಿಮ್ಮ ವೀಡಿಯೊವನ್ನು ಕ್ಲೇಮ್ ಮಾಡಿದ ವ್ಯಕ್ತಿಗೆ (ಕ್ಲೇಮುದಾರರಿಗೆ) ಸೂಚನೆ ನೀಡಲಾಗುತ್ತದೆ ಮತ್ತು ಪ್ರತಿಕ್ರಿಯಿಸಲು ಅವರಿಗೆ 7 ದಿನಗಳ ಕಾಲಾವಕಾಶವಿರುತ್ತದೆ.

 

ನೀವು ಮೇಲ್ಮನವಿ ಸಲ್ಲಿಸುವ ಮೊದಲು

ನಿಮ್ಮ ಚಾನಲ್ ಫೀಚರ್‌ಗಳ ಪುಟದಲ್ಲಿ ಮೇಲ್ಮನವಿ ಸಲ್ಲಿಸಲು ನೀವು ಅರ್ಹರಾಗಿದ್ದೀರಾ ಎಂಬುದನ್ನು ಪರಿಶೀಲಿಸಬಹುದು. ನೀವು ಅರ್ಹರಾಗಿಲ್ಲದಿದ್ದರೆ, ಮೇಲ್ಮನವಿ ಸಲ್ಲಿಸುವ ಮೊದಲು ಒಂದು-ಬಾರಿಯ ದೃಢೀಕರಣವನ್ನು ಪೂರ್ಣಗೊಳಿಸಬೇಕಾಗಬಹುದು.

ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ಬಳಸಲು ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ನೀವು ಹೊಂದಿರುವಿರಿ ಎಂಬ ವಿಶ್ವಾಸವಿದ್ದರೆ ಮಾತ್ರ ನೀವು ಮೇಲ್ಮನವಿ ಸಲ್ಲಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಮೇಲ್ಮನವಿ ಪ್ರಕ್ರಿಯೆಯ ಪುನರಾವರ್ತಿತ ಅಥವಾ ದುರುದ್ದೇಶಪ್ರೇರಿತ ದುರುಪಯೋಗವು ಮೇಲ್ಮನವಿ ಸಲ್ಲಿಸುವ ಅರ್ಹತೆಯನ್ನು ಕಳೆದುಕೊಳ್ಳಲು ಅಥವಾ ನಿಮ್ಮ ಚಾನಲ್ ಅಥವಾ ವೀಡಿಯೊದ ಮೇಲೆ ಇತರ ದಂಡನೆಗಳನ್ನು ಪಡೆಯಲು ಕಾರಣವಾಗಬಹುದು.

ಮರುಸ್ಥಾಪಿಸಲಾದ ಕ್ಲೇಮ್‌ ವಿರುದ್ಧ ಮೇಲ್ಮನವಿ ಸಲ್ಲಿಸಿ

ನೀವು Content ID ಕ್ಲೇಮ್ ವಿರುದ್ಧ ವಿವಾದ ಸಲ್ಲಿಸಿದ್ದರೆ ಮತ್ತು ಅದನ್ನು ತಿರಸ್ಕರಿಸಿದ್ದರೆ, ನಿಮ್ಮ ವೀಡಿಯೊದ ಮೇಲಿನ ಕ್ಲೇಮ್ ಅನ್ನು ಮರುಸ್ಥಾಪಿಸಲಾಗುತ್ತದೆ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿಮಗೆ ಸಾಧ್ಯವಾಗಬಹುದು. ಮರುಸ್ಥಾಪಿಸಲಾದ ಕ್ಲೇಮ್ ವಿರುದ್ಧ ಮೇಲ್ಮನವಿ ಸಲ್ಲಿಸಲು:

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ಎಂಬುದನ್ನು ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
  3. ನಿರ್ಬಂಧವಿರುವ ವೀಡಿಯೊ ಆಯ್ಕೆಮಾಡಿ, ನಂತರ ಆ ನಿರ್ಬಂಧದ ಮೇಲೆ ಟ್ಯಾಪ್ ಮಾಡಿ.
    • ವೀಡಿಯೊವನ್ನು ಇನ್ನಷ್ಟು ಸುಲಭವಾಗಿ ಹುಡುಕಲು, ನೀವು ಫಿಲ್ಟರ್ ಬಾರ್ ನಂತರ ಕೃತಿಸ್ವಾಮ್ಯ ಎಂಬುದನ್ನು ಕ್ಲಿಕ್ ಮಾಡಬಹುದು.
  4. ಸಮಸ್ಯೆಗಳನ್ನು ಪರಿಶೀಲಿಸಿ ಎಂಬುದನ್ನು ಟ್ಯಾಪ್ ಮಾಡಿ.
  5. ಸೂಕ್ತವಾದ ಕ್ಲೇಮ್‌ ಅನ್ನು ಟ್ಯಾಪ್ ಮಾಡಿ.
  6. ಮೇಲ್ಮನವಿ ಸಲ್ಲಿಸುವುದಕ್ಕೆ ನಿಮ್ಮ ಕಾರಣವನ್ನು ನಮೂದಿಸಿ ಮತ್ತು ಸಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ.

ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ

ನಿಮ್ಮ ವೀಡಿಯೊವನ್ನು ನಿರ್ಬಂಧಿಸಿದ Content ID ಕ್ಲೇಮ್ ಅನ್ನು ನೀವು ಪಡೆದಿದ್ದರೆ, ವಿವಾದ ಸಲ್ಲಿಕೆಯ ಆರಂಭಿಕ ಹಂತವನ್ನು ಸ್ಕಿಪ್ ಮಾಡಿ ಮೇಲ್ಮನವಿಯೊಂದಿಗೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮಗೆ ಸಾಧ್ಯವಾಗಬಹುದು. ಈ ಆಯ್ಕೆಯನ್ನು "ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ" ಎಂದು ಕರೆಯಲಾಗುತ್ತದೆ.

ನಿರ್ಬಂಧಿಸುವ ಕ್ಲೇಮ್‌ಗಳು ಅಮಾನ್ಯವಾಗಿವೆ ಎಂಬ ವಿಶ್ವಾಸ ನಿಮಗಿದ್ದಾಗ, ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆಯು ಒಟ್ಟಾರೆ ವಿವಾದ ಸಲ್ಲಿಕೆ ಪ್ರಕ್ರಿಯೆಗೆ ತ್ವರಿತ ಪರಿಹಾರವನ್ನು ನೀಡಬಲ್ಲದು, ಏಕೆಂದರೆ ಕ್ಲೇಮುದಾರರು ಮೇಲ್ಮನವಿಗಳಿಗೆ ಪ್ರತಿಕ್ರಿಯಿಸಲು 7 ದಿನಗಳ ಕಾಲಾವಕಾಶ ಹೊಂದಿರುತ್ತಾರೆ. ಅಂದರೆ, ನಿಮ್ಮ ವೀಡಿಯೊವನ್ನು YouTube ನಲ್ಲಿ ವೀಕ್ಷಿಸುವುದು ಆದಷ್ಟು ಬೇಗ ಸಾಧ್ಯವಾಗುತ್ತದೆ.

ಕ್ಲೇಮುದಾರರು ಮೇಲ್ಮನವಿಯನ್ನು ತಿರಸ್ಕರಿಸಿದರೆ, ಅವರು ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲು ವಿನಂತಿಯನ್ನು ಸಲ್ಲಿಸಬಹುದು ಎಂಬುದನ್ನು ನೆನಪಿನಲ್ಲಿಡಿ. ತೆಗೆದುಹಾಕುವಿಕೆ ವಿನಂತಿಯು ಮಾನ್ಯವಾಗಿದ್ದರೆ, ನಿಮ್ಮ ವೀಡಿಯೊವನ್ನು YouTube ನಿಂದ ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಚಾನಲ್ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆಯುತ್ತದೆ. ಆದಾಗ್ಯೂ, ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ಬಳಸಲು ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ನೀವು ಹೊಂದಿರುವಿರಿ ಎಂದು ನಿಮಗೆ ಈಗಲೂ ವಿಶ್ವಾಸವಿದ್ದರೆ, ನೀವು ಈಗಲೂ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.

ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆಯನ್ನು ಆರಿಸಲು:

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ಎಂಬುದನ್ನು ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
  3. ನಿರ್ಬಂಧವಿರುವ ವೀಡಿಯೊ ಆಯ್ಕೆಮಾಡಿ, ನಂತರ ಆ ನಿರ್ಬಂಧದ ಮೇಲೆ ಟ್ಯಾಪ್ ಮಾಡಿ.
    • ವೀಡಿಯೊವನ್ನು ಇನ್ನಷ್ಟು ಸುಲಭವಾಗಿ ಹುಡುಕಲು, ನೀವು ಫಿಲ್ಟರ್ ಬಾರ್ ನಂತರ ಕೃತಿಸ್ವಾಮ್ಯ ಎಂಬುದನ್ನು ಕ್ಲಿಕ್ ಮಾಡಬಹುದು.
  4. ಸಮಸ್ಯೆಗಳನ್ನು ಪರಿಶೀಲಿಸಿ ಎಂಬುದನ್ನು ಟ್ಯಾಪ್ ಮಾಡಿ.
  5. ಸೂಕ್ತವಾದ ಕ್ಲೇಮ್‌ ಅನ್ನು ಟ್ಯಾಪ್ ಮಾಡಿ.
  6. ವಿವಾದ ನಡೆಸಿ ಎಂಬುದನ್ನು ಟ್ಯಾಪ್ ಮಾಡಿ. ಆಯ್ಕೆಗಳು ಪುಟದಲ್ಲಿ, ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆಯನ್ನು ಆರಿಸಿ.

ನೀವು ಮೇಲ್ಮನವಿ ಸಲ್ಲಿಸಿದ ನಂತರ

ನೀವು ಕ್ಲೇಮ್‌ ವಿರುದ್ಧ ಮೇಲ್ಮನವಿ ಸಲ್ಲಿಸಿದ ನಂತರ, ಕ್ಲೇಮುದಾರರು ಪ್ರತಿಕ್ರಿಯಿಸಲು 7 ದಿನಗಳನ್ನು ಹೊಂದಿರುತ್ತಾರೆ.

ಕ್ಲೇಮುದಾರರು ಏನು ಮಾಡಬಹುದು

ನಿಮ್ಮ ವೀಡಿಯೊವನ್ನು YouTube ನಿಂದ ತೆಗೆದುಹಾಕಲಾಗಿದ್ದರೆ, ಆದರೆ ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ಬಳಸಲು ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ನೀವು ಹೊಂದಿರುವಿರಿ ಎಂದು ನಿಮಗೆ ಇನ್ನೂ ವಿಶ್ವಾಸವಿದ್ದರೆ, ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.

ಮೇಲ್ಮನವಿಯನ್ನು ರದ್ದುಮಾಡುವುದು ಹೇಗೆ

ನೀವು ನಿಮ್ಮ ಮನಸ್ಸನ್ನು ಬದಲಾಯಿಸಿದರೆ, ಮೇಲ್ಮನವಿಯನ್ನು ಸಲ್ಲಿಸಿದ ನಂತರ ಅದನ್ನು ರದ್ದುಮಾಡಬಹುದು. ಮೇಲ್ಮನವಿಯನ್ನು ರದ್ದುಮಾಡಲು:

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ಎಂಬುದನ್ನು ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
  3. ನಿರ್ಬಂಧವಿರುವ ವೀಡಿಯೊ ಆಯ್ಕೆಮಾಡಿ, ನಂತರ ಆ ನಿರ್ಬಂಧದ ಮೇಲೆ ಟ್ಯಾಪ್ ಮಾಡಿ.
    • ವೀಡಿಯೊವನ್ನು ಇನ್ನಷ್ಟು ಸುಲಭವಾಗಿ ಹುಡುಕಲು, ನೀವು ಫಿಲ್ಟರ್ ಬಾರ್ ನಂತರ ಕೃತಿಸ್ವಾಮ್ಯ ಎಂಬುದನ್ನು ಕ್ಲಿಕ್ ಮಾಡಬಹುದು.
  4. ಸಮಸ್ಯೆಗಳನ್ನು ಪರಿಶೀಲಿಸಿ ಎಂಬುದನ್ನು ಟ್ಯಾಪ್ ಮಾಡಿ.
  5. ಸೂಕ್ತವಾದ ಕ್ಲೇಮ್‌ ಅನ್ನು ಟ್ಯಾಪ್ ಮಾಡಿ, ನಂತರ ಮೇಲ್ಮನವಿಯನ್ನು ರದ್ದುಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಗಮನಿಸಿ: ನೀವು ಮೇಲ್ಮನವಿಯನ್ನು ರದ್ದುಮಾಡಿದ ನಂತರ, ಕ್ಲೇಮ್ ವಿರುದ್ಧ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಈ ವೀಡಿಯೊದ "Content ID ಗಾಗಿ ಮೇಲ್ಮನವಿ ಪ್ರಕ್ರಿಯೆ" ಚಾಪ್ಟರ್‌ನಲ್ಲಿ ಮೇಲ್ಮನವಿ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿಯಿರಿ:

Content ID ಕ್ಲೇಮ್‌ಗಳು ಮತ್ತು ವಿವಾದ ಸಲ್ಲಿಕೆ ಪ್ರಕ್ರಿಯೆ: Studio ದಲ್ಲಿ ಕ್ಲೇಮ್‌ಗಳನ್ನು ನಿರ್ವಹಿಸಿ ಮತ್ತು ಕ್ರಮ ತೆಗೆದುಕೊಳ್ಳಿ

 

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ ಗಳು)

ವಿವಾದ ಮತ್ತು ಮೇಲ್ಮನವಿ ಮಾಡಲು ಎಸ್ಕಲೇಟ್ ಆಯ್ಕೆಗಳ ನಡುವಿನ ವ್ಯತ್ಯಾಸವೇನು?

ಕ್ಲೇಮುದಾರರು ವಿವಾದಕ್ಕೆ ಪ್ರತಿಕ್ರಿಯಿಸಲು ಆರಂಭಿಕ ವಿವಾದದ ಆಯ್ಕೆಯು30 ದಿನಗಳವರೆಗೆತೆಗೆದುಕೊಳ್ಳಬಹುದು. ಅವರು ನಿಮ್ಮ ವಿವಾದವನ್ನು ತಿರಸ್ಕರಿಸಿದರೆ, ನೀವು ಆ ನಿರ್ಧಾರಕ್ಕಾಗಿ ಮೇಲ್ಮನವಿಯನ್ನು ಸಲ್ಲಿಸಬಹುದು. ತದನಂತರ ಮನವಿಗೆ ಪ್ರತಿಕ್ರಿಯಿಸಲು ಕ್ಲೇಮುದಾರರಿಗೆ 7 ದಿನಗಳ ಕಾಲಾವಕಾಶವಿದೆ.

ಮೇಲ್ಮನವಿಗಾಗಿ ಎಸ್ಕಲೇಟ್ ಮಾಡುವ ಆಯ್ಕೆಯು ನಿಮ್ಮ ವೀಡಿಯೊವನ್ನು ನಿರ್ಬಂಧಿಸುವ Content ID ಕ್ಲೈಮ್‌ಗಳಿಗೆ ಮಾತ್ರ ಲಭ್ಯವಿದೆ. ಈ ಆಯ್ಕೆಯು ವಿವಾದದ ಆರಂಭಿಕ ಹಂತವನ್ನು ಸ್ಕಿಪ್ ಮಾಡುತ್ತದೆ, ಇದು ಕ್ಲೇಮುದಾರರಿಗೆ ಪ್ರತಿಕ್ರಿಯಿಸಲು 30 ದಿನಗಳನ್ನು ನೀಡುತ್ತದೆ ಮತ್ತು ಪ್ರಕ್ರಿಯೆಯನ್ನು ಮೇಲ್ಮನವಿಯೊಂದಿಗೆ ಪ್ರಾರಂಭಿಸುತ್ತದೆ. ನಂತರ, ಪ್ರಕ್ರಿಯೆಯನ್ನು ಶೀಘ್ರವಾಗಿ ಬಗೆಹರಿಸುವುದಕ್ಕಾಗಿ, ಕ್ಲೇಮುದಾರರಿಗೆ ಪ್ರತಿಕ್ರಿಯಿಸಲು 7 ದಿನಗಳು ದೊರೆಯುತ್ತವೆ.

ಕ್ಲೇಮುದಾರರು ನಿಮ್ಮ ಮನವಿಯನ್ನು ತಿರಸ್ಕರಿಸಿದರೆ, ಅವರು ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲು ವಿನಂತಿಯನ್ನು ಸಲ್ಲಿಸಬಹುದು. ತೆಗೆದುಹಾಕುವಿಕೆ ವಿನಂತಿಯು ಮಾನ್ಯವಾಗಿದ್ದರೆ, ನಿಮ್ಮ ವೀಡಿಯೊವನ್ನು YouTube ನಿಂದ ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಚಾನಲ್ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆಯುತ್ತದೆ. ತೆಗೆದುಹಾಕುವಿಕೆ ವಿನಂತಿಯು ಅಮಾನ್ಯವಾಗಿದೆ ಎಂದು ನಿಮಗೆ ವಿಶ್ವಾಸವಿದ್ದರೆ, ನೀವು ಈಗಲೂ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆಯನ್ನು ನಾನು ಯಾವಾಗ ಆರಿಸಬೇಕು?

ನಿಮ್ಮ ವೀಡಿಯೊವನ್ನು ನಿರ್ಬಂಧಿಸಿದ Content ID ಕ್ಲೇಮ್ ಅನ್ನು ನಿಮ್ಮ ವೀಡಿಯೊ ಪಡೆದಿದ್ದರೆ, ನೀವು ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಕಂಟೆಂಟ್ ಅನ್ನು ಬಳಸುವ ನಿಮ್ಮ ಹಕ್ಕಿನ ಕುರಿತು ನಿಮಗೆ ವಿಶ್ವಾಸವಿದ್ದರೆ ಮತ್ತು ವಿವಾದ ಸಲ್ಲಿಕೆ ಪ್ರಕ್ರಿಯೆಗೆ ನೀವು ವೇಗವಾಗಿ ಪರಿಹಾರವನ್ನು ಹುಡುಕುತ್ತಿದ್ದರೆ, ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಎಂಬುದು ಉತ್ತಮ ಆಯ್ಕೆಯಾಗಿದೆ. 

ಆದರೆ, ಕ್ಲೇಮುದಾರರು ಮೇಲ್ಮನವಿಯನ್ನು ತಿರಸ್ಕರಿಸಿದರೆ, ಅವರು ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲು ವಿನಂತಿಯನ್ನು ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ತೆಗೆದುಹಾಕುವಿಕೆ ವಿನಂತಿಯು ಮಾನ್ಯವಾಗಿದ್ದರೆ, ನಿಮ್ಮ ವೀಡಿಯೊವನ್ನು YouTube ನಿಂದ ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಚಾನಲ್ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆಯುತ್ತದೆ. ಆದಾಗ್ಯೂ, ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ಬಳಸಲು ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ನೀವು ಹೊಂದಿರುವಿರಿ ಎಂದು ನಿಮಗೆ ಈಗಲೂ ವಿಶ್ವಾಸವಿದ್ದರೆ, ನೀವು ಈಗಲೂ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.

ಅಂತಿಮವಾಗಿ, ನೀವು ಯಾವಾಗ ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟಿದ್ದು. ಏನು ಮಾಡಬೇಕೆಂದು ನಿಮಗೆ ಖಚಿತವಿಲ್ಲದಿದ್ದರೆ, ನೀವು ಕಾನೂನು ಸಲಹೆಯನ್ನು ಪಡೆಯಲು ಬಯಸಬಹುದು.

ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆಯು ನನ್ನ ವೀಡಿಯೊವನ್ನು ನಿರ್ಬಂಧಿಸುವ Content ID ಕ್ಲೇಮ್‌ಗಳಿಗೆ ಮಾತ್ರ ಏಕೆ ಲಭ್ಯವಿದೆ?

ನಿರ್ಬಂಧಿಸುವ ಕ್ಲೇಮ್‌ಗಳನ್ನು ಪಡೆಯುವ ವೀಡಿಯೊಗಳನ್ನು YouTube ನಲ್ಲಿ ಜಾಗತಿಕವಾಗಿ ಅಥವಾ ಕೆಲವು ದೇಶಗಳು/ಪ್ರದೇಶಗಳಲ್ಲಿ (ಕ್ಲೇಮುದಾರರ ಕಾರ್ಯನೀತಿಯನ್ನು ಅವಲಂಬಿಸಿ) ವೀಕ್ಷಿಸಲು ಸಾಧ್ಯವಾಗುವುದಿಲ್ಲ. ನಿರ್ಬಂಧಿಸುವ ಕ್ಲೇಮ್‌ಗಳು ಅಮಾನ್ಯವಾಗಿವೆ ಎಂಬ ವಿಶ್ವಾಸ ನಿಮಗಿದ್ದಾಗ, ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ ಆಯ್ಕೆಯು ಕ್ಲೇಮ್ ಅನ್ನು ತ್ವರಿತವಾಗಿ ಪರಿಹರಿಸಬಲ್ಲದು. ಅಂದರೆ, ನಿಮ್ಮ ವೀಡಿಯೊವನ್ನು YouTube ನಲ್ಲಿ ವೀಕ್ಷಿಸುವುದು ಆದಷ್ಟು ಬೇಗ ಸಾಧ್ಯವಾಗುತ್ತದೆ.

ಇತರ ಕ್ಲೇಮ್ ಪ್ರಕಾರಗಳ (ಮಾನಿಟೈಸ್ ಮಾಡುವುದು ಮತ್ತು ಟ್ರ್ಯಾಕ್ ಮಾಡುವುದು) ಸಂದರ್ಭದಲ್ಲಿ, Content ID ಕ್ಲೇಮ್‌ ಇದ್ದಾಗಲೂ ನಿಮ್ಮ ವೀಡಿಯೊ YouTube ನಲ್ಲಿ ಲೈವ್ ಆಗಿರುತ್ತದೆ. ಮಾನಿಟೈಸ್ ಮಾಡುವ ಕ್ಲೇಮ್‌‌ಗಳ ಸಂದರ್ಭದಲ್ಲಿ, ನೀವು ಮತ್ತು ಕ್ಲೇಮುದಾರರಿಬ್ಬರೂ ಕ್ಲೇಮ್‌ ಮಾಡಲಾದ ವೀಡಿಯೊವನ್ನು ಮಾನಿಟೈಸ್ ಮಾಡಲು ಪ್ರಯತ್ನಿಸುತ್ತಿರುವಾಗ, ವಿವಾದ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿರುವ ವೇಳೆಯಲ್ಲಿ ವೀಡಿಯೊದ ಆದಾಯವು ಉತ್ಪತ್ತಿಯಾಗುತ್ತಲೇ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವಿವಾದವನ್ನು ಪರಿಹರಿಸಿದ ನಂತರ, ಆ ಆದಾಯವನ್ನು ಸೂಕ್ತ ಪಾರ್ಟಿಗೆ ಪಾವತಿಸಲಾಗುತ್ತದೆ. Content ID ವಿವಾದಗಳ ಸಂದರ್ಭದಲ್ಲಿ ಮಾನಿಟೈಸೇಶನ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ಮೇಲ್ಮನವಿ ಸಲ್ಲಿಸಿದ ನಂತರ ನಾನು ಅದನ್ನು ರದ್ದುಮಾಡಬಹುದೇ?
ಹೌದು, ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಸಲ್ಲಿಸಿದ ನಂತರ ನಿಮ್ಮ ಮೇಲ್ಮನವಿಯನ್ನು ನೀವು ರದ್ದುಮಾಡಬಹುದು. ಒಮ್ಮೆ ನೀವು ರದ್ದುಗೊಳಿಸಿದರೆ, ಮತ್ತೊಮ್ಮೆ ಕ್ಲೇಮ್ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ನನ್ನ ಮೇಲ್ಮನವಿಯನ್ನು ತಿರಸ್ಕರಿಸಿದರೆ ಮತ್ತು ನನ್ನ ವೀಡಿಯೊವನ್ನು ತೆಗೆದುಹಾಕಿದರೆ ನಾನು ಏನು ಮಾಡಬಹುದು?

ನ್ಯಾಯೋಚಿತ ಬಳಕೆಯ ಸಂದರ್ಭಗಳು ಸೇರಿದಂತೆ, ನಿಮ್ಮ ಮೇಲ್ಮನವಿಯನ್ನು ತಪ್ಪಾಗಿ ಅಥವಾ ನಿಮ್ಮ ಕಂಟೆಂಟ್‌ನ ತಪ್ಪಾದ ಗುರುತಿಸುವಿಕೆಯಿಂದಾಗಿ ತಿರಸ್ಕರಿಸಲಾಗಿದೆ ಎಂದು ನಿಮಗೆ ವಿಶ್ವಾಸವಿದ್ದರೆ, ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು. ಪ್ರತಿವಾದಿ ನೋಟಿಫಿಕೇಶನ್ ಎಂಬುದು ಆಪಾದಿತ ಕೃತಿಸ್ವಾಮ್ಯ ಉಲ್ಲಂಘನೆಯ ಕಾರಣದಿಂದ ತೆಗೆದುಹಾಕಲಾದ ವೀಡಿಯೊವನ್ನು YouTube ನಲ್ಲಿ ಮರುಸ್ಥಾಪಿಸಲು ಸಲ್ಲಿಸಲಾಗುವ ಕಾನೂನು ವಿನಂತಿಯಾಗಿದೆ.

ಇತರ ಆಯ್ಕೆಗಳು ಇವುಗಳನ್ನು ಒಳಗೊಂಡಿವೆ:

ನಾನು ಒಂದೇ ಸಮಯದಲ್ಲಿ ವೀಡಿಯೊದ ಮೇಲಿರುವ ಹಲವು ಕ್ಲೇಮ್‌ಗಳ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ, ಅದು ಒಂದಕ್ಕಿಂತ ಹೆಚ್ಚು ಕೃತಿಸ್ವಾಮ್ಯ ಸ್ಟ್ರೈಕ್‌ಗಳಿಗೆ ಕಾರಣವಾಗಬಹುದೇ?
ವೀಡಿಯೊ ಒಂದಕ್ಕಿಂತ ಹೆಚ್ಚು Content ID ಕ್ಲೇಮ್‌ಗಳು ಅಥವಾ ತೆಗೆದುಹಾಕುವಿಕೆ ವಿನಂತಿಗಳನ್ನು ಪಡೆಯಬಹುದು, ಆದರೆ ಒಂದು ಸಮಯದಲ್ಲಿ ಕೇವಲ ಒಂದು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಮಾತ್ರ ಪಡೆಯಬಹುದು.
 

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4960699632659899966
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false