Creator Music ಅರ್ಹತೆ ಮತ್ತು ನಿರ್ಬಂಧಗಳು

Creator Music, ಇದೀಗ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಯು.ಎಸ್. ರಚನೆಕಾರರಿಗೆ ಲಭ್ಯವಿದೆ. ಯು.ಎಸ್. ಹೊರಗಡೆ ಇರುವ YPP ರಚನೆಕಾರರಿಗೆ ವಿಸ್ತರಿಸುವುದು ಇನ್ನೂ ಬಾಕಿಯಿದೆ.

Creator Music ಅರ್ಹತೆ

Creator Music ಅನ್ನು ಬಳಸಲು ಅರ್ಹರಾಗುವುದಕ್ಕಾಗಿ, YouTube ರಚನೆಕಾರರು ಒಂದೋ YouTube ಪಾಲುದಾರ ಕಾರ್ಯಕ್ರಮದಲ್ಲಿರಬೇಕು ಅಥವಾ ಅವರು ಅದಕ್ಕೆ ಅರ್ಹರೆಂದು Google ಸೂಚಿಸಿರಬೇಕು. ಇವುಗಳನ್ನು ಒಳಗೊಂಡಿರುವ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿರದ ಎಲ್ಲಾ YouTube ನೀತಿಗಳನ್ನು ರಚನೆಕಾರರು ಅನುಸರಿಸಬೇಕು:

Creator Music ಸದ್ಯಕ್ಕೆ ಇವರಿಗೆ ಲಭ್ಯವಿಲ್ಲ:

  • ಥಿಯೇಟರ್‌ಗಳಲ್ಲಿ, ಟೆಲಿವಿಷನ್‌ನಲ್ಲಿ ಮತ್ತು/ಅಥವಾ ಓವರ್-ದ-ಟಾಪ್ ಸ್ಟ್ರೀಮಿಂಗ್ ಟೆಲಿವಿಷನ್ ಸೇವೆಗಳಲ್ಲಿ ವಾಣಿಜ್ಯಾತ್ಮಕವಾಗಿ ಬಿಡುಗಡೆಗೊಳಿಸಲಾಗುವ ಕಂಟೆಂಟ್ ಅನ್ನು ಪ್ರಾಥಮಿಕವಾಗಿ ಉತ್ಪಾದಿಸುವ ಕಂಪನಿಗಳು ಅಥವಾ YouTube ರಚನೆಕಾರರು.
  • ಇಂತಹ ಬ್ರ್ಯಾಂಡ್‌ಗಳು, ಸರಕುಗಳು ಮತ್ತು/ಅಥವಾ ಸೇವೆಗಳ ಕುರಿತು ಪ್ರಚಾರ ಮಾಡುವುದಕ್ಕೆ ಮೀಸಲಾಗಿರುವ YouTube ಚಾನಲ್‌ಗಳನ್ನು ಹೊಂದಿರುವ ವಾಣಿಜ್ಯ ಬ್ರ್ಯಾಂಡ್‌ಗಳು.

Creator Music ಗಾಗಿ ಅರ್ಹತೆಯ ಮಾನದಂಡವನ್ನು ಬದಲಿಸುವ ಹಕ್ಕನ್ನು Google ತನ್ನ ಸ್ವಂತ ವಿವೇಚನೆಯ ಮೇರೆಗೆ ಕಾಯ್ದಿರಿಸಿಕೊಂಡಿದೆ.

Creator Music ನಿರ್ಬಂಧಗಳು

ಈ ಕೆಳಗೆ ಪಟ್ಟಿ ಮಾಡಲಾದ ನಿರ್ಬಂಧಗಳು, Creator Music ಟ್ರ್ಯಾಕ್‌ಗಳನ್ನು YouTube ವೀಡಿಯೊಗಳಲ್ಲಿ ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತವೆ. Creator Music ನ ಮೂಲಕ ಪರವಾನಗಿಗಾಗಿ ಲಭ್ಯವಿರುವ ಎಲ್ಲಾ ಟ್ರ್ಯಾಕ್‌ಗಳಿಗೆ ಈ ನಿರ್ಬಂಧಗಳು ಅನ್ವಯಿಸುತ್ತವೆ. ಪ್ರತ್ಯೇಕ ಟ್ರ್ಯಾಕ್‌ಗಳು ತಮ್ಮದೇ ಆದ ಬಳಕೆಯ ವಿವರಗಳನ್ನು ಹೊಂದಿವೆ, ಟ್ರ್ಯಾಕ್‌ಗಳ ಹಕ್ಕುದಾರರು ಇವುಗಳನ್ನು ಸೆಟ್ ಮಾಡಿದ್ದಾರೆ.

ನಿರ್ಬಂಧಿತ ವರ್ಗಗಳು

Creator Music ನಿಂದ ಪರವಾನಗಿ ಪಡೆದಿರುವ ಟ್ರ್ಯಾಕ್‌ಗಳನ್ನು, ಈ ಕೆಳಗಿನ ನಿರ್ಬಂಧಿತ ವರ್ಗಗಳ ಕಂಟೆಂಟ್ ಅನ್ನು ಹೊಂದಿರುವ ವೀಡಿಯೊಗಳಲ್ಲಿ ಬಳಸಲಾಗುವುದಿಲ್ಲ ಎಂಬುದನ್ನು ರಚನೆಕಾರರು ಖಚಿತಪಡಿಸಿಕೊಳ್ಳಬೇಕು:

ವಾಣಿಜ್ಯ ಬಳಕೆ

ಒಂದು ಬ್ರ್ಯಾಂಡ್ ಅಥವಾ ಸೇವೆಯನ್ನು ಅನುಮೋದಿಸಲು ಅಥವಾ ಪ್ರಚಾರ ಮಾಡಲು ಪ್ರಾಥಮಿಕವಾಗಿ ಮೀಸಲಾಗಿರುವ ಕಂಟೆಂಟ್ ಅನ್ನು ರಚಿಸುವುದಕ್ಕಾಗಿ ಆ ಬ್ರ್ಯಾಂಡ್ ಅಥವಾ ಸೇವೆಯಿಂದ ರಚನೆಕಾರರು ಪಾವತಿ ಪಡೆದಿರುವಂತಹ ವೀಡಿಯೊದಲ್ಲಿ Creator Music ಟ್ರ್ಯಾಕ್‌ಗಳನ್ನು ಬಳಸದಂತೆ ರಚನೆಕಾರರನ್ನು ನಿಷೇಧಿಸಲಾಗಿದೆ.

ವಾಣಿಜ್ಯ ಬಳಕೆಯ ನಿರ್ಬಂಧಗಳ ಉದಾಹರಣೆಗಳು

ಅನುಮತಿಸಿರುವುದು: ರಚನೆಕಾರ A ಅವರು ಆಹಾರಕ್ಕೆ ಸಂಬಂಧಿಸಿದ ಕಂಟೆಂಟ್‌ನ ರಚನೆಕಾರರಾಗಿದ್ದಾರೆ ಮತ್ತು ಅವರು ವೀಡಿಯೊದ ಪರಿಚಯದ ಭಾಗವಾಗಿ ಥರ್ಡ್-ಪಾರ್ಟಿ ಬ್ರ್ಯಾಂಡ್ ಪ್ರಾಯೋಜಕರ ಉತ್ಪನ್ನವನ್ನು ಉಲ್ಲೇಖಿಸುವ, 10-ನಿಮಿಷದ ವೀಡಿಯೊವನ್ನು ಅಪ್‌ಲೋಡ್ ಮಾಡುತ್ತಾರೆ. ವೀಡಿಯೊದ ಬಹುತೇಕ ಭಾಗವು, ರಚನೆಕಾರರು ಹೊಸ ರೆಸಿಪಿಯನ್ನು ವಿವರಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ.
ಅನುಮತಿ ಇಲ್ಲದಿರುವುದು: ರಚನೆಕಾರ B ಅವರು, ಸೌಂದರ್ಯಕ್ಕೆ ಸಂಬಂಧಿಸಿದ ಕಂಟೆಂಟ್‌ನ ರಚನೆಕಾರರಾಗಿದ್ದಾರೆ ಮತ್ತು ಹೊಸ ಉತ್ಪನ್ನವನ್ನು ಪ್ರಚಾರ ಮಾಡುವ ಮತ್ತು ವಿಮರ್ಶಿಸುವ ವೀಡಿಯೊವನ್ನು ರಚಿಸಲು ಬ್ರ್ಯಾಂಡ್‌ನಿಂದ ಪಾವತಿ ಪಡೆದಿದ್ದಾರೆ. ರಚನೆಕಾರ B ಅವರು, ಕಂಪನಿಯ ಹೊಸ ಉತ್ಪನ್ನವನ್ನು ಪ್ರಚಾರ ಮಾಡುವುದರ ಮೇಲೆ ಪ್ರಾಥಮಿಕವಾಗಿ ಗಮನ ಕೇಂದ್ರೀಕರಿಸಿರುವ, 10-ನಿಮಿಷದ ವೀಡಿಯೊವನ್ನು ಪ್ರಕಟಿಸುತ್ತಾರೆ.

ಹೆಚ್ಚುವರಿಯಾಗಿ, ಆದಾಯದ ಹಂಚಿಕೆ ಟ್ರ್ಯಾಕ್‌ಗಳನ್ನು ಬಳಸುವ ವೀಡಿಯೊಗಳು YouTube Shopping ಫೀಚರ್‌ಗಳಿಗೆ ಅರ್ಹವಾಗಿರುವುದಿಲ್ಲ. Creator Music ಬಳಸಿಕೊಂಡು ಆದಾಯ ಹಂಚಿಕೊಳ್ಳುವುದು ಅಥವಾ ಅರ್ಹ ಕವರ್ ವೀಡಿಯೊಗಳಿಗೆ ಸಂಬಂಧಿಸಿದ ಆದಾಯ ಹಂಚಿಕೊಳ್ಳುವ ಕುರಿತು ಇನ್ನಷ್ಟು ತಿಳಿಯಿರಿ.

ಬಳಕೆಯ ಮಿತಿಗಳು

Creator Music ನಿಂದ ಟ್ರ್ಯಾಕ್‌ಗಳ ಪರವಾನಗಿ ಪಡೆಯುವ ರಚನೆಕಾರರು ಈ ಕೆಳಗಿನ ಬಳಕೆಯ ಮಿತಿಗಳನ್ನು ಅನುಸರಿಸಬೇಕು:

  • Creator Music ಟ್ರ್ಯಾಕ್‌ಗಳನ್ನು ಮೂಲಭೂತವಾಗಿ ಮಾರ್ಪಡಿಸಬಾರದು (ಉದಾ. ರೀಮಿಕ್ಸ್ ಮಾಡಬಾರದು).
  • ಹೊಸ ಸಾಹಿತ್ಯವನ್ನು ರಚಿಸಬಾರದು ಅಥವಾ ಸಾಹಿತ್ಯವನ್ನು ಇತರ ಭಾಷೆಗಳಿಗೆ ಅನುವಾದಿಸಬಾರದು.
  • Creator Music ಟ್ರ್ಯಾಕ್ ಮತ್ತು ಕಲಾವಿದರು ಅಥವಾ ಹಾಡಿನ ಬರಹಗಾರರನ್ನು ಗುರುತಿಸುವುದನ್ನು ಹೊರತುಪಡಿಸಿ, ಇತರ ಉದ್ದೇಶಗಳಿಗಾಗಿ ಕಲಾವಿದರು ಅಥವಾ ಹಾಡಿನ ಬರಹಗಾರರ ಹೆಸರು ಅಥವಾ ಸಮಾನವಾದ ಮಾಹಿತಿಯನ್ನು ಬಳಸಬಾರದು.
  • Creator Music ಟ್ರ್ಯಾಕ್‌ಗಳಿಂದ ಆರ್ಟ್ ಟ್ರ್ಯಾಕ್ (ಇಡೀ ಹಾಡು ಪ್ಲೇ ಆಗುತ್ತಿರುವಾಗ ಸ್ಥಿರ ಚಿತ್ರ), ವಿಶುವಲೈಜರ್ (ಇಡೀ ಹಾಡು ಪ್ಲೇ ಆಗುತ್ತಿರುವಾಗ ಸರಳ ಪುನರಾವರ್ತಿತ ವಿಶುವಲ್), ಲಿರಿಕ್ ವೀಡಿಯೊ ಅಥವಾ ಕ್ಯಾರಿಯೋಕಿ ವೀಡಿಯೊವನ್ನು ರಚಿಸಬಾರದು.
  • ರಚನೆಕಾರರ ವೀಡಿಯೊದಿಂದ(ಗಳಿಂದ) ಪ್ರತ್ಯೇಕವಾಗಿ Creator Music ಟ್ರ್ಯಾಕ್‌ಗಳನ್ನು ಸಿಗುವಂತೆ ಮಾಡಬಾರದು, ವಿತರಿಸಬಾರದು ಅಥವಾ ಪ್ರದರ್ಶಿಸಬಾರದು (ಉದಾ. Music ಫೈಲ್‌ಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುಮತಿಯಿಲ್ಲ)
  • Creator Music ಟ್ರ್ಯಾಕ್‌ಗಳನ್ನು ಅವಹೇಳನಕಾರಿ ರೀತಿಯಲ್ಲಿ ಬಳಸುವುದು ಅಥವಾ ಕಲಾವಿದರು, ರೆಕಾರ್ಡಿಂಗ್ ಕಂಪನಿ ಅಥವಾ ಹಾಡಿನ ಬರಹಗಾರರನ್ನು ನಕಾರಾತ್ಮಕ ರೀತಿಯಲ್ಲಿ ಬಿತ್ತರಿಸುವುದನ್ನು ಮಾಡಬಾರದು.

ಬಳಕೆಯ ಮಿತಿಗಳ ಉದಾಹರಣೆಗಳು

ಅನುಮತಿ ಇರುವುದು: ರಚನೆಕಾರ A ಅವರು ಒಂದು ಟ್ರ್ಯಾಕ್‌ಗಾಗಿ ಪರವಾನಗಿಯನ್ನು ಖರೀದಿಸುತ್ತಾರೆ ಮತ್ತು ಮೂಲ ಹಾಡನ್ನು ಎಡಿಟ್ ಮಾಡದೆ ತಮ್ಮ ವೀಡಿಯೊದ ಪರಿಚಯಕ್ಕಾಗಿ ಅದರ ಭಾಗವೊಂದನ್ನು ಬಳಸಿಕೊಳ್ಳುತ್ತಾರೆ.

ಅನುಮತಿ ಇಲ್ಲದಿರುವುದು: ರಚನೆಕಾರ B ಅವರು ಒಂದು ಹಾಡಿಗಾಗಿ ಪರವಾನಗಿಯನ್ನು ಖರೀದಿಸುತ್ತಾರೆ ಮತ್ತು ಹಾಡನ್ನು ರೀಮಿಕ್ಸ್ ಮಾಡಲು ಹಾಗೂ ಹೊಸ ಸಾಲುಗಳನ್ನು ಸೇರಿಸಲು ಥರ್ಡ್-ಪಾರ್ಟಿ ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಬಳಸುತ್ತಾರೆ.

ಈ ನಿರ್ಬಂಧಗಳ ಉಲ್ಲಂಘನೆಯು ಪರವಾನಗಿಯನ್ನು ಕೊನೆಗೊಳಿಸಲು ಕಾರಣವಾಗಬಹುದು ಮತ್ತು ಸಂಬಂಧಿತ ವೀಡಿಯೊಗಳು ತೆಗೆದುಹಾಕುವಿಕೆಗೆ ಒಳಪಡಬಹುದು. Creator Music ನಿರ್ಬಂಧಗಳ ಕುರಿತು ಸಂಪೂರ್ಣ ವಿವರಗಳಿಗಾಗಿ Creator Music ಸೇವಾ ನಿಯಮಗಳು ಎಂಬಲ್ಲಿಗೆ ಹೋಗಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9636891178218021588
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false