Creator Music ಬಳಕೆಯ ವಿವರಗಳನ್ನು ಅರ್ಥಮಾಡಿಕೊಳ್ಳಿ

Creator Music, ಇದೀಗ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಯು.ಎಸ್. ರಚನೆಕಾರರಿಗೆ ಲಭ್ಯವಿದೆ. ಯು.ಎಸ್. ಹೊರಗಡೆ ಇರುವ YPP ರಚನೆಕಾರರಿಗೆ ವಿಸ್ತರಿಸುವುದು ಇನ್ನೂ ಬಾಕಿಯಿದೆ.
ಗಮನಿಸಿ: ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು ವೆಬ್ ಬ್ರೌಸರ್‌ನ ಮೂಲಕ ಲಭ್ಯವಿವೆ.

Creator Music ನಲ್ಲಿ ಒಂದು ಟ್ರ್ಯಾಕ್ ಅನ್ನು ಬಳಸಲು ನೀವು ಈ ಕೆಳಗಿನ ಆಯ್ಕೆಗಳನ್ನು ನೋಡಬಹುದು:

  • ಪರವಾನಗಿ ಪಡೆದುಕೊಳ್ಳಿ: ಮಾನಿಟೈಸ್ ಮಾಡುವ ನಿಮ್ಮ ವೀಡಿಯೊದಲ್ಲಿ ಸಂಗೀತವನ್ನು ಬಳಸಲು ಆರಂಭದಲ್ಲೇ ಶುಲ್ಕ ಪಾವತಿಸಿ (ಅಥವಾ ಕೆಲವು ಟ್ರ್ಯಾಕ್‌ಗಳಿಗೆ ಶುಲ್ಕವಿರುವುದಿಲ್ಲ). ಸಂಗೀತವಿಲ್ಲದಿದ್ದರೆ ನಿಮ್ಮ ವೀಡಿಯೊಗಳಿಗೆ ಯಾವ ಶುಲ್ಕ ಅನ್ವಯವಾಗುತ್ತದೆಯೋ, ಅದೇ ಆದಾಯ ಹಂಚಿಕೆಯನ್ನು ಗಳಿಸಿ.

  • ಆದಾಯವನ್ನು ಹಂಚಿಕೊಳ್ಳಿ: ಆರಂಭದಲ್ಲಿ ಶುಲ್ಕ ಪಾವತಿಸಬೇಡಿ ಮತ್ತು ಟ್ರ್ಯಾಕ್‌ನ ಹಕ್ಕುದಾರರೊಂದಿಗೆ ವೀಡಿಯೊದ ಆದಾಯವನ್ನು ವಿಭಜನೆ ಮಾಡಿಕೊಳ್ಳಿ.

ಒಂದು ಹಾಡನ್ನು ಹೇಗೆ ಬಳಸಬಹುದು ಎಂಬುದನ್ನು ವ್ಯಾಖ್ಯಾನಿಸುವ ಬಳಕೆಯ ವಿವರಗಳು, ಟ್ರ್ಯಾಕ್ ಅನ್ನು ಅವಲಂಬಿಸಿ ಭಿನ್ನವಾಗಿರುತ್ತವೆ. ಟ್ರ್ಯಾಕ್‍ನ ಹಕ್ಕುದಾರರು ಟ್ರ್ಯಾಕ್‌ಗಾಗಿ ಬಳಕೆಯ ವಿವರಗಳನ್ನು ನಿರ್ದಿಷ್ಟಪಡಿಸುತ್ತಾರೆ ಮತ್ತು ತಮ್ಮ ವಿವೇಚನೆಯ ಮೇರೆಗೆ ಅವರು ಅದನ್ನು ಬದಲಿಸಬಹುದು.

ನೆನಪಿನಲ್ಲಿಡಿ
 

ಪರವಾನಗಿಗಳಿಗಾಗಿ ಬಳಕೆಯ ವಿವರಗಳು

ಒಂದು ಪರವಾನಗಿಯು, ಇತರರ ಹಕ್ಕುಗಳಿಗೆ ಒಳಪಟ್ಟ ಕಂಟೆಂಟ್ ಅನ್ನು ಬಳಸಲು ಯಾರಿಗಾದರೂ ಕಾನೂನುಬದ್ಧ ಅನುಮತಿಯನ್ನು ನೀಡುತ್ತದೆ. ನೀವು ಒಂದು ಟ್ರ್ಯಾಕ್‌ಗಾಗಿ ಪರವಾನಗಿ ಪಡೆಯುವ ಮೊದಲು, ನೀವು ಪರವಾನಗಿ ಪಡೆಯುತ್ತಿರುವ ಟ್ರ್ಯಾಕ್ ಅನ್ನು ಬಳಸಲು ನಿಮಗೆ ಯಾವ ರೀತಿಯ ಅನುಮತಿಗಳಿವೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಅದರ ಬಳಕೆಯ ವಿವರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಬೆಲೆ

ಸಂಗೀತದ ಹಕ್ಕುಗಳನ್ನು ಹೊಂದಿರುವ ಸಂಗೀತ ಲೇಬಲ್‌ಗಳು ಮತ್ತು ಪ್ರಕಾಶಕರಂತಹ ಸಂಗೀತ ಪಾಲುದಾರರಿಂದ ಸಂಗೀತದ ಪರವಾನಗಿಯನ್ನು ನೇರವಾಗಿ ಪಡೆದುಕೊಳ್ಳಲು Creator Music ರಚನೆಕಾರರಿಗೆ ಅವಕಾಶ ನೀಡುತ್ತದೆ. Creator Music ನಲ್ಲಿ ಪರವಾನಾಗಿ ನೀಡುವುದಕ್ಕಾಗಿ ತಾವು ಒದಗಿಸುವ ಟ್ರ್ಯಾಕ್‌ಗಳಿಗಾಗಿ ಪರವಾನಗಿಯ ಬೆಲೆ ನಿಗದಿಪಡಿಸುವಿಕೆಯೂ ಸೇರಿದಂತೆ ಬಳಕೆಯ ವಿವರಗಳನ್ನು ಸಂಗೀತ ಪಾಲುದಾರರು, ಹಕ್ಕುದಾರರಾಗಿ ಸೆಟ್ ಮಾಡುತ್ತಾರೆ.

ಕೆಲವು ಪರವಾನಗಿಗಳು ಎಲ್ಲಾ ರಚನೆಕಾರರಿಗಾಗಿ ನಿಗದಿತ ಬೆಲೆಯನ್ನು ಹೊಂದಿರುತ್ತವೆ ಮತ್ತು ಇತರ ಟ್ರ್ಯಾಕ್‌ಗಳು, ಚಾನಲ್‌ನ ಗಾತ್ರವನ್ನು ಆಧರಿಸಿ, ಕಸ್ಟಮೈಸ್ ಮಾಡಿದ ಬೆಲೆಯನ್ನು ಹೊಂದಿರಬಹುದು. YouTube ಆಡಿಯೋ ಲೈಬ್ರರಿ ಪರವಾನಗಿಗಳು, ಕ್ರಿಯೇಟಿವ್ ಕಾಮನ್ಸ್ ಪರವಾನಗಿಗಳು ಮತ್ತು ಹಕ್ಕುದಾರರು ಒದಗಿಸುವ ಇತರ ಶುಲ್ಕ-ರಹಿತ ಪರವಾನಗಿಗಳ ಹಾಗೆ, ಕೆಲವು ಪರವಾನಗಿಗಳಿಗೆ ಯಾವ ವೆಚ್ಚವೂ ಇರುವುದಿಲ್ಲ.

ಟ್ರ್ಯಾಕ್‌ನ ಹಕ್ಕುದಾರರ ವಿವೇಚನೆಯ ಮೇರೆಗೆ ಪರವಾನಗಿಗಳ ಬೆಲೆಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಒಂದು ಪರವಾನಗಿಯ ಬೆಲೆ ಬದಲಾದಾಗ, ಯಾವುದೇ ಹಿಂದಿನ ಖರೀದಿಗಳು ಅಥವಾ ಪರವಾನಗಿಯ ಬಳಕೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

ನೀವು ಪರವಾನಗಿಯನ್ನು ಖರೀದಿಸಲು ಬಯಸುವುದಿಲ್ಲ ಎಂದಾದರೆ, ನಿಮ್ಮ ವೀಡಿಯೊ, ಆದಾಯ ಹಂಚಿಕೆ ಬಳಕೆಯ ಅವಶ್ಯಕತೆಗಳನ್ನು ಪೂರೈಸಿದರೆ ನೀವು ಆದಾಯ ಹಂಚಿಕೊಳ್ಳಲು ಆಯ್ಕೆ ಮಾಡಬಹುದು.

ಹಾಡಿನ ಪ್ರಮಾಣ

ಹಾಡಿನ ಪ್ರಮಾಣವು ಹಕ್ಕುದಾರರು ಟ್ರ್ಯಾಕ್‌ನ ಎಷ್ಟು ಪ್ರಮಾಣವನ್ನು ಬಳಸಲು ಅನುಮತಿ ನೀಡುತ್ತಿದ್ದಾರೆ ಎನ್ನುವುದನ್ನು ಉಲ್ಲೇಖಿಸುತ್ತದೆ.

ನೀವು ಪರವಾನಗಿ ಪಡೆಯಲು ಆಯ್ಕೆ ಮಾಡಿಕೊಳ್ಳುವ ಯಾವುದೇ ಪರವಾನಗಿ ನೀಡಬಹುದಾದ ಟ್ರ್ಯಾಕ್‌ಗಾಗಿ, ಯಾವುದೇ ಅವಧಿಯ ವೀಡಿಯೊದಲ್ಲಿ, ನಿಮಗೆ ಬೇಕಾದಷ್ಟು ಪ್ರಮಾಣದಲ್ಲಿ ಹಾಡನ್ನು ನೀವು ಬಳಸಿಕೊಳ್ಳಬಹುದು.

ನೀವು ಪರವಾನಗಿಯನ್ನು ಖರೀದಿಸಲು ಬಯಸದ, ಪರವಾನಗಿ ನೀಡಬಹುದಾದ ಟ್ರ್ಯಾಕ್‌ಗಳಿಗಾಗಿ, 3 ನಿಮಿಷಗಳಿಗಿಂತ ದೀರ್ಘವಾದ ವೀಡಿಯೊದಲ್ಲಿ ನೀವು ಬಳಸುವ ಹಾಡಿನ ಪ್ರಮಾಣವು 30 ಸೆಕೆಂಡ್‌ಗಳಿಗಿಂತ ಕಡಿಮೆಯಾಗಿದ್ದರೆ ಆದಾಯವನ್ನು ಹಂಚಿಕೊಳ್ಳಿ. ಆದಾಯ ಹಂಚಿಕೆ ಬಳಕೆಯ ನಿಯಮಗಳ ಕುರಿತು ಇನ್ನಷ್ಟು ತಿಳಿಯಿರಿ.

ಬೆಂಬಲಿತ ಪ್ರದೇಶಗಳು
ಬೆಂಬಲಿತ ಪ್ರದೇಶಗಳೆಂದರೆ, ಟ್ರ್ಯಾಕ್‌ನ ಹಕ್ಕುದಾರರು ಟ್ರ್ಯಾಕ್ ಅನ್ನು ಬಳಸಲು ಅನುಮತಿ ನೀಡುವ ಮತ್ತು ಪರವಾನಗಿಯು ಅನ್ವಯಿಸುವ ದೇಶಗಳು/ಪ್ರಾಂತ್ಯಗಳು.
Creator Music ನಲ್ಲಿ ಇರುವ ನಿರ್ದಿಷ್ಟ ಟ್ರ್ಯಾಕ್‌ಗಳು ನಿರ್ದಿಷ್ಟ ದೇಶಗಳು/ಪ್ರಾಂತ್ಯಗಳಲ್ಲಿ ಮಾತ್ರ ಲಭ್ಯವಿರಬಹುದು. ಈ ಸಂದರ್ಭದಲ್ಲಿ, ಟ್ರ್ಯಾಕ್‌ನ ಬಳಕೆಯ ವಿವರಗಳಲ್ಲಿ ಬೆಂಬಲಿತ ಪ್ರದೇಶಗಳು ಎಂಬುದರ ಪಕ್ಕದಲ್ಲಿ ನಿರ್ಬಂಧಿತ ಎಂಬುದನ್ನು ನೀವು ಕಾಣುವಿರಿ.
ಬೆಂಬಲಿತ ಪ್ರದೇಶಗಳನ್ನು ಎಲ್ಲಾ ಎಂದು ಪಟ್ಟಿ ಮಾಡಿದ್ದರೆ ಮತ್ತು ನೀವು ಟ್ರ್ಯಾಕ್ ಅನ್ನು ಆದಾಯ ಹಂಚಿಕೆ ಬಳಕೆಯ ನಿಯಮಗಳ ಅಡಿಯಲ್ಲಿ ಬಳಸಲು ನಿರ್ಧರಿಸಿದರೆ (ಮತ್ತು ಅದಕ್ಕಾಗಿ ಪರವಾನಗಿ ಪಡೆಯದಿರಲು ನಿರ್ಧರಿಸಿದರೆ), ಟ್ರ್ಯಾಕ್‌ನ ಬಳಕೆಯು ಆದಾಯ ಹಂಚಿಕೆಯು ಲಭ್ಯವಿರುವ ದೇಶಗಳು/ಪ್ರಾಂತ್ಯಗಳಿಗೆ ಮಾತ್ರ ನಿರ್ಬಂಧಿತವಾಗಬಹುದು. ನಿಮ್ಮ ವೀಡಿಯೊ ಎಲ್ಲಿ ಆದಾಯ ಹಂಚಿಕೊಳ್ಳುತ್ತಿದೆ ಎಂದು ನೋಡಲು ನಿಮ್ಮ ವೀಡಿಯೊದ ಅದಾಯ ಹಂಚಿಕೆ ಸ್ಥಿತಿಯನ್ನು ನೋಡಿ.
ಅವಧಿ ಮುಕ್ತಾಯ

ನೀವು ಪರವಾನಗಿಯನ್ನು ಖರೀದಿಸಿದಾಗ, ನಿಮ್ಮ ಪರವಾನಗಿ ಎಷ್ಟು ಸಮಯದವರೆಗೆ ಸಕ್ರಿಯವಾಗಿರುತ್ತದೆ ಎಂಬುದನ್ನು ನಿಮ್ಮ ಪರವಾನಗಿಯ ಅವಧಿ ಮುಕ್ತಾಯವು ತಿಳಿಸುತ್ತದೆ. Creator Music ಸ್ಟೋರ್‌ನಲ್ಲಿರುವ ಪ್ರತಿ ಟ್ರ್ಯಾಕ್ ಸಹ, ಹಕ್ಕುದಾರರು ಸೆಟ್ ಮಾಡಿರುವ ಬೇರೆ ಬೇರೆ ನಿಯಮಗಳನ್ನು ಹೊಂದಿದೆ, ಆದ್ದರಿಂದ ನಿಮ್ಮ ಪರವಾನಗಿಯ ಅವಧಿಯು, ನೀವು ಪರವಾನಗಿ ಪಡೆದಿರುವ ಟ್ರ್ಯಾಕ್ ಅನ್ನು ಅವಲಂಬಿಸಿ ವ್ಯತ್ಯಾಸವಾಗುತ್ತದೆ.

Creator Music ಮಾರ್ಕೆಟ್‌ಪ್ಲೇಸ್‌ನಿಂದ ಖರೀದಿಸಿದ ಕೂಡಲೇ ನಿಮ್ಮ ಪರವಾನಗಿಯ ಅವಧಿ ಆರಂಭವಾಗುತ್ತದೆ. ಅದರ ಅವಧಿ ಮುಗಿದ ಬಳಿಕ, ಆ ಟ್ರ್ಯಾಕ್ ಅನ್ನು ಹೊಂದಿರುವ ವೀಡಿಯೊಗಳು ಈ ಕೆಳಗಿನವುಗಳಿಗೆ ಒಳಪಟ್ಟಿರಬಹುದು:

  • ಅಪ್‌ಡೇಟ್ ಮಾಡಲಾದ ಮಾನಿಟೈಸೇಶನ್ ನಿಯಮಗಳು
  • ವೀಡಿಯೊ ಗೋಚರತೆಯಲ್ಲಿ ಬದಲಾವಣೆಗಳು
  • ಹೊಸ ಕೃತಿಸ್ವಾಮ್ಯ ಆರೋಪಗಳು

ನಿಮ್ಮ ವೀಡಿಯೊದ ಆದಾಯದಲ್ಲಿ ಅಡಚಣೆ ಉಂಟಾಗುವುದನ್ನು ತಡೆಗಟ್ಟಲು, ನೀವು ಖರೀದಿಸಿರುವ ಟ್ರ್ಯಾಕ್‌ಗಳಿಗಾಗಿ ಪರವಾನಗಿಗಳನ್ನು ನವೀಕರಿಸಲು ನಿಮಗೆ ಸಾಧ್ಯವಾಗಬಹುದು.

ವೀಡಿಯೊ ಮಾನಿಟೈಸೇಶನ್
ನೀವು Creator Music ನಿಂದ ಒಂದು ಟ್ರ್ಯಾಕ್‌ಗಾಗಿ ಪರವಾನಗಿ ಪಡೆದುಕೊಂಡಾಗ ಮತ್ತು ಅದನ್ನು ವೀಡಿಯೊದಲ್ಲಿ ಬಳಸಿದಾಗ, ನಿಮ್ಮ ವೀಡಿಯೊದಲ್ಲಿರುವ ಎಲ್ಲಾ ಥರ್ಡ್-ಪಾರ್ಟಿ ಕಂಟೆಂಟ್‌ಗಾಗಿ ಪರವಾನಗಿ ಪಡೆದುಕೊಂಡಿದ್ದರೆ, (ಅಥವಾ ನಿಮ್ಮ ವೀಡಿಯೊದಲ್ಲಿರುವ, ಪರವಾನಗಿ-ರಹಿತ ಎಲ್ಲಾ ಥರ್ಡ್-ಪಾರ್ಟಿ ಕಂಟೆಂಟ್ ಅನ್ನು ಬಳಸಲು ಅಗತ್ಯವಿರುವ ಹಕ್ಕುಗಳನ್ನು ನೀವು ಹೊಂದಿದ್ದರೆ) ಆ ವೀಡಿಯೊವನ್ನು ಸಂಪೂರ್ಣವಾಗಿ ಮಾನಿಟೈಸ್ ಮಾಡಬಹುದು.
ಪರವಾನಗಿ ಪಡೆದಿರುವ ಟ್ರ್ಯಾಕ್‌ಗಳನ್ನು ಬಳಸುವ ವೀಡಿಯೊಗಳು YouTube ವೀಕ್ಷಣೆ ಪುಟದಲ್ಲಿನ ವೀಕ್ಷಣೆಗಳಿಂದ ಆದಾಯ ಗಳಿಸಬಹುದೇ ಹೊರತು Shorts ಅಥವಾ ಲೈವ್ ಸ್ಟ್ರೀಮ್‌ಗಳಿಂದ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ನೀವು ಆದಾಯ ಹಂಚಿಕೆ ಬಳಕೆಯ ನಿಯಮಗಳ ಅಡಿಯಲ್ಲಿ ಟ್ರ್ಯಾಕ್ ಅನ್ನು ಬಳಸಲು (ಮತ್ತು ಅದಕ್ಕಾಗಿ ಪರವಾನಗಿ ಪಡೆಯದಿರಲು) ನಿರ್ಧರಿಸಿದರೆ, ಮಾನಿಟೈಸೇಶನ್ ಅನ್ನು ಟ್ರ್ಯಾಕ್‌ನ ಹಕ್ಕುದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ಆದಾಯ ಹಂಚಿಕೆಯು ಲಭ್ಯವಿರುವ ದೇಶಗಳು/ಪ್ರಾಂತ್ಯಗಳಿಗೆ ನಿರ್ಬಂಧಿತವಾಗಬಹುದು. ನಿಮ್ಮ ವೀಡಿಯೊ ಎಲ್ಲಿ ಆದಾಯ ಹಂಚಿಕೊಳ್ಳುತ್ತಿದೆ ಎನ್ನುವುದನ್ನು ನೋಡಲು, ನಿಮ್ಮ ವೀಡಿಯೊದ ಅದಾಯ ಹಂಚಿಕೆ ಸ್ಥಿತಿಯನ್ನು ನೀವು ನೋಡಬಹುದು.
ಕಂಟೆಂಟ್ ಪ್ರಕಾರ
Creator Music ನ ಮೂಲಕ ಪರವಾನಗಿ ಪಡೆಯಲು ಅಥವಾ ಆದಾಯ ಹಂಚಿಕೊಳ್ಳಲು ಲಭ್ಯವಿರುವ ಟ್ರ್ಯಾಕ್‌ಗಳನ್ನು ಲಾಂಗ್-ಫಾರ್ಮ್ ವೀಡಿಯೊಗಳಲ್ಲಿ ಮಾತ್ರ ಬಳಸಬಹುದೇ ಹೊರತು Shorts ಅಥವಾ ಲೈವ್ ಸ್ಟ್ರೀಮ್‌ಗಳಲ್ಲಿ ಅಲ್ಲ. Shorts ನಲ್ಲಿ ಆದಾಯ ಹಂಚಿಕೊಳ್ಳುವ ಕುರಿತು ಇನ್ನಷ್ಟು ತಿಳಿಯಲು, Shorts ನೊಂದಿಗೆ ಆ್ಯಡ್ಸ್ ಆದಾಯ ಎಂಬಲ್ಲಿಗೆ ಹೋಗಿ.
ಪರವಾನಗಿ ಬಳಕೆಯ ಕುರಿತು ಇತರ ವಿವರಗಳು
  • YouTube ನಲ್ಲಿ ಅಪ್‌ಲೋಡ್ ಮಾಡಲಾದ ಅನೇಕ ವೀಡಿಯೊಗಳಲ್ಲಿ ಬಳಸುವುದಕ್ಕಾಗಿ YouTube ಆಡಿಯೋ ಲೈಬ್ರರಿ ಪರವಾನಗಿಗಳು ಮಾತ್ರ ಮಾನ್ಯವಾಗಿವೆ. ಇತರ ಎಲ್ಲಾ Creator Music ಪಾವತಿಸಿದ ಪರವಾನಗಿಗಳು YouTube ಗೆ ಅಪ್‌ಲೋಡ್ ಮಾಡಲಾದ ಒಂದೇ ವೀಡಿಯೊದಲ್ಲಿ ಬಳಸಲು ಮಾತ್ರ ಮಾನ್ಯವಾಗಿವೆ. 
  • Creator Music ಪರವಾನಗಿಗಳನ್ನು ಇತರ ಪ್ಲ್ಯಾಟ್‌ಫಾರ್ಮ್‌ಗಳಿಗೆ ಅಥವಾ ಇತರ YouTube ಚಾನಲ್‌ಗಳಿಗೆ ವರ್ಗಾಯಿಸುವಂತಿಲ್ಲ. Creator Music ಪರವಾನಗಿಗಳನ್ನು, ಪ್ರಕಟಿಸಲಾದ ವೀಡಿಯೊದಲ್ಲಿ ಈಗಾಗಲೇ ಬಳಸಿರದ ಹೊರತು ಒಂದೇ YouTube ಚಾನಲ್‌ನ ಇತರ ವೀಡಿಯೊಗಳಿಗೆ ವರ್ಗಾಯಿಸಬಹುದು.
  • ಪರವಾನಗಿ ಪಡೆದ ಸಂಗೀತವನ್ನು ವೀಡಿಯೊಗಳಲ್ಲಿ ಹೇಗೆ ಬಳಸಬಹುದು ಎಂಬ ಕುರಿತಾಗಿಯೂ ನಿರ್ಬಂಧಗಳಿವೆ. ಹೆಚ್ಚಿನ ಮಾಹಿತಿಗಾಗಿ, Creator Music ಅರ್ಹತೆ ಹಾಗೂ ನಿರ್ಬಂಧಗಳು ಎಂಬಲ್ಲಿಗೆ ಹೋಗಿ.

ಆದಾಯ ಹಂಚಿಕೆಗಾಗಿ ಬಳಕೆಯ ವಿವರಗಳು

ನಿಮ್ಮ ವೀಡಿಯೊದಲ್ಲಿ ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್ ಅನ್ನು ನೀವು ಬಳಸಿದರೆ, ಟ್ರ್ಯಾಕ್‌ನ ಹಕ್ಕುದಾರರೊಂದಿಗೆ ನೀವು ವೀಡಿಯೊದ ಆದಾಯವನ್ನು ಹಂಚಿಕೊಳ್ಳಬಹುದು ಎಂದು ಅರ್ಥ. ನೀವು ಆದಾಯ ಹಂಚಿಕೆಯನ್ನು ಪ್ರಾರಂಭಿಸುವ ಮೊದಲು, ಟ್ರ್ಯಾಕ್ ಅನ್ನು ಬಳಸಲು ನಿಮಗೆ ಯಾವ ಪ್ರಕಾರದ ಅನುಮತಿಗಳಿವೆ ಎಂಬುದನ್ನು ತಿಳಿದುಕೊಳ್ಳಲು, ಟ್ರ್ಯಾಕ್‌ನ ಬಳಕೆಯ ವಿವರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ಆದಾಯ ಹಂಚಿಕೆ ಬಳಕೆಯ ಅವಶ್ಯಕತೆಗಳು

Creator Music ದಿಂದ ಆದಾಯ ಹಂಚಿಕೆಯ ಟ್ರ್ಯಾಕ್‌ಗಳನ್ನು ಬಳಸುವ ವೀಡಿಯೊಗಳು, ಆದಾಯವನ್ನು ಹಂಚಿಕೊಳ್ಳುವುದಕ್ಕೆ ಅರ್ಹತೆ ಪಡೆಯಲು ಈ ಬಳಕೆಯ ಅವಶ್ಯಕತೆಗಳನ್ನು ಪೂರೈಸಬೇಕು:

  • ಟ್ರ್ಯಾಕ್ ಮತ್ತು ವೀಡಿಯೊದ ಅವಧಿ: ವೀಡಿಯೊ, ಸೂಕ್ತವಾದ ಉದ್ದದ ವೀಡಿಯೊದಲ್ಲಿ ಸೂಕ್ತವಾದ ಟ್ರ್ಯಾಕ್ ಅನ್ನು ಬಳಸುತ್ತದೆ:
    • ಟ್ರ್ಯಾಕ್‌ಗಾಗಿ ಪರವಾನಗಿ ಪಡೆಯಬಹುದಾಗಿದ್ದರೆ, ಆದರೆ ನೀವು ಪರವಾನಗಿ ಖರೀದಿಸಲು ಬಯಸುವುದಿಲ್ಲ ಎಂದಾದರೆ, 3 ನಿಮಿಷಗಳಿಗಿಂತ ಹೆಚ್ಚು ದೀರ್ಘವಿರುವ ವೀಡಿಯೊದಲ್ಲಿ 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯವರೆಗೆ ಟ್ರ್ಯಾಕ್ ಅನ್ನು ಬಳಸುವ ಮೂಲಕ ನೀವು ಆದಾಯವನ್ನು ಹಂಚಿಕೊಳ್ಳಬಹುದು.
    • ಟ್ರ್ಯಾಕ್‌ಗಾಗಿ ಪರವಾನಗಿ ಪಡೆಯಲು ಸಾಧ್ಯವಿಲ್ಲದಿದ್ದರೆ, ಆದರೆ ಅದು ಆದಾಯ ಹಂಚಿಕೆಗೆ ಅರ್ಹವಾಗಿದೆ ಎಂದಾದರೆ, ಯಾವುದೇ ಅವಧಿಯ ವೀಡಿಯೊದಲ್ಲಿ ನಿಮಗೆ ಬೇಕಾದಷ್ಟು ಟ್ರ್ಯಾಕ್‌ನ ಪ್ರಮಾಣವನ್ನು ಬಳಸಿಕೊಳ್ಳುವ ಮೂಲಕ ನೀವು ಆದಾಯವನ್ನು ಹಂಚಿಕೊಳ್ಳಬಹುದು.
  • ಮಾನಿಟೈಸೇಶನ್ ಸಮಸ್ಯೆಗಳಿರಬಾರದು: ವೀಡಿಯೊದಲ್ಲಿ ಮಾನಿಟೈಸೇಶನ್ ಸಮಸ್ಯೆಗಳಿರಬಾರದು, ಉದಾಹರಣೆಗೆ:
  • ಲೈವ್ ಸ್ಟ್ರೀಮ್‌ಗಳು ಅಥವಾ Shorts ಆಗಿರಬಾರದು: ವೀಡಿಯೊ, ಒಂದು ಲೈವ್ ಸ್ಟ್ರೀಮ್ ಅಥವಾ Short ಆಗಿರಬಾರದು. Shorts ಆದಾಯ ಹಂಚಿಕೆಯ ಕುರಿತು ತಿಳಿದುಕೊಳ್ಳಿ.
ಬಳಕೆಯ ಅವಶ್ಯಕತೆಗಳನ್ನು ಅನುಸರಿಸದಿದ್ದರೆ, ನಿಮ್ಮ ವೀಡಿಯೊ Content ID ಕ್ಲೈಮ್ ಅಥವಾ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸ್ವೀಕರಿಸಬಹುದು, ಇದರಿಂದ ಮಾನಿಟೈಸೇಶನ್ ನಿಷ್ಕ್ರಿಯವಾಗಬಹುದು ಅಥವಾ ನಿಮ್ಮ ವೀಡಿಯೊ ನಿರ್ಬಂಧಿತವಾಗಬಹುದು.

ಬಳಕೆಯ ಅವಶ್ಯಕತೆಗಳು ಹಕ್ಕುಗಳನ್ನು ಹೊಂದಿರುವವರ ವಿವೇಚನೆಯನ್ನು ಆಧರಿಸಿ ಬದಲಿಸಬಹುದು ಎಂಬುದನ್ನು ನೆನಪಿಡಿ. ಉದಾಹರಣೆಗೆ, ಆದಾಯ ಹಂಚಿಕೆ ಮಾಡಿಕೊಳ್ಳುವ ಟ್ರ್ಯಾಕ್ ಅನ್ನು ಬಳಸುವ ವೀಡಿಯೊವನ್ನು ನೀವು ಅಪ್‌ಲೋಡ್ ಮಾಡಿದ ನಂತರ, ಹಕ್ಕುಗಳನ್ನು ಹೊಂದಿರುವವರು ಆನಂತರ ಆ ಟ್ರ್ಯಾಕ್‌ಗಾಗಿ ಮಾನಿಟೈಸೇಶನ್ ಅನ್ನು ನಿಷ್ಕ್ರಿಯಗೊಳಿಸಬಹುದು, ಇದರಿಂದ ನಿಮ್ಮ ವೀಡಿಯೊಗಾಗಿ ಮಾನಿಟೈಸೇಶನ್ ನಿಷ್ಕ್ರಿಯವಾಗುತ್ತದೆ. ಬಳಕೆಯ ನಿಯಮಗಳಲ್ಲಿನ ಬದಲಾವಣೆಗಳು ನಿರ್ದಿಷ್ಟ ಪ್ರಾಂತ್ಯಗಳಲ್ಲಿ ಅಥವಾ ಎಲ್ಲಾ ಪ್ರಾಂತ್ಯಗಳಲ್ಲಿ ಅನ್ವಯಿಸಬಹುದು. 

ಹಾಡಿನ ಪ್ರಮಾಣ

ಹಾಡಿನ ಪ್ರಮಾಣವು ಹಕ್ಕುದಾರರು ಟ್ರ್ಯಾಕ್‌ನ ಎಷ್ಟು ಪ್ರಮಾಣವನ್ನು ಬಳಸಲು ಅನುಮತಿ ನೀಡುತ್ತಿದ್ದಾರೆ ಎನ್ನುವುದನ್ನು ಉಲ್ಲೇಖಿಸುತ್ತದೆ.

ಆದಾಯ ಹಂಚಿಕೆ ಟ್ರ್ಯಾಕ್‌ಗಳಿಗಾಗಿ , ಯಾವುದೇ ಅವಧಿಯ ವೀಡಿಯೊದಲ್ಲಿ, ನಿಮಗೆ ಬೇಕಾದಷ್ಟು ಪ್ರಮಾಣದ ಹಾಡನ್ನು ನೀವು ಬಳಸಿಕೊಳ್ಳಬಹುದು.

ನೀವು ಪರವಾನಗಿಯನ್ನು ಖರೀದಿಸಲು ಬಯಸದ, ಪರವಾನಗಿ ನೀಡಬಹುದಾದ ಟ್ರ್ಯಾಕ್‌ಗಳಿಗಾಗಿ, 3 ನಿಮಿಷಗಳಿಗಿಂತ ದೀರ್ಘವಾದ ವೀಡಿಯೊದಲ್ಲಿ ನೀವು ಬಳಸುವ ಹಾಡಿನ ಪ್ರಮಾಣವು 30 ಸೆಕೆಂಡ್‌ಗಳಿಗಿಂತ ಕಡಿಮೆಯಾಗಿದ್ದರೆ ಆದಾಯವನ್ನು ಹಂಚಿಕೊಳ್ಳಿ. ಆದಾಯ ಹಂಚಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಬೆಂಬಲಿತ ಪ್ರದೇಶಗಳು
ಬೆಂಬಲಿತ ಪ್ರದೇಶಗಳೆಂದರೆ, ಟ್ರ್ಯಾಕ್‌ನ ಬಳಕೆಯು ಆದಾಯ ಗಳಿಸಲು ಅರ್ಹವಾಗಿರುವ ದೇಶಗಳು/ಪ್ರಾಂತ್ಯಗಳು. ಟ್ರ್ಯಾಕ್‌ನ ಹಕ್ಕುದಾರರು ಟ್ರ್ಯಾಕ್‌ನ ಹಕ್ಕನ್ನು ಹೊಂದಿರುವ ಮತ್ತು ಆದಾಯ ಹಂಚಿಕೆಗಾಗಿ ಟ್ರ್ಯಾಕ್ ಅನ್ನು ಲಭ್ಯಗೊಳಿಸಲು ಆಯ್ಕೆ ಮಾಡಿರುವ ದೇಶಗಳು/ಪ್ರಾಂತ್ಯಗಳು.
Creator Music ನಲ್ಲಿ ಇರುವ ನಿರ್ದಿಷ್ಟ ಟ್ರ್ಯಾಕ್‌ಗಳು ನಿರ್ದಿಷ್ಟ ದೇಶಗಳು/ಪ್ರಾಂತ್ಯಗಳಲ್ಲಿ ಮಾತ್ರ ಲಭ್ಯವಿರಬಹುದು. ಈ ಸಂದರ್ಭದಲ್ಲಿ, ಟ್ರ್ಯಾಕ್‌ನ ಬಳಕೆಯ ವಿವರಗಳಲ್ಲಿ ಬೆಂಬಲಿತ ಪ್ರದೇಶಗಳು ಎಂಬುದರ ಪಕ್ಕದಲ್ಲಿ ನಿರ್ಬಂಧಿತ ಎಂಬುದನ್ನು ನೀವು ಕಾಣುವಿರಿ.
ನಿಮ್ಮ ವೀಡಿಯೊ ಎಲ್ಲಿ ಆದಾಯ ಹಂಚಿಕೊಳ್ಳುತ್ತಿದೆ ಎಂದು ನೋಡಲು ನಿಮ್ಮ ವೀಡಿಯೊದ ಅದಾಯ ಹಂಚಿಕೆ ಸ್ಥಿತಿಯನ್ನು ನೋಡಿ.
ವೀಡಿಯೊ ಮಾನಿಟೈಸೇಶನ್

Creator Music ಮೂಲಕ, ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್‌ಗಳನ್ನು ದಿರ್ಘಾವಧಿಯ ವೀಡಿಯೊದಲ್ಲಿ ಬಳಸಿದರೆ, ಈ ಕೆಳಗಿನ ಉದಾಹರಣೆಗಳಲ್ಲಿ ತೋರಿಸಿರುವಂತೆ ಸಂಗೀತ ಹಕ್ಕುಗಳನ್ನು ಕ್ಲಿಯರ್ ಮಾಡುವ ವೆಚ್ಚಗಳನ್ನು ಭರಿಸುವುದಕ್ಕಾಗಿ ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯನ್ನು ಸರಿಹೊಂದಿಸಲಾಗುತ್ತದೆ. ಇದು ಇವುಗಳನ್ನು ಅವಲಂಬಿಸಿರುತ್ತದೆ:

  • ಬಳಸಲಾಗಿರುವ ಟ್ರ್ಯಾಕ್‌ಗಳು: ರಚನೆಕಾರರು ತಮ್ಮ ವೀಡಿಯೊದಲ್ಲಿ ಎಷ್ಟು ಅರ್ಹ ಆದಾಯ ಹಂಚಿಕೆ ಟ್ರ್ಯಾಕ್‌ಗಳನ್ನು ಬಳಸುತ್ತಾರೆ (ಕೆಳಗಿನ ಉದಾಹರಣೆಗಳನ್ನು ನೋಡಿ).
  • ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು: ಕಾರ್ಯನಿರ್ವಹಣೆಯ ಹಕ್ಕುಗಳು ಸೇರಿದಂತೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳನ್ನು ಭರಿಸುವುದಕ್ಕಾಗಿ ಕಡಿತ. ಈ ಕಡಿತವು ಗರಿಷ್ಠ 5% ವರೆಗೆ ಇರಬಹುದು ಮತ್ತು ಆದಾಯ ಹಂಚಿಕೆಗೆ ಅರ್ಹವಾಗಿರುವ Creator Music ಟ್ರ್ಯಾಕ್‌ಗಳಾದ್ಯಂತ ಈ ಹೆಚ್ಚುವರಿ ಸಂಗೀತ ಹಕ್ಕುಗಳ ಸಂಯೋಜಿತ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.
ಆದಾಯ ಹಂಚಿಕೆ ಲೆಕ್ಕಾಚಾರಗಳ ಉದಾಹರಣೆಗಳು

ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್‌ನ ಬಳಕೆ

ಉದಾಹರಣೆ: ರಚನೆಕಾರರು ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 1 ಆದಾಯ ಹಂಚಿಕೆ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯಲ್ಲಿ ಅರ್ಧ ಭಾಗವನ್ನು (27.5%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2.5% ಆಗಬಹುದು.

ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 25% (27.5% - 2.5%) ಗಳಿಸುತ್ತಾರೆ.

 
ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್‌ನ ಬಳಕೆ
ಉದಾಹರಣೆ ಆದಾಯ ಹಂಚಿಕೆ: 55% ÷ 2 27.5%
ಉದಾಹರಣೆ ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು - 2.5%
ಉದಾಹರಣೆ ಒಟ್ಟು ಆದಾಯ 25%

ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್‌ನ ಬಳಕೆ

ಉದಾಹರಣೆ: ಕ್ರಿಯೇಟರ್ ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯ 1/3 ಭಾಗವನ್ನು (18.33%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2% ಆಗಬಹುದು.

ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 16.33% ಭಾಗವನ್ನು (18.33% - 2%) ಗಳಿಸುತ್ತಾರೆ.

 
ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್‌ನ ಬಳಕೆ
ಉದಾಹರಣೆ ಆದಾಯ ಹಂಚಿಕೆ: 55% ÷ 3 18.33%
ಉದಾಹರಣೆ ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು - 2.5%
ಉದಾಹರಣೆ ಒಟ್ಟು ಆದಾಯ 15.83%
ಕಂಟೆಂಟ್ ಪ್ರಕಾರ
Creator Music ನ ಮೂಲಕ ಪರವಾನಗಿ ಪಡೆಯಲು ಅಥವಾ ಆದಾಯ ಹಂಚಿಕೊಳ್ಳಲು ಲಭ್ಯವಿರುವ ಟ್ರ್ಯಾಕ್‌ಗಳನ್ನು ಲಾಂಗ್-ಫಾರ್ಮ್ ವೀಡಿಯೊಗಳಲ್ಲಿ ಮಾತ್ರ ಬಳಸಬಹುದೇ ಹೊರತು Shorts ಅಥವಾ ಲೈವ್ ಸ್ಟ್ರೀಮ್‌ಗಳಲ್ಲಿ ಅಲ್ಲ. Shorts ನಲ್ಲಿ ಆದಾಯ ಹಂಚಿಕೊಳ್ಳುವ ಕುರಿತು ಇನ್ನಷ್ಟು ತಿಳಿಯಲು, Shorts ನೊಂದಿಗೆ ಆ್ಯಡ್ಸ್ ಆದಾಯ ಎಂಬಲ್ಲಿಗೆ ಹೋಗಿ.

 

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8563266275669428929
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false