ಹ್ಯಾಂಡಲ್‌ಗಳ ಅವಲೋಕನ

YouTube ನಲ್ಲಿ ರಚನೆಕಾರರನ್ನು ಹುಡುಕಲು ಮತ್ತು ಅವರ ಜೊತೆಗೆ ಸಂಪರ್ಕ ಸಾಧಿಸಲು ಹ್ಯಾಂಡಲ್‌ಗಳು ಒಂದು ಮಾರ್ಗವಾಗಿದೆ. ಹ್ಯಾಂಡಲ್‌ಗಳು ವಿಶಿಷ್ಟವಾಗಿರುತ್ತವೆ ಮತ್ತು ಚಿಕ್ಕ ಚಾನಲ್ ಗುರುತಿಸುವಿಕೆಗಳು ಚಾನಲ್ ಹೆಸರುಗಳಿಂದ ಭಿನ್ನವಾಗಿರುತ್ತವೆ ಮತ್ತು ಅವುಗಳು "@" ಚಿಹ್ನೆಯ ಮೂಲಕ ಪ್ರಾರಂಭವಾಗುತ್ತವೆ. ಉದಾಹರಣೆಗೆ, @youtubecreators.

ಎಲ್ಲಾ ಚಾನಲ್‌ಗಳು ಸಂಯೋಜಿತ ಹ್ಯಾಂಡಲ್ ಅನ್ನು ಹೊಂದಿದ್ದು, ಅದನ್ನು ಕ್ರಿಯೇಟರ್‌ಗಳು ಮತ್ತು ವೀಕ್ಷಕರಂತಹ ಇತರ ಬಳಕೆದಾರರನ್ನು ಹುಡುಕಲು ಮತ್ತು ಅವರೊಂದಿಗೆ ಸಂವಹನ ನಡೆಸಲು ಬಳಸಬಹುದು. ನಿಮ್ಮ ಹ್ಯಾಂಡಲ್ ಸ್ವಯಂಚಾಲಿತವಾಗಿ ನಿಮ್ಮ ಚಾನಲ್‌ಗೆ ಹೊಸ YouTube URL ಆಗುತ್ತದೆ, ಅದು ನಿಮ್ಮನ್ನು ಅನ್ವೇಷಿಸಲು ಜನರಿಗೆ ಸುಲಭವಾಗಿಸುತ್ತದೆ. ಉದಾಹರಣೆಗೆ, youtube.com/@youtubecreators. ಜನರು YouTube ನಲ್ಲಿ ಇಲ್ಲದಿರುವಾಗ, ಅವರನ್ನು ನಿಮ್ಮ ಚಾನಲ್‌ಗೆ ನಿರ್ದೇಶಿಸಲು ನೀವು ಈ URL ಅನ್ನು ಬಳಸಬಹುದು. ಪ್ರತಿ ಚಾನಲ್ ಕೇವಲ ಒಂದು ಹ್ಯಾಂಡಲ್ ಅನ್ನು ಮಾತ್ರ ಹೊಂದಿರಬಹುದು.

ಕಾಮೆಂಟ್‌ಗಳು, ಪ್ರಸ್ತಾಪಗಳು ಮತ್ತು Shorts ನಂತಹ ಸ್ಥಳಗಳಲ್ಲಿ ನೀವು ಹ್ಯಾಂಡಲ್‌ಗಳನ್ನು ನೋಡುತ್ತೀರಿ. ಕಾಲಾನಂತರದಲ್ಲಿ ನಿಮ್ಮ ಹ್ಯಾಂಡಲ್ ಹೆಚ್ಚಿನ ಸ್ಥಳಗಳಲ್ಲಿ ತೋರಿಸುತ್ತದೆ. ನಿಮ್ಮ ಚಾನಲ್ ಅನ್ನು ಪ್ರಚಾರ ಮಾಡಲು ನೀವು YouTube ನ ಹೊರಗೆ ನಿಮ್ಮ ಹ್ಯಾಂಡಲ್ ಅನ್ನು ಸಹ ಬಳಸಬಹುದು.

ನೀವು ಹೊಂದಿರುವ ಯಾವುದೇ ಲೆಗಸಿ ವೈಯಕ್ತೀಕರಿಸಿದ URL ಗಳು ಕೆಲಸ ಮಾಡುವುದನ್ನು ಮುಂದುವರಿಸುತ್ತವೆ.

YouTube ನಲ್ಲಿ ಹ್ಯಾಂಡಲ್‌ಗಳು

ಹ್ಯಾಂಡಲ್ ಅನ್ನು ಹೆಸರಿಸುವ ಮಾರ್ಗಸೂಚಿಗಳು

ಗಮನಿಸಿ: YouTube ಯಾವಾಗ ಬೇಕಾದರೂ ಹ್ಯಾಂಡಲ್ ಅನ್ನು ಬದಲಾಯಿಸುವ, ಮರು ಕ್ಲೈಮ್ ಮಾಡುವ ಅಥವಾ ತೆಗೆದುಹಾಕುವ ಹಕ್ಕನ್ನು ಕಾಯ್ದಿರಿಸಿದೆ.

ನಿಮ್ಮ ಹ್ಯಾಂಡಲ್ ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು:

  • 3-30 ಅಕ್ಷರಗಳ ನಡುವೆ ಇರಬೇಕು (ವಿನಾಯಿತಿಗಳನ್ನು ಕೆಳಗೆ ನೋಡಿ)
  • ನಮ್ಮ 75 ಬೆಂಬಲಿತ ಭಾಷೆಗಳಲ್ಲಿನ ಒಂದರ ವರ್ಣಮಾಲೆಯ ಅಕ್ಷರಗಳು ಅಥವಾ ಸಂಖ್ಯೆಗಳನ್ನು ಬಳಸಬೇಕು
    • ನಿಮ್ಮ ಹ್ಯಾಂಡಲ್ ಇವುಗಳನ್ನು ಸಹ ಒಳಗೊಂಡಿರಬಹುದು: ಅಂಡರ್‌ಸ್ಕೋರ್‌ಗಳು (_), ಹೈಫನ್‌ಗಳು (-), ವಿರಾಮಚಿಹ್ನೆಗಳು (.), ಲ್ಯಾಟಿನ್ ಮಿಡಲ್ ಡಾಟ್‌ಗಳು (·).
    • ಮಿಶ್ರ ಸ್ಕ್ರಿಪ್ಟ್‌ಗಳನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ. ಹ್ಯಾಂಡಲ್‌ನ ಕೊನೆಯಲ್ಲಿ ಸಂಖ್ಯೆಗಳನ್ನು ಸೇರಿಸಿದಾಗ ಹೊರತುಪಡಿಸಿ ಒಂದೇ ಹ್ಯಾಂಡಲ್‌ನಲ್ಲಿ ಎಡದಿಂದ ಬಲಕ್ಕೆ ಬರೆಯುವ ಸ್ಕ್ರಿಪ್ಟ್‌ಗಳನ್ನು ಬಲದಿಂದ ಎಡಕ್ಕೆ ಬರೆಯುವ ಸ್ಕ್ರಿಪ್ಟ್‌ಗಳ ಜೊತೆ ಬೆರೆಸಬಾರದು.
  • URL ಅಥವಾ ಫೋನ್ ಸಂಖ್ಯೆಯ ರೀತಿ ಇರಬಾರದು
  • ಈಗಾಗಲೇ ಬಳಕೆಯಲ್ಲಿ ಇರಬಾರದು
  • YouTube ನ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು
ಹ್ಯಾಂಡಲ್‌ನ ಅಕ್ಷರ ಮಿತಿಗೆ ಇರುವ ವಿನಾಯಿತಿಗಳು:
  • ಹಾನ್/ಹಂಗುಲ್: 1-10 ಅಕ್ಷರಗಳು
  • ಇಥಿಯೋಪಿಕ್/ಹಿರಗಾನ/ಕಟಕಾನ: 2-20 ಅಕ್ಷರಗಳು
  • ಮಿಶ್ರ ಸ್ಕ್ರಿಪ್ಟ್ ಹ್ಯಾಂಡಲ್‌ಗಳು ಭಿನ್ನವಾದ ಕನಿಷ್ಠ ಮತ್ತು ಗರಿಷ್ಠದ ಮಿತಿಗಳನ್ನು ಹೊಂದಿರಬಹುದು

ಹ್ಯಾಂಡಲ್ ಅನ್ನು ಆಯ್ಕೆಮಾಡುವ ಕುರಿತಾದ ಉತ್ತಮ ಅಭ್ಯಾಸಗಳು

YouTube ನಲ್ಲಿ ನಿಮ್ಮ ಸಾರ್ವಜನಿಕ ಗುರುತನ್ನು ಉತ್ತಮವಾಗಿ ಪ್ರತಿನಿಧಿಸುವ ಹ್ಯಾಂಡಲ್ ಅನ್ನು ಆಯ್ಕೆಮಾಡಿ. ಹ್ಯಾಂಡಲ್‌ಗಳು ಕೇಸ್-ಸೆನ್ಸಿಟಿವ್ ಆಗಿರುವುದಿಲ್ಲ ಎಂಬುದನ್ನು ಗಮನಿಸಿ.

ನಾವು ಇವುಗಳನ್ನು ಅನುಮತಿಸುವುದಿಲ್ಲ:

  • ಹಿಂಸಾತ್ಮಕ, ಆಕ್ಷೇಪಾರ್ಹ, ಲೈಂಗಿಕ ಅಥವಾ ಸ್ಪ್ಯಾಮಿ ಹ್ಯಾಂಡಲ್‌ಗಳು
  • ಹ್ಯಾಂಡಲ್‌ಗಳ ಮಾರಾಟ ಮತ್ತು ವರ್ಗಾವಣೆ

ನಿಮ್ಮ ಹ್ಯಾಂಡಲ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದು ಕಂಡುಬಂದರೆ, YouTube ಹ್ಯಾಂಡಲ್ ಅನ್ನು ಹಿಂಪಡೆದುಕೊಳ್ಳುತ್ತದೆ ಹಾಗೂ ನಿಮ್ಮ ಚಾನಲ್‌ಗೆ ಹೊಸ ಹ್ಯಾಂಡಲ್ ಅನ್ನು ರಚಿಸುತ್ತದೆ.

ಗಮನಿಸಿ: ಕೆಲವು ನಿದರ್ಶನಗಳಲ್ಲಿ, ಮೊಬೈಲ್‌ನಲ್ಲಿ ಕಾಮೆಂಟ್ ಅನ್ನು ಪೋಸ್ಟ್ ಮಾಡುವಂತಹ ವಿಧಾನಗಳ ಮೂಲಕ ನೀವು ಚಾನಲ್ ಅನ್ನು ರಚಿಸಿದಾಗ, ನೀವು ಆಯ್ಕೆಮಾಡಿದ ಚಾನಲ್ ಹೆಸರನ್ನು ಆಧರಿಸಿ YouTube ಸ್ವಯಂಚಾಲಿತವಾಗಿ ನಿಮಗೆ ಹ್ಯಾಂಡಲ್ ಅನ್ನು ನಿಯೋಜಿಸಬಹುದು. ಆಯ್ಕೆಮಾಡಿದ ಚಾನಲ್ ಹೆಸರನ್ನು ಹ್ಯಾಂಡಲ್‌ಗೆ ಪರಿವರ್ತಿಸಲಾಗದಿದ್ದರೆ, ನಿಮ್ಮ ಹ್ಯಾಂಡಲ್ ಅನ್ನು ಯಾದೃಚ್ಛಿಕವಾಗಿ ನಿಯೋಜಿಸಿದ ಸಂದರ್ಭಗಳು ಇರಬಹುದು. ನೀವು ಯಾವಾಗಲೂ Studio ದಲ್ಲಿ ಅಥವಾ youtube.com/handle ಗೆ ಹೋಗುವ ಮೂಲಕ ಹ್ಯಾಂಡಲ್ ಅನ್ನು ವೀಕ್ಷಿಸಬಹುದು ಮತ್ತು ಎಡಿಟ್ ಮಾಡಬಹುದು.

ಕೆಲವು ಭಾಷೆಗಳಲ್ಲಿನ ಹ್ಯಾಂಡಲ್‌ಗಳನ್ನು ಆಯ್ಕೆಮಾಡುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ವಿಷಯಗಳು

ನಿಮ್ಮ ಹ್ಯಾಂಡಲ್ A-Z ವರೆಗಿನ ಅಕ್ಷರಗಳು, 0-9 ರವರೆಗಿನ ಸಂಖ್ಯೆಗಳು ಅಥವಾ ವಿಭಾಜಕಗಳನ್ನು [_-.] ಹೊರತುಪಡಿಸಿ ಬೇರೆ ಅಕ್ಷರಗಳನ್ನು ಹೊಂದಿದ್ದರೆ, 2 ಸಂಭಾವ್ಯ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ:

  • ಜನರು ನಿಮ್ಮ ಚಾನಲ್ ಅನ್ನು ಹುಡುಕುವುದು: ನಿಮ್ಮ ಹ್ಯಾಂಡಲ್‌ನಲ್ಲಿನ ಅಕ್ಷರಗಳನ್ನು ಹೊಂದಿರುವ ಕೀಬೋರ್ಡ್ ಜನರ ಬಳಿ ಇಲ್ಲದಿದ್ದರೆ, ನಿಮ್ಮ ಚಾನಲ್ ಅನ್ನು ಹುಡುಕುವುದಕ್ಕಾಗಿ ನಿಮ್ಮ ಹ್ಯಾಂಡಲ್ ಅನ್ನು ಸುಲಭವಾಗಿ ಟೈಪ್ ಮಾಡಲು ಅವರಿಗೆ ಸಾಧ್ಯವಾಗದಿರಬಹುದು.
  • YouTube ನ ಹೊರಗಿನ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಲಿಂಕ್‌ಗಳನ್ನು ಹಂಚಿಕೊಳ್ಳುವುದು: YouTube ನ ಹೊರಗಿನ ಕೆಲವು ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ನಿಮ್ಮ youtube.com/@myHandle ಲಿಂಕ್ ಅನ್ನು ಸರಿಯಾಗಿ ಪ್ರದರ್ಶಿಸದಿರಬಹುದು ಅಥವಾ ಬೆಂಬಲಿಸದಿರಬಹುದು, ಇದರಿಂದ ಅದು ಅಸಮರ್ಪಕ ಎಂಬಂತೆ ಕಾಣಿಸುತ್ತದೆ ಅಥವಾ ನಿಮ್ಮ ಚಾನಲ್‌ನ ಪುಟಕ್ಕೆ ಡೈರೆಕ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಇಂಟರ್‌ನ್ಯಾಷನಲೈಸೇಶನ್, ಇಂಟರ್ನೆಟ್‌ನಲ್ಲಿ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಾದ್ಯಂತ ಏಕರೂಪವಾಗಿ ಬೆಂಬಲಿತವಾಗಿರುವುದಿಲ್ಲ. ಈ ಸಮಸ್ಯೆಗಳು ಟೈಪ್ ಮಾಡಿದ ಲಿಂಕ್‌ಗಳು ಹಾಗೂ YouTube ಆ್ಯಪ್ ಅಥವಾ ವೆಬ್‌ಸೈಟ್‌ನಿಂದ ಕಾಪಿ ಮಾಡಿದ ಲಿಂಕ್‌ಗಳೆರಡರಲ್ಲೂ ಉಂಟಾಗಬಹುದು.

ನಿಮ್ಮ ಹ್ಯಾಂಡಲ್ ಅನ್ನು ಮರೆಮಾಡುವುದು

ನಿಮ್ಮ ಹ್ಯಾಂಡಲ್ ಅನ್ನು ಮರೆಮಾಡಲು ನೀವು ಬಯಸಿದರೆ, ನಿಮ್ಮ ಚಾನಲ್ ಅನ್ನು ನೀವು ಅಳಿಸಬಹುದು ಅಥವಾ ಮರೆಮಾಡಬಹುದು.

ಹ್ಯಾಂಡಲ್‌ಗಳನ್ನು ಬಳಸಿಕೊಂಡು ಹುಡುಕುವುದು

ವೀಕ್ಷಕರು ಮತ್ತು ರಚನೆಕಾರರು ನಿಮ್ಮ ಹ್ಯಾಂಡಲ್‌ನ ಆರಂಭಕ್ಕೆ @ ಚಿಹ್ನೆಯನ್ನು ಸೇರಿಸಿ YouTube ನಲ್ಲಿ ನೇರವಾಗಿ ನಿಮ್ಮ ಚಾನಲ್ ಅನ್ನು ಹುಡುಕಬಹುದು. ಹ್ಯಾಂಡಲ್‌ಗಳನ್ನು ಚಾನಲ್‌ನ ಪುಟ ಅಥವಾ ಪ್ರೊಫೈಲ್ ಕಾರ್ಡ್‌ನಲ್ಲಿ ಕಾಪಿ ಮಾಡಬಹುದು.

ಹ್ಯಾಂಡಲ್ URL ಅನ್ನು ಬಳಸಿಕೊಂಡು ಹಂಚಿಕೊಳ್ಳುವುದು

ಹ್ಯಾಂಡಲ್ URL ಎಂಬುದು YouTube URL ಆಗಿದ್ದು, ಅದು ಚಾನಲ್ ಹ್ಯಾಂಡಲ್‌ನ ಆರಂಭದಲ್ಲಿ @ ಚಿಹ್ನೆಯನ್ನು ಒಳಗೊಂಡಿರುತ್ತದೆ. ಹ್ಯಾಂಡಲ್ URL ಅನ್ನು ಬಳಸಿಕೊಂಡು ಚಾನಲ್‌ನ ಪುಟವನ್ನು ಈ ಕೆಳಗಿನ ವಿಧಾನಗಳಲ್ಲಿ ನೀವು ಹಂಚಿಕೊಳ್ಳಬಹುದು:

  • ಹಂಚಿಕೊಳ್ಳಿ  ಎಂಬುದನ್ನು ಕ್ಲಿಕ್ ಮಾಡುವುದು ಅಥವಾ ಟ್ಯಾಪ್ ಮಾಡುವುದು.

ಅಥವಾ

  • ನಿಮ್ಮ ಬ್ರೌಸರ್‌ನ ವಿಳಾಸ ಪಟ್ಟಿಯಿಂದ ನೇರವಾಗಿ URL ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುವುದು.
ಕೆಲವು ಭಾಷೆಗಳಲ್ಲಿನ ಹ್ಯಾಂಡಲ್ URL ಗಳ ಕುರಿತಾದ ಮುಖ್ಯ ಸಂಗತಿಗಳು
ನಿಮ್ಮ ಹ್ಯಾಂಡಲ್ A-Z ವರೆಗಿನ ಅಕ್ಷರಗಳು, 0-9 ರವರೆಗಿನ ಸಂಖ್ಯೆಗಳು ಅಥವಾ ವಿಭಾಜಕಗಳನ್ನು [_-.] ಹೊರತುಪಡಿಸಿ ಬೇರೆ ಅಕ್ಷರಗಳನ್ನು ಹೊಂದಿದ್ದರೆ, ಈ ಕೆಳಗಿನವುಗಳು ಅನ್ವಯವಾಗುತ್ತವೆ:
  • ಹ್ಯಾಂಡಲ್ URL ಅನ್ನು ಇಂಟರ್ನೆಟ್ ಸ್ಟ್ಯಾಂಡರ್ಡ್‌ಗಳಿಗೆ ಅನುಗುಣವಾಗಿ ಎನ್‌ಕೋಡ್ ಮಾಡಲಾದ ರೂಪದಲ್ಲಿ ಬ್ರೌಸರ್‌ನಿಂದ ಕಾಪಿ ಮಾಡಲಾಗುತ್ತದೆ. URL ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಎನ್‌ಕೋಡಿಂಗ್ ಖಚಿತಪಡಿಸುತ್ತದೆ.
    • ಎನ್‌ಕೋಡ್ ಮಾಡಿದ URL ನ ಉದಾಹರಣೆ:
      https://www.youtube.com/c/Handle%EC%A7%81%ED%95%A8.
  • ಹಂಚಿಕೊಳ್ಳಿ ಎಂಬುದನ್ನು ಬಳಸಿಕೊಂಡು ಬಾಹ್ಯ ಆ್ಯಪ್‌ಗಳಿಗೆ ಹಂಚಿಕೊಳ್ಳುವಾಗ, ಚಾನಲ್‌ನ ಪುಟವನ್ನು ಚಾನಲ್ ID URL ಅನ್ನು ಬಳಸಿಕೊಂಡು ಹಂಚಿಕೊಳ್ಳಬಹುದು (ಹ್ಯಾಂಡಲ್ URL ನ ಬದಲಿಗೆ).
    • ಚಾನಲ್ ID URL ನ ಉದಾಹರಣೆ:
      https://www.youtube.com/channel/UC0L1uV8pgO4pCAIBNGxxy5w.

 ಹ್ಯಾಂಡಲ್ ಅನ್ನು ವೀಕ್ಷಿಸುವುದು ಅಥವಾ ಬದಲಾಯಿಸುವುದು

ಗಮನಿಸಿ: ನೀವು 14-ದಿನದ ಅವಧಿಯಲ್ಲಿ ನಿಮ್ಮ ಹ್ಯಾಂಡಲ್ ಅನ್ನು ಎರಡು ಬಾರಿ ಬದಲಾಯಿಸಬಹುದು. ನೀವು ಹಾಗೆ ಮಾಡಿದರೆ, ನೀವು ಹಿಂತಿರುಗಲು ಬಯಸಿದಲ್ಲಿ ನಾವು ನಿಮ್ಮ ಹಿಂದಿನ ಹ್ಯಾಂಡಲ್ ಅನ್ನು 14 ದಿನಗಳವರೆಗೆ ಹಿಡಿದಿಟ್ಟುಕೊಳ್ಳುತ್ತೇವೆ. ಈ 14-ದಿನದ ಅವಧಿಯಲ್ಲಿ, ನಿಮ್ಮ ಹಿಂದಿನ ಹ್ಯಾಂಡಲ್ URL ಮತ್ತು ನಿಮ್ಮ ಅಪ್‌ಡೇಟ್ ಮಾಡಿದ URL ಎರಡೂ ಕೆಲಸ ಮಾಡುತ್ತವೆ. ನಂತರ, ಹ್ಯಾಂಡಲ್ ಇತರ ಬಳಕೆದಾರರಿಗೆ ತಮ್ಮ ಹ್ಯಾಂಡಲ್ ಆಗಿ ಆಯ್ಕೆಮಾಡಲು ಲಭ್ಯವಾಗುತ್ತದೆ.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಶನ್ ನಂತರ ಮೂಲ ಮಾಹಿತಿ ಎಂಬುದನ್ನು ಆಯ್ಕೆಮಾಡಿ.
  3. ಹ್ಯಾಂಡಲ್ ಅಡಿಯಲ್ಲಿ, ನಿಮ್ಮ ಹ್ಯಾಂಡಲ್ URL ಅನ್ನು ನೀವು ವೀಕ್ಷಿಸಬಹುದು ಅಥವಾ ಬದಲಾಯಿಸಬಹುದು.
  4. ನಿಮ್ಮ ಹ್ಯಾಂಡಲ್ ಅನ್ನು ನೀವು ಬದಲಾಯಿಸಿದರೆ, ಅದನ್ನು ದೃಢೀಕರಿಸಲು ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.
ನಿಮ್ಮ ಆದ್ಯತೆಯ ಹ್ಯಾಂಡಲ್ ಲಭ್ಯವಿಲ್ಲದಿದ್ದರೆ, ನೀವು ಪೂರ್ಣವಿರಾಮಗಳು, ಸಂಖ್ಯೆಗಳು ಅಥವಾ ಅಂಡರ್‌ಸ್ಕೋರ್‌ಗಳನ್ನು ಸೇರಿಸಲು ಪ್ರಯತ್ನಿಸಬಹುದು.

ನಿಮ್ಮ ಆದ್ಯತೆಯ ಹ್ಯಾಂಡಲ್ ಲಭ್ಯವಿಲ್ಲದಿದ್ದರೆ, ಇದಕ್ಕೆ ಸಾಮಾನ್ಯ ಕಾರಣ:

  • ಬೇರೊಂದು ಚಾನಲ್ ಈಗಾಗಲೇ ಆ ಹ್ಯಾಂಡಲ್ ಅನ್ನು ಆಯ್ಕೆಮಾಡಿದೆ.

ಅಥವಾ

ಬೆಂಬಲಿತ ಭಾಷೆಗಳು
ಹ್ಯಾಂಡಲ್‌ಗಳು ಕೆಳಗಿನ ಭಾಷೆಗಳಲ್ಲಿ ಬೆಂಬಲಿತವಾಗಿವೆ.
ಬೆಂಬಲಿತ ಭಾಷೆಗಳು

ಆಫ್ರಿಕಾನ್ಸ್
ಅಲ್ಬೇನಿಯನ್
ಅಂಹರಿಕ್
ಅರೇಬಿಕ್
ಅರ್ಮೇನಿಯನ್
ಅಸ್ಸಾಮೀಸ್
ಅಜರ್‌ಬೈಜಾನಿ
ಬಾಸ್ಕ್
ಬೆಲರೂಸಿಯನ್
ಬೆಂಗಾಲಿ (ಬಾಂಗ್ಲಾ)
ಬೋಸ್ನಿಯನ್
ಬಲ್ಗೇರಿಯನ್
ಬರ್ಮೀಸ್ (ಮ್ಯಾನ್ಮಾರ್)
ಕ್ಯಾಟಲಾನ್
ಚೈನೀಸ್ (ಸಾಂಪ್ರದಾಯಿಕ)
ಚೈನೀಸ್ (ಸರಳೀಕೃತ)
ಕ್ರೊಯೇಷಿಯನ್
ಜೆಕ್
ಡ್ಯಾನಿಶ್
ಡಚ್
ಇಂಗ್ಲಿಷ್
ಇಂಗ್ಲಿಷ್ (ಯುನೈಟೆಡ್ ಕಿಂಗ್‌ಡಮ್)
ಇಂಗ್ಲಿಷ್ (ಭಾರತ)
ಎಸ್ಟೋನಿಯನ್
ಫಿಲಿಪಿನೋ
ಫಿನ್ನಿಶ್
ಫ್ರೆಂಚ್
ಫ್ರೆಂಚ್ (ಕೆನಡಾ)
ಗ್ಯಾಲಿಷಿಯನ್
ಜಾರ್ಜಿಯನ್
ಜರ್ಮನ್
ಗ್ರೀಕ್
ಗುಜರಾತಿ
ಹೀಬ್ರೂ
ಹಿಂದಿ
ಹಂಗೇರಿಯನ್
ಐಸ್‌ಲ್ಯಾಂಡಿಕ್
ಇಂಡೋನೇಷಿಯನ್
ಇಟಾಲಿಯನ್
ಜಾಪನೀಸ್
ಕನ್ನಡ
ಕಝಾಖ್
ಖಮೇರ್
ಕೊರಿಯನ್
ಕಿರ್ಗಿಜ್
ಲಾವೊ
ಲಾಟ್ವಿಯನ್

ಲಿಥುವೇನಿಯನ್
ಮೆಸಿಡೋನಿಯನ್
ಮಲಯಾಳಂ
ಮಲಯ್
ಮರಾಠಿ
ಮಂಗೋಲಿಯನ್
ನೇಪಾಳಿ
ನಾರ್ವೇಜಿಯನ್
ಒಡಿಯಾ
ಪರ್ಷಿಯನ್
ಪೋಲಿಷ್
ಪೋರ್ಚುಗೀಸ್
ಪಂಜಾಬಿ
ರೊಮೇನಿಯನ್
ರಷ್ಯನ್
ಸೆರ್ಬಿಯನ್ (ಲ್ಯಾಟಿನ್)
ಸಿಂಹಳ
ಸ್ಲೋವಾಕ್
ಸ್ಲೊವೇನಿಯನ್
ಸ್ಪ್ಯಾನಿಷ್ 
ಸ್ಪ್ಯಾನಿಷ್ (ಲ್ಯಾಟಿನ್ ಅಮೇರಿಕಾ)
ಸ್ವೀಡಿಷ್
ಸ್ವಹಿಲಿ
ತಮಿಳು
ತೆಲುಗು
ಥಾಯ್
ಟರ್ಕಿಶ್
ಉಕ್ರೇನಿಯನ್
ಉರ್ದು
ಉಜ್ಬೇಕ್
ವಿಯೆಟ್ನಾಮೀಸ್
ಜುಲು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15916772226197186491
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false