ನಿಮ್ಮ ವೀಡಿಯೊಗಳನ್ನು ಅಪ್‌ಲೋಡ್‌ ಮಾಡಿ ಹಾಗೂ ಕ್ಲೈಮ್ ಮಾಡಿ

ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು YouTube Studio ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತವೆ. YouTube ಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಕುರಿತು ಸಾಮಾನ್ಯ ಮಾಹಿತಿಗಾಗಿ, ಇಲ್ಲಿ ಇನ್ನಷ್ಟು ತಿಳಿಯಿರಿ.

ವೀಡಿಯೊಗಳನ್ನು ಅಪ್‍ಲೋಡ್ ಮಾಡಲು YouTube ಹಲವಾರು ವಿಧಾನಗಳನ್ನು ನೀಡುತ್ತದೆ. ಕಂಟೆಂಟ್ ಮ್ಯಾನೇಜರ್ ಖಾತೆಗೆ ಲಿಂಕ್ ಮಾಡಲಾದ ಚಾನಲ್‌ಗಳಿಗಾಗಿ, ವೀಡಿಯೊವನ್ನು ಅಪ್‌ಲೋಡ್ ಮಾಡುವುದು ನೀತಿಗಳನ್ನು ಸೆಟ್ ಮಾಡುವುದು, ಮಾಲೀಕತ್ವವನ್ನು ನಿರ್ದಿಷ್ಟಪಡಿಸುವುದು ಮತ್ತು ಸ್ವತ್ತನ್ನು ರಚಿಸುವುದನ್ನು ಸಹ ಒಳಗೊಂಡಿರುತ್ತದೆ.

ನೀವು YouTube ಗೆ ಅಪ್‌ಲೋಡ್ ಮಾಡುವ ಯಾವುದೇ ವೀಡಿಯೊದ ಹಕ್ಕುಗಳಿಗಾಗಿ ನೀವು ಹಕ್ಕುಗಳನ್ನು ಹೊಂದಿರಬೇಕು ಅಥವಾ ಅಗತ್ಯ ಪರವಾನಗಿಗಳನ್ನು ಹೊಂದಿರಬೇಕು.

ನಿಮ್ಮ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ

ನಿಮ್ಮ ಚಾನಲ್ ಅನ್ನು ಕಂಟೆಂಟ್ ಮ್ಯಾನೇಜರ್ ಖಾತೆಗೆ ಲಿಂಕ್ ಮಾಡಿದ್ದರೆ, studio.youtube.com ನಿಂದ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಕೆಳಗಿನ ಹಂತಗಳನ್ನು ನೀವು ಬಳಸಬಹುದು.

ಗಮನಿಸಿ: ಇತರ ಕಂಟೆಂಟ್ ಡೆಲಿವರಿ ವಿಧಾನಗಳ ಮೂಲಕ ವೀಡಿಯೊಗಳನ್ನು ಅಪ್‌ಲೋಡ್ ಮಾಡುವಾಗ ಈ ಅಪ್‌ಲೋಡ್ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ.
1. ಫೈಲ್ ಅನ್ನು ಆಯ್ಕೆಮಾಡಿ ಮತ್ತು ವಿವರಗಳನ್ನು ನಮೂದಿಸಿ
  1. ನಿಮ್ಮ ಕಂಟೆಂಟ್ ಮ್ಯಾನೇಜರ್ ಖಾತೆಗೆ ಲಿಂಕ್ ಮಾಡಲಾದ ಚಾನಲ್ ಆಗಿ YouTube Studio ಗೆ ಸೈನ್ ಇನ್ ಮಾಡಿ.
  2. ಮೇಲಿನ ಬಲ ಮೂಲೆಯಲ್ಲಿ,  ರಚಿಸಿ ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಎಂಬುದನ್ನು ಕ್ಲಿಕ್‌ ಮಾಡಿ.
  3. ಫೈಲ್‌ಗಳನ್ನು ಆಯ್ಕೆಮಾಡಿ ಕ್ಲಿಕ್ ಮಾಡಿ ಅಥವಾ ನೀವು ಅಪ್‌ಲೋಡ್ ಮಾಡಲು ಬಯಸುವ ವೀಡಿಯೊ ಫೈಲ್‌ಗಳನ್ನು ಎಳೆದು ಬಿಡಿ.
  4. ವಿವರಗಳ ಪುಟವು ಕಾಣಿಸಿಕೊಂಡಾಗ, ನಿಮ್ಮ ವೀಡಿಯೊಗಾಗಿ ಶೀರ್ಷಿಕೆ ಮತ್ತು ವಿವರಣೆಯನ್ನು ಸೇರಿಸಿ.
  5. ನಿಮ್ಮ ವೀಡಿಯೊ ಮಕ್ಕಳಿಗಾಗಿ ರಚಿಸಲಾಗಿದೆಯೇ ಎಂಬುದನ್ನು ಆಯ್ಕೆಮಾಡಿ.
  6. ಪಾವತಿಸಿದ ಪ್ರಚಾರ, ಟ್ಯಾಗ್‌ಗಳು, ಸಬ್‌ಟೈಟಲ್‌ಗಳಂತಹ ಹೆಚ್ಚಿನ ಮಾಹಿತಿಯನ್ನು ನಮೂದಿಸಲು, ಇನ್ನಷ್ಟು ತೋರಿಸಿ ಕ್ಲಿಕ್ ಮಾಡಿ.
  7. ಮುಂದಿನದು ಕ್ಲಿಕ್‌ ಮಾಡಿ.
ವಿವರಗಳು ಪುಟದಲ್ಲಿ ನೀವು ಮುಂದಿನದು ಕ್ಲಿಕ್ ಮಾಡಿದ ನಂತರ, ಹಕ್ಕುಗಳ ನಿರ್ವಹಣೆ ಪುಟವು ಕಾಣಿಸಿಕೊಳ್ಳುತ್ತದೆ.
2. ನೀತಿಗಳನ್ನು ಸೆಟ್ ಮಾಡಿ
  1. ಹಕ್ಕುಗಳ ನಿರ್ವಹಣೆ ಪುಟದಲ್ಲಿ, ನಿಮ್ಮ ಸ್ವಂತ ವೀಡಿಯೊಗೆ ಅನ್ವಯಿಸಲಾದ ನೀತಿಗಳ ಅಡಿಯಲ್ಲಿ, ಅಪ್‌ಲೋಡ್ ನೀತಿ  ಕ್ಲಿಕ್‌ ಮಾಡಿ ಹಾಗೂ ಅಪ್‌ಲೋಡ್ ನೀತಿಯನ್ನು ಆಯ್ಕೆಮಾಡಿ.
    • ನಿಮ್ಮ ಡೀಫಾಲ್ಟ್ ಅಪ್‌ಲೋಡ್ ನೀತಿಯನ್ನು ಈಗಾಗಲೇ ಆಯ್ಕೆಮಾಡಲಾಗಿದೆ. ನೀವು ಡೀಫಾಲ್ಟ್ ಅಪ್‌ಲೋಡ್ ನೀತಿಯನ್ನು ಹೊಂದಿಲ್ಲದಿದ್ದರೆ, ಎಲ್ಲಾ ದೇಶಗಳಲ್ಲಿ ಟ್ರ್ಯಾಕ್ ಮಾಡಿ ಎಂಬುದನ್ನು ಆಯ್ಕೆಮಾಡಲಾಗುತ್ತದೆ.
    • ಅಪ್‌ಲೋಡ್ ನೀತಿ ಡ್ರಾಪ್‌ಡೌನ್ ಪಟ್ಟಿಯು ಸ್ವಯಂ ಕ್ಲೈಮ್ ಮಾನದಂಡಗಳ ಜೊತೆಗೆ ಯಾವುದೇ ನೀತಿಗಳನ್ನು ತೆಗೆದುಹಾಕುತ್ತದೆ. ನಿಮ್ಮ ಡೀಫಾಲ್ಟ್ ಅಪ್‌ಲೋಡ್ ನೀತಿಯನ್ನು ಅತಿಕ್ರಮಿಸುವುದಕ್ಕೆ ಬೇರೊಂದು ನೀತಿಯನ್ನು ಆಯ್ಕೆಮಾಡಿ.
  2. ನಿಮ್ಮ ವೀಡಿಯೊ ನಕಲುಗಳಿಗೆ ಅನ್ವಯಿಸಲಾದ ನೀತಿಗಳ ವಿಭಾಗದಲ್ಲಿ, ಹೊಂದಿಕೆ ನೀತಿ  ಕ್ಲಿಕ್‌ ಮಾಡಿ ಹಾಗೂ ಹೊಂದಿಕೆ ನೀತಿಯನ್ನು ಆಯ್ಕೆಮಾಡಿ.
    • ಈ ವೀಡಿಯೊಗಾಗಿ Content ID ಹೊಂದಾಣಿಕೆಗಳನ್ನು ಅನುಮತಿಸಲು, Content ID ಹೊಂದಾಣಿಕೆಯನ್ನು ಆನ್ ಮಾಡಿ ಚೆಕ್‌ಬಾಕ್ಸ್ ಕ್ಲಿಕ್‌ ಮಾಡಿ ಮತ್ತು ಡ್ರಾಪ್‌ಡೌನ್ ಪಟ್ಟಿಯಿಂದ ಹೊಂದಿಕೆ ನೀತಿಯನ್ನು ಆಯ್ಕೆಮಾಡಿ.
    • ನೀವು Content ID ಗಾಗಿ ನೋಂದಾಯಿಸಿರದಿದ್ದರೆ, ಈ ಕಂಟ್ರೋಲ್‌ಗಳು ಗೋಚರಿಸುವುದಿಲ್ಲ. Content ID ಅರ್ಹತೆಯ ಕುರಿತು ಇನ್ನಷ್ಟು ತಿಳಿಯಿರಿ.
    • Content ID ಗಾಗಿ ನಿಮ್ಮ ವೀಡಿಯೊ ತುಂಬಾ ಚಿಕ್ಕದಾಗಿದ್ದರೆ, ಟಿಪ್ಪಣಿಯೊಂದು ಕಾಣಿಸಿಕೊಳ್ಳುತ್ತದೆ: “Content ID ಹೊಂದಾಣಿಕೆಗೆ ವೀಡಿಯೊ ತುಂಬಾ ಚಿಕ್ಕದಾಗಿದೆ”.
3. ಮಾಲೀಕತ್ವವನ್ನು ನಿರ್ದಿಷ್ಟಪಡಿಸಿ
  1. ಹಕ್ಕುಗಳ ನಿರ್ವಹಣೆ ಪುಟದಲ್ಲಿ, ಮಾಲೀಕತ್ವದ ಅಡಿಯಲ್ಲಿ, ಜಾಗತಿಕ (ಡೀಫಾಲ್ಟ್ ಆಯ್ಕೆ) ಅಥವಾ ನಿರ್ದಿಷ್ಟ ಪ್ರದೇಶಗಳು ಎಂಬುದನ್ನು ಆಯ್ಕೆಮಾಡಿ.
  2. ನೀವು ನಿರ್ದಿಷ್ಟ ಪ್ರದೇಶಗಳನ್ನು ಆಯ್ಕೆಮಾಡಿದ್ದರೆ, ಆಯ್ದ ಪ್ರದೇಶಗಳಲ್ಲಿ ಹೊಂದಿದ್ದೀರಿ ಎಂಬುದನ್ನು ಆಯ್ಕೆಮಾಡಿ ಅಥವಾ ಆಯ್ದ ಪ್ರದೇಶಗಳನ್ನು ಹೊರತುಪಡಿಸಿ ಎಲ್ಲೆಡೆಯಲ್ಲೂ ಹೊಂದಿದ್ದೀರಿ ಎಂಬುದನ್ನು ಆಯ್ಕೆಮಾಡಿ. ನಂತರ ಟೆಕ್ಸ್ಟ್ ಬಾಕ್ಸ್‌ನಲ್ಲಿ ಪ್ರದೇಶಗಳನ್ನು ನಮೂದಿಸಿ.
    • ನೀವು ಮಾಲೀಕತ್ವವನ್ನು ಹೊಂದಿರುವ ಪ್ರದೇಶಗಳ ಹೊರಗೆ ನಿಮ್ಮ ವೀಡಿಯೊವನ್ನು ನಿರ್ಬಂಧಿಸಲು, ನಿಮ್ಮ ಮಾಲೀಕತ್ವದ ಪ್ರದೇಶದ ಹೊರಗೆ ವೀಡಿಯೊವನ್ನು ನಿರ್ಬಂಧಿಸಿ ಪಕ್ಕದಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ. ಇನ್ನಷ್ಟು ತಿಳಿಯಿರಿ.
4. ಸ್ವತ್ತನ್ನು ರಚಿಸಿ
  1. ಹಕ್ಕುಗಳ ನಿರ್ವಹಣೆ ಪುಟದಲ್ಲಿ, ಸ್ವತ್ತಿನ ಮಾಹಿತಿ ಅಡಿಯಲ್ಲಿ, ಸ್ವತ್ತಿನ ಪ್ರಕಾರ  ಎಂಬುದನ್ನು ಕ್ಲಿಕ್‌ ಮಾಡಿ ಹಾಗೂ ಈ ವೀಡಿಯೊಗಾಗಿ ರಚಿಸಲು ಸ್ವತ್ತಿನ ಪ್ರಕಾರವನ್ನು ಆಯ್ಕೆಮಾಡಿ. ಸ್ವತ್ತಿನ ಪ್ರಕಾರಗಳ ಕುರಿತು ಇನ್ನಷ್ಟು ತಿಳಿಯಿರಿ.
  2. ಸ್ವತ್ತಿನ ಶೀರ್ಷಿಕೆ ಫೀಲ್ಡ್‌ನಲ್ಲಿ, ನಿಮ್ಮ ಸ್ವತ್ತಿನ ಶೀರ್ಷಿಕೆಯನ್ನು ನಮೂದಿಸಿ.
    • ಗಮನಿಸಿ: ಬದಲಾವಣೆಗಳನ್ನು ಸೇವ್ ಮಾಡಿ ಕ್ಲಿಕ್ ಮಾಡಿದ ನಂತರ, ನಿಮಗೆ ಸ್ವತ್ತಿನ ಪ್ರಕಾರವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.
  3. ನೀವು ಕಸ್ಟಮ್ ID, ಸ್ವತ್ತಿನ ವಿವರಣೆ ಮತ್ತು ಬಾಕಿ ಉಳಿದಿರುವ ಫೀಲ್ಡ್‌ಗಳಲ್ಲಿ ಟಿಪ್ಪಣಿಗಳನ್ನು ಕೂಡ ಸೇರಿಸಬಹುದು.
  4. ಮುಂದಿನದು ಕ್ಲಿಕ್‌ ಮಾಡಿ.
ಒಮ್ಮೆ  ಮಾಲೀಕತ್ವ ಮತ್ತು ಸ್ವತ್ತಿನ ಮಾಹಿತಿಯನ್ನು ಸೇವ್ ಮಾಡಿದರೆ, Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಬದಲಾವಣೆಗಳನ್ನು ಸ್ವತ್ತುಗಳ ಪುಟದಿಂದ ಮಾಡಬಹುದು. ಇನ್ನಷ್ಟು ತಿಳಿಯಿರಿ.
5. ಬಾಹಿ ಉಳಿದಿರುವ ಹಂತಗಳನ್ನು ಪೂರ್ಣಗೊಳಿಸಿ

ನೀವು ವಿವರಗಳು ಮತ್ತು ಹಕ್ಕುಗಳ ನಿರ್ವಹಣೆಯ ವಿಭಾಗಗಳನ್ನು ಪೂರ್ಣಗೊಳಿಸಿದ ನಂತರ, ಅಪ್‌ಲೋಡ್ ಪ್ರಕ್ರಿಯೆಯ ಬಾಕಿ ಉಳಿದಿರುವ ಹಂತಗಳ ಮೂಲಕ ಮುಂದುವರಿಯಿರಿ.

ಬಾಕಿ ಉಳಿದಿರುವ ವಿಭಾಗಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ನೀವು ಇಲ್ಲಿರುವ ಮಾಹಿತಿಯನ್ನು ಬಳಸಬಹುದು: ವೀಡಿಯೊ ಅಂಶಗಳು, ಪರಿಶೀಲನೆಗಳು ಮತ್ತು ಗೋಚರತೆ.

ಗೋಚರತೆ ವಿಭಾಗದಲ್ಲಿ, ನಿಮ್ಮ ವೀಡಿಯೊವನ್ನು ಪ್ರಕಟಿಸುವ ಮೊದಲು ಅದನ್ನು ಪರಿಶೀಲಿಸಲು ನೀವು ಬಯಸಿದರೆ, ವೀಡಿಯೊವನ್ನು ಖಾಸಗಿ, ಪಟ್ಟಿಮಾಡದಿರುವುದು ಅಥವಾ ನಿಗದಿಪಡಿಸಲಾಗಿದೆ ಎಂದು ಸೆಟ್ ಮಾಡಿ. ನಿಮ್ಮ ವೀಡಿಯೊದ ಗೌಪ್ಯತೆಯ ಸೆಟ್ಟಿಂಗ್ ಸಾರ್ವಜನಿಕವಾಗಿದ್ದರೆ, ನೀವು ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಫೈಲ್ ಪ್ರಕ್ರಿಯೆಗೊಂಡ ನಂತರ YouTube ನಿಮ್ಮ ವೀಡಿಯೊವನ್ನು ಪ್ರಕಟಿಸುತ್ತದೆ.

ಈ ಹಿಂದೆ ಅಪ್‌ಲೋಡ್ ಮಾಡಲಾದ ವೀಡಿಯೊಗಳನ್ನು ಕ್ಲೈಮ್ ಮಾಡಿ

ನೀವು ಈಗಾಗಲೇ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರೆ, Studio ಕಂಟೆಂಟ್ ಮ್ಯಾನೇಜರ್‌ನಿಂದ ಅಪ್‌ಲೋಡ್ ನೀತಿಯನ್ನು ಆಯ್ಕೆಮಾಡುವ ಮೂಲಕ ನೀವು ಅದನ್ನು ಕ್ಲೈಮ್ ಮಾಡಬಹುದು.

ಈ ಹಿಂದೆ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಕ್ಲೈಮ್ ಮಾಡಿ

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಎಂಬುದನ್ನು ಆಯ್ಕೆಮಾಡಿ.
  3. ನೀವು ಕ್ಲೈಮ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಹಕ್ಕುಗಳ ನಿರ್ವಹಣೆ ಟ್ಯಾಬ್ ಅನ್ನು ಆಯ್ಕೆಮಾಡಿ.
  5. ಅಪ್‌ಲೋಡ್ ನೀತಿ  ಕ್ಲಿಕ್‌ ಮಾಡಿ ಹಾಗೂ ಈ ವೀಡಿಯೊ ಜೊತೆಗೆ ಸಂಯೋಜಿಸಲು ಅಪ್‌ಲೋಡ್ ನೀತಿಯನ್ನು ಆಯ್ಕೆಮಾಡಿ.
    • ಈ ಪಟ್ಟಿಯಲ್ಲಿ ಕೆಲವು ನೀತಿಗಳು ಲಭ್ಯವಿರಬಹುದು, ಏಕೆಂದರೆ Content ID ಹೊಂದಾಣಿಕೆಯ ಪರಿಸ್ಥಿತಿಗಳ ಜೊತೆಗೆ ಹೊಂದಿಕೆಯ ನೀತಿಗಳನ್ನು ಅಪ್‌ಲೋಡ್ ನೀತಿಗಳಾಗಿ ಸೆಟ್ ಮಾಡಲು ಸಾಧ್ಯವಾಗುವುದಿಲ್ಲ. ಇನ್ನಷ್ಟು ತಿಳಿಯಿರಿ.
  6. ಅನ್ವಯಿಸಿ ಕ್ಲಿಕ್ ಮಾಡಿ.
  7. ಸೇವ್ ಮಾಡಿ ಕ್ಲಿಕ್ ಮಾಡಿ.

ಈ ಹಿಂದೆ ಅಪ್‌ಲೋಡ್ ಮಾಡಲಾದ ಹಲವು ವೀಡಿಯೊಗಳನ್ನು ಒಂದೇ ಬಾರಿಗೆ ಕ್ಲೈಮ್ ಮಾಡಿ

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಎಂಬುದನ್ನು ಆಯ್ಕೆಮಾಡಿ.
  3. ನೀವು ಕ್ಲೈಮ್ ಮಾಡಲು ಬಯಸುವ ವೀಡಿಯೊಗಳ ಮುಂದಿರುವ ಚೆಕ್‌ಬಾಕ್ಸ್‌ಗಳನ್ನು ಕ್ಲಿಕ್ ಮಾಡಿ.
  4. ಮೇಲಿನ ಬ್ಯಾನರ್‌ನಿಂದ, ಎಡಿಟ್ ಮಾಡಿ  ನಂತರ ಅಪ್‌ಲೋಡ್ ನೀತಿಎಂಬುದನ್ನು ಕ್ಲಿಕ್‌ ಮಾಡಿ.
  5. ಅಪ್‌ಲೋಡ್ ನೀತಿ  ಕ್ಲಿಕ್‌ ಮಾಡಿ ಹಾಗೂ ಈ ವೀಡಿಯೊ ಜೊತೆಗೆ ಸಂಯೋಜಿಸಲು ಅಪ್‌ಲೋಡ್ ನೀತಿಯನ್ನು ಆಯ್ಕೆಮಾಡಿ.
  6. ಅನ್ವಯಿಸಿ ಕ್ಲಿಕ್ ಮಾಡಿ.
  7. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13707111260474090846
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false