ಪೇ-ಪರ್-ವ್ಯೂ-ಈವೆಂಟ್‍ಗಳನ್ನು ವೀಕ್ಷಿಸಿ

ನೀವು ಟಿಕೆಟ್ ಖರೀದಿಸುವ ಮೂಲಕ, ಸಂಗೀತ ಕಾರ್ಯಕ್ರಮ ಅಥವಾ ಕಾಮಿಡಿ ಶೋ ರೀತಿ, YouTube ನಲ್ಲಿ ಪೇ-ಪರ್-ವ್ಯೂ ಈವೆಂಟ್‍ಗಳನ್ನು ವೀಕ್ಷಿಸಲು ಆಯ್ಕೆಮಾಡಬಹುದು.

ಟಿಕೆಟ್ ಖರೀದಿಸಿ

  1. ನೀವು YouTube ಗೆ ಸೈನ್ ಇನ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
  2. ಈವೆಂಟ್ ಹೆಸರು ಅಥವಾ ಕಲಾವಿದರ ಹೆಸರನ್ನು ಹುಡುಕುವ ಮೂಲಕ ಪೇ-ಪರ್-ವ್ಯೂ ಈವೆಂಟ್‍ಗೆ ನ್ಯಾವಿಗೇಟ್ ಮಾಡಿ.
  3. ಟಿಕೆಟ್ ಖರೀದಿಸಿ ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.
  4. ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು ಪ್ರಾಂಪ್ಟ್‌ಗಳನ್ನು ಅನುಸರಿಸಿ.

ಗಮನಿಸಿ: ಮರುಪಾವತಿ ವಿನಂತಿಸಲು, ಈ ಹಂತಗಳನ್ನು ಅನುಸರಿಸಿ.

ಲಭ್ಯತೆ

ನೀವು ಸದ್ಯಕ್ಕೆ ಯುಎಸ್‍ನಲ್ಲಿ ಪೇ-ಪರ್-ವ್ಯೂ ಈವೆಂಟ್‍ಗಳನ್ನು ಖರೀದಿಸಬಹುದು ಮತ್ತು ವೀಕ್ಷಿಸಬಹುದು.

ನಿಮ್ಮ ಪೇ-ಪರ್-ವ್ಯೂ-ಈವೆಂಟ್ ವೀಕ್ಷಿಸಿ

ನೀವು ಟಿಕೆಟ್ ಖರೀದಿಸಿದ ನಂತರ, ಈವೆಂಟ್ ವೀಕ್ಷಣೆಗಾಗಿ ನೀವು ಇಮೇಲ್ ದೃಢೀಕರಣ ಲಿಂಕ್ ಅನ್ನು ಸ್ವೀಕರಿಸುವಿರಿ. ನಿಮ್ಮ ಈವೆಂಟ್ ಹೋಸ್ಟ್ ಲೈವ್ ಚಾಟ್ ಅನ್ನು ಆನ್ ಮಾಡಿದ್ದರೆ, ನೀವು ಲೈವ್ ಈವೆಂಟ್‍ಗೂ ಮೊದಲು ಅಥವಾ ಈವೆಂಟ್ ಸಂದರ್ಭದಲ್ಲಿ ಇತರರೊಂದಿಗೆ ಚಾಟ್ ಮಾಡಬಹುದು. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಲು ಮರೆಯಬೇಡಿ ಮತ್ತು ನೀವು ಲೈವ್ ಸ್ಟ್ರೀಮ್‍ಗಳ ವೀಕ್ಷಣೆಗೆ ಹೊಸಬರಾಗಿದ್ದರೆ, ಲೈವ್ ಚಾಟ್ ಕುರಿತಾದ ಮೂಲ ಸಂಗತಿಗಳನ್ನು ತಿಳಿದುಕೊಳ್ಳಿ.

ನಿಮ್ಮ ಕಂಪ್ಯೂಟರ್, ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ವೀಕ್ಷಿಸಲು: ಲೈವ್ ಸ್ಟ್ರೀಮ್ ಪ್ರಾರಂಭವಾಗುವಾಗ, ನಿಮ್ಮ ಸಾಧನದಲ್ಲಿ ಮತ್ತು YouTube ಆ್ಯಪ್‌ನಲ್ಲಿ ನೋಟಿಫಿಕೇಶನ್ ಅನ್ನು ಪಡೆಯುವಿರಿ ಅಥವಾ ನಿಮ್ಮ ಖರೀದಿ ದೃಢೀಕರಣದ ಇಮೇಲ್‍ನಲ್ಲಿ ಒದಗಿಸಲಾದ ಈವೆಂಟ್ ಲಿಂಕ್ ಅನ್ನು ನೀವು ಬಳಸಬಹುದು. ಈವೆಂಟ್ ನೋಟಿಫಿಕೇಶನ್ ಅನ್ನು ಅನುಸರಿಸಿ ಮತ್ತು ಅದು ಪ್ರಾರಂಭವಾಗುವವರೆಗೆ ನಿರೀಕ್ಷಿಸಿ.

ನಿಮ್ಮ ಟಿವಿಯಲ್ಲಿ ವೀಕ್ಷಿಸಲು: ನೀವು ಟಿಕೆಟ್ ಖರೀದಿಸಲು ಬಳಸಿದ ಅದೇ ಇಮೇಲ್ ವಿಳಾಸದೊಂದಿಗೆ YouTube ಗೆ ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹುಡುಕಾಟ ಪಟ್ಟಿಯಲ್ಲಿ ಈವೆಂಟ್ ಹೆಸರನ್ನು ನಮೂದಿಸಿ. ನಿಮ್ಮ ಫೋನ್, ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‍ನಿಂದ ನಿಮ್ಮ ಸ್ಮಾರ್ಟ್ ಟಿವಿಗೆ ಈವೆಂಟ್‍ಗಳನ್ನು ಕಾಸ್ಟ್ ಮಾಡಬಹುದು, ವಿವರಗಳು ಇಲ್ಲಿವೆ.

ಪೇ-ಪರ್-ವ್ಯೂ ಈವೆಂಟ್ ಅನ್ನು ಯಾರು ಹೋಸ್ಟ್ ಮಾಡಬಹುದು: ನಾವು ಈ ಫೀಚರ್ ಅನ್ನು ಪರೀಕ್ಷಿಸುತ್ತಿರುವ ಕಾರಣ, ಸಣ್ಣ ಸಂಖ್ಯೆಯ ಮುಂಗಡ-ಆಯ್ಕೆಮಾಡಿದ ಚಾನಲ್‍ಗಳು ಮಾತ್ರವೇ ಪೇ-ಪರ್-ವ್ಯೂ ಈವೆಂಟ್ ಅನ್ನು ಹೋಸ್ಟ್ ಮಾಡಬಹುದು. ಶೀಘ್ರದಲ್ಲೇ ಪೇ-ಪರ್-ವ್ಯೂ ಈವೆಂಟ್‍ಗಳನ್ನು ಇನ್ನಷ್ಟು ವ್ಯಾಪಕವಾಗಿ ಲಭ್ಯಗೊಳಿಸುವ ಆಶಯವನ್ನು ನಾವು ಹೊಂದಿದ್ದೇವೆ.

ಸಮಸ್ಯೆ ನಿವಾರಣೆ

ದೋಷ ಸಂದೇಶಗಳು

ನೀವು ಈ ಕೆಳಗಿನಂತೆ ದೋಷವನ್ನು ನೋಡಿದರೆ, ಅದನ್ನು ಸರಿಪಡಿಸಲು ಈ ಹಂತಗಳನ್ನು ಅನುಸರಿಸಿ.

  • “ನಿಮ್ಮ ನೆಟ್‍ವರ್ಕ್ ಸಂಪರ್ಕವನ್ನು ಪರಿಶೀಲಿಸಿ (ಮರುಪ್ರಯತ್ನಿಸಿ)”
  • "ದೋಷ ಲೋಡ್ ಆಗುತ್ತಿದೆ. ಮರುಪ್ರಯತ್ನಿಸಲು ಟ್ಯಾಪ್ ಮಾಡಿ". 
  • “ದೋಷವೊಂದು ಸಂಭವಿಸಿದೆ”

ನಿಮ್ಮ ಪೇ-ಪರ್-ವ್ಯೂ ಈವೆಂಟ್ ಹುಡುಕಲಾಗಲಿಲ್ಲ ಅಥವಾ ಆ್ಯಕ್ಸೆಸ್ ಸಿಗಲಿಲ್ಲ

ಇಮೇಲ್ ಮಾಡಿದ ಈವೆಂಟ್ ಲಿಂಕ್ ಅನ್ನು ಬಳಸುವಲ್ಲಿ ನಿಮಗೆ ಸಮಸ್ಯೆ ಇದ್ದರೆ:

  1. ಖರೀದಿಯನ್ನು ಮಾಡಲು ಬಳಸಿದ Google ಖಾತೆಗೆ ನೀವು ಸೈನ್ ಇನ್ ಆಗಿರುವಿರಿ ಎಂಬುದನ್ನು ಪರಿಶೀಲಿಸಿ.
  2. ಈವೆಂಟ್‌ನ ಹೆಸರನ್ನು ಹುಡುಕುವ ಮೂಲಕ ಅಥವಾ ನಿಮ್ಮ ಖಾತೆಯ "ನಿಮ್ಮ ಚಲನಚಿತ್ರಗಳು" ವಿಭಾಗಕ್ಕೆ ಹೋಗುವ ಮೂಲಕ YouTube ನಲ್ಲಿ ಅದನ್ನು ನೋಡಿ.
ನೀವು ಇಮೇಲ್ ಈವೆಂಟ್ ಲಿಂಕ್ ಅನ್ನು ಸ್ವೀಕರಿಸದಿದ್ದರೆ, ನಿಮ್ಮ ಖಾತೆಯಲ್ಲಿ ಪ್ರಕ್ರಿಯೆಗೊಳಿಸಲಾದ ಶುಲ್ಕವನ್ನು ಖಚಿತಪಡಿಸಿಕೊಳ್ಳಿ. YouTube ಗೆ ಹೋಗಿ ನಿಮ್ಮ ಪ್ರೊಫೈಲ್ ಟ್ಯಾಪ್ ಮಾಡಿ  and then ಖರೀದಿಗಳು ಮತ್ತು ಸದಸ್ಯತ್ವಗಳು. ನಿಮಗೆ ಶುಲ್ಕವು ಕಾಣಿಸದಿದ್ದರೆ, ನೀವು ಈ ಈವೆಂಟ್ ಅನ್ನು ಬೇರೆ ಖಾತೆಯಲ್ಲಿ ಖರೀದಿಸಿದ್ದೀರಾ ಅಥವಾ ನಿಮ್ಮ ಪಾವತಿಯನ್ನು ತಿರಸ್ಕರಿಸಲಾಗಿದೆಯೇ ಎಂದು ನೋಡಲು ಪರಿಶೀಲಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1538871306348817093
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false