ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡಿ ಮತ್ತು ನಿರ್ವಹಿಸಿ

ಸೂಪರ್ ಥ್ಯಾಂಕ್ಸ್ (ಈ ಹಿಂದೆ ವೀಕ್ಷಕರ ಪ್ರಶಂಸೆ ಎಂದು ಕರೆಯಲಾಗುತ್ತಿತ್ತು) ಮೂಲಕ ರಚನೆಕಾರರು ಆದಾಯ ಗಳಿಸಬಹುದು ಮತ್ತು ತಮ್ಮ ಕಂಟೆಂಟ್‍ಗಾಗಿ ಹೆಚ್ಚುವರಿ ಮೆಚ್ಚುಗೆಯನ್ನು ತಿಳಿಸಲು ಬಯಸುವ ವೀಕ್ಷಕರೊಂದಿಗೆ ಬೆರೆಯಬಹುದು.

ವೀಕ್ಷಕರು ಲಾಂಗ್-ಫಾರ್ಮ್ ವೀಡಿಯೊದಲ್ಲಿ ಅಥವಾ Short ನಲ್ಲಿ ಸೂಪರ್ ಥ್ಯಾಂಕ್ಸ್ ಎಂಬ ಮೋಜಿನ ಆ್ಯನಿಮೇಶನ್ ಅನ್ನು ಖರೀದಿಸಬಹುದು. ಲಾಂಗ್-ಫಾರ್ಮ್ ವೀಡಿಯೊ ಅಥವಾ Short ನ ಮೇಲ್ಭಾಗದಲ್ಲಿ ಒಂದು-ಬಾರಿಯ ಆ್ಯನಿಮೇಶನ್ ಅನ್ನು ಖರೀದಿದಾರರಿಗೆ ಮಾತ್ರ ತೋರಿಸಲಾಗುತ್ತದೆ. ಹೆಚ್ಚುವರಿ ಬೋನಸ್‌ನ ರೂಪದಲ್ಲಿ, ಕಾಮೆಂಟ್‌ಗಳ ವಿಭಾಗದಲ್ಲಿ ವಿಶಿಷ್ಟ, ವರ್ಣಮಯ ಮತ್ತು ಕಸ್ಟಮೈಸ್ ಮಾಡಬಹುದಾದ ಕಾಮೆಂಟ್ ಅನ್ನು ಪೋಸ್ಟ್ ಮಾಡಲು ಸಹ ಖರೀದಿದಾರರಿಗೆ ಅವಕಾಶ ಸಿಗುತ್ತದೆ. ವೀಕ್ಷಕರು ಸೂಪರ್ ಥ್ಯಾಂಕ್ಸ್ ಅನ್ನು ವಿವಿಧ ಪ್ರೈಸ್ ಪಾಯಿಂಟ್‌ಗಳಿಂದಲೂ ಆಯ್ಕೆ ಮಾಡಬಹುದು.

ಸೂಪರ್ ಥ್ಯಾಂಕ್ಸ್ ಅರ್ಹತೆಯ ಕುರಿತು ಇನ್ನಷ್ಟು ತಿಳಿಯಿರಿ.

ಸೂಪರ್ ಥ್ಯಾಂಕ್ಸ್

ನಿಮ್ಮ ಚಾನಲ್‌ಗಾಗಿ ಸೂಪರ್ ಥ್ಯಾಂಕ್ಸ್ ಅನ್ನು ಆನ್ ಅಥವಾ ಆಫ್ ಮಾಡಿ

ಸೂಪರ್ ಥ್ಯಾಂಕ್ಸ್ ಆನ್ ಮಾಡಿ

Shorts ನ ಸೂಪರ್ ಥ್ಯಾಂಕ್ಸ್ 🎉

ಸೂಪರ್ ಥ್ಯಾಂಕ್ಸ್‌ನಿಂದ ಆದಾಯವನ್ನು ಗಳಿಸಲು, ನೀವು (ಮತ್ತು ನಿಮ್ಮ MCN) ಮೊದಲಿಗೆ ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ (CPM) ಸಮ್ಮತಿಸಬೇಕು. CPM ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮYouTube ವಾಣಿಜ್ಯ ಉತ್ಪನ್ನಗಳ ಮಾನಿಟೈಶೇಶನ್ ನೀತಿಗಳನ್ನು ವೀಕ್ಷಿಸಿ.

ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡಲು ನೀವು ಕಂಪ್ಯೂಟರ್ ಅನ್ನು ಬಳಸಲು ಬಯಸುತ್ತೀರಿ ಎಂದಾದರೆ:

  1. ಕಂಪ್ಯೂಟರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. Supers ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಚಾನಲ್ ಅರ್ಹವಾಗಿದ್ದರೆ ಮಾತ್ರ ಈ ಟ್ಯಾಬ್ ಕಾಣಿಸಿಕೊಳ್ಳುತ್ತದೆ.
  4. ಪ್ರಾರಂಭಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
  5. Supers ವಿಭಾಗವನ್ನು ನೀವು ಮೊದಲ ಬಾರಿಗೆ ಬಳಸುತ್ತಿರುವಿರಾದರೆ, ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ (CPA) ಸಹಿ ಮಾಡಲು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
  6. ನೀವು ಎಲ್ಲಾ ಸೂಚನೆಗಳನ್ನು ಪೂರ್ಣಗೊಳಿಸಿದ ಬಳಿಕ, ನೀವು ಆನ್ ಅಥವಾ ಆಫ್ ಮಾಡಬಹುದಾದ ಸ್ವಿಚ್‌ನ ಪಕ್ಕದಲ್ಲಿ “ಸೂಪರ್ ಥ್ಯಾಂಕ್ಸ್” ಕಾಣಿಸಿಕೊಳ್ಳುತ್ತದೆ.

ಈ ಹಿಂದಿನ ಮತ್ತು ಭವಿಷ್ಯದ ಎಲ್ಲಾ ಅರ್ಹ Shorts ಹಾಗೂ ಲಾಂಗ್-ಫಾರ್ಮ್ ವೀಡಿಯೊಗಳಲ್ಲಿ ಸೂಪರ್ ಥ್ಯಾಂಕ್ಸ್  ಕಾಣಿಸಿಕೊಳ್ಳುತ್ತದೆ.

ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡಲು ನಿಮ್ಮ ಮೊಬೈಲ್ ಸಾಧನವನ್ನು ಬಳಸಲು ಬಯಸುತ್ತೀರಿ ಎಂದಾದರೆ:

  1. YouTube Studio ಮೊಬೈಲ್ ಆ್ಯಪ್ ಅನ್ನು ತೆರೆಯಿರಿ.
  2. ಸ್ಕ್ರೀನ್ ನ ಕೆಳಭಾಗದಲ್ಲಿ ಗಳಿಸಿ ಟ್ಯಾಪ್ ಮಾಡಿ.
  3. Supers ಕಾರ್ಡ್ ಅನ್ನು ಟ್ಯಾಪ್ ಮಾಡಿ. Supers ಕಾರ್ಡ್ ಕಾಣಿಸದಿದ್ದರೆ, “Supers” ವಿಭಾಗದಲ್ಲಿ ಪ್ರಾರಂಭಿಸಿ ಮತ್ತು ನಂತರ ಆನ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
  4. Supers ವಿಭಾಗವನ್ನು ನೀವು ಮೊದಲ ಬಾರಿಗೆ ಬಳಸುತ್ತಿರುವಿರಾದರೆ, ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ (CPA) ಸಹಿ ಮಾಡಲು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
  5. ನೀವು ಎಲ್ಲಾ ಸೂಚನೆಗಳನ್ನು ಪೂರ್ಣಗೊಳಿಸಿದ ಬಳಿಕ, ಈ ಅರ್ಹ ಸೇವೆಗಳಲ್ಲಿ ಎಲ್ಲಾ Supers ಉತ್ಪನ್ನಗಳು ಕಾಣಿಸಿಕೊಳ್ಳುತ್ತವೆ:
    • ಲೈವ್ ಸ್ಟ್ರೀಮ್‌ಗಳು ಹಾಗೂ ಪ್ರೀಮಿಯರ್‌ಗಳು (ಸೂಪರ್ ಚಾಟ್ ಹಾಗೂ ಸೂಪರ್ ಸ್ಟಿಕ್ಕರ್ಸ್)
    • ಲಾಂಗ್ ಫಾರ್ಮ್ ವೀಡಿಯೊಗಳು ಮತ್ತು Shorts (ಸೂಪರ್ ಥ್ಯಾಂಕ್ಸ್)
ಟಿಪ್ಪಣಿ:
  • ಥರ್ಡ್-ಪಾರ್ಟಿಯು ನಿಮ್ಮ ಹಕ್ಕುಗಳನ್ನು ನಿರ್ವಹಿಸುತ್ತಿದ್ದರೆ, ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡುವ ಮೊದಲು ಅವರೊಂದಿಗೆ ಪರಿಶೀಲಿಸಿ.
  • ನಿರ್ದಿಷ್ಟ Supers ಅನ್ನು ನೀವು ಆಫ್ ಮಾಡಲು ಬಯಸುತ್ತೀರಿ ಎಂದಾದರೆ, YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ. ಸೂಕ್ತ Supers ಅನ್ನು ಆಫ್ ಮಾಡಲು Supers ಟ್ಯಾಬ್‌ಗೆ ಹೋಗಿ.

ಸೂಪರ್ ಥ್ಯಾಂಕ್ಸ್ ಅನ್ನು ಆಫ್ ಮಾಡಿ

  1. ಕಂಪ್ಯೂಟರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಆಯ್ಕೆ ಮಾಡಿ.
  3. Supers ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. “ಸೂಪರ್ ಥ್ಯಾಂಕ್ಸ್” ಎಂಬುದರ ಪಕ್ಕದಲ್ಲಿರುವ ಸ್ವಿಚ್ ಅನ್ನು ಆಫ್ ಮಾಡಿ.
  5. ಪಾಪ್-ಅಪ್‌ನಲ್ಲಿ “ಈ ಕ್ರಿಯೆಯ ಪರಿಣಾಮಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ” ಎಂಬುದರ ಪಕ್ಕದಲ್ಲಿರುವ ಚೆಕ್‌ಬಾಕ್ಸ್ ಅನ್ನು ಆಯ್ಕೆ ಮಾಡಿ.
  6. ಆಫ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನೀವು ಸ್ವಿಚ್ ಅನ್ನು ಆಫ್ ಮಾಡಿದಾಗ, ನಿಮ್ಮ ಎಲ್ಲಾ Shorts ಮತ್ತು ಲಾಂಗ್-ಫಾರ್ಮ್ ವೀಡಿಯೊಗಳಿಂದ ಸೂಪರ್ ಥ್ಯಾಂಕ್ಸ್ ಫೀಚರ್‌ ಅನ್ನು ತೆಗೆದುಹಾಕಲಾಗುತ್ತದೆ. ನೀವು ಈಗಲೂ ಐತಿಹಾಸಿಕ ಗಳಿಕೆಗಳನ್ನು ಪರಿಶೀಲಿಸಬಹುದು.

ನಿಮ್ಮ ನೆಟ್‌ವರ್ಕ್‌ಗಾಗಿ ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡಿ.

ಒಂದು ನೆಟ್‌ವರ್ಕ್‌ನಲ್ಲಿರುವ ಚಾನಲ್, ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡುವ ಮೊದಲು, ಈ ಫೀಚರ್ ಅನ್ನು ಆನ್ ಮಾಡಲು ನೆಟ್‌ವರ್ಕ್ ಅನುಮತಿಸಬೇಕು:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಸೆಟ್ಟಿಂಗ್‌ಗಳಿಗೆ ಹೋಗಿ.
  3. ಒಪ್ಪಂದಗಳು ಎಂಬುದನ್ನು ಕ್ಲಿಕ್ ಮಾಡಿ ಮತ್ತು ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ ಸಮ್ಮತಿಸಿ.

ಸಮ್ಮತಿಸಿದ ಬಳಿಕ, ನಿಮ್ಮ ನೆಟ್‌ವರ್ಕ್‌ನಲ್ಲಿರುವ ಅರ್ಹ ಚಾನಲ್‍ಗಳು ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡಬಹುದು.

ಸೂಪರ್ ಥ್ಯಾಂಕ್ಸ್ ಕಾಮೆಂಟ್‌ಗಳು

ಸೂಪರ್ ಥ್ಯಾಂಕ್ಸ್ ಅನ್ನುವೀಕ್ಷಕರು ಖರೀದಿಸಿದಾಗ, ಬೋನಸ್‌ನ ರೂಪದಲ್ಲಿ ಅವರು ನಿಮ್ಮ Short ಅಥವಾ ಲಾಂಗ್-ಫಾರ್ಮ್ ವೀಡಿಯೊದಲ್ಲಿ ಕಾಮೆಂಟ್‌ಗಳ ವಿಭಾಗದಲ್ಲಿ ವರ್ಣಮಯ ಕಾಮೆಂಟ್ ಒಂದನ್ನು ಪೋಸ್ಟ್ ಮಾಡಬಹುದು.

YouTube Studio ಹಾಗೂ YouTube Studio ಆ್ಯಪ್‌ನ ಕಾಮೆಂಟ್‌ಗಳ ವಿಭಾಗದಲ್ಲಿ “ಸೂಪರ್ ಥ್ಯಾಂಕ್ಸ್‌ನಿಂದ” ಫಿಲ್ಟರ್ ಅನ್ನು ಬಳಸಿಕೊಂಡು, ಸೂಪರ್ ಥ್ಯಾಂಕ್ಸ್ ಅನ್ನು ಯಾರು ಖರೀದಿಸಿದ್ದಾರೆ ಎಂಬುದನ್ನು ನೀವು ನೋಡಬಹುದು. ನಿಮ್ಮ ಕಂಟೆಂಟ್‌ನ ಮೇಲಿನ ಕಾಮೆಂಟ್‌ಗಳನ್ನು ನೀವು ಪರಿಶೀಲಿಸಬಹುದು, ಪ್ರತ್ಯುತ್ತರಿಸಬಹುದು, ಹೃದಯ ಚಿಹ್ನೆ ಹಾಕಬಹುದು ಮತ್ತು ತೆಗೆದುಹಾಕಬಹುದು. ಖರೀದಿದಾರರು ತಮ್ಮ ಸೂಪರ್ ಥ್ಯಾಂಕ್ಸ್ ಕಾಮೆಂಟ್ ಅನ್ನು ಅಳಿಸಿದರೆ, ಅದು ನಿಮ್ಮ ಕಾಮೆಂಟ್‌ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಸೂಪರ್ ಥ್ಯಾಂಕ್ಸ್ ಕಾಮೆಂಟ್‌ಗೆ Short ನೊಂದಿಗೆ ಪ್ರತ್ಯುತ್ತರಿಸಿ

ಕಾಮೆಂಟ್ ಸ್ಟಿಕ್ಕರ್ ಫೀಚರ್, Short ನೊಂದಿಗೆ ಸೂಪರ್ ಥ್ಯಾಂಕ್ಸ್ ಕಾಮೆಂಟ್‌ಗೆ ಪ್ರತ್ಯುತ್ತರಿಸಲು ನಿಮಗೆ ಅವಕಾಶ ನೀಡುವ ಮೂಲಕ, ನಿಮ್ಮ ಅಭಿಮಾನಿಗಳನ್ನು ಗುರುತಿಸಲು ಮತ್ತು ಅವರೊಂದಿಗೆ ಗಾಢವಾದ ಸಂಬಂಧಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಿಮ್ಮ ಅಭಿಮಾನಿಯ ಕಾಮೆಂಟ್ Short ನಲ್ಲಿ ಸೂಪರ್ ಥ್ಯಾಂಕ್ಸ್ ಕಾಮೆಂಟ್‌ ಆಗಿ ಕಾಣಿಸುತ್ತದೆ ಮತ್ತು ನೀವು ಅಭಿಮಾನಿಯ ಕಾಮೆಂಟ್‌ಗೆ ಪ್ರತ್ಯುತ್ತರಿಸಿದ್ದೀರಿ ಎಂದು ಅವರಿಗೆ ಎಚ್ಚರಿಸುತ್ತದೆ. 

YouTube Studio ದ ಕಾಮೆಂಟ್‌ಗಳ ವಿಭಾಗದಲ್ಲಿ ಮತ್ತು YouTube Studio ಮೊಬೈಲ್ ಆ್ಯಪ್‌ನಲ್ಲಿ "ಸೂಪರ್ ಥ್ಯಾಂಕ್ಸ್‌ನಿಂದ" ಫಿಲ್ಟರ್‌ನೊಂದಿಗೆ ಸೂಪರ್ ಥ್ಯಾಂಕ್ಸ್ ಅನ್ನು ಯಾರು ಖರೀದಿಸಿದ್ದಾರೆ ಎಂಬುದನ್ನು ನೀವು ವೀಕ್ಷಿಸಬಹುದು. ನೀವು Short ಮೂಲಕ ಪ್ರತ್ಯುತ್ತರಿಸಲು ಬಯಸುವ ಸೂಪರ್ ಥ್ಯಾಂಕ್ಸ್ ಅನ್ನು ಕಂಡುಕೊಂಡ ಬಳಿಕ: 

  1. YouTube ಮೊಬೈಲ್ ಆ್ಯಪ್ ತೆರೆಯಿರಿ.
  2. ಸೂಪರ್ ಥ್ಯಾಂಕ್ಸ್ ಕಾಮೆಂಟ್ ಇರುವ ನಿಮ್ಮ ವೀಡಿಯೊ ಅಥವಾ Short ನ ವೀಕ್ಷಣಾ ಪುಟಕ್ಕೆ ಹೋಗಿ. 
  3. ಕಾಮೆಂಟ್‌ಗಳ ಫೀಡ್ ತೆರೆಯಿರಿ ಮತ್ತು ನೀವು ಪ್ರತ್ಯುತ್ತರಿಸಲು ಬಯಸುವ ಸೂಪರ್ ಥ್ಯಾಂಕ್ಸ್ ಕಾಮೆಂಟ್ ಅನ್ನು ಹುಡುಕಿ.
  4. ಕಾಮೆಂಟ್‌ನ ಕೆಳಗೆ, ಪ್ರತ್ಯುತ್ತರಿಸಿ  ನಂತರ Short ಅನ್ನು ರಚಿಸಿ ಅನ್ನು ಟ್ಯಾಪ್ ಮಾಡಿ.

Shorts ರಚನೆಯ ಅನುಭವದ ಸಮಯದಲ್ಲಿ, ನೀವು ಸೂಪರ್ ಥ್ಯಾಂಕ್ಸ್ ಕಾಮೆಂಟ್ ಅನ್ನು ಡ್ರ್ಯಾಗ್ ಮಾಡುವ ಮೂಲಕ ಅದರ ಸ್ಥಾನವನ್ನು ಬದಲಾಯಿಸಬಹುದು ಅಥವಾ ಕಾಮೆಂಟ್ ಸ್ಟಿಕ್ಕರ್ ಅನ್ನು ಮರುಗಾತ್ರಗೊಳಿಸಲು ಸೂಪರ್ ಥ್ಯಾಂಕ್ಸ್ ಕಾಮೆಂಟ್ ಅನ್ನು ಪಿಂಚ್ ಮಾಡಬಹುದು. YouTube Shorts ಅನ್ನು ರಚಿಸುವುದರ ಕುರಿತು ಮತ್ತು ನಮ್ಮ ಸೃಜನಾತ್ಮಕ ಫೀಚರ್‌ಗಳೊಂದಿಗೆ ನಿಮ್ಮ Short ಅನ್ನು ವರ್ಧಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಆದಾಯ ವರದಿ

YouTube Analytics ನಲ್ಲಿ ಆದಾಯ ನಂತರ ನೀವು ಹೇಗೆ ಹಣ ಗಳಿಸುತ್ತೀರಿ ಕಾರ್ಡ್ ನಂತರ Supers ಎಂಬುದನ್ನು ಆಯ್ಕೆ ಮಾಡುವ ಮೂಲಕ, ಸೂಪರ್ ಥ್ಯಾಂಕ್ಸ್‌ಗಾಗಿ ನಿಮ್ಮ ಆದಾಯದ ಬ್ರೇಕ್‌ಡೌನ್ ಅನ್ನು ನೀವು ನೋಡಬಹುದು.

ಆದಾಯದ ಹಂಚಿಕೆ

Google ಗುರುತಿಸಿದ ಸೂಪರ್ ಥ್ಯಾಂಕ್ಸ್ ಆದಾಯದಲ್ಲಿ ರಚನೆಕಾರರು 70% ಅನ್ನು ಪಡೆಯುತ್ತಾರೆ. ತೆರಿಗೆಗಳು ಹಾಗೂ ಶುಲ್ಕಗಳನ್ನು ಕಡಿತಗೊಳಿಸಿದ ನಂತರ (iOS ನಲ್ಲಿ ಆ್ಯಪ್ ಸ್ಟೋರ್ ಶುಲ್ಕವೂ ಒಳಗೊಂಡಂತೆ) 70% ಅನ್ನು ಲೆಕ್ಕ ಹಾಕಲಾಗುತ್ತದೆ. ಪ್ರಸ್ತುತ, ಕ್ರೆಡಿಟ್ ಕಾರ್ಡ್ ಶುಲ್ಕಗಳು ಸೇರಿದಂತೆ ವಹಿವಾಟು ವೆಚ್ಚಗಳನ್ನು YouTube ಭರಿಸುತ್ತದೆ.

YouTube ಗಾಗಿ AdSense ಮೂಲಕ ನೀವು ಜಾಹೀರಾತು ಆದಾಯವನ್ನು ಪಡೆಯುವ ರೀತಿಯಲ್ಲಿಯೇ, ನೀವು ಸೂಪರ್ ಥ್ಯಾಂಕ್ಸ್ ಆದಾಯವನ್ನು ಪಡೆಯುತ್ತೀರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13581643564534306334
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false