ನಿಮ್ಮ YouTube ಗಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ

ನಿಮ್ಮ YouTube ಗಾಗಿ AdSense ಖಾತೆಯ ಸೆಟ್‌ಅಪ್ ಅನ್ನು ನೀವು ಪೂರ್ಣಗೊಳಿಸಿರದಿದ್ದರೆ, ಅಥವಾ ಅದು 6 ತಿಂಗಳ ಕಾಲ ಯಾವುದೇ ಆ್ಯಡ್‌ ಚಟುವಟಿಕೆ ಅಥವಾ ಗಳಿಕೆಗಳನ್ನು ಸ್ವೀಕರಿಸಿಲ್ಲ ಎಂದಾದರೆ, ಅದನ್ನು ನಿಷ್ಕ್ರಿಯಗೊಳಿಸಿರಬಹುದು. ನಿಮ್ಮ YouTube ಗಾಗಿ AdSense ಖಾತೆಯನ್ನು ಪುನಃ ಬಳಸಲು, ಅದನ್ನು ನಿಮ್ಮ ಚಾನಲ್‌ಗೆ ಲಿಂಕ್ ಮಾಡುವ ಮೂಲಕ ನೀವು ಅದನ್ನು ಮರುಸಕ್ರಿಯಗೊಳಿಸಬೇಕಾಗುತ್ತದೆ. ನಿಮ್ಮ YouTube ಗಾಗಿ AdSense ಖಾತೆಯು ಇನ್ನು ಮುಂದೆ ನಿಮಗೆ ಅಗತ್ಯವಿಲ್ಲ ಎಂದಾದರೆ, ನೀವು ಅದನ್ನು ರದ್ದು ಮಾಡಬಹುದು.
 
ನಿಮ್ಮ YouTube ಗಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೂ ಸಹ ನೀವು ಅದಕ್ಕೆ ಸೈನ್ ಇನ್ ಮಾಡಬಹುದು. ನಿಮ್ಮ ಖಾತೆಯನ್ನು ಮರುಸಕ್ರಿಯಗೊಳಿಸಲು, ನಿಮ್ಮ ಫೋನ್ ಸಂಖ್ಯೆಯನ್ನು ಮತ್ತೊಮ್ಮೆ ದೃಢೀಕರಿಸಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ವಿಳಾಸವು ಅಪ್ ಟು ಡೇಟ್ ಆಗಿದೆಯೇ ಎಂಬುದನ್ನು ಸಹ ಪರಿಶೀಲಿಸಲು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ಚಾನಲ್, YouTube ಪಾಲುದಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಥವಾ YouTube ನಿಂದ ಪಾವತಿ ಪಡೆಯಲು ಅರ್ಹವಾಗಿದ್ದರೆ, ನೀವು YouTube ಗಾಗಿ AdSense ಖಾತೆಯನ್ನು ಮರುಸಕ್ರಿಯಗೊಳಿಸಬಹುದು ಅಥವಾ ಹೊಸದನ್ನು ರಚಿಸಬಹುದು.
ರಷ್ಯಾದಲ್ಲಿ Google ಜಾಹೀರಾತು ಸಿಸ್ಟಂಗಳನ್ನು ಇತ್ತೀಚೆಗೆ ಅಮಾನತುಗೊಳಿಸಿರುವುದರಿಂದಾಗಿ, ರಷ್ಯಾದ YouTube ಗಾಗಿ AdSense ಮತ್ತು AdSense ಖಾತೆಗಳ ಮರುಸಕ್ರಿಯಗೊಳಿಸುವಿಕೆಗಳನ್ನು ವಿರಾಮಗೊಳಿಸಲಾಗಿದೆ. ಇನ್ನಷ್ಟು ತಿಳಿಯಿರಿ.

ನಿಮ್ಮ YouTube ಗಾಗಿ AdSense ಖಾತೆಯನ್ನು ಮರುಸಕ್ರಿಯಗೊಳಿಸಲು ಅನುಸರಿಸಬೇಕಾದ ಹಂತಗಳು

  1. ನಿಮ್ಮ YouTube ಗಾಗಿ AdSense ಖಾತೆಯನ್ನು ನಿಮ್ಮ ಚಾನಲ್‌ಗೆ ಲಿಂಕ್ ಮಾಡಿ.
  2. YouTube ಗಾಗಿ AdSense ಗೆ ಸೈನ್ ಇನ್ ಮಾಡಿ.
  3. ನಿಮ್ಮ ಫೋನ್ ಸಂಖ್ಯೆಯನ್ನು ದೃಢೀಕರಿಸಿ.

ನಿಮ್ಮ YouTube ಗಾಗಿ AdSense ಖಾತೆಯನ್ನು ಏಕೆ ನಿಷ್ಕ್ರಿಯಗೊಳಿಸಲಾಗಿದೆ

ಖಾತೆಯ ಸೆಟ್‌ಅಪ್ ಅಪೂರ್ಣವಾಗಿದೆ

ನಿಮ್ಮ YouTube ಗಾಗಿ AdSense ಖಾತೆಯನ್ನು ಸೆಟ್‌ಅಪ್ ಮಾಡಲು ಮತ್ತು ಅದನ್ನು ನಿಮ್ಮ YouTube ಚಾನಲ್‌ಗೆ ಲಿಂಕ್ ಮಾಡಲು ಬೇಕಾದ ಹಂತಗಳನ್ನು ಪೂರ್ಣಗೊಳಿಸಿರದಿದ್ದರೆ, ಆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿರ್ದಿಷ್ಟ ಸಮಯದವರೆಗೆ ನಿಮ್ಮ YouTube ಗಾಗಿ AdSense ಖಾತೆಯನ್ನು ಸೆಟ್‌ಅಪ್ ಮಾಡುವುದನ್ನು ನೀವು ಪೂರ್ಣಗೊಳಿಸದಿದ್ದರೆ, ನಾವು ನಿಮಗೆ ಸೂಚನೆ ನೀಡಲು ಪ್ರಾರಂಭಿಸುತ್ತೇವೆ.

ಖಾತೆಯ ಸೆಟ್‌ಅಪ್ ಅನ್ನು ಪೂರ್ಣಗೊಳಿಸದೆ 5 ತಿಂಗಳು ಕಳೆದ ನಂತರ

ಸಹಾಯ ಕೇಂದ್ರದ ಲೇಖನದಲ್ಲಿ ವಿವರಿಸಿರುವ ಹಂತಗಳನ್ನು ನೀವು ಪೂರ್ಣಗೊಳಿಸದಿದ್ದರೆ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂಬುದನ್ನು ನಿಮಗೆ ತಿಳಿಸಲು, YouTube ಗಾಗಿ AdSense ನಿಂದ ನೀವು ಇಮೇಲ್ ಅನ್ನು ಸ್ವೀಕರಿಸುವಿರಿ.

ಖಾತೆಯ ಸೆಟ್‌ಅಪ್ ಅನ್ನು ಪೂರ್ಣಗೊಳಿಸದೆ 6 ತಿಂಗಳು ಕಳೆದ ನಂತರ

ನಿಮ್ಮ YouTube ಗಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ನಿಷ್ಕ್ರಿಯತೆ

ನಿಷ್ಕ್ರಿಯತೆಯ ಕಾರಣದಿಂದ YouTube ಗಾಗಿ AdSense ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿಮ್ಮ ಚಾನಲ್‌ಗೆ ಲಿಂಕ್ ಮಾಡಲಾದ ಖಾತೆಯಲ್ಲಿ ನಿರ್ದಿಷ್ಟ ಸಮಯದವರೆಗೆ ಚಟುವಟಿಕೆ ಇಲ್ಲದಿದ್ದರೆ, ನಾವು ನಿಮಗೆ ಸೂಚನೆ ನೀಡಲು ಪ್ರಾರಂಭಿಸುತ್ತೇವೆ. ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಚಟುವಟಿಕೆ ಅಥವಾ ಗಳಿಕೆಗಳು ಇದ್ದರೆ, ಅದನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ.

5 ತಿಂಗಳ ಕಾಲ ಚಟುವಟಿಕೆ ಇಲ್ಲದೇ ಇದ್ದ ನಂತರ

  • ನಿಮ್ಮ ಖಾತೆಯು ಆ್ಯಡ್ ಚಟುವಟಿಕೆ ಅಥವಾ ಗಳಿಕೆಗಳನ್ನು ಹೊಂದಿಲ್ಲದಿದ್ದರೆ, ಅದನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ನಿಮಗೆ ತಿಳಿಸುವ ಇಮೇಲ್ ಅನ್ನು ನೀವು YouTube ಗಾಗಿ AdSense ನಿಂದ ಸ್ವೀಕರಿಸುತ್ತೀರಿ.

6 ತಿಂಗಳ ಕಾಲ ಚಟುವಟಿಕೆ ಇಲ್ಲದೇ ಇದ್ದ ನಂತರ

  • ನಿಮ್ಮ YouTube ಗಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

FAQ ಗಳು

ನನ್ನ YouTube ಗಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ಅದರಲ್ಲಿ ಇನ್ನೂ ಹಣವಿದೆ, ನಾನು ಹೇಗೆ ಪಾವತಿ ಪಡೆಯಬಹುದು?

ನಿಮ್ಮ ಖಾತೆಯ ಬ್ಯಾಲೆನ್ಸ್ ಕ್ಯಾನ್ಸಲ್ಲೇಶನ್ ಥ್ರೆಶ್‌ಹೋಲ್ಡ್‌ಗಿಂತ ಹೆಚ್ಚಿದ್ದರೆ ಮತ್ತು ನೀವು ಪಾವತಿ ತಡೆಹಿಡಿಯುವಿಕೆಗಳನ್ನು ಪರಿಹರಿಸಿದರೆ, ನಿಮ್ಮ ಖಾತೆಯನ್ನು ಮುಚ್ಚಿದ ನಂತರ ನಿಮ್ಮ YouTube ಗಾಗಿ AdSense ಬ್ಯಾಲೆನ್ಸ್ ಅನ್ನು ನೀವು ಪಡೆಯಬಹುದು.

ನನ್ನ ಖಾತೆಯನ್ನು ನಾನು ಮರುಸಕ್ರಿಯಗೊಳಿಸಿದಾಗ, ನನ್ನ ವಿಳಾಸವನ್ನು ಪಿನ್ ಮೂಲಕ ಇನ್ನೊಮ್ಮೆ ದೃಢೀಕರಿಸಬೇಕೇ?

ಇಲ್ಲ. ನೀವು ಈ ಹಿಂದೆ ನಿಮ್ಮ ವಿಳಾಸವನ್ನು ಪಿನ್ ಮೂಲಕ ದೃಢೀಕರಿಸಿದ್ದರೆ, ಪುನಃ ಅದನ್ನು ದೃಢೀಕರಿಸುವ ಅಗತ್ಯವಿಲ್ಲ. ನೀವು ಈ ಹಿಂದೆ ನಿಮ್ಮ ವಿಳಾಸವನ್ನು ಪಿನ್ ಮೂಲಕ ದೃಢೀಕರಿಸಿರದಿದ್ದರೆ, ನಿಮ್ಮ ಪಾವತಿಗಳನ್ನು ಸ್ವೀಕರಿಸುವ ಮೊದಲು ನಿಮ್ಮ ವಿಳಾಸವನ್ನು ದೃಢೀಕರಿಸಲು ನಿಮ್ಮನ್ನು ಕೇಳಲಾಗುತ್ತದೆ.

ನನ್ನ AdSense ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ, ಇದು ನನ್ನ YouTube ಚಾನಲ್ ಸ್ಟೇಟಸ್ ಮೇಲೆ ಪರಿಣಾಮ ಬೀರುತ್ತದೆಯೇ?

ಇಲ್ಲ. AdSense ನಿಷ್ಕ್ರಿಯಗೊಳಿಸುವಿಕೆಯು ನಿಮ್ಮ YouTube ಚಾನಲ್‌ನ ಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಮ್ಮ ಚಾನಲ್‌ನಲ್ಲಿ ನೀವು ಮಾನಿಟೈಸ್ ಮಾಡಲು ಪ್ರಾರಂಭಿಸಿದರೆ ಮತ್ತು YouTube ಪಾಲುದಾರ ಕಾರ್ಯಕ್ರಮದ ಎಲ್ಲಾ ಇರಬೇಕಾದ ಅರ್ಹತೆಗಳನ್ನು ಪೂರೈಸಿದರೆ, ನೀವು ಪಾವತಿ ಪಡೆಯಲು YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ನಾನು ಎಚ್ಚರಿಕೆಯ ಇಮೇಲ್ ಅನ್ನು ಸ್ವೀಕರಿಸಿದ ನಂತರ ನನ್ನ ಚಾನಲ್ ಮಾನಿಟೈಸ್ ಮಾಡಲು ಪ್ರಾರಂಭಿಸಿತು, ಈಗಲೂ ನನ್ನ YouTube ಗಾಗಿ AdSense ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆಯೇ?

ಇಲ್ಲ. ನಿಮ್ಮ YouTube ಚಾನಲ್‌ನಲ್ಲಿ ನೀವು ಮಾನಿಟೈಸ್ ಮಾಡಲು ಪ್ರಾರಂಭಿಸಿದರೆ, ನಿಮ್ಮ YouTube ಗಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13376127261128656734
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false