ರೀಮಿಕ್ಸ್ ಮಾಡಿದ ಕಂಟೆಂಟ್ ಬಳಸಿಕೊಂಡು YouTube Shorts ರಚಿಸಿ

ನೀವು ಇಷ್ಟಪಡುವ ಕಂಟೆಂಟ್‌ನಲ್ಲಿ ನಿಮ್ಮ ವಿಶಿಷ್ಟವಾದ ರಚನಾ ಕೌಶಲ್ಯಗಳಿಗೆ ಜೀವ ತುಂಬಲು ನಮ್ಮ Shorts ತಯಾರಿಸುವ ಟೂಲ್‌ಗಳನ್ನು ಬಳಸಿ. ಸೃಜನಶೀಲರಾಗಿರಿ ಮತ್ತು ಆಡಿಯೋವನ್ನು ರೀಮಿಕ್ಸ್ ಮಾಡಲು ಅಥವಾ YouTube ನಾದ್ಯಂತವಿರುವ ವೀಡಿಯೊಗಳಿಂದ ವೀಡಿಯೊ ಸೆಗ್ಮೆಂಟ್ ಅನ್ನು ಸೇರಿಸಲು ನಮ್ಮ ರೀಮಿಕ್ಸಿಂಗ್ ಆಯ್ಕೆಗಳನ್ನು ಬಳಸಿ.

ರೀಮಿಕ್ಸ್ ಮಾಡಿದ ಕಂಟೆಂಟ್ ಅನ್ನು ಬಳಸಿಕೊಂಡು ರಚಿಸಿದ Shorts ವೀಡಿಯೊಗಳನ್ನು ಮೂಲ ಕೃತಿಗೆ ಮರಳಿ ಆ್ಯಟ್ರಿಬ್ಯೂಟ್ ಮಾಡಲಾಗುತ್ತದೆ – ನಿಮ್ಮ ಕಂಟೆಂಟ್ ಅನ್ನು ಅನ್ವೇಷಿಸಲು ಹೊಸ ವೀಕ್ಷಕರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ!

ನಿಮ್ಮ ರೀಮಿಕ್ಸ್ ಆಡಿಯೋ ಮೂಲಕ್ಕೆ ಸೌಂಡ್ ಲೈಬ್ರರಿ ಪುಟದಲ್ಲಿ ಕ್ರೆಡಿಟ್ ನೀಡಲಾಗಿದೆ (ಉದಾಹರಣೆ ಮೇಲಿದೆ).

ಒಂದೇ ಆಡಿಯೋವನ್ನು ಬಳಸಿಕೊಂಡು ರಚಿಸಿದ ಇತರೆ Shorts ವೀಡಿಯೊಗಳ ಜೊತೆಗೆ ಮೂಲ ವೀಡಿಯೊಗೆ ಲಿಂಕ್ ಅನ್ನು ಹುಡುಕಲು, Shorts ಪ್ಲೇಯರ್‌ನಲ್ಲಿ ಸೌಂಡ್ ಟ್ಯಾಪ್ ಮಾಡಿ.

ವೀಡಿಯೊ ಲಿಂಕ್ ಸಮೇತವಾಗಿ Shorts ಪ್ಲೇಯರ್‌ನಲ್ಲಿ ನಿಮ್ಮ ರೀಮಿಕ್ಸ್ ಮಾಡಿದ ವೀಡಿಯೊ ಮೂಲಕ್ಕೆ ಕ್ರೆಡಿಟ್ ನೀಡಲಾಗಿದೆ (ಉದಾಹರಣೆ ಮೇಲಿದೆ).

ರೀಮಿಕ್ಸ್ ಮಾಡಿದ ಆಡಿಯೋ ಮತ್ತು ಎಫೆಕ್ಟ್ ಬಳಸಿಕೊಂಡು Shorts ರಚಿಸಿ

ನಿಮ್ಮ YouTube #shorts ಗಳಿಗೆ ಆಡಿಯೊವನ್ನು ಸೇರಿಸುವುದು ಹೇಗೆ

ಮೂಲ ಕಂಟೆಂಟ್‌ನಿಂದ ಆಡಿಯೋ ಮತ್ತು ಎಫೆಕ್ಟ್‌ಗಳನ್ನು ಬಳಸಿಕೊಂಡು ನಿಮ್ಮ ಸ್ವಂತ Shorts ಅನ್ನು ನೀವು ಸುಲಭವಾಗಿ ರಚಿಸಬಹುದು.

Shorts ಪ್ಲೇಯರ್‌ನಿಂದ

ಬೇರೊಂದು Short ನಿಂದ ರೀಮಿಕ್ಸ್ ಮಾಡಲು:

  1. ಮೊಬೈಲ್‌ನಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನೀವು ಸ್ಯಾಂಪಲ್ ಮಾಡಲು ಬಯಸುವ Short ಗೆ ಹೋಗಿ.
  3. ಕೆಳಗಿನ ಬಲ ಮೂಲೆಯಲ್ಲಿ, ಅದೇ ಆಡಿಯೋ ಮತ್ತು ಎಫೆಕ್ಟ್ ಅನ್ನು ಬಳಸಿರುವ ಬೇರೆ Shorts ವೀಡಿಯೊಗಳನ್ನು ಹುಡುಕಲು ಸೌಂಡ್  ಟ್ಯಾಪ್ ಮಾಡಿ.
  4. Short ರಚಿಸಲು,  ಈ ಸೌಂಡ್ ಬಳಸಿ ಟ್ಯಾಪ್ ಮಾಡಿ.

ವೀಡಿಯೊ ವೀಕ್ಷಣೆ ಪುಟದಿಂದ

ಲಾಂಗ್-ಫಾರ್ಮ್ ವೀಡಿಯೊದಿಂದ ಆಡಿಯೋವನ್ನು ರೀಮಿಕ್ಸ್ ಮಾಡಲು:

  1. ಮೊಬೈಲ್‌ನಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನೀವು ಸ್ಯಾಂಪಲ್ ಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ವೀಡಿಯೊ ಪ್ಲೇಯರ್ ಅಡಿಯಲ್ಲಿ, ರೀಮಿಕ್ಸ್  ನಂತರ ಸೌಂಡ್  ಎಂಬುದನ್ನು ಟ್ಯಾಪ್ ಮಾಡಿ.

 ಅಧಿಕೃತ ಕಲಾವಿದರ ಚಾನಲ್‌ನಿಂದ

ಅಧಿಕೃತ ಕಲಾವಿದರ ಚಾನಲ್‌ನಿಂದ ಆಡಿಯೋವನ್ನು ರೀಮಿಕ್ಸ್ ಮಾಡಲು:

  1. ಅಧಿಕೃತ ಕಲಾವಿದರ ಚಾನಲ್ ಅನ್ನು ತೆರೆಯಿರಿ.
  2. "Shorts ನಲ್ಲಿನ ಜನಪ್ರಿಯ ಸೌಂಡ್‌ಗಳು" ವಿಭಾಗಕ್ಕೆ ಹೋಗಿ.
  3. ನೀವು ಸ್ಯಾಂಪಲ್ ಮಾಡಲು ಬಯಸುವ ಹಾಡಿನ ಪಕ್ಕದಲ್ಲಿ,  ಈ ಧ್ವನಿಯನ್ನು Short ರಚಿಸಲು ಬಳಸಿ ಅನ್ನು ಟ್ಯಾಪ್ ಮಾಡಿ.

ನೀವು ಆ ಹಾಡನ್ನು ಫೀಚರ್ ಮಾಡುವ ಇತರ ವೀಡಿಯೊಗಳನ್ನು ವೀಕ್ಷಿಸಲು ಸೌಂಡ್‌ನ ಮೇಲೆ ಸಹ ಟ್ಯಾಪ್ ಮಾಡಬಹುದು ಅಥವಾ ಸೌಂಡ್ ಅನ್ನು ನಿಮ್ಮ ಲೈಬ್ರರಿಯಲ್ಲಿ ಉಳಿಸಲು  ಅನ್ನು ಟ್ಯಾಪ್ ಮಾಡಬಹುದು.

ರೀಮಿಕ್ಸ್‌ಡ್ ವೀಡಿಯೊ ಮೂಲಕ Shorts ಅನ್ನು ಪರಿಚಯಿಸಿ

Shorts ನಲ್ಲಿ Short ಗಳಿಗೆ ಪ್ರತಿಕ್ರಿಯಿಸುವುದು ಹೇಗೆ 🗣️

Shorts ಪ್ಲೇಯರ್‌ನಿಂದ

ಬೇರೊಂದು Short ನಿಂದ ರೀಮಿಕ್ಸ್ ಮಾಡಲು:

  1. ಮೊಬೈಲ್‌ನಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನೀವು ಸ್ಯಾಂಪಲ್ ಮಾಡಲು ಬಯಸುವ Short ಗೆ ಹೋಗಿ.
  3. ಇನ್ನಷ್ಟು  ನಂತರ Cut ಈ ವೀಡಿಯೊ ಕಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
    • ಸಲಹೆ: ಬೇರೊಂದು ಲೇಔಟ್ ಅನ್ನು ಆಯ್ಕೆಮಾಡಲು, ಲೇಔಟ್ ಎಂಬುದನ್ನು ಟ್ಯಾಪ್ ಮಾಡಿ.

ವೀಡಿಯೊ ವೀಕ್ಷಣೆ ಪುಟದಿಂದ

ಲಾಂಗ್-ಫಾರ್ಮ್ ವೀಡಿಯೊದಿಂದ ರೀಮಿಕ್ಸ್ ಮಾಡಲು:

  1. ಮೊಬೈಲ್‌ನಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನೀವು ಸ್ಯಾಂಪಲ್ ಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ವೀಡಿಯೊ ಪ್ಲೇಯರ್ ಅಡಿಯಲ್ಲಿ, ರೀಮಿಕ್ಸ್  ನಂತರ ಕಟ್ Cut ಎಂಬುದನ್ನು ಟ್ಯಾಪ್ ಮಾಡಿ.
    • ಸಲಹೆ: ಬೇರೊಂದು ಲೇಔಟ್ ಅನ್ನು ಆಯ್ಕೆಮಾಡಲು, ಲೇಔಟ್ ಎಂಬುದನ್ನು ಟ್ಯಾಪ್ ಮಾಡಿ.

ರೀಮಿಕ್ಸ್‌ಡ್ ವೀಡಿಯೊ ಹಿನ್ನೆಲೆಗಳನ್ನು ಬಳಸಿಕೊಂಡು Shorts ರಚಿಸಿ

ಇತರ Shorts ಜೊತೆಗೆ ಗ್ರೀನ್ ಸ್ಕ್ರೀನ್! 🟩🤳

Shorts ಪ್ಲೇಯರ್‌ನಿಂದ

ಬೇರೊಂದು Short ನಿಂದ ರೀಮಿಕ್ಸ್ ಮಾಡಲು:

  1. ​ಮೊಬೈಲ್‌ನಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನೀವು ಸ್ಯಾಂಪಲ್ ಮಾಡಲು ಬಯಸುವ Short ಗೆ ಹೋಗಿ.
  3. ರೀಮಿಕ್ಸ್  ನಂತರ  ಗ್ರೀನ್ ಸ್ಕ್ರೀನ್ ಎಂಬುದನ್ನು ಟ್ಯಾಪ್ ಮಾಡಿ.

ವೀಡಿಯೊ ವೀಕ್ಷಣಾ ಪುಟದಿಂದ

ಲಾಂಗ್-ಫಾರ್ಮ್ ವೀಡಿಯೊದಿಂದ ರೀಮಿಕ್ಸ್ ಮಾಡಲು:

  1. ಮೊಬೈಲ್‌ನಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನೀವು ಸ್ಯಾಂಪಲ್ ಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ವೀಡಿಯೊ ಪ್ಲೇಯರ್ ಅಡಿಯಲ್ಲಿ, ರೀಮಿಕ್ಸ್  ನಂತರ  ಗ್ರೀನ್ ಸ್ಕ್ರೀನ್ ಎಂಬುದನ್ನು ಟ್ಯಾಪ್ ಮಾಡಿ.​

Collab ಮೂಲಕ Shorts ಅನ್ನು ರಚಿಸಿ

ಇತರ Shorts ಜೊತೆಗೆ ✨COLLAB✨ ಮಾಡುವುದು ಹೇಗೆ 🙌

Shorts ಪ್ಲೇಯರ್‌ನಿಂದ

ಬೇರೊಂದು Short ನಿಂದ Collab ಜೊತೆ ರೀಮಿಕ್ಸ್ ಮಾಡಲು:

  1. ಮೊಬೈಲ್‌ನಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನೀವು ಸ್ಯಾಂಪಲ್ ಮಾಡಲು ಬಯಸುವ Short ಗೆ ಹೋಗಿ.
  3. ರೀಮಿಕ್ಸ್ ನಂತರ Collab ಎಂಬುದನ್ನು ಟ್ಯಾಪ್ ಮಾಡಿ.

ವೀಡಿಯೊ ವೀಕ್ಷಣಾ ಪುಟದಿಂದ

ಲಾಂಗ್-ಫಾರ್ಮ್ ವೀಡಿಯೊದಿಂದ Collab ಜೊತೆ ರೀಮಿಕ್ಸ್ ಮಾಡಲು:

  1. ಮೊಬೈಲ್‌ನಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನೀವು ಸ್ಯಾಂಪಲ್ ಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ವೀಡಿಯೊ ಪ್ಲೇಯರ್ ಅಡಿಯಲ್ಲಿ, ರೀಮಿಕ್ಸ್ ನಂತರCollab ಎಂಬುದನ್ನು ಟ್ಯಾಪ್ ಮಾಡಿ.

YouTube Shorts ನಲ್ಲಿ ಸಂಗೀತದ ವೀಡಿಯೊ ರೀಮಿಕ್ಸ್ ಅನ್ನು ರಚಿಸಿ

YouTube ರಚನೆಕಾರರು ನಮ್ಮ Shorts ತಯಾರಿಸುವ ಟೂಲ್‌ಗಳನ್ನು ಬಳಸಿಕೊಂಡು YouTube ನಾದ್ಯಂತ ಸಂಗೀತದ ವೀಡಿಯೊಗಳಿಂದ ಆಡಿಯೋ ಮತ್ತು ವಿಷುವಲ್ ಕಂಟೆಂಟ್ ಅನ್ನು ರೀಮಿಕ್ಸ್ ಮಾಡಬಹುದು. ಗ್ರೀನ್ ಸ್ಕ್ರೀನ್, ಕಟ್, ಮತ್ತು ಆಡಿಯೋ ರೀಮಿಕ್ಸ್ ಸೇರಿದಂತೆ ಕೆಲವು ವಿಭಿನ್ನ ವಿಧಾನಗಳಲ್ಲಿ ನೀವು ಸಂಗೀತದ ವೀಡಿಯೊ ಕಂಟೆಂಟ್ ಅನ್ನು ರೀಮಿಕ್ಸ್ ಮಾಡಬಹುದು.

YouTube Shorts ಗಾಗಿ ರೀಮಿಕ್ಸ್ ಮಾಡಲು ಯಾವ ರೀತಿಯ ಸೌಂಡ್ ರೆಕಾರ್ಡಿಂಗ್‌ಗಳು ಮತ್ತು ಸಂಗೀತದ ವೀಡಿಯೊಗಳು ಅರ್ಹವಾಗಿವೆ ಎಂಬುದರ ಕುರಿತು ಕೆಳಗೆ ಇನ್ನಷ್ಟು ತಿಳಿಯಿರಿ.

YouTube Shorts ಗಾಗಿ ಸಂಗೀತದ ವೀಡಿಯೊ ಕಂಟೆಂಟ್ ಅನ್ನು ರೀಮಿಕ್ಸ್ ಮಾಡುವುದು ಹೇಗೆ

ನೀವು ಈ ಕೆಳಗಿನ ಕೆಲವು ವಿಭಿನ್ನ ವಿಧಾನಗಳಲ್ಲಿ ರೀಮಿಕ್ಸ್ ಮಾಡಬಹುದು:

  • ಗ್ರೀನ್ ಸ್ಕ್ರೀನ್: ನಿಮ್ಮ Short ನ ಹಿನ್ನೆಲೆಯಾಗಿ ಸಂಗೀತದ ವೀಡಿಯೊವನ್ನು ಸ್ಯಾಂಪಲ್ ಮಾಡಿ. ನೀವು ಕೇವಲ ವಿಷುವಲ್ ಅಥವಾ ಆಡಿಯೋ ಮತ್ತು ವಿಡಿಯೋ ಎರಡನ್ನೂ ಸ್ಯಾಂಪಲ್ ಮಾಡಬಹುದು.
  • ಕಟ್: ಸಂಗೀತದ ವೀಡಿಯೊದ 1-5 ಸೆಕೆಂಡ್ ಸೆಗ್ಮೆಂಟ್ ಅನ್ನು ಸ್ಯಾಂಪಲ್ ಮಾಡಿ. ಇದು ಸಂಗೀತದ ವೀಡಿಯೊದ ಆಡಿಯೋ ಮತ್ತು ವೀಡಿಯೊ ಎರಡನ್ನೂ ಒಳಗೊಂಡಿದೆ.
  • ಆಡಿಯೋ ರೀಮಿಕ್ಸ್: ನಿಮ್ಮ Short ನಲ್ಲಿನ ಸಂಗೀತದ ವೀಡಿಯೊದಿಂದ 60 ಸೆಕೆಂಡುಗಳವರೆಗೆ ಆಡಿಯೋವನ್ನು ಸ್ಯಾಂಪಲ್ ಮಾಡಿ.

ಸೂಚನೆ: YouTube ಜೊತೆಗಿನ ಪಾಲುದಾರ ಒಪ್ಪಂದಗಳ ಆಧಾರದ ಮೇಲೆ, ಕೆಲವು ವೀಡಿಯೊಗಳನ್ನು Shorts ನಲ್ಲಿ 30 ಸೆಕೆಂಡುಗಳ ಆಡಿಯೋ ಬಳಕೆಗೆ ಸೀಮಿತಗೊಳಿಸಬಹುದು

ಕಟ್ ಮತ್ತು ಗ್ರೀನ್ ಸ್ಕ್ರೀನ್ ಕುರಿತು ಇನ್ನಷ್ಟು ಮಾಹಿತಿಗಾಗಿ, YouTube Creators ಚಾನಲ್‌ನಿಂದ ಈ ಕೆಳಗಿನ ವೀಡಿಯೊಗಳನ್ನು ಪರಿಶೀಲಿಸಿ:

ನೀವು ಬೇರೆಲ್ಲಿಯಾದರೂ ರಚಿಸಿದ Short ವೀಡಿಯೊವನ್ನು ಅಪ್‌ಲೋಡ್ ಮಾಡಿದರೆ, ನೀವು ಬಳಸಿದ ಯಾವುದೇ ಕೃತಿಸ್ವಾಮ್ಯ-ಸಂರಕ್ಷಿತ ಸಾಮಗ್ರಿಯು YouTube ನಲ್ಲಿ ನೀವು ಬಳಸುವುದಕ್ಕಾಗಿ ಅನುಮೋದಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್ ಅನ್ನು ನೀವು ಬಳಸಿದರೆ, Content ID ಕ್ಲ್ಲೈಮ್ ಪಡೆಯಲು ಅದು ಕಾರಣವಾಗಬಹುದು. ಮಾತ್ರವಲ್ಲದೆ, ನಿಮ್ಮ Short ವೀಡಿಯೊದ ವಿರುದ್ಧ ಹಕ್ಕುಸ್ವಾಮ್ಯದ ಮಾಲೀಕರು, ಕಲಾವಿದರ ಲೇಬಲ್ ಅಥವಾ ವಿತರಕರು ನಮಗೆ ಮಾನ್ಯವಾದ ಮತ್ತು ಪೂರ್ಣವಾದ ಕೃತಿಸ್ವಾಮ್ಯ ತೆಗೆದುಹಾಕುವಿಕೆ ಸೂಚನೆಯನ್ನು ಕಳುಹಿಸಿದರೆ, ಅದನ್ನು ತೆಗೆದುಹಾಕಲಾಗುತ್ತದೆ ಮತ್ತು ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆಯಬಹುದು.

ಕಂಟೆಂಟ್ ಅನ್ನು ರೀಮಿಕ್ಸ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ

ನಾನು Short ರಚಿಸಲು ಯಾವ ಕಂಟೆಂಟ್ ಅನ್ನು ಬಳಸಬಹುದು?

ನೀವು ಈ ಕೆಳಗಿನ ಸ್ವತ್ತುಗಳನ್ನು ಬಳಸಿಕೊಂಡು YouTube ನಲ್ಲಿ Short ಅನ್ನು ರಚಿಸಬಹುದು:

  • ನನ್ನ ಲೈಬ್ರರಿಯಲ್ಲಿರುವ ಹಾಡು.
  • ಇತರ ಅನೇಕ Shorts ಮತ್ತು ಲಾಂಗ್-ಫಾರ್ಮ್ ವೀಡಿಯೊಗಳಿಂದ ಮೂಲ ಆಡಿಯೋ.
  • YouTube ನಾದ್ಯಂತವಿರುವ ಅನೇಕ ವೀಡಿಯೊಗಳಿಂದ ವೀಡಿಯೊ ಸೆಗ್ಮೆಂಟ್.
  • ಡ್ರೀಮ್ ಟ್ರ್ಯಾಕ್ ಮೂಲಕ ರಚಿಸಲಾದ ಸೌಂಡ್‌ಟ್ರ್ಯಾಕ್. ಡ್ರೀಮ್ ಟ್ರ್ಯಾಕ್ ಕುರಿತು ಇನ್ನಷ್ಟು ತಿಳಿಯಿರಿ.

ಕೆಲವು ವೀಡಿಯೊಗಳು ಅವುಗಳ ಗೌಪ್ಯತೆ ಸೆಟ್ಟಿಂಗ್‌ಗಳು ಅಥವಾ ಕೃತಿಸ್ವಾಮ್ಯದ ಮಾಲೀಕತ್ವವನ್ನು ಯಾರು ಕ್ಲೇಮ್‌ ಮಾಡಿದ್ದಾರೆ ಎಂಬುದನ್ನು ಆಧರಿಸಿ ಲಭ್ಯವಿಲ್ಲದಿರಬಹುದು. ಉದಾಹರಣೆಗೆ, Shorts ಗಾಗಿ ಕಂಟೆಂಟ್ ಅನ್ನು ಲಭ್ಯವಾಗುವಂತೆ ಮಾಡದ ಥರ್ಡ್ ಪಾರ್ಟಿ ಕೃತಿಸ್ವಾಮ್ಯ ಮಾಲೀಕರು ಕ್ಲೈಮ್ ಮಾಡಿದ ವೀಡಿಯೊಗಳು ಮತ್ತು ಖಾಸಗಿ ವೀಡಿಯೊಗಳನ್ನು ಇದು ಒಳಗೊಂಡಿರಬಹುದು. ರಚನೆಕಾರರಿಗೆ ತಮ್ಮ ಲಾಂಗ್-ಫಾರ್ಮ್ ವೀಡಿಯೊಗಳ ರೀಮಿಕ್ಸ್ ಅನ್ನು ಮಿತಿಗೊಳಿಸಲು ಅಥವಾ ತಮ್ಮ ಮೂಲ ಕಂಟೆಂಟ್ ಅನ್ನು ಯಾವಾಗ ಬೇಕಾದರೂ ಅಳಿಸಲು ನಾವು ಅವಕಾಶ ಮಾಡಿಕೊಡುತ್ತೇವೆ. YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪ್ರಕಾಶಕರು ಮತ್ತು ಪಾಲುದಾರರು ಸಹ ತಮ್ಮ Shorts ವೀಡಿಯೊಗಳ ರೀಮಿಕ್ಸಿಂಗ್ ಅನ್ನು ಮಿತಿಗೊಳಿಸಬಹುದು.

YouTube ನ ರಚನೆಯ ಟೂಲ್‌ಗಳ ಹೊರತಾಗಿ ರಚಿಸಲಾದ ನಿಮ್ಮ Shorts ನಲ್ಲಿ ನೀವು ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್ ಅನ್ನು ಬಳಸಿದರೆ, ನಿಮ್ಮ ವೀಡಿಯೊ Content ID ಕ್ಲೇಮ್ ಅನ್ನು ಪಡೆಯಬಹುದು ಅಥವಾ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ಕಾರಣದಿಂದ ತೆಗೆದುಹಾಕಬಹುದು.

ನಾನು ರೀಮಿಕ್ಸ್ ಅನ್ನು ರೀಮಿಕ್ಸ್ ಮಾಡಬಹುದೇ?

ಹೌದು, ಈಗಾಗಲೇ ರೀಮಿಕ್ಸ್ ಮಾಡಿರುವ ಕಂಟೆಂಟ್ ಅನ್ನು ನೀವು ರೀಮಿಕ್ಸ್ ಮಾಡಬಹುದು. ನೀವು ಆಡಿಯೊವನ್ನು ರೀಮಿಕ್ಸ್ ಮಾಡಬಹುದು, ನಿಮ್ಮದೇ ಆದ ಕಟ್ ಅನ್ನು ರಚಿಸಬಹುದು, Collab ಮೂಲಕ ಇತರರ ಜೊತೆ ಸಹಯೋಗ ನಡೆಸಬಹುದು ಅಥವಾ ಇತರರ ಕಂಟೆಂಟ್ ಅನ್ನು ಗ್ರೀನ್ ಸ್ಕ್ರೀನ್ ಆಗಿ ಬಳಸಬಹುದು. ಮೂಲ ವೀಡಿಯೊ ಮತ್ತು ಯಾವುದೇ ನಂತರದ ರೀಮಿಕ್ಸ್‌ಗಳು, ಪಿವೊಟ್ ಪುಟಗಳು ಹಾಗೂ ಪ್ಲೇಯರ್ ಮೆಟಾಡೇಟಾದಲ್ಲಿರುತ್ತವೆ. 

ನಾನು ಕ್ಲಿಪ್‌ಗಳನ್ನು ರೀಮಿಕ್ಸ್ ಮಾಡಬಹುದೇ?

ಹೌದು, ಕ್ಲಿಪ್‌ನ ಮೂಲ ವೀಡಿಯೊವು ರೀಮಿಕ್ಸ್‌ಗೆ ಅರ್ಹವಾಗಿದ್ದರೆ ನೀವು ಕ್ಲಿಪ್‌ ಅನ್ನು ರೀಮಿಕ್ಸ್ ಮಾಡಬಹುದು. ವೀಡಿಯೊದಲ್ಲಿ ನಿಮಗೆ ಲಭ್ಯವಿರುವ ಎಲ್ಲಾ ರೀಮಿಕ್ಸ್ ಪರಿಕರಗಳು ಆ ವೀಡಿಯೊಗೆ ಸಂಬಂಧಿಸಿದ ಯಾವುದೇ ಕ್ಲಿಪ್‌ನಲ್ಲಿಯೂ ಸಹ ನಿಮಗೆ ಲಭ್ಯವಿರುತ್ತವೆ.

ಯಾರಾದರೂ ನನ್ನ ಕಂಟೆಂಟ್ ಅನ್ನು ರೀಮಿಕ್ಸ್ ಮಾಡಿದಾಗ ನಾನು ತಿಳಿಯುವುದು ಹೇಗೆ?

ನಿಮ್ಮ ವೀಡಿಯೊ ರೀಮಿಕ್ಸ್ ಆದರೆ ನೀವು ನೋಟಿಫಿಕೇಶನ್ ಅನ್ನು ಸ್ವೀಕರಿಸುತ್ತೀರಿ. ದಿನಕ್ಕೆ ಒಂದು ಬಾರಿ; ವಾರಕ್ಕೆ ಮೂರು ಬಾರಿ ನೋಟಿಫಿಕೇಶನ್ ಕಳುಹಿಸಲಾಗುತ್ತದೆ. ಹೀಗಾಗಿ ಒಂದೇ ದಿನದಲ್ಲಿ ಹಲವು ರಚನೆಕಾರರು ನಿಮ್ಮ ವೀಡಿಯೊವನ್ನು ರೀಮಿಕ್ಸ್ ಮಾಡಿದರೆ, ಆ ದಿನ ಗರಿಷ್ಠ ಒಂದು ನೋಟಿಫಿಕೇಶನ್ ಅನ್ನು ನೀವು ಸ್ವೀಕರಿಸುತ್ತೀರಿ.

ನನ್ನ ಕಂಟೆಂಟ್‌ನ ವಿಷುವಲ್ ರೀಮಿಕ್ಸ್‌ಗಳಿಂದಾಗಿ ನಾನು ಪಡೆದ ಟ್ರಾಫಿಕ್ ಮಾಹಿತಿಯನ್ನು ನಾನು ಹೇಗೆ ನೋಡುವುದು?

ಇತರ ರಚನೆಕಾರರು ನಿಮ್ಮ ಕಂಟೆಂಟ್‌ನ ವಿಷುವಲ್ ರೀಮಿಕ್ಸ್‌ಗಳನ್ನು ರಚಿಸುವುದರಿಂದ ನಿಮ್ಮ ಚಾನಲ್‌ಗೆ ಹೊಸ ವೀಕ್ಷಕರನ್ನು ಸೆಳೆಯಲು ಸಹಾಯ ಮಾಡಬಹುದು.

ನೀವು ನಿಮ್ಮ ರೀಚ್ ರಿಪೋರ್ಟ್‌ಗಳನ್ನು ವೀಕ್ಷಿಸುವ ಮೂಲಕ ಮತ್ತು “ರೀಮಿಕ್ಸ್ ಮಾಡಿದ ವೀಡಿಯೊ” ಟ್ರಾಫಿಕ್ ಮೂಲದ ಪ್ರಕಾರವಾಗಿ ವಿಂಗಡಿಸುವ ಮೂಲಕ, ವಿಷುವಲ್ ರೀಮಿಕ್ಸ್‌ಗಳಿಂದ ಎಷ್ಟು ವೀಕ್ಷಣೆಗಳನ್ನು ನೀವು ಪಡೆದಿದ್ದೀರಿ ಎಂಬುದನ್ನು ನೀವು ನೋಡಬಹುದು.

ಇತರರ Shorts ಗಳಲ್ಲಿ ನನ್ನ ಕಂಟೆಂಟ್‌ನ ಬಳಕೆಯನ್ನು ನಾನು ಹೇಗೆ ನಿರ್ಬಂಧಿಸುವುದು?

ನೀವು ರಚಿಸುವ Shorts, YouTube ನಲ್ಲಿ ರೀಮಿಕ್ಸ್ ಮಾಡಲು ಸ್ವಯಂಚಾಲಿತವಾಗಿ ಲಭ್ಯವಿರುತ್ತವೆ. ಸದ್ಯಕ್ಕೆ, YouTube Studio ಕಂಟೆಂಟ್ ಮ್ಯಾನೇಜರ್‌ಗೆ ಆ್ಯಕ್ಸೆಸ್ ಹೊಂದಿರುವ ಪಾಲುದಾರರು ಮಾತ್ರ ಅವುಗಳನ್ನು ಬಳಸುವ ಆಯ್ಕೆಯಿಂದ ಹೊರಗಿಡಬಹುದು.

ನಿಮ್ಮ ಚಾನಲ್‌ನಲ್ಲಿನ ಲಾಂಗ್-ಫಾರ್ಮ್ ವೀಡಿಯೊಗಳಿಗಾಗಿ, ಈ ಹಂತಗಳನ್ನು ಅನುಸರಿಸುವ ಮೂಲಕ ರೀಮಿಕ್ಸಿಂಗ್ ಆಯ್ಕೆಯನ್ನು ನೀವು ಮಿತಿಗೊಳಿಸಬಹುದು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕಂಟೆಂಟ್ ಕ್ಲಿಕ್ ಮಾಡಿ.
  3. ವೀಡಿಯೊ ಶೀರ್ಷಿಕೆ ಅಥವಾ ಥಂಬ್‌ನೇಲ್ ಕ್ಲಿಕ್ ಮಾಡಿ.
  4. ಸ್ಕ್ರಾಲ್ ಮಾಡಿ ನಂತರ ಇನ್ನಷ್ಟು ತೋರಿಸಿ ಕ್ಲಿಕ್ ಮಾಡಿ.
  5. “Shorts ರೀಮಿಕ್ಸಿಂಗ್” ಅನ್ನು ಹುಡುಕಲು ಸ್ಕ್ರಾಲ್ ಮಾಡಿ ನಂತರ ರೀಮಿಕ್ಸ್ ಮಾಡಲು ಅನುಮತಿಸಬೇಕೆ ಅಥವಾ ಬೇಡವೇ ಎಂದು ಆಯ್ಕೆಮಾಡಿ.
  6. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

“Shorts ರೀಮಿಕ್ಸಿಂಗ್” ಆದ್ಯತೆಗಳನ್ನು ದೊಡ್ಡ ಪ್ರಮಾಣದಲ್ಲಿ ಎಡಿಟ್ ಮಾಡಬಹುದು ಮತ್ತು ನೀವು ನಿಮ್ಮ ಕಂಪ್ಯೂಟರ್‌ನಿಂದ ಅಪ್‌ಲೋಡ್ ಮಾಡಿದಾಗಲೂ ಎಡಿಟ್ ಮಾಡಬಹುದು.

ನಾನು YouTube Studio ಕಂಟೆಂಟ್ ಮ್ಯಾನೇಜರ್ ಬಳಸಿದರೆ, ನನ್ನ ಕಂಟೆಂಟ್‌ನ ರೀಮಿಕ್ಸ್ ಆಯ್ಕೆಯನ್ನು ನಾನು ನಿಯಂತ್ರಿಸುವುದು ಹೇಗೆ?
YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ನಿಮ್ಮ ಅರ್ಹವಾದ ಕಂಟೆಂಟ್ ಅನ್ನು ಆಯ್ಕೆಯಿಂದ ಹೊರಗುಳಿಯಲು ನೀವು ಆಯ್ಕೆ ಮಾಡದ ಹೊರತು, YouTube ಜೊತೆಗಿನ ನಿಮ್ಮ ಪರವಾನಗಿ ನಿಯಮಗಳು ಇತರ ರಚನೆಕಾರರು ನಿಮ್ಮ ಕಂಟೆಂಟ್ ಅನ್ನು ರೀಮಿಕ್ಸ್ ಮಾಡಲು ಅವಕಾಶ ಮಾಡಿಕೊಡುತ್ತವೆ. ನೀವು ಆಯ್ಕೆಯಿಂದ ಹೊರಗಿಡಲು ಆಯ್ಕೆ ಮಾಡಿಲ್ಲದ ಎಲ್ಲಾ ಕಂಟೆಂಟ್‌ಗಳು, ಡೀಫಾಲ್ಟ್ ಆಗಿ ರೀಮಿಕ್ಸ್ ಮಾಡುವ ಆಯ್ಕೆಗೆ ಲಭ್ಯವಿರುತ್ತವೆ, ಇದು ನೀವು ಅಪ್‌ಲೋಡ್ ಮಾಡುವ ಯಾವುದೇ ಹೊಸ ಕಂಟೆಂಟ್ ಅನ್ನು ಸಹ ಒಳಗೊಂಡಿರುತ್ತದೆ. ನೀವು ಆಯ್ಕೆಯಿಂದ ಹೊರಗಿಟ್ಟ ಕಂಟೆಂಟ್‌ಗಳು ಆಯ್ಕೆಯಿಂದ ಹೊರಗೆ ಉಳಿಯುತ್ತವೆ.

Shorts ಮತ್ತು ಲಾಂಗ್-ಫಾರ್ಮ್ ವೀಡಿಯೊಗಳು ಸೇರಿದಂತೆ, ನಿಮ್ಮ ಕಂಟೆಂಟ್ ಅನ್ನು ರೀಮಿಕ್ಸ್ ಮಾಡಲು ಡೀಫಾಲ್ಟ್ ಆಗಿ ಲಭ್ಯಗೊಳಿಸಲಾಗಿರುತ್ತದೆ. ನಿಮ್ಮ ಕಂಟೆಂಟ್ ಅನ್ನು ರೀಮಿಕ್ಸ್ ಮಾಡಲು ಅನುಮತಿಸುವುದರಿಂದ YouTube ನಾದ್ಯಂತ ಕೃತಿ ರಚನೆಗೆ ಸ್ಪೂರ್ತಿ ನೀಡಬಹುದು ಮತ್ತು ಹೊಸ ಪ್ರೇಕ್ಷಕರ ಬಳಿಗೆ ತಲುಪುವ ನಿಮ್ಮ ವ್ಯಾಪ್ತಿಯನ್ನು ಸಂಭಾವ್ಯವಾಗಿ ವಿಸ್ತರಿಸಬಹುದು.

ನೀವು YouTube Studio ಕಂಟೆಂಟ್ ಮ್ಯಾನೇಜರ್ ಬಳಸಿದರೆ, ನೀವು ಯಾವಾಗ ಬೇಕಾದರೂ ನಿಮ್ಮ ಕಂಟೆಂಟ್ ರೀಮಿಕ್ಸ್ ಮಾಡುವುದನ್ನು ಮಿತಿಗೊಳಿಸಬಹುದು. ರೀಮಿಕ್ಸ್ ನಿರ್ಬಂಧಿಸಲು:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳು ಆಯ್ಕೆಮಾಡಿ.
  3. ಅವಲೋಕನ ಟ್ಯಾಬ್‌ನಲ್ಲಿ, “YouTube Shorts ರೀಮಿಕ್ಸ್” ಹುಡುಕಿ ಮತ್ತು ಬಾಕ್ಸ್ ಗುರುತು ತೆಗೆದುಹಾಕಿ. ಈ ಸೆಟ್ಟಿಂಗ್ ಅನ್ನು ಆಫ್ ಮಾಡುವುದರಿಂದ, ನಿಮ್ಮ ಕಂಟೆಂಟ್ ಬಳಸಿಕೊಂಡು ರಚಿಸಿದ ಅಸ್ತಿತ್ವದಲ್ಲಿರುವ ಎಲ್ಲಾ ರೀಮಿಕ್ಸ್‌ಗಳನ್ನು ಮ್ಯೂಟ್ ಮಾಡಲಾಗುತ್ತದೆ.
  4. ಉಳಿಸಿ ಕ್ಲಿಕ್ ಮಾಡಿ.

“Shorts ಸ್ಯಾಂಪ್ಲಿಂಗ್” ಆದ್ಯತೆಗಳನ್ನು ದೊಡ್ಡ ಪ್ರಮಾಣದಲ್ಲಿ ಎಡಿಟ್ ಮಾಡಬಹುದು ಮತ್ತು ನೀವು ನಿಮ್ಮ ಕಂಪ್ಯೂಟರ್‌ನಿಂದ ಅಪ್‌ಲೋಡ್ ಮಾಡಿದಾಗಲೂ ಎಡಿಟ್ ಮಾಡಬಹುದು.

ನಾನು ರೀಮಿಕ್ಸ್ ಮಾಡಿದ ಕಂಟೆಂಟ್ ಅನ್ನು ನಿರ್ಬಂಧಿಸಿದರೆ, ಎಡಿಟ್ ಮಾಡಿದರೆ ಅಥವಾ ಅಳಿಸಿದರೆ ಏನಾಗುತ್ತದೆ?

ಮೂಲ ರಚನೆಕಾರರು ತಮ್ಮ ಕೃತಿಯನ್ನು ಅಳಿಸಿದಾಗ ಅಥವಾ ಅದರಿಂದ ರೀಮಿಕ್ಸ್ ಮಾಡದಂತೆ ಮಿತಿಗೊಳಿಸಿದಾಗ, ನೀವು ರಚಿಸುವ ಆಡಿಯೋ ರೀಮಿಕ್ಸ್‌ಗಳನ್ನು ಮ್ಯೂಟ್ ಮಾಡಲಾಗುವುದು, ಪಟ್ಟಿ ಮಾಡದಿರುವುದು ಎಂದು ಸೆಟ್ ಮಾಡಲಾಗುವುದು ಮತ್ತು 30 ದಿನಗಳಲ್ಲಿ ಅಳಿಸುವುದಕ್ಕೆ ನಿಗದಿಪಡಿಸಲಾಗುವುದು. ಬದಲಾವಣೆಯ ಕುರಿತು ನಿಮಗೆ ಇಮೇಲ್ ಮಾಡಲಾಗುತ್ತದೆ, ಹೀಗಾಗಿ ನಿಮ್ಮ ವೀಡಿಯೊವನ್ನು ಅಳಿಸುವುದಕ್ಕೂ ಮೊದಲು ರೀಮಿಕ್ಸ್ ಮಾಡಿದ ಆಡಿಯೋಗಳಿಲ್ಲದೆಯೇ YouTube Studio ದಿಂದ ಅದನ್ನು ನೀವು ಡೌನ್‌ಲೋಡ್ ಮಾಡಬಹುದು. ತದನಂತರ, ಬೇರೆ ಆಡಿಯೋದ ಜೊತೆಗೆ ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಬಹುದು.

ಮೂಲ ರಚನೆಕಾರರು ತಮ್ಮ ವೀಡಿಯೊವನ್ನು ಅಳಿಸಿದ ನಂತರ ಅಥವಾ ಅದರ ಬಳಕೆಯನ್ನು ನಿರ್ಬಂಧಿಸಿದ ನಂತರ, ನೀವು ರಚಿಸುವ ವೀಡಿಯೊ ರೀಮಿಕ್ಸ್‌ಗಳನ್ನು ಅಳಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಇಮೇಲ್ ಕಳುಹಿಸಲಾಗುತ್ತದೆ. ಮೂಲ ರೀಮಿಕ್ಸ್ ಮಾಡಿದ ವೀಡಿಯೊ ಜೊತೆಗೆ ನಿಮ್ಮ Short ವೀಡಿಯೊವನ್ನು ಮತ್ತೆ YouTube ಗೆ ಅಪ್‌ಲೋಡ್ ಮಾಡಲು ನೀವು ಪರವಾನಗಿ ಹೊಂದಿಲ್ಲದಿರಬಹುದು, ಆದರೆ Short ವೀಡಿಯೊದಿಂದ ಪಡೆದ ವೀಕ್ಷಣೆಗಳನ್ನು ನಿಮ್ಮ ಜೀವಿತಾವಧಿಯ ವೀಕ್ಷಣೆಗಳಲ್ಲಿ ಪರಿಗಣಿಸಲಾಗುತ್ತದೆ.

ನಾನು ರೀಮಿಕ್ಸ್ ಆಯ್ಕೆಯನ್ನು ಮಿತಿಗೊಳಿಸಿದರೆ, ನನ್ನ ವೀಡಿಯೊವನ್ನು ಅಳಿಸಿದರೆ ಅಥವಾ YouTube Studio ನಲ್ಲಿ ಎಡಿಟ್‌ಗಳನ್ನು ಮಾಡಿದರೆ ಏನಾಗುತ್ತದೆ?

YouTube Studio ನಲ್ಲಿ ರೀಮಿಕ್ಸ್ ಆಯ್ಕೆಯನ್ನು ಮಿತಿಗೊಳಿಸುವುದು, ನಿಮ್ಮ ವೀಡಿಯೊವನ್ನು ಅಳಿಸುವುದು ಅಥವಾ YouTube Studio ನಲ್ಲಿ ವೀಡಿಯೊವನ್ನು ಬ್ಲರ್ ಅಥವಾ ಟ್ರಿಮ್ ಮಾಡುವುದು, ರೀಮಿಕ್ಸ್ ಮಾಡುವ ರಚನೆಕಾರರಿಗೆ ಈ ಕೆಳಗಿನದನ್ನು ಸೂಚಿಸುತ್ತದೆ:

ರೀಮಿಕ್ಸ್ ಆಯ್ಕೆಯನ್ನು ನಿರ್ಬಂಧಿಸುವುದು ಅಥವಾ ನಿಮ್ಮ ವೀಡಿಯೊವನ್ನು ಅಳಿಸುವುದರಿಂದ, ಭವಿಷ್ಯದಲ್ಲಿ ಯಾವುದೇ ರೀಮಿಕ್ಸ್‌ಗಳನ್ನು ರಚಿಸದಂತೆ ತಡೆಯುತ್ತದೆ.

ನನ್ನ Short ಅನ್ನು ಏಕೆ ಮ್ಯೂಟ್ ಮಾಡಲಾಗಿದೆ?

ಮೂಲ ರಚನೆಕಾರರು ತಮ್ಮ ಕೃತಿಯ ರೀಮಿಕ್ಸಿಂಗ್ ಆಯ್ಕೆಯನ್ನು ನಿರ್ಬಂಧಿಸಿದರೆ, ಅದನ್ನು ಅಳಿಸಿದರೆ ಅಥವಾ ಅವರು ಬ್ಲರ್ ಅಥವಾ ಟ್ರಿಮ್ ಬಳಸಿಕೊಂಡು YouTube Studio ದಲ್ಲಿ ತಮ್ಮ ವೀಡಿಯೊಗಳನ್ನು ಎಡಿಟ್‌ಗಳನ್ನು ಮಾಡಿದರೆ, ರೀಮಿಕ್ಸ್ ಮಾಡಿದ ಆಡಿಯೋವನ್ನು ಬಳಸಿಕೊಂಡು ನೀವು ರಚಿಸುವ ರೀಮಿಕ್ಸ್‌ಗಳನ್ನು ಮ್ಯೂಟ್ ಮಾಡಬಹುದು. ಇವುಗಳಲ್ಲಿ ಯಾವುದೇ ಪರಿಸ್ಥಿತಿಯು ಕಂಡುಬಂದರೆ, ಆ ಕುರಿತು ನಿಮಗೆ ತಿಳಿಸಲು ಇಮೇಲ್ ಮಾಡಲಾಗುತ್ತದೆ. ಅಂದರೆ ನಿಮ್ಮ ಶಾರ್ಟ್ ವೀಡಿಯೊವನ್ನು:

ನಿಮ್ಮ ವೀಡಿಯೊವನ್ನು ಅಳಿಸುವುದಕ್ಕೂ ಮೊದಲು, ಅದನ್ನು YouTube Studio ದಲ್ಲಿ ರೀಮಿಕ್ಸ್ ಮಾಡಿದ ಆಡಿಯೋ ಇಲ್ಲದೆಯೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ತದನಂತರ, ನಿಮ್ಮ ವೀಡಿಯೊವನ್ನು ನೀವು ಮತ್ತೆ ಅಪ್‌ಲೋಡ್ ಮಾಡಬಹುದು – ಈ ಬಾರಿ ಬೇರೆಯದೇ ಸೌಂಡ್‌ಟ್ರ್ಯಾಕ್ ಇರಬೇಕು, ಏಕೆಂದರೆ ಮೂಲ ರೀಮಿಕ್ಸ್ ಆಡಿಯೋವನ್ನು ಬಳಸಲು ನೀವು ಇನ್ನು ಮುಂದೆ ಅನುಮತಿಯನ್ನು ಹೊಂದಿಲ್ಲದಿರಬಹುದು.

ಡ್ರೀಮ್ ಟ್ರ್ಯಾಕ್ ಹೇಗೆ ಕೆಲಸ ಮಾಡುತ್ತದೆ?

YouTube ನಿರಂತರವಾಗಿ ಹೊಸ, ಪ್ರಾಯೋಗಿಕ ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ. ಈ ಫೀಚರ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಸೀಮಿತ ರಚನೆಕಾರರಿಗೆ ಮಾತ್ರ ಲಭ್ಯವಿದೆ. ನಾವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಉತ್ಪನ್ನದ ಯಾವುದೇ ಭವಿಷ್ಯದ ಇಟರೇಶನ್‌ಗಳನ್ನು ನಿರ್ಮಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಸೀಮಿತ ಪ್ರಯೋಗವನ್ನು ಉದ್ದೇಶಿಸಲಾಗಿದೆ.

ಜಾಗತಿಕ ಪ್ರೇಕ್ಷಕರು ಸೌಂಡ್‌ಟ್ರ್ಯಾಕ್‌ಗಳನ್ನು ಹೇಗಿವೆಯೋ ಹಾಗೆ ತಮ್ಮ ಸ್ವಂತ Shorts ಗೆ ರೀಮಿಕ್ಸ್ ಮಾಡಲು ಅವುಗಳನ್ನು ಬಳಸಬಹುದು.

Shorts ನಲ್ಲಿನ ನಮ್ಮ ಮೊದಲ ಪ್ರಯೋಗವು ಆಯ್ದ ಕಲಾವಿದರು ಮತ್ತು ಅವರ AI-ಜನರೇಟೆಡ್ ಕಲಾವಿದರ ಧ್ವನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಈಗ ನಾವು AI ಸಹಾಯದೊಂದಿಗೆ Shorts ನಲ್ಲಿ ಇನ್‌ಸ್ಟ್ರುಮೆಂಟಲ್-ಮಾತ್ರ ಟ್ರ್ಯಾಕ್‌ಗಳನ್ನು ಜನರೇಟ್ ಮಾಡಲು ಇನ್ನೊಂದು ಆಯ್ಕೆಯನ್ನು ಸೇರಿಸಿದ್ದೇವೆ.

ಸೌಂಡ್‌ಟ್ರ್ಯಾಕ್ ಅನ್ನು ಪ್ರಕಟಿಸಿದ ನಂತರ, ಯಾರಾದರೂ ತಮ್ಮ ಸ್ವಂತ Shorts ಗೆ ರೀಮಿಕ್ಸ್ ಮಾಡಲು AI-ಜನರೇಟೆಡ್ ಸೌಂಡ್‌ಟ್ರ್ಯಾಕ್ ಅನ್ನು ಬಳಸಬಹುದು. ಈ AI-ಜನರೇಟೆಡ್ ಸೌಂಡ್‌ಟ್ರ್ಯಾಕ್‌ಗಳು ಡ್ರೀಮ್ ಟ್ರ್ಯಾಕ್‌ ಮೂಲಕ ರಚಿಸಲಾಗಿದೆ ಎಂದು ಸೂಚಿಸುವ ಪಠ್ಯ ಲೇಬಲ್ ಅನ್ನು ಹೊಂದಿರುತ್ತದೆ. ನಾವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೀಮಿತ ರಚನೆಕಾರರು ಮತ್ತು ಆಯ್ಕೆ ಮಾಡಿದ ಕಲಾವಿದರೊಂದಿಗೆ ಪ್ರಾರಂಭಿಸುತ್ತಿದ್ದೇವೆ. ಈ ಪ್ರಯೋಗಗಳ ಫೀಡ್‌ಬ್ಯಾಕ್ ಆಧಾರದ ಮೇಲೆ, ಇದನ್ನು ವಿಸ್ತರಿಸಲು ನಾವು ಆಶಿಸುತ್ತೇವೆ.

YouTube ನ ಸಮುದಾಯ ಮಾರ್ಗಸೂಚಿಗಳು ಡ್ರೀಮ್ ಟ್ರ್ಯಾಕ್‌ ಮೂಲಕ ರಚಿಸಲಾದ ಕಂಟೆಂಟ್ ಸೇರಿದಂತೆ YouTube ನಲ್ಲಿನ ಎಲ್ಲಾ ವಿಷಯಗಳಿಗೆ ಅನ್ವಯಿಸುತ್ತದೆ ಮತ್ತು ನಮ್ಮ ನೀತಿಗಳನ್ನು ಉಲ್ಲಂಘಿಸುವ ಯಾವುದೇ ಕಂಟೆಂಟ್ ಅನ್ನು ತೆಗೆದುಹಾಕಲು ನಾವು ಬದ್ಧರಾಗಿದ್ದೇವೆ. ಡ್ರೀಮ್‌ ಟ್ರ್ಯಾಕ್‌ಗಾಗಿ ಚಾನಲ್‌ ಮಾನಿಟೈಸೇಶನ್ ನೀತಿಗಳು ಮತ್ತು Shorts ಮಾನಿಟೈಸೇಶನ್ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Android iPhone ಮತ್ತು iPad
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16434474381094713808
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false