MCN ಗಳು ಮತ್ತು ಅಫಿಲಿಯೇಟ್ ಚಾನಲ್‌ಗಳಿಗಾಗಿ ತೆರಿಗೆ ಅವಶ್ಯಕತೆಗಳು

ಯು.ಎಸ್‌ನಲ್ಲಿರುವ ವೀಕ್ಷಕರಿಂದ ನೀವು ಜನರೇಟ್ ಮಾಡುವ ಗಳಿಕೆಗಳ ಮೇಲೆ Google ಯು.ಎಸ್ ತೆರಿಗೆಗಳನ್ನು ವಿತ್‌ಹೋಲ್ಡ್ ಮಾಡುತ್ತದೆ. ನೀವು ಈಗಾಗಲೇ ಸಲ್ಲಿಸಿರದಿದ್ದರೆ, ನಿಮ್ಮ ಯು.ಎಸ್ ತೆರಿಗೆ ಮಾಹಿತಿಯನ್ನು AdSense ನಲ್ಲಿ ಸಲ್ಲಿಸಿ, ಇದರಿಂದ ನಿಮ್ಮ ಸರಿಯಾದ ತಡೆಹಿಡಿಯುವಿಕೆ ದರವನ್ನು ತೀರ್ಮಾನಿಸಲು Google ಗೆ ಸಾಧ್ಯವಾಗುತ್ತದೆ. ತೆರಿಗೆ ಮಾಹಿತಿಯನ್ನು ಒದಗಿಸದಿದ್ದರೆ, Google ಗರಿಷ್ಠ ದರದಲ್ಲಿ ತಡೆಹಿಡಿಯುವ ಅಗತ್ಯವಿರಬಹುದು.

YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ರಚನೆಕಾರರಿಂದ Google ತೆರಿಗೆ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿದೆ. ಯಾವುದೇ ತೆರಿಗೆ ಕಡಿತಗಳು ಅನ್ವಯಿಸಿದರೆ, ಯು.ಎಸ್‌ನಲ್ಲಿನ ವೀಕ್ಷಕರಿಂದ ಪಡೆದ YouTube ಗಳಿಕೆಗಳ ಮೇಲೆ Google, ತೆರಿಗೆಗಳನ್ನು ತಡೆಹಿಡಿಯುತ್ತದೆ. ಈ ಲೇಖನವು ಬಹು-ಚಾನಲ್ ನೆಟ್‌ವರ್ಕ್‌ನಲ್ಲಿರುವ (MCN) ಅಫಿಲಿಯೇಟ್ ರಚನೆಕಾರರಿಗೆ ನಿರ್ದಿಷ್ಟವಾಗಿದೆ. YouTube ನಲ್ಲಿ ತೆರಿಗಾಗಿ ತಡೆಹಿಡಿಯುವಿಕೆಯ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ ಮತ್ತು ನಮ್ಮ ವಿವರವಾದ FAQ ಲೇಖನಕ್ಕೆ ಭೇಟಿ ನೀಡಿ: Google ಗೆ ನಿಮ್ಮ ಯು.ಎಸ್ ತೆರಿಗೆ ಮಾಹಿತಿಯನ್ನು ಸಲ್ಲಿಸುವುದು.

ಪ್ರಮುಖ ಸೂಚನೆ: ನಿಮ್ಮ ಪಾಸ್‌ವರ್ಡ್ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಕೇಳುವ ಅನಪೇಕ್ಷಿತ ಸಂದೇಶಗಳನ್ನು Google ಎಂದೂ ಕಳುಹಿಸುವುದಿಲ್ಲ. ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು, ಇಮೇಲ್ ಅನ್ನು @youtube.com ಅಥವಾ @google.com ಇಮೇಲ್ ವಿಳಾಸದಿಂದ ಕಳುಹಿಸಲಾಗಿದೆಯೇ ಎಂಬುದನ್ನು ಯಾವಾಗಲೂ ಪರಿಶೀಲಿಸಿ.

ಅಫಿಲಿಯೇಟ್‌ಗಳಿಗಾಗಿ ಮಾಹಿತಿ

ಬಹು-ಚಾನಲ್ ನೆಟ್‌ವರ್ಕ್‌ನ (MCN) ಭಾಗವಾಗಿದ್ದೀರಾ? ಹಾಗಿದ್ದರೆ, ನಿಮ್ಮ ಚಾನಲ್‌ಗೆ ಲಿಂಕ್ ಮಾಡಲಾದ YouTube ಗಾಗಿ AdSense ಖಾತೆಯಲ್ಲಿ ನೀವು ಯು.ಎಸ್. ತೆರಿಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಯಾವುದೇ ವಿತ್‌ಹೋಲ್ಡಿಂಗ್ ತೆರಿಗೆಗಳು ಅನ್ವಯವಾದರೆ, ಅವುಗಳನ್ನು ನಿರ್ಧರಿಸಲು ಈ ಮಾಹಿತಿಯನ್ನು ಬಳಸಲಾಗುತ್ತದೆ. ವಿತ್‌ಹೋಲ್ಡಿಂಗ್ ತೆರಿಗೆಗಳನ್ನು ಸರಿಯಾಗಿ ಲೆಕ್ಕಾಚಾರ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ YouTube ಗಾಗಿ AdSense ಖಾತೆಯು ನಿಮ್ಮ ಕಾನೂನುಬದ್ಧ ಹೆಸರು ಅಥವಾ ನಿಮ್ಮ ವ್ಯಾಪಾರದ ಕಾನೂನುಬದ್ಧ ಹೆಸರಿನಲ್ಲಿರಬೇಕು. ಮಾತ್ರವಲ್ಲದೆ, ಫೈಲ್‌ನಲ್ಲಿರುವ ನಿಮ್ಮ ವಿಳಾಸದ ಮಾಹಿತಿಯು, ತೆರಿಗೆ ಮತ್ತು ಕಾನೂನು ಉದ್ದೇಶಗಳಿಗಾಗಿ ನೀವು ಒದಗಿಸಿರುವ ನಿಮ್ಮ ಶಾಶ್ವತ ನಿವಾಸದ ಮಾಹಿತಿಯ ಜೊತೆ ಹೊಂದಾಣಿಕೆಯಾಗಬೇಕು.

ನಿಮ್ಮ ಚಾನಲ್‌ನ ಆದಾಯವನ್ನು ನಿಮ್ಮ MCN ಪಾಲುದಾರರಿಗೆ ಪಾವತಿಸುವುದನ್ನು ಮುಂದುವರಿಸಲಾಗುತ್ತದೆ. ಯಾವುದೇ ವಿತ್‌ಹೋಲ್ಡಿಂಗ್ ತೆರಿಗೆಗಳು ಅನ್ವಯಿಸಿದರೆ, ನಿಮ್ಮ ಚಾನಲ್‍ನ ಆದಾಯಕ್ಕಾಗಿ ನಿಮ್ಮ MCN ಗೆ ಮಾಡಲಾಗುವ ಪಾವತಿಯಿಂದ ಇವುಗಳನ್ನು ತಡೆಹಿಡಿಯಲಾಗುತ್ತದೆ.

ತಡೆಹಿಡಿಯಲಾಗುವ ಮೊತ್ತಗಳು YouTube Analytics ನಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಇಲ್ಲಿ ಕೊಟ್ಟಿರುವ ತರ್ಕವನ್ನು ಬಳಸಿ ಇವುಗಳನ್ನು ಹಸ್ತಚಾಲಿತವಾಗಿ ಲೆಕ್ಕಾಚಾರ ಮಾಡಬೇಕಾಗುತ್ತದೆ. ತಡೆಹಿಡಿಯಲಾದ ಒಟ್ಟು ಯು.ಎಸ್ ತೆರಿಗೆಗಳ ಸ್ಥೂಲ ವಿವರಣೆಯನ್ನು ಹೊಂದಿರುವ ವರದಿಯನ್ನು ನಿಮ್ಮ MCN ಗೆ ಮಾಸಿಕವಾಗಿ ಒದಗಿಸಲಾಗುತ್ತದೆ.

ತಡೆಹಿಡಿಯುವುದನ್ನು ಪ್ರಾರಂಭಿಸಿದ ಬಳಿಕ ನಿಮ್ಮ ಮಾನ್ಯ ತೆರಿಗೆ ಮಾಹಿತಿಯನ್ನು ನೀವು ಸಲ್ಲಿಸಿದರೆ ಮತ್ತು ಕಡಿಮೆ ತೆರಿಗೆ ದರಕ್ಕೆ ಅರ್ಹರಾದರೆ, ತಡೆಹಿಡಿಯುವ ದರವನ್ನು ಮುಂದಿನ ಪಾವತಿ ಸುತ್ತಿನಲ್ಲಿ ಹೊಂದಾಣಿಕೆ ಮಾಡಲಾಗುವುದು.

ಅಫಿಲಿಯೇಟ್‌ಗಳಿಗಾಗಿ ತೆರಿಗೆ ಮರುಪಾವತಿಗಳು

2023 ರಿಂದ MCN ಗಳಲ್ಲಿ ಅಫಿಲಿಯೇಟ್ ಚಾನಲ್‌ಗಳು ಮರುಪಾವತಿಗಳಿಗೆ ಅರ್ಹವಾಗಿರಬಹುದು. ಈ ಹಿಂದಿನ ಪಾವತಿಯು ಕಡಿಮೆ ದರಕ್ಕೆ ಒಳಪಟ್ಟಿತ್ತು ಎಂಬುದನ್ನು ರುಜುವಾತುಪಡಿಸುವ ಮಾನ್ಯವಾದ ಡಾಕ್ಯುಮೆಂಟೇಶನ್ ಅನ್ನು ಅಫಿಲಿಯೇಟ್‌ಗಳು ನಮಗೆ ಒದಗಿಸಬೇಕು. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ತಡೆಹಿಡಿಯಲಾದ ತೆರಿಗೆಗಳು ಮಾತ್ರ ಮರುಪಾವತಿಗಳಿಗೆ ಅರ್ಹವಾಗಿರುತ್ತವೆ. ಈ ಬದಲಾವಣೆಯು 2022 ಅಥವಾ ಹಿಂದಿನ ಯಾವುದೇ ವರ್ಷಗಳಿಗೆ ಅನ್ವಯಿಸುವುದಿಲ್ಲ. ಅರ್ಹವಾದ ನಂತರ, ಯಾರಿಂದ ತೆರಿಗೆಯನ್ನು ತಡೆಹಿಡಿಯಲಾಗಿತ್ತೋ, ಆ ಮೂಲ ಕಂಟೆಂಟ್ ಮಾಲೀಕರಿಗೆ ಮರುಪಾವತಿಯನ್ನು ಒದಗಿಸಲಾಗುವುದು.

MCN ಗಳಿಗಾಗಿ ಮಾಹಿತಿ

ತಮ್ಮದೇ ಆದ ಚಾನಲ್‌ಗಳನ್ನು ಹೊಂದಿರುವ ಮತ್ತು ನಿರ್ವಹಿಸುವ ಕಂಟೆಂಟ್ ಮಾಲೀಕರಿಗೆ ಸಂಬಂಧಿಸಿದ MCN ನ YouTube ಗಳಿಕೆಗಳು ಸಹ ಯು.ಎಸ್ ವಿತ್‌ಹೋಲ್ಡಿಂಗ್ ತೆರಿಗೆಗಳಿಗೆ ಒಳಪಟ್ಟಿರಬಹುದು. ತಮ್ಮದೇ ಆದ ಚಾನಲ್‌ಗಳನ್ನು ಹೊಂದಿರುವ ಮತ್ತು ನಿರ್ವಹಿಸುವ ಕಂಟೆಂಟ್ ಮಾಲೀಕರಿಗೆ ಸಂಬಂಧಿಸಿದ ವಿತ್‌ಹೋಲ್ಡಿಂಗ್ ತೆರಿಗೆಗಳನ್ನು ಲೆಕ್ಕಾಚಾರ ಮಾಡಲು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಸಲ್ಲಿಸಲಾದ ತೆರಿಗೆ ಮಾಹಿತಿಯನ್ನು Google ಬಳಸುತ್ತದೆ. ಇದರಲ್ಲಿ, ಅಫಿಲಿಯೇಟ್‌ಗಳಲ್ಲದ ಖಾತೆಗೆ ಲಿಂಕ್ ಮಾಡಲಾದ ಇತರ ಯಾವುದೇ ಪ್ರತ್ಯೇಕ ಚಾನಲ್‌ಗಳು ಅಥವಾ ಕಂಟೆಂಟ್ ಮಾಲೀಕರು ಒಳಗೊಂಡಿರುತ್ತಾರೆ.

ಯಾವುದೇ ವಿತ್‌ಹೋಲ್ಡಿಂಗ್ ತೆರಿಗೆಗಳು ಅನ್ವಯವಾದರೆ, YouTube ಗಾಗಿ AdSense ನಲ್ಲಿನ ನಿಮ್ಮ ಪಾವತಿಗಳ ವರದಿ ಎಂಬಲ್ಲಿ ನಿಮಗೆ ಕಾಣಿಸುತ್ತದೆ. ಅಫಿಲಿಯೇಟ್ ತೆರಿಗೆ ತಡೆಹಿಡಿಯುವಿಕೆಗಳಿಗೆ ಸಂಬಂಧಿಸಿದಂತೆ, ನಿಮಗೆ ಹೆಚ್ಚುವರಿ ವರದಿಯನ್ನು ಒದಗಿಸಲಾಗುತ್ತದೆ. 

ತಮ್ಮ ಚಾನಲ್‌ಗೆ ಲಿಂಕ್ ಮಾಡಲಾದ YouTube ಗಾಗಿ AdSense ಖಾತೆಯಲ್ಲಿ ತಾವು ಒದಗಿಸುವ ತೆರಿಗೆ ಮಾಹಿತಿಯ ಆಧಾರದ ಮೇಲೆ Google ತೆರಿಗೆ ವರದಿ ಮಾಡುವಿಕೆ ಫಾರ್ಮ್‌ಗಳನ್ನು (ಉದಾ. 1042-S, 1099-MISC) ಅಫಿಲಿಯೇಟ್ ಚಾನಲ್‌ಗಳಿಗೆ ನೇರವಾಗಿ ಕಳುಹಿಸುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5960357058860392945
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false