ಒಂದು ಕುಟುಂಬವಾಗಿ ನಿಮಗೆ ಏನೆಲ್ಲಾ ಆಯ್ಕೆಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ

YouTube Kids ಮತ್ತು YouTube ಮೇಲ್ವಿಚಾರಣೆ ಮಾಡಿದ ಅನುಭವಗಳು: ಕುಟುಂಬಗಳಿಗಾಗಿ ವೀಕ್ಷಣೆಯ ಆಯ್ಕೆಗಳು

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ನಿಮ್ಮ ಕುಟುಂಬಕ್ಕೆ ಯಾವ YouTube ಅನುಭವ ಅತ್ಯುತ್ತಮವಾಗಿದೆ ಎಂಬುದನ್ನು ನೀವು ನಿರ್ಧರಿಸಬಹುದು. YouTube ನಲ್ಲಿರುವ ಮೇಲ್ವಿಚಾರಣೆ ಮಾಡಿದ ಖಾತೆ ಮತ್ತು YouTube Kids ಆ್ಯಪ್ ನಡುವಿನ ವ್ಯತ್ಯಾಸಗಳನ್ನು ತಿಳಿಯಲು ಈ ಕೆಳಗಿನ ಚಾರ್ಟ್ ಅನ್ನು ಬಳಸಿ.

ಮೇಲ್ವಿಚಾರಣೆ ಮಾಡಿದ ಖಾತೆಗಳಿಗಾಗಿ ಯಾವ ಫೀಚರ್‌ಗಳನ್ನು ಆಫ್ ಮಾಡಲಾಗಿದೆ ಎಂಬುದರ ಕುರಿತು ನಿರ್ದಿಷ್ಟ ಮಾಹಿತಿಗಾಗಿ, YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಖಾತೆ ಎಂದರೇನು? ಎಂಬಲ್ಲಿಗೆ ಹೋಗಿ
  YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಖಾತೆ YouTube Kids
ಅದು ಏನು?

ಸೀಮಿತ ಫೀಚರ್‌ಗಳು ಮತ್ತು ಡಿಜಿಟಲ್ ಆರೋಗ್ಯ ಸಂರಕ್ಷಣೆಗಳನ್ನು ಹೊಂದಿರುವ, ಸಾಮಾನ್ಯ YouTube ನ ಪೋಷಕರು-ನಿರ್ವಹಿಸುವ ಆವೃತ್ತಿಯಾಗಿದೆ. ಹದಿಹರೆಯ-ಪೂರ್ವ ವಯಸ್ಸಿನ ಮಕ್ಕಳು ಮತ್ತು ಬೆಳೆದವರಿಗೆ ಕಂಟೆಂಟ್ ಸೆಟ್ಟಿಂಗ್‌ಗಳು.

YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳ ಕುರಿತು ಇನ್ನಷ್ಟು ತಿಳಿಯಿರಿ.

ಮಕ್ಕಳಿಗೆ ಸುರಕ್ಷಿತ ಮತ್ತು ಸರಳವಾದ ಅನುಭವವಾಗಿರುವ ಪ್ರತ್ಯೇಕ ಆ್ಯಪ್. ಮಕ್ಕಳು ವೀಕ್ಷಿಸುವುದಕ್ಕೆ ಸಂಬಂಧಿಸಿದ ಹಾಗೆ ಮಾರ್ಗದರ್ಶನ ನೀಡಲು ಪೋಷಕರು ಮತ್ತು ಆರೈಕೆದಾರರಿಗಾಗಿ ಪರಿಕರಗಳನ್ನು ಹೊಂದಿದೆ.

youtube.com/kids ನಲ್ಲಿ ಇನ್ನಷ್ಟು ತಿಳಿಯಿರಿ.
ಇದು ಯಾರು? ತಮ್ಮ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ (ಅಥವಾ ತಮ್ಮ ದೇಶ/ಪ್ರದೇಶದಲ್ಲಿರುವ ಸೂಕ್ತ ವಯಸ್ಸು) ಪೋಷಕರು, ಪೋಷಕರು-ಆಯ್ಕೆ ಮಾಡಿದ ಕಂಟೆಂಟ್ ಸೆಟ್ಟಿಂಗ್‌ಗಳನ್ನು ಅನ್ವಯಿಸಲಾದ YouTube ಅನ್ನು ಎಕ್ಸ್‌ಪ್ಲೋರ್ ಮಾಡಲು ಅವರು ಸಿದ್ಧರಾಗಿದ್ದಾರೆ ಎಂದು ನಿರ್ಧರಿಸುತ್ತಾರೆ.

ಪೋಷಕರು ತಮ್ಮ ಮಕ್ಕಳು ವೀಕ್ಷಿಸಲು ವಿಶೇಷವಾಗಿ ಆಯ್ಕೆ ಮಾಡಲು ಬಯಸುತ್ತಾರೆ. ಪೋಷಕರು ತಮ್ಮ ಮಕ್ಕಳಿಗಾಗಿ 3 ವಯಸ್ಸು-ಆಧರಿಸಿದ ಕಂಟೆಂಟ್ ಸೆಟ್ಟಿಂಗ್‌ಗಳನ್ನು ಆಧರಿಸಿದ ಕಂಟೆಂಟ್ ಅನ್ನು ಆರಿಸಲು ಬಯಸುತ್ತಾರೆ:

  • ಪ್ರೀಸ್ಕೂಲ್ (4 ವರ್ಷ ಮತ್ತು ಅದಕ್ಕಿಂತ ಕಡಿಮೆ)
  • ಚಿಕ್ಕ ಮಕ್ಕಳು (5—8 ವರ್ಷ ವಯಸ್ಸಿನ ಮಕ್ಕಳು)
  • ದೊಡ್ಡ ಮಕ್ಕಳು (9—12 ವರ್ಷ ವಯಸ್ಸಿನ ಮಕ್ಕಳು)
ನನ್ನ ಮಗುವಿಗೆ ಎಷ್ಟು ಕಂಟೆಂಟ್ ಲಭ್ಯವಿರುತ್ತದೆ?

ನಮ್ಮ ಪ್ರತ್ಯೇಕ YouTube Kids ಆ್ಯಪ್‌ಗಿಂತಲೂ ಹೆಚ್ಚಿನ ವೀಡಿಯೊಗಳು ಮತ್ತು ಸಂಗೀತವನ್ನು ಒಳಗೊಂಡಿದೆ.

ಲಭ್ಯವಿರುವ ಕಂಟೆಂಟ್ ನೀವು ಆರಿಸಿದ ಕಂಟೆಂಟ್ ಸೆಟ್ಟಿಂಗ್ (ಕ್ರಮವಾಗಿ) ಅನುಸಾರ ಬದಲಾಗುತ್ತದೆ:

  • ಎಕ್ಸ್‌ಪ್ಲೋರ್ ಮಾಡಿ
  • ಇನ್ನಷ್ಟು ಎಕ್ಸ್‌ಪ್ಲೋರ್ ಮಾಡಿ
  • YouTube ನಲ್ಲಿರುವ ಬಹುತೇಕ ಎಲ್ಲವೂ

YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಖಾತೆಗಿಂತ ವೀಡಿಯೊಗಳ ಕಡಿಮೆ ಆಯ್ಕೆಗಳನ್ನು ಒಳಗೊಂಡಿರುತ್ತದೆ.

ಲಭ್ಯವಿರುವ ಕಂಟೆಂಟ್ ನೀವು ಆರಿಸಿದ ಕಂಟೆಂಟ್ ಸೆಟ್ಟಿಂಗ್ (ಕ್ರಮವಾಗಿ) ಅನುಸಾರ ಬದಲಾಗುತ್ತದೆ:

  • ಪ್ರೀಸ್ಕೂಲ್ (4 ವರ್ಷ ಮತ್ತು ಅದಕ್ಕಿಂತ ಕಡಿಮೆ)
  • ಚಿಕ್ಕ ಮಕ್ಕಳು (5—8 ವರ್ಷ ವಯಸ್ಸಿನ ಮಕ್ಕಳು)
  • ದೊಡ್ಡ ಮಕ್ಕಳು (9—12 ವರ್ಷ ವಯಸ್ಸಿನ ಮಕ್ಕಳು)
ಪ್ರತಿ ಕಂಟೆಂಟ್ ಸೆಟ್ಟಿಂಗ್‌ನಲ್ಲಿ ಏನು ವ್ಯತ್ಯಾಸವಿದೆ?

ಮೇಲ್ವಿಚಾರಣೆ ಮಾಡಿದ ಖಾತೆಗಳು ಕಂಟೆಂಟ್ ಸೆಟ್ಟಿಂಗ್‌ಗಳನ್ನು ನೀಡುತ್ತಿದ್ದು, ಅವು ಸಾಮಾನ್ಯವಾಗಿ 9+, 13+, ಅಥವಾ YouTube ನಲ್ಲಿ ಇರುವ ಬಹುತೇಕ ವೀಕ್ಷಕರಿಗೆ ಇರುವ ಕಂಟೆಂಟ್ ರೇಟಿಂಗ್‌ಗಳೊಂದಿಗೆ ಹೊಂದಿಕೆಯಾಗುತ್ತದೆ. ವಯೋಮಾನ ನಿರ್ಬಂಧಿತ ಕಂಟೆಂಟ್ ಅನ್ನು ಇದು ಒಳಗೊಂಡಿರುವುದಿಲ್ಲ.

ಮೇಲ್ವಿಚಾರಣೆ ಮಾಡಿದ ಅನುಭವವನ್ನು ಬಳಸಿಕೊಂಡು ಕುಟುಂಬಗಳಿಗಾಗಿ ಕಂಟೆಂಟ್ ಸೆಟ್ಟಿಂಗ್‌ಗಳು ಕುರಿತು ಇನ್ನಷ್ಟು ತಿಳಿಯಿರಿ.

ಬೇರೆ ಬೇರೆ ವಯಸ್ಸಿನವರಿಗೆ ಹೊಂದಾಣಿಕೆಯಾಗುವ ಕಂಟೆಂಟ್ ಸೆಟ್ಟಿಂಗ್‌ಗಳನ್ನು YouTube Kids ಆ್ಯಪ್ ಒದಗಿಸುತ್ತದೆ. 4 ವರ್ಷ ಮತ್ತು ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರೀಸ್ಕೂಲ್ ಹೊಂದಾಣಿಕೆಯಾಗುತ್ತದೆ. 5-8 ವರ್ಷ ವಯಸ್ಸಿನ ಮಕ್ಕಳಿಗೆ ಕಿರಿಯರು ಎಂಬುದು ಹೊಂದಾಣಿಕೆಯಾಗುತ್ತದೆ. 9-12 ವರ್ಷ ವಯಸ್ಸಿನ ಮಕ್ಕಳಿಗೆ ಹಿರಿಯರು ಎಂಬುದು ಹೊಂದಾಣಿಕೆಯಾಗುತ್ತದೆ. ಅವರು ಪ್ರವೇಶ ಹೊಂದಿರುವ ವೀಡಿಯೊಗಳನ್ನು ವಿಶೇಷವಾಗಿ ಆಯ್ಕೆ ಮಾಡಲು, ತಮ್ಮ ಮಕ್ಕಳ ವೀಕ್ಷಣೆಗಾಗಿ ಪೋಷಕರು, ಪ್ರೊಫೈಲ್‌ಗಳನ್ನು ವ್ಯಾಖ್ಯಾನಿಸಬಹುದು.

YouTube Kids ಕಂಟೆಂಟ್ ಸೆಟ್ಟಿಂಗ್‌ಗಳು ಕುರಿತು ಇನ್ನಷ್ಟು ತಿಳಿಯಿರಿ.
ನನ್ನ ಮಗು ಯಾವ ವೀಡಿಯೊಗಳನ್ನು ನೋಡಬೇಕು ಎಂದು ನಾನು ನಿಖರವಾಗಿ ನಿರ್ಧರಿಸಬಹುದೇ?

ನಿಮ್ಮ ಮಗುವಿನ Google ಖಾತೆಗಾಗಿ ನೀವು ಕಂಟೆಂಟ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಬಹುದು, ನಂತರ ಅನಪೇಕ್ಷಿತ ವೀಡಿಯೊಗಳನ್ನು ತೆಗೆದುಹಾಕುವ ಕೆಲಸವನ್ನು YouTube ಮಾಡುತ್ತದೆ.

ಗಮನಿಸಿ: ಅನಪೇಕ್ಷಿತ ವೀಡಿಯೊಗಳನ್ನು ತೆಗೆದುಹಾಕಲು ನಾವು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ, ಆದರೆ ನಮ್ಮ ಸಿಸ್ಟಂಗಳು ಪರಿಪೂರ್ಣವಲ್ಲ ಮತ್ತು ತಪ್ಪುಗಳಾಗಬಹುದು. ಕೆಲವು ವೀಡಿಯೊಗಳು ಮಕ್ಕಳಿಗೆ ಸೂಕ್ತವಲ್ಲದೇ ಇರಬಹುದು. YouTube ಗೆ ಇದು ಸೂಕ್ತವಲ್ಲ ಎಂದು ನೀವು ಭಾವಿಸುವ ವಿಷಯವೇನಾದರೂ ನಿಮಗೆ ಕಂಡುಬಂದರೆ, ನೀವು ಅದನ್ನು ವರದಿ ಮಾಡಬಹುದು.
ನಿಮ್ಮ ಮಗು ಪ್ರವೇಶ ಹೊಂದಿರಬೇಕು ಎಂದು ನೀವು ಬಯಸುವ ನಿಖರವಾದ ವೀಡಿಯೊಗಳನ್ನು ಮಾತ್ರ ನೀವು ವಿಶೇಷವಾಗಿ ಆಯ್ಕೆ ಮಾಡಬಹುದು. ಇನ್ನಷ್ಟು ತಿಳಿಯಿರಿ.
ನನ್ನ ಮಗುವಿಗೆ ನಾನು ವೀಕ್ಷಣಾ ಅವಧಿಯನ್ನು ಹೇಗೆ ಹೊಂದಿಸಬಹುದು? ನಿಮ್ಮ ಮಗುವಿನ, ಮೇಲ್ವಿಚಾರಣೆ ಮಾಡಿದ ಸಾಧನಗಳಿಗಾಗಿ ವೀಕ್ಷಣಾ ಅವಧಿಯ ಮಿತಿಗಳನ್ನು ನಿರ್ವಹಿಸಲು Google Family Link ಆ್ಯಪ್ ಬಳಸಿ. ವೀಕ್ಷಣಾ ಅವಧಿಯ ಸೆಟ್ಟಿಂಗ್‌ಗಳನ್ನು ವ್ಯಾಖ್ಯಾನಿಸಲು ನೇರವಾಗಿ YouTube Kids ಆ್ಯಪ್ ಬಳಸಿ ಅಥವಾ ನಿಮ್ಮ ಮಗುವಿಗಾಗಿ ವೀಕ್ಷಣಾ ಅವಧಿಯ ಮಿತಿಗಳನ್ನು ನಿರ್ವಹಿಸಲು Google Family Link ಆ್ಯಪ್ ಬಳಸಿ.
ಎಂಬುದು Google ಖಾತೆ ನನ್ನ ಮಗುವಿಗಾಗಿ ಅವಶ್ಯಕವಿದೆಯೇ?

ಹೌದು. 13 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಥವಾ ನಿಮ್ಮ ದೇಶ/ಪ್ರದೇಶದಲ್ಲಿ ಸೂಕ್ತವಾದ ವಯಸ್ಸಿನ) ನಿಮ್ಮ ಮಗುವಿಗಾಗಿ Google ಖಾತೆಯನ್ನು ರಚಿಸುವುದು ಹೇಗೆ ಎಂದು ತಿಳಿಯಿರಿ. ನೀವು Family Link ಮೂಲಕ ನಿಮ್ಮ ಮಗುವಿನ Googleಖಾತೆಯನ್ನು ನಿರ್ವಹಿಸಬಹುದು.

ಇಲ್ಲ, Google ಖಾತೆಯ ಅವಶ್ಯಕತೆ ಇರುವುದಿಲ್ಲ.

YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಖಾತೆಯನ್ನು ರಚಿಸುವ ಕುರಿತು ಇನ್ನಷ್ಟು ತಿಳಿಯಲು, ಮೇಲ್ವಿಚಾರಣೆ ಮಾಡಿದ ಖಾತೆ ಮೂಲಕ ಆರಂಭಿಸಿ ಎಂಬಲ್ಲಿಗೆ ಹೋಗಿ.

ನಿಮಗೆ YouTube Kids ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ, YouTube Kids ಪೋಷಕರ ಮಾರ್ಗಸೂಚಿ ಅನ್ನು ಪರಿಶೀಲಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1073988960453711565
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false