YouTube Kids ಕುರಿತು ಫೀಡ್‌ಬ್ಯಾಕ್ ಕಳುಹಿಸಿ

ನಾವು ಸದಾಕಾಲ YouTube Kids ಅನ್ನು ಸುಧಾರಿಸುವ ಮಾರ್ಗಗಳನ್ನು ಶೋಧಿಸುತ್ತಿರುತ್ತೇವೆ ಮತ್ತು ನೀವು ಆ್ಯಪ್ ಕುರಿತು ಫೀಡ್‌ಬ್ಯಾಕ್ ನೀಡುವ ಮೂಲಕ ನಮಗೆ ಸಹಾಯ ಮಾಡಬಹುದು. ಫೀಡ್‌ಬ್ಯಾಕ್ ನೀವು ಅನುಭವಿಸಿರುವ ಸಮಸ್ಯೆಗಳಿಂದ ಮೊದಲುಗೊಂಡು ನೀವು ನೋಡಲು ಬಯಸುವ ಬದಲಾವಣೆಗಳು, ಏನು ಬೇಕಾದರೂ ಆಗಿರಬಹುದು.

ಆ್ಯಪ್‌ನಲ್ಲಿ ಕಂಡುಬರುವ ಯಾವುದೇ ಸಂಭವನೀಯ ಅನುಚಿತವಾದ ಕಂಟೆಂಟ್ ಅನ್ನು ಫ್ಲ್ಯಾಗ್ ಮಾಡಲು ಅನುಚಿತ ವೀಡಿಯೊಗಳನ್ನು ವರದಿ ಮಾಡಿ ಪ್ರಕ್ರಿಯೆಯನ್ನು ಬಳಸಿ.

ನಿಮ್ಮ ಫೀಡ್‌ಬ್ಯಾಕ್ ಅನ್ನು ನಮಗೆ ಹೀಗೆ ಕಳುಹಿಸಬಹುದು:

  1. ಆ್ಯಪ್‌ನಲ್ಲಿನ ಯಾವುದೇ ಪುಟದ ಕೆಳಗಿನ ಮೂಲೆಯಲ್ಲಿರುವ ಲಾಕ್ ಐಕಾನ್ ಅನ್ನು ಸ್ಪರ್ಶಿಸಿ
  2. ಗೋಚರಿಸುವ ಸಂಖ್ಯೆಗಳನ್ನು ಓದಿ ಮತ್ತು ನಮೂದಿಸಿ ಅಥವಾ ನಿಮ್ಮ ಕಸ್ಟಮ್ ಪಾಸ್‌ಕೋಡ್ ಅನ್ನು ನಮೂದಿಸಿ
  3. ಫೀಡ್‌ಬ್ಯಾಕ್ ಅನ್ನು ಆಯ್ಕೆಮಾಡಿ
  4. ನಿಮ್ಮ ಫೀಡ್‌ಬ್ಯಾಕ್ ಅನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವುದಕ್ಕಾಗಿ ಸಂಕ್ಷಿಪ್ತ ವಿವರಣೆ ಮತ್ತು ಸ್ಕ್ರೀನ್‌ಶಾಟ್ ಅನ್ನು ನೀಡಲು ಪ್ರಾಂಪ್ಟ್‌ಗಳನ್ನು ಅನುಸರಿಸಿ
  5. ಪೂರ್ಣಗೊಂಡಾಗ ಫೀಡ್‌ಬ್ಯಾಕ್ ಕಳುಹಿಸಿ ಎಂಬುದನ್ನು ಆಯ್ಕೆಮಾಡಿ

ನಾವು ಸ್ವೀಕರಿಸುವ ಪ್ರತಿಯೊಂದು ಫೀಡ್‌ಬ್ಯಾಕ್ ಅನ್ನು ಪರಿಶೀಲಿಸುತ್ತೇವಾದರೂ, ಪ್ರತಿಯೊಂದು ವರದಿಗೆ ವೈಯಕ್ತಿಕವಾಗಿ ಪ್ರತ್ಯುತ್ತರಿಸಲು ನಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಫೀಡ್‌ಬ್ಯಾಕ್ ಅನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಒಟ್ಟಾರೆ YouTube Kids ಅನುಭವವನ್ನು ಸುಧಾರಿಸಲು ಅದನ್ನು ಬಳಸುತ್ತೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4505549587790882221
true
ಸಹಾಯ ಕೇಂದ್ರವನ್ನು ಹುಡುಕಿ
true
true
true
false
false