ಕ್ಲೈಮ್ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಿ ಮತ್ತು ಕ್ರಮ ತೆಗೆದುಕೊಳ್ಳಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನೀವು ಕ್ರಮ ಕೈಗೊಳ್ಳಬೇಕಿರುವ ಕ್ಲೈಮ್ ಸಮಸ್ಯೆಗಳು, ಸಂಭಾವ್ಯ ಕ್ಲೈಮ್‌ಗಳು, ವಿವಾದಿತ ಕ್ಲೈಮ್‌ಗಳು ಮತ್ತು ಮೇಲ್ಮನವಿ ಮಾಡಿದ ಕ್ಲೈಮ್‌ಗಳನ್ನು ಒಳಗೊಂಡಿರಬಹುದು. ನಿಮ್ಮ ಕ್ಲೈಮ್ ಸಮಸ್ಯೆಗಳನ್ನು ಪರಿಶೀಲಿಸಿದ ನಂತರ, ಕ್ಲೈಮ್ ಅನ್ನು ಅವಲಂಬಿಸಿ ನೀವು ಕೆಲವು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳಬಹುದು.

ವಿವಾದಿತ ಕ್ಲೈಮ್‌ಗಳು ಮಾನಿಟೈಸೇಶನ್ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಮಾಹಿತಿಗಾಗಿ, Content ID ವಿವಾದಗಳ ಸಮಯದಲ್ಲಿ ಮಾನಿಟೈಸೇಶನ್ ಗೆ ಹೋಗಿ.

ಪರಿಶೀಲಿಸಬೇಕಾದ ಕ್ಲೈಮ್ ಸಮಸ್ಯೆಗಳನ್ನು ಹುಡುಕಿ

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸಮಸ್ಯೆಗಳು ಆಯ್ಕೆಮಾಡಿ.
  3. ಫಿಲ್ಟರ್ ಪಟ್ಟಿ ಕ್ಲಿಕ್ ಮಾಡಿ ಮತ್ತು ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
  4.  ಸಂಭಾವ್ಯ ಕ್ಲೈಮ್, ವಿವಾದಿತ ಕ್ಲೈಮ್, ಮತ್ತು/ಅಥವಾ ಮೇಲ್ಮನವಿ ಮಾಡಿದ ಕ್ಲೈಮ್ ಪಕ್ಕದಲ್ಲಿರುವ ಬಾಕ್ಸ್ ಗುರುತು ಹಾಕಿ. ನಿಮ್ಮ ಹುಡುಕಾಟವನ್ನು ಸಂಸ್ಕರಿಸಲು, ನೀವು ಹೆಚ್ಚುವರಿ ಫಿಲ್ಟರ್‌ಗಳನ್ನು ಆಯ್ಕೆ ಮಾಡಬಹುದು:
    • ಸಂಭಾವ್ಯ ಕ್ಲೈಮ್: ಪರಿಶೀಲನೆಗೆ ನಿರ್ದೇಶಿಸಲಾಗಿರುತ್ತದೆ, Short ಹೊಂದಾಣಿಕೆ, ಮತ್ತೊಬ್ಬ ಕಂಟೆಂಟ್ ಮ್ಯಾನೇಜರ್ ಬಳಕೆದಾರರು ಅಪ್‌ಲೋಡ್ ಮಾಡಿರುವ ವೀಡಿಯೊ, ಕಡಿಮೆ ಆತ್ಮವಿಶ್ವಾಸ, YouTube ಮಾನಿಟೈಸೇಶನ್ ನೀತಿಯ ಉಲ್ಲಂಘನೆ, ರೆಟ್ರೊಆ್ಯಕ್ಟಿವ್ ನಿರ್ಬಂಧ. ಈ ಫಿಲ್ಟರ್‌ಗಳಿಗೆ ಸಂಬಂಧಿಸಿದ ವಿವರಣೆಗಳನ್ನು ಇಲ್ಲಿ ಕಾಣಬಹುದು.
    • ವಿವಾದಿತ ಕ್ಲೈಮ್ ಅಥವಾ ಮೇಲ್ಮನವಿ ಮಾಡಿದ ಕ್ಲೈಮ್: ಕೃತಿಸ್ವಾಮ್ಯಕ್ಕೊಳಪಟ್ಟ ಮೆಟೀರಿಯಲ್ ಅನ್ನು ತಪ್ಪಾಗಿ ಗುರುತಿಸಲಾಗಿದೆ, ನ್ಯಾಯಯುತ ಬಳಕೆ, ಅಧಿಕೃತ ಕಂಟೆಂಟ್, ಮೂಲ ಕಂಟೆಂಟ್, ಸಾರ್ವಜನಿಕ ಡೊಮೇನ್. ಈ ಫಿಲ್ಟರ್‌ಗಳಿಗೆ ಸಂಬಂಧಿಸಿದ ವಿವರಣೆಗಳನ್ನು ಇಲ್ಲಿ ಕಾಣಬಹುದು.
    • ಚಾನಲ್ ಐಡಿ, ಇತರ ಪಾರ್ಟಿ, ವೀಡಿಯೊ ಅವಧಿ ಅಥವಾ ಹೊಂದಾಣಿಕೆ ಪ್ರಕಾರದ ರೀತಿಯ ಪಟ್ಟಿಯನ್ನು ಮತ್ತಷ್ಟು ಸಂಸ್ಕರಿಸಲು, ನೀವು ಇತರ ಫಿಲ್ಟರ್‌ಗಳು  ಆಯ್ಕೆಯನ್ನು ಅನ್ವಯಿಸಬಹುದು.
  5. ವೈಯಕ್ತಿಕ ಕ್ಲೈಮ್ ಕ್ಲಿಕ್ ಮಾಡಿ. ಕ್ಲೈಮ್ ವಿವರಗಳ ಪುಟವು ತೆರೆಯುತ್ತದೆ, ಇದು ಕ್ಲೈಮ್ ಸಮಸ್ಯೆಯ ಕುರಿತು ಇನ್ನಷ್ಟು ಮಾಹಿತಿಯನ್ನು ತೋರಿಸುತ್ತದೆ.
ಗಮನಿಸಿ: ಸಂಭಾವ್ಯ ಕ್ಲೈಮ್ ಹೊಂದಿರುವ ವೀಡಿಯೊವನ್ನು ಖಾಸಗಿ ಎಂದು ಸೆಟ್ ಮಾಡಿದ್ದರೆ, ವೀಡಿಯೊವನ್ನು ಪ್ಲೇ ಮಾಡಲಾಗುವುದಿಲ್ಲ.

ಕ್ಲೈಮ್ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಿ

ಸಂಭಾವ್ಯ ಮತ್ತು ವಿವಾದಿತ ಕ್ಲೈಮ್‌ಗಳು 30 ದಿನಗಳ ನಂತರ ಅವಧಿ ಮೀರುತ್ತವೆ ಮತ್ತು ಮೇಲ್ಮನವಿ ಮಾಡಿದ ಕ್ಲೈಮ್‌ಗಳು 7 ದಿನಗಳ ನಂತರ ಅವಧಿ ಮೀರುತ್ತವೆ. ನಿಮ್ಮ ಕ್ಲೈಮ್‌ಗಳನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ಅವುಗಳ ಕುರಿತು ಕ್ರಮ ಕೈಗೊಳ್ಳಲು ಮರೆಯಬೇಡಿ.
ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ

ಕ್ಲೈಮ್ ವಿವರಗಳ ಪುಟದಲ್ಲಿ, ಸಂಭಾವ್ಯ, ವಿವಾದಿತ ಅಥವಾ ಮೇಲ್ಮನವಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸುವಾಗ, ಕ್ಲೈಮ್ ಅನ್ನು ಬಿಡುಗಡೆ ಮಾಡಲು ನಿಮಗೆ ಕೆಲವು ಆಯ್ಕೆಗಳಿರುತ್ತವೆ. ಅವುಗಳೆಂದರೆ:

  • ಕ್ಲೈಮ್ ಬಿಡುಗಡೆ ಮಾಡಿ: ಕ್ಲೈಮ್ ನಿಷ್ಕ್ರಿಯವಾಗಿದ್ದರೆ, ಕ್ಲೈಮ್ ಬಿಡುಗಡೆ ಮಾಡಿ ಕ್ಲಿಕ್ ಮಾಡಿ.
  • ಕ್ಲೈಮ್ ಬಿಡುಗಡೆ ಮಾಡಿ ಮತ್ತು ಹೊರತುಪಡಿಸಿ: ಕ್ಲೈಮ್ ಅನ್ನು ಬಿಡುಗಡೆ ಮಾಡಲು ಮತ್ತು ವೀಡಿಯೊಗೆ ಹೊಂದಿಕೆಯಾಗುವ ನಿಮ್ಮ ರೆಫರೆನ್ಸ್ ಫೈಲ್‌ನ ಭಾಗವನ್ನು ಹೊರತುಪಡಿಸಲು, ಕ್ಲೈಮ್ ಬಿಡುಗಡೆ ಮಾಡಿ ಪಕ್ಕದಲ್ಲಿರುವ ಬಾಣದ ಗುರುತನ್ನು  ಕ್ಲಿಕ್ ಮಾಡಿ ಮತ್ತು ಕ್ಲೈಮ್ ಬಿಡುಗಡೆ ಮಾಡಿ ಮತ್ತು ಹೊರತುಪಡಿಸಿ ಆಯ್ಕೆಮಾಡಿ.
ಗಮನಿಸಿ: ನೀವು ಕ್ಲೈಮ್ ಅನ್ನು ಬಿಡುಗಡೆ ಮಾಡಿದರೆ ಅಥವಾ ಕ್ಲೈಮ್ ಅವಧಿ ಮೀರಿದರೆ, ಕ್ಲೈಮ್ ಅನ್ನು ಮತ್ತೆ ಸಕ್ರಿಯಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಹಲವು ಕ್ಲೈಮ್‌ಗಳನ್ನು ಒಮ್ಮೆಗೆ ಬಿಡುಗಡೆ ಮಾಡಿ

ಅದೇ ಕ್ಲೈಮ್ ಮಾಡಿದ ವೀಡಿಯೊದಲ್ಲಿ, ಒಂದಕ್ಕಿಂತ ಹೆಚ್ಚು ಸಂಭಾವ್ಯ, ವಿವಾದಿತ ಅಥವಾ ಮೇಲ್ಮನವಿ ಮಾಡಿದ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲು:

  1. ಕ್ಲೈಮ್ ವಿವರಗಳ ಪುಟದಲ್ಲಿ, ಎಲ್ಲಾ ಕ್ಲೈಮ್‌ಗಳನ್ನು ಪರಿಶೀಲಿಸಿ.
  2. ಒಂದು ಆಯ್ಕೆಮಾಡಿ:
    • ಎಲ್ಲಾ ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ: ವೀಡಿಯೊದಲ್ಲಿನ ಎಲ್ಲಾ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲು, ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ ಕ್ಲಿಕ್ ಮಾಡಿ.
    • ಬಿಡುಗಡೆ ಮಾಡಬೇಕಾದ ಕ್ಲೈಮ್‌ಗಳನ್ನು ಆಯ್ಕೆಮಾಡಿ: ವೀಡಿಯೊದಲ್ಲಿನ ಕೆಲವು ಕ್ಲೈಮ್‌ಗಳನ್ನು ಬಿಡುಗಡೆ ಮಾಡಲು, ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ ಪಕ್ಕದಲ್ಲಿರುವ ಬಾಣದ ಗುರುತನ್ನು  ಕ್ಲಿಕ್ ಮಾಡಿ ಮತ್ತು ಬಿಡುಗಡೆ ಮಾಡಬೇಕಾದ ಕ್ಲೈಮ್‌ಗಳನ್ನು ಆಯ್ಕೆಮಾಡಿ ಕ್ಲಿಕ್ ಮಾಡಿ. ನೀವು ಬಿಡುಗಡೆ ಮಾಡಬೇಕಾದ ಕ್ಲೈಮ್‌ಗಳ ಬಾಕ್ಸ್‌ಗಳಲ್ಲಿ ಚೆಕ್ ಗುರುತು ಹಾಕಿ.

ವಿವಿಧ ಕ್ಲೈಮ್ ಮಾಡಿದ ವೀಡಿಯೊಗಳಲ್ಲಿ, ಒಂದಕ್ಕಿಂತ ಹೆಚ್ಚು ಸಂಭಾವ್ಯ, ವಿವಾದಿತ ಅಥವಾ ಮೇಲ್ಮನವಿ ಮಾಡಿದ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲು:

  1. ಸಮಸ್ಯೆಗಳು  ಪುಟಕ್ಕೆ ಹೋಗಿ.
  2. ಫಿಲ್ಟರ್ ಪಟ್ಟಿ ಕ್ಲಿಕ್ ಮಾಡಿ ಮತ್ತು ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
  3. ಸಂಭಾವ್ಯ ಕ್ಲೈಮ್, ವಿವಾದಿತ ಕ್ಲೈಮ್ ಮತ್ತು/ಅಥವಾ ಮೇಲ್ಮನವಿ ಮಾಡಿದ ಕ್ಲೈಮ್ ಪಕ್ಕದ್ಲಲಿರುವ ಬಾಕ್ಸ್ ಗುರುತು ಹಾಕಿ.
  4. ಅನ್ವಯಿಸಿ ಕ್ಲಿಕ್ ಮಾಡಿ.
  5. ನೀವು ಯಾವ ವೀಡಿಯೊಗಳಲ್ಲಿನ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲು ಬಯಸುತ್ತೀರೋ, ಆ ವೀಡಿಯೊ ಪಕ್ಕದಲ್ಲಿರುವ ಬಾಕ್ಸ್‌ಗಳನ್ನು ಗುರುತು ಹಾಕಿ.
  6. ಟಾಪ್ ಬ್ಯಾನರ್‌ನಲ್ಲಿ, ಕ್ಲೈಮ್ ಬಿಡುಗಡೆ ಮಾಡಿ ಕ್ಲಿಕ್ ಮಾಡಿ.
ಸಂಭಾವ್ಯ ಕ್ಲೈಮ್‌ಗಳನ್ನು ಖಚಿತಪಡಿಸಿ

ಕ್ಲೈಮ್ ವಿವರಗಳ ಪುಟದಲ್ಲಿ, ಸಂಭಾವ್ಯ ಕ್ಲೈಮ್ ಅನ್ನು ಪರಿಶೀಲಿಸುತ್ತಿರುವಾಗ, ಕ್ಲೈಮ್ ಅನ್ನು ಖಚಿತಪಡಿಸಲು ನಿಮಗೆ ಕೆಲವು ಆಯ್ಕೆಗಳಿರುತ್ತವೆ. ಅವುಗಳೆಂದರೆ:

  • ಕ್ಲೈಮ್ ಖಚಿತಪಡಿಸಿ: ಸಂಭಾವ್ಯ ಕ್ಲೈಮ್ ಮಾನ್ಯವಾಗಿದೆಯೇ ಎಂದು ಖಚಿತಪಡಿಸಲು ಮತ್ತು ನಿಮ್ಮ ಹೊಂದಾಣಿಕೆ ನೀತಿಯನ್ನು ಅನ್ವಯಿಸಲು, ಕ್ಲೈಮ್ ಖಚಿತಪಡಿಸಿ ಕ್ಲಿಕ್ ಮಾಡಿ.
  • ಕ್ಲೈಮ್ ಖಚಿತಪಡಿಸಿ ಮತ್ತು ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿ: ಸಂಭಾವ್ಯ ಕ್ಲೈಮ್ ಮಾನ್ಯವಾಗಿದೆ ಎಂದು ಖಚಿತಪಡಿಸಲು ಮತ್ತು ವೀಡಿಯೊವನ್ನು ತೆಗೆದುಹಾಕುವಂತೆ YouTube ಗೆ ತಿಳಿಸುವ ಸಲುವಾಗಿ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಲು, ಕ್ಲೈಮ್ ಖಚಿತಪಡಿಸಿ ಪಕ್ಕದಲ್ಲಿರುವ ಬಾಣದ ಗುರುತನ್ನು ಕ್ಲಿಕ್ ಮಾಡಿ ಮತ್ತು ಕ್ಲೈಮ್ ಮಾಡಿದ ವೀಡಿಯೊವನ್ನು ತೆಗೆದುಹಾಕಿ ಆಯ್ಕೆಮಾಡಿ.

ಹಲವು ಸಂಭಾವ್ಯ ಕ್ಲೈಮ್‌ಗಳನ್ನು ಒಮ್ಮೆಗೆ ಖಚಿತಪಡಿಸಿ

ಕ್ಲೇಮ್‌ ಮಾಡಿದ ಅದೇ ವೀಡಿಯೊದಲ್ಲಿನ ಎಲ್ಲಾ ಸಂಭಾವ್ಯ ಕ್ಲೇಮ್‌ಗಳನ್ನು ಖಚಿತಪಡಿಸಲು:

  1. ಕ್ಲೈಮ್ ವಿವರಗಳ ಪುಟದಲ್ಲಿ, ಎಲ್ಲಾ ಸಂಭಾವ್ಯ ಕ್ಲೈಮ್‌ಗಳನ್ನು ಪರಿಶೀಲಿಸಿ.
  2. ಕ್ಲೈಮ್‌ಗಳನ್ನು ಖಚಿತಪಡಿಸಿ ಕ್ಲಿಕ್ ಮಾಡಿ.
ಗಮನಿಸಿ: ಒಂದೇ ಬಾರಿಗೆ ಅನೇಕ ಸಂಭಾವ್ಯ ಕ್ಲೈಮ್‌ಗಳನ್ನು ಆಯ್ಕೆ ಮಾಡಲು ಮತ್ತು ಖಚಿತಪಡಿಸಲು ಸಾಧ್ಯವಿಲ್ಲ.
ವಿವಾದಿತ ಕ್ಲೈಮ್‌ಗಳನ್ನು ಮರುಸ್ಥಾಪಿಸಿ

ಕ್ಲೈಮ್ ವಿವರಗಳ ಪುಟದಲ್ಲಿ, ವಿವಾದಿತ ಕ್ಲೈಮ್ ಅನ್ನು ಪರಿಶೀಲಿಸುತ್ತಿರುವಾಗ, ಕ್ಲೈಮ್ ಅನ್ನು ಮರುಸ್ಥಾಪಿಸಲು ನಿಮಗೆ ಕೆಲವು ಆಯ್ಕೆಗಳಿರುತ್ತವೆ. ಅವುಗಳೆಂದರೆ:

  • ಕ್ಲೈಮ್ ಮರುಸ್ಥಾಪಿಸಿ: ವಿವಾದಿತ ಕ್ಲೈಮ್ ಮಾನ್ಯವಾಗಿದೆಯೇ ಎಂದು ಪರಿಶೀಲಿಸಲು ಮತ್ತು ಅದನ್ನು ಮತ್ತೆ ಸಕ್ರಿಯಗೊಳಿಸಲು, ಕ್ಲೈಮ್ ಮರುಸ್ಥಾಪಿಸಿ ಕ್ಲಿಕ್ ಮಾಡಿ.
  • ಕ್ಲೈಮ್ ಮರುಸ್ಥಾಪಿಸಿ ಮತ್ತು ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿ: ವಿವಾದಿತ ಕ್ಲೈಮ್ ಮಾನ್ಯವಾಗಿದೆಯೇ ಎಂದು ಪರಿಶೀಲಿಸಲು ಮತ್ತು ವೀಡಿಯೊವನ್ನು ತೆಗೆದುಹಾಕುವುದಕ್ಕಾಗಿ YouTube ಗೆ ತಿಳಿಸುವ ಸಲುವಾಗಿ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಲು, ಕ್ಲೈಮ್ ಮರುಸ್ಥಾಪಿಸಿ ಪಕ್ಕದಲ್ಲಿರುವ ಬಾಣದ ಗುರುತನ್ನು  ಕ್ಲಿಕ್ ಮಾಡಿ ಮತ್ತು ಕ್ಲೈಮ್ ಮಾಡಿದ ವೀಡಿಯೊವನ್ನು ತೆಗೆದುಹಾಕಿ ಆಯ್ಕೆಮಾಡಿ.

ಹಲವು ವಿವಾದಿತ ಕ್ಲೈಮ್‌ಗಳನ್ನು ಒಮ್ಮೆಗೆ ಮರುಸ್ಥಾಪಿಸಿ

ಕ್ಲೇಮ್ ಮಾಡಿದ ಅದೇ ವೀಡಿಯೊದಲ್ಲಿ, ಒಂದಕ್ಕಿಂತ ಹೆಚ್ಚು ವಿವಾದಿತ ಕ್ಲೇಮ್‌ಗಳನ್ನು ಮರುಸ್ಥಾಪಿಸಲು:

  1. ಕ್ಲೈಮ್ ವಿವರಗಳ ಪುಟದಲ್ಲಿ, ಎಲ್ಲಾ ವಿವಾದಿತ ಕ್ಲೈಮ್‌ಗಳನ್ನು ಪರಿಶೀಲಿಸಿ.
  2. ಒಂದು ಆಯ್ಕೆಮಾಡಿ:
    • ಎಲ್ಲಾ ಕ್ಲೈಮ್‌ಗಳನ್ನು ಮರುಸ್ಥಾಪಿಸಿ: ವೀಡಿಯೊದಲ್ಲಿನ ಎಲ್ಲಾ ವಿವಾದಿತ ಕ್ಲೈಮ್‌ಗಳನ್ನು ಮರುಸ್ಥಾಪಿಸಲು, ಕ್ಲೈಮ್‌ಗಳನ್ನು ಮರುಸ್ಥಾಪಿಸಿ ಕ್ಲಿಕ್ ಮಾಡಿ.
    • ಮರುಸ್ಥಾಪಿಸಬೇಕಾದ ಕ್ಲೈಮ್‌ಗಳನ್ನು ಆಯ್ಕೆಮಾಡಿ: ವೀಡಿಯೊದಲ್ಲಿನ ಕೆಲವು ವಿವಾದಿತ ಕ್ಲೈಮ್‌ಗಳನ್ನು ಮರುಸ್ಥಾಪಿಸಲು, ಕ್ಲೈಮ್‌ಗಳನ್ನು ಮರುಸ್ಥಾಪಿಸಿ ಪಕ್ಕದಲ್ಲಿರುವ ಬಾಣದ ಗುರುತನ್ನು  ಕ್ಲಿಕ್ ಮಾಡಿ ಮತ್ತು ಮರುಸ್ಥಾಪಿಸಬೇಕಾದ ಕ್ಲೈಮ್‌ಗಳನ್ನು ಆಯ್ಕೆಮಾಡಿ ಕ್ಲಿಕ್ ಮಾಡಿ. ನೀವು ಮರುಸ್ಥಾಪಿಸಬೇಕಾದ ಕ್ಲೈಮ್‌ಗಳ ಬಾಕ್ಸ್‌ಗಳಲ್ಲಿ ಗುರುತು ಹಾಕಿ.
ಮೇಲ್ಮನವಿ ಮಾಡಿದ ಕ್ಲೈಮ್‌ಗಳನ್ನು ತಿರಸ್ಕರಿಸಿ
ಕ್ಲೈಮ್ ವಿವರಗಳ ಪುಟದಲ್ಲಿ, ನೀವು ಮೇಲ್ಮನವಿಯನ್ನು ತಿರಸ್ಕರಿಸಿ ಕ್ಲಿಕ್ ಮಾಡುವ ಮೂಲಕ ಮೇಲ್ಮನವಿ ಮಾಡಿದ ಕ್ಲೈಮ್ ಅನ್ನು ತಿರಸ್ಕರಿಸಬಹುದು. ಹಾಗೆ ಮಾಡಿದರೆ, ವೀಡಿಯೊವನ್ನು ತೆಗೆದುಹಾಕುವುದಕ್ಕೆ YouTube ಗೆ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸುತ್ತದೆ.
ಗಮನಿಸಿ: ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಮೇಲ್ಮನವಿ ಮಾಡಿದ ಕ್ಲೈಮ್‌ಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ.

ಕ್ಲೈಮ್ ನೀತಿಯನ್ನು ಬದಲಾಯಿಸಿ

ಕೆಲವೊಮ್ಮೆ ನಿಮ್ಮ ಡೀಫಾಲ್ಟ್ ಹೊಂದಾಣಿಕೆ ನೀತಿಗಿಂತ ಭಿನ್ನವಾಗಿರುವ ನೀತಿಯನ್ನು ಕ್ಲೈಮ್ ಮಾಡಿದ ವೀಡಿಯೊಗೆ ಅನ್ವಯಿಸಲು ನೀವು ಬಯಸಬಹುದು. ಕ್ಲೈಮ್ ಮಾಡಿದ ವೀಡಿಯೊಗೆ ಕಸ್ಟಮ್ ನೀತಿಯನ್ನು ಸೇರಿಸಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸಮಸ್ಯೆಗಳು ಆಯ್ಕೆಮಾಡಿ.
  3. ಫಿಲ್ಟರ್ ಪಟ್ಟಿ ಕ್ಲಿಕ್ ಮಾಡಿ ಮತ್ತು ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
  4.  ಸಂಭಾವ್ಯ ಕ್ಲೈಮ್, ವಿವಾದಿತ ಕ್ಲೈಮ್, ಮತ್ತು/ಅಥವಾ ಮೇಲ್ಮನವಿ ಮಾಡಿದ ಕ್ಲೈಮ್ ಪಕ್ಕದಲ್ಲಿರುವ ಬಾಕ್ಸ್ ಗುರುತು ಹಾಕಿ.
    • ನಿಮ್ಮ ಹುಡುಕಾಟವನ್ನು ಸಂಸ್ಕರಿಸಲು, ಹೆಚ್ಚುವರಿ ಫಿಲ್ಟರ್‌ಗಳನ್ನು ಆಯ್ಕೆಮಾಡಿ:
      • ಸಂಭಾವ್ಯ ಕ್ಲೈಮ್: ಪರಿಶೀಲನೆಗೆ ನಿರ್ದೇಶಿಸಲಾಗಿರುತ್ತದೆ, Short ಹೊಂದಾಣಿಕೆ, YouTube ಪಾಲುದಾರರು ಅಪ್‌ಲೋಡ್ ಮಾಡಿರುವ ವೀಡಿಯೊ, ಕಡಿಮೆ ಆತ್ಮವಿಶ್ವಾಸ, YouTube ಮಾನಿಟೈಸೇಶನ್ ನೀತಿಯ ಉಲ್ಲಂಘನೆ.
      • ವಿವಾದಿತ ಕ್ಲೈಮ್ ಅಥವಾ ಮೇಲ್ಮನವಿ ಮಾಡಿದ ಕ್ಲೈಮ್: ಕೃತಿಸ್ವಾಮ್ಯಕ್ಕೊಳಪಟ್ಟ ಮೆಟೀರಿಯಲ್ ಅನ್ನು ತಪ್ಪಾಗಿ ಗುರುತಿಸಲಾಗಿದೆ, ನ್ಯಾಯಯುತ ಬಳಕೆ, ಅಧಿಕೃತ ಕಂಟೆಂಟ್, ಮೂಲ ಕಂಟೆಂಟ್, ಸಾರ್ವಜನಿಕ ಡೊಮೇನ್.
    • ಚಾನಲ್ ಐಡಿ, ಇತರ ಪಾರ್ಟಿ, ವೀಡಿಯೊ ಅವಧಿ ಅಥವಾ ಹೊಂದಾಣಿಕೆ ಪ್ರಕಾರದ ರೀತಿಯ ಪಟ್ಟಿಯನ್ನು ಮತ್ತಷ್ಟು ಸಂಸ್ಕರಿಸಲು, ನೀವು ಇತರ ಫಿಲ್ಟರ್‌ಗಳು  ಆಯ್ಕೆಯನ್ನು ಅನ್ವಯಿಸಬಹುದು.
  5. ಅನ್ವಯಿಸಿ ಕ್ಲಿಕ್ ಮಾಡಿ.
  6. ಕ್ಲೈಮ್ ವಿವರಗಳ ಪುಟವನ್ನು ತೆರೆಯಲು ಪ್ರತ್ಯೇಕ ಕ್ಲೈಮ್ ಮೇಲೆ ಕ್ಲಿಕ್ ಮಾಡಿ.
  7. ಕ್ಲೈಮ್ ವಿವರಗಳ ಪುಟದಲ್ಲಿ, ನೀತಿ ಟ್ಯಾಬ್ ಕ್ಲಿಕ್ ಮಾಡಿ.
  8. ಕ್ಲೈಮ್ ನಿರ್ದಿಷ್ಟ ನೀತಿಯನ್ನು ಸೆಟ್ ಮಾಡಿ ಕ್ಲಿಕ್ ಮಾಡಿ.
  9. ಒಂದು ಆಯ್ಕೆಮಾಡಿ:
    • ಅಸ್ತಿತ್ವದಲ್ಲಿರುವ ನೀತಿಯನ್ನು ಬಳಸಿ: ಪಟ್ಟಿಯಲ್ಲಿರುವ ನೀತಿಯನ್ನು ಆಯ್ಕೆಮಾಡಿ ಮತ್ತು ಅನ್ವಯಿಸಿ ಕ್ಲಿಕ್ ಮಾಡಿ.
    • ನೀತಿಯನ್ನು ರಚಿಸಿ: ಹೊಸ ಕಸ್ಟಮ್ ನೀತಿಯನ್ನು ರಚಿಸಲು, ಕಸ್ಟಮ್ ನೀತಿಯನ್ನು ಸೆಟ್ ಮಾಡಿ ಕ್ಲಿಕ್ ಮಾಡಿ. ನೀವು ನೀತಿಯನ್ನು ರಚಿಸುವ ಕಾರ್ಯವನ್ನು ಮುಗಿಸಿದ ಬಳಿಕ, ಸೇವ್ ಮಾಡಿ ಕ್ಲಿಕ್ ಮಾಡಿ. ನೀತಿಗಳನ್ನು ರಚಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6280326963967833255
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false