YouTube ನಲ್ಲಿ ನಿಧಿಸಂಗ್ರಹದಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಿ

ನಿಮಗೆ ಕಾಳಜಿಯಿರುವ ಉದ್ದೇಶಗಳು ಅಥವಾ ಸಂಸ್ಥೆಗಳ ಕುರಿತು ಅರಿವನ್ನು ಹೆಚ್ಚಿಸುವುದಾಗಲಿ ಅಥವಾ ನಿಧಿಗಳನ್ನು ಸಂಗ್ರಹಿಸುವುದಾಗಲಿ, ಪ್ರಪಂಚದಲ್ಲಿನ ಸದುದ್ದೇಶದ ಕಾರ್ಯಗಳಿಗೆ YouTube ಒಂದು ಬಲಿಷ್ಠ ಮಾಧ್ಯಮವಾಗಬಹುದು.

ನಿಮ್ಮಲ್ಲಿ ಅನೇಕರು ನಿಮ್ಮ ಸಮುದಾಯಗಳಿಗೆ ನೆರವು ನೀಡುವ ಮತ್ತು ಬದಲಾವಣೆಯನ್ನು ತರುವ ಮಾರ್ಗಗಳನ್ನು ಹುಡುಕುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡಲು, YouTube ಮೂಲಕ ನಿಧಿಸಂಗ್ರಹದಿಂದ ಹೆಚ್ಚಿನ ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಕೆಲವು ಉದಾಹರಣೆಗಳು ಇಲ್ಲಿವೆ.

ನೀವು ಏನು ಮಾಡಬಹುದು ಎಂಬುದಕ್ಕೆ ಕೆಲವು ಉದಾಹರಣೆಗಳೆಂದರೆ:

  • YouTube ಔದಾರ್ಯದ ಮೂಲಕ ನಿಧಿಸಂಗ್ರಹ: ನಿರ್ದಿಷ್ಟ ಸ್ಥಳಗಳಲ್ಲಿನ ಅರ್ಹ ಚಾನಲ್‌ಗಳು ತಮ್ಮ ವೀಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳಲ್ಲಿ ದೇಣಿಗೆ ಬಟನ್ ಅನ್ನು ಸೇರಿಸುವ ಮೂಲಕ ಲಭ್ಯವಿರುವ ಲಾಭರಹಿತ ಸಂಸ್ಥೆಗಳಿಗಾಗಿ ನಿಧಿಸಂಗ್ರಹ ಮಾಡಬಹುದು. ನಿಧಿಸಂಗ್ರಹವನ್ನು ಸೆಟಪ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
  • ನೀವು YouTube ಔದಾರ್ಯದಲ್ಲಿ ಭಾಗವಹಿಸಲು ಅರ್ಹರಾಗಿರದಿದ್ದರೆ: ಬಾಹ್ಯ ನಿಧಿಸಂಗ್ರಹಕ್ಕೆ ಲಿಂಕ್ ಮಾಡಲು ಮುಕ್ತಾಯ ಪರದೆಗಳನ್ನು ಬಳಸಿ. ವೀಡಿಯೊದ ಕೊನೆಯ 5–20 ಸೆಕೆಂಡ್‌ಗಳಲ್ಲಿ ಮುಕ್ತಾಯ ಪರದೆಗಳನ್ನು ಸೇರಿಸಬಹುದು. ನೀವು ಹಲವಾರು ಅನುಮೋದಿತ ಥರ್ಡ್ ಪಾರ್ಟಿ ನಿಧಿಸಂಗ್ರಹಣೆ ಸೈಟ್‌ಗಳನ್ನು ಕಾಣಬಹುದಾಗಿದ್ದು (ಉದಾ, GoFundMe, JustGiving), ಅವುಗಳನ್ನು ಮುಕ್ತಾಯ ಪರದೆಗಳಲ್ಲಿ ಲಿಂಕ್ ಮಾಡಬಹುದಾಗಿದೆ.
  • ನೀವು ನಿರ್ದಿಷ್ಟ ವೀಡಿಯೊಗಳಿಂದ ಗಳಿಸುವ ನಿಮ್ಮ ಸ್ವಂತ ಆದಾಯವನ್ನು ದೇಣಿಗೆ ನೀಡಿ: ನಿಮ್ಮ ಪ್ರೇಕ್ಷಕರು ವೀಕ್ಷಿಸಲು ಇಷ್ಟಪಡುವಂತಹ ಮೂಲ ಕಂಟೆಂಟ್ ಅನ್ನು ರಚಿಸಿ. ನೀವು ಗಳಿಸುವ ಹಣವನ್ನು ನಿರ್ದಿಷ್ಟ ಲಾಭರಹಿತ ಸಂಸ್ಥೆಗೆ ದೇಣಿಗೆ ನೀಡುತ್ತೀರಿ ಎಂದು ನಿಮ್ಮ ವೀಕ್ಷಕರಿಗೆ ನೀವು ಹೇಳಬಹುದು. ಆದರೆ, ಕೊಡುಗೆಯನ್ನು ಹೆಚ್ಚಿಸುವುದಕ್ಕಾಗಿ ಆ್ಯಡ್‌‌ಗಳನ್ನು ಕ್ಲಿಕ್ ಮಾಡಲು ಅಥವಾ ನೋಡಲು ನೀವು ಅವರನ್ನು ಪ್ರೋತ್ಸಾಹಿಸಬಾರದು.

ನೀವು ಏನು ಮಾಡಬಾರದು ಎಂಬುದಕ್ಕೆ ಕೆಲವು ಉದಾಹರಣೆಗಳೆಂದರೆ:

  • ನಿಮ್ಮ ವೀಡಿಯೊಗಳಲ್ಲಿ, ಪದೇ ಪದೇ ವೀಕ್ಷಿಸುವುದು ಮತ್ತು ಆ್ಯಡ್‌ಗಳನ್ನು ಕ್ಲಿಕ್ ಮಾಡುವಂತಹ ಸ್ಪ್ಯಾಮ್ ರೀತಿಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಡಿ. ರಿಮೈಂಡರ್ ಆಗಿ, ಸ್ಪ್ಯಾಮ್ ರೀತಿಯ ಚಟುವಟಿಕೆಯು ನಮ್ಮ ನಕಲಿ ತೊಡಗಿಸಿಕೊಳ್ಳುವಿಕೆ ನೀತಿ ಮತ್ತು ನಮ್ಮ ನೀತಿಗಳ ಉಲ್ಲಂಘನೆಯಾಗಿದೆ, ಮತ್ತು ನಿಮ್ಮ ವೀಡಿಯೊವನ್ನು ತೆಗೆದುಹಾಕಬಹುದು. ಇಂತಹ ನಡವಳಿಕೆಯನ್ನು ನಾವು ಗುರುತಿಸಿದಾಗ, ಈ ವೀಕ್ಷಣೆಗಳು ಮತ್ತು ಕ್ಲಿಕ್‌ಗಳಿಗೆ ಸಂಬಂಧಿಸಿದ ಆದಾಯವನ್ನು ರಚನೆಕಾರರಿಗೆ ಪಾವತಿಸಲಾಗುವುದಿಲ್ಲ ಮತ್ತು ಜಾಹೀರಾತುದಾರರಿಗೆ ಶುಲ್ಕ ವಿಧಿಸಲಾಗುವುದಿಲ್ಲ.
  • ಸಾಕಷ್ಟು ಬದಲಾವಣೆಗಳನ್ನು ಮಾಡದೆಯೇ, ಇತರ ರಚನೆಕಾರರು ಅಥವಾ ಕಲಾವಿದರು ರಚಿಸಿದ ಕೃತಿಗಳನ್ನು ಅಪ್‌ಲೋಡ್ ಮಾಡಬೇಡಿ. ನೀವು ದೇಣಿಗೆಗಳನ್ನು ಪಡೆಯಲು ಬಯಸುವ ವೀಡಿಯೊಗಳಲ್ಲಿ ನೀವು ರಚಿಸದ ಕೃತಿಗಳನ್ನು ಬಳಸಲು ಪ್ರಯತ್ನಿಸಿದರೆ, ನಿಮ್ಮ ವೀಡಿಯೊವನ್ನು ಕೃತಿಸ್ವಾಮ್ಯ ರಕ್ಷಣೆಯ ಅಡಿಯಲ್ಲಿ ಕ್ಲೇಮ್ ಮಾಡಬಹುದು.
  • ಸಂಸ್ಥೆ ಅಥವಾ ಲಾಭರಹಿತ ಸಂಸ್ಥೆಗಳಿಗೆ ದೇಣಿಗೆ ನೀಡುವ ಕುರಿತಾಗಿ ತಪ್ಪು ಕ್ಲೇಮ್‌ಗಳನ್ನು ಮಾಡಬೇಡಿ. ರಚನೆಕಾರರು ಭರವಸೆ ನೀಡಿದ ದೇಣಿಗೆಯನ್ನು ಲಾಭರಹಿತ ಸಂಸ್ಥೆಗಳು ಸ್ವೀಕರಿಸಿವೆಯೇ ಎಂಬುದನ್ನು ದೃಢೀಕರಿಸುವ ಜವಾಬ್ದಾರಿ YouTube ಗೆ ಸೇರಿದ್ದಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4670854070695290704
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false