YouTube ನಲ್ಲಿ ನ್ಯಾಯಯುತ ಬಳಕೆ

ನ್ಯಾಯಯುತ ಬಳಕೆ ಎಂಬುದು, ಕೃತಿಸ್ವಾಮ್ಯ-ಸಂರಕ್ಷಿತ ವಿಷಯವನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ, ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಇಲ್ಲದೆಯೇ ಬಳಸಬಹುದು ಎಂದು ಹೇಳುವ ಕಾನೂನು ಸಿದ್ಧಾಂತವಾಗಿದೆ.

ಕೃತಿಸ್ವಾಮ್ಯ ಕಾನೂನಿನ ಅಡಿಯಲ್ಲಿ ಉಲ್ಲಂಘನೆ ಮಾಡುತ್ತಿವೆ ಎಂದು ಕೃತಿಸ್ವಾಮ್ಯ ಹೊಂದಿರುವವರು ಕ್ಲೇಮ್ ಮಾಡುವ ವೀಡಿಯೊಗಳನ್ನು ತೆಗೆದುಹಾಕಲು YouTube ಅನೇಕ ವಿನಂತಿಗಳನ್ನು ಪಡೆಯುತ್ತದೆ. ಕೆಲವೊಮ್ಮೆ ಈ ವಿನಂತಿಗಳು, ಕೃತಿಸ್ವಾಮ್ಯ ವಿನಾಯಿತಿಗಳನ್ನು ಪಡೆಯಲು ಅರ್ಹವಾಗಿರುವ ಅಥವಾ ನ್ಯಾಯಯುತ ಬಳಕೆಯ ಸ್ಪಷ್ಟ ಉದಾಹರಣೆಗಳು ಎಂಬಂತೆ ತೋರುವ ವೀಡಿಯೊಗಳಿಗೆ ಅನ್ವಯವಾಗುತ್ತವೆ.

ಕೃತಿಸ್ವಾಮ್ಯ ಹೊಂದಿರುವವರು ಕೃತಿಸ್ವಾಮ್ಯ ಹೊಂದಿರುವ ವೀಡಿಯೊವನ್ನು ತೆಗೆದುಹಾಕುವ ವಿನಂತಿಯನ್ನು ಸಲ್ಲಿಸುವ ಮೊದಲು ಕೃತಿಸ್ವಾಮ್ಯ ವಿನಾಯಿತಿಗಳು ಅನ್ವಯಿಸುತ್ತವೆಯೇ ಎಂಬುದನ್ನು ಪರಿಗಣಿಸಬೇಕು ಎಂದು ನ್ಯಾಯಾಲಯಗಳು ನಿರ್ಧರಿಸಿವೆ.

ವೀಡಿಯೊದಲ್ಲಿನ ಕೃತಿಸ್ವಾಮ್ಯ-ಸಂರಕ್ಷಿತ ವಿಷಯದ ಬಳಕೆಯು ಕೃತಿಸ್ವಾಮ್ಯ ವಿನಾಯಿತಿಯನ್ನು ಪಡೆಯಲು ಅರ್ಹವಾಗಿದ್ದರೆ, ಆ ವೀಡಿಯೊ ಕಾನೂನುರೀತ್ಯಾ ಸೂಕ್ತವಾಗಿದೆ ಮತ್ತು ಅದು ಉಲ್ಲಂಘನೀಯವಾಗಿಲ್ಲ ಎಂಬುದಾಗಿ ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ YouTube ಗೆ ಕೃತಿಸ್ವಾಮ್ಯವನ್ನು ಹೊಂದಿರುವ ವೀಡಿಯೊವನ್ನು ತೆಗೆದುಹಾಕುವ ವಿನಂತಿಯನ್ನು ಸಲ್ಲಿಸುವ ಮೊದಲು ಕೃತಿಸ್ವಾಮ್ಯ ವಿನಾಯಿತಿಗಳು ಅನ್ವಯಿಸುತ್ತವೆಯೇ ಎಂದು ಯೋಚಿಸಲು ನಾವು ಕೃತಿಸ್ವಾಮ್ಯ ಹೊಂದಿರುವವರನ್ನು ಕೇಳುತ್ತೇವೆ. ವೀಡಿಯೊವು ವಿನಾಯಿತಿಗೆ ಅರ್ಹವಾಗಿಲ್ಲ ಎಂದು ಕೃತಿಸ್ವಾಮ್ಯ ಹೊಂದಿರುವವರು ನಂಬುವುದಾದರೆ, ಅದು ಏಕೆ ಎಂಬುದರ ಕುರಿತು ಅವರು ನಮಗೆ ಸಮರ್ಪಕ ವಿವರಣೆಯನ್ನು ನೀಡಬೇಕು. 

ಕೃತಿಸ್ವಾಮ್ಯ ಹೊಂದಿರುವವರು ಕೃತಿಸ್ವಾಮ್ಯ ವಿನಾಯಿತಿಗಾಗಿ ವೀಡಿಯೊ ಏಕೆ ಅರ್ಹತೆಯನ್ನು ಪಡೆಯುವುದಿಲ್ಲ ಎಂಬುದಕ್ಕೆ ಸಮರ್ಪಕ ವಿವರಣೆಯನ್ನು ನಮಗೆ ಒದಗಿಸದಿದ್ದರೆ, ವೀಡಿಯೊವನ್ನು YouTube ನಿಂದ ತೆಗೆದುಹಾಕಲಾಗುವುದಿಲ್ಲ. 

ಜಗತ್ತಿನಾದ್ಯಂತ ಕೃತಿಸ್ವಾಮ್ಯ ವಿನಾಯಿತಿಗಳು

ಕೃತಿಸ್ವಾಮ್ಯ ವಿನಾಯಿತಿಗಳ ಕುರಿತಾದ ಅಂತಾರಾಷ್ಟ್ರೀಯ ನಿಯಮಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿದ್ದರೂ, ಅವುಗಳು ಭಿನ್ನವಾಗಿರಬಹುದು. ಕೃತಿಸ್ವಾಮ್ಯ-ಸಂರಕ್ಷಿತ ವಿಷಯವನ್ನು, ಕೃತಿಸ್ವಾಮ್ಯ ಹೊಂದಿರುವವರ ಅನುಮತಿಯಿಲ್ಲದೆ ಯಾವಾಗ ಬಳಸಬಹುದು ಎಂಬ ಕುರಿತು ವಿವಿಧ ದೇಶಗಳು ಹಾಗೂ ಪ್ರದೇಶಗಳು ವಿವಿಧ ನಿಯಮಗಳನ್ನು ಹೊಂದಿರಬಹುದು.

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳಿಗೆ ಪ್ರತಿಕ್ರಿಯಿಸುವಾಗ ನಾವು ಸ್ಥಳೀಯ ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂಬುದನ್ನು ನೆನಪಿನಲ್ಲಿಡಿ. ವೀಡಿಯೊವೊಂದು ಕೃತಿಸ್ವಾಮ್ಯ ವಿನಾಯಿತಿಗೆ ಅರ್ಹತೆಯನ್ನು ಹೊಂದಿಲ್ಲ ಎಂದು ಕ್ಲೇಮ್ ಮಾಡುವ ಕೃತಿಸ್ವಾಮ್ಯ ಹೊಂದಿರುವವರಿಂದ ನಾವು ಎಷ್ಟು ಬಾರಿ ಹೆಚ್ಚುವರಿ ವಿವರಣೆಗಳನ್ನು ವಿನಂತಿಸುತ್ತೇವೆ ಎಂಬುದು ಸೇರಿದಂತೆ, ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು YouTube ಕೃತಿಸ್ವಾಮ್ಯ ಪಾರದರ್ಶಕತೆ ವರದಿಯನ್ನು ವೀಕ್ಷಿಸಬಹುದು.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ವ್ಯಾಖ್ಯಾನ, ಟೀಕೆ, ಸಂಶೋಧನೆ, ಬೋಧನೆ ಅಥವಾ ಸುದ್ದಿ ವರದಿ ಮಾಡುವಿಕೆಯ ಕೃತಿಗಳನ್ನು ನ್ಯಾಯಯುತ ಬಳಕೆಯೆಂದು ಪರಿಗಣಿಸಲಾಗಬಹುದು. EU ನಲ್ಲಿ, ಹೆಚ್ಚು ಸೀಮಿತ ವಿನಾಯಿತಿಗಳನ್ನು ಗುರುತಿಸಲಾಗಿದೆ ಮತ್ತು ಬಳಕೆಯು ಉಲ್ಲೇಖ, ಟೀಕೆ, ವಿಮರ್ಶೆ, ವ್ಯಂಗ್ಯ ಚಿತ್ರಣ, ವಿಡಂಬನೆ ಮತ್ತು ಪ್ಯಾಸ್ಟೀಷ್‌ನಂತಹ ನಿರ್ದಿಷ್ಟ ವರ್ಗಗಳಿಗೆ ಸೇರಬೇಕು. ಇತರ ದೇಶಗಳು/ಪ್ರದೇಶಗಳು ನ್ಯಾಯೋಚಿತ ವ್ಯವಹಾರ ಎಂಬ ಪರಿಕಲ್ಪನೆಯನ್ನು ಹೊಂದಿದ್ದು, ಇದು ವಿಭಿನ್ನವಾಗಿ ಕೆಲಸ ಮಾಡಬಹುದು.

ಅಂತಿಮವಾಗಿ, ನ್ಯಾಯಾಲಯಗಳು ಪ್ರತಿಯೊಂದು ಅನನ್ಯ ಪ್ರಕರಣದ ವಾಸ್ತವಾಂಶಗಳನ್ನು ಆಧರಿಸಿ, ನ್ಯಾಯಯುತ ಬಳಕೆಯ ಪ್ರಕರಣಗಳ ಕುರಿತು ತೀರ್ಮಾನ ಕೈಗೊಳ್ಳುತ್ತವೆ. ಕೃತಿಸ್ವಾಮ್ಯ-ಸಂರಕ್ಷಿತ ವಿಷಯವನ್ನು ಒಳಗೊಂಡಿರುವ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೊದಲು ತಜ್ಞರಿಂದ ಕಾನೂನು ಸಲಹೆಯನ್ನು ಪಡೆದುಕೊಳ್ಳಲು ನೀವು ಬಹುಶಃ ಬಯಸಬಹುದು.

ನ್ಯಾಯಯುತ ಬಳಕೆಗೆ ಸಂಬಂಧಿಸಿದ ನಾಲ್ಕು ಅಂಶಗಳು

ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಯಾವುದನ್ನು ನ್ಯಾಯಯುತ ಬಳಕೆ ಎಂದು ಪರಿಗಣಿಸಲಾಗುತ್ತದೆ ಎಂಬುದನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ. ನ್ಯಾಯಯುತ ಬಳಕೆಯ ನಾಲ್ಕು ಅಂಶಗಳು ಪ್ರತಿ ನಿರ್ದಿಷ್ಟ ಪ್ರಕರಣಕ್ಕೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ನ್ಯಾಯಾಧೀಶರು ಪರಿಗಣಿಸುತ್ತಾರೆ. ನ್ಯಾಯಯುತ ಬಳಕೆಯ ನಾಲ್ಕು ಅಂಶಗಳೆಂದರೆ:

1. ಅಂತಹ ಬಳಕೆಯು ವಾಣಿಜ್ಯಾತ್ಮಕ ಸ್ವರೂಪವನ್ನು ಹೊಂದಿದೆಯೇ ಅಥವಾ ಅದು ಲಾಭರಹಿತ ಶೈಕ್ಷಣಿಕ ಉದ್ದೇಶಗಳನ್ನು ಹೊಂದಿದೆಯೇ ಎಂಬುದನ್ನು ಒಳಗೊಂಡಂತೆ ಬಳಕೆಯ ಉದ್ದೇಶ ಮತ್ತು ಸ್ವರೂಪ

ಕೃತಿಸ್ವಾಮ್ಯ-ಸಂರಕ್ಷಣೆ ವಿಷಯದ ಬಳಕೆಯು “ಪರಿವರ್ತನೀಯವಾಗಿದೆಯೇ” ಎಂಬುದರ ಮೇಲೆ ನ್ಯಾಯಾಲಯಗಳು ಸಾಮಾನ್ಯವಾಗಿ ಗಮನ ಕೇಂದ್ರೀಕರಿಸುತ್ತವೆ. ಅಂದರೆ, ಅದು ಮೂಲ ವಿಷಯಕ್ಕೆ ಹೊಸ ಅಭಿವ್ಯಕ್ತಿ ಅಥವಾ ಅರ್ಥವನ್ನು ಸೇರಿಸುತ್ತದೆಯೇ ಅಥವಾ ಅದು ಕೇವಲ ಮೂಲವನ್ನು ನಕಲು ಮಾಡುತ್ತದೆಯೇ ಎಂದರ್ಥವಾಗಿದೆ.
ವಾಣಿಜ್ಯಾತ್ಮಕ ಬಳಕೆಗಳನ್ನು ನ್ಯಾಯಯುತ ಬಳಕೆ ಎಂದು ಪರಿಗಣಿಸುವ ಸಾಧ್ಯತೆ ಕಡಿಮೆಯಾಗಿರುತ್ತದೆ, ಆದರೆ ನ್ಯಾಯಯುತ ಬಳಕೆಯ ವಿಷಯವನ್ನು ಒಳಗೊಂಡಿರುವ ವೀಡಿಯೊವನ್ನು ಮಾನಿಟೈಸ್ ಮಾಡುವ ಸಾಧ್ಯತೆಯೂ ಇರುತ್ತದೆ.

2. ಕೃತಿಸ್ವಾಮ್ಯಕ್ಕೊಳಪಟ್ಟಿರುವ ಕೃತಿಯ ಸ್ವರೂಪ

ಸಂಪೂರ್ಣವಾಗಿ ಕಾಲ್ಪನಿಕವಾಗಿರುವ ಕೃತಿಗಳನ್ನು ಬಳಸುವುದಕ್ಕಿಂತ ಪ್ರಾಥಮಿಕವಾಗಿ ವಾಸ್ತವಿಕವಾಗಿರುವ ಕೃತಿಗಳಲ್ಲಿನ ವಿಷಯವನ್ನು ಬಳಸುವುದು ನ್ಯಾಯಯುತ ಬಳಕೆಯೆನಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

3. ಕೃತಿಸ್ವಾಮ್ಯಕ್ಕೊಳಪಟ್ಟ ಸಂಪೂರ್ಣ ಕೃತಿಗೆ ಸಂಬಂಧಪಟ್ಟಂತೆ, ಬಳಸಲಾದ ಭಾಗದ ಪ್ರಮಾಣ ಮತ್ತು ಗಣನೀಯತೆ

ಮೂಲ ಕೃತಿಯಿಂದ ಹೆಚ್ಚಿನ ಭಾಗಗಳನ್ನು ಎರವಲು ಪಡೆದುಕೊಳ್ಳುವುದಕ್ಕಿಂತ ಅದರ ಚಿಕ್ಕ-ಪುಟ್ಟ ಅಂಶಗಳನ್ನು ಎರವಲು ಪಡೆದುಕೊಳ್ಳುವುದು ನ್ಯಾಯಯುತ ಬಳಕೆಯೆನಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೂ, ಎರವಲು ಪಡೆದ ಅಂಶಗಳು ಕೃತಿಯ “ಕೇಂದ್ರಬಿಂದು” ಆಗಿದ್ದರೆ, ಕೆಲವು ಸನ್ನಿವೇಶಗಳಲ್ಲಿ ಸಣ್ಣ ಪ್ರಮಾಣವೂ ಸಹ ನ್ಯಾಯಯುತ ಬಳಕೆಗೆ ವಿರುದ್ಧವಾಗಿದೆ ಎಂದು ಪರಿಗಣಿತವಾಗುವ ಸಾಧ್ಯತೆಯಿರುತ್ತದೆ.

4. ಕೃತಿಸ್ವಾಮ್ಯಕ್ಕೊಳಪಟ್ಟ ಕೃತಿಯ ಸಂಭಾವ್ಯ ಮಾರುಕಟ್ಟೆ ಅಥವಾ ಅದರ ಮೌಲ್ಯದ ಮೇಲೆ ಬಳಕೆಯ ಪರಿಣಾಮ

ಕೃತಿಸ್ವಾಮ್ಯ ಹೊಂದಿರುವವರು ತಮ್ಮ ಮೂಲ ಕೃತಿಯಿಂದ ಲಾಭ ಗಳಿಸುವ ಸಾಮರ್ಥ್ಯಕ್ಕೆ ಹಾನಿ ಉಂಟುಮಾಡುವ ಬಳಕೆಗಳು ನ್ಯಾಯಯುತ ಬಳಕೆಗಳಾಗಿರುವ ಸಾಧ್ಯತೆ ಕಡಿಮೆಯಾಗಿರುತ್ತದೆ. ವಿಡಂಬನೆಗಳನ್ನು ಒಳಗೊಂಡ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕೆಲವೊಮ್ಮೆ ಈ ಅಂಶದ ಅಡಿಯಲ್ಲಿ ವಿನಾಯಿತಿ ನೀಡಿದ ಉದಾಹರಣೆಗಳಿವೆ.

ನ್ಯಾಯಯುತ ಬಳಕೆಯ ಉದಾಹರಣೆ

Donald Duck Meets Glenn Beck in Right Wing Radio Duck

"Donald Duck Meets Glenn Beck in Right Wing Radio Duck"

rebelliouspixels ಅವರಿಂದ

ಈ ರೀಮಿಕ್ಸ್ ವಿಭಿನ್ನ ಮೂಲ ವಿಷಯಗಳ ಸಂಕ್ಷಿಪ್ತ ಆಯ್ದ ಭಾಗಗಳನ್ನು ಒಂದುಗೂಡಿಸುತ್ತದೆ. ರೀಮಿಕ್ಸ್‌ಗಳು ಆರ್ಥಿಕ ಸಂಕಷ್ಟಗಳ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣಕಲೆ ಉಂಟುಮಾಡಿದ ಪರಿಣಾಮದ ಕುರಿತು ಹೊಸ ಸಂದೇಶವನ್ನು ರಚಿಸುತ್ತವೆ. ಮೂಲ ವಿಷಯಕ್ಕೆ ಹೊಸ ಅರ್ಥವನ್ನು ರಚಿಸುವ ಕೃತಿಗಳನ್ನು ನ್ಯಾಯಯುತ ಬಳಕೆಯೆಂದು ಪರಿಗಣಿಸಲಾಗಬಹುದು.

YouTube ನ ನ್ಯಾಯಯುತ ಬಳಕೆ ಸಂರಕ್ಷಣೆಯ ಉಪಕ್ರಮ

ಅಪರೂಪದ ಸಂದರ್ಭಗಳಲ್ಲಿ, YouTube ನಲ್ಲಿನ "ನ್ಯಾಯಯುತ ಬಳಕೆಯ" ಕೆಲವು ಉದಾಹರಣೆಗಳನ್ನು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಳಿಂದ ರಕ್ಷಿಸುವ ಉಪಕ್ರಮಕ್ಕೆ ಸೇರುವಂತೆ ನಾವು YouTube ರಚನೆಕಾರರನ್ನು ಕೇಳಿದ್ದೇವೆ. ಈ ಉಪಕ್ರಮದ ಮೂಲಕ, ತೆಗೆದುಹಾಕುವ ವಿನಂತಿಗಳಿಗೆ ಒಳಪಡುವ ನ್ಯಾಯಯುತ ಬಳಕೆಯ ವೀಡಿಯೊಗಳ ರಚನೆಕಾರರಿಗೆ, ತೆಗೆದುಹಾಕುವಿಕೆಯು ಕೃತಿಸ್ವಾಮ್ಯ ಉಲ್ಲಂಘನೆ ಮೊಕದ್ದಮೆಯನ್ನು ಉಂಟುಮಾಡುವ ಸಂದರ್ಭಗಳಲ್ಲಿ, $1 ಮಿಲಿಯನ್‌ವರೆಗಿನ ಕಾನೂನು ವೆಚ್ಚಗಳಿಗಾಗಿ YouTube ಪರಿಹಾರ ನೀಡುತ್ತದೆ.

ಈ ಉಪಕ್ರಮದ ಉದ್ದೇಶವು ಈ ರಚನೆಕಾರರಿಗೆ ತಮ್ಮ ಕೃತಿಯನ್ನು ರಕ್ಷಿಸಲು ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳುವುದಾಗಿದೆ. ಇದು ನ್ಯಾಯಯುತ ಬಳಕೆಯ ಪ್ರಾಮುಖ್ಯತೆ ಮತ್ತು ಮಿತಿಗಳೆರಡರ ಬಗ್ಗೆ ಶಿಕ್ಷಣ ನೀಡುವ ಮೂಲಕ ಸೃಜನಶೀಲ ಜಗತ್ತನ್ನು ಸುಧಾರಿಸುವ ಗುರಿಯನ್ನು ಕೂಡ ಹೊಂದಿದೆ. ಮೇಲೆ ವಿವರಿಸಿದಂತೆ ವಿವಿಧ ದೇಶಗಳು/ಪ್ರದೇಶಗಳಲ್ಲಿನ ಇಂತಹ ಬಳಕೆಗಳನ್ನು ನಿಯಂತ್ರಿಸುವ ನಿಯಮಗಳಲ್ಲಿನ ವ್ಯತ್ಯಾಸದಿಂದಾಗಿ, ತಮ್ಮ ವೀಡಿಯೊಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾತ್ರ ಲಭ್ಯವಿರುತ್ತವೆ ಎಂದು ಒಪ್ಪಿಕೊಳ್ಳುವ ಯುನೈಟೆಡ್ ಸ್ಟೇಟ್ಸ್‌ನ ನಿವಾಸಿಗಳಾಗಿರುವ ರಚನೆಕಾರರಿಗೆ ಮಾತ್ರ ನಾವು ಈ ಉಪಕ್ರಮವನ್ನು ನೀಡಲು ಸಾಧ್ಯವಾಗುತ್ತದೆ.

YouTube ನ ನ್ಯಾಯಯುತ ಬಳಕೆಯ ರಕ್ಷಣೆಯ ಉಪಕ್ರಮದಲ್ಲಿ ವೀಡಿಯೊಗಳ ಉದಾಹರಣೆಗಳು

Fracking Next Door

ಇನ್ನಷ್ಟು ಉದಾಹರಣೆಗಳಿಗಾಗಿ, ನಮ್ಮ ನ್ಯಾಯಯುತ ಬಳಕೆ ರಕ್ಷಣೆ ಪ್ಲೇಪಟ್ಟಿಯನ್ನು ಪರಿಶೀಲಿಸಿ.
ಗಮನಿಸಿ: ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದರೆ, ಈ ಪ್ಲೇಪಟ್ಟಿಯಲ್ಲಿ ನಾವು ಸಂರಕ್ಷಿಸಿರುವ ವೀಡಿಯೊಗಳನ್ನು ನೀವು ವೀಕ್ಷಿಸಬಹುದು. ದುರದೃಷ್ಟವಶಾತ್, ನೀವು ಯುನೈಟೆಡ್ ಸ್ಟೇಟ್ಸ್‌ನಿಂದ ಹೊರಗಿನವರಾಗಿದ್ದರೆ, ಈ ಪ್ಲೇಪಟ್ಟಿಯಲ್ಲಿ ವೀಡಿಯೊಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಿಲ್ಲ.

ಈ ಉದಾಹರಣೆಯ ವೀಡಿಯೊಗಳು ನಾವು ಪಡೆಯುವ ದೊಡ್ಡ ಪ್ರಮಾಣದ ಕೃತಿಸ್ವಾಮ್ಯ ತೆಗೆದುಹಾಕುವಿಕೆ ವಿನಂತಿಗಳ ಸಣ್ಣ ಮಾದರಿಯನ್ನು ಪ್ರತಿನಿಧಿಸುತ್ತವೆ. ಅಂತೆಯೇ, ತೆಗೆದುಹಾಕಲು ಒಳಪಟ್ಟಿರುವ ಹೆಚ್ಚಿನ ಸಂಖ್ಯೆಯ ಸಂಭಾವ್ಯ ನ್ಯಾಯಯುತ ಬಳಕೆಯ ವೀಡಿಯೊಗಳಲ್ಲಿ ಕೆಲವುಗಳನ್ನು ಮಾತ್ರ ಅವು ಪ್ರತಿನಿಧಿಸುತ್ತವೆ.

ಪ್ರತಿ ವರ್ಷ, YouTube ಹಲವಾರು ಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಲಾದ ಕೆಲವು ವೀಡಿಯೊಗಳಿಗೆ ಮಾತ್ರ ನ್ಯಾಯಯುತ ಬಳಕೆಯ ರಕ್ಷಣೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ನ್ಯಾಯಯುತ ಬಳಕೆಗೆ ಸಂಬಂಧಿಸಿದ ನಾಲ್ಕು ಅಂಶಗಳ ಆಧಾರದ ಮೇಲೆ ನ್ಯಾಯಯುತ ಬಳಕೆಯನ್ನು ಉತ್ತಮವಾಗಿ ಪ್ರದರ್ಶಿಸುವ ವೀಡಿಯೊಗಳನ್ನು ನಾವು ಆಯ್ಕೆ ಮಾಡುತ್ತೇವೆ.

ನಿಮ್ಮ ವೀಡಿಯೊವನ್ನು ಈ ಉಪಕ್ರಮದ ಅಡಿಯಲ್ಲಿ ಆಯ್ಕೆ ಮಾಡಿದ್ದರೆ, ನಾವು ನಿಮಗೆ ತಿಳಿಸುತ್ತೇವೆ. ನಿಮ್ಮ ವೀಡಿಯೊವನ್ನು ರಕ್ಷಿಸುವಂತೆ ಕೋರಿ ನಮ್ಮನ್ನು ಸಂಪರ್ಕಿಸಬೇಕಾದ ಅಗತ್ಯವಿಲ್ಲ. ನಾವು ನಿಮಗೆ ಈ ರಕ್ಷಣೆಯನ್ನು ನೀಡುವುದಾದರೆ, ನಿಮ್ಮನ್ನು ಸಂಪರ್ಕಿಸುತ್ತೇವೆ.

ಮರುಸ್ಥಾಪಿಸಲಾದ ನ್ಯಾಯಯುತ ಬಳಕೆಯ ವೀಡಿಯೊಗಳು

YouTube ಎಲ್ಲರಿಗೂ ಕಾನೂನು ರಕ್ಷಣೆಯನ್ನು ನೀಡಲು ಸಾಧ್ಯವಿಲ್ಲವಾದರೂ, ಎಲ್ಲಾ YouTube ರಚನೆಕಾರರ ಮೇಲೆ ಪರಿಣಾಮ ಬೀರಬಹುದಾದ ಕೃತಿಸ್ವಾಮ್ಯ ತೆಗೆದುಹಾಕುವಿಕೆ ವಿನಂತಿಗಳ ಕುರಿತು ನಾವು ಜಾಗರೂಕರಾಗಿರುತ್ತೇವೆ.

ತೆಗೆದುಹಾಕುವ ವಿನಂತಿಗಳನ್ನು ಮರುಪರಿಶೀಲಿಸಲು ಮತ್ತು ನ್ಯಾಯಯುತ ಬಳಕೆಯ ವೀಡಿಯೊಗಳನ್ನು ಮರುಸ್ಥಾಪಿಸಲು ನಾವು ಕೃತಿಸ್ವಾಮ್ಯ ಹೊಂದಿರುವವರನ್ನು ಕೇಳಿರುವ ಕೆಲವು ಗಮನಾರ್ಹ ಪ್ರಕರಣಗಳ ಕುರಿತು ನೀವು ತಿಳಿದಿರಬಹುದು. ಉದಾಹರಣೆಗೆ:

  • Young Turks ನ ಈ ವೀಡಿಯೊ, ಇದು ಭಾರೀ ಟೀಕೆಗೊಳಗಾದ ಜಾಹೀರಾತೊಂದು ವೀಕ್ಷಕರಿಗೆ ಏಕೆ ಸಿಟ್ಟು ತರಿಸಿತ್ತು ಎಂಬುದರ ಕುರಿತಾದ ಚರ್ಚೆಯ ಭಾಗವಾಗಿ ಅದರ ಕಿರು ತುಣುಕುಗಳನ್ನು ತೋರಿಸುತ್ತದೆ.
  • Secular Talk ನ ಈ ವೀಡಿಯೊ, ಇದು ಡಯಾಬಿಟಿಸ್‌ಗೆ ನೀಡಲು ಸೂಕ್ತವಾದದ್ದು ಎಂದು ಸಾಬೀತಾಗಿಲ್ಲದ ಚಿಕಿತ್ಸೆಯನ್ನು ಅನುಮೋದಿಸುವಂತಹ ರಾಜಕೀಯ ವ್ಯಕ್ತಿಯನ್ನು ಟೀಕಿಸುತ್ತದೆ.
  • Buffy vs Edward: Twilight Remixed -- [original version], ಹದಿಹರೆಯದವರನ್ನು ಗುರಿಯಾಗಿಸಿಕೊಂಡಿರುವ ರಕ್ತಪಿಶಾಚಿ-ಸಂಬಂಧಿತ ಎರಡು ಕೃತಿಗಳಲ್ಲಿ ಮಹಿಳೆಯರನ್ನು ಚಿತ್ರಿಸಿದ ರೀತಿಯನ್ನು ಹೋಲಿಸುವ ರೀಮಿಕ್ಸ್ ವೀಡಿಯೊ.
  • "No Offense", ನ್ಯಾಷನಲ್ ಆರ್ಗನೈಸೇಶನ್ ಫಾರ್ ಮ್ಯಾರೇಜ್ ಅಪ್‌ಲೋಡ್‌ ಮಾಡಿರುವ ಈ ವೀಡಿಯೊ, ಅಸಭ್ಯ ವರ್ತನೆಯ ಉದಾಹರಣೆಯಾಗಿ ಸೆಲೆಬ್ರಿಟಿಯೊಬ್ಬರ ಕ್ಲಿಪ್ ಅನ್ನು ಬಳಸುತ್ತದೆ.

ಹೆಚ್ಚಿನ ಮಾಹಿತಿ

ನ್ಯಾಯಯುತ ಬಳಕೆಯ ಕುರಿತು ನೀವು ಇನ್ನಷ್ಟು ತಿಳಿಯಲು ಬಯಸುತ್ತೀರಿ ಎಂದಾದರೆ, ಆನ್‌ಲೈನ್‌ನಲ್ಲಿ ಅನೇಕ ಸಂಪನ್ಮೂಲಗಳು ಲಭ್ಯವಿವೆ. ಈ ಕೆಳಗಿನ ಸೈಟ್‌ಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದೆ ಮತ್ತು ಇವು YouTube ನಿಂದ ಅನುಮೋದಿತವಾಗಿಲ್ಲ:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11974517019431167016
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false