YouTube ಎಕ್ಸ್‌ಪ್ಲೋರ್ ಮಾಡಿ

ಎಕ್ಸ್‌ಪ್ಲೋರ್ ಮೆನುವಿನಲ್ಲಿ , ನೀವು ಜನಪ್ರಿಯ ವರ್ಗಗಳಿಗಾಗಿ ಗಮ್ಯಸ್ಥಾನದ ಪುಟಗಳು, ರಚನೆಕಾರರು ಮತ್ತು ಉದಯೋನ್ಮುಖ ಕಲಾವಿದರು ಮತ್ತು ಟ್ರೆಂಡಿಂಗ್ ವೀಡಿಯೊಗಳನ್ನು ಕಾಣಬಹುದು.

ಗಮ್ಯಸ್ಥಾನದ ಪುಟಗಳನ್ನು ಹುಡುಕಿ

ಎಕ್ಸ್‌ಪ್ಲೋರ್ ಮೆನು  ಟ್ಯಾಪ್ ಮಾಡುವ ಮೂಲಕ ಜನಪ್ರಿಯ ಕಂಟೆಂಟ್ ವರ್ಗಗಳಿಗೆ ಸಂಬಂಧಿಸಿದ ಗಮ್ಯಸ್ಥಾನದ ಪುಟಗಳನ್ನು ನೀವು ಸುಲಭವಾಗಿ ಹುಡುಕಬಹುದು. ವಿವಿಧ ಗಮ್ಯಸ್ಥಾನದ ಪುಟಗಳಲ್ಲಿ ಗೇಮಿಂಗ್, ಸುದ್ದಿ, ಸಂಗೀತ, ಚಲನಚಿತ್ರಗಳು, ಫ್ಯಾಷನ್ & ಸೌಂದರ್ಯ,  ಕೋರ್ಸ್‌ಗಳು ಅಥವಾ ಕಲಿಕೆ, ಕ್ರೀಡೆ, ಪಾಡ್‌ಕಾಸ್ಟ್‌ಗಳು ಹಾಗೂ ಶಾಪಿಂಗ್ (ಪ್ರದರ್ಶಿಸಲಾದ ವರ್ಗಗಳು ಸ್ಥಳ ಮತ್ತು ಬಳಸುವ ಸಾಧನವನ್ನು ಆಧರಿಸಿ ಬದಲಾಗುತ್ತವೆ) ಇರುತ್ತವೆ.

ರಚನೆಕಾರರು & ಉದಯೋನ್ಮುಖ ಕಲಾವಿದರು

ಪ್ರತಿನಿತ್ಯ YouTube ನಲ್ಲಿ ಹೊಸ ರಚನೆಕಾರರು ಮತ್ತು ಕಲಾವಿದರು ಹೊರಹೊಮ್ಮುತ್ತಾರೆ. YouTube ನ ವೈವಿಧ್ಯತೆ ಮತ್ತು ಚೈತನ್ಯವನ್ನು ಆಚರಿಸಲು ನಾವು ಅಂತಹ ಕೆಲವು ರಚನೆಕಾರರು ಮತ್ತು ಕಲಾವಿದರನ್ನು ಜಗತ್ತಿನ ಜೊತೆಗೆ ಹಂಚಿಕೊಳ್ಳಲು ಬಯಸುತ್ತೇವೆ. ಸಂಭ್ರಮಿಸುವುದರಿಂದ ರಚನೆಕಾರರು ಮತ್ತು ಕಲಾವಿದರು ತಮ್ಮ ಅಭಿಮಾನಿಗಳನ್ನು ಹುಡುಕಲು ಸಹಾಯ ಮಾಡಬಹುದು. ನೀವು ಈ ವಿಭಾಗವನ್ನು ಟ್ರೆಂಡಿಂಗ್ ಪುಟದಲ್ಲಿ ಕಾಣಬಹುದು. ರಚನೆಕಾರರು & ಉದಯೋನ್ಮುಖ ಕಲಾವಿದರು ಕುರಿತು ಇನ್ನಷ್ಟು ತಿಳಿಯಿರಿ.

YouTube ನಲ್ಲಿ ಟ್ರೆಂಡಿಂಗ್ ವೀಡಿಯೊಗಳು

YouTube ನಲ್ಲಿ ಮತ್ತು ಜಗತ್ತಿನಲ್ಲೆಡೆ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ಟ್ರೆಂಡಿಂಗ್ ಪುಟವು ತೋರಿಸುತ್ತದೆ. ಹೋಮ್ ಪೇಜ್‌ನ ಮೇಲ್ಭಾಗದಲ್ಲಿ ಎಕ್ಸ್‌ಪ್ಲೋರ್ ಮೆನು  ಟ್ಯಾಪ್ ಮಾಡುವ ಮೂಲಕ ನೀವು ಅದನ್ನು ಕಾಣಬಹುದು. ಟ್ರೆಂಡಿಂಗ್ ವೀಡಿಯೊಗಳು ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4409328875435243007
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false