ಸಂಗ್ರಹಿಸಲಾದ ಸಂಗೀತದ ಕುರಿತಾದ ನೀತಿ

ನೀವು YouTube Music ಖಾತೆಯನ್ನು ಹೊಂದಿದ್ದರೆ, ನಿಮ್ಮ ಕಂಪ್ಯೂಟರ್‌ನಿಂದ ನಿರ್ದಿಷ್ಟ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಲು ಮತ್ತು ಸಂಗ್ರಹಣೆ ಮಾಡಲು ಸಾಧ್ಯವಾಗುವಂತಹ ಸರ್ವರ್ ಸ್ಥಳಾವಕಾಶವನ್ನು ನಿಮಗೆ ಒದಗಿಸಬಹುದು (ಉದಾಹರಣೆಗೆ, ಮೆಟಾಡೇಟಾ ಮತ್ತು ಆಲ್ಬಮ್ ಆರ್ಟ್ ಅನ್ನು ಒಳಗೊಂಡಿರಬಹುದಾದ ಸಂಗೀತ ಫೈಲ್‌ಗಳು) (“ಸಂಗ್ರಹಿಸಲಾದ ಸಂಗೀತ ಕಂಟೆಂಟ್”). ನೀವು ಸಂಗ್ರಹಿಸಲಾದ ಸಂಗೀತ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಲು ಆಯ್ಕೆ ಮಾಡಿದರೆ, ಸಂಗ್ರಹಿಸಲಾದ ಸಂಗೀತ ಕಂಟೆಂಟ್‌ನ, ನಿಮ್ಮ ಎಲ್ಲಾ ಪ್ರಸ್ತುತ ಹಕ್ಕುಗಳನ್ನು ನೀವು ಉಳಿಸಿಕೊಳ್ಳುವಿರಿ ಮತ್ತು ನಿಮ್ಮ ಪರವಾಗಿ ಒಂದು ಪ್ರತಿಯನ್ನು ಸಂಗ್ರಹಣೆ ಮಾಡಲಾಗುವುದು. YouTube ನಿಮ್ಮ ಸಂಗ್ರಹಿಸಲಾದ ಸಂಗೀತ ಕಂಟೆಂಟ್ ಅನ್ನು ನಿಮ್ಮ YouTube Music ಖಾತೆಯ ಮೂಲಕ ನಿಮಗೆ ಲಭ್ಯಗೊಳಿಸುತ್ತದೆ. ನಿಮ್ಮ ಸಂಗ್ರಹಿಸಲಾದ ಸಂಗೀತ ಕಂಟೆಂಟ್ ಅನ್ನು ನಿಮ್ಮ YouTube Music ಖಾತೆಯ ಮೂಲಕ ಮಾತ್ರ ನೀವು ಆ್ಯಕ್ಸೆಸ್ ಮಾಡಬಹುದು ಮತ್ತು ನಿಮ್ಮ Google ಅಥವಾ YouTube ಕುಟುಂಬ ಪ್ಲಾನ್‌ ಖಾತೆಯ ಭಾಗವಾಗಿರಬಹುದಾದ YouTube ಬಳಕೆದಾರರು ಸೇರಿದಂತೆ ಬೇರೆ ಯಾರೊಂದಿಗೂ ನೀವು ಹಂಚಿಕೊಳ್ಳುವಂತಿಲ್ಲ. ನೀವು YouTube Music ಗೆ ಅಪ್‌ಲೋಡ್ ಮಾಡುವ ಸಂಗ್ರಹಿಸಲಾದ ಸಂಗೀತ ಕಂಟೆಂಟ್‌ಗೆ ಕಾನೂನಾತ್ಮಕವಾಗಿ ನೀವೇ ಜವಾಬ್ದಾರರಾಗಿರುತ್ತೀರಿ ಮತ್ತು ನೀವು ಥರ್ಡ್-ಪಾರ್ಟಿಯಿಂದ ಅನುಮತಿಯನ್ನು ಹೊಂದಿರದ ಹೊರತು ಅಥವಾ ಹಾಗೆ ಮಾಡಲು ಕಾನೂನಾತ್ಮಕ ಹಕ್ಕನ್ನು ಹೊಂದಿರದ ಹೊರತು, ನೀವು ಯಾವುದೇ ಥರ್ಡ್-ಪಾರ್ಟಿ ಬೌದ್ಧಿಕ ಸ್ವತ್ತನ್ನು (ಉದಾಹರಣೆಗೆ ಕೃತಿಸ್ವಾಮ್ಯಕ್ಕೊಳಪಟ್ಟ ಸಾಮಗ್ರಿ) ಸೇರಿಸುವಂತಿಲ್ಲ.

YouTube Music ನಲ್ಲಿನ ಅಥವಾ YouTube Music ಆ್ಯಪ್‌ನ ಪ್ಲೇಬ್ಯಾಕ್ ಕಾರ್ಯಕ್ಷಮತೆಗಾಗಿ ಅಗತ್ಯವಿರುವ ಹಾಗೆ ನಿಮ್ಮ ಸಂಗ್ರಹಿಸಲಾದ ಸಂಗೀತ ಕಂಟೆಂಟ್‌ಗೆ ನಾವು ಸೀಮಿತ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗಬಹುದು. ನಿಮ್ಮ ಸಂಗ್ರಹಿಸಲಾದ ಸಂಗೀತ ಕಂಟೆಂಟ್ ಅನ್ನು YouTube, ಥರ್ಡ್-ಪಾರ್ಟಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ.

ಗಮನಿಸಿ: ಮೇಲ್ವಿಚಾರಣೆ ಮಾಡಲಾದ ಖಾತೆಗಳೊಂದಿಗೆ YouTube Music ನಲ್ಲಿ ಕೆಲವು ಫೀಚರ್‌ಗಳು ಲಭ್ಯವಿಲ್ಲ. YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವದ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
268690557561184115
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false