"ಮಕ್ಕಳಿಗಾಗಿ ರಚಿಸಲಾಗಿದೆ" ಎಂಬುದರ ಕುರಿತು ಪದೇಪದೇ ಕೇಳಲಾಗುವ ಪ್ರಶ್ನೆಗಳು

COPPA and YouTube: Answering Your Top Questions

 

ನಿಮ್ಮ ಸ್ಥಳ ಯಾವುದೇ ಇರಲಿ, ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ ಮತ್ತು/ಅಥವಾ ಇತರ ಕಾನೂನುಗಳನ್ನು ನೀವು ಕಾನೂನುರೀತ್ಯಾ ಪಾಲಿಸಬೇಕಾಗುತ್ತದೆ. ನೀವು ಮಕ್ಕಳ ಕಂಟೆಂಟ್ ಅನ್ನು ರಚಿಸಿದರೆ, ನಿಮ್ಮ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ನೀವು ನಮಗೆ ತಿಳಿಸಬೇಕಾಗುತ್ತದೆ. ಈ ಬದಲಾವಣೆಗಳನ್ನು ಮಕ್ಕಳು ಮತ್ತು ಅವರ ಗೌಪ್ಯತೆಯನ್ನು ಉತ್ತಮವಾಗಿ ರಕ್ಷಿಸಲು ಹಾಗೂ ಕಾನೂನನ್ನು ಅನುಸರಿಸುವ ಸಲುವಾಗಿ ಮಾಡಲಾಗಿದೆ. 

YouTube ಡೇಟಾವನ್ನು ಸಂಗ್ರಹಿಸುತ್ತಿದ್ದರೆ (ರಚನೆಕಾರ ಅಲ್ಲ), ಅದನ್ನು ಅನುಸರಿಸುವುದು ರಚನೆಕಾರರ ಜವಾಬ್ದಾರಿ ಆಗಿದೆ ಏಕೆ?

YouTube ಮತ್ತು ರಚನೆಕಾರರು ವಿವಿಧ ಕಾನೂನುಗಳ ಅಡಿಯಲ್ಲಿ ಮಕ್ಕಳ ಗೌಪ್ಯತೆ ನಿಯಮಗಳನ್ನು ಅನುಸರಿಸುವ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಕಂಟೆಂಟ್ ಮಕ್ಕಳನ್ನು ಉದ್ದೇಶಿತಗೊಂಡಿದೆಯೇ ಎಂಬುದನ್ನು ತಿಳಿಯಲು ನಾವು ನಿಮ್ಮ ಮೇಲೆ ಅವಲಂಬಿತರಾಗಿದ್ದೇವೆ, ಏಕೆಂದರೆ ನಿಮ್ಮ ಕಂಟೆಂಟ್ ಕುರಿತು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ನಿಮ್ಮ ಪ್ರೇಕ್ಷಕರನ್ನು ನಿಖರವಾಗಿ ಸೆಟ್ ಮಾಡಲು ನಾವು ನಿಮ್ಮನ್ನು ನಂಬುತ್ತೇವೆ ಮತ್ತು ದೋಷ ಅಥವಾ ದುರುಪಯೋಗದ ಸಂದರ್ಭಗಳಲ್ಲಿ ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಆಯ್ಕೆಯನ್ನು ಮಾತ್ರ ನಾವು ಅತಿಕ್ರಮಿಸುತ್ತೇವೆ. ನೀವು ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿದ ನಂತರ, ಪ್ರೇಕ್ಷಕರ ಸೆಟ್ಟಿಂಗ್ ಜೊತೆಗೆ ಹೊಂದಾಣಿಕೆ ಮಾಡಲು ನಾವು ಆ ಕಂಟೆಂಟ್ ಡೇಟಾವನ್ನು ಹೇಗೆ ಬಳಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದನ್ನು ನಾವು ಮಿತಿಗೊಳಿಸುತ್ತೇವೆ.
ನನ್ನ ಕಂಟೆಂಟ್ ಮಕ್ಕಳಿಗಾಗಿ ರಚಿಸಲಾಗಿಲ್ಲ ಎಂದು ನನಗೆ ಹೇಗೆ ತಿಳಿಯುತ್ತದೆ?
FTC ಯ ಮಾರ್ಗದರ್ಶನದ ಪ್ರಕಾರ, ನಿಮ್ಮ ವೀಡಿಯೊ ನಟರು, ಪಾತ್ರಗಳು, ಚಟುವಟಿಕೆಗಳು, ಗೇಮ್‌ಗಳು, ಹಾಡುಗಳು, ಕತೆಗಳು ಅಥವಾ ಮಕ್ಕಳನ್ನು ಟಾರ್ಗೆಟ್ ಮಾಡುವ ಉದ್ದೇಶವನ್ನು ಪ್ರತಿಬಿಂಬಿಸುವ ಇತರ ವಿಷಯವನ್ನು ಹೊಂದಿದ್ದರೆ, ಅದು "ಮಕ್ಕಳಿಗಾಗಿ ರಚಿಸಲಾಗಿದೆ" ಕಂಟೆಂಟ್ ಆಗಿರುವ ಸಾಧ್ಯತೆಯಿರುತ್ತದೆ. ಇಲ್ಲದಿದ್ದರೆ, ನಿಮ್ಮ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಗುರುತಿಸಬೇಕಾದ ಅಗತ್ಯ ಇಲ್ಲದಿರಬಹುದು.
ವೀಡಿಯೊ ಈ ಕೆಳಗಿನ ರೀತಿ ಇದ್ದ ಮಾತ್ರಕ್ಕೆ ಅದು ಮಕ್ಕಳಿಗಾಗಿ ರಚನೆಗೊಂಡಿರುವ ಅಗತ್ಯವಿಲ್ಲ:
  • ಪ್ರತಿಯೊಬ್ಬರೂ ವೀಕ್ಷಿಸಲು ಇದು ಸುರಕ್ಷಿತವಾಗಿದೆ ಅಥವಾ ಸೂಕ್ತವಾಗಿದೆ (ಅಂದರೆ, ಇದು "ಕುಟುಂಬ ಸ್ನೇಹಿ"ಯಾಗಿದೆ)
  • ಇದು ಸಾಂಪ್ರದಾಯಿಕವಾಗಿ ಮಕ್ಕಳ ಜೊತೆಗೆ ಸಂಬಂಧಿಸಿದ ಚಟುವಟಿಕೆಯನ್ನು ಒಳಗೊಳ್ಳುತ್ತದೆ
  • ಮಕ್ಕಳು ಆಕಸ್ಮಿಕವಾಗಿ ನೋಡಬಹುದು

ಮಕ್ಕಳನ್ನು ಟಾರ್ಗೆಟ್ ಮಾಡುವ ಉದ್ದೇಶವನ್ನು ಸೂಚಿಸುವ ಮಾಹಿತಿಯ ಅನುಪಸ್ಥಿತಿಯಲ್ಲಿ, "ಸಾಮಾನ್ಯ ಪ್ರೇಕ್ಷಕರು" ಎಂದು ಪರಿಗಣಿಸಬಹುದಾದ ವೀಡಿಯೊಗಳ ಪ್ರಕಾರಗಳ ಕೆಲವು ಉದಾಹರಣೆಗಳು ಇಲ್ಲಿವೆ:

  • ಗೊಂಬೆಗಳನ್ನು ರೀಮೇಕ್ ಮಾಡುವುದು ಅಥವಾ ಮಣ್ಣಿನ ಆಕೃತಿಗಳನ್ನು ಮಾಡುವುದು ಹೇಗೆ ಎಂದು ಹವ್ಯಾಸಿಗಳಿಗೆ ಕಲಿಸುವ DIY ವೀಡಿಯೊ
  • ಅಮ್ಯೂಸ್‌ಮೆಂಟ್ ಪಾರ್ಕ್ ಭೇಟಿಯ ಕುರಿತು ಕುಟುಂಬ ವ್ಲಾಗ್ 
  • ಮಾಡ್‌ಗಳನ್ನು ರಚಿಸುವ ಕುರಿತು ವಿವರವಾದ ಸೂಚನೆಗಳನ್ನು ಒಳಗೊಂಡ ವೀಡಿಯೊ 
  • ಮಕ್ಕಳ ಹಾಡುಗಳಿಗೆ ವಯಸ್ಕರು ಹಾಡುತ್ತಿರುವ ವ್ಯಂಗ್ಯವಾದ ವೀಡಿಯೊ 
  • ಎಲ್ಲರಿಗೂ ಇಷ್ಟವಾಗುವ ಆ್ಯನಿಮೇಟೆಡ್ ಪ್ರೋಗ್ರಾಂ
  • ವಯಸ್ಕರ ಹಾಸ್ಯವನ್ನು ಒಳಗೊಂಡಿರುವ ಮೈನ್‌ಕ್ರಾಫ್ಟ್ ವೀಡಿಯೊ 

ನಿಮ್ಮ ಕಂಟೆಂಟ್ ಮತ್ತು ಮೇಲಿನ ಅಂಶಗಳನ್ನು ನೀವು ಮೌಲ್ಯಮಾಪನ ಮಾಡುವಾಗ ನಿಮ್ಮ ವೀಡಿಯೊಗಳ ಜೊತೆಗೆ ನೀವು ಯಾರನ್ನು ತಲುಪಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ಎಚ್ಚರಿಕೆಯಿಂದ ಪರಿಗಣಿಸಲು ಮರೆಯದಿರಿ. 

"ಸಾಮಾನ್ಯ ಪ್ರೇಕ್ಷಕರ" ಕಂಟೆಂಟ್ "ಮಿಶ್ರ ಪ್ರೇಕ್ಷಕರ" ಕಂಟೆಂಟ್ ಆಗಿದೆಯೇ?
ಇಲ್ಲ. ಸಾಮಾನ್ಯ ಪ್ರೇಕ್ಷಕರ ಕಂಟೆಂಟ್ ಎಲ್ಲರಿಗೂ ಇಷ್ಟವಾಗುವಂತಹ ಕಂಟೆಂಟ್ ಆಗಿದೆ, ಆದರೆ ನಿರ್ದಿಷ್ಟವಾಗಿ ಮಕ್ಕಳಿಗಾಗಿ ಅಥವಾ ಹದಿಹರೆಯದ ಅಥವಾ ಹಿರಿಯ ಪ್ರೇಕ್ಷಕರಿಗಾಗಿ ಉದ್ದೇಶಿಸಿರುವ ಕಂಟೆಂಟ್ ಅಲ್ಲ. ಸಾಮಾನ್ಯ ಪ್ರೇಕ್ಷಕರ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿಲ್ಲ" ಎಂದು ಸೆಟ್ ಮಾಡಬೇಕು.  

ಮಕ್ಕಳನ್ನು ಟಾರ್ಗೆಟ್ ಮಾಡುವ ಉದ್ದೇಶವನ್ನು ಸೂಚಿಸುವ ಮಾಹಿತಿಯ ಅನುಪಸ್ಥಿತಿಯಲ್ಲಿ, "ಸಾಮಾನ್ಯ ಪ್ರೇಕ್ಷಕರು" ಎಂದು ಪರಿಗಣಿಸಬಹುದಾದ ವೀಡಿಯೊಗಳ ಪ್ರಕಾರಗಳ ಕೆಲವು ಉದಾಹರಣೆಗಳು ಇಲ್ಲಿವೆ.  
  • ಸಣ್ಣ ಗೊಂಬೆಗಳನ್ನು ರೀಮೇಕ್ ಮಾಡುವುದು ಅಥವಾ ಮಣ್ಣಿನ ಆಕೃತಿಗಳನ್ನು ಮಾಡುವುದು ಹೇಗೆ ಎಂದು ಹವ್ಯಾಸಿಗಳಿಗೆ ಕಲಿಸುವ DIY ವೀಡಿಯೊ
  • ಅಮ್ಯೂಸ್‌ಮೆಂಟ್ ಪಾರ್ಕ್ ಭೇಟಿಯ ಕುರಿತು ಇತರ ಪೋಷಕರಿಗೆ ಹೇಳುವ ಕುಟುಂಬದ ವ್ಲಾಗ್ 
  • ಮಾಡ್‌ಗಳು ಅಥವಾ ಅವತಾರ್‌ಗಳನ್ನು ರಚಿಸುವ ಕುರಿತು ವಿವರವಾದ ಸೂಚನೆಗಳನ್ನು ಒಳಗೊಂಡ ವೀಡಿಯೊ
  • ಎಲ್ಲರಿಗೂ ಇಷ್ಟವಾಗುವ ಆ್ಯನಿಮೇಟೆಡ್ ಕಂಟೆಂಟ್
  • ವಯಸ್ಕರ ಹಾಸ್ಯವನ್ನು ಫೀಚರ್ ಮಾಡುವ ಗೇಮಿಂಗ್ ವೀಡಿಯೊ 
ಮತ್ತೊಂದು ಕಡೆ, ಮಿಶ್ರ ಪ್ರೇಕ್ಷಕರ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಕಂಟೆಂಟ್ ಪ್ರಕಾರ ಎಂದು ಪರಿಗಣಿಸಲಾಗುತ್ತದೆ. ಇದು ಮುಖ್ಯ ಅಥವಾ ಪ್ರಾಥಮಿಕ ಪ್ರೇಕ್ಷಕರಲ್ಲದಿದ್ದರೂ ಸಹ ಮಕ್ಕಳನ್ನು ತನ್ನ ಪ್ರೇಕ್ಷಕರಲ್ಲಿ ಒಬ್ಬರನ್ನಾಗಿ ಟಾರ್ಗೆಟ್ ಮಾಡುವ ಕಂಟೆಂಟ್ ಆಗಿದೆ ಮತ್ತು ಮೇಲೆ ವಿವರಿಸಿದ ಅಂಶಗಳನ್ನು ಸಮತೋಲನಗೊಳಿಸಿದ ನಂತರ ಮಕ್ಕಳನ್ನು ಉದ್ದೇಶಿಸಿದ ಎಂಬ ಅರ್ಹತೆ ಪಡೆಯುತ್ತದೆ.

ನನ್ನ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ ಎಂಬ ಹಕ್ಕುನಿರಾಕರಣೆಯನ್ನು ನಾನು ಸೇರಿಸಬಹುದೇ?

ನಿಮ್ಮ ಕಂಟೆಂಟ್ 13+ ಪ್ರೇಕ್ಷಕರಿಗೆ ಉದ್ದೇಶಿತವಾಗಿದೆ ಎಂದು ಹೇಳುವ ಹಕ್ಕು ನಿರಾಕರಣೆ ಸೇರಿಸುವುದರಿಂದ FTC ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ ಎಂದು ಸ್ವಯಂಚಾಲಿತವಾಗಿ ಪರಿಗಣಿಸುತ್ತದೆ ಎಂದರ್ಥವಲ್ಲ. ಇದು ಖಂಡಿತವಾಗಿಯೂ ನಿಮ್ಮ ಉದ್ದೇಶಿತ ಪ್ರೇಕ್ಷಕರನ್ನು ನಿರ್ಧರಿಸಲು ಸಹಾಯ ಮಾಡುವ ಅಂಶವಾಗಿದೆ, ಆದರೆ FTC ಇದನ್ನು ಇತರ COPPA ಅಂಶಗಳೊಂದಿಗೆ ತುಲನೆ ಮಾಡುತ್ತದೆ: 
  • ಮಕ್ಕಳನ್ನು ವಿಶೇಷವಾಗಿ ಆಕರ್ಷಿಸುವ ಪಾತ್ರಗಳು, ಚಟುವಟಿಕೆಗಳು, ಗೇಮ್‌ಗಳು, ಆಟಿಕೆಗಳು, ಹಾಡುಗಳು, ಕತೆಗಳು ಅಥವಾ ಇತರ ಅಂಶಗಳ ಉಪಸ್ಥಿತಿ
  • ಹಕ್ಕು ನಿರಾಕರಣೆಯಿಂದ ವಿಭಿನ್ನವಾಗಿರುವ ನಿಮ್ಮ ಕಂಟೆಂಟ್‌ನ ಉದ್ದೇಶಿತ ಪ್ರೇಕ್ಷಕರಿಗೆ ಸಂಬಂಧಿಸಿದಂತೆ ನೀವು ಮಾಡಿರಬಹುದಾದ ಇತರ ಹೇಳಿಕೆಗಳು (ಉದಾ. ವೈಯಕ್ತಿಕ ವೆಬ್‌ಸೈಟ್‌ನಲ್ಲಿ ಮಾಡಿರುವುದು)

ನನ್ನ ಪ್ರೇಕ್ಷಕರ ವಯಸ್ಸನ್ನು ನಾನು ಸಾಬೀತುಪಡಿಸುವ ಅಗತ್ಯವಿದೆಯೇ, ಹಾಗೆ ಮಾಡಲು ನನ್ನ ಬಳಿ ಉಪಕರಣಗಳು ಇಲ್ಲದಿದ್ದರೆ? ಮಕ್ಕಳು ನನ್ನ ಕಂಟೆಂಟ್ ಅನ್ನು ವೀಕ್ಷಿಸುತ್ತಿದ್ದಾರೆ ಎಂಬುದಕ್ಕೆ FTC ಪುರಾವೆ ಎಂದು ಏನನ್ನು ಪರಿಗಣಿಸುತ್ತದೆ? 

ನಿಮ್ಮ ವೀಕ್ಷಕರ ವಯಸ್ಸಿನ ಕುರಿತು ನೀವು ಹೊಂದಿರುವ ಯಾವುದೇ ಪುರಾವೆಯು ನಿಮ್ಮ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಗೊತ್ತುಪಡಿಸಲು ನೀವು ಪರಿಗಣಿಸಬೇಕಾದ ಅಂಶಗಳಲ್ಲಿ ಒಂದಾಗಿದೆ. ದುರದೃಷ್ಟವಶಾತ್, ಮಕ್ಕಳು ನಿಮ್ಮ ಕಂಟೆಂಟ್ ಅನ್ನು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ನಿರ್ಧರಿಸಲು YouTube Analytics (YTA) ಅನ್ನು ವಿನ್ಯಾಸಗೊಳಿಸಲಾಗಿಲ್ಲ. ನಿಮ್ಮ ಬಳಕೆದಾರರ ವಯಸ್ಸಿನ ಕುರಿತಾದ ಸಮೀಕ್ಷೆಯ ಫಲಿತಾಂಶಗಳಂತಹ ಡೇಟಾವನ್ನು ಪರಿಗಣಿಸಿ, ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು ಉಪಯುಕ್ತವಾಗಬಹುದು ಎಂದು FTC ಸಲಹೆ ನೀಡಿದೆ.
YouTube "ಮಿಶ್ರ ಪ್ರೇಕ್ಷಕರ" ಸೆಟ್ಟಿಂಗ್ ಆಯ್ಕೆಯನ್ನು ಏಕೆ ಸೇರಿಸಲಿಲ್ಲ? 
ಪ್ರೇಕ್ಷಕರ ಸೆಟ್ಟಿಂಗ್ ಫೀಚರ್ ಅನ್ನು ವಿನ್ಯಾಸಗೊಳಿಸಲು, ಈಗಾಗಲೇ ಅಸ್ಪಷ್ಟವಾಗಿರುವ ಸ್ಪೇಸ್‌ನಲ್ಲಿ ಮತ್ತಷ್ಟು ಗೊಂದಲವನ್ನು ತಪ್ಪಿಸಲು "ಮಕ್ಕಳಿಗಾಗಿ ರಚಿಸಲಾಗಿದೆ" ಎಂಬ ಒಂದೇ ವರ್ಗವನ್ನು ರಚಿಸುವ ಮೂಲಕ ನಾವು ರಚನೆಕಾರರಿಗೆ ಆಯ್ಕೆಗಳನ್ನು ಸ್ಟ್ರೀಮ್‌ಲೈನ್ ಮಾಡಿದ್ದೇವೆ. ಮಿಶ್ರ ಪ್ರೇಕ್ಷಕರು ವರ್ಗದಲ್ಲಿ ಕೆಲವು ಸಂಕೀರ್ಣತೆಗಳಿವೆ ಮತ್ತು ಮಿಶ್ರ ಪ್ರೇಕ್ಷಕರ ರಚನೆಕಾರರ ಸಹಿತ ರಚನೆಕಾರರಿಗೆ ಉತ್ತಮ ಪರಿಹಾರವನ್ನು ರಚಿಸಲು ನಮಗೆ ಸಹಾಯ ಮಾಡಲು ಕೋರಿ ನಾವು FTC ಗೆ ಸಾರ್ವಜನಿಕ ಕಾಮೆಂಟ್‌ಗಳನ್ನು ಸಲ್ಲಿಸಿದ್ದೇವೆ. 

ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್‌ನಲ್ಲಿ ಯಾವ ಫೀಚರ್‌ಗಳು ಲಭ್ಯವಿಲ್ಲ ಮತ್ತು ಆ ಫೀಚರ್‌ಗಳು ಏಕೆ ಲಭ್ಯವಿಲ್ಲ? 

ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್‌ನಲ್ಲಿ ಪ್ರಸ್ತುತ ಲಭ್ಯವಿಲ್ಲದ ಫೀಚರ್‌ಗಳ ಪಟ್ಟಿಯನ್ನು ನೀವು ಇಲ್ಲಿ ಕಾಣಬಹುದು. ಈ ಫೀಚರ್‌ಗಳ ಎಲ್ಲಾ ಅಥವಾ ಭಾಗವು ಬಳಕೆದಾರರ ಡೇಟಾವನ್ನು ಆಧರಿಸಿರಬಹುದು. ಮಕ್ಕಳ ಗೌಪ್ಯತೆಯನ್ನು ರಕ್ಷಿಸಲು ಮತ್ತು ಕಾನೂನು ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುವುದಕ್ಕಾಗಿ ನಾವು ಡೇಟಾ ಸಂಗ್ರಹಣೆಯನ್ನು ಮಿತಿಗೊಳಿಸಬೇಕು ಮತ್ತು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಲಾದ ವೀಡಿಯೊಗಳಲ್ಲಿ ಬಳಸಬೇಕು.

ಮಕ್ಕಳಿಗಾಗಿ ರಚಿಸಲಾದ ಅಥವಾ ಮಕ್ಕಳಿಗಾಗಿ ರಚಿಸಿರದ ಕಂಟೆಂಟ್‌ಗಾಗಿ ಶಿಫಾರಸುಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ನನ್ನ ವೀಡಿಯೊಗಳ ಅನ್ವೇಷಣೆಯ ಮೇಲೆ ಪರಿಣಾಮ ಬೀರುತ್ತದೆಯೇ?

"ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಗೊತ್ತುಪಡಿಸಿದ ಕಂಟೆಂಟ್ ಅನ್ನು ಒಳಗೊಂಡಂತೆ, YouTube ನ ಶಿಫಾರಸುಗಳ ಸಿಸ್ಟಂಗಳ ಗುರಿಯು ಬಳಕೆದಾರರಿಗೆ ಅವರು ವೀಕ್ಷಿಸಲು ಬಯಸುವ ವೀಡಿಯೊಗಳನ್ನು ಹುಡುಕಲು ಸಹಾಯ ಮಾಡುವುದು ಮತ್ತು ಬಳಕೆದಾರರನ್ನು ಅವರು ಇಷ್ಟಪಡುವ ಕಂಟೆಂಟ್ ಜೊತೆಗೆ ಕನೆಕ್ಟ್ ಮಾಡಲು ಸಹಾಯ ಮಾಡುವುದು. ಬಳಕೆದಾರರಿಗೆ ಆಸಕ್ತಿ ಹೊಂದಿರುವ ಕಂಟೆಂಟ್ ಅನ್ನು ನೀಡಲು ಮತ್ತು YouTube ನಲ್ಲಿ ಅವರಿಗೆ ಗುಣಮಟ್ಟದ ಅನುಭವವನ್ನು ನೀಡಲು ನಾವು ಕೆಲಸ ಮಾಡುತ್ತೇವೆ. "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಲಾದ ವೀಡಿಯೊಗಳನ್ನು ಇತರ ಮಕ್ಕಳ ವೀಡಿಯೊಗಳ ಜೊತೆಗೆ ಶಿಫಾರಸು ಮಾಡುವ ಸಾಧ್ಯತೆಗಳಿರುತ್ತವೆ. ನಿಮ್ಮ ಕಂಟೆಂಟ್ ಸರಿಯಾದ ಪ್ರೇಕ್ಷಕರನ್ನು ತಲುಪುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಅಥವಾ "ಮಕ್ಕಳಿಗಾಗಿ ರಚಿಸಲಾಗಿಲ್ಲ" ಎಂದು ನಿಖರವಾಗಿ ಗೊತ್ತುಪಡಿಸುವುದು ಮುಖ್ಯವಾಗಿದೆ.

ಈ ವೀಡಿಯೊ ಅನುಚಿತವಾಗಿದೆ ಎಂಬಂತೆ ತೋರುತ್ತಿದೆ. ಇದನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಏಕೆ ಸೆಟ್ ಮಾಡಲಾಗಿದೆ?

ವೀಡಿಯೊ ಅಥವಾ ಚಾನಲ್‌ನ ಪ್ರೇಕ್ಷಕರನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಿದಾಗ, ಮಕ್ಕಳು ಕಂಟೆಂಟ್‌ನ ಪ್ರಾಥಮಿಕ ಪ್ರೇಕ್ಷಕರು ಅಥವಾ ವೀಡಿಯೊವು ಮಕ್ಕಳನ್ನು ಟಾರ್ಗೆಟ್ ಮಾಡಿದೆ ಎಂದು ಸೂಚಿಸುತ್ತದೆ. COPPA ಅನ್ನು ಉತ್ತಮವಾಗಿ ಅನುಸರಿಸುವುದಕ್ಕೆ ರಚನೆಕಾರರಿಗೆ ಸಹಾಯ ಮಾಡಲು, ಕಂಟೆಂಟ್ ಪ್ರೇಕ್ಷಕರನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡುವ ಆಯ್ಕೆ ಲಭ್ಯವಿದೆ.

YouTube ನಲ್ಲಿನ ಕಂಟೆಂಟ್ ಸೂಕ್ತತೆಯನ್ನು ನಿರ್ಧರಿಸಲು ನಾವು ಸಿಸ್ಟಂಗಳನ್ನು ಸಹ ಹೊಂದಿದ್ದೇವೆ. YouTube ನ ಸಮುದಾಯ ಮಾರ್ಗಸೂಚಿಗಳು YouTube ನಲ್ಲಿ ಏನನ್ನು ಅನುಮತಿಸುತ್ತದೆ ಹಾಗೂ ಅನುಮತಿಸುವುದಿಲ್ಲ ಎಂಬುದನ್ನು ವಿವರಿಸುತ್ತದೆ. YouTube ನಲ್ಲಿ ಮಕ್ಕಳು ಮತ್ತು ಕುಟುಂಬಗಳಿಗೆ ಸಾಧ್ಯವಾದಷ್ಟು ಉತ್ತಮ ರಕ್ಷಣೆ ನೀಡಲು ಸಹಾಯ ಮಾಡುವ ತಂತ್ರಜ್ಞಾನ ಮತ್ತು ತಂಡಗಳಲ್ಲಿ ನಾವು ಹೂಡಿಕೆ ಮಾಡುತ್ತೇವೆ. ಉದಾಹರಣೆಗೆ, ವಯಸ್ಕ ಪ್ರೇಕ್ಷಕರನ್ನು ಉದ್ದೇಶಿಸಿರುವ, ಆದರೆ ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್ ಜೊತೆಗೆ ಸುಲಭವಾಗಿ ಗೊಂದಲಕ್ಕೊಳಗಾಗಬಹುದಾದ ಕಂಟೆಂಟ್ ಮೇಲೆ ನಾವು ವಯಸ್ಸಿನ-ನಿರ್ಬಂಧವನ್ನು ಹೇರುತ್ತೇವೆ. ಶೀರ್ಷಿಕೆ, ವಿವರಣೆ ಅಥವಾ ಟ್ಯಾಗ್‌ಗಳಲ್ಲಿ ಅಪ್ರಾಪ್ತ ವಯಸ್ಕರು ಮತ್ತು ಕುಟುಂಬಗಳನ್ನು ಸ್ಪಷ್ಟವಾಗಿ ಟಾರ್ಗೆಟ್ ಮಾಡಿದರೆ ನಾವು ಈ ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ. YouTube ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸುವ ಕಂಟೆಂಟ್ ಇದ್ದರೆ, ನಮ್ಮ YouTube ಸಿಬ್ಬಂದಿಯಿಂದ ಪರಿಶೀಲನೆಗಾಗಿ ಅದನ್ನು ಸಲ್ಲಿಸಲು ನೀವು ವರದಿ ಮಾಡುವ ಫೀಚರ್ ಅನ್ನು ಸಹ ಬಳಸಬಹುದು.

ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಿದ್ದರೆ, ಅದನ್ನು YouTube Kids ಆ್ಯಪ್‌ನಲ್ಲಿ ಸೇರಿಸಲಾಗುತ್ತದೆ ಎಂದು ಅರ್ಥವೇ?

"ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಲಾದ ವೀಡಿಯೊಗಳನ್ನು YouTube Kids ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ಸೇರಿಸಲಾಗುವುದಿಲ್ಲ. ನಮ್ಮ ಕಂಟೆಂಟ್ ನೀತಿಗಳು YouTube Kids ನಲ್ಲಿರುವ ಕಂಟೆಂಟ್ ವಯಸ್ಸಿಗೆ ಸೂಕ್ತವಾಗಿದೆ, ನಮ್ಮ ಗುಣಮಟ್ಟದ ತತ್ವಗಳಿಗೆ ಬದ್ಧವಾಗಿದೆ ಮತ್ತು ಜಾಗತಿಕವಾಗಿ ಮಕ್ಕಳ ವ್ಯಾಪಕ ಆಸಕ್ತಿಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸುತ್ತವೆ. YouTube Kids ಆ್ಯಪ್‌ಗಾಗಿ ಸೂಕ್ತವಾಗಿದೆಯೇ ಎಂಬುದನ್ನು ನಿರ್ಧರಿಸಲು ನಾವು ಸ್ವಯಂಚಾಲಿತ ಫಿಲ್ಟರ್‌ಗಳು, ಬಳಕೆದಾರರ ಪ್ರತಿಕ್ರಿಯೆ ಮತ್ತು ಮಾನವ ವಿಮರ್ಶೆಗಳ ಮಿಶ್ರಣವನ್ನು ಬಳಸುತ್ತೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11023773546609557907
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false