ವೀಕ್ಷಣೆ ಇತಿಹಾಸವನ್ನು ವೀಕ್ಷಿಸಿ, ಅಳಿಸಿ ಅಥವಾ ಆನ್ ಅಥವಾ ಆಫ್ ಮಾಡಿ

YouTube ವೀಕ್ಷಣೆ ಇತಿಹಾಸವು ನೀವು ಇತ್ತೀಚೆಗೆ ವೀಕ್ಷಿಸಿದ ವೀಡಿಯೊಗಳನ್ನು ಹುಡುಕಲು ಸುಲಭಗೊಳಿಸುತ್ತದೆ ಮತ್ತು ಅದನ್ನು ಆನ್ ಮಾಡಿದಾಗ ಸೂಕ್ತವಾದ ವೀಡಿಯೊ ಶಿಫಾರಸುಗಳನ್ನು ನೀಡಲು ನಮಗೆ ಅನುಮತಿಸುತ್ತದೆ. ನಿಮ್ಮ ಇತಿಹಾಸವನ್ನು ಅಳಿಸುವ ಅಥವಾ ಆಫ್ ಮಾಡುವ ಮೂಲಕ ನಿಮ್ಮ ವೀಕ್ಷಣೆ ಇತಿಹಾಸವನ್ನು ನೀವು ನಿಯಂತ್ರಿಸಬಹುದು. ನಿಮ್ಮ ಕೆಲವು ಅಥವಾ ಎಲ್ಲಾ ವೀಕ್ಷಣೆ ಇತಿಹಾಸವನ್ನು ನೀವು ಅಳಿಸಿದರೆ, YouTube ಆ ಕಂಟೆಂಟ್ ಮೇಲೆ ಭವಿಷ್ಯದ ವೀಡಿಯೊ ಶಿಫಾರಸುಗಳನ್ನು ಆಧರಿಸಿರುವುದಿಲ್ಲ. ಇತಿಹಾಸವು ಆಫ್ ಆಗಿರುವಾಗ ನೀವು ವೀಕ್ಷಿಸುವ ಯಾವುದೇ ವೀಡಿಯೊಗಳು ನಿಮ್ಮ ಇತಿಹಾಸದಲ್ಲಿ ಕಾಣಿಸುವುದಿಲ್ಲ.

ವೀಕ್ಷಣೆ ಇತಿಹಾಸವನ್ನು ನೋಡಿ

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. myactivity.google.com ಎಂಬಲ್ಲಿಗೆ ಹೋಗಿ.
  3. YouTube ಇತಿಹಾಸ ಎಂಬುದನ್ನು ಕ್ಲಿಕ್‌ ಮಾಡಿ.
  4. ನೀವು ವೀಕ್ಷಿಸಿದ ವೀಡಿಯೊಗಳನ್ನು ನೋಡಲು ಇತಿಹಾಸವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
ಗಮನಿಸಿ: ಸೈನ್ ಔಟ್ ಆಗಿರುವಾಗ ನಿಮ್ಮ ವೀಕ್ಷಣೆ ಇತಿಹಾಸವನ್ನು ನಿಮಗೆ ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ವೀಕ್ಷಣೆ ಇತಿಹಾಸವನ್ನು ಅಳಿಸಿ

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ. 
  2. myactivity.google.com ಎಂಬಲ್ಲಿಗೆ ಹೋಗಿ.
  3. YouTube ಇತಿಹಾಸ ಎಂಬುದನ್ನು ಕ್ಲಿಕ್‌ ಮಾಡಿ.
  4. ಇತಿಹಾಸವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ನೀವು ಅಳಿಸಲು ಬಯಸುವ ವೀಡಿಯೊಗಳಿಗೆ ಸಮಯದ ಮಿತಿಯನ್ನು ಆಯ್ಕೆಮಾಡಲು ಅಳಿಸಿ ಎಂಬುದನ್ನು ಕ್ಲಿಕ್ ಮಾಡಿ.

ನೀವು YouTube ನಿಂದ ನೇರವಾಗಿ ಇತಿಹಾಸದ ಟ್ಯಾಬ್‌ಗೆ ಭೇಟಿ ನೀಡಿದರೆ, ನಿಮ್ಮ ವೀಕ್ಷಣೆ ಇತಿಹಾಸವನ್ನು ತೆರವುಗೊಳಿಸುವ ಸಾಮರ್ಥ್ಯವಾಗಿ ಪ್ರಸ್ತುತಪಡಿಸಲಾದ ಈ ಆಯ್ಕೆಯನ್ನು ಸಹ ನೀವು ನೋಡಬಹುದು.

ನೀವು ಯಾವುದೇ ಗಮನಾರ್ಹವಾದ ಹಿಂದಿನ ವೀಕ್ಷಣೆ ಇತಿಹಾಸವನ್ನು ಹೊಂದಿಲ್ಲದಿದ್ದರೆ, YouTube ಹೋಮ್ ಪೇಜ್‌ನಲ್ಲಿ ಶಿಫಾರಸುಗಳಂತಹ ವೀಡಿಯೊ ಶಿಫಾರಸುಗಳನ್ನು ನೀಡಲು ನಿಮ್ಮ ವೀಕ್ಷಣೆ ಇತಿಹಾಸವನ್ನು ಅವಲಂಬಿಸುವ YouTube ಫೀಚರ್‌ಗಳನ್ನು ತೆಗೆದುಹಾಕಲಾಗುತ್ತದೆ. ಉದಾಹರಣೆಗೆ, ಯಾವುದೇ ವೀಡಿಯೊಗಳನ್ನು ವೀಕ್ಷಿಸುವ ಮೊದಲು ನೀವು ಹೊಸ ಬಳಕೆದಾರರಾಗಿದ್ದರೆ ಅಥವಾ ನಿಮ್ಮ ವೀಕ್ಷಣೆ ಇತಿಹಾಸವನ್ನು ತೆರವುಗೊಳಿಸಲು ಹಾಗೂ ಆಫ್ ಮಾಡುವುದನ್ನು ನೀವು ಆಯ್ಕೆಮಾಡಿದ್ದರೆ ಇದು ಅನ್ವಯಿಸುತ್ತದೆ.

ವೀಕ್ಷಣೆ ಇತಿಹಾಸವನ್ನು ಆನ್ ಅಥವಾ ಆಫ್ ಮಾಡಿ

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. myactivity.google.com ಎಂಬಲ್ಲಿಗೆ ಹೋಗಿ.
  3. YouTube ಇತಿಹಾಸ ಎಂಬುದನ್ನು ಕ್ಲಿಕ್‌ ಮಾಡಿ.
  4. ಆನ್ ಮಾಡಿ ಅಥವಾ ಆಫ್ ಮಾಡಿ ಎಂಬುದನ್ನು ಕ್ಲಿಕ್‌ ಮಾಡಿ.

ಈ ಪುಟದಲ್ಲಿ, ನಿಮ್ಮ ವೀಕ್ಷಣೆ ಇತಿಹಾಸವು ಆನ್ ಆಗಿರುವಾಗ ಅದರಲ್ಲಿ ನೀವು ಏನನ್ನು ಸೇರಿಸಲು ಬಯಸುತ್ತೀರಿ ಎಂಬುದನ್ನು ಸಹ ನೀವು ಆಯ್ಕೆಮಾಡಬಹುದು. ಆಯ್ಕೆಗಳ ಪಟ್ಟಿಯಿಂದ ಆರಿಸುವ ಮೂಲಕ, ನೀವು ಇವುಗಳನ್ನು ಆಯ್ಕೆಮಾಡಬಹುದು:

ಗಮನಿಸಿ: ನೀವು YouTube ನಿಂದ ನೇರವಾಗಿ ಇತಿಹಾಸದ ಟ್ಯಾಬ್‌ಗೆ ಭೇಟಿ ನೀಡಿದರೆ, ನಿಮ್ಮ ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸುವ ಸಾಮರ್ಥ್ಯವಾಗಿ ಪ್ರಸ್ತುತಪಡಿಸಲಾದ ಈ ಆಯ್ಕೆಯನ್ನು ಸಹ ನೀವು ನೋಡಬಹುದು.

ವೀಕ್ಷಣೆ ಇತಿಹಾಸದಿಂದ ವೀಡಿಯೊವನ್ನು ತೆಗೆದುಹಾಕಿ

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. myactivity.google.com ಎಂಬಲ್ಲಿಗೆ ಹೋಗಿ.
  3. YouTube ಇತಿಹಾಸ ಎಂಬುದನ್ನು ಕ್ಲಿಕ್‌ ಮಾಡಿ.
  4. ಇತಿಹಾಸವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ನೀವು ತೆಗೆದುಹಾಕಲು ಬಯಸುವ ವೀಡಿಯೊದ ಪಕ್ಕದಲ್ಲಿ ಅಳಿಸಿ ಬಟನ್  ಅನ್ನು ಕ್ಲಿಕ್‌ ಮಾಡಿ.
ಗಮನಿಸಿ: ನಿಮ್ಮ ಸಾಧನವು ಆಫ್‌ಲೈನ್‌ನಲ್ಲಿರುವಾಗ ನಿಮ್ಮ ವೀಕ್ಷಣೆ ಇತಿಹಾಸದಿಂದ ನೀವು ಯಾವುದೇ ವೀಡಿಯೊಗಳನ್ನು ತೆಗೆದುಹಾಕಿದರೆ, ಆ ಬದಲಾವಣೆಗಳನ್ನು ಮಾಡಲು ಕೆಲವು ಗಂಟೆಗಳನ್ನು ತೆಗೆದುಕೊಳ್ಳಬಹುದು.

ವೀಕ್ಷಣೆ ಇತಿಹಾಸವನ್ನು ಹುಡುಕಿ

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. myactivity.google.com ಎಂಬಲ್ಲಿಗೆ ಹೋಗಿ.
  3. YouTube ಇತಿಹಾಸ ಎಂಬುದನ್ನು ಕ್ಲಿಕ್‌ ಮಾಡಿ.
  4. ಇತಿಹಾಸವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. Search ಎಂಬುದನ್ನು ಕ್ಲಿಕ್‌ ಮಾಡಿ.

ನಿಮ್ಮ YouTube ಇತಿಹಾಸವನ್ನು ಸ್ವಯಂಚಾಲಿತವಾಗಿ ಅಳಿಸಿ

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. myactivity.google.com ಎಂಬಲ್ಲಿಗೆ ಹೋಗಿ.
  3. YouTube ಇತಿಹಾಸ ಎಂಬುದನ್ನು ಕ್ಲಿಕ್‌ ಮಾಡಿ.
  4. ಇತಿಹಾಸವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ಸ್ವಯಂ-ಅಳಿಸಿ ಎಂಬುದನ್ನು ಕ್ಲಿಕ್‌ ಮಾಡಿ.
  6. ನಿಮ್ಮ ಆದ್ಯತೆಯ ಸಮಯದ ಮಿತಿಯನ್ನು ಆಯ್ಕೆಮಾಡಿ, ನಂತರ ಮುಂದಿನದು ಕ್ಲಿಕ್ ಮಾಡಿ.
  7. ಮುಗಿದಾಗ ದೃಢೀಕರಿಸಿ ಎಂಬುದನ್ನು ಕ್ಲಿಕ್‌ ಮಾಡಿ.

ಟಿವಿ, ಗೇಮ್ ಕನ್ಸೋಲ್ ಅಥವಾ ಮೀಡಿಯಾ ಸ್ಟ್ರೀಮಿಂಗ್ ಬಾಕ್ಸ್

ನಿಮ್ಮ ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸಿ

  1. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ.
  2. ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸಿ ಎಂಬುದನ್ನು ಆಯ್ಕೆಮಾಡಿ.
  3. ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸಿ ಬಟನ್ ಅನ್ನು ಆಯ್ಕೆಮಾಡಿ.

ನಿಮ್ಮ ವೀಕ್ಷಣೆ ಇತಿಹಾಸವನ್ನು ತೆರವುಗೊಳಿಸಿ

  1. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ.
  2. ವೀಕ್ಷಣೆ ಇತಿಹಾಸವನ್ನು ತೆರವುಗೊಳಿಸಿ ಎಂಬುದನ್ನು ಆಯ್ಕೆಮಾಡಿ.
  3. ವೀಕ್ಷಣೆ ಇತಿಹಾಸವನ್ನು ತೆರವುಗೊಳಿಸಿ ಬಟನ್ ಅನ್ನು ಆಯ್ಕೆಮಾಡಿ.

ಸೈನ್ ಔಟ್ ಆಗಿರುವಾಗ ನಿಮ್ಮ ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸಿ ಅಥವಾ ತೆರವುಗೊಳಿಸಿ

ನೀವು ಸೈನ್ ಔಟ್ ಆಗಿರುವಾಗಲೂ, ಆ ಸಾಧನದಲ್ಲಿ ನೀವು ವೀಕ್ಷಿಸುವ ವೀಡಿಯೊಗಳ ಆಧಾರದ ಮೇಲೆ YouTube ನಿಮ್ಮ ಶಿಫಾರಸುಗಳನ್ನು ಸುಧಾರಿಸುತ್ತದೆ.

To turn off or delete your watch history while signed out:

  1. Go to YouTube.
  2. Select History.
  3. Select Clear all watch history or Pause watch history.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8366853508271113866
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false