YouTube ನಲ್ಲಿ ಸುರಕ್ಷಿತರಾಗಿರಿ

Staying Safe on YouTube: Policies and Tools for Creators

 

YouTube ಎಂಬುದು, ಜನರು ತಮ್ಮ ಕಥೆಯನ್ನು ಹಂಚಿಕೊಳ್ಳಲು, ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ಪರಸ್ಪರರೊಂದಿಗೆ ತೊಡಗಿಸಿಕೊಳ್ಲಲು ಬರುವಂತಹ ತಾಣವಾಗಿದೆ. ಈ ನಿಟ್ಟಿನಲ್ಲಿ ರಚನೆಕಾರರು ಮತ್ತು ವೀಕ್ಷಕರಲ್ಲಿ ಸುರಕ್ಷಿತ ಭಾವನೆ ಮೂಡಬೇಕೆಂದು ನಾವು ಬಯಸುತ್ತೇವೆ. YouTube ನ ಬಹುತೇಕ ರಚನೆಕಾರರು ಮತ್ತು ವೀಕ್ಷಕರು ಹಂಚಿಕೊಳ್ಳಲು, ಕಲಿಯಲು ಮತ್ತು ಸಂಪರ್ಕಿಸಲು ಬಯಸುತ್ತಾರಾದರೂ, ದುರುಪಯೋಗ ಮತ್ತು ಕಿರುಕುಳದ ನಿದರ್ಶನಗಳು ಸಹ ಇವೆ ಎಂದು ನಮಗೆ ತಿಳಿದಿದೆ. YouTube ನಲ್ಲಿ ನಿಮ್ಮನ್ನು ರಕ್ಷಿಸುವುದಕ್ಕಾಗಿ ಇರುವ ನೀತಿಗಳು ಹಾಗೂ ಪರಿಕರಗಳ ಕುರಿತು ಕೆಳಗೆ ಇನ್ನಷ್ಟು ತಿಳಿಯಿರಿ. 

YouTube ಅನ್ನು ಸುರಕ್ಷಿತ ಮತ್ತು ಆರೋಗ್ಯಕರವಾದ ಪ್ಲಾಟ್‌ಫಾರ್ಮ್ ಆಗಿರಿಸಲು ರಚನೆಕಾರರು ಹಾಗೂ ಬಳಕೆದಾರರು ಸಹ ಜವಾಬ್ದಾರರಾಗಿದ್ದಾರೆ. ಈ ಪ್ರಮಾಣಕಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ನಾವು ರಚನೆಕಾರರು ಮತ್ತು ಬಳಕೆದಾರರನ್ನು ಹೇಗೆ ಜವಾಬ್ದಾರರನ್ನಾಗಿಸುತ್ತೇವೆ ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ. 

ದ್ವೇಷ ಮತ್ತು ಕಿರುಕುಳದ ಕುರಿತಾದ ನೀತಿಗಳು 

ದ್ವೇಷ ಮತ್ತು ಕಿರುಕುಳದ ವಿರುದ್ಧ ಸುರಕ್ಷತೆ ಒದಗಿಸಲು YouTube ಕೆಲವೊಂದು ನೀತಿಗಳನ್ನು ಹೊಂದಿದೆ.

  • ದ್ವೇಷಪೂರಿತ ಮಾತು: ಈ ನೀತಿಯು ನಿರ್ದಿಷ್ಟ ಗುಂಪುಗಳು ಹಾಗೂ ಆ ಗುಂಪುಗಳ ಸದಸ್ಯರನ್ನು ರಕ್ಷಿಸುತ್ತದೆ. ಒಂದು ವೇಳೆ ಕಂಟೆಂಟ್, ವಯಸ್ಸು, ಲಿಂಗ, ಜನಾಂಗ, ಜಾತಿ, ಧರ್ಮ, ಲೈಂಗಿಕ ಮನೋಧರ್ಮ ಅಥವಾ ವೆಟರನ್ ಸ್ಥಿತಿಯಂತಹ ಸಂರಕ್ಷಿತ ಗುಣಲಕ್ಷಣಗಳನ್ನು ಆಧರಿಸಿ, ಗುಂಪುಗಳ ವಿರುದ್ಧ ದ್ವೇಷ ಅಥವಾ ಹಿಂಸೆಯನ್ನು ಬಿತ್ತಿದರೆ, ಆ ಕಂಟೆಂಟ್ ಅನ್ನು ನಾವು ದ್ವೇಷಪೂರಿತ ಮಾತು ಎಂದು ಪರಿಗಣಿಸುತ್ತೇವೆ. ನಮ್ಮ ದ್ವೇಷಪೂರಿತ ಮಾತು ನೀತಿಯ ಕುರಿತು ಇನ್ನಷ್ಟು ತಿಳಿಯಿರಿ.
  • ಕಿರುಕುಳ: ಈ ನೀತಿಯು ನಿರ್ದಿಷ್ಟ ವ್ಯಕ್ತಿಗಳನ್ನು ರಕ್ಷಿಸುತ್ತದೆ. ಒಂದು ವೇಳೆ ಕಂಟೆಂಟ್, ವ್ಯಕ್ತಿಗಳ ಸಂರಕ್ಷಿತ ಗುಂಪಿನ ಸ್ಥಿತಿ ಅಥವಾ ದೈಹಿಕ ಗುಣಕ್ಷಣಗಳನ್ನು ಒಳಗೊಂಡಂತೆ, ಅಂತರ್ಗತ ಗುಣಲಕ್ಷಣಗಳ ಆಧಾರದಲ್ಲಿ ದೀರ್ಘಕಾಲ ಅಥವಾ ದುರುದ್ದೇಶಪೂರಿತ ಅವಮಾನಗಳಿಗೆ ಗುರಿಯಾಗಿಸಿದರೆ, ಆ ಕಂಟೆಂಟ್ ಅನ್ನು ನಾವು ಕಿರುಕುಳ ಎಂದು ಪರಿಗಣಿಸುತ್ತೇವೆ. ಇದರಲ್ಲಿ ಬೆದರಿಕೆಗಳು, ನಿಂದನೆ, ಡಾಕ್ಸಿಂಗ್ ಅಥವಾ ಶೋಷಿಸುವ ಅಭಿಮಾನಿ ವರ್ತನೆಯಂತಹ ಹಾನಿಕಾರಕ ವರ್ತನೆಯೂ ಒಳಗೊಂಡಿದೆ. ನಮ್ಮ ಕಿರುಕುಳ ನೀತಿಯ ಕುರಿತು ಇನ್ನಷ್ಟು ತಿಳಿಯಿರಿ.

YouTube ನ ನೀತಿಗಳ ಕುರಿತು ಇನ್ನಷ್ಟು ತಿಳಿಯಲು, ನಮ್ಮ ಸಮುದಾಯ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

ನಿಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪರಿಕರಗಳು 

YouTube ನಲ್ಲಿ ರಚನೆಕಾರರು, ಕಲಾವಿದರು ಮತ್ತು ಬಳಕೆದಾರರನ್ನು ಸುರಕ್ಷಿತವಾಗಿರಿಸುವುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಆದ್ದರಿಂದ, YouTube ಅನ್ನು ಬಳಸುವಾಗ ನಿಮ್ಮಲ್ಲಿ ಸುರಕ್ಷಿತ ಭಾವನೆ ಮೂಡಿಸುವುದಕ್ಕಾಗಿ ಈ ಕೆಳಗೆ ಪಟ್ಟಿ ಮಾಡಲಾದ ವಿವಿಧ ಪರಿಕರಗಳನ್ನು ಬಳಸಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಅನುಚಿತವಾದ ಅಥವಾ ನಿಂದನೀಯ ಕಂಟೆಂಟ್ ಅಥವಾ ಬಳಕೆದಾರರ ಕುರಿತು ವರದಿ ಮಾಡಿ

ಅನುಚಿತವಾದ ಅಥವಾ ಶೋಷಿಸುವ ಕಾಮೆಂಟ್‌ಗಳು, ಕಂಟೆಂಟ್ ಅಥವಾ ಬಳಕೆದಾರರ ಕುರಿತು ವರದಿ ಮಾಡಿ

ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ

ಗಮನಿಸಿ: ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ಹೈಜಾಕ್ ಮಾಡಲಾಗಿದೆ ಅಥವಾ ಅಪಾಯಕ್ಕೆ ಗುರಿಯಾಗಿದೆ ಎಂದು ನಿಮಗೆ ಆತಂಕವಿದ್ದರೆ, ನಿಮ್ಮ YouTube ಖಾತೆಯನ್ನು ಸುರಕ್ಷಿತಗೊಳಿಸಲು ಈ ಕ್ರಮಗಳನ್ನು ಅನುಸರಿಸಿ.

ಆನ್‌ಲೈನ್ ಸುರಕ್ಷತೆಗಾಗಿ ವಿಶ್ವಾಸಾರ್ಹ ಪಾಲುದಾರ ಸಂಪನ್ಮೂಲಗಳು (ಯು.ಎಸ್ ಮಾತ್ರ) 

YouTube ನಲ್ಲಿ ನಿಮಗೆ ಇನ್ನಷ್ಟು ಸುರಕ್ಷಿತವೆನಿಸುವ ಹಾಗೆ ಮಾಡಲು ಸಹಾಯ ಮಾಡುವಂತಹ ಸಲಹೆಗಳು ಮತ್ತು ವೀಡಿಯೊಗಳಿಗಾಗಿ, ರಚನೆಕಾರರ ಸುರಕ್ಷತೆ ಕೇಂದ್ರಕ್ಕೆ ಭೇಟಿ ನೀಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6803595028732749868
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false