ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಗಾಗಿ ಅವಶ್ಯಕತೆಗಳು: ವೀಡಿಯೊ ಅಲ್ಲದ ಕಂಟೆಂಟ್

ಈ ಕಂಟೆಂಟ್ ನಿಮ್ಮ ಕೃತಿಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಚಾನಲ್‌ನ ಬ್ಯಾನರ್ ಚಿತ್ರದಂತಹ ವೀಡಿಯೊ ಅಲ್ಲದ ಕಂಟೆಂಟ್ ಅನ್ನು ತೆಗೆದುಹಾಕಲು ನೀವು ವಿನಂತಿಸಬಹುದು. ಕಂಟೆಂಟ್ ಅನ್ನು ತೆಗೆದುಹಾಕಿದರೆ, ಅಪ್‌ಲೋಡ್ ಮಾಡುವವರ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಅನ್ವಯಿಸಲಾಗುತ್ತದೆ.

ವೀಡಿಯೊ ಅಲ್ಲದ ಕಂಟೆಂಟ್‌ಗಾಗಿ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಲು, ಕೆಳಗೆ ಪಟ್ಟಿ ಮಾಡಲಾಗಿರುವ ಅಗತ್ಯ ಮಾಹಿತಿಯನ್ನು ನೀವು ಸೇರಿಸಬೇಕು. ಈ ಮಾಹಿತಿಯಿಲ್ಲದೆ, ನಿಮ್ಮ ವಿನಂತಿಯನ್ನು ನಾವು ಮುಂದುವರಿಸಲು ಸಾಧ್ಯವಿಲ್ಲ. 

ಈ ಮಾಹಿತಿಯನ್ನು ಇಮೇಲ್‌ನ ಮುಖ್ಯಭಾಗದಲ್ಲಿ ಸೇರಿಸಿ (ಲಗತ್ತಿನಲ್ಲಿ ಅಲ್ಲ) copyright@youtube.com ಗೆ ಅಥವಾ ಫ್ಯಾಕ್ಸ್ ಅಥವಾ ಅಂಚೆ ಪತ್ರದ ಮೂಲಕ ಸಲ್ಲಿಸಿ.

ನೆನಪಿನಲ್ಲಿಡಿ
  • ನೀವು ಸಂಪೂರ್ಣ ಚಾನಲ್‌ಗಾಗಿ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ಆದರೆ, ಚಾನಲ್‌ನ ವಿವರಣೆಯಂತಹ ಚಾನಲ್ ಅಂಶಗಳು ನಿಮ್ಮ ಕೃತಿಸ್ವಾಮ್ಯವನ್ನು ಅತಿಕ್ರಮಣ ಮಾಡುತ್ತದೆ ಎಂದು ನೀವು ಭಾವಿಸಿದರೆ, ಕೆಳಗಿನ ಅವಶ್ಯಕತೆಗಳನ್ನು ಅನುಸರಿಸಿ ನೀವು ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಬಹುದು.
  • ವೀಡಿಯೊಗಳಿಗಾಗಿ, ನಿಮ್ಮ ಕೃತಿಸ್ವಾಮ್ಯವನ್ನು ಅತಿಕ್ರಮಣ ಮಾಡುತ್ತದೆ ಎಂದು ನೀವು ಭಾವಿಸುವ ವೀಡಿಯೊವನ್ನು ತೆಗೆದುಹಾಕುವುದಕ್ಕೆ ವಿನಂತಿಸಲು ಇರುವ ಸುಲಭ ವಿಧಾನವೆಂದರೆ ಅದುವೇ ನಮ್ಮ ವೆಬ್‌ಫಾರ್ಮ್ ಬಳಸುವುದಾಗಿದೆ. ವೀಡಿಯೊ ಅಲ್ಲದ ಕಂಟೆಂಟ್ ತೆಗೆದುಹಾಕಲು ಮಾಡುವ ವಿನಂತಿಗಳನ್ನು ನಮ್ಮ ವೆಬ್‌ಫಾರ್ಮ್ ಬೆಂಬಲಿಸುವುದಿಲ್ಲ.
ತಪ್ಪಾದ ಮಾಹಿತಿಯನ್ನು ಸಲ್ಲಿಸಬೇಡಿ. ನಮ್ಮ ಪ್ರಕ್ರಿಯೆಗಳ ದುರುಪಯೋಗವು, ಉದಾಹರಣೆಗೆ, ವಂಚನೀಯ ಡಾಕ್ಯುಮೆಂಟೇಷನ್‌ನ ಸಲ್ಲಿಕೆಯು, ನಿಮ್ಮ ಖಾತೆಯ ಕೊನೆಗೊಳಿಸುವಿಕೆ ಅಥವಾ ಇತರ ಕಾನೂನು ಪರಿಣಾಮಗಳನ್ನು ಉಂಟುಮಾಡಬಹುದು.

ಕೆಳಗಿನ ಅಗತ್ಯ ಮಾಹಿತಿಯನ್ನು ಇಮೇಲ್‌ನ ಮುಖ್ಯಭಾಗದಲ್ಲಿ (ಲಗತ್ತಿನಲ್ಲಿ ಅಲ್ಲ) copyright@youtube.com ಗೆ ಅಥವಾ ಫ್ಯಾಕ್ಸ್ ಅಥವಾ ಅಂಚೆ ಪತ್ರದ ಮೂಲಕ ಸಲ್ಲಿಸಿ:

 1. ನಿಮ್ಮ ಸಂಪರ್ಕ ಮಾಹಿತಿ

YouTube ಮತ್ತು ನೀವು ತೆಗೆದುಹಾಕಲು ವಿನಂತಿಸುತ್ತಿರುವ ಕಂಟೆಂಟ್ ಅಪ್‌ಲೋಡ್ ಮಾಡಿರುವವರು ನಿಮ್ಮ ವಿನಂತಿಗೆ ಸಂಬಂಧಿಸಿದಂತೆ ನಿಮ್ಮನ್ನು ಸಂಪರ್ಕಿಸಬೇಕಾಗಬಹುದು. ನಿಮ್ಮ ವಿನಂತಿಯಲ್ಲಿ, ಈ ಕೆಳಗಿನವುಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನದನ್ನು ಸೇರಿಸಿ: 

  • ನಿಮ್ಮ ಇಮೇಲ್ ವಿಳಾಸ
  • ನಿಮ್ಮ ಭೌತಿಕ ವಿಳಾಸ
  • ನಿಮ್ಮ ದೂರವಾಣಿ ಸಂಖ್ಯೆ

2. ನಿಮ್ಮ ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೆಲಸದ ವಿವರಣೆ 

ನಿಮ್ಮ ವಿನಂತಿಯಲ್ಲಿ, ನೀವು ರಕ್ಷಿಸಲು ಪ್ರಯತ್ನಿಸುತ್ತಿರುವ ನಿಮ್ಮ ಕೃತಿಸ್ವಾಮ್ಯಕ್ಕೆ ಒಳಪಟ್ಟ ವೀಡಿಯೊ ಅಲ್ಲದ ಕಂಟೆಂಟ್ ಕುರಿತು ನೀವು ಸ್ಪಷ್ಟವಾಗಿ ಮತ್ತು ಸಂಪೂರ್ಣವಾಗಿ ವಿವರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ ಕೃತಿಸ್ವಾಮ್ಯಕ್ಕೆ ಒಳಪಟ್ಟ ಕಾರ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಉಲ್ಲಂಘಿಸಲಾಗಿದೆ ಎಂದು ನೀವು ಭಾವಿಸಿದರೆ, ನಿಮ್ಮ ವಿನಂತಿಯಲ್ಲಿ ಈ ಕಾರ್ಯಗಳ ಪ್ರಾತಿನಿಧಿಕ ಪಟ್ಟಿಯನ್ನು ಸೇರಿಸಲು ನಿಮಗೆ ಕಾನೂನುಬದ್ಧವಾಗಿ ಅವಕಾಶ ಇರುತ್ತದೆ.

3. ಪ್ರಶ್ನೆಯಲ್ಲಿರುವ ಕಂಟೆಂಟ್‌ನ ನಿರ್ದಿಷ್ಟ URL ಗಳು

ನಿಮ್ಮ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸುವ ವೀಡಿಯೊ ಅಲ್ಲದ ಕಂಟೆಂಟ್‌ಗೆ ಇರುವ ನಿರ್ದಿಷ್ಟ ಲಿಂಕ್‌ಗಳನ್ನು ನಿಮ್ಮ ವಿನಂತಿಯಲ್ಲಿ ಸೇರಿಸಿರಬೇಕು. ಲಿಂಕ್‌ಗಳನ್ನು ನಿರ್ದಿಷ್ಟ URL ಫಾರ್ಮ್ಯಾಟ್‌ನಲ್ಲಿ ಕಳುಹಿಸಬೇಕು. ಚಾನಲ್ ಹೆಸರು ಅಥವಾ ಚಾನಲ್ URL ನಂತಹ ಸಾಮಾನ್ಯ ಮಾಹಿತಿಯು ಸಾಕಾಗುವುದಿಲ್ಲ.

ವೀಡಿಯೊ ಅಲ್ಲದ ಕಂಟೆಂಟ್ ಅನ್ನು ಉಲ್ಲಂಘಿಸುತ್ತಿದೆ ಎಂದು ವರದಿ ಮಾಡಲು ಕೆಳಗಿನ ಮಾನ್ಯವಾದ URL ಫಾರ್ಮ್ಯಾಟ್‌ಗಳನ್ನು ನೋಡಿ:

ಕಂಟೆಂಟ್ ಪ್ರಕಾರ ಮಾನ್ಯ URL ಫಾರ್ಮ್ಯಾಟ್ URL ಅನ್ನು ಎಲ್ಲಿ ಹುಡುಕಬಹುದು
ಚಾನಲ್ ಬ್ಯಾನರ್ ಚಿತ್ರಗಳು

www.youtube.com/channel/UCxxxxxxxxxxxxxxxxxxxxx

ಅಥವಾ

www.youtube.com/user/xxxxxxxxx

ಚಾನಲ್ ಪುಟಕ್ಕೆ ಹೋಗಿ ನಂತರವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.

ಚಾನಲ್ ವಿವರಣೆಗಳು www.youtube.com/user/xxxxxxxxx/about

ಚಾನಲ್‌ನ ಕುರಿತು ವಿಭಾಗಕ್ಕೆ ಹೋಗಿ ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.

ಕ್ಲಿಪ್‌ಗಳು www.youtube.com/clip/xxxxxxxxxxxxxxxxxxxxxxxxxx ಕ್ಲಿಪ್‌ನ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.
ವೀಡಿಯೊ ಕಾಮೆಂಟ್‌ಗಳು www.youtube.com/watch?v=xxxxxxxxxx&lc=xxxxxxxxxxxxxxxxxx ಕಾಮೆಂಟ್‌ನ ಮೇಲಿರುವ ಪೋಸ್ಟ್ ಮಾಡಲಾದ ದಿನಾಂಕವನ್ನು ಕ್ಲಿಕ್ ಮಾಡಿ (ಪುಟವು ಪುನಃ ಲೋಡ್ ಆಗುತ್ತದೆ) ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.
ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ www.youtube.com/channel/xxxxxxxxxxx/community?lc=xxxxxxxxxxxx&lb=xxxxxxxxxxxx ಕಾಮೆಂಟ್‌ನ ಮೇಲಿರುವ ಪೋಸ್ಟ್ ಮಾಡಲಾದ ದಿನಾಂಕವನ್ನು ಕ್ಲಿಕ್ ಮಾಡಿ (ಪುಟವು ಪುನಃ ಲೋಡ್ ಆಗುತ್ತದೆ) ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರಕಾಪಿ ಮಾಡಿ.
ಸಮುದಾಯ ಪೋಸ್ಟ್‌ಗಳು https://www.youtube.com/post/xxxxxxxxxxxxxxxxxxx ಸಮುದಾಯ ಪೋಸ್ಟ್ ಅನ್ನು ಪೋಸ್ಟ್ ಮಾಡಿದ ದಿನಾಂಕವನ್ನು ಕ್ಲಿಕ್ ಮಾಡಿ (ಪುಟವು ಪುನಃ ಲೋಡ್ ಆಗುತ್ತದೆ) ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.
ಸದಸ್ಯತ್ವದ ಬ್ಯಾಡ್ಜ್‌ಗಳು, ಎಮೋಜಿ ಅಥವಾ ರಚನೆಕಾರರ ಪರ್ಕ್ ವಿವರಣೆಗಳು yt3.ggpht.com/xxxxx ಮೂಲಕ ಪ್ರಾರಂಭಿಸಲಾಗುತ್ತದೆ ಚಿತ್ರದ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಚಿತ್ರದ ವಿಳಾಸವನ್ನು ಕಾಪಿ ಮಾಡಿ

ಚಾನಲ್ URL ಅನ್ನು ಸಹ ಸೇರಿಸಿ:

www.youtube.com/channel/UCxxxxxxxxxxxxxxxxxxxxx

ಅಥವಾ

www.youtube.com/user/xxxxxxxxx

ಚಾನಲ್ ಪುಟಕ್ಕೆ ಹೋಗಿ ನಂತರವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.
ಪ್ಲೇಪಟ್ಟಿ ವಿವರಣೆಗಳು

www.youtube.com/playlist?list=xxxxxxxxxxxxxxxx

ಪ್ಲೇಪಟ್ಟಿಯ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.

ಪ್ರೊಫೈಲ್ ಚಿತ್ರಗಳು
Super Stickers lh3.googleusercontent.com/xxxxx ಮೂಲಕ ಪ್ರಾರಂಭಿಸಲಾಗುತ್ತದೆ ಲೈವ್ ಚಾಟ್‌ನಲ್ಲಿ  ಡಾಲರ್ ಚಿಹ್ನೆಯನ್ನು ಕ್ಲಿಕ್ ಮಾಡಿ ನಂತರ ಸೂಪರ್ ಸ್ಟಿಕ್ಕರ್ ನಂತರ ಚಿತ್ರದ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಚಿತ್ರದ ವಿಳಾಸವನ್ನು ಕಾಪಿ ಮಾಡಿ.

ಚಾನಲ್ URL ಅನ್ನು ಸಹ ಸೇರಿಸಿ:

www.youtube.com/channel/UCxxxxxxxxxxxxxxxxxxxxx

ಅಥವಾ

www.youtube.com/user/xxxxxxxxx

ಚಾನಲ್ ಪುಟಕ್ಕೆ ಹೋಗಿ ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.

4. ಕೆಳಗಿನ ಎರಡು ಹೇಳಿಕೆಗಳನ್ನು ಒಪ್ಪಿಕೊಳ್ಳಿ ಮತ್ತು ಸೇರಿಸಿ:

“ದೂರು ನೀಡಲಾದ ವಿಧಾನದಲ್ಲಿನ ವಸ್ತುವಿಷಯದ ಬಳಕೆಯನ್ನು ಕೃತಿಸ್ವಾಮ್ಯ ಮಾಲೀಕರು, ಅದರ ಏಜೆಂಟ್ ಅಥವಾ ಕಾನೂನು ರೀತ್ಯ ದೃಢೀಕರಿಸಿಲ್ಲ ಎಂಬ ಅಪಾರವಾದ ನಂಬಿಕೆ ನನಗಿದೆ.”

"ಈ ಅಧಿಸೂಚನೆಯಲ್ಲಿನ ಮಾಹಿತಿ ನಿಖರವಾಗಿದೆ ಮತ್ತು ಸುಳ್ಳು ಸಾಕ್ಷಿಗಾಗಿ ದಂಡನೆಯ ಅಡಿಯಲ್ಲಿ, ಉಲ್ಲಂಘಿತವಾಗಿದೆ ಎಂದು ಆರೋಪಿಸಲಾದ ವಿಶೇಷ ಹಕ್ಕಿನ ಮಾಲೀಕರ ಪರವಾಗಿ ಕಾರ್ಯನಿರ್ವಹಿಸುವ ನಾನು ಮಾಲೀಕನಾಗಿರುತ್ತೇನೆ ಅಥವಾ ಪ್ರಮಾಣೀಕೃತವಾದ ಒಬ್ಬ ಏಜೆಂಟ್ ಆಗಿರುತ್ತೇನೆ.”

5. ನಿಮ್ಮ ಸಹಿ

ಸಂಪೂರ್ಣ ತೆಗೆದುಹಾಕುವಿಕೆ ವಿನಂತಿಗಳಿಗೆ, ಕೃತಿಸ್ವಾಮ್ಯ ಮಾಲೀಕರು ಅಥವಾ ಅವರ ಪರವಾಗಿ ಕಾರ್ಯನಿರ್ವಹಿಸಲು ಅಧಿಕಾರ ಹೊಂದಿರುವ ಏಜೆಂಟ್ ಅವರ ಭೌತಿಕ ಅಥವಾ ಎಲೆಕ್ಟ್ರಾನಿಕ್ ಸಹಿಯ ಅಗತ್ಯವಿದೆ.

ಈ ಅಗತ್ಯವನ್ನು ಪೂರೈಸಲು, ಕೃತಿಸ್ವಾಮ್ಯದ ಮಾಲೀಕರು ಅಥವಾ ಅಧಿಕೃತ ಏಜೆಂಟ್ ಆಗಿರುವವರು ವಿನಂತಿಯ ಕೆಳಭಾಗದಲ್ಲಿ ಅವರ ಕಾನೂನುಬದ್ಧವಾದ ಪೂರ್ಣ ಹೆಸರನ್ನು ಅವರ ಸಹಿಯಾಗಿ ನಮೂದಿಸಬಹುದು. ಕಾನೂನುಬದ್ಧವಾದ ಪೂರ್ಣ ಹೆಸರು ಮೊದಲ ಮತ್ತು ಕೊನೆಯ ಹೆಸರು ಆಗಿರಬೇಕು, ಕಂಪನಿಯ ಹೆಸರು ಅಲ್ಲ.

ಮೇಲೆ ತಿಳಿಸಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ಇಮೇಲ್‌ನ ಮುಖ್ಯಭಾಗದಲ್ಲಿ ಸೇರಿಸಿ (ಲಗತ್ತಾಗಿ ಅಲ್ಲ) copyright@youtube.com ಗೆ ಕಳುಹಿಸಿ ಅಥವಾ ಫ್ಯಾಕ್ಸ್ ಅಥವಾ ಅಂಚೆ ಪತ್ರದ ಮೂಲಕ ಅದನ್ನು ಕಳುಹಿಸಿ.

ಇನ್ನಷ್ಟು ಮಾಹಿತಿ  

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13385648732706635278
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false