ಕಾಮೆಂಟ್‌ಗಳನ್ನು ಪರಿಶೀಲಿಸಿ ಮತ್ತು ಅವುಗಳಿಗೆ ಪ್ರತ್ಯುತ್ತರಿಸಿ

 ನಿಮ್ಮ ಚಾನಲ್‌ನಲ್ಲಿ ಆರೋಗ್ಯಪೂರ್ಣವಾದ ಸಮುದಾಯವನ್ನು ಕಾಯ್ದುಕೊಳ್ಳುವುದಕ್ಕಾಗಿ, ಕಾಮೆಂಟ್‌ಗಳನ್ನು ಮಾಡರೇಟ್ ಮಾಡುವುದು ಮತ್ತು ಅವುಗಳ ಜೊತೆಗೆ ಸಂವಹಿಸುವುದು ಉತ್ತಮ ಮಾರ್ಗವಾಗಿದೆ.

ಕಾಮೆಂಟ್‌ಗಳನ್ನು ಪರಿಶೀಲಿಸಿ ಮತ್ತು ನಿರ್ವಹಿಸಿ

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ಅನ್ನು ತೆರೆಯಿರಿ.
  2. ಕೆಳಭಾಗದ ಮೆನುವಿನಿಂದ, ಕಾಮೆಂಟ್‌ಗಳು ಎಂಬುದನ್ನು ಆಯ್ಕೆಮಾಡಿ.
  3. ಪ್ರಕಟಿಸಲಾದ ಕಾಮೆಂಟ್‌ಗಳು ನಿಮ್ಮ ಡೀಫಾಲ್ಟ್ ವೀಕ್ಷಣೆಯಾಗಿದೆ.  ನೀವು ಹೀಗೆ ಮಾಡಬಹುದು:
    • ಫಿಲ್ಟರ್ ಮಾಡಿ: ಹುಡುಕಾಟ, ಪ್ರಶ್ನೆಗಳು, ಪ್ರತಿಕ್ರಿಯೆ ಸ್ಥಿತಿ ಹಾಗೂ ಮುಂತಾದವುಗಳ ಮೂಲಕ ನೀವು ನೋಡುವ ಕಾಮೆಂಟ್‌ಗಳನ್ನು ಫಿಲ್ಟರ್ ಮಾಡಲು ಫಿಲ್ಟರ್ ಬಾರ್  ಅನ್ನು ಟ್ಯಾಪ್ ಮಾಡಿ.
    • ಪ್ರತ್ಯುತ್ತರಿಸಿ: ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಲು ಪ್ರತ್ಯುತ್ತರಿಸಿ ಎಂಬುದನ್ನು ಟ್ಯಾಪ್ ಮಾಡಿ.
    • ಹಾರ್ಟ್: ಪ್ರಶಂಸನೆಯನ್ನು ತೋರಿಸಲು ಹಾರ್ಟ್ ಎಂಬುದನ್ನು ಟ್ಯಾಪ್ ಮಾಡಿ.
    • ಲೈಕ್: ಕಾಮೆಂಟ್‌ಗೆ ಲೈಕ್ ಕೊಡಲು ಥಂಬ್ಸ್ ಅಪ್  ಎಂಬುದನ್ನು ಟ್ಯಾಪ್ ಮಾಡಿ.
    • ಡಿಸ್‌ಲೈಕ್: ಕಾಮೆಂಟ್‌ಗೆ ಡಿಸ್‌ಲೈಕ್ ನೀಡಲು, ಥಂಬ್ಸ್ ಡೌನ್  ಎಂಬುದನ್ನು ಆಯ್ಕೆಮಾಡಿ.
    • ಚಾನಲ್‌ನಿಂದ ಬಳಕೆದಾರರನ್ನು ತೆಗೆದುಹಾಕಿ, ಸ್ಪ್ಯಾಮ್ ವರದಿ ಮಾಡಿ ಅಥವಾ ಮರೆಮಾಡಿ: ಇನ್ನಷ್ಟು '' ಎಂಬುದನ್ನು ಟ್ಯಾಪ್ ಮಾಡಿ.
    • ಪಿನ್ ಮಾಡಿ: ನಿಮ್ಮ ವೀಡಿಯೊದ ವೀಕ್ಷಣಾ ಪುಟದ ಮೇಲ್ಭಾಗದಲ್ಲಿ ಕಾಮೆಂಟ್ ಅನ್ನು ಹೈಲೈಟ್ ಮಾಡಲು ಕಾಮೆಂಟ್ ಅನ್ನು ಟ್ಯಾಪ್ ಮಾಡಿ, ನಂತರ ಇನ್ನಷ್ಟು '' ಪಿನ್ ಅನ್ನು ಟ್ಯಾಪ್ ಮಾಡಿ. ಪ್ರತ್ಯೇಕ ವೀಡಿಯೊಗಾಗಿ ಕಾಮೆಂಟ್‌ಗಳನ್ನು ವೀಕ್ಷಿಸುವಾಗ ಮಾತ್ರ ಈ ಆಯ್ಕೆ ಕಾಣಿಸಿಕೊಳ್ಳುತ್ತದೆ.

ಪರಿಶೀಲನೆಗಾಗಿ ತಡೆಹಿಡಿದಿರುವ ಕಾಮೆಂಟ್‌ಗಳ ಕುರಿತು ಕ್ರಮ ತೆಗೆದುಕೊಳ್ಳಿ

“ಪರಿಶೀಲನೆಗಾಗಿ ತಡೆಹಿಡಿದಿರುವುದು” ಟ್ಯಾಬ್‌ನಲ್ಲಿ, ನೀವು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು. ಇನ್ನಷ್ಟು '' ಎಂಬುದನ್ನು ಕ್ಲಿಕ್ ಮಾಡುವ ಮೂಲಕ “ಪ್ರಕಟಿಸಿರುವುದು” ಟ್ಯಾಬ್‌ನಲ್ಲಿಯೂ ನೀವು ಈ ಆಯ್ಕೆಗಳನ್ನು ಕಾಣಬಹುದು.

  • ಅನುಮೋದಿಸಿ: ಕಾಮೆಂಟ್ ಅನ್ನು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅನುಮತಿ ನೀಡುವುದಕ್ಕಾಗಿ ಅನುಮೋದಿಸಿ  ಎಂಬುದನ್ನು ಆಯ್ಕೆಮಾಡಿ.
  • ತೆಗೆದುಹಾಕಿ: ಕಾಮೆಂಟ್ ಅನ್ನು ತೆಗೆದುಹಾಕಲು, ತೆಗೆದುಹಾಕಿ  ಎಂಬುದನ್ನು ಆಯ್ಕೆಮಾಡಿ.
  • ಸ್ಪ್ಯಾಮ್ ಅಥವಾ ದುರುಪಯೋಗವನ್ನು ವರದಿ ಮಾಡಿ: ಕಾಮೆಂಟ್‌ನಲ್ಲಿ ಸ್ಪ್ಯಾಮ್ ಅಥವಾ ದುರುಪಯೋಗವನ್ನು ವರದಿ ಮಾಡಲು, ವರದಿ ಮಾಡಿ ಎಂಬುದನ್ನು ಆಯ್ಕೆಮಾಡಿ. ಸ್ಪ್ಯಾಮ್ ಕಾಮೆಂಟ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
  • ಬಳಕೆದಾರರನ್ನು ಮರೆಮಾಡಿ: ಇನ್ನಷ್ಟು '' ನಂತರಬಳಕೆದಾರರನ್ನು ಚಾನಲ್‌ನಿಂದ ಮರೆಮಾಡಿ ಎಂಬುದನ್ನು ಆಯ್ಕೆಮಾಡಿ. ನಿರ್ದಿಷ್ಟ ಜನರಿಂದ ಕಾಮೆಂಟ್‌ಗಳನ್ನು ತಡೆಹಿಡಿಯುವ ಕುರಿತು ಇನ್ನಷ್ಟು ತಿಳಿಯಿರಿ.
  • ಯಾವಾಗಲೂ ಅನುಮೋದಿಸಿ: ಈ ಆಯ್ಕೆಯು “ಪ್ರಕಟಿಸಿರುವುದು” ಟ್ಯಾಬ್‌ನಲ್ಲಿ ಮಾತ್ರ ಲಭ್ಯವಿದೆ. ನಿರ್ದಿಷ್ಟ ವೀಕ್ಷಕರಿಂದ ಭವಿಷ್ಯದ ಎಲ್ಲಾ ಕಾಮೆಂಟ್‌ಗಳನ್ನು ಸ್ವಯಂಚಾಲಿತವಾಗಿ ಅನುಮೋದಿಸಲು ಮತ್ತು ಸಾರ್ವಜನಿಕವಾಗಿ ಗೋಚರಿಸುವಂತೆ ಮಾಡಲು, ಇನ್ನಷ್ಟು '' ನಂತರ ಈ ಬಳಕೆದಾರರಿಂದ ಕಾಮೆಂಟ್‌ಗಳನ್ನು ಯಾವಾಗಲೂ ಅನುಮೋದಿಸಿ ಎಂಬುದನ್ನು ಟ್ಯಾಪ್ ಮಾಡಿ.

FAQ

ಕಾಮೆಂಟ್ ಮಾಡರೇಟರ್ ಏನು ಮಾಡಬಹುದು?

ಕಾಮೆಂಟ್ ಮಾಡರೇಟರ್ ತೆಗೆದುಕೊಳ್ಳಬಹುದಾದ ಕ್ರಮಗಳು, ಅವರು ಸ್ಟ್ಯಾಂಡರ್ಡ್ ಮಾಡರೇಟರ್ ಅಥವಾ ಮ್ಯಾನೇಜಿಂಗ್ ಮಾಡರೇಟರ್ ಎಂಬುದನ್ನು ಅವಲಂಬಿಸಿರುತ್ತದೆ. ಸ್ಟ್ಯಾಂಡರ್ಡ್ ಮಾಡರೇಟರ್‌ಗಳಿಗಿಂತ ಮ್ಯಾನೇಜಿಂಗ್ ಮಾಡರೇಟರ್‌ಗಳು ಹೆಚ್ಚಿನ ಆಯ್ಕೆಗಳ ಲಭ್ಯತೆಯನ್ನು ಹೊಂದಿರುತ್ತವೆ. ಎರಡೂ ರೀತಿಯ ಮಾಡರೇಟರ್‌ಗಳು ನಿಮ್ಮ ವಿಮರ್ಶೆಗಾಗಿ ಕಾಮೆಂಟ್‌ಗಳನ್ನು ಹೋಲ್ಡ್ ಮಾಡಬಹುದು.
ಮಾಡರೇಟರ್‌ಗಳು, YouTube Studio ದಲ್ಲಿ ನಿಮ್ಮ ಚಾನಲ್‌ಗೆ ಆ್ಯಕ್ಸೆಸ್ ಹೊಂದಿರುವುದಿಲ್ಲ. ನಿಮ್ಮ “ಪರಿಶೀಲನೆಗಾಗಿ ತಡೆಹಿಡಿದಿರುವುದು” ಸರದಿಯಲ್ಲಿ ಕಾಮೆಂಟ್ ಅನ್ನು ಪರಿಶೀಲನೆಗಾಗಿ ತಡೆಹಿಡಿಯಲಾಗುತ್ತದೆ. ನೀವು ಅನುಮೋದಿಸದ ಹೊರತು ಇತರ ವೀಕ್ಷಕರು ಕಾಮೆಂಟ್ ಅನ್ನು ನೋಡಲಾಗುವುದಿಲ್ಲ.

ಕಾಮೆಂಟ್ ಮಾಡರೇಟರ್‌ಗಳು ಏನು ಮಾಡಬಹುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ಲೈವ್ ಚಾಟ್‌ನಲ್ಲಿ ಕಾಮೆಂಟ್ ಮಾಡರೇಶನ್ ವಿಭಿನ್ನವಾಗಿ ಕೆಲಸ ಮಾಡುತ್ತದೆ. ಲೈವ್ ಚಾಟ್‌ಗಳಿಗಾಗಿ ಮಾಡರೇಟರ್‌ಗಳನ್ನು ನಿಯೋಜಿಸುವುದು ಹೇಗೆ ಎಂದು ತಿಳಿದುಕೊಳ್ಳಿ.

ನಾನು ಕಾಮೆಂಟ್ ಮಾಡರೇಟರ್ ಅನ್ನು ಹೇಗೆ ತೆಗೆದುಹಾಕಬಹುದು?

ಕಾಮೆಂಟ್ ಮಾಡರೇಟರ್ ಅನ್ನು ಸೇರಿಸಲು ಈ ಮೇಲಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಮಾಡರೇಟರ್‌ಗಳನ್ನು ನೀವು ನಿರ್ವಹಿಸಬಹುದು, ನಂತರ ತೆಗೆದುಹಾಕುವ ಆಯ್ಕೆಯನ್ನು ಆರಿಸಬಹುದು.

ವೀಕ್ಷಕರ ಕಾಮೆಂಟ್‌ಗೆ ನಾನು ಹೃದಯ, ಲೈಕ್, ಡಿಸ್‌ಲೈಕ್ ನೀಡಿದಾಗ, ಪಿನ್ ಮಾಡಿದಾಗ ಅಥವಾ ಪ್ರತ್ಯುತ್ತರಿಸಿದಾಗ ಅವರಿಗೆ ತಿಳಿಸಲಾಗುತ್ತದೆಯೇ?

ನೀವು ಒಂದು ಕಾಮೆಂಟ್‌ಗೆ ಹೃದಯ ಸೇರಿಸಿದಾಗ, ಪಿನ್ ಮಾಡಿದಾಗ ಅಥವಾ ಪ್ರತ್ಯುತ್ತರಿಸಿದಾಗ, ಕಾಮೆಂಟರ್ ಅವರ ನೋಟಿಫಿಕೇಶನ್ ಸೆಟ್ಟಿಂಗ್‌ಗಳನ್ನು ಆಧರಿಸಿ, ನೀವು ಪ್ರತಿಕ್ರಿಯಿಸಿದ್ದೀರಿ ಎಂಬ ನೋಟಿಫಿಕೇಶನ್ ಅನ್ನು ಅವರು ಪಡೆಯಬಹುದು.
ಲೈಕ್‌ಗಳು ಮತ್ತು ಡಿಸ್‌ಲೈಕ್‌ಗಳು ಅನಾಮಧೇಯವಾಗಿರುತ್ತವೆ. ನೀವು ಕಾಮೆಂಟ್‍ಗೆ ಲೈಕ್ ಕೊಟ್ಟರೆ, “ಯಾರೋ ನಿಮ್ಮ ಕಾಮೆಂಟ್‌ಗೆ ಲೈಕ್ ಕೊಟ್ಟಿದ್ದಾರೆ" ಎಂಬ ನೋಟಿಫಿಕೇಶನ್ ಅನ್ನು ಕಾಮೆಂಟರ್ ಪಡೆಯಬಹುದು. ವೀಕ್ಷಕರ ಕಾಮೆಂಟ್‌ಗೆ ನೀವು ಡಿಸ್‌ಲೈಕ್ ನೀಡಿದಾಗ, ವೀಕ್ಷಕರು ನೋಟಿಫಿಕೇಶನ್ ಅನ್ನು ಪಡೆಯುವುದಿಲ್ಲ.

ನಾನು ಕಾಮೆಂಟ್ ಅನ್ನು ಹೇಗೆ ಅನ್‌ಪಿನ್ ಮಾಡಬಹುದು?

ನೀವು ವೀಕ್ಷಣಾ ಪುಟದ ಮೇಲೆ ಕಾಮೆಂಟ್ ಅನ್ನು ಪಿನ್ ಮಾಡಿದ್ದೀರಿ, ಆದರೆ ಇನ್ನು ಮುಂದೆ ಅದನ್ನು ಅಲ್ಲಿರಿಸಲು ಬಯಸುವುದಿಲ್ಲ ಎಂದಾದರೆ, ನೀವು ಅದನ್ನು ಅನ್‌ಪಿನ್ ಮಾಡಬಹುದು. ಕಾಮೆಂಟ್‌ನ ಪಕ್ಕದಲ್ಲಿ, ಇನ್ನಷ್ಟು '' ನಂತರ ಅನ್‌ಪಿನ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
ನೀವು ಬೇರೊಂದು ಕಾಮೆಂಟ್ ಅನ್ನು ಸಹ ಪಿನ್ ಮಾಡಬಹುದು, ಇದರಿಂದ ಹಿಂದಿನ ಕಾಮೆಂಟ್ ಅನ್‌ಪಿನ್ ಆಗುತ್ತದೆ.

ನಾನು ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ಗುರುತಿಸಿದಾಗ ಏನಾಗುತ್ತದೆ?

ಕಾಮೆಂಟ್ ಅನ್ನು ನಿಮ್ಮ ಚಾನಲ್‌ನಿಂದ ಶಾಶ್ವತವಾಗಿ ಮರೆಮಾಡಲಾಗುತ್ತದೆ. ಕಾಮೆಂಟ್ ಸ್ಪ್ಯಾಮ್ ಆಗಿದೆಯೇ ಎಂದು ನೋಡಲು ಸಹ ಕಾಮೆಂಟ್ ಮತ್ತು ಕಾಮೆಂಟರ್ ಅವರ ವರ್ತನೆಯನ್ನು YouTube ಪರಿಶೀಲಿಸಬಹುದು.

ಕಾಮೆಂಟ್ ವಿಷಯಗಳನ್ನು ಹೇಗೆ ಸಾರಾಂಶಗೊಳಿಸಲಾಗುತ್ತದೆ ಮತ್ತು ನಾನು ಅವುಗಳನ್ನು ಮಾಡರೇಟ್ ಮಾಡಬಹುದೇ?

YouTube ವೀಡಿಯೊಗಳಲ್ಲಿರುವ ದೊಡ್ಡ ಕಾಮೆಂಟ್ ವಿಭಾಗಗಳಲ್ಲಿ ಮಾನವ ರಿವ್ಯೂ ಇಲ್ಲದೆಯೇ, ಕಾಮೆಂಟ್‌ಗಳನ್ನು ವ್ಯವಸ್ಥಿತಗೊಳಿಸಲು ಮತ್ತು ಸಾರಾಂಶಗೊಳಿಸಲು ಕಾಮೆಂಟ್ ವಿಷಯಗಳು Google-ಮಾಲೀಕತ್ವದ AI ಮಾದರಿಗಳನ್ನು ಬಳಸುತ್ತವೆ. ಥೀಮ್‌ವೊಂದನ್ನು ಪ್ರತಿನಿಧಿಸಲು ಸಾಕಷ್ಟು ಕಾಮೆಂಟ್‌ಗಳು ಇದ್ದಾಗ ಮಾತ್ರ ವಿಷಯಗಳನ್ನು ರಚಿಸಲಾಗುತ್ತದೆ. 

ಕಾಮೆಂಟ್ ವಿಷಯಗಳಿಂದ ಹೊರಗುಳಿಯಲು ಯಾವುದೇ ಆಯ್ಕೆಗಳಿಲ್ಲ. ನಿರ್ದಿಷ್ಟ ವಿಷಯದ ಅಡಿಯಲ್ಲಿ ಕಂಡುಬರುವ ಕಾಮೆಂಟ್‌ಗಳನ್ನು ನೀವು ತೆಗೆದುಹಾಕಿದರೆ, ವಿಷಯವನ್ನು ತೆಗೆದುಹಾಕಲಾಗುತ್ತದೆ. 

ಪರಿಶೀಲನೆಗಾಗಿ ತಡೆಹಿಡಿದಿರುವ, ನಿರ್ಬಂಧಿಸಿರುವ ಪದಗಳನ್ನು ಹೊಂದಿರುವ ಅಥವಾ ಮರೆಮಾಡಲಾದ ಬಳಕೆದಾರರಿಂದ ಬಂದಿರುವ ಕಾಮೆಂಟ್‌ಗಳಿಂದ ವಿಷಯಗಳನ್ನು ರಚಿಸಲಾಗುವುದಿಲ್ಲ. 

ಕಾಮೆಂಟ್ ವಿಷಯಗಳನ್ನು ಕುರಿತು ಫೀಡ್‌ಬ್ಯಾಕ್ ನೀಡಲು: 

  1. YouTube ಆ್ಯಪ್‌ನಲ್ಲಿನ ವೀಡಿಯೊದ ಕಾಮೆಂಟ್‌ಗಳ ವಿಭಾಗವನ್ನು ತೆರೆಯಿರಿ.
  2. ವಿಷಯಗಳು  ಎಂಬುದನ್ನು ಟ್ಯಾಪ್ ಮಾಡಿ.
  3. ಇನ್ನಷ್ಟು '' ಎಂಬುದನ್ನು ಟ್ಯಾಪ್ ಮಾಡಿ.
  4. ಫೀಡ್‌ಬ್ಯಾಕ್ ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5204108348052137776
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false