ಚಾನಲ್ ಅನುಮತಿಗಳೊಂದಿಗೆ ನಿಮ್ಮ YouTube ಚಾನಲ್‌ಗೆ ಆ್ಯಕ್ಸೆಸ್ ಅನ್ನು ಸೇರಿಸಿ ಅಥವಾ ತೆಗೆದುಹಾಕಿ

ನೀವು ಬ್ರ್ಯಾಂಡ್ ಖಾತೆಯನ್ನು ಹೊಂದಿದ್ದರೆ, ಬದಲಾಗಿ ನಿಮ್ಮ YouTube ಚಾನಲ್‌ಗೆ ಆ್ಯಕ್ಸೆಸ್ ಸೇರಿಸಲು ಅಥವಾ ತೆಗೆದುಹಾಕಲು ಚಾನಲ್ ಅನುಮತಿಗಳಿಗೆ ಬದಲಿಸಿ.  ಚಾನಲ್ ಅನುಮತಿಗಳಿಗೆ ಡೇಟಾ ರವಾನೆ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ಚಾನಲ್ ಅನುಮತಿಗಳೊಂದಿಗೆ, YouTube ಮತ್ತು YouTube Studio ನಲ್ಲಿ ನಿಮ್ಮ ಚಾನಲ್ ಡೇಟಾ, ಟೂಲ್‌ಗಳು ಮತ್ತು ಫೀಚರ್‌ಗಳಿಗೆ ಐದು ವಿಭಿನ್ನ ಹಂತದ ಆ್ಯಕ್ಸೆಸ್ ಜೊತೆಗೆ ಇತರ ಜನರಿಗೆ ಆ್ಯಕ್ಸೆಸ್ ಅನ್ನು ನೀವು ನೀಡಬಹುದು. ನಿಮ್ಮ Google ಖಾತೆಗೆ ಆ್ಯಕ್ಸೆಸ್ ಇಲ್ಲದೆಯೇ ಅನೇಕ ಜನರು ನಿಮ್ಮ ಚಾನಲ್ ಅನ್ನು ನಿರ್ವಹಿಸಬಹುದು. ಅವರು ನಿಮ್ಮ ಚಾನಲ್ ಅನ್ನು YouTube ನಲ್ಲಿ ನೇರವಾಗಿ ಅಥವಾ YouTube Studio ನಲ್ಲಿ, ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ನಿರ್ವಹಿಸಬಹುದು. ಯಾರಿಗಾದರೂ ಅನುಮತಿಗಳನ್ನು ನೀಡುವುದು:

  • ನಿಮ್ಮ ಪಾಸ್‌ವರ್ಡ್ ಅಥವಾ ಇತರ ಸೂಕ್ಷ್ಮ ಸೈನ್ ಇನ್ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಸುರಕ್ಷಿತವಾಗಿದೆ.
  • ಅವರ ಆ್ಯಕ್ಸೆಸ್ ಹಂತವನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ ಆದ್ದರಿಂದ ನಿಮ್ಮ ಚಾನಲ್ ಅನ್ನು ಯಾರು ವೀಕ್ಷಿಸಬಹುದು ಅಥವಾ ಅಪ್‌ಡೇಟ್ ಮಾಡಬಹುದು ಎಂಬುದರ ಕುರಿತು ನೀವು ಇನ್ನಷ್ಟು ನಿಯಂತ್ರಣ ಮಾಡಬಹುದು.

YouTube Studio ದಲ್ಲಿ ಚಾನಲ್ ಅನುಮತಿಗಳು: ನಿಮ್ಮ ಚಾನಲ್ ಅನ್ನು ನಿರ್ವಹಿಸಲು ಸಹಾಯ ಮಾಡುವುದಕ್ಕಾಗಿ ಜನರನ್ನು ಆಹ್ವಾನಿಸಿ

ಚಾನಲ್ ಅನುಮತಿಗಳ ಪಾತ್ರದ ಪ್ರಕಾರಗಳು

ಪಾತ್ರ

ಬೆಂಬಲವಿದೆ

ಬೆಂಬಲವಿಲ್ಲ

ಮಾಲೀಕರು

ಈ ಕೆಳಗಿನವುಗಳು ಸೇರಿದಂತೆ, ಎಲ್ಲಾ ಪ್ಲ್ಯಾಟ್‌ಫಾರ್ಮ್‌‍ಗಳಲ್ಲಿ ಎಲ್ಲವನ್ನೂ ಮಾಡಬಹುದು:

  • ಚಾನಲ್ ಅನ್ನು ಅಳಿಸುವುದು
  • ಲೈವ್ ಸ್ಟ್ರೀಮ್‌ಗಳು ಮತ್ತು ಲೈವ್ ಚಾಟ್ ಅನ್ನು ನಿರ್ವಹಿಸುವುದು
  • ಅನುಮತಿಗಳನ್ನು ನಿರ್ವಹಿಸುವುದು
  • Google Ads ಖಾತೆಗಳನ್ನು ಲಿಂಕ್ ಮಾಡಬಹುದು
  • ಇತರ ಬಳಕೆದಾರರಿಗೆ ಮಾಲೀಕತ್ವವನ್ನು ವರ್ಗಾಯಿಸಲು ಸಾಧ್ಯವಿಲ್ಲ

ನಿರ್ವಾಹಕರು

  • ಎಲ್ಲಾ ಚಾನಲ್ ಡೇಟಾವನ್ನು ವೀಕ್ಷಿಸಬಹುದು
  • ಅನುಮತಿಗಳನ್ನು ನಿರ್ವಹಿಸಬಹುದು (YouTube Studio ನಲ್ಲಿ)
  • ಚಾನಲ್ ವಿವರಗಳನ್ನು ಎಡಿಟ್ ಮಾಡಬಹುದು
  • ಲೈವ್ ಸ್ಟ್ರೀಮ್‌ಗಳನ್ನು ನಿರ್ವಹಿಸಬಹುದು
  • ಕಂಟೆಂಟ್ ಅನ್ನು ರಚಿಸಬಹುದು, ಅಪ್‌ಲೋಡ್ ಮಾಡಬಹುದು, ಪ್ರಕಟಿಸಬಹುದು ಮತ್ತು ಅಳಿಸಬಹುದು (ಡ್ರಾಫ್ಟ್‌ಗಳನ್ನು ಒಳಗೊಂಡಿದೆ)
  • ಲೈವ್ ನಿಯಂತ್ರಣ ಕೊಠಡಿಯೊಳಗೆ ಚಾಟ್ ಮಾಡಬಹುದು ಅಥವಾ ಚಾಟ್ ಅನ್ನು ಮಾಡರೇಟ್ ಮಾಡಬಹುದು
  • ಪೋಸ್ಟ್‌ಗಳನ್ನು ರಚಿಸಬಹುದು
  • ಕಾಮೆಂಟ್‌ ಮಾಡಬಹುದು
  • Google Ads ಖಾತೆಗಳನ್ನು ಲಿಂಕ್ ಮಾಡಬಹುದು
  • ಚಾನಲ್ ಅನ್ನು ಅಳಿಸಲು ಸಾಧ್ಯವಿಲ್ಲ

ಎಡಿಟರ್

  • ಎಲ್ಲಾ ಚಾನಲ್ ಡೇಟಾವನ್ನು ವೀಕ್ಷಿಸಬಹುದು
  • ಎಲ್ಲವನ್ನೂ ಎಡಿಟ್ ಮಾಡಬಹುದು
  • ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಬಹುದು ಮತ್ತು ಪ್ರಕಟಿಸಬಹುದು
  • ಲೈವ್ ಸ್ಟ್ರೀಮ್‌ಗಳನ್ನು ನಿರ್ವಹಿಸಬಹುದು
  • ಡ್ರಾಫ್ಟ್‌ಗಳನ್ನು ಅಳಿಸಬಹುದು
  • ಲೈವ್ ನಿಯಂತ್ರಣ ಕೊಠಡಿಯೊಳಗೆ ಚಾಟ್ ಮಾಡಬಹುದು ಅಥವಾ ಚಾಟ್ ಅನ್ನು ಮಾಡರೇಟ್ ಮಾಡಬಹುದು
  • ಪೋಸ್ಟ್‌ಗಳನ್ನು ರಚಿಸಬಹುದು
  • ಕಾಮೆಂಟ್‌ ಮಾಡಬಹುದು
  • Google Ads ಖಾತೆಗಳನ್ನು ಲಿಂಕ್ ಮಾಡಬಹುದು
  • ಚಾನಲ್ ಅನ್ನು ಅಥವಾ ಪ್ರಕಟಿಸಿದ ಕಂಟೆಂಟ್ ಅನ್ನು ಅಳಿಸಲು ಸಾಧ್ಯವಿಲ್ಲ
  • ಅನುಮತಿಗಳನ್ನು ನಿರ್ವಹಿಸಲು ಸಾಧ್ಯವಿಲ್ಲ
  • ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ
  • ನಿಗದಿತ/ಲೈವ್/ಪೂರ್ಣಗೊಳಿಸಿದ ಸ್ಟ್ರೀಮ್‌ಗಳನ್ನು ಅಳಿಸಲು ಸಾಧ್ಯವಿಲ್ಲ
  • ಸ್ಟ್ರೀಮ್ ಕೀಗಳನ್ನು ಅಳಿಸಲು ಅಥವಾ ರೀಸೆಟ್ ಮಾಡಲು ಸಾಧ್ಯವಿಲ್ಲ

ಎಡಿಟರ್ (ಸೀಮಿತ)

  • ಎಡಿಟರ್‌ಗೆ ಇರುವ ಅದೇ ಅನುಮತಿಗಳು
  • ಎಡಿಟರ್‌ಗೆ ಇರುವ ಅದೇ ಮಿತಿಗಳು
  • ಆದಾಯ ಡೇಟಾವನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ (ಚಾಟ್ ಆದಾಯ ಮತ್ತು ವೀಕ್ಷಕರ ಚಟುವಟಿಕೆ ಟ್ಯಾಬ್ ಅನ್ನು ಒಳಗೊಂಡಿದೆ)
ಸಬ್‌ಟೈಟಲ್ ಎಡಿಟರ್
  • ಅರ್ಹ ವೀಡಿಯೊಗಳಲ್ಲಿ ನೀವು ಸಬ್‌ಟೈಟಲ್‌ಗಳನ್ನು ಸೇರಿಸಬಹುದು, ಎಡಿಟ್ ಮಾಡಬಹುದು, ಪ್ರಕಟಿಸಬಹುದು ಮತ್ತು ಅಳಿಸಬಹುದು
  • ಎಡಿಟರ್‌ಗೆ ಇರುವ ಅದೇ ಮಿತಿಗಳು
  • ಏನನ್ನೂ ಎಡಿಟ್ ಮಾಡಲು ಸಾಧ್ಯವಿಲ್ಲ (ವೀಡಿಯೊ ಸಬ್‌ಟೈಟಲ್‌ಗಳನ್ನು ಹೊರತುಪಡಿಸಿ)
  • ಆದಾಯ ಡೇಟಾವನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ (ಚಾಟ್ ಆದಾಯ ಮತ್ತು ವೀಕ್ಷಕರ ಚಟುವಟಿಕೆ ಟ್ಯಾಬ್ ಅನ್ನು ಒಳಗೊಂಡಿದೆ)
  • ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಲು ಮತ್ತು ಪ್ರಕಟಿಸಲು ಸಾಧ್ಯವಿಲ್ಲ (ವೀಡಿಯೊ ಸಬ್‌ಟೈಟಲ್‌ಗಳನ್ನು ಹೊರತುಪಡಿಸಿ)
  • ಲೈವ್ ಸ್ಟ್ರೀಮ್‌ಗಳನ್ನು ನಿರ್ವಹಿಸಲು ಸಾಧ್ಯವಿಲ್ಲ
  • ಡ್ರಾಫ್ಟ್‌ಗಳನ್ನು ಅಳಿಸಲು ಸಾಧ್ಯವಿಲ್ಲ
  • ಲೈವ್ ನಿಯಂತ್ರಣ ಕೊಠಡಿಯೊಳಗೆ ಚಾಟ್ ಮಾಡಲು ಅಥವಾ ಚಾಟ್ ಅನ್ನು ಮಾಡರೇಟ್ ಮಾಡಲು ಸಾಧ್ಯವಿಲ್ಲ
  • ಲೈವ್ ಸ್ಟ್ರೀಮ್‌ಗಳನ್ನು ನಿರ್ವಹಿಸಲು ಸಾಧ್ಯವಿಲ್ಲ
  • ನಿಗದಿತ/ಲೈವ್/ಪೂರ್ಣಗೊಳಿಸಿದ ಸ್ಟ್ರೀಮ್‌ಗಳನ್ನು ಅಳಿಸಲು ಸಾಧ್ಯವಿಲ್ಲ
  • ಲೈವ್ ನಿಯಂತ್ರಣ ಕೊಠಡಿಯೊಳಗೆ ಚಾಟ್ ಮಾಡಲು ಅಥವಾ ಚಾಟ್ ಅನ್ನು ಮಾಡರೇಟ್ ಮಾಡಲು ಸಾಧ್ಯವಿಲ್ಲ
  • ಎಲ್ಲಾ ಚಾನಲ್ ಡೇಟಾವನ್ನು ವೀಕ್ಷಿಸಲು ಸಾಧ್ಯವಿಲ್ಲ

ವೀಕ್ಷಕರು

  • ಎಲ್ಲಾ ಚಾನಲ್ ವಿವರಗಳನ್ನು ವೀಕ್ಷಿಸಬಹುದು (ಆದರೆ ಎಡಿಟ್ ಮಾಡಲು ಸಾಧ್ಯವಿಲ್ಲ)
  • YouTube Analytics ಗುಂಪುಗಳನ್ನು ರಚಿಸಬಹುದು ಮತ್ತು ಎಡಿಟ್ ಮಾಡಬಹುದು
  • ಆದಾಯ ಡೇಟಾವನ್ನು ವೀಕ್ಷಿಸಬಹುದು (ಚಾಟ್ ಆದಾಯ ಮತ್ತು ವೀಕ್ಷಕರ ಚಟುವಟಿಕೆ ಡೇಟಾವನ್ನು ಒಳಗೊಂಡು)
  • ರಚಿಸಲಾದ ಸ್ಟ್ರೀಮ್‌ಗಳನ್ನು, ಲೈವ್‌ಗಿಂತ ಮೊದಲು ಮತ್ತು ಲೈವ್ ಆಗಿರುವಾಗ ವೀಕ್ಷಿಸಬಹುದು/ಮೇಲ್ವಿಚಾರಣೆ ಮಾಡಬಹುದು
  • ಸ್ಟ್ರೀಮ್ ಕೀಯನ್ನು ಹೊರತುಪಡಿಸಿ, ಎಲ್ಲಾ ಸ್ಟ್ರೀಮ್ ಸೆಟ್ಟಿಂಗ್‌ಗಳನ್ನು ವೀಕ್ಷಿಸಬಹುದು
  • ಲೈವ್ ಸ್ಟ್ರೀಮ್‌ಗಳನ್ನು ನಿರ್ವಹಿಸಲು ಸಾಧ್ಯವಿಲ್ಲ
  • ನಿಗದಿತ/ಲೈವ್/ಪೂರ್ಣಗೊಳಿಸಿದ ಸ್ಟ್ರೀಮ್‌ಗಳನ್ನು ಅಳಿಸಲು ಸಾಧ್ಯವಿಲ್ಲ
  • ಲೈವ್ ನಿಯಂತ್ರಣ ಕೊಠಡಿಯೊಳಗೆ ಚಾಟ್ ಮಾಡಲು ಅಥವಾ ಚಾಟ್ ಅನ್ನು ಮಾಡರೇಟ್ ಮಾಡಲು ಸಾಧ್ಯವಿಲ್ಲ

ವೀಕ್ಷಕರು (ಸೀಮಿತ)

  • ವೀಕ್ಷಕರಿಗೆ ಇರುವ ಅದೇ ಅನುಮತಿಗಳು
  • ವೀಕ್ಷಕರಿಗೆ ಇರುವ ಅದೇ ಮಿತಿಗಳು
  • ಆದಾಯ ಡೇಟಾವನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ (ಚಾಟ್ ಆದಾಯ ಮತ್ತು ವೀಕ್ಷಕರ ಚಟುವಟಿಕೆ ಟ್ಯಾಬ್ ಅನ್ನು ಒಳಗೊಂಡಿದೆ)

ಬೆಂಬಲಿತ ಕ್ರಿಯೆಗಳು

ಸೂಚನೆ: ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವಾಗ ಕೆಲವು ಕ್ರಿಯೆಗಳು ಲಭ್ಯವಿಲ್ಲದೇ ಇರಬಹುದು.
ವರ್ಗ ಆ್ಯಕ್ಸೆಸ್ ಹಂತ / ಸಾರ್ವಜನಿಕ ಕ್ರಿಯೆಗಳು ಕಂಪ್ಯೂಟರ್‌ನಲ್ಲಿ YT Studio YT Studio ಆ್ಯಪ್ YouTube
ಹಂತ-ಹಂತದ ಅನುಮತಿ ನಿಯಂತ್ರಣ ನಿರ್ವಾಹಕರ ಪಾತ್ರ
ಎಡಿಟರ್ ಪಾತ್ರ
ಎಡಿಟರ್ (ಸೀಮಿತ) ಪಾತ್ರ
ವೀಕ್ಷಕರು-ಮಾತ್ರ ಪಾತ್ರ
ವೀಕ್ಷಕರು (ಸೀಮಿತ) ಪಾತ್ರ
ವೀಕ್ಷಕರು-ಮಾತ್ರ ಪಾತ್ರ
ವೀಡಿಯೊ ನಿರ್ವಹಣೆ ವೀಡಿಯೊಗಳು / Shorts ಅನ್ನು ಅಪ್‌ಲೋಡ್ ಮಾಡುವುದು
Shorts ರಚಿಸುವುದು
YouTube Analytics ಅಥವಾ ಕಲಾವಿದರ ವಿಶ್ಲೇಷಕಗಳಲ್ಲಿ ವೀಡಿಯೊದ ಪರ್ಫಾರ್ಮೆನ್ಸ್ ಕುರಿತು ಅರ್ಥಮಾಡಿಕೊಳ್ಳುವುದು
ವೀಡಿಯೊಗಳನ್ನು ನಿರ್ವಹಿಸುವುದು (ಮೆಟಾಡೇಟಾ, ಮಾನಿಟೈಸೇಶನ್, ಗೋಚರತೆ)
ಪ್ಲೇಪಟ್ಟಿಯನ್ನು ರಚಿಸುವುದು
ಅಸ್ತಿತ್ವದಲ್ಲಿರುವ ಸಾರ್ವಜನಿಕ ಪ್ಲೇಪಟ್ಟಿಯಲ್ಲಿ ವೀಡಿಯೊವನ್ನು ಸೇರಿಸುವುದು
ಪ್ಲೇಪಟ್ಟಿಗಳನ್ನು ನಿರ್ವಹಿಸುವುದು
ಚಾನಲ್ ಆಗಿ ಲೈವ್ ಸ್ಟ್ರೀಮ್ ಮಾಡುವುದು
ಶೀರ್ಷಿಕೆಗಳು, ಖಾಸಗಿ ವೀಡಿಯೊ ಹಂಚಿಕೊಳ್ಳುವಿಕೆ
ಚಾನಲ್ ನಿರ್ವಹಣೆ ಚಾನಲ್ ಹೋಮ್ ಪೇಜ್ ಅನ್ನು ಕಸ್ಟಮೈಸ್ ಮಾಡುವುದು / ನಿರ್ವಹಿಸುವುದು
ಸಮುದಾಯ ತೊಡಗಿಸಿಕೊಳ್ಳುವಿಕೆ ಪೋಸ್ಟ್ ರಚಿಸುವುದು
ಸಮುದಾಯ ಪೋಸ್ಟ್‌ಗಳನ್ನು ನಿರ್ವಹಿಸುವುದು. ಇದು ಪೋಸ್ಟ್‌ಗಳನ್ನು ಅಳಿಸುವುದನ್ನು ಒಳಗೊಂಡಿಲ್ಲ
ಸಮುದಾಯ ಪೋಸ್ಟ್‌ಗಳನ್ನು ಅಳಿಸುವುದು [ನಿರ್ವಾಹಕರು ಮಾತ್ರ] [ನಿರ್ವಾಹಕರು ಮಾತ್ರ]
ಚಾನಲ್ ಆಗಿ, YouTube Studio ದಿಂದ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸುವುದು
ಮತ್ತೊಂದು ಚಾನಲ್‌ನ ವೀಡಿಯೊಗಳಲ್ಲಿ ಚಾನಲ್ ಆಗಿ ಕಾಮೆಂಟ್ ಮಾಡುವುದು ಮತ್ತು ಕಾಮೆಂಟ್‌ಗಳೊಂದಿಗೆ ಸಂವಹಿಸುವುದು
ಲೈವ್ ಚಾಟ್ ಅನ್ನು ಚಾನಲ್ ಆಗಿ ಬಳಸುವುದು
ಕಲಾವಿದರಿಗೆ ನಿರ್ದಿಷ್ಟವಾದುದು ಅಧಿಕೃತ ಕಲಾವಿದರ ಚಾನಲ್ ಫೀಚರ್‌ಗಳು (ಉದಾಹರಣೆಗೆ, ಕಾನ್ಸರ್ಟ್‌ಗಳು)
ಕಲಾವಿದರ ಡಿಸ್ಕೋಗ್ರಫಿ ಮ್ಯಾನೇಜರ್ ಅನ್ನು ಬಳಸಿ [ಮಾಲೀಕರು, ನಿರ್ವಾಹಕರು, ಎಡಿಟರ್‌ಗಳು ಮತ್ತು ಎಡಿಟರ್‌ಗಳು (ಸೀಮಿತಗೊಳಿಸಲಾಗಿದೆ)]

YouTube ನಲ್ಲಿ ಸಾರ್ವಜನಿಕ ವರ್ಸಸ್ ಖಾಸಗಿ ಚಟುವಟಿಕೆ

YouTube ನಲ್ಲಿ ನೇರವಾಗಿ ಚಾನಲ್‌ಗೆ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ, ಸಾರ್ವಜನಿಕ ಮತ್ತು ಖಾಸಗಿ ಕ್ರಿಯೆಗಳ ನಡುವೆ ವ್ಯತ್ಯಾಸವಿದೆ.

  • ಸಾರ್ವಜನಿಕ ಕ್ರಿಯೆಗಳು: ಪ್ರತಿನಿಧಿಗಳು ಚಾನಲ್ ಮಾಲೀಕರಿಗಾಗಿ ಈ ಕ್ರಿಯೆಗಳನ್ನು ಮಾಡಬಹುದು ಮತ್ತು ಕ್ರಿಯೆಯನ್ನು ಚಾನಲ್‌ಗೆ ಆ್ಯಟ್ರಿಬ್ಯೂಟ್ ಮಾಡಲಾಗುತ್ತದೆ.
  • ಖಾಸಗಿ ಕ್ರಿಯೆಗಳು: ತಾವು ಸೈನ್ ಇನ್ ಮಾಡಿರುವ ತಮ್ಮ ವೈಯಕ್ತಿಕ ಖಾತೆಯಾಗಿ ಪ್ರತಿನಿಧಿಗಳು ಈ ಕ್ರಿಯೆಗಳನ್ನು ನಡೆಸುತ್ತಾರೆ.
    • ಖಾಸಗಿ ಕ್ರಿಯೆಗಳಲ್ಲಿ ಹುಡುಕುವುದು, ವೀಡಿಯೊಗಳನ್ನು ವೀಕ್ಷಿಸುವುದು ಮತ್ತು ಖರೀದಿಸುವುದು ಒಳಗೊಂಡಿವೆ. ಇನ್ನಷ್ಟು ತಿಳಿಯಿರಿ.

ಕ್ರಿಯೆಯನ್ನು ಹೇಗೆ ಆ್ಯಟ್ರಿಬ್ಯೂಟ್ ಮಾಡಲಾಗಿದೆ ಎನ್ನುವುದನ್ನು ಪ್ರತಿನಿಧಿ ಬಳಕೆದಾರರಿಗೆ ತಿಳಿಸಲು ವಿಷುವಲ್ ಸೂಚಕಗಳು ಸಹಾಯ ಮಾಡುತ್ತವೆ.

ಅನುಮತಿಗಳನ್ನು ಬಳಸಿಕೊಂಡು ನಿಮ್ಮ ಚಾನಲ್‌ಗೆ ಆ್ಯಕ್ಸೆಸ್ ನೀಡಿ

ನೀವು ಬ್ರ್ಯಾಂಡ್ ಖಾತೆಯನ್ನು ಹೊಂದಿದ್ದರೆ, ನೀವು ಮೊದಲು ಚಾನಲ್ ಅನುಮತಿಗಳಿಗೆ ಡೇಟಾ ರವಾನೆ ಮಾಡಬೇಕು.

ಕಂಪ್ಯೂಟರ್‌ನಲ್ಲಿ ಆ್ಯಕ್ಸೆಸ್ ಸೇರಿಸಿ

  1. studio.youtube.com ಗೆ ಹೋಗಿ.
  2. ಎಡಬದಿಯಲ್ಲಿ ಸೆಟ್ಟಿಂಗ್‍ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಅನುಮತಿಗಳು ಎಂಬುದನ್ನು ಕ್ಲಿಕ್ ಮಾಡಿ.
  4. ಆಹ್ವಾನಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ನೀವು ಆಹ್ವಾನಿಸಲು ಬಯಸುವ ವ್ಯಕ್ತಿಯ ಇಮೇಲ್ ವಿಳಾಸವನ್ನು ನಮೂದಿಸಿ.
  5. ಆ್ಯಕ್ಸೆಸ್ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಈ ವ್ಯಕ್ತಿಗೆ ನಿಯೋಜಿಸಲು ಬಯಸುವ ಪಾತ್ರವನ್ನು ಈ ಕೆಳಗಿನ ಟೇಬಲ್‌ನಿಂದ ಆಯ್ಕೆ ಮಾಡಿ.
  6. ಮುಗಿದಿದೆ ಕ್ಲಿಕ್ ಮಾಡಿ.
    • ಗಮನಿಸಿ: ಆಹ್ವಾನವನ್ನು ಕಳುಹಿಸಿದ ಬಳಿಕ, 30 ದಿನಗಳ ನಂತರ ಅದರ ಅವಧಿ ಮುಗಿಯುತ್ತದೆ.

ನಿಮ್ಮ ಚಾನಲ್‌ಗೆ ಇರುವ ಆ್ಯಕ್ಸೆಸ್ ಅನ್ನು ತೆಗೆದುಹಾಕಿ

  1. studio.youtube.com ಗೆ ಹೋಗಿ.
  2. ಎಡಬದಿಯಲ್ಲಿ ಸೆಟ್ಟಿಂಗ್‍ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಅನುಮತಿಗಳು ಎಂಬುದನ್ನು ಕ್ಲಿಕ್ ಮಾಡಿ.
  4. ನೀವು ತೆಗೆದುಹಾಕಲು ಬಯಸುವ ವ್ಯಕ್ತಿಯಲ್ಲಿಗೆ ಹೋಗಿ ಮತ್ತು ಡೌನ್ ಆ್ಯರೋವನ್ನು ಕ್ಲಿಕ್ ಮಾಡಿ.
  5. ಹೊಸ ಪಾತ್ರವನ್ನು ಆಯ್ಕೆ ಮಾಡಿ ಅಥವಾ ಆ್ಯಕ್ಸೆಸ್ ತೆಗೆದುಹಾಕಿ ಎಂಬುದನ್ನು ಕ್ಲಿಕ್ ಮಾಡಿ.

ಗಮನಿಸಿ: ಚಾನಲ್ ಅನುಮತಿಗಳು YouTube ನ ಕೆಲವೊಂದು ಭಾಗಗಳನ್ನು ಇನ್ನೂ ಬೆಂಬಲಿಸುತ್ತಿಲ್ಲ. ಮಾಲೀಕರು ಈ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಿದ್ದರೂ, ಆಹ್ವಾನಿತ ಬಳಕೆದಾರರು ಇವುಗಳನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ:

  • YouTube Music
  • YouTube Kids ಆ್ಯಪ್
  • YouTube API ಗಳು

YouTube ನಲ್ಲಿ ಖಾಸಗಿ ಕ್ರಿಯೆಗಳು

ಈ ಕೆಳಗಿನ ಕ್ರಿಯೆಗಳನ್ನು ಖಾಸಗಿ ಎಂದು ಪರಿಗಣಿಸಲಾಗುತ್ತದೆ, ಮತ್ತು ಪ್ರತಿನಿಧಿಯ ವೈಯಕ್ತಿಕ ಖಾತೆಯೊಂದಿಗೆ ಸಂಬಂಧಿಸಲಾಗುತ್ತದೆ:

ವೀಡಿಯೊ ನಿರ್ವಹಣೆ

ಸಮುದಾಯ ತೊಡಗಿಸಿಕೊಳ್ಳುವಿಕೆ

  • ಪೋಸ್ಟ್‌ನಲ್ಲಿ ಲೈಕ್, ಡಿಸ್‌ಲೈಕ್ ನೀಡುವುದು ಅಥವಾ ಮತ ನೀಡುವುದು.

ಪ್ಲೇ ಮಾಡಲು ಆಯ್ಕೆ ಮಾಡುವುದು/ಬಳಕೆ

  • ಕಂಟೆಂಟ್ ಅನ್ನು ಹುಡುಕುವುದು ಅಥವಾ ಹುಡುಕಾಟ ಇತಿಹಾಸವನ್ನು ಆ್ಯಕ್ಸೆಸ್ ಮಾಡುವುದು.
  • ವೀಡಿಯೊವನ್ನು ವೀಕ್ಷಿಸುವುದು ಅಥವಾ ವೀಕ್ಷಣಾ ಇತಿಹಾಸವನ್ನು ಆ್ಯಕ್ಸೆಸ್ ಮಾಡುವುದು.
  • ಚಾನಲ್‌ನಲ್ಲಿ ಬಳಕೆದಾರರನ್ನು ನಿರ್ಬಂಧಿಸುವುದು.
  • ಸಬ್‌ಸ್ಕ್ರಿಪ್ಶನ್‌ಗಳನ್ನು ವೀಕ್ಷಿಸುವುದು.
  • ಖರೀದಿಗಳು (ಉದಾಹರಣೆಗೆ: ಚಲನಚಿತ್ರಗಳು ಹಾಗೂ ಶೋಗಳು, Premium).
  • ಖರೀದಿಯ ಇತಿಹಾಸ.

ಚಾನಲ್ ಮಾಲೀಕರ ವಿವರಗಳನ್ನು ಹುಡುಕಿ

ಚಾನಲ್ ಮಾಲೀಕರ ಹೆಸರು ಮತ್ತು ಇಮೇಲ್ ಅನ್ನು ಕಂಪ್ಯೂಟರ್‌ನಲ್ಲಿ ಹುಡುಕಿ

ನೀವು ಚಾನಲ್ ಅನ್ನು ನಿರ್ವಹಿಸುವುದಾದರೆ, ಚಾನಲ್ ಮಾಲೀಕರ ಹೆಸರು ಹಾಗೂ ಇಮೇಲ್ ಅನ್ನು ನೀವು ಕಂಡುಹಿಡಿಯಬಹುದು. ನಿಮಗೆ ಈ ಮಾಹಿತಿಯ ಅಗತ್ಯವಿರಬಹುದು, ಉದಾಹರಣೆಗೆ, ನಿರ್ದಿಷ್ಟ ಫೀಚರ್‌ಗಳಿಗೆ ಆ್ಯಕ್ಸೆಸ್ ಪಡೆಯುವುದಕ್ಕಾಗಿ ತಮ್ಮ ಚಾನಲ್ ಅನ್ನು ಫೋನ್ ದೃಢೀಕರಣ ಮಾಡಲು ಕೇಳಿಕೊಳ್ಳುವುದಕ್ಕಾಗಿ.

ಗಮನಿಸಿ: ಕೇವಲ ನಿರ್ವಾಹಕರು ಮತ್ತು ಮಾಲೀಕರು, ಚಾನಲ್‌ಗೆ ಆ್ಯಕ್ಸೆಸ್ ಹೊಂದಿರುವ ಜನರ ಹೆಸರುಗಳು ಹಾಗೂ ಇಮೇಲ್‌ಗಳನ್ನು ವೀಕ್ಷಿಸಬಹುದು.
  1. studio.youtube.com ಎಂಬಲ್ಲಿಗೆ ಹೋಗಿ.
  2. ಸೆಟ್ಟಿಂಗ್‌ಗಳು ನಂತರ ಅನುಮತಿಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಈ ಚಾನಲ್‌ಗೆ ಆ್ಯಕ್ಸೆಸ್ ಹೊಂದಿರುವ ಎಲ್ಲರ ಹೆಸರು ಮತ್ತು ಇಮೇಲ್ ಅನ್ನು ನೀವು ನೋಡುವಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14180857559922958088
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false