ನಿಮ್ಮ ವೀಡಿಯೊಗೆ ಆಡಿಯೊ ಟ್ರ್ಯಾಕ್ ಸೇರಿಸಿ

YouTube ಮೊಬೈಲ್ ಆ್ಯಪ್ ನಿಂದ ನಿಮ್ಮ ವೀಡಿಯೊದ ಆಡಿಯೊ ಟ್ರ್ಯಾಕ್ ಅನ್ನು ನೀವು ಇನ್ನು ಮುಂದೆ ಬದಲಾಯಿಸಲಾಗುವುದಿಲ್ಲ. YouTube Studio ದಿಂದ ನಿಮ್ಮ ಆಡಿಯೊ ಟ್ರ್ಯಾಕ್ ಅನ್ನು ಸ್ವ್ಯಾಪ್ ಮಾಡಲು ಕಂಪ್ಯೂಟರ್ ಬಳಸಿ.

YouTube Studio ವೀಡಿಯೊ ಎಡಿಟರ್ ಪರವಾನಗಿ ಪಡೆದ ಹಾಡುಗಳ ಲೈಬ್ರರಿಯಿಂದ ನಿಮ್ಮ ವೀಡಿಯೊಗೆ ಸಂಗೀತವನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ. ಈ ಹಾಡುಗಳು YouTube ನ ಆಡಿಯೋ ಲೈಬ್ರರಿಯದ್ದಾಗಿದೆ. ಮಾನಿಟೈಸ್ ಮಾಡಿದ ವಿಡಿಯೋಗಳಲ್ಲಿನ ಆಡಿಯೊ ಲೈಬ್ರರಿಯಿಂದ ಹಾಡುಗಳನ್ನು ನೀವು ಬಳಸಬಹುದು.

ನಿಮ್ಮ ವಿಡಿಯೋಗಳಿಗೆಬಹು-ಭಾಷಾ ಆಡಿಯೋ ಟ್ರ್ಯಾಕ್ ಗಳನ್ನು ಅಪ್ ಲೋಡ್ ಮಾಡುವುದು ಹೇಗೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಗಮನಿಸಿ:
  • ನಿಮ್ಮ ವೀಡಿಯೊ 100,000 ವೀಕ್ಷಣೆಗಳನ್ನು ಹೊಂದಿದ್ದರೆ, ನಿಮ್ಮ ವೀಡಿಯೊಗಳಲ್ಲಿ ಬದಲಾವಣೆಗಳನ್ನು ಉಳಿಸಲು ನಿಮಗೆ ಸಾಧ್ಯವಾಗದಿರಬಹುದು. YouTube ಪಾಲುದಾರ ಕಾರ್ಯಕ್ರಮದಲ್ಲಿರುವ ಬಳಕೆದಾರರಿಗೆ ಈ ನಿರ್ಬಂಧವು ಅನ್ವಯಿಸುವುದಿಲ್ಲ.
  • ಈ ಫೀಚರ್ 6 ಗಂಟೆಗಳಿಗಿಂತ ಕಡಿಮೆ ಅವಧಿಯ ವೀಡಿಯೊಗಳಿಗೆ ಮಾತ್ರ ಲಭ್ಯವಿದೆ.

ನಿಮ್ಮ ವೀಡಿಯೊಗೆ ಆಡಿಯೊ ಟ್ರ್ಯಾಕ್ ಸೇರಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಿಂದ ಎಡಿಟರ್ ಎಂಬುದನ್ನು ಕ್ಲಿಕ್ ಮಾಡಿ.
  5. ಹೊಸ ಆಡಿಯೋ ಟ್ರ್ಯಾಕ್ ಹುಡುಕಲು ಆಡಿಯೋ  ಅನ್ನು ಆಯ್ಕೆ ಮಾಡಿ ಮತ್ತು ಹುಡುಕಾಟ ಫಿಲ್ಟರ್ ಗಳನ್ನು ಹುಡುಕಿ. ಟ್ರ್ಯಾಕ್‌ಗಳನ್ನು ಪೂರ್ವವೀಕ್ಷಿಸಲು ಪ್ಲೇ ಕ್ಲಿಕ್ ಮಾಡಿ.
  6. ನೀವು ಇಷ್ಟಪಡುವ ಹಾಡನ್ನು ನೀವು ಕಂಡುಕೊಂಡಾಗ ಸೇರಿಸಿ ಕ್ಲಿಕ್ ಮಾಡಿ. ಈ ಹಾಡು ನೀಲಿ ಬಾಕ್ಸ್ ನಲ್ಲಿ ಎಡಿಟರ್ ನಲ್ಲಿ ಕಾಣಿಸುತ್ತದೆ.
    • ಹಾಡು ಯಾವಾಗ ಪ್ರಾರಂಭವಾಗಬೇಕು ಎಂಬುದನ್ನು ಬದಲಾಯಿಸಲು ಬಾಕ್ಸ್ ಅನ್ನು ಎಳೆಯಿರಿ.
    • ಪ್ಲೇ ಆಗುವ ಹಾಡಿನ ಪ್ರಮಾಣವನ್ನು ಬದಲಾಯಿಸಲು ಬಾಕ್ಸ್‌ನ ಅಂಚುಗಳನ್ನು ಎಳೆಯಿರಿ.
    • ಹೆಚ್ಚಿನ ನಿರ್ದಿಷ್ಟ ಅಡ್ಜಸ್ಟ್ ಮೆಂಟ್ ಗಳಿಗಾಗಿ Zoom in ಝೂಮ್ ಆಯ್ಕೆಗಳನ್ನು ಬಳಸಿ.
  7. ನೀವು ಪೂರ್ಣಗೊಳಿಸಿದಾಗ ಉಳಿಸಿಎಂದು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3020251949674868156
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false